Tag: ನಿಹಾರಿಕಾ ಕೊನಿಡೇಲಾ

  • ಡಿವೋರ್ಸ್‌ ಬಗ್ಗೆ ಒಪ್ಪಿಕೊಂಡ ಮೆಗಾಸ್ಟಾರ್‌ ಪುತ್ರಿ

    ಡಿವೋರ್ಸ್‌ ಬಗ್ಗೆ ಒಪ್ಪಿಕೊಂಡ ಮೆಗಾಸ್ಟಾರ್‌ ಪುತ್ರಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಡಿವೋರ್ಸ್ ಸುದ್ದಿ ಬೆನ್ನಲ್ಲೇ ‘ಪುಷ್ಪ 2’ ಸಿನಿಮಾದಲ್ಲಿ ನಿಹಾರಿಕಾ ಕೊನಿಡೆಲಾ

    ಭಾರತೀಯ ಚಿತ್ರರಂಗದಲ್ಲಿ ಹೊಸ ಹೈಪ್ ಕ್ರಿಯೇಟ್ ಮಾಡಿದ ‘ಪುಷ್ಪ’ (Pushpa) ಸಿನಿಮಾ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು. ಹಾಗಾಗಿ ಸಹಜವಾಗಿ ಪುಷ್ಪ 2 (Pushpa) ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಅಲ್ಲು ಅರ್ಜುನ್ (Allu Arjun) , ರಶ್ಮಿಕಾ ಮಂದಣ್ಣ (Rashmika Mandanna), ಡಾಲಿ ನಟನೆಯ ಈ ಸಿನಿಮಾಗೆ ಹೊಸ ನಟಿಯ ಆಗಮನವಾಗಿದೆ. ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ‘ಪುಷ್ಪ’ 2 ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ.

    ಶ್ರೀಜಾ ಬಳಿಕ ಮೆಗಾಸ್ಟಾರ್ ಚಿರಂಜೀವಿ ಅವರ ಅಣ್ಣನ ಮಗಳು ನಾಗಬಾಬು (Nagababu) ಪುತ್ರಿ ನಿಹಾರಿಕಾ ಕೊನಿಡೆಲಾ ದಾಂಪತ್ಯದಲ್ಲಿ ಬಿರುಕಾಗಿದೆ. ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಜೀವನಕ್ಕೆ (Divorce) ಬ್ರೇಕ್ ಬಿದ್ದ ಮೇಲೆ ಸಿನಿಮಾಗಳತ್ತ ಮುಖ ಮಾಡಿರುವ ನಟಿ ನಿಹಾರಿಕಾ ಅವರು ಅಲ್ಲು ಅರ್ಜುನ್ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:‘ಭಜರಂಗಿ’ ಹೆಸರಿನಲ್ಲಿ ನಟಿಸಿ, ಬಜರಂಗದಳದ ನಿಷೇಧದ ಬಗ್ಗೆ ನಿಮ್ಮ ನಡೆಯೇನು? ಶಿವಣ್ಣಗೆ ಸಂಬರ್ಗಿ ಕೌಂಟರ್

    ‘ಪುಷ್ಪ 2’ ಸಿನಿಮಾದಲ್ಲಿ ಫಹಾದ್ ಫಾಸಿಲ್ ಅವರು ಮುಖ್ಯವಾದೊಂದು ಪಾತ್ರ ಮಾಡುತ್ತಿದ್ದಾರೆ. ಅವರ ಪತ್ನಿಯ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚುತ್ತಾರೆ ಎಂದು ಈ ಮೊದಲು ಗಾಸಿಪ್ ಹಬ್ಬಿತ್ತು. ಆದರೆ ಆ ಪಾತ್ರ ಮಾಡಲು ಸಾಯಿ ಪಲ್ಲವಿ ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಈಗ ಅದೇ ಪಾತ್ರವನ್ನು ನಿಹಾರಿಕಾ ಕೊನಿಡೆಲಾ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‌ನಲ್ಲಿ ನಟಿ, ನಿರ್ಮಾಪಕಿಯಾಗಿ ನಿಹಾರಿಕಾ ಕೊನಿಡೆಲಾ (Niharika Konidela) ಅವರು ತೊಡಗಿಕೊಂಡಿದ್ದಾರೆ. ‘ಒಕ ಮನಸು’, ‘ಸೂರ್ಯಕಾಂತಂ’, ‘ಹ್ಯಾಪಿ ವೆಡ್ಡಿಂಗ್’ ಮುಂತಾದ ಸಿನಿಮಾಗಳಲ್ಲಿ ಅವರ ನಟಿಸಿದ್ದಾರೆ. 2015ರಲ್ಲಿ ಅವರು ‘ಪಿಂಕ್ ಎಲಿಫೆಂಟ್ ಪಿಕ್ಚರ್ಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದರು. ಇದರ ಹೊಸ ಕಚೇರಿಯನ್ನು ಅವರು ಇತ್ತೀಚೆಗೆ ತೆರೆದಿದ್ದಾರೆ. ನಟಿಯಾಗಿ ಅವರು ಕಮ್‌ಬ್ಯಾಕ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

  • ಬದುಕಲು ಬಿಡಿ: ಹೊಸ ಪೋಸ್ಟ್ ಮೂಲಕ ಡಿವೋರ್ಸ್ ಸುಳಿವು ನೀಡಿದ್ರಾ ಮೆಗಾ ಕುಟುಂಬದ ಪುತ್ರಿ?

    ಬದುಕಲು ಬಿಡಿ: ಹೊಸ ಪೋಸ್ಟ್ ಮೂಲಕ ಡಿವೋರ್ಸ್ ಸುಳಿವು ನೀಡಿದ್ರಾ ಮೆಗಾ ಕುಟುಂಬದ ಪುತ್ರಿ?

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ನಿಹಾರಿಕಾ ಕೊನಿಡೆಲಾ (Niharika Konidela)  ಅವರ ವೈಯಕ್ತಿಕ ಜೀವನ ಸುದ್ದಿಯಲ್ಲಿದೆ. ನಟ ಚಿರಂಜೀವಿ ಮಗಳು ಶ್ರೀಜಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದ ಬಳಿಕ ನಿಹಾರಿಕಾ ವೈವಾಹಿಕ ಬದುಕು ಕೂಡ ಏರುಪೇರಾಗಿದೆ. ಡಿವೋರ್ಸ್ (Divorce)  ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿಹಾರಿಕಾ ‘ಬದುಕಲು ಬಿಡಿ’ ಎಂದು ಇದೀಗ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ ಇದೀಗ ಹಲವರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್

    ನಟಿ ನಿಹಾರಿಕಾ- ಉದ್ಯಮಿ ಚೈತನ್ಯ (Chaitanya) ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು 2020ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಇದೀಗ ಕೆಲ ತಿಂಗಳಿಂದ ಡಿವೋರ್ಸ್ ವದಂತಿ ಕೇಳಿ ಬರುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಇದ್ದರೂ ಈಗ ಹೊಸ ಪೋಸ್ಟ್‌ನಿಂದ ನಟಿ ಸದ್ದು ಮಾಡ್ತಿದ್ದಾರೆ.

    ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ನಿಹಾರಿಕಾ ಶೇರ್ ಮಾಡಿ ವೀಡಿಯೋದಲ್ಲಿ ಒಂದಷ್ಟು ಅಡಿಬರಹ ನೀಡಿದ್ದಾರೆ. ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ಯೋಚಿಸುವುದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ವಿಚಾರವನ್ನ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by Niharika Konidela (@niharikakonidela)

    ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ (Mega Family) ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್‌ಫಾಲೋ ಮಾಡಿದ್ದರು. ಮದುವೆಯ ಫೋಟೋಸ್‌ನ ಇಬ್ಬರೂ ಡಿಲೀಟ್ ಮಾಡಿದ್ದಾರೆ. ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.

  • ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು

    ತೆಲುಗು ನಟ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯದಲ್ಲಿ ಬಿರುಕು

    ಣ್ಣದ ಲೋಕದಲ್ಲಿ ನಟ-ನಟಿಯರಿಗೆ ಮದುವೆ ಆಮೇಲೆ ಡಿವೋರ್ಸ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ ಸುದ್ದಿ ಕೇಳಿ ಬರುತ್ತಿದೆ. ಚಿರಂಜೀವಿ ಸಹೋದರ ನಟ ನಾಗಬಾಬು (Actor Nagababu) ಅವರ ಪುತ್ರಿ ನಿಹಾರಿಕಾ ಬದುಕಿನಲ್ಲಿ ಬಿರುಕಾಗಿದೆ ಎಂಬ ಸುದ್ದಿ ಟಾಲಿವುಡ್ (Tollywood) ಗಲ್ಲಿಯಲ್ಲಿ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ: 65 ಲಕ್ಷ ರೂಪಾಯಿಗೆ ವ್ಯಾನಿಟಿ ವ್ಯಾನ್ ಖರೀದಿಸಿದ ಕಂಗನಾ ರಣಾವತ್

    ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ (Megastar Family) ಮತ್ತೊಂದು ಡಿವೋರ್ಸ್ (Divorce) ಸಮಾಚಾರ ಕೇಳಿ ಬರುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ (Sreeja) ಎರಡನೇ ಮದುವೆಯಲ್ಲಿ ಬಿರುಕು ಉಂಟಾಗಿ ತವರಿಗೆ ಬಂದಿದ್ದಾರೆ. ಈ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ.

    2020ರಲ್ಲಿ ನಾಗಬಾಬು ಪುತ್ರಿ ನಿಹಾರಿಕಾ (Niharika Konidela) ಮತ್ತು ಚೈತನ್ಯ (Chaitanya) ಗುರುಹಿರಿಯರ ಸಮ್ಮುಖದಲ್ಲಿ ಪ್ರೇಮ ವಿವಾಹವಾಗಿದ್ದರು. ಮೆಗಾಸ್ಟಾರ್ ಫ್ಯಾಮಿಲಿ, ಅದ್ದೂರಿಯಾಗಿ ಮಗಳ ಮದುವೆಯನ್ನ ರಾಜಸ್ಥಾನದಲ್ಲಿ ಮಾಡಿದ್ದರು. ಎರಡು ವರ್ಷಗಳಿಂದ ಖುಷಿಯಿಂದ ಜೀವನ ಸಾಗಿಸುತ್ತಿದ್ದ ಜೋಡಿಯ ನಡುವೆ ಬಿರುಕಾಗಿದೆ ಎನ್ನಲಾಗುತ್ತಿದೆ.

    ಡಿವೋರ್ಸ್ ಸುದ್ದಿಗೆ ಪೂರಕವೆಂಬಂತೆ, ಇಬ್ಬರು ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ಷದಿಂದ ಆಕ್ಟೀವ್ ಇಲ್ಲದೇ ಇರೋದು ಅನುಮಾನ ಮೂಡಿಸಿದೆ. ಕಳೆದ 3-4 ತಿಂಗಳಿಂದ ಇಬ್ಬರು ಒಟ್ಟಿಗೆ ಇಲ್ಲ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಮೆಗಾಸ್ಟಾರ್‌ ಕುಟುಂಬ ಪ್ರತಿಕ್ರಿಯೆ ನೀಡುವವರೆಗೂ ಕಾದುನೋಡಬೇಕಿದೆ.

  • ಪ್ರಭಾಸ್ ಜೊತೆ ಮದ್ವೆ- ಮೌನ ಮುರಿದ ನಿಹಾರಿಕಾ

    ಪ್ರಭಾಸ್ ಜೊತೆ ಮದ್ವೆ- ಮೌನ ಮುರಿದ ನಿಹಾರಿಕಾ

    ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್ ಇತ್ತೀಚೆಗೆ ವಿವಾಹದ ವಿಚಾರವಾಗಿ ಸುದ್ದಿಯಾಗುತ್ತಿದ್ದು, ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಜೊತೆ ಸುತ್ತಾಡುವ ಮೂಲಕ ಇವರಿಬ್ಬರು ವಿವಾಹವಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ನಂತರ ಸ್ವತಃ ಅನುಷ್ಕಾ ಶೆಟ್ಟಿ ಅವರೇ ಈ ಕುರಿತು ಪ್ರತಿ ಪ್ರತಿಕ್ರಿಯಿಸಿ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಮೆಗಾ ಫ್ಯಾಮಿಲಿ ಜೊತೆಗೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ.

    ಹೌದು ಅನುಷ್ಕಾ ಶೆಟ್ಟಿ ಬಳಿಕ ಇದೀಗ ಪ್ರಭಾಸ್ ಮದುವೆ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿದ್ದು, ಇದೀಗ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ, ನಟಿ ನಿಹಾರಿಕಾ ಜೊತೆ ಯಂಗ್ ರೆಬೆಲ್ ಸ್ಟಾರ್ ಹೆಸರು ಕೇಳಿ ಬಂದಿದೆ. ಕೆಲ ದಿನಗಳ ಹಿಂದೆ ಟಾಲಿವುಡ್ ಅಂಗಳದಲ್ಲಿ ಈ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಟಿ ನಿಹಾರಿಕಾ, ಆ ರೀತಿ ಏನೂ ಇಲ್ಲ ಎಂದಿದ್ದರು. ಸ್ವತಃ ಮೆಗಾ ಸ್ಟಾರ್ ಚಿರಂಜೀವಿ ಪ್ರತಿಕ್ರಿಯಿಸಿ ಈ ಕುರಿತು ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಇದೆಲ್ಲ ಸುಳ್ಳು ಸುದ್ದಿ ಅಲ್ಲದೆ ನಮ್ಮ ಕುಟುಂಬಕ್ಕೆ ಹೊಸದೇನೂ ಅಲ್ಲ ಬಿಡಿ ಎಂದಿದ್ದರು. ಈಗ ಮತ್ತೆ ಅದೇ ಸುದ್ದಿಗೆ ಜೀವ ಬಂದಿದೆ.

    ಲಾಕ್‍ಡೌನ್ ಹಿನ್ನೆಲೆ ಬುಹುತೇಕ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿದ್ದು, ಅಭಿಮಾನಿಗಳ ಜೊತೆ ಬೆರೆಯುತ್ತಿದ್ದಾರೆ. ಅದೇ ರೀತಿ ನಟಿ ನಿಹಾರಿಕಾ ಸಹ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬ ಪ್ರಭಾಸ್‍ರನ್ನು ನೀವು ವಿವಾಹವಾಗುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ನಿಹಾರಿಕಾ, ಇದೆಲ್ಲ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿದ್ದ ನಿಹಾರಿಕಾ, ‘ಒಕ ಮನಸು’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟರು. ಬಳಿಕ ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ಕಳೆದ ವರ್ಷ ಬಿಡುಗಡೆಯಾದ ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.