Tag: ನೀತು ವನಜಾಕ್ಷಿ

  • ‘ಯುಐ’ ಚಿತ್ರದ ಭಾಗವಾಗಿರೋದು ನನ್ನ ಅದೃಷ್ಟ: ನಿಧಿ ಸುಬ್ಬಯ್ಯ

    ‘ಯುಐ’ ಚಿತ್ರದ ಭಾಗವಾಗಿರೋದು ನನ್ನ ಅದೃಷ್ಟ: ನಿಧಿ ಸುಬ್ಬಯ್ಯ

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ ‘ಯುಐ’ ಸಿನಿಮಾ ಡಿ.20ರಂದು ರಿಲೀಸ್ ಆಗುತ್ತಿದೆ. ರಿಲೀಸ್‌ಗೂ ಮುನ್ನವೇ ಟ್ರೈಲರ್, ಪೋಸ್ಟರ್‌ಗಳ ಮೂಲಕ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಭಾಗವಾಗಿರುವ ‘ಪಂಚರಂಗಿ’ ಬೆಡಗಿ ನಿಧಿ ಸುಬ್ಬಯ್ಯ ‘ಯುಐ’ ಚಿತ್ರದ ಭಾಗವಾಗೋದು ನನ್ನ ಅದೃಷ್ಟ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

    ನಾನು ಉಪೇಂದ್ರ ಸರ್ ಅವರ ದೊಡ್ಡ ಅಭಿಮಾನಿ. ನಿಮ್ಮ ಸಿನಿಮಾಗಳನ್ನು ನೋಡಿಕೊಂಡೆ ಬಂದಿರೋದು. ಯುಐ ಚಿತ್ರ ಒಂದೊಳ್ಳೆಯ ಅನುಭವ ಕಲಿಸಿ ಕೊಟ್ಟಿದೆ. ಸ್ಟೋರಿ ಹೇಳುವಾಗ ವಾವ್ ಉಪೇಂದ್ರ ಸರ್ ನನಗೆ ಕಥೆ ಹೇಳಿದ್ದೀರಾ ಅನಸ್ತು. ‘ಯುಐ’ ಚಿತ್ರದ ಭಾಗಿವಾಗಿರೋದು ನನ್ನ ಅದೃಷ್ಟ ಎಂದು ನಿಧಿ ಸುಬ್ಬಯ್ಯ (Nidhi Subbaiah) ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ವಿವಾದದ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ 1409 ಕೋಟಿ ಬಾಚಿದ ‘ಪುಷ್ಪ 2’

    ಇದೇ ವೇಳೆ, ಬಿಗ್ ಬಾಸ್ ಖ್ಯಾತಿಯ ನೀತು ವನಜಾಕ್ಷಿ (Neethu Vanajakshi) ಮಾತನಾಡಿ, ಈ ಚಿತ್ರಕ್ಕೆ ಉಪೇಂದ್ರ ಸರ್ ನನಗೆ ನಟಿಸಲು ಅವಕಾಶ ಕೊಟ್ಟಿದ್ದಾರೆ. ಅದು ಹೆಮ್ಮೆಯ ಕ್ಷಣ ಎಂದೇ ಹೇಳಬಹುದು. ಅವರ ಡೈರೆಕ್ಷನ್‌ನಲ್ಲಿ ನಟಿಸಬೇಕು ಎಂಬುದು ಹಲವರ ಕನಸಾಗಿರುತ್ತದೆ. ಹೀಗಿರುವಾಗ ಅವರ ನಿರ್ದೇಶನದಲ್ಲಿ ನಟಿಸಲು ಚಾನ್ಸ್ ಸಿಕ್ಕಿರೋದು ನನ್ನ ಭಾಗ್ಯ ಎಂದಿದ್ದಾರೆ. ಪಾತ್ರದ ಬಗ್ಗೆ ಕೇಳಿದಾಗ, ಡಿ.20ರಂದು ಉತ್ತರ ಸಿಗುತ್ತದೆ ಎಂದು ನೀತು ಉತ್ತರಿಸಿದ್ದಾರೆ. ಈ ಮೂಲಕ ಸಿನಿಮಾ ಬಗ್ಗೆ ಯಾವುದೇ ಸುಳಿವು ಅವರು ಬಿಟ್ಟು ಕೊಟ್ಟಿಲ್ಲ.

    ಈ ಕಾರ್ಯಕ್ರಮದಲ್ಲಿ ಶಿವಣ್ಣ, ಡಾಲಿ, ದುನಿಯಾ ವಿಜಯ್, ಡಾ.ಸೂರಿ, ಪವನ್ ಒಡೆಯರ್, ನಿರ್ಮಾಪಕ ರಮೇಶ್ ರೆಡ್ಡಿ, ಕೆಆರ್‌ಜಿ ರೂವಾರಿ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ಉದಯ್ ಮೆಹ್ತಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ಮತದಾರರ ಜಾಗೃತಿಗಾಗಿ ರಮೇಶ್ ಅರವಿಂದ್, ನೀತು ಸೇರಿದಂತೆ ನಾಲ್ವರು ರಾಯಭಾರಿ

    ಮತದಾರರ ಜಾಗೃತಿಗಾಗಿ ರಮೇಶ್ ಅರವಿಂದ್, ನೀತು ಸೇರಿದಂತೆ ನಾಲ್ವರು ರಾಯಭಾರಿ

    ಲೋಕಸಭಾ ಚುನಾವಣೆಗೆ (Election) ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ರಂಗದ 4 ಪ್ರಮುಖ ವ್ಯಕ್ತಿಗಳನ್ನು ರಾಯಭಾರಿಯಾಗಿ (Ambassador) ನಿಯೋಜನೆ ಮಾಡಲಾಗಿದೆ.  ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್, ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ (Neetu Vanajakshi) ಸೇರಿದಂತೆ ನಾಲ್ವರನ್ನು ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತರಾದ  ತುಷಾರ್ ಗಿರಿ ನಾಥ್ ರಾಯಭಾರಿಗಳ ನೇಮಕ ಮಾಡಿದ್ದಾರೆ.

    ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಹುಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

     

    ಬೆಂಗಳೂರು ನಗರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ನಮ್ಮ ಬೆಂಗಳೂರು ಐಕಾನ್ಸ್’ ಹೆಸರಿನಲ್ಲಿ ನಟ, ರಮೇಶ್ ಅರವಿಂದ್ (Ramesh Arvind), ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ, ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ಹಾಗೂ ಟೇಬಲ್ ಟೆನ್ನಿಸ್ ಆಟಗಾರ್ತಿ ಅರ್ಚನಾ ಜಿ ಕಾಮತ್ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ.

  • ಪವಿತ್ರಾ ಗೌಡಗೆ ಟ್ಯಾಟೂ ಹಾಕಿದ ‘ಬಿಗ್ ಬಾಸ್’ ಖ್ಯಾತಿಯ ನೀತು

    ಪವಿತ್ರಾ ಗೌಡಗೆ ಟ್ಯಾಟೂ ಹಾಕಿದ ‘ಬಿಗ್ ಬಾಸ್’ ಖ್ಯಾತಿಯ ನೀತು

    ಸ್ಯಾಂಡಲ್‌ವುಡ್ ನಟಿ ಪವಿತ್ರಾ ಗೌಡ (Pavithra Gowda) ಇದೀಗ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ (Bigg Boss Kannada 10) ನೀತು ವನಜಾಕ್ಷಿ (Neethu Vanajakshi) ಬಳಿ ಟ್ಯಾಟೂ ಹಾಕಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ನಟಿ ಪವಿತ್ರಾ ಗೌಡ ತಮ್ಮ ಬಲಗೈ ಮಣಿಕಟ್ಟಿನ ಮೇಲೆ ‘777’ ಎಂದು ಟ್ಯಾಟೂ ಹಾಕಿಸಿದ್ದಾರೆ. ನನ್ನ ಪ್ರೀತಿಯ ಪಾತ್ರರಿಗೆ ಟ್ಯಾಟೂ ಹಾಕಿದ್ದು ಎಂದು ನಟಿ ಬರೆದುಕೊಂಡಿದ್ದಾರೆ. ‘ಬಿಗ್ ಬಾಸ್’ ಬೆಡಗಿ ನೀತು ಅವರ ಟ್ಯಾಟೂ ಸ್ಟುಡಿಯೋಗೆ ವಿಸಿಟ್ ಮಾಡಿ ಅವರ ಕೈಯಲ್ಲಿಯೇ ಟ್ಯಾಟೂ ಹಾಕಿಸಿದ್ದಾರೆ.

    ಇನ್ನೂ ಪವಿತ್ರಾ ಕೈಗೆ ‘777’ ಎಂದು ಟ್ಯಾಟೂ ಹಾಕಿಸಿಕೊಂಡಿರೋದು ಅಭಿಮಾನಿಗಳ ಗಮನ ಸೆಳೆದಿದೆ. 777 ಅಂದರೆ ಎನು? ಯಾಕೆ ಅವರು ಹಾಗೆ ಹಾಕಿಸಿಕೊಂಡಿದ್ದಾರೆ ಎಂದು ನೆಟ್ಟಿಗರ ತಲೆಗೆ ಹುಳ ಬಿಟ್ಟಂತೆ ಆಗಿದೆ. ಇದನ್ನೂ ಓದಿ:ಗೋವಾದಲ್ಲಿ ಯಶ್ : ಸದ್ದಿಲ್ಲದೇ ಶುರುವಾಯ್ತಾ ‘ಟಾಕ್ಸಿಕ್’ ಶೂಟಿಂಗ್

    ‘ಛತ್ರಿಗಳು ಸಾರ್ ಛತ್ರಿಗಳು’, ಪ್ರೀತಿ ಕಿತಾಬು, ಅಗಮ್ಯ ಸಿನಿಮಾಗಳಲ್ಲಿ ಪವಿತ್ರಾ ನಟಿಸಿದ್ದಾರೆ. ಕಾಲಿವುಡ್ ಸಿನಿಮಾವೊಂದರಲ್ಲಿ ನಟಿಸಿದ್ದಾರೆ.

  • ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ನೀತು, ಪವಿ ಮೀಟ್‌ ಆದ ಮೈಕಲ್‌ -‌ ಇಶಾನಿ ಎಲ್ಲಿ ಎಂದು ಕಾಲೆಳೆದ ನೆಟ್ಟಿಗರು

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಇನ್ನೂ 2 ವಾರಗಳ ಕಾಲ ಮುಂದೂಡಲಾಗಿದೆ. ಕಳೆದ ವಾರಾಂತ್ಯ ಮೈಕಲ್ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ. ಬಿಗ್ ಬಾಸ್‌ನಿಂದ ಹೊರಬರುತ್ತಿದ್ದಂತೆ ಮೈಕಲ್ ತಮ್ಮ ಸ್ನೇಹಿತರಾದ ನೀತು ವನಜಾಕ್ಷಿ ಮತ್ತು ಪವಿ ಪೂವಪ್ಪ ಅವರನ್ನು ಭೇಟಿಯಾಗಿದ್ದಾರೆ.

    ದೊಡ್ಮನೆ ಆಟ 90 ದಿನಗಳನ್ನು ಪೂರೈಸಿ ಹೊರಬರುತ್ತಿದ್ದಂತೆ ಮೈಕಲ್ ಅವರು ಪವಿ- ನೀತುರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ಈ ಕುರಿತ ಫೋಟೋವನ್ನು ಮೈಕಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಬೆನ್ನಲ್ಲೇ ಇಶಾನಿ ಎಲ್ಲಿ? ಅವರನ್ನು ಭೇಟಿ ಮಾಡಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸ್ಟೈಲೀಶ್‌ ಆಗಿ ಫೋಟೋಶೂಟ್‌ನಲ್ಲಿ ಕಂಗೊಳಿಸಿದ ಸಾನ್ಯ ಅಯ್ಯರ್

    ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಈಶಾನಿ ತನ್ನ ಗರ್ಲ್‌ಫ್ರೆಂಡ್ ಎಂದು ಅಫಿಷಿಯಲ್ ಆಗಿ ಮೈಕಲ್ ಹೇಳಿದ್ದರು. ಇಶಾನಿ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದರು. ಇಬ್ಬರ ಲವ್ ಸ್ಟೋರಿ ಈ ಸೀಸನ್‌ನಲ್ಲಿ ಹೆಚ್ಚು ಹೈಲೆಟ್ ಆಗಿತ್ತು. ಹಾಗಾಗಿಯೇ ಪವಿ, ನೀತುರನ್ನು ಭೇಟಿಯಾಗಿದ್ದೀರಾ ಆದರೆ ಇಶಾನಿ ಎಲ್ಲಿ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ನೆಟ್ಟಿಗರು ಮೈಕಲ್ ಮುಂದಿಟ್ಟಿದ್ದಾರೆ.

    ಕನ್ನಡ ಬರದ ಮೈಕಲ್ ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಅಜಯ್ ದೊಡ್ಮನೆಗೆ ಕಾಲಿಟ್ಟ ಮೇಲೆಯೇ ಕನ್ನಡ ಕಲಿತಿದ್ದರು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಹೈಲೆಟ್‌ ಆಗಿದ್ದರು.

    ಕಳೆದ ವಾರಾಂತ್ಯ ಮೈಕಲ್‌ಗೆ ಕಿಚ್ಚ ಸುದೀಪ್ ಕಡೆಯಿಂದ ಖಡಕ್ ಕ್ಲಾಸ್ ಆಗಿತ್ತು. ಕ್ಯಾಪ್ಟನ್‌ಗೆ ಗೌರವ ನೀಡದೇ ರೂಲ್ಸ್ ಫಾಲೋ ಮಾಡದೇ ತನ್ನದೇ ಸರಿ ಎಂದು ಬೀಗುತ್ತಿದ್ದ ಮೈಕಲ್ ಆಟಕ್ಕೆ ಸುದೀಪ್ ತಕ್ಕ ಪಾಠ ಕಲಿಸಿದ್ದರು.  ಭಾನುವಾರದ (ಜ.7) ಎಪಿಸೋಡ್‌ನಲ್ಲಿ ಮೈಕಲ್ ಎಲಿಮಿನೇಟ್ ಆದರು.

  • ‘ಬಿಗ್ ಬಾಸ್’ ಎಲಿಮಿನೇಷನ್ ನಿರೀಕ್ಷಿತವೇ ಆಗಿತ್ತು: ನೀತು ವನಜಾಕ್ಷಿ

    ‘ಬಿಗ್ ಬಾಸ್’ ಎಲಿಮಿನೇಷನ್ ನಿರೀಕ್ಷಿತವೇ ಆಗಿತ್ತು: ನೀತು ವನಜಾಕ್ಷಿ

    ಳನೇ ವಾರದಲ್ಲಿ ಬಿಗ್‌ಬಾಸ್ (Bigg Boss Kannada) ಮನೆಯಿಂದ ನೀತು ವನಜಾಕ್ಷಿ (Neetu Vanajakshi) ಹೊರಬಿದ್ದಿದ್ದಾರೆ. ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ. ಬಿಗ್‌ಬಾಸ್‌ನ ಈ ಜರ್ನಿಯ ಕುರಿತು JioCinemaಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ (Interview) ನೀತು ಹಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

    ‘ಈವಾಗಷ್ಟೇ ಹೊರಗೆ ಬಂದಿದೀನಿ. ಸ್ವಲ್ಪ ಬೇಜಾರು ಇದ್ದೇ ಇದೆ. ಆದರೆ 50 ದಿನ ಮುಗಿಸಿದ್ದೇನೆ ಎಂಬ ಖುಷಿಯಿದೆ. ಎಲ್ಲ ಕಂಟೆಸ್ಟೆಂಟ್‌ಗಳ ಮಧ್ಯ ನಾನೂ ಅಷ್ಟು ದಿನ ಸರ್ವೈವ್ ಆಗಿದ್ದೀನಿ ಎಂಬ ಹೆಮ್ಮೆ ಇದೆ. ತುಂಬ ಅನುಭವಗಳ ಜೊತೆಗೆ ಮನೆಗೆ ಹೋಗುತ್ತಿದ್ದೇನೆ. ಈ ಅನುಭವಗಳನ್ನು ಮುಂದೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಮುನ್ನುಗ್ಗುತ್ತೇನೆ.

    ಎಲಿಮಿನೇಷನ್‌ ನಿರೀಕ್ಷಿತವೇ ಆಗಿತ್ತು!

    ಹೊರಗಡೆ ಬರ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದ್ರೆ ಕಳೆದ ಎರಡು ವಾರದಿಂದ ನನ್ನ ಪರ್ಪಾರ್ಫೆನ್ಸ್‌ ತುಂಬ ಕಡಿಮೆ ಇತ್ತು. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿದ್ದೆ. ಆದರೆ ದುರದೃಷ್ಟ. ಏನೂಮಾಡಕ್ಕಾಗಲ್ಲ.

    ಕೆಲವೊಂದು ವಿಚಾರದಲ್ಲಿ ನಾನು ಸ್ವಲ್ಪ ಹಿಂದೇಟು ಹಾಕ್ತಿದ್ದೆ. ಯಾಕಂದ್ರೆ ಆರಂಭದಲ್ಲಿ ಜಗಳ ಆಡ್ತಿದ್ದೆ. ಸರಿಯಾದ ವಿಷಯಕ್ಕೇ ಜಗಳ ಆಡ್ತಿದ್ದೆ. ಆಮೇಲಾಮೇಲೆ, ನಾನು ಬೇರೆ ರೀತಿ ಪ್ರೊಜಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಅದರಿಂದ ಹಿಂಜರಿಗೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ. ಟಾಸ್ಕ್‌ನಲ್ಲಿಯೂ ಎಲ್ಲರೂ ಹೇಳಿದ್ದನ್ನ ಒಪ್ಪಿಕೊಂಡುಬಿಡುತ್ತಿದ್ದೆ. ಅಲ್ಲಿ ಇನ್ನೂ ಸ್ವಲ್ಪ ಚುರುಕಾಗಿದ್ದಿದ್ರೆ ನಾನು ಸರ್ವೈವ್ ಆಗಬಹುದಾಗಿತ್ತು. ಈಗ ನಾನು ಮತ್ತೆ ಹೋದ್ರೆ ಖಂಡಿತ ಇನ್ನಷ್ಟು ಚೆನ್ನಾಗಿ ಪರ್ಫಾರ್ಪೆನ್ಸ್‌ ಮಾಡುತ್ತೇನೆ.

    ಕಿಚ್ಚನ ಚಪ್ಪಾಳೆ ಎಂಬ ಟ್ರೋಫಿ!

    ಯಾವಾಗ ನನಗೆ ಕಿಚ್ಚನ ಚಪ್ಪಾಳೆ ಬಂತೋ, ನನಗದು ಟ್ರೋಫಿ ತಗೊಂಡಂಗೆ. ಅಷ್ಟು ಖುಷಿಯಾಯ್ತು ನಂಗೆ. ಚೆನ್ನಾಗಿ ಆಡ್ತಾ ಇದ್ದೀನಿ ಅನ್ನೋ ಕಾನ್ಫಿಡೆನ್ಸ್ ಬಂತು. ಒಬ್ಬ ಸ್ಪರ್ಧಿಗೆ ಏನೇನು ಸಿಗಬೇಕೋ ಅವೆಲ್ಲವೂ ನನಗೆ ಸಿಕ್ಕಿವೆ.

    ಜೆನ್ಯೂನ್-ಫೇಕ್!

    ಬಿಗ್‌ಬಾಸ್‌ ಮನೆಯೊಳಗೆ ನನ್ನ ಪ್ರಕಾರ ಪ್ರತಾಪ್ ತುಂಬ ಜೆನ್ಯೂನ್. ಯಾಕೆಂದ್ರೆ ಅವನತ್ರ ಮಾತಾಡಬೇಕಾದ್ರೆ ನಾಟಕೀಯತೆ ಇರುತ್ತಿರಲಿಲ್ಲ. ಚೆನ್ನಾಗಿ ಆಡ್ತಾನೂ ಇದ್ದಾನೆ. ಸ್ನೇಹಿತ್ ಫೇಕ್ ಅನಿಸ್ತಾನೆ. ಯಾಕೆಂದರೆ ‘ಟಾಸ್ಕ್ ಎಲ್ಲ ಆಯ್ತು, ಇನ್ಮೇಲಿಂದ ಫ್ರೈಡೆ ಸಾಟರ್‍ಡೇ ನಾವೊಂದ್ ಸ್ವಲ್ಪ ಎಂಟರ್‍ಟೈನಿಂಗ್ ಆಗಿರ್ಬೇಕು’ ಅಂತ. ಹಾಗಾಗಿ ಅವನು ಬಹುಶಃ ಕ್ಯಾಮೆರಾಗೋಸ್ಕರ ಚಟುವಟಿಕೆ ಮಾಡ್ತಿದ್ದಾನೆ ಅನ್ಸತ್ತೆ.

    ನೀತು ಫೈನಲಿಸ್ಟ್‌ ಲೀಸ್ಟ್!

    ಪ್ರತಾಪ್‌, ತುಕಾಲಿ ಸಂತೋಷ್, ಸಂಗೀತಾ, ಕಾರ್ತಿಕ್, ತನಿಷಾ ಈ ಐವರು ಈ ಸಲದ ಬಿಗ್‌ಬಾಸ್‌ ಫೈನಲ್‌ನಲ್ಲಿ ಇರ್ತಾರೆ. ಅವರಲ್ಲಿ ಪ್ರತಾಪ್ ವಿನ್ನರ್ ಆಗ್ತಾನೆ.

    ಜಿಯೊ ಫನ್‌ ಫ್ರೈಡೆ ಟಾಸ್ಕ್

    ಜಿಯೊ ಸಿನಿಮಾ ಫನ್‌ ಫ್ರೈಡೆ ಟಾಸ್ಕ್‌ಗಳನ್ನು ತುಂಬಾನೇ ಎಂಜಾಯ್ ಮಾಡಿದೀನಿ ನಾನು. ಕಥೆ ಹೇಳೋದು ಮಜವಾಗಿತ್ತು. ನನಗೆ ಗುರಿ ಇಡೋದು ಅಂದ್ರೆ ತುಂಬಾನೇ ಇಷ್ಟ. ಹಾಗಾಗಿ ಇರುಳ್ಳಿ ಅಂತ ಹೇಳಿದ ತಕ್ಷಣ ದೂರದಿಂದಲೇ ಗುರಿಇಟ್ಟು ಹಾಕಿಬಿಟ್ಟಿದ್ದೆ. ಆ ಟಾಸ್ಕ್‌ಗಳನ್ನು ಫುಲ್ ಜೋಷ್‌ನಲ್ಲಿ ಖುಷಿಯಿಟ್ಟು ಆಡ್ತಿದ್ದೆ. ಲಗೋರಿ ಆಟವೂ ಮಜವಾಗಿತ್ತು. ಚಿಕ್ಕ ಮಗುವಾಗಿದ್ದಾಗ ನಾನು ಏನೆಲ್ಲ ಎಂಜಾಯ್ ಮಾಡಲು ಸಾಧ್ಯವಾಗಿರಲಿಲ್ಲವೋ ಅವೆಲ್ಲವನ್ನೂ ಬಿಗ್‌ಬಾಸ್ ಮನೆಯ ಫನ್ ಫ್ರೈಡೆ ಟಾಸ್ಕ್‌ನಲ್ಲಿ ಎಂಜಾಯ್ ಮಾಡಿದ್ದೇನೆ.

    ಕಾಫಿ ಮಗ್ ಮಿಸ್ ಮಾಡ್ಕೋತೀನಿ

    ಬಿಗ್‌ಬಾಸ್‌ ಮನೆಯಲ್ಲಿ ತುಂಬ ಮಿಸ್ ಮಾಡ್ಕೊಳೋದು ಕಾಫಿ ಮಗ್. ಅದರಲ್ಲಿ ನೀತು ಎಂದು ಬರೆದಿತ್ತು. ಅದು ನನ್ನ ಐಡೆಂಟಿಟಿ. ಮತ್ತು ಮಮ್ಮಿ ನಾನು ಇರುವ ಫೋಟೊ ಇತ್ತು. ಅದನ್ನೂ ಮಿಸ್ ಮಾಡ್ಕೋತೀನಿ. ಎದ್ದ ತಕ್ಷಣವೇ ಮಮ್ಮಿ ಮುಖ ನೋಡ್ತಿದ್ದೆ.

    ಬಿಗ್‌ಬಾಸ್‌ ಮನೆಯಲ್ಲಿ ಎಲ್ಲರೊಟ್ಟಿಗೆ ನಾನು ಒಳ್ಳೆಯ ಕನೆಕ್ಷನ್ ಇಟ್ಟುಕೊಂಡಿದ್ದೆ. ಎಲ್ಲರಿಗೂ ಅವರದೇ ಆದ ಒಂದು ಜರ್ನಿ ಅಂತ ಇರತ್ತೆ. ಯಾವ್ದೆ ಕೆಲಸ ಅಂತ ಬಂದಾಗ ಏನಾದ್ರೂ ಕಲಿಬೇಕು, ಏನಾದ್ರು ಮಾಡಬೇಕು ಅಂದಾಗ ಮಾಡುತ್ತಿದ್ದೆ. ಅಡುಗೆ ಮಾಡುವುದರಿಂದ ಎಲ್ಲರ ಜೊತೆಗೆ ಒಂದು ಬಾಂಡಿಂಗ್ ಬೆಳೆದಿತ್ತು.

    ಟಾಸ್ಕ್‌ ಅಂತ ಬಂದಾಗ ಇವರು ಸರಿ ಇಲ್ಲ, ಅವ್ರು ಸರಿ ಇಲ್ಲ ಅಂತ ಹೇಳ್ಬೇಕಾಗತ್ತೆ. ಫೇಕ್ ಅಂತ ಹೇಳ್ಬೇಕಾಗತ್ತೆ. ಎಂಡ್‌ ಆಫ್‌ ದಿ ಡೇ ಎಲ್ಲರಿಗೂ ಅವರದ್ದೇ ಆದ ವ್ಯಕ್ತಿತ್ವ ಇದೆ. ಎಲ್ಲರೂ ಸ್ಟ್ರಾಂಗ್ ಆಗಿಯೇ ಇದ್ದಾರೆ.

     

    ಪ್ರೀತಿಯನ್ನು ಮನದುಂಬಿಕೊಂಡು ಹೋಗುತ್ತಿರುವೆ

    ನನಗೆ ಪ್ರೀತಿ ಬೇಕಾಗಿತ್ತು. ಸಿಂಪತಿ ಬೇಕಾಗಿರ್ಲಿಲ್ಲ. ಸಿಂಪತಿ ಇಲ್ಲದ ಪರಿಪೂರ್ಣ ಪ್ರೀತಿಯನ್ನು ಹುಡುಕಿಕೊಂಡು ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಅದು ನನಗೆ ಸಿಕ್ಕಿದೆ. ನನಗೆ ಇದೊಂದು ಒಳ್ಳೆಯ ಅವಕಾಶ. ಮನೆಯಲ್ಲಿ ಒಂದೊಂದು ಕ್ಷಣವನ್ನೂ ಎಂಜಾಯ್ ಮಾಡಿದೀನಿ. ಈ ನೆನಪುಗಳನ್ನು ನನ್ನ ಜೀವನವಿಡೀ ಒಂದೊಂದು ಎಪಿಸೋಡ್ ನೋಡ್ತಾ ಎಂಜಾಯ್ ಮಾಡ್ತೀನಿ. ಟ್ರಾನ್ಸ್‌ಜೆಂಡರ್‍ಗಳ ಬದುಕಿನ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ. ನಮಗೆ ಏನು ಬೇಕು, ನಾವು ಸಮಾಜದಿಂದ ಏನು ನಿರೀಕ್ಷಿಸುತ್ತಿದ್ದೇವೆ ಎಂಬುದು ಗೊತ್ತಿರಲಿಲ್ಲ. ಕೊನೆಗೂ ನಮಗೆ ಬೇಕಾಗಿರುವುದು ಪ್ರೀತಿ. ನಮಗೆ ಕರುಣೆ ಬೇಡ. ಪ್ರೀತಿ ಕೊಟ್ಟರೆ ಸಾಕು. ಅದು ನನಗೆ ಬಿಗ್‌ಬಾಸ್ ಮನೆ ಕೊಟ್ಟಿದೆ. ಅದನ್ನು ನಾನು ಮನದುಂಬಿ ತೆಗೆದುಕೊಂಡು ಹೋಗುತ್ತಿದ್ದೇನೆ.

  • ಬಿಗ್ ಬಾಸ್ ಮನೆಯಿಂದ ನೀತು ಔಟ್

    ಬಿಗ್ ಬಾಸ್ ಮನೆಯಿಂದ ನೀತು ಔಟ್

    ದೊಡ್ಮನೆ ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮನೆಯ ಆಟ ರೋಚಕ ತಿರುವು ಪಡೆಯುತ್ತಿದ್ದಂತೆ ಒಬ್ಬಬ್ಬರೇ ಮನೆಯಿಂದ ಔಟ್ ಆಗುತ್ತಿದ್ದಾರೆ. ಇದೀಗ ಬಿಗ್ ಬಾಸ್ (Bigg Boss Kannada) ಮನೆಯಿಂದ ನೀತು ವನಜಾಕ್ಷಿ ಆಟ 7ನೇ ವಾರಕ್ಕೆ ಅಂತ್ಯವಾಗಿದೆ.

    ಟಾನ್ಸ್ ಜೆಂಡರ್ ಮಿಸ್ ವರ್ಲ್ಡ್ ಕಾಂಪಿಟೇಶನ್, ರಿಯಾಲಿಟಿ ಶೋ, ಸಿನಿಮಾ ಸೇರಿದಂತೆ ಸಕ್ರಿಯರಾಗಿದ್ದ ನೀತು ವನಜಾಕ್ಷಿ (Neetu Vanajakshi) ಬಿಗ್ ಬಾಸ್ ಮನೆಗೆ ಕಾಲಿಟ್ಟ ಬಳಿಕ ಅನೇಕರಿಗೆ ಪರಿಚಿತರಾಗಿದ್ದರು. 7ನೇ ವಾರಕ್ಕೆ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿ ಪಟ್ಟ ಏರಿದ್ದರು. ಈಗ ಅವರ ಆಟಕ್ಕೆ ಬಿಗ್ ಬಾಸ್ ಬ್ರೇಕ್ ಹಾಕಿದ್ದಾರೆ.

    ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್, ಇಶಾನಿ, ಭಾಗ್ಯಶ್ರೀ ಅವರ ಬಿಗ್ ಬಾಸ್ ಜರ್ನಿ ಮುಗಿದು ಎಲಿಮಿನೇಟ್ ಆಗಿದ್ದಾರೆ. ಈಗ ನೀತು ಎಲಿಮಿನೇಷನ್ (Elimination) ಮನೆಮಂದಿಗೆ ಶಾಕ್ ಕೊಟ್ಟಿದೆ.

    ಸದಾ ಒಂದಲ್ಲಾ ಒಂದು ಕಿರಿಕ್ ಮಾಡುವ ಹೈಲೆಟ್ ಆಗಿದ್ದ ನೀತು.. ನೊಂದವರ ಗುಂಪಿನಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಅಂದರೆ ತುಕಾಲಿ ಸಂತೂ- ವರ್ತೂರು ಸಂತೋಷ್‌ಗೆ ಆತ್ಮೀಯರಾಗಿದ್ದರು. ಇದಕ್ಕೂ ಮುನ್ನ ವಿನಯ್ ಟೀಮ್‌ನಲ್ಲಿದ್ರೂ ನೀತು.

    ಬಿಗ್ ಬಾಸ್ ಮನೆಗೆ ಬಂದ ಹೊಸತರಲ್ಲಿ ನೀತು ಆಟ ನೋಡಿ ಸುದೀಪ್ ಕಡೆಯಿಂದ ಕಿಚ್ಚನ (Sudeep) ಚಪ್ಪಾಳೆ ಸಿಕ್ಕಿತ್ತು. ಈಗ ನೀತು ಎಲಿಮಿನೇಟ್ ಆಗಿರೋದು ಅವರ ಫ್ಯಾನ್ಸ್ಗೆ ಶಾಕ್ ಕೊಟ್ಟಿದೆ.

  • Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಕಿಚ್ಚನ ಕ್ಲಾಸ್ ಬಳಿಕ ಎಲ್ಲಾ ಸ್ಪರ್ಧಿಗಳು ಎಚ್ಚೆತ್ತು ಆಟವಾಡುತ್ತಿದ್ದಾರೆ. ಇದೀಗ ಗೆಲ್ಲೋ ಕುದುರೆ ವಿನಯ್ ಎಂದು ಬೆಟ್ಟು ತೋರಿಸಿದ ನೀತುಗೆ (Neethu Vanajakshi) ಮೈಕಲ್ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್

    ಟಾಸ್ಕ್‌ವೊಂದರಲ್ಲಿ ಒಂದಿಷ್ಟು ಪದಗಳನ್ನ ಸ್ಪರ್ಧಿಗಳಿಗೆ ನೀಡಿದ್ದರು. ಆ ಪದದ ಅನುಸಾರ ಸ್ಪರ್ಧಿಗಳನ್ನ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದನ್ನ ಹೈಲೆಟ್ ಮಾಡಿ ನಿಲ್ಲಿಸಬೇಕಿತ್ತು. ಅದರಂತೆ ನೀತು ವನಜಾಕ್ಷಿ ಅವರಿಗೆ ‘ಗೆಲ್ಲೋ ಕುದುರೆ’ ಎಂಬ ಪದ ಸಿಕ್ಕಿತ್ತು. ಈ ಅನುಸಾರ ನೀತು, ಮೊದಲ ಸ್ಥಾನದಲ್ಲಿ ವಿನಯ್ (Vinay Gowda) ನಿಲ್ಲಿಸಿದ್ದರೆ, ಕಡೆಯ ಸ್ಥಾನದಲ್ಲಿ ಇಶಾನಿಯನ್ನು ನಿಲ್ಲಿಸಿದ್ದರು.

    ನೀತು ನಿರ್ಣಯಕ್ಕೆ ಮೈಕಲ್, ಕಾರ್ತಿಕ್ (Karthika Mahesh) ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗೆಲ್ಲೋ ಕುದುರೆ ಪಟ್ಟಿಯಲ್ಲಿ ವಿನಯ್ ಗೌಡ ಒಬ್ಬರೇ ಓಡ್ತಿರೋದು ಅಂತ ಹೇಳಿದ್ದಕ್ಕಾಗಿ ನೀತುಗೆ ಠಕ್ಕರ್ ನೀಡಿದ ಮೈಕೆಲ್, ನೀವೀಗ ಹೇಳಿದ್ದೀರಿ, ಒಂದೇ ಒಂದು ಗೆಲ್ಲೋ ಕುದುರೆ ಆಟ ಆಡ್ತಾ ಇದೆ ಅಂತ. ಹಾಗಾದರೆ, ನೀವು ನಿಮ್ಮನ್ನೇ ಕನ್ಸಿಡರ್ ಮಾಡಿಕೊಂಡಿಲ್ಲ ಅಂತ ಅರ್ಥ. ಅಂದರೆ ನೀವಿಲ್ಲಿ ಸುಮ್ನೇ ಇದ್ದೀರಿ. ಸುಮ್ನೇ ಇರೋದಾದ್ರೆ ನೀವ್ಯಾಕೆ ಬಿಗ್ ಬಾಸ್‌ನಲ್ಲಿ ಯಾಕೆ ಇದ್ದೀರಾ? ಗೊಂದಲದಲ್ಲಿ ಇದ್ದೀರಾ ಅಂತೆಲ್ಲ ಕೇಳಿದರು. ಈ ಮಾತು ಕೇಳಿದ ನೀತು, ಸಮರ್ಥನೆ ಕೊಡೋದ್ರಲ್ಲಿ ಸೋತರು. ಮೈಕೆಲ್ ಮಾತಿಗೆ ಬೆಂಬಲಿಸುತ್ತ ಮನೆಮಂದಿ ನಕ್ಕರು. ಸದಾ ಕನ್ಫೂಷನ್‌ನಲ್ಲಿರೋ ನೀತು, ಮೈಕಲ್ ಈ ಮೂಲಕ ಕ್ಲಾಸ್ ತೆಗೆದುಕೊಂಡರು.

    ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿ ಈಗಾಗಲೇ ಬಿಗ್ ಬಾಸ್ ಮನೆಯಿಂದ (Bigg Boss House) ಹೊರಬಂದಿದ್ದಾರೆ. 5ನೇ ವಾರಕ್ಕೆ ಯಾರು ಎಲಿಮಿನೇಟ್ ಆಗುತ್ತಾರೆ ಕಾದುನೋಡಬೇಕಿದೆ.

  • Bigg Boss Kannada : 6ನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ ತೃತೀಯಲಿಂಗಿ ನೀತು

    Bigg Boss Kannada : 6ನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ ತೃತೀಯಲಿಂಗಿ ನೀತು

    ದೇ ಮೊದಲ ಬಾರಿಗೆ ಕನ್ನಡ ಬಿಗ್ ಬಾಸ್ ಮನೆಯಲ್ಲಿ ತೃತೀಯ ಲಿಂಗಿಯ ಪ್ರವೇಶವಾಗಿದೆ. ಶೇಕಡಾ 86ರಷ್ಟು ಮತವನ್ನು ಪಡೆದುಕೊಳ್ಳುವ ಮೂಲಕ ನೀತು ವನಜಾಕ್ಷಿ (Neetu Vanaja) ಈ ಬಾರಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ತನ್ನ ಮನದ ನೋವುಗಳನ್ನು ವೇದಿಕೆಯ ಮೇಲೆ ಹಂಚಿಕೊಂಡು ನೀತು, ಬೇರೆಯವರಿಗೆ ನನ್ನ ಬದುಕು ಸ್ಪೂರ್ತಿ ಆಗಲಿ ಎನ್ನುವ ಕಾರಣಕ್ಕಾಗಿ ಬಿಗ್ ಬಾಸ್ ಗೆ ಬಂದಿರುವುದಾಗಿ ಹೇಳಿದರು.

    ಮೂಲತಃ ಗದಗ ಜಿಲ್ಲೆಯವರಾದ ನೀತು, ಮಾಡೆಲಿಂಗ್ ಕ್ಷೇತ್ರದಲ್ಲೂ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ಉಪೇಂದ್ರ ನಿರ್ದೇಶನದ ಚಿತ್ರದಲ್ಲೂ ನಟಿಸಿದ್ದಾರೆ. ಅಲ್ಲದೇ, ರಿಯಾಲಿಟಿ ಶೋನಲ್ಲಿ ಭಾಗಿಯಾದ ಹೆಗ್ಗಳಿಕೆ ಇವರದ್ದು.

    ಐದನೇ ಸ್ಪರ್ಧಿ

    ಕಾಮಿಡಿ ಕಲಾವಿದ, ತುಕಾಲಿ ಸಂತೋಷ್ ಖ್ಯಾತಿಯ ಸಂತೋಷ್ ಅತೀ ಹೆಚ್ಚು ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಮನೆ 5ನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದರು. ಹೆಂಡತಿಯೊಂದಿಗೆ ವೇದಿಕೆಯ ಮೇಲೆ ಬಂದ ಸಂತೋಷ್ ಸಾಕಷ್ಟು ಮನರಂಜನೆಯನ್ನು ಬಿಗ್ ಬಾಸ್ ವೇದಿಕೆಯ ಮೇಲೆ ಕೊಟ್ಟರು. ಗಂಡ ಹೆಂಡತಿ ಮಾತುಕತೆ ವೇದಿಕೆಯ ಮೇಲೆ ಸಖತ್ ಮನರಂಜನೆಯನ್ನೇ ನೀಡಿತು.

    ಈವರೆಗೂ ಬಿಗ್ ಬಾಸ್ ಮನೆಯಲ್ಲಿ ನಾಲ್ವರು ಸ್ಪರ್ಧಿಗಳು ಇದ್ದಾರೆ. ಅವರೆಲ್ಲರಿಗೂ ಅತೀ ಹೆಚ್ಚು ಅಂದರೆ, ಶೇಕಡಾ 93ರಷ್ಟು ವೋಟ್ ಪಡೆದು ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದರು ಸಂತೋಷ್. ಕಾಮಿಡಿ ಶೋಗಳು ಮೂಲಕ ಸಂತೋಷ್ ಮನೆಮಾತಾದವರು.

    ನಾಲ್ಕನೇ ಸ್ಪರ್ಧಿ

    ಹರಹರ ಮಹಾದೇವ ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ಮಾಡಿರುವ ಹಾಗೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವಿನಯ್ ಗೌಡ (Vinay Gowda), 4ನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಬಯಸದೇ ಬಳಿ ಬಂದೆ ಹಾಡಿನ ಮೂಲಕ ವೇದಿಕೆಗೆ ಬಂದ ವಿನಯ್ ಗೌಡ, ತಮ್ಮ ತಂದೆಯೊಂದಿಗಿನ ನೋವಿನ ಸಂಗತಿಯನ್ನು ಹಂಚಿಕೊಂಡರು.

    14 ವರ್ಷದ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಹೋಗುತ್ತಿರುವುದಕ್ಕೆ ಕ್ಷಣ ಭಾವುಕರಾದರು. ಪತ್ನಿ ಮತ್ತು ಮಗ ಕೂಡ ಈ ಕ್ಷಣದಲ್ಲಿ ಭಾವುಕತೆಯಿಂದಲೇ ವಿನಯ್ ಗೌಡ ಅವರನ್ನು ದೊಡ್ಮನೆಗೆ ಕಳುಹಿಸಿ ಕೊಟ್ಟರು. ವಿನಯ್ ಗೌಡ ಈವರೆಗೂ ಮನೆಗೆ ಹೋದವರ ಪೈಕಿ ಅತೀ ಹೆಚ್ಚು ಅಂದರೆ, ಶೇಕಡಾ 84ರಷ್ಟು ವೋಟು ಪಡೆದುಕೊಂಡು ಆಯ್ಕೆಯಾದರು.

    ಮೂರನೇ ಸ್ಪರ್ಧಿ

    ಬಿಗ್ ಬಾಸ್ ಮನೆಗೆ ಮೂರನೇ ಸ್ಪರ್ಧಿಯಾಗಿ ಆಯ್ಕೆಯಾದವರು ರ‍್ಯಾಪರ್ ಇಶಾನಿ (Ishani). ಮೈಸೂರು ಮೂಲದ ಈ ಹುಡುಗಿ ಹುಟ್ಟಿದ್ದು ದುಬೈನಲ್ಲಿ ಆನಂತರ ಲಾಸ್ ಏಂಜಲಿಸ್‌ನಲ್ಲಿ ಬೆಳೆದವರು. ರ‍್ಯಾಪರ್ ಆಗಿ ಅನೇಕ ಗೀತೆಗಳನ್ನು ಇವರು ಹಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಗೆ ಕಳುಹಿಸಲು ತಂದೆ ತಾಯಿ ಇಬ್ಬರೂ ಬಂದಿದ್ದರು. ಮನೆಗೆ ಕಾಲಿಡುವಾಗ ಕಣ್ಣೀರಿಡುತ್ತಲೇ ಇಶಾನಿ ಮನೆ ಪ್ರವೇಶ ಮಾಡಿದರು.

     

    ಇಶಾನಿ ಮತ್ತು ಮಂಜು ಪಾವಗಡ ವೇದಿಕೆಯ ಮೇಲೆ ಒಂದಷ್ಟು ಹೊತ್ತು ರಂಜಿಸಿದರು. ನಾಲ್ವರು ನಿರ್ಣಾಯಕರು ಇಶಾನಿಗೆ ಶೇಕಡಾ 83 ರಷ್ಟು ವೋಟು ಹಾಕುವ ಮೂಲಕ ಇಶಾನಿಯನ್ನು ಆಯ್ಕೆ ಮಾಡಿದರು. ತಂದೆ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಇಶಾನಿ ಮನೆ ಪ್ರವೇಶ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]