Tag: ನೀರಾವರಿ ಇಲಾಖೆ

  • ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ – ಅಪಾರ ಚಿನ್ನಾಭರಣ, ಹಣ ಪತ್ತೆ

    ಸಣ್ಣ ನೀರಾವರಿ ಇಲಾಖೆ, ಬಿಬಿಎಂಪಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ – ಅಪಾರ ಚಿನ್ನಾಭರಣ, ಹಣ ಪತ್ತೆ

    ಚಿತ್ರದುರ್ಗ: ದಾವಣಗೆರೆ, ಚಿತ್ರದುರ್ಗ (Chitradurga)  ಜಿಲ್ಲೆ ಸೇರಿದಂತೆ ವಿವಿಧೆಡೆ ಅಧಿಕಾರಿಗಳ ಮನೆ ಮೇಲೆ ಗುರುವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ  (Karnataka Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿರುವ ದೂರು ಬಂದ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್‌ ಕೆ. ಮಹೇಶ್ ಮತ್ತು ಅವರ ಪತ್ನಿ ಬಿಬಿಎಂಪಿ ಎಇ ಭಾರತಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಹೊಳಲ್ಕೆರೆ ಬಿಜೆಪಿ ಶಾಸಕನಿಂದ ಬೆದರಿಕೆ – ಡೆತ್‌ನೋಟ್‌ ಬರೆದು ಗ್ರಾ.ಪಂ. ಕ್ಲರ್ಕ್‌ ಆತ್ಮಹತ್ಯೆ

    ದಾವಣಗೆರೆಯಲ್ಲಿರುವ (Davanagere) ಕೆ.‌ಮಹೇಶ್, ಕೆ.ಭಾರತಿ ದಂಪತಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅಟ್ಯಾಕ್ ಮಾಡಿದ್ದು, ದಾಳಿಯ ವೇಳೆ 15 ಲಕ್ಷ ರೂ.ಗಿಂತಲೂ ಅಧಿಕ ನಗದು, 1 ಕೆಜಿಗೂ ಅಧಿಕ ಚಿನ್ನಾಭರಣ ಪತ್ತೆಯಾಗಿದೆ. ಈ ಹಿಂದೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಹಾಗೂ ಪಿಆರ್‌ಇಡಿ ಇಲಾಖೆಯಲ್ಲಿ ಕೆಲಸ‌ಮಾಡಿದ್ದ ಕೆ.‌ಭಾರತಿ ಮಹೇಶ್ ಮನೆ ಮೇಲೆ ಚಿತ್ರದುರ್ಗ ಲೋಕಾಯುಕ್ತ ಎಸ್ಪಿ ವಾಸುದೇವರಾವ್ ನೇತೃತ್ವದಲ್ಲಿ ದಾಳಿ ನಡೆದಿದೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಮಡಿದವರ ಕುಟುಂಬಸ್ಥರಿಗೆ 25 ಲಕ್ಷ ಪರಿಹಾರ, ಸರ್ಕಾರಿ ನೌಕರಿ ಕೊಡಿ: ಸಿ.ಟಿ. ರವಿ ಆಗ್ರಹ

    ಹಲವು ಬಾರಿ ಇವರ ವಿರುದ್ಧ ಭ್ರಷ್ಟಾಚಾರದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ಅವರ ಮನೆಯಲ್ಲಿನ ದಾಖಲೆಗಳನ್ನ ಪರಿಶೀಲಿಸುತ್ತಿದ್ದಾರೆ. ಶೋಧಕಾರ್ಯ ಮುಂದುವರಿದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ನೀಡಿರುವುದು ದುಡ್ಡು ಲೂಟಿ ಮಾಡೋಕೆ: ಹೆಚ್‍ಡಿಕೆ

    ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ನೀಡಿರುವುದು ದುಡ್ಡು ಲೂಟಿ ಮಾಡೋಕೆ: ಹೆಚ್‍ಡಿಕೆ

    ಮಂಡ್ಯ: ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎನ್ನುತ್ತಾರೆ, ಹೀಗಿರುವಾಗ ತರಾತುರಿಯಲ್ಲಿ ನೀರಾವರಿ ಇಲಾಖೆಯ ನಾಲ್ಕು ನಿಗಮಗಳಿಗೆ 12 ಸಾವಿರ ಕೋಟಿ ಯೋಜನೆಗೆ ಅನುಮತಿ ನೀಡುತ್ತಿರುವುದು ದುಡ್ಡು ಹೊಡೆಯುವುದಕ್ಕಾಗಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಬಿಎಸ್‍ವೈ ವಿರುದ್ಧ ಆರೋಪ ಮಾಡಿದ್ದಾರೆ.

    ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಯಡಿಯೂರಪ್ಪ ಅವರು ಕೆಲವೇ ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳುತ್ತಿದ್ದಾರೆ. ಹೀಗಿರುವ ಸಮಯಲ್ಲಿ ಇದ್ದಕ್ಕಿದ್ದ ಹಾಗೆ ದಿಢೀರನೆ ನೀರಾವರಿ ಇಲಾಖೆಗೆ 12 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ನೀಡಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ಜನರಿಗೆ ನೀರು ಕೊಡಲು ಈ ಯೋಜನೆಯನ್ನು ರೂಪಿಸಿದ್ದೀರಾ? ದುಡ್ಡು ಹೊಡೆಯುವ ಪ್ಲಾನ್ ಇದು. ಈಗಲೂ ರಾಜ್ಯದ ತೆರಿಗೆ ಹಣವನ್ನು ಲೂಟಿ ಮಾಡೋದಕ್ಕೆ ಈ ಪ್ಲಾನ್ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ಮುಂದಾಗಿದ್ದೆ: ಸಿಎಂ ಬಿಎಸ್‍ವೈ

    ಸರ್ಕಾರಕ್ಕೆ ಹಳೆ ಕರ್ನಾಟಕದಿಂದಲೇ ಹೆಚ್ಚಿನ ಪ್ರಮಾಣದ ತೆರಿಗೆ ಬರುತ್ತದೆ. ಹೀಗಿರುವಾಗ ಹಳೆ ಕರ್ನಾಟಕಕ್ಕೆ ಕೇವಲ 1 ಸಾವಿರ ಕೋಟಿಯನ್ನು ಮಾತ್ರ ಮಂಜೂರು ಮಾಡಿದ್ದಾರೆ. ನಮಗೆ ಹಳೆಯದ್ದು ಹಾಗೂ ಹೊಸ ಕರ್ನಾಟಕ ಎಂದು ನಾನು ಹೇಳುವುದಿಲ್ಲ. ಆ ಭಾಗಕ್ಕೆ ಆದ್ಯತೆ ನೀಡುವ ರೀತಿ ಈ ಭಾಗಕ್ಕೂ ಆದ್ಯತೆ ನೀಡಿ, ಇಲ್ಲಿನ ಜನರು ನಿಮಗೇನು ದ್ರೋಹ ಮಾಡಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಹೆಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

  • ಕಾರಂಜಿಯಂತೆ 30 ಅಡಿ ಎತ್ತರಕ್ಕೆ ಚಿಮ್ಮಿದ 22 ಕೆರೆ ಯೋಜನೆಯ ನೀರು

    ಕಾರಂಜಿಯಂತೆ 30 ಅಡಿ ಎತ್ತರಕ್ಕೆ ಚಿಮ್ಮಿದ 22 ಕೆರೆ ಯೋಜನೆಯ ನೀರು

    ದಾವಣಗೆರೆ: ಅಧಿಕಾರಿಗಳ ನಿರ್ಲಕ್ಷ್ಯದಿಂದ 22 ಕೆರೆ ಯೋಜನೆಯ ಪೈಪ್ ಒಡೆದು ಕಾರಂಜಿಯಂತೆ ನದಿಯ ನೀರು ಚಿಮ್ಮುತ್ತಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದಿದೆ.

    ತುಂಗಾಭದ್ರ ನದಿಯಿಂದ ದಾವಣಗೆರೆಯ ಬರ ತಾಲೂಕುಗಳ 22 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ಪೂರೈಸಲಾಗುತ್ತಿದೆ. ನೀರು ಪೂರೈಸುವ ಪೈಪ್ ಗಳು ಪದೇ ಪದೇ ಒಡೆದು ನೀರು ಪೋಲಾಗುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ತಿಂಗಳಲ್ಲಿ ಐದಕ್ಕಿಂತ ಹೆಚ್ಚು ಬಾರಿ ಪೈಪ್ ಹಾಗೂ ಏರ್ ವಾಲ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ. ಅಲ್ಲದೆ ಇಂದು ಒಡೆದ ಪೈಪ್ ನಿಂದ ಪಕ್ಕದಲ್ಲೇ ಇರುವ ಡಾಬಾಗೆ ನೀರು ನುಗ್ಗಿದ್ದು, ಸಾಕಷ್ಟು ತೊಂದರೆ ಅನುಭವಿಸುವಂತಾಯಿತು.

    ಪದೇ ಪದೇ ನೀರು ಪೋಲಾಗುತ್ತಿದ್ದು, ಇಂದು ಮೂವತ್ತು ಅಡಿಗಳಷ್ಟು ಎತ್ತರಕ್ಕೆ ನೀರು ಚಿಮ್ಮುತ್ತಿದೆ. ಇದರಿಂದ ಲಕ್ಷಾಂತರ ಲೀಟರ್ ನೀರು ಪೋಲಾಗಿದೆ. ಆದರೆ ನೀರಾವರಿ ಇಲಾಖೆ ಅಧಿಕಾರಿಗಳು ಇದಕ್ಕೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾತ್ರೋ ರಾತ್ರಿ ಬಿಹಾರದಲ್ಲಿ ನಿವೃತ್ತ ಆಯುಕ್ತ, ಪತ್ನಿಯ ಕೊಲೆ!

    ರಾತ್ರೋ ರಾತ್ರಿ ಬಿಹಾರದಲ್ಲಿ ನಿವೃತ್ತ ಆಯುಕ್ತ, ಪತ್ನಿಯ ಕೊಲೆ!

    ಪಾಟ್ನಾ: ನಿವೃತ್ತ ಆಯುಕ್ತ ಹಾಗೂ ಅವರ ಪತ್ನಿಯನ್ನು ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ಬಿಹಾರ ರಾಜಧಾನಿ ಪಾಟ್ನಾ ಸಮೀಪದ ಬುದ್ಧ ಕಾಲೊನಿಯಲ್ಲಿ ನಡೆದಿದೆ.

    ನೀರಾವರಿ ಇಲಾಖೆಯ ನಿವೃತ್ತ ಆಯುಕ್ತ ಹರೇಂದ್ರ ಪ್ರಸಾದ್ (82) ಹಾಗೂ ಅವರ ಪತ್ನಿ ಸಾಧನಾ ಗುಪ್ತಾ ಕೊಲೆಯಾದವರು. ಶುಕ್ರವಾರ ಬೆಳಗ್ಗೆ ತನಿಖೆ ಆರಂಭಿಸಿದ ಪೊಲೀಸರು ಚಾಲಕ ಸೇರಿದಂತೆ ಒಟ್ಟು 4 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಹರೇಂದ್ರ ಪ್ರಸಾದ್ ಹಾಗೂ ಅವರ ಪತ್ನಿಯನ್ನು ಸಂಬಂಧಿಕರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಆಸ್ಪತ್ರೆಗೆ ತರುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಅಂತ ವೈದ್ಯರು ಖಚಿತಪಡಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಮನು ಮಹಾರಾಜ್ ಮಾಹಿತಿ ನೀಡಿದ್ದಾರೆ.

    ಪ್ರಾಥಮಿಕ ವರದಿಯ ಪ್ರಕಾರ ದಂಪತಿಯನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಮೃತ ದೇಹಗಳ ಮೇಲೆ ಹಲ್ಲೆ ಮಾಡಿರುವ ಗುರುತುಗಳಿವೆ ಹಾಗೂ ಇಬ್ಬರ ತಲೆಗೂ ಬಲವಾಗಿ ಹೊಡೆಯಲಾಗಿದೆ ಎಂದು ಮಹಾರಾಜನ್ ತಿಳಿಸಿದ್ದಾರೆ.

    ತನಿಖೆ ಆರಂಭವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ ಚಾಲಕ ಸೇರಿದಂತೆ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸಂಬಂಧಿಕರು ಕೂಡಾ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.

    ಕೊಲೆಯಿಂದಾಗಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಬುದ್ಧ ಕಾಲೊನಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!

    ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ಕಾಲುವೆ ನೀರು!

    ಬೆಳಗಾವಿ: ನೀರಾವರಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೋಗೇರಿ ಪಟ್ಟಣದಲ್ಲಿ ನಡೆದಿದೆ.

    ನೀರಾವರಿ ಇಲಾಖೆಯ ಅಧಿಕಾರಿಗಳು ಹಾರೋಗೇರಿ ಪಟ್ಟಣದ ಕೆರೆ ತುಂಬಿಸಲು, ಘಟಪ್ರಭಾ ಎಡದಂಡೆ ಕಾಲುವೆ ಮೂಲಕ ನೀರು ಹಾಯಿಸಿದ್ದಾರೆ. ಏಕಾಏಕಿ ನೀರು ಹರಿಸಿದ್ದರಿಂದ ಹಾರೋಗೇರಿ ಪಟ್ಟಣದ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಗಳು ತಗ್ಗು ಪ್ರದೇಶದಲ್ಲಿಂದರಿಂದ ನೀರು ತುಂಬಿಕೊಂಡಿದ್ದು, ಮನೆಯಿಂದ ನೀರು ತೆಗೆಯಲು ಜನರು ಹರಸಾಹಸ ಪಡುತ್ತಿದ್ದಾರೆ. ನೀರಿನಿಂದಾಗಿ ಕಾಲೋನಿ ಸಂಪೂರ್ಣ ಜಲಾವೃತಗೊಂಡಿದೆ.

    ಪುರಸಭೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಛಗೊಳಿಸದೇ ನೀರು ಹರಿಸಿದ್ದರಿಂದ ಕಾಲುವೆ ತುಂಬಿ ಹತ್ತಿರದ ಮನೆಗಳಿಗೆ ನುಗ್ಗಿದೆ. ಯಾವುದೇ ಮಾಹಿತಿ ನೀಡದೆ ಏಕಾಏಕಿ ನೀರು ಬಿಟ್ಟಿದ್ದರ ಪರಿಣಾಮ ನೀರು ನುಗ್ಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ