Tag: ನೀನಾಸಂ ಅಶ್ವಥ್

  • ಈ ಕಾಲಘಟ್ಟದ ಅಪರೂಪದ ಚಿತ್ರ ‘ಸಿಂಹರೂಪಿಣಿ’ ಎಂದ ನೀನಾಸಂ ಅಶ್ವಥ್

    ಈ ಕಾಲಘಟ್ಟದ ಅಪರೂಪದ ಚಿತ್ರ ‘ಸಿಂಹರೂಪಿಣಿ’ ಎಂದ ನೀನಾಸಂ ಅಶ್ವಥ್

    ಕಿನ್ನಾಳ್ ರಾಜ್ ನಿರ್ದೇಶನದ `ಸಿಂಹರೂಪಿಣಿ’ (Simha Roopini )ಚಿತ್ರ ಈ ವಾರ ಅಂದರೆ, ಅಕ್ಟೋಬರ್ ೧೭ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಚಿತ್ರದಲ್ಲಿ ನೂರೈವತ್ತಕ್ಕೂ ಹೆಚ್ಚು ಕಲಾವಿದರ ಬೃಹತ್ ತಾರಾಗಣವಿದೆ. ಮನೋರಂಜನೆಯೂ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರುವ ಈ ಸಿನಿಮಾ ಮಾರಮ್ಮದೇವಿಯ ಕಥಾನಕವನ್ನೊಳಗೊಂಡಿದೆ. ಈ ಸಿನಿಮಾದ ಮಹತ್ವದ ಪಾತ್ರವೊಂದನ್ನು ನೀನಾಸಂ ಅಶ್ವಥ್ (Ninasam Aswath) ನಿರ್ವಹಿಸಿದ್ದಾರೆ. ಬೇರೆ ಬಗೆಯ ಸಿನಿಮಾಗಳ ಜೊತೆ ಜೊತೆಗೇ, ಇತರೇ ಸ್ವರೂಪಗಳ ಕಥೆಗಳೂ ದೃಶ್ಯರೂಪ ಧರಿಸಬೇಕು ಎಂಬ ಮನಃಸ್ಥಿತಿ ಹೊಂದಿರುವವರು ಅಶ್ವಥ್. ಇದರಿಂದಾಗಿಯೇ ಖುಷಿಯಿಂದ ಈ ಸಿನಿಮಾ ಪಾತ್ರವನ್ನು ಆವಾಹಿಸಿಕೊಂಡಿರುವ ಅವರ ಅಶ್ವಥ್ ಪಾಲಿಗೆ ಇದೊಂದು ಭಿನ್ನ ಬಗೆಯ ಚಿತ್ರ.

    ಇಲ್ಲಿ ಮಾರಮ್ಮ ದೇವಿಯ ತಂದೆಯ ಪಾತ್ರದಲ್ಲಿ ನೀನಾಸಂ ಅಶ್ವಥ್ ನಟಿಸಿದ್ದಾರೆ. ಎರಡು ಶೇಡುಗಳನ್ನು ಹೊಂದಿರುವ ಆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ತೃಪ್ತಿ ಅದರಲ್ಲಿದೆ. ಗ್ರಾಮೀಣ ಪ್ರತಿಭೆ ಕಿನ್ನಾಳ್ ರಾಜ್ ಅವರ ಸಮರ್ಪಣಾ ಮನೋಭಾವ, ಸಿನಿಮಾದೊಂದಿಗೆ ಸಹಯಾನ ಮಾಡುವ ಮನಃಸ್ಥಿತಿಯ ನಿರ್ಮಾಪಕ ಕೆ.ಎಂ ನಂಜುಂಡೇಶ್ವರ ಅವರ ಸಿನಿಮಾ ಪ್ರೇಮದ ಬಗ್ಗೆ ಮೆಚ್ಚುಗೆ ಮೂಡಿಸಿಕೊಂಡಿರುವ ಅಶ್ವಥ್ ಈ ಸಿನಿಮಾವನ್ನು ಕನ್ನಡ ಚಿತ್ರರಂಗದ ಹೊಸಾ ಹರಿವಿನ ಭಾಗವಾಗಿ ಪರಿಗಣಿಸಿದ್ದಾರೆ. ಬರೀ ಹೊಡಿ ಬಡಿ ಚಿತ್ರಗಳ ಭರಾಟೆಯ ನಡುವೆ ತಂಗಾಳಿ ತೀಡಿದಂತೆ ಇಂಥಾ ಅಚ್ಚುಕಟ್ಟಾದ ಸಿನಿಮಾಗಳು ರೂಪುಗೊಳ್ಳಬೇಕೆಂಬ ಆಶಯದೊಂದಿಗೇ ಅಶ್ವಥ್ ಈ ಚಿತ್ರದ ಭಾಗವಾಗಿದ್ದಾರಂತೆ.

    ಸಿಂಹರೂಪಿಣಿ ಎಂಬುದೇ ಸ್ತ್ರೀ ಶಕ್ತಿಯ ಸಂಕೇತ. ಅದು ಹೆಣ್ತನದ ಘನತೆ, ಗೌರವದ ರೂಪಕವೂ ಹೌದು. ಪ್ರಸ್ತುತ ಸಮಾಜಕ್ಕೆ ಹೆಣ್ಣಿನ ಅಸಲೀ ಶಕ್ತಿಯ ಅರಿವು ಮೂಡಿಸುವ ಇಂಥಾ ಸದಭಿರುಚಿಯ ಚಿತ್ರದ ಅವಶ್ಯಕತೆ ಇದೆ ಅನ್ನೊದು ಅಶ್ವಥ್ ಅವರ ಅಭಿಪ್ರಾಯ. ಇದೊಂದು ಭಿನ್ನ ಬಗೆಯ ಚಿತ್ರವಾದ್ದರಿಂದ, ತಮ್ಮ ಪಾತ್ರದ ಬಗ್ಗೆ ಅಡಿಗಡಿಗೆ ಅಶ್ವಥ್ ನಿರ್ದೇಶಕರ ಬಳಿ ಪ್ರಶ್ನೆ ಮಾಡುತ್ತಿದ್ದರಂತೆ. ಪದೇ ಪದೆ ಸಣ್ಣ ಸಣ್ಣ ವಿಚಾರಗಳನ್ನೂ ಕೆದಕುತ್ತಾ, ಎಲ್ಲ ಸ್ಪಷ್ಟವಾದ ನಂತರವೇ ಕ್ಯಾಮೆರಾ ಮುಂದೆ ನಿಂತಿದ್ದರಂತೆ. ಇದೆಲ್ಲವೂ ಚಿತ್ರ ತಂಡದ ಪಾಲಿಗೆ ಹೊಸಾ ಅನುಭವ ನೀಡಿತ್ತು. ಆದರೆ ಒಟ್ಟಾರೆಯಾಗಿ ಆ ಪಾತ್ರ ತೆರೆ ಮೂಡಿಬಂದ ರೀತಿ ಕಂಡು ನಿರ್ದೇಶಕ ಕಿನ್ನಾಳ್ ರಾಜ್ ಸೇರಿದಂತೆ ಇಡೀ ಚಿತ್ರತಂಡ ಖುಷಿ ಪಟ್ಟಿತ್ತಂತೆ. ಈ ಬಗ್ಗೆ ವೇದಿಕೆಯಲ್ಲಿಯೇ ನಿರ್ದೇಶಕರು ಮೆಚ್ಚುಗೆಯ ಮಾತಾಡಿದ್ದರಂತೆ. ಪ್ರಶ್ನೆಗಳ ಮೂಲಕವೇ ಹೊಳಪುಗಟ್ಟಿಕೊಂಡ ಈ ಪಾತ್ರ ಪ್ರೇಕ್ಷಕರ ಮುಂದೆ ತೆರೆದುಕೊಂಡಿದೆ.

     

    ಇದುವರೆಗೂ ಹತ್ತತ್ತಿರ ಮುನ್ನೂರು ಸಿನಿಮಾಗಳಲ್ಲಿ ನಟಿಸಿದ ಅನುಭವ ಹೊಂದಿರುವವರು ನೀನಾಸಂ ಅಶ್ವಥ್. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ನೋಡಿದರೆ, ಪಾತ್ರಗಳಲ್ಲಿ ವೈವಿಧ್ಯತೆ ಎದ್ದು ಕಾಣಿಸುತ್ತದೆ. ಸದಾ ಹೊಸತನದ ಪಾತ್ರಗಳನ್ನೇ ಬಯಸುವ ಅಶ್ವಥ್ ಪಾಲಿಗೆ ಮಾರಮ್ಮ ದೇವಿಯ ಈ ಕಥಾನಕದಲ್ಲಿ, ದೇವಿಯ ತಂದೆಯ ಪಾತ್ರದಲ್ಲಿ ನಟಿಸೋ ಅವಕಾಶ ಒದಗಿ ಬಂದಿದೆ. ಇದುವರೆಗೂ ನಿರ್ವಹಿಸಿರುವ ವೈವಿಧ್ಯಮಯ ಪಾತ್ರಗಳಲ್ಲಿ, ಸಿಂಹರೂಪಿಣಿ ಚಿತ್ರದ ಪಾತ್ರವೂ ಸೇರಿಕೊಳ್ಳಲಿದೆ ಎಂಬ ನಂಬಿಕೆ, ಈ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಹೊಸಾ ಅನುಭೂತಿ ನೀಡುತ್ತದೆಂಬ ಭರವಸೆ ಅವರಲ್ಲಿದೆ.

  • ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

    ಚೆಕ್ ಬೌನ್ಸ್ ಕೇಸ್‌ನಲ್ಲಿ ನಟ ನೀನಾಸಂ ಅಶ್ವಥ್ ಬಂಧನ

    ಹಾಸನ: ಚೆಕ್ ಬೌನ್ಸ್ (Check Bounce) ಕೇಸ್‌ನಲ್ಲಿ ಚಲನಚಿತ್ರ ನಟ ನೀನಾಸಂ ಅಶ್ವಥ್ (Ashwath Ninasam) ಅವರನ್ನು ಹಾಸನ (Hassan) ಪೊಲೀಸರು ಬಂಧಿಸಿದ್ದರು. ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರ ಬಳಿ ತಪ್ಪೊಪ್ಪಿಕೊಂಡು 25% ರಷ್ಟು ಹಣ ಪಾವತಿಸಿದ ಬಳಿಕ ನಟನನ್ನು ಬಿಡುಗಡೆ ಮಾಡಲಾಗಿದೆ.

    ಹಾಸನ ಮೂಲದ ರೋಹಿತ್ ಎಂಬವರಿಂದ ನಟ ಅಶ್ವಥ್ ಹಸುಗಳನ್ನ ಖರೀದಿ ಮಾಡಿ 1.5 ಲಕ್ಷದ ಚೆಕ್ ನೀಡಿದ್ದರು. ರೋಹಿತ್ ಬ್ಯಾಂಕ್‌ಗೆ ಚೆಕ್ ಹಾಕಿದಾಗ ಬೌನ್ಸ್ ಆಗಿತ್ತು. ಈ ಸಂಬಂಧ ರೋಹಿತ್ ಹಾಸನದ ಜೆಎಂಎಫ್‌ಸಿ‌ ಕೋರ್ಟ್‌ನಲ್ಲಿ‌ ಕೇಸ್ ಹಾಕಿದ್ದು, ಕೋರ್ಟ್ ನಾಲ್ಕು ಬಾರಿ ಅರೆಸ್ಟ್ ವಾರೆಂಟ್ ಹೊರಡಿಸಿತ್ತು.‌ ಇದನ್ನೂ ಓದಿ: ‘ಘೋಸ್ಟ್’ ಚಿತ್ರದ ಬಿಗ್ ಡ್ಯಾಡಿ ಪೋಸ್ಟರ್ ಔಟ್- ಕಿಕ್ ಕೊಡ್ತಿದೆ ಶಿವಣ್ಣ ಲುಕ್

    ನಾಲ್ಕೂ ಬಾರಿಯೂ ನಟ ಅಶ್ವಥ್ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಐದನೇ ಬಾರಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಹಾಸನ ಬಡಾವಣೆ ಠಾಣೆ ಪೊಲೀಸರು ಶನಿವಾರ ರಾತ್ರಿ ಅಶ್ವಥ್‌ ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

    ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡ ಅಶ್ವಥ್ ಈಗಲೇ 25% ರಷ್ಟು ಹಣ ಪಾವತಿಸುತ್ತೇನೆ ಎಂದು ಉಳಿದ ಹಣ ನೀಡಲು ನ್ಯಾಯಾಧೀಶರಿಂದ ಸಮಯ ಪಡೆದಿದ್ದಾರೆ. 25% ರಷ್ಟು ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ನಟನನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಉಮಾಶ್ರೀ- ಪದ್ಮಾವಾಸಂತಿ ಭೇಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಟ ನೀನಾಸಂ ಅಶ್ವಥ್ ಮೇಲೆ ಕೇಸ್ ದಾಖಲು

    ಖ್ಯಾತ ನಟ ನೀನಾಸಂ ಅಶ್ವಥ್ ಮೇಲೆ ಕೇಸ್ ದಾಖಲು

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತನಟ ನೀನಾಸಂ ಅಶ್ವಥ್ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸ್ ದಾಖಲಾಗಿದೆ.

    ನೀನಾಸಂ ಅಶ್ವಥ್ ಅವರು ಸ್ನೇಹಿತ ದ್ವಾರಕ ರಜತ್ ಅವರ ಬಳಿ 18 ಲಕ್ಷ ರೂ. ಸಾಲ ಪಡೆದಿದ್ದರು. ಈಗ ಈ ಸಾಲವನ್ನು ನೀಡಲು ಸತಾಯಿಸುತ್ತಿರುವ ಜೊತೆ ನೀಡಿರುವ ಚೆಕ್ ಬೌನ್ಸ್ ಆಗಿರುವ ಹಿನ್ನೆಲೆಯಲ್ಲಿ ರಜತ್ ಅವರು ಕೇಸ್ ದಾಖಲಿಸಿದ್ದಾರೆ.

    ಫಾರ್ಮ್ ಹೌಸ್ ಬಿಸಿನೆಸ್ ನಲ್ಲಿ ಪಾಲುದಾರನಾಗಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ನನ್ನಿಂದ 18 ಲಕ್ಷ ರೂ. ಹಣವನ್ನು ಪಡೆದಿದ್ದರು. ಆದರೆ ಈಗ ಫಾರ್ಮ್ ಹೌಸ್ ಪಾಲುದಾರನಾಗಿ ಮಾಡಿಕೊಳ್ಳದೇ ಹಣವೂ ವಾಪಾಸ್ ನೀಡದೇ ಸತಾಯಿಸುತ್ತಿದ್ದಾರೆ. ಹೀಗಾಗಿ ನೀನಾಸಂ ಅಶ್ವಥ್ ಮೇಲೆ ನಾನು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದೇನೆ ಎಂದು ರಜತ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ರಜತ್ ಆರೋಪ ಏನು?
    ವಿಜಯ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನೀನಾಸಂ ಅಶ್ವಥ್ ಅವರ ಪರಿಚಯವಾಗಿತ್ತು. ಈ ಸಮಯದಲ್ಲಿ ಫಾರ್ಮ್ ಹೌಸ್ ಒಡೆತನದಲ್ಲಿ ಪಾಲುದಾರಿಕೆ ಆಮಿಷ ಒಡ್ಡಿದ್ದರು. ನಂತರ ಒಡೆತನದ ಪಾಲುದಾರಿಕೆಯೂ ಇಲ್ಲ ಹಣವೂ ಹಿಂದಿರುಗಿಸಿಲ್ಲ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು ನೀನಾಸಂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

    ನೀನಾಸಂ ಅಶ್ವಥ್ 2007-2008ರಿಂದ ಹಣ ನೀಡದೇ ಸತಾಯಿಸುತ್ತಿದ್ದಾರೆ. ಅಲ್ಲದೇ ನನಗೆ ನೀಡಿದ ಚೆಕ್ ಕೂಡ ಬೌನ್ಸ್ ಆಗಿದೆ. ಚೆಕ್ ಬೌನ್ಸ್ ಕೇಸ್ ಬುಕ್ ಮಾಡಿದರೂ ನೀನಾಸಂ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೇ ನ್ಯಾಯಾಲಯಕ್ಕೆ ಹೋಗದೇ ಅಶ್ವಥ್ ಜಾಮೀನು ಪಡೆದಿದ್ದರು. ಕೊಟ್ಟ 18 ಲಕ್ಷ ರೂ. ಸಾಲದಲ್ಲಿ 3 ಲಕ್ಷ ರೂ. ಮಾತ್ರ ಹಿಂದಿರುಗಿಸಿ ಮೋಸ ಮಾಡಿದ್ದಾರೆ.

    ಈ ಸಂಬಂಧ ನಾನು ಕಲಾವಿದರ ಸಂಘ ಹಾಗೂ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದೇನೆ. ಫಿಲ್ಮ್ ಚೇಂಬರ್ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ರಜತ್ ಹೇಳಿದ್ದಾರೆ.

    ರಜತ್ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲಾ ಖ್ಯಾತ ಕಲಾವಿದರ ಜೊತೆ ಬಣ್ಣ ಹಚ್ಚಿದ್ದಾರೆ. ಮುಂಗಾರುಮಳೆ, ಗಾಳಿಪಟ, ವಿಷ್ಣುವರ್ಧನ, ಕೋಲಾರ ಸಿನಿಮಾಗಳಲ್ಲಿ ನಟಿಸಿ ಈಗ ಬಿಡುಗಡೆಗೆ ಸಜ್ಜಾಗಿರೋ ಕೆಜಿಎಫ್ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews