Tag: ನೀಲಮಣಿ ಎನ್. ರಾಜು

  • ಯಶಸ್ವಿಯಾಗಿ ಔರಾದ್ಕರ್ ವರದಿ ಜಾರಿ ಮಾಡಲಾಗಿದೆ: ನೀಲಮಣಿ ಎನ್ ರಾಜು

    ಯಶಸ್ವಿಯಾಗಿ ಔರಾದ್ಕರ್ ವರದಿ ಜಾರಿ ಮಾಡಲಾಗಿದೆ: ನೀಲಮಣಿ ಎನ್ ರಾಜು

    ಬೆಂಗಳೂರು: ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಯಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಸ್ಪಷ್ಟಪಡಿಸಿದ್ದಾರೆ.

    ಕಳೆದ 2 ವರ್ಷದಿಂದ ಪೊಲೀಸ್ ಮಹಾನಿರ್ದೇಶಕಿಯಾಗಿ ಕೆಲಸ ಮಾಡಿದ ನೀಲಮಣಿ ಎನ್ ರಾಜು ಇಂದು ನಿವೃತ್ತಿಯಾದರು. ಕೋರಮಂಗಲ ಕೆಎಸ್‍ಆರ್ ಪಿ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮುಗಿದ ಬಳಿಕ ಮಾತನಾಡಿದ ಡಿಜಿ ಐಜಿ ನೀಲಮಣಿ ಎನ್ ರಾಜು ಪೊಲೀಸರ ವೇತನ ತಾರತಮ್ಯದ ಬಗ್ಗೆ ಸರ್ಕಾರಕ್ಕೆ ಸಲ್ಲಿಸಿದ ರಾಘವೇಂದ್ರ ಔರಾದ್ಕರ್ ವರದಿ ಸಂಪೂರ್ಣವಾಗಿ ಜಾರಿಯಾಗಿದೆ ಎಂದರು.

    ಇದೇ ಸಂದರ್ಭದಲ್ಲಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಹಿರಿಯ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರು, ಸರ್ಕಾರಕ್ಕೆ ಪೊಲೀಸರ ವೇತನ ತಾರತಮ್ಯದ ಬಗ್ಗೆ ಸ್ಟಡಿ ಮಾಡಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿ ಮಾಡಿದೆ. ಸರ್ಕಾರ ನನ್ನ ವರದಿಯನ್ನು ಸಮರ್ಪಕವಾಗಿ ಜಾರಿಗೆ ತರದ ಬಗ್ಗೆ ಸ್ವಲ್ಪ ಅಸಮಾದಾನ ಇದೆ. ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಜಾರಿಗೆ ತರುತ್ತಾರೆ ಎಂಬ ಭರವಸೆ ಇದೆ ಎಂದರು.

    ವರದಿ ಸಲ್ಲಿಸಿದ ಬಳಿ ಮೂರು ಸರ್ಕಾರಗಳು ಬಂದು ಹೋಗಿವೆ. ಮೂರು ಸರ್ಕಾರದ ಸಂಬಂಧ ಪಟ್ಟವರ ಬಗ್ಗೆ ವರದಿ ಜಾರಿಯ ವಿಚಾರವಾಗಿ ಚರ್ಚೆ ಮಾಡಿದ್ದೆನೆ. ಸಮರ್ಪಕವಾಗಿ ವರದಿ ಜಾರಿ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ. ವರದಿ ಜಾರಿಯಾಗುವುದರಿಂದ ಪೊಲೀಸರಿಗೆ ಇರುವಂತಹ ವೇತನ ತಾರತಮ್ಯ ಸೇರಿ ಹಲವು ಮೂಲ ಸೌಕರ್ಯಗಳಿಗೆ ಅನುಕೂಲವಾಗುತ್ತೆ. ಆದ್ದರಿಂದ ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಜಾರಿ ಮಾಡಬೇಕು. ವೇತನ ತಾರತಮ್ಯದ ಬಗ್ಗೆ ವರದಿ ಸಿದ್ಧ ಪಡಿಸಿರುವುದು ನನ್ನ ವೃತ್ತಿ ಬದುಕಿನ ದೊಡ್ಡ ಸಾಧನೆ. ಆದರೆ ಸರ್ಕಾರ ಲಾಂಗ್ ಟಾರ್ಮ್ ವಿಚಾರದಲ್ಲಿ ನೋಡುವುದಾದರೆ ಒಂದೇ ವರ್ಷದಲ್ಲಿ ವರದಿ ಜಾರಿ ಮಾಡುವುದು ಆರ್ಥಿಕವಾಗಿ ಕಷ್ಟಸಾಧ್ಯ ಎಂಬ ಅರಿವಿದೆ. ಎಲ್ಲಾ ಸರ್ಕಾರಗಳು ಪೊಲೀಸ್ ಇಲಾಖೆಗೆ ಉತ್ತಮವಾಗಿ ನಡೆಸಿಕೊಂಡಿದೆ ಎಂದು ಧನ್ಯವಾದ ತಿಳಿಸಿದರು.

  • ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ, ಕೈ ತುಂಬ ಬಳೆ ತೊಡುವಂತಿಲ್ಲ: ಹೊಸ ಡ್ರೆಸ್ ಕೋಡ್‍ನಲ್ಲಿ ಏನಿದೆ?

    ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ, ಕೈ ತುಂಬ ಬಳೆ ತೊಡುವಂತಿಲ್ಲ: ಹೊಸ ಡ್ರೆಸ್ ಕೋಡ್‍ನಲ್ಲಿ ಏನಿದೆ?

    ಬೆಂಗಳೂರು: ಕರ್ತವ್ಯ ನಿರತ ಮಹಿಳಾ ಪೊಲೀಸರು ಇನ್ನು ಮುಂದೆ ಸೀರೆಯ ಬದಲು ಪ್ಯಾಂಟು, ಶರ್ಟ್ ಕಡ್ಡಾಯವಾಗಿ ಧರಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸುತ್ತೋಲೆ ಹೊರಡಿಸಿದ್ದಾರೆ.

    ಈ ಸಂಬಂಧ ಅಕ್ಟೋಬರ್ 16 ರಂದು ಸುತ್ತೋಲೆ ಹೊರಡಿಸಲಾಗಿದ್ದು, ಈಗ ಇಲಾಖೆಯಲ್ಲೇ ಪರ ವಿರೋಧ ಚರ್ಚೆ ಆರಂಭವಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮತ್ತು ಕೆಲವು ಅಧಿಕಾರಿಗಳ ಸೂಚನೆಯ ಮೇರೆಗೆ ಮಹಿಳಾ ಪೊಲೀಸರಿಗೆ ಖಾಕಿ ಸೀರೆಯ ಬದಲು ಪ್ಯಾಂಟು-ಶರ್ಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಇದರಿಂದ ಅಪರಾಧಗಳನ್ನ ತಡೆಯಲು ಸುಲಭವಾಗುತ್ತದೆ ಎಂದು ಎಂದು ಡಿಜಿ ನೀಲಮಣಿ ಎನ್ ರಾಜು ಹೇಳಿದ್ದಾರೆ.

    ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಸರಗಳ್ಳತನ ಇತ್ಯಾದಿ ಅಪರಾಧಗಳನ್ನು ಎಸಗುವ ಆರೋಪಿಗಳನ್ನು ಹಿಡಿಯಲು ಸೀರೆ ತೊಟ್ಟ ಮಹಿಳಾ ಸಿಬ್ಬಂದಿಗೆ ಓಡಲು ಕಷ್ಟವಾಗುತ್ತದೆ ಇದರಿಂದ ಖಾಕಿ ಸೀರೆಯ ಬದಲು ಪ್ಯಾಂಟು-ಶರ್ಟ್ ಮತ್ತು ಬೂಟನ್ನು ಧರಿಸಿದ್ರೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ.

    ಈ ಸಂಬಂಧ ಹಿರಿಯ ಅಧಿಕಾರಿಗಳು ಸೇರಿದಂತೆ ಮಹಿಳಾ ಪೊಲೀಸರ ಜೊತೆ ಮಾತುಕತೆ ನಡೆಸಿದ್ದೇವೆ. ಕರ್ತವ್ಯ ನಿರ್ವಹಿಸುವ ಮಹಿಳಾ ಪೊಲೀಸರು ಪ್ಯಾಂಟು, ಶರ್ಟ್ ಧರಿಸುವುದು ಕಡ್ಡಾಯ ಎನ್ನುವ ಕಾನೂನು ಮೊದಲಿನಿಂದಲೇ ಇದೆ. ಆದರೆ ಅದನ್ನು ಕೆಲವು ಬದಲಾವಣೆಯೊಂದಿಗೆ ಈಗ ಜಾರಿಗೆ ತರುತ್ತಿದ್ದೇವೆ ಅಷ್ಟೇ ಎಂದು ನೀಲಮಣಿ ರಾಜು ಸ್ಪಷ್ಟನೆ ನೀಡಿದ್ದಾರೆ.

    ಹೊಸ ಡ್ರೆಸ್ ಕೋಡ್‍ನಲ್ಲಿ ಹೇಗಿರಬೇಕು?

    ಪ್ಯಾಂಟು-ಶರ್ಟು, ಬೆಲ್ಟ್ ಮತ್ತು ಬೂಟ್ಸ್ ಇರುವ ಸಮವಸ್ತ್ರವನ್ನು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಧರಿಸಬೇಕು. ತಲೆ ಕೂದಲನ್ನು ಇಳಿಬಿಟ್ಟು ಓಡಾಡುವಂತಿಲ್ಲ, ಹೂವನ್ನ ಮುಡಿಯುವಂತಿಲ್ಲ, ಕಪ್ಪು ಬಣ್ಣವನ್ನ ಬಿಟ್ಟರೆ ಬೇರೆ ಯಾವ ಬಣ್ಣವನ್ನು ಕೂದಲಿಗೆ ಹಾಕುವಂತಿಲ್ಲ. ಕೂದಲನ್ನು ಗಂಟು ಕಟ್ಟಿ, ಕಪ್ಪು ಬಣ್ಣದ ನೆಟ್ ಬ್ಯಾಂಡ್ ಕಟ್ಟಿ ಹೇರ್ ಕ್ಲಿಪ್ ಹಾಕಬೇಕು. ಚಿಕ್ಕದಾದ ಕಿವಿಯೋಲೆ ಹಾಕಬಹುದು. ಬಿಂದಿ ಚಿಕ್ಕದಾಗಿರಬೇಕು. ಕೈಗಳಿಗೆ ತಲಾ ಒಂದು ಬಳೆಯನ್ನ ಹಾಕಬಹುದು.

    ಸಿಬ್ಬಂದಿಯಿಂದ ವಿರೋಧ:
    ಹೊಸ ಡ್ರೆಸ್ ಕೋಡ್‍ಗೆ ಕೆಲ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದು, ದಪ್ಪಗಿರುವ ಮಹಿಳೆಯರು ಪ್ಯಾಂಟು ಶರ್ಟ್ ಹಾಕಿಕೊಂಡು ಓಡಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ. ಅಲ್ಲದೇ 40 ವರ್ಷ ದಾಟಿದ ಮಹಿಳಾ ಸಿಬ್ಬಂದಿಗೆ ಈ ಆದೇಶದಿಂದ ರಿಯಾಯಿತಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
  • ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು ಭೇಟಿ – ಖಡಕ್ ಸೂಚನೆ ಕೊಟ್ಟ ಎಚ್‍ಡಿಕೆ

    ಬೆಳ್ಳಂಬೆಳಗ್ಗೆ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು ಭೇಟಿ – ಖಡಕ್ ಸೂಚನೆ ಕೊಟ್ಟ ಎಚ್‍ಡಿಕೆ

    ಬೆಂಗಳೂರು: ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ನಿವಾಸಕ್ಕೆ ಇಂದು ಡಿಜಿಪಿ ನೀಲಮಣಿ ಎನ್. ರಾಜು ಅವರು ಭೇಟಿ ನೀಡಿದ್ದಾರೆ.

    ನೀಲಮಣಿ ಜೊತೆ ಇಂಟಲಿಜೆನ್ಸ್ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಕೂಡ ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ್ದರು. ಗುರುವಾರ ಕೂಡ ವಿಧಾನ ಸೌಧದಲ್ಲಿ ಸಿಎಂ ಜೊತೆ ಸಭೆ ನಡೆಸಲಾಗಿತ್ತು. ಇಂದು ಈ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಂ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

    ಸಿಎಂ ಭೇಟಿ ಬಳಿಕ ಡಿಜಿಪಿ ನೀಲಮಣಿ ಎನ್ ರಾಜು ಮಾದ್ಯಮರೊಂದಿಗೆ ಮಾತನಾಡಿ, ಕಾನೂನು ಸುವ್ಯಸ್ಥೆಯ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಈ ವೇಳೆ ಸಿಎಂ ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಗಲಾಟೆ ಏನು ಆಗಬಾರದು. ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಜನತಾ ಸೇವೆ ಮಾಡಬೇಕು ಎಂಬ ಅಂಶಗಳ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.