Tag: ನೀರಿನ ಸಂಪ್

  • ಅಂಗನವಾಡಿಯಲ್ಲಿ ನೀರಿನ ಸಂಪ್‍ಗೆ ಬಿದ್ದು 3 ವರ್ಷದ ಮಗು ಸಾವು

    ಅಂಗನವಾಡಿಯಲ್ಲಿ ನೀರಿನ ಸಂಪ್‍ಗೆ ಬಿದ್ದು 3 ವರ್ಷದ ಮಗು ಸಾವು

    ಬೀದರ್: ಜಿಲ್ಲೆಯ ಔರಾದ್ ಪಟ್ಟಣದ ಟೀಚರ್ಸ್ ಕಾಲೋನಿಯಲ್ಲಿ ನಡೆಯಬಾರದ ದುರಂತ ನಡೆದು ಹೋಗಿದೆ. ಅಂಗನವಾಡಿ (Anganavadi) ಕೇಂದ್ರದ ಸಿಬ್ಬಂದಿಯ ಮಹಾ ನಿರ್ಲಕ್ಷ್ಯಕ್ಕೆ ಅಮಾಯಕ ಪುಟ್ಟ ಕಂದ ಬಲಿಯಾಗಿದೆ.

    ಹೌದು. ಅಂಗನವಾಡಿ ಕೇಂದ್ರದ ಬಳಿ 3 ವರ್ಷದ ಸ್ಫೂರ್ತಿ ಎಂಬ ಬಾಲಕಿ (Girl) ಊಟ ಮಾಡುವಾಗಲೇ ಊಟದ ತಟ್ಟೆ ಸಮೇತ ಸಂಪ್‍ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಸಂಪ್ ಮೇಲ್ಛಾವಣಿ ಮುಚ್ಚದ ಕಾರಣ ಈ ದುರ್ಘಟನೆ ನಡೆದಿದೆ. ಅಂಗನವಾಡಿ ಸಿಬ್ಬಂದಿಯ ಮಹಾ ನಿರ್ಲಕ್ಷ್ಯವೇ ಬಾಲಕಿ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ನ್ಯಾಯ ಒದಗಿಸಬೇಕು, ಪರಿಹಾರ ನೀಡಬೇಕೆಂದು ಮಗುವಿನ ತಂದೆ ಆಗ್ರಹಿಸಿದ್ದಾರೆ.

    ಎಂದಿನಂತೆ ಅಂಗನವಾಡಿಗೆ ತೆರಳಿದ ಬಾಲಕಿ ಮನೆಗೆ ಬಾರದಿದ್ದಾಗ ಪೋಷಕರು (Parents) ಅಂಗನವಾಡಿ ಕೇಂದ್ರಕ್ಕೆ ಹೋಗಿದ್ದಾರೆ. ಅಲ್ಲಿ ಕೂಡಾ ಮಗು ಇಲ್ಲದೆ ಇದ್ದಾಗ ಔರಾದ್ ಪಟ್ಟಣದ ಹಲವು ಕಡೆ ಹುಡುಕಾಡಿದ್ರು. ಆದರೂ ಮಗು ಸಿಗದೆ ಇದ್ದಾಗ ಅಂಗನವಾಡಿ ಕೇಂದ್ರದಲ್ಲಿರುವ ಆವರಣದಲ್ಲಿನ ಸಂಪ್‍ನಲ್ಲಿ ನೋಡಿದಾಗ ಬಾಲಕಿಯ ಶವ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಾಲಕಿ ಪೋಷಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಅಂಗನವಾಡಿ ಕೇಂದ್ರದ ಬಳಿ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

    ಅಧಿಕಾರಿಗಳ ಹಾಗೂ ಸಿಬ್ಬಂದಿ ಮಹಾ ನಿರ್ಲಕ್ಷ್ಯಕ್ಕೆ ಅಮಾಯಕ ಮಗು ಬಲಿಯಾಗಿದ್ದು, ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅವಘಢ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಕಬಡ್ಡಿ ಆಡುತ್ತಿದ್ದ ವೇಳೆ ವಿದ್ಯಾರ್ಥಿನಿ ದುರ್ಮರಣ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನೀರಿನ ಸಂಪ್‍ಗೆ ಬಿದ್ದು ಮಗು ಸಾವು

    ನೀರಿನ ಸಂಪ್‍ಗೆ ಬಿದ್ದು ಮಗು ಸಾವು

    ಬೆಂಗಳೂರು: ಮಗುವೊಂದು ಆಟವಾಡುತ್ತಾ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಮೃತಪಟ್ಟ ಘಟನೆ ನಾಗವಾರದ ಮಂಜುನಾಥ ಲೇಔಟ್‍ನಲ್ಲಿ ನಡೆದಿದೆ.

    ಎರಡೂವರೆ ವರ್ಷದ ಅರ್ಹಾನ್ ಮೃತಪಟ್ಟ ಮಗು. ಇಂದು ಮನೆಯ ಹತ್ತಿರ ಆಟವಾಡುತ್ತಿದ್ದಾಗ ಆಯತಪ್ಪಿ ನೀರಿನ ಸಂಪ್ ಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದೆ. ಮಗುವಿನ ಸಾವಿನಿಂದ ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ.

    ನೀರಿನ ಸಂಪ್ ಮಾಲೀಕರ ನಿರ್ಲಕ್ಷದಿಂದಾಗಿ ಮಗು ಮೃತಪಟ್ಟಿದ್ದು. ಕಳೆದ ಮೂರು ವರ್ಷಗಳ ಹಿಂದೆ ಅರೆಬರೆ ಕಾಮಗಾರಿ ನಡೆಸಿ, ಸಂಪ್ ಅನ್ನು ಮುಚ್ಚದೇ ಕೈ ಬಿಟ್ಟಿದ್ದಾರೆ. ಅಲ್ಲದೇ ಸಂಪ್ ಅನ್ನು ಸಂಪೂರ್ಣವಾಗಿ ತೆರೆದು ಬಿಟ್ಟಿದ್ದರು. ಈ ಹಿಂದೆಯೂ ಸಂಪ್ ನಿಂದಾಗಿ ಹಲವು ಅವಘಡಗಳು ಸಂಭವಿಸಿದ್ದವು.

    ಈ ಕುರಿತು ಸ್ಥಳೀಯರು ಮನೆ ಮಾಲೀಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲ್ಲಿಲ್ಲ. ಮಾಲೀಕನ ನಿರ್ಲಕ್ಷ್ಯದಿಂದಲೇ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ನೀರಿನ ಸಂಪಿನೊಳಗೆ ವ್ಯಕ್ತಿಯ ಶವ ಪತ್ತೆ-ಮೂರು ದಿನಗಳಿಂದ ಪತ್ನಿ ನಾಪತ್ತೆ

    ನೀರಿನ ಸಂಪಿನೊಳಗೆ ವ್ಯಕ್ತಿಯ ಶವ ಪತ್ತೆ-ಮೂರು ದಿನಗಳಿಂದ ಪತ್ನಿ ನಾಪತ್ತೆ

    ಬೆಂಗಳೂರು: ನೀರಿನ ಸಂಪ್ ನೊಳಗೆ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವಾಜರಹಳ್ಳಿಯಲ್ಲಿ ಕೆಲ ದಿನದ ಹಿಂದೆ ವಾಸವಿದ್ದ, ಆಂಧ್ರ ಪ್ರದೇಶದ ಕಲ್ಯಾಣದುರ್ಗ ಮೂಲದ ಈರಲಿಂಗಪ್ಪ ಕೊಲೆಯಾದ ದುರ್ದೈವಿ. ಪೊಲೀಸರು ಈರಲಿಂಗಪ್ಪನ ಪತ್ನಿ ಈಶ್ವರಮ್ಮನ್ನೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ.

    ಪತಿ ಈರಲಿಂಗಪ್ಪನನ್ನು ಕೊಂದು ಈಶ್ವರಮ್ಮ ನಂತರ ಪ್ರಕರಣವನ್ನ ಮುಚ್ಚಿಹಾಕಲು, ನೀರಿನ ಸಂಪ್ ನೊಳಗೆ ಹಾಕಿರುವುದು ಮೆಲ್ನೋಟಕ್ಕೆ ಕಂಡುಬಂದಿದೆ. ಸುಮಾರು ಮೂರ್ನಾಲ್ಕು ದಿನಗಳ ಹಿಂದೆಯೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಮೃತ ದೇಹ ಸಂಪೂರ್ಣವಾಗಿ ಕೊಳೆತು ನಾರುತಿದ್ದು, ವಾಸನೆ ಮೇರೆಗೆ ಈ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರತಿದಿನ ಕ್ಷುಲ್ಲಕ ವಿಚಾರಕ್ಕೆ ಇಬ್ಬರು ಜಗಳವಾಡುತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನೂ ಹೆಂಡತಿ ಮೂರು-ನಾಲ್ಕು ದಿನದಿಂದ ನಾಪತ್ತೆಯಾಗಿರುವುದು ಇನ್ನಷ್ಟು ಅನುಮಾನಗಳಿಗೆ ಪುಷ್ಟಿ ನೀಡುವಂತೆ ಇದೆ. ಸದ್ಯ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತಿದ್ದಾರೆ.

  • ಆಟವಾಡುತ್ತಿದ್ದಾಗ ಸಂಪ್‍ಗೆ ಬಿದ್ದು 6 ವರ್ಷದ ಬಾಲಕಿ ಸಾವು

    ಆಟವಾಡುತ್ತಿದ್ದಾಗ ಸಂಪ್‍ಗೆ ಬಿದ್ದು 6 ವರ್ಷದ ಬಾಲಕಿ ಸಾವು

    ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ಸಂಪ್‍ನಲ್ಲಿ ಬಿದ್ದು ಸಾವನ್ನಪಿರುವ ಘಟನೆ ನಗರದಲ್ಲಿ ನಡೆದಿದೆ.

    ನಗರದ ಹೆಗ್ಗನಹಳ್ಳಿಯ ಶ್ರೀಗಂಧ ಲೇಔಟ್‍ನಲ್ಲಿ ಈ ಘಟನೆ ನಡೆದಿದೆ. ವೆಂಕಟೇಶ ಎಂಬವರ ಪುತ್ರಿಯಾದ 6 ವರ್ಷದ ಹರಿಪ್ರಿಯ ಮೃತ ದುರ್ದೈವಿ. ಇಂದು ಬೆಳಿಗ್ಗೆ ಬಾಲಕಿ ಮನೆ ಮುಂದೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಬಾಲಕಿ ತೆರೆದ ನೀರಿನ ಸಂಪ್‍ಗೆ ಆಕಸ್ಮಿಕವಾಗಿ ಬಿದ್ದಿದ್ದಾಳೆ. ಹರಿಪ್ರಿಯಾ ನೀರಿಗೆ ಬಿದ್ದಾಗ ಯಾರು ನೋಡದ ಪರಿಣಾಮ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.

    ಪೋಷಕರು ಮನೆ ಮುಂದೆ ಆಟವಾಡುತ್ತಿದ್ದ ಮಗಳು ತುಂಬಾ ಸಮಯವಾದರೂ ಕಾಣುತ್ತಿಲ್ಲ ಎಂದು ಹುಡುಕಾಟ ನಡೆಸಿದ್ದಾರೆ. ಆಗ ನೀರಿನ ಸಂಪ್‍ಗೆ ಬಿದ್ದು ಸಾವ್ನನಪ್ಪಿರುವುದು ಗೊತ್ತಾಗಿದೆ. ಈ ಘಟನೆ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನೀರಿನ ಸಂಪು ಕ್ಲೀನ್ ಮಾಡಲು ಹೋಗಿ ಮೂವರ ದಾರುಣ ಸಾವು

    ನೀರಿನ ಸಂಪು ಕ್ಲೀನ್ ಮಾಡಲು ಹೋಗಿ ಮೂವರ ದಾರುಣ ಸಾವು

    ಚಿಕ್ಕಬಳ್ಳಾಪುರ: ನೀರಿನ ಸಂಪು ಕ್ಲೀನಿಂಗ್ ಮಾಡಲು ಹೋಗಿ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ದಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ತೇಕಲಹಳ್ಳಿ ಗ್ರಾಮದ ಪೆದ್ದನ್ನ, ನಾರಾಯಣಪ್ಪ ಸ್ವಾಮಿ ಹಾಗೂ ದಿನ್ನೇನಹಳ್ಳಿ ಗ್ರಾಮದ ರೆಡ್ಡಪ್ಪ ಮೃತಪಟ್ಟಿರುವ ದುರ್ದೈವಿಗಳು. ಜನಾರ್ದನ ಎಂಬವರ ಸ್ಥಿತಿ ಗಂಭೀರವಾಗಿದ್ದು, ಗೌರಿಬಿದನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರ ತೋಟದ ಮನೆಯ ಬಳಿ ಇರುವ ನೀರಿನ ಸಂಪು ಕ್ಲೀನಿಂಗ್ ಮಾಡಲು ಈ ನಾಲ್ವರು ಒಳಗಿಳಿದಿದ್ದಾರೆ. ಆದರೆ ಸಂಪ್‍ನೊಳಗೆ ಮೂವರು ಸಾವನ್ನಪ್ಪಿದ್ದು, ಜನಾರ್ದನ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

    ಘಟನೆ ನಡೆದ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ಸಂಪ್ ಮೇಲ್ಛಾವಣಿ ಕಿತ್ತು ಹಾಕಿ ಮೃತದೇಹಗಳನ್ನ ಹೊರ ತೆಗೆದಿದ್ದಾರೆ. ಉಸಿರುಗಟ್ಟಿ ಅಥವಾ ವಿದ್ಯುತ್ ಶಾಕ್ ನಿಂದ ದುರಂತ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತವಾಗಿ ತಿಳಿದಿಲ್ಲ. ಮರಣೋತ್ತರ ವರದಿ ಬಂದ ಮೇಲೆ ಖಚಿತವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಇನ್ನೂ ಘಟನೆಗೆ ಸಂಬಂಧಿಸಿದಂತೆ ಮನೆ ಮಾಲೀಕ ರಾಮಕೃಷ್ಣಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

     

  • ನಾಪತ್ತೆಯಾಗಿದ್ದ 2 ವರ್ಷದ ಬಾಲಕಿ ನೀರಿನ ಸಂಪ್‍ನಲ್ಲಿ ಶವವಾಗಿ ಪತ್ತೆ

    ನಾಪತ್ತೆಯಾಗಿದ್ದ 2 ವರ್ಷದ ಬಾಲಕಿ ನೀರಿನ ಸಂಪ್‍ನಲ್ಲಿ ಶವವಾಗಿ ಪತ್ತೆ

    – ಮುಗಿಲುಮುಟ್ಟಿದ ಪೋಷಕರ ಆಕ್ರಂದನ

    ಕೊಪ್ಪಳ: ಕಳೆದರೆಡು ದಿನಗಳಿಂದ ನಿಗೂಢವಾಗಿ ಕಾಣೆಯಾಗಿದ್ದ 2 ವರ್ಷದ ಬಾಲಕಿ ಶವ ಎದುರಿನ ಮನೆಯ ನೀರಿನ ಸಂಪ್‍ನಲ್ಲಿ ಪತ್ತೆಯಾಗಿದೆ.

    ಕೊಪ್ಪಳದ ಯಲಬುರ್ಗಾ ಪಟ್ಟಣದ ಮೆಹಬೂಬ ನಗರದಲ್ಲಿ ಕಳೆದ ಜೂನ್ 28 ರಂದು ಬಾಲಕಿ ಕಾಣೆಯಾಗಿದ್ದಳು. ಬಾಬುಸಾಬ್ ವಣಗೇರಿ ದಂಪತಿಯ 2ನೇ ಪುತ್ರಿ ಉಸ್ನಾ ಪಕ್ಕದ ಮನೆಯಲ್ಲಿ ಆಟವಾಡಲು ಹೋಗಿ ಕಾಣೆಯಾಗಿದ್ದಳು.

    ಜೂನ್ 28 ರಂದು ಪಕ್ಕದ ಮನೆಯಲ್ಲಿದ್ದ ಬಾಲಕಿಯನ್ನ ಕರೆದುಕೊಂಡು ಹೋಗಲು ಬಾಲಕಿ ತಾಯಿ ಹೋಗಿದ್ದರು. ಆದ್ರೆ ಆ ಮನೆಯವರು ನಿಮ್ಮ ಬಾಲಕಿ ಆವಾಗ್ಲೆ ಮನೆಗೆ ಹೋಗಿದ್ದಾಳೆ ಅಂತಾ ಹೇಳಿದ್ದರು. ಅಂದಿನಿಂದಲೇ ಬಾಲಕಿ ನಾಪತ್ತೆ ಆಗಿದ್ದಳು. ಆ ಬಳಿಕ ಬಾಲಕಿ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು.

    ಬಾಲಕಿ ಕಾಣೆಯಾಗಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ವೈರಲ್ ಆಗಿತ್ತು. ಆದ್ರೆ ಇಂದು ಬೆಳಗ್ಗೆ ಸಂಪ್ ತೆಗೆದು ನೋಡಿದಾಗ ನೀರಿನಲ್ಲಿ ಬಾಲಕಿ ಶವ ತೇಲುತ್ತಿರುವುದನ್ನು ಕಂಡಿದ್ದಾರೆ. ಸದ್ಯ ಬಾಲಕಿಯ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆ ಮಾಡಿ ಸಂಪ್‍ನಲ್ಲಿ ಬಿಸಾಡಿ ಹೋಗಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.