Tag: ನೀಲಮಣಿರಾಜು

  • ಡಿಜಿ ನೀಲಮಣಿರಾಜುಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ

    ಡಿಜಿ ನೀಲಮಣಿರಾಜುಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ಸೂಚನೆ

    ಬೆಂಗಳೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತು ಹಿನ್ನೆಲೆಯಲ್ಲಿ ಡಿಜಿ ನೀಲಮಣಿರಾಜು ಅವರಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

    ಕುಮಾರಸ್ವಾಮಿ ಮನೆಗೆ ಡಿಜಿ ನೀಲಮಣಿರಾಜು ಭೇಟಿ ನೀಡಿ ಚರ್ಚೆ ನಡೆಸಿದ್ದು, ಭದ್ರತೆಯ ಬಗ್ಗೆ ಸಿಎಂ ಮಾಹಿತಿ ಪಡೆದಿದ್ದಾರೆ. ಈ ವೇಳೆ ಸಿಎಂ ಅವರು, ಯಾವುದೇ ಕಾರಣಕ್ಕೂ ಬಹುಮತ ಸಾಬೀತುಪಡಿಸುವ ಸಮಯದಲ್ಲಿ ಗೊಂದಲ, ಗಲಾಟೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

    ಶಾಸಕರು ವಿಧಾನಸೌಧಕ್ಕೆ ಬರುವ ಸಮಯದಲ್ಲಿ ಗೊಂದಲ ಸೃಷ್ಟಿಯಾಗದಂತೆ ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ಸಿಎಂ ಜೊತೆ ಚರ್ಚೆ ನಡೆಸಿ ಡಿಜಿ ನೀಲಮಣಿ ರಾಜು ಹೊರಟ ಬಳಿಕ ಇಂಟಲಿಜೆನ್ಸ್ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಅವರ ಬಳಿಯೂ ಸಿಎಂ ಮಾಹಿತಿ ಪಡೆದಿದ್ದಾರೆ.

    ಸದ್ಯ ವಿಧಾನಸೌಧದ ಸುತ್ತಾಮುತ್ತಾ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.

  • ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

    ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ಪೈಪೋಟಿ

    ಬೆಂಗಳೂರು: ನೂತನ ಪೊಲೀಸ್ ಮಹಾನಿರ್ದೇಶಕರ ಆಯ್ಕೆಗೆ ದಿನಗಣನೆ ಹೆಚ್ಚಾಗಿರೋ ಬೆನ್ನಲ್ಲೆ ಪೈಪೋಟಿಯೂ ಹೆಚ್ಚಾಗಿದೆ. ಈಗಾಗ್ಲೇ ಮೂರು ಅಧಿಕಾರಿಗಳು ರೇಸ್‍ನಲ್ಲಿದ್ದು ನಾ ಮುಂದು ತಾ ಮುಂದು ಅಂತಿದ್ದಾರೆ.

    ಹಿರಿಯ ಅಧಿಕಾರಿಗಳಾದ ನೀಲಮಣಿರಾಜು, ಎಂಎನ್ ರೆಡ್ಡಿ ಮತ್ತು ಕಿಶೋರ್ ಚಂದ್ರ ನಡುವೆ ಪೈಪೋಟಿ ಎದುರಾಗಿದೆ. ಆದ್ರೆ ರಾಜ್ಯ ಸರ್ಕಾರ ನೀಲಮಣಿರಾಜು ಅವರಿಗೆ ಪೊಲೀಸ್ ಮಹಾನಿರ್ದೇಶಕರ ಸ್ಥಾನವನ್ನು ನೀಡೋದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗ್ತಿದೆ.

    ನೀಲಮಣಿ ರಾಜು ಅವರಿಗೆ ಸ್ಥಾನ ನೀಡಿದ್ರೆ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗುತ್ತಾರೆ. ಅದರ ಲಾಭವನ್ನು ಪಡೆಯಲು ಸರ್ಕಾರ ಪ್ಲಾನ್ ಕೂಡ ಮಾಡ್ತಿರೋದು ಸುಳ್ಳಲ್ಲ. ಆದ್ರೆ ಕಿಶೋರ್ ಚಂದ್ರ ಮತ್ತು ಎಂಎನ್ ರೆಡ್ಡಿ ನೇರಾನೇರ ಪೈಪೋಟಿ ಮಾಡ್ತಾ ಇದ್ದಾರೆ ಎನ್ನಲಾಗಿದೆ. ರೂಪ್ ಕುಮಾರ್ ದತ್ತಾ ಅವಧಿ ಈ ತಿಂಗಳಾಂತ್ಯದಲ್ಲಿ ಕೊನೆಗೊಳ್ಳಲಿದೆ.