Tag: ನೀನಾ ಗುಪ್ತಾ

  • ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ವರಿಬ್ಬರೂ ಒಂದೊಂದು ಕಾರಣಕ್ಕೆ ಗೋಳಾಡುತ್ತಿದ್ದಾರೆ. ಒಬ್ಬಾಕೆದ್ದು ಡ್ರಗ್ಸ್ (Drugs) ಸಮಸ್ಯೆ, ಇನ್ನೊಬ್ಬ ನಟಿಯದ್ದು ಕಿಸ್ಸಿನ (Kiss) ಕಾಂಟ್ರವರ್ಸಿ. ನಾನು ಹಾಗಿರಲಿಲ್ಲ ಎನ್ನುವುದೇ ಇಬ್ಬರ ಒನ್ ಲೈನ್ ಸಿನಿಮಾ. ಯಾವ ಕಾರಣಕ್ಕೆ ಇಬ್ಬರು ನಟಿಯರು ಹೀಗೆ ಒದ್ದಾಡುತ್ತಿದ್ದಾರೆ? ಏನಿದರ ಹಿಂದಿನ ಅಸಲಿಯತ್ತು?

    ಅಶು ರೆಡ್ಡಿ(Ashu Reddy), ಈಕೆ ಕಾಲಿವುಡ್ ನಟಿ. ಸ್ಟಾರ್ ಪಟ್ಟ ದಕ್ಕಿಲ್ಲ. ಅದಕ್ಕಾಗಿ ಸಕಲ ರೀತಿ ಹೋರಾಟ ಮಾಡುತ್ತಿದ್ದಾರೆ. ತುಣುಕು ಪಾತ್ರ ಸಿಕ್ಕರೂ ಕೇಕೆ ಹಾಕುತ್ತಾರೆ. ರಜನಿಯ ಕಬಾಲಿ ಚಿತ್ರದಲ್ಲೂ ಹಿಂಗೆ ಬಂದು ಹಂಗೆ ಹೋಗಿದ್ದರು. ಈಗ ಅದೇ ಸಿನಿಮಾ ನಿರ್ಮಾಪಕ ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆತನ ಹೆಸರು ಕೆಪಿ ಚೌಧರಿ. ಇದೇ ಚೌಧರಿ ಜೊತೆ ಗಂಟೆಗಟ್ಟಲೆ ಚಾಟಿಂಗು, ನೂರು ಸಾರಿ ಫೋನ್ ಕಾಲಿಂಗು ಅಶು ರೆಡ್ಡಿ ಮಾಡಿದ್ದಾರಂತೆ. ಇದನ್ನು ಖಾಕಿ ಬಹಿರಂಗಗೊಳಿಸಿದೆ. ಮಾಧ್ಯಮ ಬರೆದಿವೆ. ಅಶು ರಣಚಂಡಿ ಅವತಾರ.

    `ನಾನು ಡ್ರಗ್ಸ್ ತೊಗೊಂಡಿಲ್ರಪ್ಪಾ. ನನ್ನ ಮೊಬೈಲ್ ನಂಬರ್ ಲೀಕ್ ಮಾಡಿದ್ದಾರೆ. ಸಾವಿರಾರು ಫೋನ್ ಬರುತ್ತಿವೆ. ನಾನೆಲ್ಲಿಗೆ ಹೋಗಲಿ? ಮೀಡಿಯಾ ಮೇಲೆ ಕೇಸ್ ಹಾಕುತ್ತೇನೆ.’ ಹೀಗಂತ ಟೊಂಕಕ್ಕೆ ಸೀರೆ ಸಿಕ್ಕಿಸಿಕೊಂಡು ಗುಡುಗಿದ್ದಾರೆ ಚಿನ್ನಾರಿ ಅಶು. `ಹಾಗಿದ್ದರೆ ನೂರು ಸಾರಿ ಚೌಧರಿಗೆ ಫೋನ್ ಯಾಕೆ ಮಾಡಿದ್ದೆ?’ ಇದಕ್ಕೆ ಉತ್ತರ ಮಾತ್ರ ಅಶು ರೆಡ್ಡಿ ನಾಲಿಗೆಯಿಂದ ಈಚೆ ಬೀಳುತ್ತಿಲ್ಲ. ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂತಿದ್ದಾರಾ ಅಶು? ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ದಶಕಗಳ ನಂತರ ಬಾಲಿವುಡ್ ಹಿರಿಯ ನಟಿ ಲಿಪ್‌ಲಾಕ್ ದೃಶ್ಯ ನೆನಪಿಸಿಕೊಂಡಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸಿ, ಹೆಂಗೆ ಡೆಟಾಲ್ ಹಾಕಿ ಬಾಯಿ ತೊಳಕೊಂಡೆ ಎನ್ನುವುದನ್ನು ಇಂಚಿಂಚಾಗಿ ಹರವಿಟ್ಟಿದ್ದಾರೆ. ಆ ನಟಿಯ ಹೆಸರು ನೀನಾ ಗುಪ್ತಾ (Neena Gupta). ಪೋಷಕ ನಟಿ ಕಮ್ ಬೋಲ್ಡ್ ಆಕ್ಟರೀಸ್ ಗದ್ದುಗೆ ಏರಿದ್ದರು ಈಕೆ ದಶಕಗಳ ಹಿಂದೆ. ತೊಂಬತ್ತರ ದಶಕದ ದಿಲ್ಲಗಿ ಸೀರಿಯಲ್‌ನಲ್ಲಿ ಮೊದಲ ಬಾರಿ ಲಿಪ್‌ಲಾಕ್ ದೃಶ್ಯಕ್ಕೆ ಒಪ್ಪಿದ್ದರು. ಧಾರಾವಾಹಿ ಲೋಕ ಬೆಚ್ಚಿತ್ತು. ಕಾರಣ ಅಲ್ಲಿವರೆಗೆ ಸೀರಿಯಲ್ ಮಡಿ ಮಡಿಲಾಗಿದ್ದವು.

     

    ದಿಲೀಪ್ ಧವನ್ ಜೊತೆ ತುಟಿಗೆ ಮುತ್ತಿಟ್ಟ ನೀನಾ ಇಡೀ ರಾತ್ರಿ ನಿದ್ದೆ ಮಾಡಲಿಲ್ಲವಂತೆ. ಇಷ್ಟ ಇಲ್ಲದ ನಟನ ಜೊತೆ ಕಿಸ್ ಮಾಡಿದ್ದಕ್ಕೆ ಫುಲ್ ಬಾಟಲ್ ಡೆಟಾಲ್‌ನಿಂದ ಬಾಯಿ ತೊಳೆದುಕೊಂಡಿದ್ದರಂತೆ. ಅದೃಷ್ಟವೋ ದುರದೃಷ್ಟವೋ? ಜನರು ರೊಚ್ಚೆಗೆದ್ದು ರಾಡಿ ನೀರು ಎರಚಬಾರದೆಂದು ನಿರ್ದೇಶಕ ಆ ದೃಶ್ಯಕ್ಕೆ ಕತ್ತರಿ ಹಾಕಿಬಿಟ್ಟ. ಅದನ್ನು ಇಷ್ಟು ವರ್ಷಗಳ ನಂತರ ನೆನೆದಿದ್ದಾರೆ ನೀನಾ. ಈಕೆ ಬೇರೆ ಯಾರೂ ಅಲ್ಲ, ವೆಸ್ಟ್ ಇಂಡೀಸ್ ಮಾಜಿ ಸ್ಟಾರ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ ಮಗುವಿನ ತಾಯಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಕ್ಕ ವಯಸ್ಸಿನಲ್ಲೇ ನನ್ನ ಮೇಲೆ ಲೈಂಗಿಕ ಕಿರುಕುಳವಾಗಿತ್ತು: ನೀನಾ ಗುಪ್ತಾ

    ಚಿಕ್ಕ ವಯಸ್ಸಿನಲ್ಲೇ ನನ್ನ ಮೇಲೆ ಲೈಂಗಿಕ ಕಿರುಕುಳವಾಗಿತ್ತು: ನೀನಾ ಗುಪ್ತಾ

    – ಶಂಕರ್ ನಾಗ್ ಜೊತೆಗೂ ನಟಿಸಿದ್ದ ಈ ನಟಿ

    ಮುಂಬೈ: ಬಾಲಿವುಡ್ ನಟಿ ನೀನಾ ಗುಪ್ತಾ ನಾನು ಚಿಕ್ಕವಳಾಗಿದ್ದಾಗ ನನ್ನ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದು ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದು, ಈಗ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ನೀನಾ ಗುಪ್ತಾ ಅವರ ‘ಸ್ಯಾಚ್ ಕಹುನ್ ತೋ’ ಆತ್ಮಚರಿತ್ರೆಯನ್ನು ಜೂನ್ ನಲ್ಲಿ ಬಿಡುಗಡೆ ಮಾಡಲಾಯಿತು. ಈ ಆತ್ಮಚರಿತ್ರೆಯ ಒಂದು ಆಯ್ದ ಭಾಗದಲ್ಲಿ ಆಕೆ ತನ್ನ ಮೇಲೆ ಆದ ಕಿರುಕುಳವನ್ನು ಹೇಳಿಕೊಂಡಿದ್ದರು. ಅವರ ಈ ಅನುಭವದ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗುಪ್ತಾ ಅವರಿಗೆ 62 ವರ್ಷವಾಗಿದ್ದು, ಅವರು ಚಿಕ್ಕವರಿದ್ದಾಗ ವೈದ್ಯರು ಮತ್ತು ಟೈಲರ್ ನಿಂದ ಕಿರುಕುಳಕ್ಕೊಳಗಾಗಿದ್ದೆ ಎಂದು ತಮಗಾದ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ದೀಪಿಕಾರಂತೆ ಕ್ಯೂಟ್ ಮಗು ಬೇಕು: ರಣವೀರ್ ಸಿಂಗ್

     

    View this post on Instagram

     

    A post shared by Neena Gupta (@neena_gupta)

    ಈ ವಿಚಾರಕ್ಕೆ ಹೆದರಿಕೊಂಡಿದ್ದು, ಒಂದು ವೇಳೆ ಎಲ್ಲರೂ ಇದನ್ನು ನನ್ನ ತಪ್ಪು ಎಂದು ಹೇಳಬಹುದೆಂಬ ಭಯದಿಂದ ತನ್ನ ತಾಯಿಗೂ ಸಹ ಘಟನೆ ಕುರಿತು ಏನನ್ನೂ ಹೇಳಿಕೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ. ಗುಪ್ತಾ ತಮ್ಮ ಪುಸ್ತಕದಲ್ಲಿ ಬರೆಕೊಂಡಿದ್ದು, ಚಿಕ್ಕ ವಯಸ್ಸಿನಲ್ಲಿ ಬಹಿರಂಗವಾಗಿ ಈ ವಿಚಾರವನ್ನು ಹೇಳಿಕೊಳ್ಳಲು ಭಯದ ವಾತವಾರಣವೇ ಕಾರಣ ಎಂದಿದ್ದಾರೆ.

    ತಾಯಿಗೆ ಹೇಳಲು ಧೈರ್ಯ ಮಾಡಲಿಲ್ಲ

    ಗುಪ್ತಾ ಅವರು ತಮ್ಮ ಆತ್ಮಚರಿತ್ರೆಯಲ್ಲಿ, ಒಮ್ಮೆ ನಾನು ಕಣ್ಣಿನ ಸೋಂಕಿಗೆ ವೈದ್ಯರನ್ನು ಭೇಟಿ ಮಾಡಿದ್ದೆ. ನನ್ನ ಜೊತೆಗಿದ್ದ ನನ್ನ ಸಹೋದರನನ್ನು ಹೊರಗೆ ಕಳುಹಿಸಿದ್ದಾರೆ. ನಂತರ ವೈದ್ಯರು ನನ್ನ ಕಣ್ಣನ್ನು ಪರೀಕ್ಷಿಸಲು ಆರಂಭಿಸಿದರು. ಇದೇ ವೇಳೆ ನನ್ನ ಇತರ ಅಂಗಗಳನ್ನು ಪರೀಕ್ಷಿಸಲು ಮುಂದಾದರು. ಆದರೆ ಅದು ನನ್ನ ಕಣ್ಣಿಗೆ ಸಂಬಂಧಿಸಿಲ್ಲ. ಈ ವೇಳೆ ನನಗೆ ತುಂಬಾ ಭಯವಾಯಿತು. ಮನೆಗೆ ಹೋಗುವಾಗ ಅಸಹ್ಯವಾಯಿತು. ಇದರ ಬಗ್ಗೆ ನಾನು ತುಂಬಾ ಹೆದರಿಕೊಂಡಿದ್ದೆ. ನಾನು ಮನೆಯ ಒಂದು ಮೂಲೆಯಲ್ಲಿ ಕುಳಿತು ಅಳುತ್ತಿದ್ದೆ. ಆದರೆ ನಾನು ಈ ಬಗ್ಗೆ ನನ್ನ ತಾಯಿಗೆ ಹೇಳಲು ಧೈರ್ಯ ಮಾಡಲಿಲ್ಲ. ಏಕೆಂದರೆ ನನಗೆ ಹೆದರಿಕೆಯಾಗಿತ್ತು. ಎಲ್ಲಿ ಅವರು ಅದು ನನ್ನ ತಪ್ಪು ಎಂದು ಬಿಡುತ್ತಾರೆ ಎಂದು ನಾನು ತುಂಬಾ ಭಯಪಡುತ್ತಿದ್ದೆ. ಅವನನ್ನು ಪ್ರಚೋದಿಸಲು ನಾನು ಬಹುಶಃ ಏನನ್ನಾದರೂ ಹೇಳಿದ್ದೇನೆ ಅಥವಾ ಮಾಡಿರಬಹುದು. ಇಂತಹ ಅನುಭವ ನನಗೆ ವೈದ್ಯರ ಬಳಿ ಅನೇಕ ಬಾರಿ ಆಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

     

    View this post on Instagram

     

    A post shared by Neena Gupta (@neena_gupta)

    ಈ ವಿಚಾರವಾಗಿ ಗುಪ್ತಾ ತನ್ನ ಸ್ನೇಹಿತರೊಂದಿಗೆ ಚರ್ಚೆ ನಡೆಸಬೇಕಾದರೆ ಈ ರೀತಿ ಅವರ ಜೀವನದಲ್ಲಿಯೂ ನಡೆದಿತ್ತು ಎಂಬುದನ್ನು ತಿಳಿಸಿದ್ದಾರೆ. ಗುಪ್ತಾ ಅವರು ಈ ಪುಸ್ತಕದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ವಿವಿಧ ಅಧ್ಯಾಯಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ವಿವ್ ರಿಚಡ್ರ್ಸ್‍ನೊಂದಿಗೆ ಆಕೆಯ ಮಗಳಾದ ಫ್ಯಾಶನ್ ಡಿಸೈನರ್ ಮಸಬಾ ಗುಪ್ತಾಳನ್ನು ಒಬ್ಬರೇ ಬೆಳೆಸುವಾಗ ಆಕೆ ತನ್ನ ವೃತ್ತಿಜೀವನದಲ್ಲಿ ಎದುರಿಸಿದ ಸಮಸ್ಯೆಗಳನ್ನು ಇಲ್ಲಿ ಮೆಲುಕು ಹಾಕುತ್ತಾರೆ.

     

    View this post on Instagram

     

    A post shared by Neena Gupta (@neena_gupta)

    ತ್ರಿಕಾಲ್, ಮಂಡಿ ಮತ್ತು ಉತ್ಸವ್ ಸಿನಿಮಾಗಳಲ್ಲಿ ಗುಪ್ತಾ ಅವರು ನಟಿಸಿದ್ದು, ಈ ಸಿನಿಮಾಗಳು ಅವರಿಗೆ ಅಷ್ಟು ಮೆಚ್ಚುಗೆಯನ್ನು ತಂದುಕೊಂಡಲಿಲ್ಲ. ಅವರು ಯುವ ನಟಿಯಾಗಿ ಅಷ್ಟು ಗುರುತಿಸಿಕೊಳ್ಳಲಿಲ್ಲ. ಆದರೆ 2018 ರ ‘ಬಧಾಯಿ ಹೋ’ ಚಿತ್ರದ ಬ್ಲಾಕ್‍ಬಸ್ಟರ್ ನಿಂದ ಮತ್ತೆ ಇವರು ಕಮ್ ಬ್ಯಕ್ ಆಗಿದ್ದು, ಪ್ರಸ್ತುತ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗುಪ್ತಾ ಅವರು ಶಂಕರ್ ನಾಗ್ ಜೊತೆಗೂ ನಟಿಸಿದ್ದರು.

  • ಶಂಕರ್ ನಾಗ್ ನೆನೆದು ಭಾವುಕರಾದ ಬಾಲಿವುಡ್ ನಟಿ

    ಶಂಕರ್ ನಾಗ್ ನೆನೆದು ಭಾವುಕರಾದ ಬಾಲಿವುಡ್ ನಟಿ

    ಮುಂಬೈ: ಶಂಕರ್ ನಾಗ್ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ ಎಂದು ಬಾಲಿವುಡ್ ನಟಿ ನೀನಾ ಗುಪ್ತಾ ಸ್ಯಾಂಡಲ್‍ವುಡ್ ನಟ ಶಂಕರ್ ನಾಗ್ ಅವರನ್ನು ನೆನೆದು ಭಾವುಕರಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಪಿಂಕ್ ಸೀರೆ ತೊಟ್ಟು ಫೋಟೋಗೆ ಪ್ರಿಯಾಮಣಿ ಪೋಸ್

    ಉತ್ಸವ್ ಸಿನಿಮಾದಲ್ಲಿ ಶಂಕರ್ ನಾಗ್ ಜತೆ ನಿಂತಿರುವ ಸ್ಟಿಲ್ ಇದು. ನಿಮ್ಮನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಶಂಕರ್ ನೀವು ನಮ್ಮನ್ನು ಬಹುಬೇಗ ಬಿಟ್ಟು ಹೋದಿರಿ ಎಂದು ಭಾವುಕರಾಗಿ ನೀನಾ ಬರೆದುಕೊಂಡು ಒಂದು ಫೊಟೋವನ್ನು ಹಂಚಿಕೊಂಡಿದ್ದಾರೆ.

    ಶಂಕರ್ ನಾಗ್ ಹಿಂದಿಯ ಉತ್ಸವ್ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಗಿರೀಶ್ ಕಾರ್ನಾಡ್ ನಿರ್ದೇಶನ ಮಾಡಿದ್ದರು. ಶಶಿ ಕಪೂರ್ ಸಿನಿಮಾ ನಿರ್ಮಾಣ ಮಾಡಿದ್ದರು. ರೇಖಾ ಚಿತ್ರದ ನಾಯಕಿ. ಆ ಸಿನಿಮಾದಲ್ಲಿ ನೀನಾ ಗುಪ್ತಾ ಕೂಡ ನಟಿಸಿದ್ದರು. ಸಿನಿಮಾದಲ್ಲಿ ಬರುವ ದೃಶ್ಯವೊಂದರ ಪೋಸ್ಟ್ ಹಾಕಿ ಶಂಕರ್ ನಾಗ್ ಅವರನ್ನು ನೀನಾ ನೆಪಿಸಿಕೊಂಡಿದ್ದಾರೆ.

     

    View this post on Instagram

     

    A post shared by Neena Gupta (@neena_gupta)

    ನೀನಾ ಗುಪ್ತಾ ಅವರ ಸಚ್ ಕಹೂ ತೋ ಆಟೋಬಯೋಗ್ರಫಿ ಇತ್ತೀಚೆಗೆ ಬಿಡುಗಡೆ ಆಗಿತ್ತು. ಈ ಪುಸ್ತಕದಲ್ಲೂ ಶಂಕರ್ ನಾಗ್ ಬಗ್ಗೆ ಅವರು ಬರೆದುಕೊಂಡಿದ್ದಾರೆ. 1984ರಲ್ಲಿ ಶಂಕರ್ ನಾಗ್ ಅವರನ್ನು ಉತ್ಸವ್ ಸೆಟ್‍ನಲ್ಲಿ ಮೊದಲ ಬಾರಿಗೆ ಭೇಟಿ ಮಾಡಿದ್ದೆ. ಅವರು ಓರ್ವ ಅತ್ಯುತ್ತಮ ಗೆಳೆಯ. ಒಳ್ಳೆಯ ವ್ಯಕ್ತಿ. ಅವರು ತುಂಬಾನೇ ಜನಪ್ರಿಯತೆ ಹೊಂದಿದ್ದರು. ಆದರೆ, ಅವರು ಎಲ್ಲರ ಜತೆ ಬೆರೆಯುತ್ತಿದ್ದರು. ಇದು ಅವರ ದೊಡ್ಡ ಗುಣ ಎಂದು ನೀನಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

     

    View this post on Instagram

     

    A post shared by Neena Gupta (@neena_gupta)

    ಅತಿ ಕಡಿಮೆ ವಯಸ್ಸಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ ಖ್ಯಾತಿ ಶಂಕರ್ ನಾಗ್ ಅವರಿಗಿದೆ. ಜೋಕುಮಾರಸ್ವಾಮಿ ಆ ಕಾಲಕ್ಕೆ ಭಾರಿ ಯಶಸ್ಸು ಕಂಡ ನಾಟಕ. ಈ ನಾಟಕವನ್ನು ಸಿನಿಮಾ ಮಾಡಬೇಕು ಎನ್ನುವ ಕನಸು ಶಂಕರ್ ನಾಗ್ ಅವರದ್ದಾಗಿತ್ತು. ಆ ಸಲುವಾಗಿ ಬಾಗಲಕೋಟೆಯ ಮುಧೋಳ ತಾಲ್ಲೂಕಿನ ಲೋಕಾಪುರಕ್ಕೆ ಹೋಗಬೇಕಿತ್ತು. 1990ರಂದು ಸೆ.30ರಂದು ಶಂಕರ್ ನಾಗ್ ತಮ್ಮ ಪತ್ನಿ ಅರುಂಧತಿ ನಾಗ್ ಮತ್ತು ಮಗಳು ಕಾವ್ಯಾ ಜೊತೆ ಬೆಂಗಳೂರಿನಿಂದ ಹೊರಟಿದ್ದರು. ಆದರೆ, ದಾವಣಗೆರೆಯ ಅನಗೋಡು ಬಳಿ ಲಾರಿಗೆ ಶಂಕರ್ ನಾಗ್ ಕಾರು ಡಿಕ್ಕಿಯಾಗಿತ್ತು. ಘಟನೆಯಲ್ಲಿ ಶಂಕರ್ ನಾಗ್ ಮತ್ತು ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು.

  • ವಿವಾಹಿತನ ಪ್ರೀತಿಯ ಬಲೆಯಲ್ಲಿ ಸಿಲುಕಬೇಡಿ: ನಟಿ ನೀನಾ ಗುಪ್ತಾ

    ವಿವಾಹಿತನ ಪ್ರೀತಿಯ ಬಲೆಯಲ್ಲಿ ಸಿಲುಕಬೇಡಿ: ನಟಿ ನೀನಾ ಗುಪ್ತಾ

    – ‘ಆ’ ಕಷ್ಟ ನನಗೆ ಗೊತ್ತು

    ಮುಂಬೈ: ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿಕೊಂಡು, ಮದುವೆಯಾದ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಸಿಲುಕಬೇಡಿ. ಆ ಕಷ್ಟಗಳೆಲ್ಲ ನನಗೆ ಗೊತ್ತು ಎಂದು ಹೇಳಿದ್ದಾರೆ.

    ನೀನಾ ಗುಪ್ತಾ 80ರ ದಶಕದಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟರ್ ರಿಚರ್ಡ್ ಜೊತೆ ರಿಲೇಶನ್ ಶಿಪ್‍ನಲ್ಲಿದ್ದರು. ತಮ್ಮ ಜೀವನದಲ್ಲಾದ ಅನುಭವಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೀನಾ ಶೇರ್ ಮಾಡಿಕೊಂಡಿದ್ದಾರೆ. ವಿವಾಹಿತನನ್ನು ಪ್ರೀತಿಸಿ ಹಲವು ಸಮಸ್ಯೆಗಳನ್ನು ನಾನು ಎದುರಿಸಿದ್ದೇನೆ. ಹಾಗಾಗಿ ಸ್ನೇಹಿತರು ಮತ್ತು ಆಪ್ತರಿಗೆ ಈ ಮಾತನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.

    https://www.instagram.com/p/B9OhLDAFYzN/

    ನೀನಾ ಗುಪ್ತಾ ಹೇಳಿದ್ದೇನು?
    ಒಬ್ಬ ವಿವಾಹಿತ ಬಂದು ನಿಮ್ಮ ಬಳಿ ಹೆಂಡತಿ ಚೆನ್ನಾಗಿಲ್ಲ. ಇಬ್ಬರ ಸಂಬಂಧ ಸರಿಯಲ್ಲ ಎಂಬಿತ್ಯಾದಿ ಮಾತುಗಳನ್ನ ಹೇಳುತ್ತಾನೆ. ನೀವು ಆತ ಹೆಣೆದ ಪ್ರೇಮದ ಬಲೆಯಲ್ಲಿ ಬೀಳುತ್ತೀರಿ. ಮೊದಲು ಹೆಂಡತಿಯಿಂದ ದೂರ ಆಗ್ತೀನಿ ಎಂದು ಹೇಳಿದವ ಬೇರೆಯಾಗಲ್ಲ. ನೀವು ಬೇರೆ ಆಗುವಂತೆ ಸೂಚಿಸಿದ್ರೆ ಮಕ್ಕಳು, ಆಸ್ತಿ ಇನ್ನಿತರ ಸಮಸ್ಯೆಗಳನ್ನ ಹೇಳಿಕೊಳ್ಳುತ್ತಾನೆ.

    ಹೀಗೆ ಇಬ್ಬರ ಸಂಬಂಧ ಮುಂದುವರಿಯುತ್ತೆ. ನೀವು ಪ್ರಿಯಕರರ ಜೊತೆ ಲಾಂಗ್ ಹಾಲಿಡೇ ಹೋಗಬೇಕೆಂದಾಗ ಅವನು ಸುಳ್ಳು ಹೇಳಿ ಬರುತ್ತಾನೆ. ಒಂದು ಸಾರಿ ಅವನ ಜೊತೆ ಒಂದು ರಾತ್ರಿ ಕಳೆಯಬೇಕೆಂದಾಗ ಹೋಟೆಲಿನಲ್ಲಿ ಉಳಿದುಕೊಳ್ಳುತ್ತೀರಿ. ಹೀಗೆ ನೀವು ಅವನೊಂದಿಗೆ ಹಲವು ರಾತ್ರಿಗಳನ್ನು ಮದುವೆ ಮುಂಚೆಯೇ ಕಳೆಯುತ್ತೀರಿ. ಇಷ್ಟೆಲ್ಲ ಆದ್ಮೇಲೆ ಮದುವೆ ಆಗುವಂತೆ ಹೇಳಿದಾಗ ಅವನು ಕುಟುಂಬ ಬಿಟ್ಟು ಬರಲು ಹಿಂದೇಟು ಹಾಕುತ್ತಾನೆ. ಕೊನೆಗೂ ಪತ್ನಿಗೆ ವಿಚ್ಚೇಧನ ಸಹ ನೀಡದೇ ನಿಮ್ಮನ್ನೇ ದೂರ ಮಾಡುತ್ತೇನೆ ಎಂದು ಹೇಳುತ್ತಾನೆ. ಹಾಗಾಗಿ ವಿವಾಹಿತನ ಪ್ರೀತಿಯಲ್ಲಿ ಸಿಲುಕಬೇಡಿ ಎಂದು ಯುವತಿಯರಿಗೆ ನೀನಾ ಸಲಹೆ ನೀಡಿದ್ದಾರೆ.