Tag: ನೀಲಾಂಬಿಕೆ

  • ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ

    ಬಂಡೆಮಠದ ಸ್ವಾಮೀಜಿ ಕೇಸ್‌ಗೆ ಟ್ವಿಸ್ಟ್ – ಪ್ರತೀಕಾರ ತೀರಿಸಿಕೊಂಡ ನೀಲಾಂಬಿಕೆ

    ರಾಮನಗರ: ಬಂಡೆಮಠದ ಸ್ವಾಮೀಜಿ (Basavalinga Shree) ಸಾವಿಗೆ ಸಂಬಂಧಿಸಿದಂತೆ ತನಿಖೆ ಮುಗಿಸಿರುವ ಪೊಲೀಸರು ದೋಷಾರೋಪ ಪಟ್ಟಿಯನ್ನು ಕೋರ್ಟಿಗೆ (Court) ಸಲ್ಲಿಸುತ್ತಿದ್ದಾರೆ. ನೂರಾರು ಪುಟಗಳ ದೋಷಾರೋಪ ಪಟ್ಟಿಯಲ್ಲಿ (Police Charge Sheet) ಇಂಚಿಂಚೂ ಮಾಹಿತಿ ಬಹಿರಂಗವಾಗಿದೆ.

    ಆರೋಪಿ ಯುವತಿ ನೀಲಾಂಬಿಕೆ (Neelambike), ತಾನು ಸೇಡು ತೀರಿಸಿಕೊಳ್ಳೋದಕ್ಕಾಗಿಯೇ ಈ ಕೃತ್ಯವನ್ನು ಮಾಡಿದ್ದಳು ಅನ್ನೋ ಸತ್ಯ ಬಯಲಾಗಿದೆ. ಸ್ವಾಮೀಜಿ ಮಾಡಿದ್ದ ಒಂದು ಅವಮಾನವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತೀಕಾರ ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ ಅನ್ನೊ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ (Police Charge Sheet) ಉಲ್ಲೇಖವಾಗಿದೆ. ಇದನ್ನೂ ಓದಿ: ಬಂಡೆಮಠದ ಸ್ವಾಮೀಜಿಗೆ ಮಹಿಳೆಯಿಂದ ಬರುತ್ತಿತ್ತು ದೂರವಾಣಿ ಕರೆ- ಡೆತ್‍ನೋಟ್‍ನಲ್ಲಿ ರಹಸ್ಯ ಬಯಲು

    ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ನೀಲಾಂಬಿಕೆಗೆ ಬಂಡೆಮಠದ ಸ್ವಾಮಿಯ ಮೇಲೆ ಸೇಡು ಇತ್ತು. ಸ್ವಾಮೀಜಿ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಕೆ ಕಾಯುತ್ತಿದ್ದಳು. ಅದಕ್ಕಾಗಿ ಈ ಹಿಂದೆ ಸ್ವಾಮೀಜಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಳು. ಸ್ವಾಮೀಜಿ ಒಬ್ಬ ಹೆಣ್ಣುಬಾಕ, ಹೆಣ್ಣಿನ ಮೋಹ ಇದೆ ಅಂತಾ ಹೇಳಿದ್ದಳು. ಈ ವಿಚಾರ ಗೊತ್ತಾಗಿ ಬಂಡೆಮಠದ ಸ್ವಾಮಿ ಆಡಿಯೋ ರೆಕಾರ್ಡ್ ಮಾಡಿಕೊಂಡಿದ್ದಂತೆ. ಆ ಆಡಿಯೋದ ಮೂಲಕ ನೀಲಾಂಬಿಕೆಗೆ ಸ್ವಾಮೀಜಿ ಅವಮಾನ ಮಾಡಿದ್ದರು. ಇದನ್ನೂ ಓದಿ: ಬಂಡೆಮಠದ ಶ್ರೀ ಆತ್ಮಹತ್ಯೆ ಕೇಸ್ – ನಗ್ನವಾಗಿರುವ ಮೂರನೇ ವೀಡಿಯೋ ಬಹಿರಂಗ

    ಅವಮಾನದಿಂದ ಕುಪಿತಗೊಂಡಿದ್ದ ನೀಲಾಂಬಿಕೆ ಸೇಡು ತೀರಿಸಿಕೊಳ್ಳೋ ಪ್ಲಾನ್ ಮಾಡಿದ್ದಳು. ಈ ವಿಚಾರ ತಿಳಿದು ಕಣ್ಣೂರು ಮಠದ ಸ್ವಾಮೀಜಿ ನೀಲಾಂಬಿಕೆಯನ್ನು ಬಳಸಿಕೊಂಡಿದ್ದಾರೆ. ನೀಲಾಂಬಿಕೆಗೆ ಹಣದ ಸಹಾಯ ಮಾಡಿ ವೀಡಿಯೋ ಕಾಲ್‌ಗೆ ಪ್ರೇರಣೆ ನೀಡಿದ್ದಾರೆ ಅನ್ನೋ ಸತ್ಯ ಚಾರ್ಜ್‌ಶೀಟ್‌ನಲ್ಲಿ ಬಯಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ- ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಜಾ

    ಬಸವಲಿಂಗ ಶ್ರೀ ಆತ್ಮಹತ್ಯೆ ಪ್ರಕರಣ- ನಾಲ್ವರು ಆರೋಪಿಗಳ ಜಾಮೀನು ಅರ್ಜಿ ವಜಾ

    ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ (BasavalingaSwamiji) ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನೀಲಾಂಬಿಕೆ (Nilambike), ಕಣ್ಣೂರು ಮಠದ ಡಾ. ಮೃತ್ಯುಂಜಯಶ್ರೀ, ವಕೀಲ ಮಹದೇವಯ್ಯ ಹಾಗೂ ಸುರೇಶ್ ಎಂಬುವರ ಜಾಮೀನು ಅರ್ಜಿ ಮತ್ತೊಮ್ಮೆ ವಜಾ ಆಗಿದೆ.

    ಆರೋಪಿಗಳು ಕೆಲ ದಿನಗಳ ಹಿಂದೆ ಮಾಗಡಿ (Magadi) ತಾಲೂಕು ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಲ್ಲಿ ಅವರ ಅರ್ಜಿ ವಜಾ ಆಗಿದ್ದರಿಂದ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು ನಾಲ್ವರು ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ಮಾಡಿದ ರಾಮನಗರ ಜಿಲ್ಲಾ ನ್ಯಾಯಾಲಯದ ನ್ಯಾಯಪೀಠವು ವಾದ-ಪ್ರತಿವಾದಗಳನ್ನು ಆಲಿಸಿತು. ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ ಜ್ಞಾನೇಂದ್ರ

    ನ್ಯಾಯಾಧೀಶ ಗುಲ್ಜಾರ್ ಲಾಲ್ ಡಿ ಮಹಾವರ್ಕರ್ ಅವರು ನಾಲ್ಕೂ ಅರ್ಜಿಗಳನ್ನು ತಿರಸ್ಕರಿಸಿ ಆದೇಶ ನೀಡಿದರು. ಅ. 24ರಂದು ಬಸವಲಿಂಗ ಸ್ವಾಮೀಜಿಯವರ ಶವ ಮಠದಲ್ಲಿರುವ ಅವರ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ಕರ್ನಾಟಕ ಚುನಾವಣೆ ಗೆಲ್ಲಲು ಬಿಜೆಪಿಯೇ ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡ್ತಿದೆ: ಉದ್ಧವ್ ಠಾಕ್ರೆ

    Live Tv
    [brid partner=56869869 player=32851 video=960834 autoplay=true]

  • ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ಬಂಡೆಮಠ ಶ್ರೀ ಆತ್ಮಹತ್ಯೆ ಪ್ರಕರಣ- ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್!

    ರಾಮನಗರ: ಕಂಚುಗಲ್ ಬಂಡೇಮಠ (BandeMutt) ಶ್ರೀ ಆತ್ಮಹತ್ಯೆ ಪ್ರಕರಣವು ದಿನಕ್ಕೊಮದು ತಿರುವು ಪಡೆದುಕೊಳ್ಳುತ್ತಿದೆ. ಕಾವಿಯಿಂದಲೇ ಕಾವಿಗೆ ಖೆಡ್ಡಾ ತೋಡಿರುವ ಎಕ್ಸ್ ಕ್ಲೂಸಿವ್ ಡೀಟೇಲ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನೀಲಾಂಬಿಕೆ (Neelambike) ಅಲಿಯಾಸ್ ಚಂದು ಮೋಹಕ್ಕೆ ಬಂಡೇಮಠ ಶ್ರೀ ಬಿದ್ದಿದ್ದಾರೆ. ಕಣ್ಣೂರು ಶ್ರೀ, ನೀಲಾಂಬಿಕೆ, ಮಹದೇವಯ್ಯ ಮೊಬೈಲ್ (Mobile) ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ನೀಲಾಂಬಿಕೆ ಮೊಬೈಲ್ ಪರಿಶೀಲಿಸಿದ ಪೊಲೀಸರಿಗೆ ಶಾಕ್ ಆಗಿದೆ. ನೀಲಾಂಬಿಕೆ ಮೊಬೈಲ್‍ನಲ್ಲಿ ಸ್ಫೋಟಕ ರಹಸ್ಯ ವೀಡಿಯೋ ಲಭ್ಯವಾಗಿರುವ ಮಾಹಿತಿ ಲಭಿಸಿದೆ.

    ನೀಲಾಂಬಿಕೆ ಫೋನ್‍ನಲ್ಲಿ ಮಠಾಧೀಶರು, ಪ್ರಭಾವಿಗಳ ಮೊಬೈಲ್ ನಂಬರ್ ದೊರೆತಿದೆ. ನೀಲಾಂಬಿಕೆ ಮೊಬೈಲ್‍ನಿಂದ ನಿತ್ಯ ಮೆಸೇಜ್ ಮಾಡಲಾಗುತ್ತಿತ್ತು. ಪ್ರತಿನಿತ್ಯ ಎಲ್ಲರಿಗೂ ಬೆಳಗ್ಗಿನ ವಂದನೆ ಹಾಗೂ ಶುಭರಾತ್ರಿ ಮೆಸೇಜ್ ಕಳುಹಿಸಲಾಗುತ್ತಿತ್ತು. ಬಸವಲಿಂಗಶ್ರೀಗಳ ಜೊತೆ ನೀಲಾಂಬಿಕೆ ಆಡಿಯೋ ಹಾಗೂ ವಿಡಿಯೋ ಕಾಲ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಬಂಡೆ ಶ್ರೀ ಪ್ರಖ್ಯಾತಿಯನ್ನು ಸಹಿಸದೇ ಹನಿಟ್ರ್ಯಾಪ್ – ಕಣ್ಣೂರು ಶ್ರೀ ಕುತಂತ್ರ ಬಯಲು

    ಬಸವಲಿಂಗ ಸ್ವಾಮೀಜಿ (Basavalinga Swmiji) ಗೆ ನೀಲಾಂಬಿಕೆ ಪ್ರತಿನಿತ್ಯ ಮೆಸೇಜ್ ಮಾಡುತ್ತಿದ್ದಳು. ಒಂದೊಂದು ಮೆಸೇಜ್ ಮಾಡಿ ಪರಿಚಯವಾಗಿದ್ದಾಳೆ. ನಾನು ಸಹ ಮಠದ ಭಕ್ತೆ, ನನಗೆ ಸನ್ಯಾಸತ್ವದ ಬಗ್ಗೆ ಮಾಹಿತಿ ಇದೆ. ನನಗೆ ಸನ್ಯಾಸತ್ವದ ದೀಕ್ಷೆ ಕೊಡಿ ಎಂದಿದ್ದಳು. ದಿನ ಕಳೆದಂತೆ ಸ್ನೇಹ, ಗೆಳತನ ಹೆಚ್ಚಾಗಿ ವಾಟ್ಸಪ್ ಕಾಲ್‍ನಲ್ಲಿ ಸಂಭಾಷಣೆ ಬಳಿಕ ವೀಡಿಯೋ ಕಾಲ್‍ನಲ್ಲಿ ಮಾತು ಆರಂಭವಾಗಿದೆ. ನಂತರ ಎಲ್ಲಾ ರೆಕಾರ್ಡ್ ಮಾಡಿ ಬಲೆಗೆ ಸ್ಕೆಚ್ ಹಾಕಲಾಗಿದೆ. ಇದನ್ನೂ ಓದಿ: ಬಂಡೆ ಶ್ರೀಗೆ ಖೆಡ್ಡಾ ತೋಡಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅರೆಸ್ಟ್‌

    ಮೊದ ಮೊದಲಿಗೆ 500, 1000 ಸಹಾಯ ಕೇಳ್ತಿದ್ದ ನೀಲಾಂಬಿಕೆ, ಶ್ರೀಗಳ ನಗ್ನ ವೀಡಿಯೋ ಹಾಗೂ ಏಕಾಂತದ ವೀಡಿಯೋ ಸೆರೆ ಹಿಡಿದಿದ್ದಾಳೆ. ವೀಡಿಯೋ ಮಾಡಿದ ಬಳಿಕ ಕೋಟಿ ಕೋಟಿಗೆ ಬ್ಲಾಕ್‍ಮೇಲ್ ಶುರು ಮಾಡಿದ್ದಾಳೆ. ನಂತರ ವೀಡಿಯೋವನ್ನು `ಆ’ ನಾಯಕನಿಗೆ ಕಳಿಸಿದ್ದಾಳೆ ಎಂಬ ಮಾಹಿತಿ ದೊರಕಿದೆ. ಒಟ್ಟಿನಲ್ಲಿ ನೀಲಾಂಬಿಕೆಯನ್ನು ಬಳಸಿಕೊಂಡೇ ಬಸವಲಿಂಗಾಶ್ರೀಗೆ ಕಣ್ಣೂರು ಶ್ರೀ ಖೆಡ್ಡಾ ತೋಡಿದ್ದಾರೆ ಎನ್ನಲಾಗಿದೆ.

    Live Tv
    [brid partner=56869869 player=32851 video=960834 autoplay=true]