ನೀನಾಸಂ ಸತೀಶ್ ನಾಯಕನಾಗಿ ನಟಿಸಿರುವ ಡಿಯರ್ ವಿಕ್ರಮ್ ಸಿನಿಮಾದ ಟ್ರೈಲರ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಓಟಿಟಿಯಲ್ಲಿ ಈ ಸಿನಿಮಾ ನೇರವಾಗಿ ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಟ್ರೈಲರ್ ಅನ್ನು ಇಂದು ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಲಾಯಿತು. ಪ್ರೇಮಕಥೆಯ ಜೊತೆಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸಿನಿಮಾ ಇದಾಗಿದೆ ಎನ್ನುವುದು ಟ್ರೈಲರ್ ನೋಡುವವರಿಗೆ ಗೊತ್ತಾಗಲಿದೆ.
ನೀನಾಸಂ ಸತೀಶ್ ಜೊತೆ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದು, ವಸಿಷ್ಠ ಸಿಂಹ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಂದೀಶ್ ನಿರ್ದೇಶನದಲ್ಲಿ ಈ ಸಿನಿಮಾ ತಯಾರಾಗಿದೆ. ಈ ಸಿನಿಮಾಗೆ ಹಿಂದೆ ಗೋಧ್ರಾ ಎಂದು ಹೆಸರಿಡಲಾಗಿತ್ತು. ಸೆನ್ಸಾರ್ ಮಂಡಳಿಯ ಸಲಹೆ ಮೇರೆಗೆ ಡಿಯರ್ ವಿಕ್ರಮ್ ಎಂದು ಟೈಟಲ್ ಬದಲಾಯಿಸಲಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?
ಸತೀಶ್ ವೃತ್ತಿ ಜೀವನದ ಮಹತ್ವದ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಸತೀಶ್ ಹೋರಾಟಗಾರನ ಪಾತ್ರ ಮಾಡಿದ್ದಾರೆ. ಉಳಿದ ಪಾತ್ರಗಳ ಹಿನ್ನೆಲೆಯಲ್ಲಿ ಗೌಪ್ಯವಾಗಿ ಇಡಲಾಗಿದೆ. ಸಮಾಜದಲ್ಲಿ ನಡೆದ ಅನೇಕ ನೈಜ ಘಟನೆಗಳಿಗೆ ಹೋಲಿಕೆ ಆಗುವಂತಹ ದೃಶ್ಯಗಳನ್ನು ಕೂಡ ಈ ಸಿನಿಮಾದಲ್ಲಿ ಹೆಣೆಯಲಾಗಿದೆಯಂತೆ.
ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಇದೀಗ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ, ಮೊದಲನೇ ಸಿನಿಮಾವನ್ನು ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ. ಇನ್ನೇನು ಅವರ ಚೊಚ್ಚಲ ಸಿನಿಮಾ ರಿಲೀಸ್ಗೆ ರೆಡಿಯಿದೆ. ಇದೇ ವೇಳೆಯಲ್ಲಿ ನಾಳೆ, ವಿಕ್ರಮ್ ನಟನೆಯ ‘ತ್ರಿವಿಕ್ರಮ್’ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಹಲವು ತಾರೆಯರು ಭಾಗಿಯಾಗಲಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಅವರ ತಂದೆಯವರು ಕನ್ನಡ ಸಿನಿಮಾ ರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ರವಿಚಂದ್ರನ್ ಮೊದಲ ಪುತ್ರ ಕೂಡ ಈಗಾಗಲೇ ಹೀರೋ ಆಗಿ ಲಾಂಚ್ ಆಗಿದ್ದಾರೆ. ಎರಡನೇ ಮಗ ಕೂಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಎಲ್ಲದರ ಸಂಭ್ರಮವನ್ನು ನಾಳೆ ಚಿತ್ರರಂಗದ ನಟರು ಒಟ್ಟಾಗಿ ಆಚರಿಸುತ್ತಿದ್ದಾರೆ. ಈ ಮೂಲಕ ರವಿಚಂದ್ರನ್ ಅವರಿಗೆ ಗೌರವವನ್ನೂ ಸೂಚಿಸುತ್ತಿದ್ದಾರೆ. ವಿಕ್ರಮ್ ಅವರ ಮೊದಲ ಸಿನಿಮಾ ಇದಾಗಿದ್ದರಿಂದ, ಮನತುಂಬಿ ಹಾರೈಸಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಬಾಮೈದನಿಂದಲೇ ಸ್ಯಾಂಡಲ್‌ವುಡ್ ನಟ ಸತೀಶ್ ಬರ್ಬರ ಹತ್ಯೆ?
ನಾಳೆ ನಡೆಯಲಿರುವ ಪ್ರಿ ಇವೆಂಟ್ ಕಾರ್ಯಕ್ರಮದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್, ತೆಲುಗು ನಟ ಸುಮನ್, ಡಾಲಿ ಧನಂಜಯ, ಜೋಗಿ ಪ್ರೇಮ್, ಶರಣ್, ರಕ್ಷಿತಾ, ಶೃತಿ, ತಾರಾ, ನಿಶ್ವಿಕಾ ನಾಯ್ಡು, ಅಜಯ್ ರಾವ್, ಶ್ರೀನಗರ ಕಿಟ್ಟಿ, ರವಿಶಂಕರ್ ಗೌಡ, ಲೂಸ್ ಮಾದ ಯೋಗಿ, ನೀನಾಸಂ ಸತೀಶ್, ಡಾರ್ಲಿಂಗ್ ಕೃಷ್ಣ, ಮನುರಂಜನ್ ರವಿಚಂದ್ರನ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಆಗಮಿಸಲಿದ್ದಾರೆ.
ತ್ರಿವಿಕ್ರಮ್ ಸಿನಿಮಾ ರಾಮ್ಕೊ ಸೋಮಣ್ಣ ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಸಹನಾಮೂರ್ತಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಮಾಡಿ, ಸಿನಿಮಾದ ಪ್ರಚಾರವನ್ನೂ ಚಿತ್ರತಂಡ ಮಾಡುತ್ತಿದೆ. ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಗುತ್ತಿದೆ.
ಸಿಂಧು ಲೋಕನಾಥ್ ಸದ್ದಿಲ್ಲದೇ ಸಿನಿಮಾವೊಂದರ ಶೂಟಿಂಗ್ ಮುಗಿಸಿದ್ದು, ಈ ಸಿನಿಮಾದಲ್ಲಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದಾರಂತೆ. ಆ ಪಾತ್ರಕ್ಕಾಗಿ ಅವರು ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ
ಶ್ರೀಮಂತ ಹುಡುಗಿಯು ತಪ್ಪು ದಾರಿ ತುಳಿದಾಗ ಅವಳ ಜೀವನ ಎತ್ತ ಸಾಗುತ್ತದೆ ಎನ್ನುವುದು ಇವರ ಪಾತ್ರದ ಹಿಂದಿರುವ ಹಿನ್ನೆಲೆಯಂತೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿಸಿದ್ದಾರಂತೆ ನಿರ್ದೇಶಕರು. ಇದನ್ನೂ ಓದಿ : ಬಸವರಾಜ ಬೊಮ್ಮಾಯಿಯನ್ನು ಶಿವರಾಜ್ ಕುಮಾರ್ ಭೇಟಿ ಮಾಡಿದ್ದೇಕೆ?
ದಯಾನಂದ್ ಮತ್ತು ಅಮರ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ರಾಕೇಶ್ ಅಡಿಗ, ವಿನಯ್ ಗೌಡ ಮತ್ತು ಕುಶಾಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಇದನ್ನೂ ಓದಿ: ಹಿಜಬ್ ಧರಿಸಿದ ಉಪ್ಪಿ – ಫೋಟೋ ವೈರಲ್
ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾವಾಗಿದ್ದು, ಮೊದಲ ಬಾರಿಗೆ ಸಿಂಧು ಇಂಥದ್ದೊಂದು ಪಾತ್ರವನ್ನು ನಿರ್ವಹಿಸಿದ್ದಾರಂತೆ. ಪಾತ್ರಕ್ಕೆ ಹಲವು ಸಿನಿಮಾಗಳನ್ನೂ ನೋಡಿದ್ದಾರಂತೆ. ಯಾರಿಗೂ ಕೇರ್ ಮಾಡದಂತಹ ಹುಡುಗಿಯ ಪಾತ್ರ ಇದಾಗಿದ್ದರಿಂದ ಅನೇಕ ಹುಡುಗಿಯರಿಗೆ ಈ ಪಾತ್ರ ಕನೆಕ್ಟ್ ಆಗಬಹುದು ಎಂದಿದ್ದಾರೆ ಸಿಂಧು. ಇದನ್ನೂ ಓದಿ : ಎದೆಹಾಲು ದಾನ ಮಾಡಿ – ಅಭಿಮಾನಿಗಳಿಗೆ ಸಿಂಡ್ರೆಲಾ ಸಂದೇಶ
ಮೊನ್ನೆಯಷ್ಟೇ ಖಾಸಗಿ ವಾಹಿನಿಯ ಟಾಕ್ ಶೋನಲ್ಲಿ ಸಿಂಧು ಕಾಣಿಸಿಕೊಂಡಿದ್ದರು. ನೀನಾಸಂ ಸತೀಶ್ ಜತೆ ಡ್ಯುಯೆಟ್ ಹಾಡಿ, ಪ್ರೇಕ್ಷಕರನ್ನು ರಂಜಿಸಿದ್ದರು. ಈ ಕಂತು ಸಾಕಷ್ಟು ಜನರಿಗೆ ಹಿಡಿಸಿತ್ತು. ಇದೀಗ ಸಿನಿಮಾ ಸುದ್ದಿ ಕೊಟ್ಟು ಅಭಿಮಾನಿಗಳಿಗೆ ಖುಷಿ ಪಡಿಸಿದ್ದಾರೆ ಸಿಂಧು.
ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದಕ್ಕೆ ಈ ಪೋಸ್ಟರ್ ಮೊದಲ ಬಾರಿಗೆ ಸಾಕ್ಷಿಯಾಗಿ ನಿಂತಿದೆ. ಒಂದು ತೆಲುಗಿನ ನಾನಿ ನಟನೆಯ ಚಿತ್ರ. ಇದಕ್ಕೆ ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಇವರು ಇಟ್ಟಿರುವ ಹೆಸರು ‘ದಸರಾ’. ಮತ್ತೊಂದು ಅಪ್ಪಟ ಕನ್ನಡದ್ದೆ ಚಿತ್ರ. ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವ ಚಿತ್ರ. ಈ ಸಿನಿಮಾಗೂ ‘ದಸರಾ’ ಎಂದೇ ಹೆಸರಿಡಲಾಗಿದೆ.
ಎರಡೂ ಚಿತ್ರಗಳೂ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿವೆ. ಹೀಗಾಗಿ ಯಾರಿಗೆ ಈ ಟೈಟಲ್ ಉಳಿಯುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ನೀನಾಸಂ ಸತೀಶ್ ನಟನೆಯ ‘ದಸರಾ’ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲಿಟ್ ಆಗಿದೆ. ತೆಲುಗಿನ ‘ದಸಾರ’ ಕೇವಲ ಫಸ್ಟ್ ಲುಕ್ ಮಾತ್ರ ಬಿಡುಗಡೆ ಮಾಡಿದೆ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಯಾರ ಪರವಾಗಿ ನಿಲ್ಲುತ್ತದೆ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ
ಯಾರೇ ಸಿನಿಮಾ ಮಾಡಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನು ನೋಂದಾಯಿಸಬೇಕು ಎನ್ನುವ ನಿಯಮವಿದೆ. ಯಾರು ಮೊದಲು ಹೆಸರನ್ನು ನೋಂದಾಯಿಸಿಕೊಳ್ಳುತ್ತಾರೋ ಅವರಿಗೆ ಶೀರ್ಷಿಕೆಗಳು ಸಿಗುತ್ತವೆ. ‘ದಸರಾ’ ಸಿನಿಮಾವನ್ನು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕಿ, ನಟಿ ಶರ್ಮಿಳಾ ಮಾಂಡ್ರೆ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ನಿಯಮದ ಪ್ರಕಾರ ಇದೇ ತಂಡಕ್ಕೆ ‘ದಸರಾ’ ಟೈಟಲ್ ಬಳಸಿಕೊಳ್ಳುವ ಹಕ್ಕಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
ನಾನಿ ನಟನೆಯ ತೆಲುಗಿನ ಸಿನಿಮಾ ಡಬ್ ಆಗಿ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹಾಗಾಗಿ ಕನ್ನಡದಲ್ಲಿ ತಮ್ಮ ಸಿನಿಮಾದ ಟೈಟಲ್ ಅನ್ನು ಬದಲಿಸುವುದು ಅನಿವಾರ್ಯವಾಗಬಹುದು. ಅದನ್ನು ಸಿನಿಮಾ ತಂಡ ಒಪ್ಪಿಕೊಳ್ಳುತ್ತಾ ಅಥವಾ ಕಾನೂನಿನಲ್ಲಿ ಮತ್ತೊಂದು ದಾರಿಯೂ ಇದೆ. ಅದನ್ನು ಬಳಸಿಕೊಳ್ಳುತ್ತಾ ಅನ್ನುವುದು ಸದ್ಯಕ್ಕಿರುವ ಪ್ರಶ್ನೆ. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿರುವ ಎಷ್ಟೋ ಶೀರ್ಷಿಕೆಯನ್ನು ಸೆನ್ಸಾರ್ ಮಂಡಳಿ ಒಪ್ಪಿಕೊಂಡಿಲ್ಲ. ಕೆಲವು ಬಾರಿ ಕೋರ್ಟಿಗೂ ಹೋಗಿ ತಮಗಿಷ್ಟದ ಟೈಟಲ್ ಪಡೆದುಕೊಂಡ ಉದಾಹರಣೆಯೂ ಇದೆ. ಯಾರ ಸಿನಿಮಾ ಮೊದಲು ಸೆನ್ಸಾರ್ ಆಗುತ್ತದೆಯೋ, ಆ ಟೈಟಲ್ ಗೆ ಮೊದಲ ಆದ್ಯತೆ ಎನ್ನುವ ಮತ್ತೊಂದು ನಿಯಮವಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಯಾವ ಚಿತ್ರತಂಡಕ್ಕೆ ‘ದಸರಾ’ ಟೈಟಲ್ ಸಿಗುತ್ತದೆಯೋ ಕಾದು ನೋಡಬೇಕು.
ತೋತಾಪುರಿ ಮತ್ತು ಪೆಟ್ರೋಮ್ಯಾಕ್ಸ್ ಸಿನಿಮಾದ ನಂತರ ಮತ್ತೆ ತಮ್ಮ ಪರಿಮಳ ಲಾಡ್ಜ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ವಿಜಯ್ ಪ್ರಸಾದ್. 2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದ ಇವರು, ಆನಂತರ ಈ ಪ್ರಾಜೆಕ್ಟ್ ಹಿಂದಕ್ಕಿಟ್ಟು ‘ಪೆಟ್ರೊಮ್ಯಾಕ್ಸ್’ ಸಿನಿಮಾ ಮಾಡಿದರು. ಇದೀಗ ಅವರ ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ನಡುವೆ ಮತ್ತೆ ಅವರು ಪರಿಮಳ ಲಾಡ್ಜ್ ನತ್ತ ಮುಖ ಮಾಡಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ವಿಜಯ್ ಪ್ರಸಾದ್, ‘ತೋತಾಪುರಿ, ಪೆಟ್ರೋಮ್ಯಾಕ್ಸ್ ಆಯ್ತು, ಸದ್ಯದಲ್ಲೇ ಪರಿಮಳ ಲಾಡ್ಜ್’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2.. ಹುಷಾರ್, ಮಾರ್ಚ್ 21ಕ್ಕೆ ತೂಫಾನ್ ಅಪ್ಪಳಿಸಲಿದೆ!
2019ರಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿತ್ತು. ಸಖತ್ ಡಬಲ್ ಮೀನಿಂಗ್ ಸಂಭಾಷಣೆಯಿಂದಾಗಿ ಸದ್ದು ಮಾಡಿತ್ತು. ಈ ಟೀಸರ್ ನಲ್ಲಿ ತಮ್ಮ ತಂಡವನ್ನು ನಿರ್ದೇಶಕ ವಿಜಯ್ ಪ್ರಸಾದ್ ವಿಭಿನ್ನವಾಗಿಯೇ ಪರಿಚಯ ಮಾಡಿಸಿದ್ದರು. ಲಾಡ್ಜ್ ಓನರ್ ಸ್ಕಂದ್ ಎಂಟರ್ ಟೇನ್ಮೆಂಟ್ (ಬ್ಯಾನರ್), ಲಾಡ್ಜ್ ನಲ್ಲಿ ಸಲಿಂಗಕಾಮಿಗಳು (ನಾಯಕ) ಲೂಸ್ ಮಾದ ಯೋಗಿ, ಲಾಡ್ಜನಲ್ಲಿ ಆಳ ನೋಡಿ, ಲಾಳ ಹೊಡ್ದವ್ರು (ತಾರಾಗಣ) ದತ್ತಣ್ಣ, ಸುಮನ್ ರಂಗನಾಥ್, ಹೇಮಾ ದತ್ತ್, ಲಾಡ್ಜನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಗುನ್ನ ತಿಂದವ್ರು (ಸಿನಿಮಾಟೋಗ್ರಫಿ) ನಿರಂಜನ್ ಬಾಬು, ಲಾಡ್ಜನಲ್ಲಿ ಲಾಡಿ ಜೊತೆ ರಾಗಾನೂ ಎಳ್ದೆವ್ರು (ಸಂಗೀತ ನಿರ್ದೇಶನ) ಅನೂಪ್ ಸೀಳಿನ್, ಲಾಡ್ಜನಲ್ಲಿ ಕಾಸ್ ಬದ್ಲು ಕಾಂಡೋಮ್ ಇಟ್ಕೊಂಡವ್ರು (ನಿರ್ಮಾಪಕ) ಪ್ರಸನ್ನ, ಲಾಡ್ಜನಲ್ಲಿ ಕಾಚ ತೋರ್ಸಿ ಕಥೆ ಮಾಡ್ದವ್ರು (ನಿರ್ದೇಶಕ) ವಿಜಯ ಪ್ರಸಾದ್ ಹೀಗೆಯೇ ಪದಗಳನ್ನು ಬಳಸಿ ವಿಚಿತ್ರವಾದ ಮನರಂಜನೆ ಕೊಟ್ಟಿದ್ದರು. ಈಗ ಅದೇ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕರು.
ಸದ್ಯ ಬಿಡುಗಡೆ ಆಗಬೇಕಿರುವ ವಿಜಯ್ ಪ್ರಸಾದ್ ಅವರ ತೋತಾಪುರಿ ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ಜಗ್ಗೇಶ್ ನಾಯಕನಾಗಿ ನಟಿಸಿದ್ದರೆ, ಮತ್ತೊಂದು ಮಹತ್ವದ ಪಾತ್ರದಲ್ಲಿ ಡಾಲಿ ಧನಂಜಯ್ ಇದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬಂದಿದೆ. ಇದನ್ನೂ ಓದಿ : ಪಠಾಣ್ ಚಿತ್ರಕ್ಕಾಗಿ ಬಿಕಿನಿ ತೊಟ್ಟ ದೀಪಿಕಾ ಪಡುಕೋಣೆ: ಫೋಟೋ ಲೀಕ್
ಪೆಟ್ರೋಮ್ಯಾಕ್ಸ್ ಕೂಡ ಅತೀ ನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿದೆ. ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ಕಾಂಬಿನೇಷನ್ ಮೊದಲ ಸಿನಿಮಾವಿದು. ಈಗಾಗಲೇ ಟ್ರೇಲರ್ ಬಿಡುಗಡೆ ಆಗಿದ್ದು, ಸಖತ್ ಮನರಂಜನೆ ನೀಡುವಂತಹ ಅಂಶಗಳನ್ನು ಇದು ಒಳಗೊಂಡಿದೆ.
ಉಕ್ರೇನ್‌ನ ಖಾರ್ಕೀವ್ ನೆಲದಲ್ಲಿ ನಡೆದ ಶೆಲ್ ದಾಳಿಯ ವೇಳೆ ಕರ್ನಾಟಕದ ಹಾವೇರಿ ಮೂಲದ ವೈದ್ಯಕೀಯ ವಿದ್ಯಾರ್ಥಿಯಾಗಿರುವ ನವೀನ್ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ. ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿ, ಸಂತಾಪ ಸೂಚಿಸಿದ್ದಾರೆ. ನಿಮ್ಮನ್ನು ಕಳೆದುಕೊಂಡಿರುವ ತಂದೆ ತಾಯಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಅದ್ಧೂರಿ ಸಮಾರಂಭದಲ್ಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೀರೋ ಆಗಿ ಲಾಂಚ್
ನಟ ನೀನಾಸಂ ಸತೀಶ್ ಕೂಡ ನವೀನ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಎದೆಯುದ್ದ ಬೆಳೆದ ಮಕ್ಕಳನ್ನು ತಂದೆ ತಾಯಿಗಳು ಕಳೆದುಕೊಂಡಾಗಿನ ದುಃಖ ಯಾರಿಗೂ ಬರಬಾರದು. ನವೀನ್ ವೈದ್ಯನಾಗಿ ಅದೆಷ್ಟೋ ಜೀವ ಉಳಿಸುತ್ತಿದ್ದ, ಇದೀಗ ಯುದ್ಧದಾಹಿಗಳ ದಾಹಕ್ಕೆ ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ನೋವು ತಡೆದುಕೊಳ್ಳುವ ಶಕ್ತಿ ಬರಲಿ ಎಂದಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್
ನಟ, ನಿರ್ಮಾಪಕ ಮತ್ತು ಕೃಷಿ ಮಂತ್ರಿಯೂ ಆಗಿರುವ ಬಿ.ಸಿ.ಪಾಟೀಲ್ ಕೂಡ ಮೃತ ನವೀನ್ ಗಾಗಿ ಕಂಬನಿ ಮಿಡಿದಿದ್ದಾರೆ. “ನವೀನ್ ಜ್ಞಾನಗೌಡರ್ ಮೃತಪಟ್ಟ ಸುದ್ದಿ ಅತೀವ ದುಃಖ ತಂದಿದೆ. ಅವರು ಕುಟುಂಬಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಲಿ” ಎಂದು ಟ್ವಿಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ನ ಸಾಕಷ್ಟು ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಕೂಡ ಕನ್ನಡಿಗ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಅಯೋಗ್ಯ ಸಿನಿಮಾ ಸೂಪರ್ ಹಿಟ್ ಆದ ನಂತರ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಕುತೂಹಲ ಮೂಡಿತ್ತು. ಅದಕ್ಕೆ ಉತ್ತರ ಎನ್ನುವಂತೆ ‘ಮ್ಯಾಟ್ನಿ’ ಚಿತ್ರದಲ್ಲಿ ಈ ಜೋಡಿ ಒಂದಾದರು. ಸದ್ಯ ಮ್ಯಾಟ್ನಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ನಡುವೆ ಮತ್ತೊಂದು ಸುದ್ದಿ ಸತೀಶ್ ಬಳಗದಿಂದ ಬಂದಿದೆ. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿದ್ದ ‘ಅಯೋಗ್ಯ’ ಸಿನಿಮಾದ ಮುಂದುವರೆದ ಭಾಗ ಕೂಡ ಚಿತ್ರವಾಗಲಿದೆಯಂತೆ. ಹಾಗಂತ ಹೇಳಿದ್ದು ಬೇರೆ ಯಾರೂ ಅಲ್ಲ ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್. ಇದನ್ನೂ ಓದಿ : ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್
ಅಯೋಗ್ಯ ಚಿತ್ರ ನಿರ್ದೇಶಕ ಮಹೇಶ್ ಕುಮಾರ್ ಗೆ ಸಾಕಷ್ಟು ಹೆಸರು ತಂದು ಕೊಟ್ಟಿತು. ಈ ಸಿನಿಮಾವೇ ‘ಮದಗಜ’ ಚಿತ್ರ ಮಾಡಲು ಸಹಕಾರಿ ಆಯಿತು. ಈ ಸಿನಿಮಾದಿಂದ ತಕ್ಕ ಮಟ್ಟಿಗೆ ಯಶಸ್ಸು ಸಿಕ್ಕಿತು. ಹಾಗಾಗಿ ಈಗ ಮತ್ತೆ ಸೂಪರ್ ಹಿಟ್ ಸಿನಿಮಾದತ್ತ ಮುಖ ಮಾಡಿದ್ದಾರೆ. ಕೆಲವೇ ತಿಂಗಳಲ್ಲಿ ‘ಅಯೋಗ್ಯ 2’ ಸಿನಿಮಾದ ಬಗ್ಗೆ ಮಾಹಿತಿ ನೀಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ
ಅಯೋಗ್ಯ ಸಿನಿಮಾ ತೆರೆಗೆ ಬಂದಿದ್ದೇ ಒಂದು ರೋಚಕಥೆ. ಈ ಸಿನಿಮಾ ಶುರು ಮಾಡಿದ್ದೇ ಬೇರೆ ನಿರ್ಮಾಪಕರು. ಅದನ್ನು ಮುಂದುವರೆಸಿ ರಿಲೀಸ್ ಮಾಡಿದ್ದು ಮತ್ತೊಬ್ಬ ನಿರ್ಮಾಪಕರು. ಮೊದ ಮೊದಲು ಈ ಚಿತ್ರ ನಿಂತೇ ಹೋಗುತ್ತದೆ ಎನ್ನುವಾಗ ಟಿ.ಆರ್.ಚಂದ್ರ ಶೇಖರ್ ಈ ಸಿನಿಮಾ ಕೈಗೆತ್ತಿಕೊಂಡು ಮುಂದುವರೆಸಿದರು. ಇದಕ್ಕೆ ನಟ ಸತೀಶ್ ನೀನಾಸಂ ಅವರ ಶ್ರಮವೂ ಇತ್ತು. ‘ಅಯೋಗ್ಯ 2’ ಸಿನಿಮಾದ ನಿರ್ಮಾಪಕರು ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆದರೆ, ಭಾರೀ ಬಜೆಟ್ ನಲ್ಲೇ ಈ ಸಿನಿಮಾ ನಿರ್ಮಾಣವಾಗಲಿದೆ ಎನ್ನುತ್ತಿದೆ ಚಿತ್ರತಂಡ.
ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವ ನಟ ಸತೀಶ್ ನೀನಾಸಂ ಮೊದಲ ಬಾರಿಗೆ ಆಲ್ಬಂವೊಂದಕ್ಕೆ ದನಿಯಾಗಿದ್ದಾರೆ. ಈಗಾಗಲೇ ಮೂರು ಸಿನಿಮಾಗಳಿಗೆ ಹಾಡಿರುವ ಇವರು, ಇದೇ ಮೊದಲ ಬಾರಿಗೆ ಮಗಳ ಜತೆ ‘ಅಶರೀರವಾಣಿ’ ಆಲ್ಬಂಗಾಗಿ ಹಾಡಿದ್ದಾರೆ. ನಾಳೆ ಈ ಗೀತೆ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..
‘ಅಶರೀರವಾಣಿ, ಎಲ್ಲಿಂದ ಏನೋ’ ಎಂದು ಸಾಹಿತ್ಯದಿಂದ ಶುರುವಾಗುವ ಈ ಗೀತೆಯು ಮನುಷ್ಯ ಸಂಬಂಧದ ಹಲವು ಮಜಲುಗಳನ್ನು ತೆರೆದಿಡಲಿದೆ. ಒಂದು ರೀತಿಯಲ್ಲಿ ಸಾಹಿತ್ಯ ತತ್ವಪದ, ಸೋಫಿಗಳ ಶೈಲಿಯಲ್ಲಿದ್ದು, ಅದಕ್ಕೆ ಆಧುನಿಕ ಸಂಗೀತವನ್ನು ಬೆರೆಸಿರುವುದು ಹಾಡಿನ ವಿಶೇಷತೆ. ಮರೆಯಾದ ಮನಸುಗಳ ನೆನಪುಗಳನ್ನೇ ಹೊತ್ತು ತರಲಿರುವ ಈ ಗೀತೆಗೆ ಸಾಹಿತ್ಯವನ್ನು ಬರೆದದ್ದು ಮತ್ತು ಸಂಗೀತ ಸಂಯೋಜನೆ ಮಾಡಿದ್ದು ಸ್ವತಃ ಸತೀಶ್ ಅವರೇ ಎನ್ನುವುದು ಮತ್ತೊಂದು ವಿಶೇಷ. ಇದನ್ನೂ ಓದಿ : ನಾನು ಜ್ಯೂನಿಯರ್ ಪುನೀತ್ ರಾಜ್ ಕುಮಾರ್ ಅಲ್ಲ : ಮಾರಕಾಸ್ತ್ರ ಹೀರೋ ಹೇಳಿಕೆ
ಸತೀಶ್ ಹಾಡಿಗೆ ಮಗಳು ಮನಸ್ವಿತ ದನಿ
ಇತ್ತೀಚೆಗಷ್ಟೇ ಅಭಿಮಾನಿಗಳಿಗೆ ಪುತ್ರಿ ಮನಸ್ವಿತ ಫೋಟೋ ಹಂಚಿಕೊಂಡಿದ್ದ ಸತೀಶ್, ಈ ಬಾರಿ ತಮ್ಮೊಂದಿಗೆ ಮಗಳು ಹಾಡಿದ ಈ ಗೀತೆಯನ್ನು ಉಡುಗೊರೆಯಾಗಿ ಕೊಡುತ್ತಿದ್ದಾರೆ. ಈ ಹಾಡಿನಲ್ಲಿ ಮನಸ್ವಿತರ ದನಿಯನ್ನು ಕೇಳಬಹುದಾಗಿದೆ. ಅಲ್ಲದೇ, ಇದು ವಿಡಿಯೋ ರೂಪದಲ್ಲೂ ಚಿತ್ರೀಕರಣವಾಗಿದ್ದು, ಅದರಲ್ಲಿ ಮನಸ್ವಿತ ಕಾಣಿಸಿಕೊಂಡಿದ್ದಾರೆ. ಡ್ರಮ್ ನುಡಿಸುತ್ತಾ ಅಪ್ಪನ ಹಾಡಿಗೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ : ವಿವಾದ ಇಲ್ಲದೇ ಸಿನಿಮಾ ರಿಲೀಸ್ ಮಾಡಲ್ಲವಾ ಸಂಜಯ್ ಲೀಲಾ ಬನ್ಸಾಲಿ? : ಗಂಗೂಬಾಯಿ ಮೇಲೆ ಮತ್ತೊಂದು ಕೇಸ್
ಮೂರು ಸಿನಿಮಾಗಳಿಗೆ ಹಾಡಿರುವ ಅಂಜದ ಗಂಡು
ನೀನಾಸಂನಲ್ಲಿ ಇರುವಾಗಲೇ ಹಾಡಿನತ್ತ ಆಸಕ್ತಿ ತೋರಿದವರು ಸತೀಶ್. ಅಲ್ಲಿ ಸಾಕಷ್ಟು ರಂಗಗೀತೆಗಳನ್ನು ಹಾಡುತ್ತಿದ್ದರು. ಹಾಡುವುದು ವೃತ್ತಿಯಲ್ಲವಾದರೂ, ಹವ್ಯಾಸಿಯೇ ಅವರನ್ನು ಮೂರು ಸಿನಿಮಾಗಳಿಗೆ ಹಾಡುವಂತೆ ಮಾಡಿದೆ. ತಮ್ಮದೇ ನಟನೆಯ ‘ಅಂಜದ ಗಂಡು’ ಚಿತ್ರಕ್ಕಾಗಿ ಟೈಟಲ್ ಟ್ರ್ಯಾಕ್, ‘ರಾಕೇಟ್’ ಚಿತ್ರಕ್ಕಾಗಿ ರಂಗಿ ರಂಗಿ ಮತ್ತು ಡಿ.ಎನ್.ಎ ಚಿತ್ರಕ್ಕಾಗಿ ನಾವ್ಯಾರು ಎಲ್ಲಿಂದ.. ಎನ್ನುವ ಗೀತೆಗಳನ್ನು ಹಾಡಿದ್ದರು. ಇದನ್ನೂ ಓದಿ : ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ
ಎರಡು ಭಾಷೆಗಳಲ್ಲಿ ಅಶರೀರವಾಣಿ
ಅಶರೀರವಾಣಿ ಹೆಸರಿನಲ್ಲಿ ರಿಲೀಸ್ ಆಗಲಿರುವ ಈ ಹಾಡು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗಿದೆ. ಎರಡೂ ಭಾಷೆಯಲ್ಲೂ ಸತೀಶ್ ಅವರೇ ಹಾಡಿದ್ದಾರೆ. ಮೊದಲು ಕನ್ನಡದಲ್ಲಿ ಸಾಂಗ್ ಬಿಡುಗಡೆ ಆಗಲಿದ್ದು, ನಂತರದಲ್ಲಿ ತಮಿಳಿನಲ್ಲೂ ಈ ಗೀತೆ ರಿಲೀಸ್ ಆಗಲಿದೆ. ಇದನ್ನೂ ಓದಿ : ಇಂಗ್ಲಿಷ್ ನಲ್ಲೂ ಬರುತ್ತಂತೆ ಕೆಜಿಎಫ್ 2 : ಹಾಲಿವುಡ್ ನಲ್ಲೂ ರಾಕಿಭಾಯ್ ಹವಾ
ಡಬಲ್ ಖುಷಿಯಲ್ಲಿ ಸತೀಶ್
ಒಂದು ಕಡೆ ಸತೀಶ್ ಅವರ ಆಲ್ಬಂ ರಿಲೀಸ್ ಆಗುತ್ತಿದ್ದರೆ ಮತ್ತೊಂದು ಕಡೆ ಕೈ ತುಂಬಾ ಚಿತ್ರಗಳನ್ನಿಟ್ಟುಕೊಂಡು ಕೂತಿದ್ದಾರೆ. ಗೋಧ್ರಾ ಮತ್ತು ಪೆಟ್ರೊಮ್ಯಾಕ್ಸ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ದಸರಾ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದೆ. ಸದ್ಯ ಮ್ಯಾಟ್ನಿ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಜತೆಗೆ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರಂತೆ. ಅಂದುಕೊಂಡಂತೆ ಆದರೆ, ಈ ವರ್ಷ ಇವರ ಮೂರು ಚಿತ್ರಗಳ ಬಿಡುಗಡೆ ಆಗಬಹುದು.
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಿಧನರಾಗಿ 5 ದಿನ ಕಳೆದಿದ್ದರೂ, ಅವರ ನೆನಪು ಮಾತ್ರ ಇನ್ನೂ ಜೀವಂತವಾಗಿಯೇ ಇದೆ. ಸದ್ಯ ಗೆಳೆಯನ ಅಗಲಿಕೆಯಿಂದ ಬಹಳ ದುಃಖದಲ್ಲಿರುವ ನಟ ನೀನಾಸಂ ಸತೀಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇದೇ ಜೂನ್ 20ರಂದು ನಟ ನೀನಾಸಂ ಸತೀಶ್ ಹುಟ್ಟುಹಬ್ಬವಿದೆ. ಪ್ರತಿ ವರ್ಷ ಅಭಿಮಾನಿಗಳೊಂದಿಗೆ ಬರ್ತ್‍ಡೇ ಸೆಲೆಬ್ರೆಟ್ ಮಾಡಿಕೊಳ್ಳುತ್ತಿದ್ದ ನೀನಾಸಂ ಸತೀಶ್ ಈ ಬಾರಿ ಆಪ್ತ ಗೆಳೆಯನನ್ನು ಕಳೆದುಕೊಂಡ ನೋವಿನಿಂದ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಬ್ರೇಕ್ ಹಾಕಿದ್ದಾರೆ.
ಈ ಕುರಿತಂತೆ ನೀನಾಸಂ ಸತೀಶ್‍ರವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ, ಗೆಳೆಯರೇ ಇದೇ 20 ನನ್ನ ಹುಟ್ಟುಹಬ್ಬ, ವಿಜಿ ಇಲ್ಲದ ಈ ಸಂದರ್ಭದಲ್ಲಿ ತುಂಬ ನೋವಿನಲ್ಲಿ ನನ್ನ ಗೆಳೆಯನ ಬಳಗವಿದೆ. ಹಾಗಾಗಿ ಆ ದಿನ ಯಾವುದೇ ಸಂಭ್ರಮಗಳಿರಿವುದಿಲ್ಲ. ಬಿಡುಗಡೆಯಾಗಬೇಕಿದ್ದ ಪೆಟ್ರೋಮ್ಯಾಕ್ಸ್ ಟೀಸರ್ ಕೂಡ ಮುಂದೂಡಿದ್ದೇವೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿಜಯ ಕುಮಾರ್ ಮುಂದೆ ‘ಸಂಚಾರಿ’ ಬಂದಿದ್ದು ಹೇಗೆ?
ಈ ಬಾರಿ ಕೊರೊನಾ ಲಾಕ್‍ಡೌನ್ ವೇಳೆ ಸಂಚಾರಿ ವಿಜಯ್ ಹಾಗೂ ನೀನಾಸಂ ಸತೀಶ್ ಇಬ್ಬರೂ ಒಟ್ಟಿಗೆ ಸೇರಿ ಕಷ್ಟದಲ್ಲಿ ಜನರಿಗೆ ಅಗತ್ಯ ದಿನಸಿಗಳನ್ನು ವಿತರಣೆ ಮಾಡಿದ್ದರು. ಈ ವೀಡಿಯೋವನ್ನು ನೀನಾಸಂ ಸತೀಶ್‍ರವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಬೈಕ್ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ನಟ ಸಂಚಾರಿ ವಿಜಯ್ ಇತ್ತೀಚೆಗಷ್ಟೇ ನಿಧನರಾಗಿದ್ದು. ತಮ್ಮ ವಿಭಿನ್ನವಾದ ಅಭಿನಯದ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದ ಪ್ರತಿಭಾವಂತ ನಟ ಸಂಚಾರಿ ವಿಜಯ್‍ಗೆ ಇಡೀ ಸ್ಯಾಂಡಲ್‍ವುಡ್ ಕಂಬನಿ ಮಿಡಿಯುವ ಮೂಲಕ ಸಂತಾಪ ಸೂಚಿಸಿದ್ದರು. ಇದನ್ನೂ ಓದಿ: ಮತ್ತೆ ಹುಟ್ಟಿ ಬಾ ಗೆಳೆಯ ಎಂದ ಸ್ಯಾಂಡಲ್ವುಡ್
ಬೆಂಗಳೂರು: ಕೊರೊನಾ ಸೋಂಕಿನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಾಕಷ್ಟು ಮಂದಿ ನೆರವಿಗೆ ಬಂದಿದ್ದಾರೆ. ಈಗ ಸ್ಯಾಂಡಲ್‍ವುಡ್ ನಟ ಸತೀಶ್ ನೀನಾಸಂ ಬೀದಿಗಿಳಿದು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.
ಕೆಲಸ ಹಾಗೂ ಹೊಟ್ಟೆ ಊಟ ಇಲ್ಲದೆ ಕಷ್ಟಪಡುತ್ತಿರುವವರ ಸಹಾಯಕ್ಕೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಬಂದಿದ್ದಾರೆ. ರಾಗಿಣಿ, ಭುವನ್, ಹರ್ಷಿಕಾ, ದರ್ಶನ್, ಉಪೇಂದ್ರ, ಸುದೀಪ್ ಹೀಗೆ ಹಲವಾರು ಮಂದಿ ಸಿನಿ ಸ್ಟಾರ್‍ಗಳು ಕಷ್ಟದಲ್ಲಿರುವವ ನೆರವಿಗೆ ನಿಂತಿದ್ದಾರೆ. ಈಗ ಇದೆ ಸಾಲಿಗೆ ನಟ ಸತೀಶ್ ನೀನಾಸಂ ಅವರು ಸಹ ಒಂದೊಳ್ಳೆ ಕೆಲಸ ಮಾಡಲು ಬೀದಿಗೆ ಇಳಿದಿದ್ದಾರೆ.
ದಿನಕ್ಕೆ ಸಾವಿರಾರು ಮಂದಿಗೆ ಆಹಾರ ವಿತರಣೆ ಮಾಡುವ ಮೂಲಕವಾಗಿ ನೆರವಾಗುತ್ತಿದ್ದಾರೆ. ಪ್ರತಿನಿತ್ಯ ಗಾಂಧಿ ಬಜಾರ್ ಸುತ್ತಮುತ್ತಲ ಪ್ರದೇಶದಲ್ಲಿರುವ ಸಾವಿರ ಜನರಿಗೆ ಆಹಾರ ವಿತರಿಸುತ್ತಿದ್ದಾರೆ. ತಳ್ಳುವ ಗಾಡಿಯ ವ್ಯಾಪಾರಿಗಳು, ಬಡವರು ಹಾಗೂ ನಿರ್ಗತಿಕರಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಈ ಕಾರ್ಯದಲ್ಲಿ ಸತೀಶ್ ಅವರಿಗೆ ಸ್ನೇಹಿತರು ಕೈ ಜೋಡಿಸಿದ್ದಾರೆ.