Tag: ನೀತು ಕಪೂರ

  • ಮಗನ ನ್ಯೂ ಗರ್ಲ್ ಫ್ರೆಂಡ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀತು ಕಪೂರ್

    ಮಗನ ನ್ಯೂ ಗರ್ಲ್ ಫ್ರೆಂಡ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀತು ಕಪೂರ್

    ಮುಂಬೈ: ಇತ್ತೀಚೆಗೆ ಬಾಲಿವುಡ್‍ನ ಕ್ಯೂಟ್ ಆ್ಯಂಡ್ ಹ್ಯಾಂಡ್‍ಸಮ್ ಸ್ಟಾರ್ ರಣಬೀರ್ ಕಪೂರ್ ಹೆಸರು ಬಬ್ಲಿ ಗರ್ಲ್ ಆಲಿಯಾ ಭಟ್ ಜೊತೆ ಕೇಳಿ ಬರುತ್ತಿದೆ. ಇಬ್ಬರ ನಡುವೆ ಲವ್ ಆರಂಭವಾಗಿದ್ದು, ರಣ್‍ಬೀರ್ ತಾಯಿ ನೀತು ಕಪೂರ್ ಮಗನ ಹೊಸ ಗರ್ಲ್ ಫ್ರೆಂಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಆಲಿಯಾ ಇದೇ ತಿಂಗಳು ಮಾರ್ಚ್ 15ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ್ರು. ಆಲಿಯಾ ಬರ್ತ್ ಡೇ ಪಾರ್ಟಿಗಾಗಿ ನೀತು ಕಪೂರ್ ತಮ್ಮ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗುತ್ತಿದೆ. ರಣ್‍ಬೀರ್ ಖುದ್ದಾಗಿ ತಾಯಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು ಎನ್ನಲಾಗಿದೆ. ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾದ ಬಳಿಕ ನೀತು ಕಪೂರ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಆಲಿಯಾ ಜೊತೆಗಿನ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಈ ಹಿಂದೆ ರಣ್‍ಬೀರ್ ಹೆಸರು ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆ ಕೇಳಿ ಬಂದಿತ್ತು. ಆದ್ರೆ ನಾನಾ ಕಾರಣಗಳಿಂದ ರಣ್‍ಬೀರ್ ಪ್ರೀತಿ ಬ್ರೇಕಪ್ ಆಗಿತ್ತು. ನೀತು ಕಪೂರ್ ದೀಪಿಕಾ ಮತ್ತು ಕತ್ರಿನಾ ಜೊತೆ ಕೇಳಿಸಿದಾಗ ಅಸಮಧಾನ ವ್ಯಕ್ತಪಡಿಸಿದ್ರು ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದ್ದವು. ಇತ್ತೀಚೆಗೆ ಪಾಕಿಸ್ತಾನ ನಟಿ ಮಹಿರಾ ಖಾನ್ ಜೊತೆ ರಣ್‍ಬೀರ್ ಕಪೂರ್ ಸ್ಮೋಕ್ ಮಾಡುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಎರಡು ರಾಷ್ಟ್ರಗಳಲ್ಲಿ ಸದ್ದು ಮಾಡಿದ್ದವು.

    ಆಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣ್‍ಬೀರ್ ಮತ್ತು ಆಲಿಯಾ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

    https://www.instagram.com/p/BgWciypld0I/?hl=en&taken-by=neetu54

    https://www.instagram.com/p/BgW-t_alu9J/?hl=en&taken-by=neetu54