Tag: ನೀತಿ ಸಂಹಿತೆ

  • ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ- ಬೆಳಿಗ್ಗೆಯಿಂದ ನಗರ ಸಂಚಾರ ಮಾಡಿದ ಪೂಜಾಗಾಂಧಿ

    ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ- ಬೆಳಿಗ್ಗೆಯಿಂದ ನಗರ ಸಂಚಾರ ಮಾಡಿದ ಪೂಜಾಗಾಂಧಿ

    ರಾಯಚೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ನಟಿ ಪೂಜಾಗಾಂಧಿ ರಾಯಚೂರಿಗೆ ಬಂದಿದ್ದು, ಬೆಳಿಗ್ಗೆಯಿಂದ ನಗರ ಸಂಚಾರ ನಡೆಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಓಡಾಡಿದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

    ನಗರದ ತೀನ್ ಕಂದಿಲ್ ವೃತ್ತದಲ್ಲಿ ಸಾಧಿಕ್ ಟೀ ಅಂಗಡಿಯಲ್ಲಿ ಟೀ ಕುಡಿದು, ಟೀ ಅಂಗಡಿ ಮಾಲೀಕನೊಂದಿಗೆ ಸೆಲ್ಫಿ ತೆಗೆದುಕೊಂಡರು. ಬಳಿಕ ಆರ್‍ಟಿಓ ವೃತ್ತದ ಬಳಿಯ ವೈಟ್ ಹೌಸ್ ಎಕ್ಸಿಬಿಷನ್ ಗೆ ತೆರಳಿ ಅಭಿಮಾನಿಗಳೊಂದಿಗೆ ಮಾತನಾಡಿದರು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ ಅಂತ ಪೂಜಾಗಾಂಧಿ ತಿಳಿಸಿದರು.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್‍ಆರ್ ಕಾಂಗ್ರೆಸ್ ನಿಂದ ಪೂಜಾಗಾಂಧಿ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರಕ್ಕೆ ಅನುಮತಿಯಿಲ್ಲದ ವಾಹನ ಬಳಿಸಿದ್ದ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದಾರೆ.

    ಪ್ರಕರಣದ ವಿಚಾರಣೆ ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಜೆಎಂಎಫ್ ಸಿ-2 ರಲ್ಲಿ ವಿಚಾರಣೆ ನಡೆಯಲಿದ್ದು ಪದೇ ಪದೇ ವಿಚಾರಣೆಗೆ ಗೈರಾದ ಹಿನ್ನೆಲೆ ಅಕ್ಟೋಬರ್ 26 ರಂದು ಸುಮಾರು 6 ಗಂಟೆ ಕಾಲ ಕೋರ್ಟ್ ಕಸ್ಟಡಿಗೆ ಒಳಪಡಿಸಿದ್ದ ನ್ಯಾಯಾಧೀಶರು ಮುಂದೆ ವಿಚಾರಣೆಗೆ ಗೈರಾಗದಂತೆ ಎಚ್ಚರಿಕೆ ನೀಡಿದ್ದರು.

     

  • ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

    ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ

    ರಾಯಚೂರು: 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ಹಿನ್ನೆಲೆ ನಟಿ ಪೂಜಾಗಾಂಧಿಗೆ ನ್ಯಾಯಾಂಗ ಬಂಧನ ಭೀತಿ ಕಾಡುತ್ತಿದೆ.

    ರಾಯಚೂರಿನ ಜೆಎಂಎಫ್‍ಸಿ 2ನೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರುವ ಪೂಜಾಗಾಂಧಿಗೆ ಸಂಜೆ ಐದು ಗಂಟೆವರೆಗೆ ನ್ಯಾಯಾಲಯದಲ್ಲೇ ಕುಳಿತುಕೊಳ್ಳುವಂತೆ ನ್ಯಾಯಾಧೀಶರು ಶಿಕ್ಷೆ ನೀಡಿದ್ದಾರೆ. ಕುಳಿತುಕೊಳ್ಳದಿದ್ದರೆ ಕೂಡಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಹೇಳಿದ್ದಾರೆ.

    ಸಂಜೆ ವೇಳೆಗೆ ಷರತ್ತುಬದ್ಧ ಜಾಮೀನು ಸಿಗಬಹುದು ಇಲ್ಲಾ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆಗಳಿವೆ.

    ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು.

    ಈಗಾಗಲೇ ಒಂದು ಬಾರಿ ಜಾಮೀನನ್ನ ನ್ಯಾಯಾಲಯ ರದ್ದುಗೊಳಿಸಿದೆ. ಈ ಬಾರಿ 50 ಸಾವಿರ ರೂ. ದಂಡ, 2 ಲಕ್ಷ ಶ್ಯೂರಿಟಿಯೊಂದಿಗೆ ಜಾಮೀನು ನೀಡುವ ಸಾಧ್ಯತೆ ಇದೆ.

    ಕೋರ್ಟ್ ನಲ್ಲಿರುವ ಪೂಜಾ ಗಾಂಧಿಗೆ ಮಧ್ಯಾಹ್ನದ ಊಟ ಇಲ್ಲದ ಕಾರಣ ಚಾಕ್ಲೇಟ್ ತಿಂದಿದ್ದಾರೆ.