Tag: ನಿಹಾರಿಕಾ ಮೂವೀಸ್

  • ‘ಮೌನಂ’ ಡಬ್ಬಿಂಗ್ ಮುಕ್ತಾಯ

    ‘ಮೌನಂ’ ಡಬ್ಬಿಂಗ್ ಮುಕ್ತಾಯ

    ಬೆಂಗಳೂರು:  ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಿಸಿರುವ ‘ಮೌನಂ’ ಚಿತ್ರಕ್ಕೆ ಚಂದ್ರಾ ಲೇಔಟ್‍ನಲ್ಲಿರುವ ವೈನಾಟ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ.

    ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ- ರಾಜ್ ಪಂಡಿತ್, ಛಾಯಾಗ್ರಹಣ – ಶಂಕರ್, ಸಂಗೀತ – ಆರವ್ ರಿಶಿಕ್, ಸಂಕಲನ – ಗುರುಮೂರ್ತಿ ಹೆಗಡೆ, ಸಾಹಸ – ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ಸಾಹಿತ್ಯ – ಆಕಾಶ್ ಎಸ್., ಸಹ ನಿರ್ದೇಶಕರು- ರಿತೇಶ್, ಗುಣವಂತ ಮಂಜು, ತಾರಾಗಣದಲ್ಲಿ – ಅವಿನಾಶ್- (6 ಶೇಡ್‍ಗಳಿರುವ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದಾರೆ.) ಮಯೂರಿ (ಕೃಷ್ಣಲೀಲಾ) ಹೋಮ್ಲಿ ಮತ್ತು ಆಕ್ಷನ್ ಸೀಕ್ವೆನ್ಸ್‍ಗಳಲ್ಲಿ ಮಿಂಚಿದ್ದಾರೆ.

    ಬಾಲಾಜಿ ಶರ್ಮ (ಅಮೃತವರ್ಷಿಣಿ ಖ್ಯಾತಿ), ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನ (ಕಾಮಿಡಿ ಕಿಲಾಡಿಗಳು), ಸಿಂಚನ, ಮಂಜುಳಾ ರೆಡ್ಡಿ, ಮುಂತಾದವರಿದ್ದಾರೆ. ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಅಂಶದ ಸುತ್ತ ಕತೆ ಸಾಗುತ್ತದೆ.

  • ಮಯೂರಿಯ ‘ಮೌನಂ’ ಮೂಡ್!

    ಮಯೂರಿಯ ‘ಮೌನಂ’ ಮೂಡ್!

    ಕಿರುತೆರೆಯಲ್ಲಿ ನಾಯಕಿ ಪಾತ್ರ ಮಾಡಿ ಪ್ರಸಿದ್ಧಿ ಪಡೆಯುತ್ತಲೇ ಹಿರಿತೆರೆಗೂ ನಾಯಕಿಯರಾಗಿ ಎಂಟ್ರಿ ಕೊಟ್ಟವರ ಪಟ್ಟಿ ದೊಡ್ಡದಿದೆ. ಅದರಲ್ಲಿ ಯಶಸ್ವಿಯಾದವರ ಪಟ್ಟಿಯೂ ಮತ್ತೊಂದಿದೆ. ಅದರಲ್ಲಿ ತಮ್ಮ ಹೆಸರನ್ನೂ ಛಾಪಿಸಿಕೊಂಡಿರೋ ನಟಿ ಮಯೂರಿ. ಜಯ ಕಾರ್ತಿಕ್ ಅವರಿಗೆ ಜೋಡಿಯಾಗಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ಮಯೂರಿಯೀಗ ಸ್ಯಾಂಡಲ್‍ವುಡ್ಡಿನ ಬೇಡಿಕೆಯ ನಟಿಯಾಗಿಯೂ ಹೊರ ಹೊಮ್ಮಿದ್ದಾರೆ.

    ಕೃಷ್ಣಲೀಲಾ ಚಿತ್ರದ ಮೂಲಕ ಅಜೇಯ್ ರಾವ್ ಜೋಡಿಯಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದ ಮಯೂರಿ ಆ ನಂತರದಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಿತ್ರರಂಗದಲ್ಲಿಯೂ ಗೆಲುವು ದಾಖಲಿಸಿದ ಅವರೀಗ ಮೌನಂ ಮೂಡಿಗೆ ಜಾರಿದ್ದಾರೆ!

    ಮೌನಂ ಮಯೂರಿ ನಾಯಕಿಯಾಗಿ ನಟಿಸಿರೋ ಹೊಸ ಚಿತ್ರದ ಶೀರ್ಷಿಕೆ. ನಿಹಾರಿಕಾ ಮೂವೀಸ್ ಬ್ಯಾನರಿನಡಿಯಲ್ಲಿ ಶ್ರೀಹರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಪಂಡಿತ್ ನಿರ್ದೇಶನದ ಈ ಚಿತ್ರದಲ್ಲಿ ಮಯೂರಿ ಎರಡು ಶೇಡ್ ಗಳಿರೋ ಪಾತ್ರದಲ್ಲಿ ನಟಿಸಿದ್ದಾರಂತೆ. ಅದರಲ್ಲೊಂದು ಮೌನಗೌರಿಯಂಥಾ ಹೋಮ್ಲೀ ಪಾತ್ರವಾದರೆ ಮತ್ತೊಂದು ಪಕ್ಕಾ ಮಾಸ್ ಶೇಡಿನ ಪಾತ್ರವಂತೆ.

    ವಿಶೇಷವೆಂದರೆ, ಎರಡನೇ ಶೇಡಿನ ಪಾತ್ರದಲ್ಲಿ ಮಯೂರಿ ಪಕ್ಕಾ ಆಕ್ಷನ್ ಮೂಡಿನಲ್ಲಿಯೂ ನಟಿಸಿದ್ದಾರಂತೆ. ಇದು ಅವರ ಪಾಲಿಗೆ ಹೊಸಾ ಅನುಭವ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡೇ ಮಯೂರಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ವಿಶಿಷ್ಟವಾದ ಕಥೆ ಹೊಂದಿರೋ ಈ ಚಿತ್ರದಲ್ಲಿ ಪ್ರತೀ ಪಾತ್ರಗಳೂ ವಿಭಿನ್ನವಾಗಿರಲಿವೆಯಂತೆ. ಅವಿನಾಶ್ ಕೂಡಾ ಅಷ್ಟೇ ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರ ಪಾತ್ರಕ್ಕೆ ಬರೋಬ್ಬರಿ ಆರು ಶೇಡುಗಳಿವೆಯಂತೆ.

    ಜೀವನಕ್ಕೆ ಹತ್ತಿರವಾದ ಕಥೆ ಹೊಂದಿರೋ ಈ ಚಿತ್ರವೀಗ ಎಲ್ಲ ಕೆಲಸ ಕಾರ್ಯಗಳನ್ನೂ ಮುಗಿಸಿಕೊಳ್ಳುತ್ತಾ ಬೇಗನೆ ಪ್ರೇಕ್ಷಕರಿಗೆ ಮುಖಾಮುಖಿಯಾಗುವ ಸನ್ನಾಹದಲ್ಲಿದೆ. ಮೌನಂ ತಮ್ಮ ಚಿತ್ರ ಜೀವನಕ್ಕೆ ಹೊಸ ಓಘ ಮತ್ತು ಮತ್ತೊಂದಷ್ಟು ಅವಕಾಶಗಳನ್ನು ತಂದು ಕೊಡಲಿದೆ ಎಂಬ ಗಾಢ ಭರವಸೆ ಮಯೂರಿಯದ್ದು.