Tag: ನೀರುಪಾಲು

  • ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿ ನೀರುಪಾಲು

    ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿ ನೀರುಪಾಲು

    ಧಾರವಾಡ: ಹಳ್ಳಕ್ಕೆ ಸ್ನಾನಕ್ಕೆ ಇಳಿದಾಗ ಪಿಟ್ಸ್ ಬಂದು ವ್ಯಕ್ತಿಯೊಬ್ಬರು ನೀರು ಪಾಲಾದ ಘಟನೆ ನವಲಗುಂದ ತಾಲೂಕಿನ ಯಮನೂರ ಬೆಣ್ಣಿಹಳ್ಳದಲ್ಲಿ ನಡೆದಿದೆ.

    ಮುದ್ದೆಬಿಹಾಳ ಮೂಲದ ವಾಸಿಂ (22) ಮೃತ ವ್ಯಕ್ತಿ. ಇವರು ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದ ವೇಳೆ ಅವಘಡ ಸಂಭವಿಸಿದೆ. ತಾಯಿ ಜೊತೆಗೆ ಗೋವಾಕ್ಕೆ ದುಡಿಯಲು ಹೋಗಿದ್ದ ವಾಸಿಂ, ಕುಟುಂಬ ಸಮೇತ ಗೋವಾದಿಂದ ಯಮನೂರ ಚಾಂಗದೇವ ದರ್ಶನಕ್ಕೆ ಬಂದಿದ್ದರು. ಅಂತೆಯೇ ಸ್ನಾನ ಮಾಡಲೆಂದು ಬೆಣ್ಣಿಹಳ್ಳಕ್ಕೆ ಇಳಿದಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಬುಲ್ಡೋಜರ್ ಸದ್ದು: 14 ಮನೆಗಳು ಸೇರಿದಂತೆ 17 ಟಿನ್ ಶೆಡ್ ತೆರವು

    ದರ್ಶನಕ್ಕೂ ಮೊದಲು ಸ್ನಾನ ಮಾಡಲು ಹಳ್ಳಕ್ಕೆ ಇಳಿದಿದ್ದ ವೇಳೆ ಪಿಟ್ಸ್ ಬಂದು ನೀರುಪಾಲಾಗಿದ್ದಾರೆ. ನವಲಗುಂದ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Live Tv

  • ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲು – ಮತ್ತೊಬ್ಬನಿಗಾಗಿ ಶೋಧ ಕಾರ್ಯ

    ಬೀದರ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಯುವಕ ನೀರುಪಾಲಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಬಳಿ ನಡೆದಿದೆ.

    ಕಾಶಿನಾಥ್ ಪಾಟೀಲ್ (17) ಹಾಗೂ ನಾಗರಾಜ್ (16) ಸೆಲ್ಫಿ ಕ್ಲಿಕ್ಕಿಸಿಕೊಳ್ಳವ ವೇಳೆ ಕಾಲು ಜಾರಿ ಬಿದ್ದಿದ್ದಾರೆ. ಬೇಸಿಗೆ ರಜೆ ಇದ್ದ ಕಾರಣ ಕಾಶಿನಾಥ್ ಹಾಗೂ ನಾಗರಾಜ್ ದುಬಲಗುಂಡಿಯಿಂದ ಮಾವನ ಮನೆಗೆ ಬಂದಿದ್ದರು. ಈ ವೇಳೆ ಇಬ್ಬರು ಕಾರಂಜಾ ಡ್ಯಾಂನಲ್ಲಿ ಹತ್ತಿರ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

    ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಇಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಬಿದ್ದ ಕಾಶಿನಾಥ್ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

    ಈ ಬಗ್ಗೆ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಭೀಮಾನದಿಯಲ್ಲಿ ಮೂವರು ಯುವಕರು ನೀರುಪಾಲು

    ಭೀಮಾನದಿಯಲ್ಲಿ ಮೂವರು ಯುವಕರು ನೀರುಪಾಲು

    ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಮರಗೂರ ಬಳಿ ಭೀಮಾ ನದಿಗೆ ಸ್ನಾನಕ್ಕೆಂದು ತೆರಳಿದ್ದ ಮೂವರು ಯುವಕರು ನೀರುಪಾಲಾದ ಘಟನೆ ನಡೆದಿದೆ.

    ಮೃತರನ್ನು ಅಂಜುಟಗಿ ಗ್ರಾಮದ ಓರ್ವ ಹಾಗೂ ಮಹಾರಾಷ್ಟ್ರದ ಔದ್ ಗ್ರಾಮದ ಇಬ್ಬರು ಯುವಕರು ಎಂದು ಗುರುತಿಸಲಾಗಿದೆ. ಯುಗಾದಿ ಪ್ರಯುಕ್ತ ದೇವರ ಕಾರ್ಯ ಮಾಡಲು ಮರಗೂರ ಗ್ರಾಮದಲ್ಲಿನ ಖಾಜಾಸಾಬ ದರ್ಗಾಕ್ಕೆ ಯುವಕರು ತೆರಳಿದ್ದರು.

    ನಾಲ್ಕು ದಿನದ ಹಿಂದಷ್ಟೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ನೀರು ಬಿಡಲಾಗಿತ್ತು. ನದಿಯಲ್ಲಿ ಮರಳು ತೆಗೆದಿದ್ದ ಭಾಗದಲ್ಲಿ ಸ್ನಾನಕ್ಕೆ ಹೋದಾಗ ಗೊತ್ತಾಗದೆ ಇದ್ದಕ್ಕಿದ್ದಂತೆ ಆಳಕ್ಕೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.

    ಮೂವರು ಯುವಕರು ಮುಳುಗುತ್ತಿರುವುದನ್ನು ಸ್ಥಳೀಯರು ನೋಡಿದ್ದು, ಇದೀಗ ಶವಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ನದಿ ನೀರಿಗೆ ಕೊಚ್ಚಿ ಹೋದ ಲಾರಿ- ಮೂವರ ಪೈಕಿ ಇಬ್ಬರು ನೀರು ಪಾಲು

    ನದಿ ನೀರಿಗೆ ಕೊಚ್ಚಿ ಹೋದ ಲಾರಿ- ಮೂವರ ಪೈಕಿ ಇಬ್ಬರು ನೀರು ಪಾಲು

    – ಮಳೆಗೆ ಏಳೆಂಟು ಅಡಿ ರಸ್ತೆಯೇ ಕುಸಿಯಿತು

    ಹಾವೇರಿ: ಮಳೆಯ ಅಬ್ಬರಕ್ಕೆ ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋದ ಪರಿಣಾಮ ಅದರಲ್ಲಿದ್ದ ಇಬ್ಬರು ನೀರು ಪಾಲಾದ ಘಟನೆ ನಾಗನೂರು ತಾಲೂಕಿನ ಗ್ರಾಮದ ಬಳಿ ನಡೆದಿದೆ.

    ಬಸವರಾಜ ಸೋಮಣ್ಣ (25) ಲಕ್ಷ್ಮಣ ದೊಡ್ಡತಳವಾರ ( 35) ನೀರು ಪಾಲಾದ ದುರ್ದೈವಿಗಳು. ಹಾವೇರಿಯಿಂದ ಹಾನಗಲ್‍ಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಲಾರಿಯಲ್ಲಿದ್ದ ಮೂವರ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ.

    ಇನ್ನು ಘಟನೆಯಲ್ಲಿ ಗುಡ್ಡಪ್ಪ ಸೋಮಣ್ಣವರ (25) ಎಂಬವರು ಅಪಾಯದಿಂದ ಪಾರಾಗಿದ್ದಾರೆ. ಬ್ರಿಡ್ಜ್ ಬ್ಯಾರೇಜ್ ಮೇಲೆ ನದಿ ನೀರು ತುಂಬಿ ಹರಿಯುತ್ತಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

    ರಸ್ತೆ ಕುಸಿತ:
    ಹಾವೇರಿ ನಗರದ ಜೆ.ಹೆಚ್.ಪಟೇಲ್ ವೃತ್ತದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರೋ ಜಿಟಿಜಿಟಿ ಮಳೆಗೆ ರಸ್ತೆಯೊಂದು ಕುಸಿದು ಬಿದ್ದಿದೆ. ಇಂದು ಬೆಳಗ್ಗೆ ಏಳೆಂಟು ಅಡಿ ರಸ್ತೆ ಕುಸಿದಿದ್ದು, ಒಳಚರಂಡಿ ಯೋಜನೆ ಕಾಮಗಾರಿ ಕಳಪೆ ಆಗಿದ್ದರಿಂದ ಕುಸಿದಿರೋ ಸಾಧ್ಯತೆ ಇದೆ.

    ಈ ಎರಡೂ ಪ್ರಕರಣಗಳು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

  • ಕೊಪ್ಪಳದಲ್ಲಿ ಈಜಲು ಹೋದ ಮೂವರು ಹೆಣ್ಣುಮಕ್ಕಳು ಸೇರಿ ಐವರು ನೀರುಪಾಲು!

    ಕೊಪ್ಪಳದಲ್ಲಿ ಈಜಲು ಹೋದ ಮೂವರು ಹೆಣ್ಣುಮಕ್ಕಳು ಸೇರಿ ಐವರು ನೀರುಪಾಲು!

    ಕೊಪ್ಪಳ: ಕೆರೆಯಲ್ಲಿ ಈಜಲು ಹೋಗಿ ಐದು ಜನ ನೀರು ಪಾಲಾಗಿರೋ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ನಡೆದಿದೆ.

    ನೀರು ಪಾಲಾದವರನ್ನು ರಾಘವೇಂದ್ರ (30) ಪವಿತ್ರಾ (14), ಪಾವನಿ(12), ಪೌರ್ಣಿಕಾ ಹಾಗೂ ಆಶಿಸ್ (14) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹೈದರಾಬಾದ್ ಮೂಲದವರು ಎನ್ನಲಾಗಿದೆ.

    ಒಟ್ಟು ಮೂವರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಈಜಲು ತೆರಳಿದ್ರು. ನಿನ್ನೆ ಹೇಮಗುಡ್ಡದ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಂದಿದ್ದ ಇವರು ಕೆರೆಯಲ್ಲಿ ಈಜಲು ಹೋದಾಗ ಈ ದುರಂತ ನಡೆದಿದೆ. ಘಟನೆಯ ಬಳಿಕ ಇದೀಗ ಓರ್ವನ ಶವ ಪತ್ತೆಯಾಗಿದ್ದು, ಇನ್ನುಳಿದವರ ಮೃತ ದೇಹ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

    ಮೃತ ಮಕ್ಕಳ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.