ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಪ್ರಸ್ತುತ ನಿರ್ಮಾಪಕಿಯಾಗಿಯೂ ಸದ್ದು ಮಾಡುತ್ತಿದ್ದಾರೆ. ಸದ್ಯ ನಟಿಯ ನಿರ್ಮಾಣದ ‘ಕಮಿಟಿ ಕುರ್ರಾಲು’ ರಿಲೀಸ್‌ಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಅಣ್ಣನ ಗೆಳೆಯನ ಮೇಲಿನ ಪ್ರೀತಿಯ ಬಗ್ಗೆ ನಿಹಾರಿಕಾ ಮಾತನಾಡಿದ್ದಾರೆ.
ನಾಯಕಿಯಾಗಿ ನಿಹಾರಿಕಾಗೆ ಸಕ್ಸಸ್ ಸಿಗಲಿಲ್ಲ. ಬಳಿಕ ದಾಂಪತ್ಯ ಜೀವನ ಕೂಡ ಅವರ ಕೈಹಿಡಿಯಲಿಲ್ಲ. ಈಗ ನಿರ್ಮಾಪಕಿಯಾಗಿ ಟಾಲಿವುಡ್‌ನಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಡಿವೋರ್ಸ್ ಬಳಿಕ ಪ್ರೀತಿಯ ಬಗ್ಗೆನಿಹಾರಿಕಾ ಆಡಿರುವ ಮಾತು ಈಗ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನೂ ಓದಿ:ಬದುಕಿನಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ಮಾತನಾಡಿದ ಸಮಂತಾ
ಸಂದರ್ಶನವೊಂದರಲ್ಲಿ ನಟಿಗೆ ಮಹೇಶ್ ಬಾಬು, ಎನ್‌ಟಿಆರ್, ಪ್ರಭಾಸ್, ಇವರಲ್ಲಿ ಯಾರನ್ನು ಇಷ್ಟಪಡುತ್ತೀರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಕೊಂಚವೂ ಯೋಚಿಸದೆ ಪ್ರಭಾಸ್ ಎಂದು ಹೇಳಿದರು. ನಾನು ಪ್ರಭಾಸ್‌ರನ್ನು ಇಷ್ಟಪಡುತ್ತೇನೆ. ಅವರ ಹಾಸ್ಯ ನನಗಿಷ್ಟ ಎಂದು ನಟಿ ಮಾತನಾಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಸದ್ದು ಮಾಡುತ್ತಿದೆ.
ಅಂದಹಾಗೆ, ರಾಮ್ ಚರಣ್ ಆತ್ಮೀಯ ಸ್ಮೇಹಿತರಲ್ಲಿ ನಿಹಾರಿಕಾ ಕೂಡ ಒಬ್ಬರು. ಅದಲ್ಲದೇ, ವರುಣ್ ತೇಜ್ ಕೂಡ ನನಗೆ ಪ್ರಭಾಸ್ ಎಂದರೆ ಇಷ್ಟ ಅಂತ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.
ಟಾಲಿವುಡ್‌ನ ಮೆಗಾಸ್ಟಾರ್ ಮನೆ ಮಗಳು ನಿಹಾರಿಕಾ (Niharika Konidela) ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ವೈಯಕ್ತಿಕ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಲ್ಲಿದ್ದ ನಿಹಾರಿಕಾ ಇದೀಗ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಿನಿಮಾ ಬಿಟ್ಟು ರಾಜಕೀಯದತ್ತ (Politics) ನಟಿ ಮುಖ ಮಾಡ್ತಾರಾ? ಇಲ್ಲಿದೆ ಮಾಹಿತಿ.
ಮೆಗಾಸ್ಟಾರ್ ಕುಟುಂಬಕ್ಕೆ ರಾಜಕೀಯ (Politics) ಕ್ಷೇತ್ರವೇನು ಹೊಸದಲ್ಲ. ಪವನ್ ಕಲ್ಯಾಣ್, ಚಿರಂಜೀವಿ ಇಬ್ಬರೂ ಕೂಡ ರಾಜಕೀಯದಲ್ಲಿ ಪಳಗಿದ್ದಾರೆ. ಸಿನಿಮಾ- ಪಾಲಿಟಿಕ್ಸ್ ಎರಡರಲ್ಲೂ ಮೆಗಾಸ್ಟಾರ್ ಕುಟುಂಬ ಹೈಲೆಟ್ ಆಗಿದ್ದಾರೆ.
ಡಿವೋರ್ಸ್ (Divorce) ಆದ್ಮೇಲೆ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ನಟಿ ಸಿನಿಮಾ ಬಿಟ್ಟು, ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸದ್ಯದಲ್ಲೇ ನಟಿ ಎಂಪಿ ಎಲೆಕ್ಷನ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಗೆ ನಿಹಾರಿಕಾ ಆಪ್ತರು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬುದು ಸುಳ್ಳು ಸುದ್ದಿ ಎಂದು ಮಾಹಿತಿ ನೀಡಿದ್ದಾರೆ. ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗ್ತಾರೆ. ಆದರೆ ರಾಜಕೀಯಕ್ಕೆ ನಟಿ ಬರುವುದಿಲ್ಲ ಎನ್ನಲಾಗಿದೆ.
ಚಿತ್ರರಂಗದಲ್ಲಿ ಗಟ್ಟಿ ನೆಲೆ ನಿಹಾರಿಕಾಗೆ ಸಿಗಲಿಲ್ಲ. ದಾಂಪತ್ಯದಲ್ಲಿ ಖುಷಿ ಇಲ್ಲ. ಅದಕ್ಕಾಗಿ ವೈವಾಹಿಕ ಜೀವನಕ್ಕೆ ಬ್ರೇಕ್ ಹಾಕಿದ್ದರು. 2 ವರ್ಷಗಳ ದಾಂಪತ್ಯಕ್ಕೆ 2022ರಲ್ಲಿ ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಅಂತ್ಯ ಹಾಡಿದ್ದರು. ಇದನ್ನೂ ಓದಿ:ಮೊದಲ ದಿನವೇ ‘ಆರ್ಟಿಕಲ್ 370’ ಚಿತ್ರಕ್ಕೆ ಅತ್ಯುತ್ತಮ ರೆಸ್ಪಾನ್ಸ್
ನಿಹಾರಿಕಾ 2ನೇ ಮದುವೆ ಬಗ್ಗೆ ಆಗಾಗ ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಆಗಿದ್ದು, ಇದೆ. ಆದರೆ ಈ ಬಗ್ಗೆ ಮೆಗಾ ಫ್ಯಾಮಿಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಹಾಗಾಗಿಯೇ ಚಿತ್ರರಂಗದಲ್ಲಿ ನಟಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ನಿರ್ಮಾಣದ ಜೊತೆ ನಟನೆಯಲ್ಲಿಯೂ ನಿಹಾರಿಕಾ ಗುರುತಿಸಿಕೊಂಡಿದ್ದಾರೆ.
ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಡಿವೋರ್ಸ್ ನಂತರ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. 2ನೇ ಮದುವೆ ಬಗ್ಗೆ ಅಥವಾ ಬಟ್ಟೆಗಳ ವಿಚಾರವಾಗಿ ಹೆಚ್ಚೆಚ್ಚು ಟ್ರೋಲ್ ಆಗ್ತಿದ್ದಾರೆ. ಮತ್ತೆ ಬ್ಲೌಸ್ ಧರಿಸದೇ ಸೀರೆಯುಟ್ಟು ನಿಹಾರಿಕಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಖತ್ ಟ್ರೋಲ್ (Troll) ಆಗ್ತಿದೆ.
ಬ್ಲೌಸ್ ಧರಿಸದೇ ಕೆಂಪು ಬಾರ್ಡರ್ ಇರುವ ಹಸಿರು ಸೀರೆಯುಟ್ಟು ನಟಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಈ ಹಿಂದೆ ಕೂಡ ನೀಲಿ ಬಣ್ಣದ ಸೀರೆಯಲ್ಲಿ ಬ್ಲೌಸ್ ಧರಿಸದೇ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಇದೀಗ ನಟಿಯ ನಯಾ ಲುಕ್ ಟ್ರೋಲ್ ಆಗ್ತಿರೋದ್ದಲ್ಲದೇ ನೆಗೆಟಿವ್ ಕಾಮೆಂಟ್ ಕೂಡ ಹರಿದು ಬರುತ್ತಿದೆ. ಇದನ್ನೂ ಓದಿ:ಮಗನ ಆ ಮಾತು ಮದ್ಯಪಾನ ಬಿಡಲು ಪ್ರೇರಣೆ ನೀಡಿತ್ತು- ಬಾಬಿ ಡಿಯೋಲ್ ಭಾವುಕ
ನಿಹಾರಿಕಾ ಡಿವೋರ್ಸ್ (Divorce) ಬಳಿಕ ನಟನೆ, ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ವೆಬ್ ಸಿರೀಸ್, ಸಿನಿಮಾ ಅಂತ ನಟಿ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
ಅಲ್ಲು ಅರ್ಜುನ್ ನಟನೆಯ ಪುಷ್ಪ 2ನಲ್ಲಿ ನಿಹಾರಿಕಾ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಸ್ಪಷ್ಟನೆ ನೀಡಿಲ್ಲ, ಎಲ್ಲದ್ದಕ್ಕೂ ಕಾದುನೋಡಬೇಕಿದೆ.
ಸೌತ್ ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಸದಾ ಹೊಸ ಬಗೆಯ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಬ್ಲೌಸ್ ಇಲ್ಲದೇ ಸೀರೆಯುಟ್ಟು ನಿಹಾರಿಕಾ, ಕ್ಯಾಮೆರಾ ಮುಂದೆ ಬಂದಿದ್ದಾರೆ. ನಟಿಯ ಬೋಲ್ಡ್ ಪೋಸ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ನೀಲಿ ಬಣ್ಣದ ಸೀರೆಯುಟ್ಟು ಸಿಂಪಲ್ ಆಭರಣ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಎರಡು ಜಡೆಯ ಹೇರ್ ಸ್ಟೈಲ್ ಜೊತೆಗೆ ನಟಿಯ ಲುಕ್ ನೋಡಿ ಅಭಿಮಾನಿಗಳು ಕಳೆದುಹೋಗಿದ್ದಾರೆ. ಮಸ್ತ್ ಆಗಿದೆ ಫೋಟೋಶೂಟ್ ಎಂದು ಬಗೆ ಬಗೆಯ ಕಾಮೆಂಟ್‌ಗಳನ್ನ ಹಾಕಿದ್ದಾರೆ. ಇದನ್ನೂ ಓದಿ:ರಕ್ಷಕ್ ಬುಲೆಟ್‌ಗೆ ಇದ್ಯಂತೆ 5 ಮದುವೆ ಆಗುವ ಯೋಗ
ಚೈತನ್ಯ (Chaitanya) ಜೊತೆಗಿನ ಡಿವೋರ್ಸ್ ನಂತರ ಸಿಂಗಲ್ ಆಗಿ ಲೈಫ್ ಲೀಡ್ ಮಾಡ್ತಿದ್ದಾರೆ. ನಿರ್ಮಾಣದ ಜೊತೆ ಆ್ಯಕ್ಟಿಂಗ್ ಕಡೆ ಕೂಡ ಗಮನ ವಹಿಸುತ್ತಿದ್ದಾರೆ.
ದಾಂಪತ್ಯ ಜೀವನಕ್ಕೆ ನಟಿ ಅಂತ್ಯ ಹಾಡಿದ ಮೇಲೆ 2ನೇ ಮದುವೆ ಆಗುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಸದ್ಯ ಸಹೋದರ ವರುಣ್ ತೇಜ್- ಲಾವಣ್ಯ (Lavanya) ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ವರುಣ್- ಲಾವಣ್ಯ ಜೋಡಿ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.
ಮೆಗಾಸ್ಟಾರ್ ಮನೆ ಮಗಳು ನಿಹಾರಿಕಾ (Niharika Konidela) ಡಿವೋರ್ಸ್ ಆದ ಮೇಲೆ ಸಿನಿಮಾಗಿಂತ ವೈಯಕ್ತಿಕವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಿಹಾರಿಕಾ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ.
ನಿಹಾರಿಕಾ ಜೊತೆ ಮದುವೆ ಮುರಿದು ಬಿದ್ದ ಮೇಲೆ ಚೈತನ್ಯ (Chaitanya) ಸಾಕಷ್ಟು ನೊಂದಿದ್ದರು. ಬಳಿಕ ವೈಯಕ್ತಿಕ ಜೀವನ ಏರುಪೇರಾದ ಕಾರಣ ಪ್ರವಾಸ ಕೈಗೊಂಡಿದ್ದರು. ಮತ್ತೆ ಮದುವೆ ಬೇಡ ಎಂದುಕೊಂಡಿದ್ದ ನಿಹಾರಿಕಾ ಮಾಜಿ ಪತಿ ಈಗ ಹೊಸ ಬಾಳಿಗೆ ಕಾಲಿಡಲು ಸಿದ್ಧರಾಗಿದ್ದಾರಂತೆ.
ಕುಟುಂಬದವರ ಒತ್ತಾಯದ ಮೇರೆಗೆ 2ನೇ ಮದುವೆಯಾಗಲು (Wedding) ಚೈತನ್ಯ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಟಾಲಿವುಡ್ ಗಲ್ಲಿಯಲ್ಲಿ ಗುಸು ಗುಸು ಶುರುವಾಗಿದೆ. ಫ್ಯಾಮಿಲಿಗೆ ಆಪ್ತರಾಗಿರುವ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿಯ ಜೊತೆ ಚೈತನ್ಯ ಮದುವೆ ಎಂದು ಹೇಳಲಾಗುತ್ತಿದೆ. ಅಧಿಕೃತ ಮಾಹಿತಿಗೆ ಕಾಯಬೇಕಿದೆ.
ಕೆಲದಿನಗಳ ಹಿಂದೆ ನಿಹಾರಿಕಾ 2ನೇ ಮದುವೆ ಬಗ್ಗೆ ಸಖತ್ ಟಾಕ್ ಆಗಿತ್ತು. ಮೆಗಾಸ್ಟಾರ್ ಮನೆ ಮಗಳು ಡಿವೋರ್ಸ್ ಬಳಿಕ ಮತ್ತೆ ಮರು ಮದುವೆ ಮಾಡಿಕೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ:ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು
2020ರಲ್ಲಿ ನಿಹಾರಿಕಾ-ಚೈತನ್ಯ ಗುರುಹಿರಿಯರ ಸಮ್ಮುಖದಲ್ಲಿ ರಾಜಸ್ತಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇದಾದ ಬಳಿಕ ಈ ವರ್ಷ ಜೂನ್‌ನಲ್ಲಿ ಇಬ್ಬರು ತಮ್ಮ ಡಿವೋರ್ಸ್ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಈಗ ನಿಹಾರಿಕಾ ಸಂಪೂರ್ಣವಾಗಿ ನಟನೆ, ನಿರ್ಮಾಣದತ್ತ ಮುಖ ಮಾಡಿದ್ದಾರೆ.
ಮೆಗಾಸ್ಟಾರ್ (Megastar) ಮನೆಮಗಳು ನಿಹಾರಿಕಾ (Niharika) ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕ್ಯಾರೆ ಎನ್ನದೇ ಮಸ್ತ್ ಫೋಟೋಶೂಟ್‌ನಲ್ಲಿ ನಟಿ ಮಿಂಚಿದ್ದಾರೆ. ಕ್ಯಾಮೆರಾ ಕಣ್ಣಿಗೆ ನಟಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಚೈತನ್ಯ (Chaitanya) ಜೊತೆಗಿನ ಡಿವೋರ್ಸ್ ನಂತರ ನಟಿ ಫ್ರಿ ಬರ್ಡ್ ಆಗಿದ್ದಾರೆ. ಸಖತ್ ಟ್ರಾವೆಲ್ ಮಾಡ್ತಿದ್ದಾರೆ. ಜೊತೆಗೆ ಬಗೆ ಬಗೆಯ ಫೋಟೋಶೂಟ್‌ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಈಗ ಹಳದಿ ಬಣ್ಣದ ಉಡುಗೆಯಲ್ಲಿ ನಿಹಾರಿಕಾ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಸ್ಲೀವ್‌ಲೆಸ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಸ್ ನೋಡ್ತಿದ್ದಂತೆ ನೆಟ್ಟಿಗರು, ನಿಮ್ಮ ಜೀವನದ ಬಗ್ಗೆ ನಿಮಗೆ ಚಿಂತೆನೇ ಇಲ್ವಾ ಅಂತಾ ನಿಹಾರಿಕಾಗೆ ಪ್ರಶ್ನೆ ಮಾಡಿದ್ದಾರೆ.
ದಾಂಪತ್ಯಕ್ಕೆ (Wedding) ಅಂತ್ಯ ಹಾಡಿದ ಮೇಲೆ ಸಮಂತಾರಂತೆ ನಿಹಾರಿಕಾ ಕೂಡ ಮತ್ತೆ ಸಿನಿಮಾ, ನಟನೆ, ನಿರ್ಮಾಣ ಅಂತಾ ಕೆರಿಯರ್ ಕಡೆ ಗಮನ ಕೊಡಲು ನಿರ್ಧರಿಸಿದ್ದಾರೆ. ಮದುವೆಗೂ ಮುನ್ನ ‘ಒಕ ಮನಸ್ಸು’ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ನಿಹಾರಿಕಾ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ
‘ಸೂರ್ಯಕಾಂತಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ನಾಯಕಿಯಾಗಿ ಲೈಮ್‌ಲೈಟ್‌ನಲ್ಲಿ ಮಿಂಚಲು ನಿಹಾರಿಕಾ ಮನಸ್ಸು ಮಾಡಿದ್ದಾರಂತೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿರೋ ನಿಹಾರಿಕಾ ಈಗ ಮತ್ತೆ ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಲು ರೆಡಿಯಾಗಿದ್ದಾರೆ.
ಈ ನಿಟ್ಟಿನಲ್ಲಿ ಅವರು ಯುವ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೆ ಕಥೆ ಸಿದ್ಧಗೊಂಡಿದ್ದರೂ ನಿಹಾರಿಕಾ ನಾಯಕಿಯಾಗಿ ಎಂಟ್ರಿ ಕೊಡಲು ಮೆಗಾ ಫ್ಯಾಮಿಲಿ ಒಪ್ಪುತ್ತಿಲ್ಲ ಎಂಬುದು ಒಳಗಿನ ಮಾತು. ಸಿನಿಮಾ ವಿಚಾರದಲ್ಲಿ ನಿಹಾರಿಕಾ ನಿರ್ಧಾರಕ್ಕೆ ಮೆಗಾ ಫ್ಯಾಮಿಲಿ ನೋ ಹೇಳುತ್ತಿದೆ. ಆದರೆ ನಿಹಾರಿಕಾ ಮತ್ತೆ ನಾಯಕಿಯಾಗಿ ಸಿನಿಮಾಗೆ ಬರುವುದು ಮೆಗಾ ಫ್ಯಾಮಿಲಿಗೆ ಇಷ್ಟವಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ನಟಿಯ ಕುಟುಂಬ ನೋ ಅಂದ್ರು ಕೂಡ ನಿಹಾರಿಕಾ ಈ ವಿಚಾರದಲ್ಲಿ ಸಖತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದೇ ತನ್ನದೇ ನಿರ್ಧಾರ ಅಂತಿಮ ಅಂತಾ ನಟಿ ಹಠ ಮಾಡ್ತಿದ್ದಾರೆ ಎಂದು ಗುಸು ಗುಸು ಸುದ್ದಿ ಕೆಲದಿನಗಳಿಂದ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಅವರು ಪತಿ ಚೈತನ್ಯ ಅವರಿಗೆ ಡಿವೋರ್ಸ್ ನೀಡಿ ಈಗ ಸಿಂಗಲ್ ಲೈಫ್ ಲೀಡ್ ಮಾಡ್ತಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ನಿಹಾರಿಕಾ 2ನೇ ಮದುವೆ ಬಗ್ಗೆ ಸಖತ್ ಚರ್ಚೆ ನಡೆಯುತ್ತಿದೆ. ತೆಲುಗಿನ ಹೀರೋ ತರುಣ್ ಜೊತೆ ನಟಿ ಮದುವೆಯಾಗುತ್ತಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಇದು ನಿಜಾನಾ? ಈ ಬಗ್ಗೆ ತರುಣ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಈ ನಟಿಯರಿಂದ ರಶ್ಮಿಕಾ, ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಆಫರ್‌ಗೆ ಬಿತ್ತು ಕತ್ತರಿ
ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನ ಪ್ರೀತಿಸಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ನಿಹಾರಿಕಾ ಅವರ ಮದುವೆ ಇಡೀ ಮೆಗಾಸ್ಟಾರ್ ಕುಟುಂಬದ ಬೆಂಬಲ ಮತ್ತು ಹಾರೈಕೆಯಿತ್ತು. ಆದರೆ ನಿಹಾರಿಕಾ ದಾಂಪತ್ಯ, ಮದುವೆಯಾಗಿ ಎರಡೂವರೆ ವರ್ಷಕ್ಕೆ ಅಂತ್ಯವಾಯಿತು. ಚೈತನ್ಯಗೆ ಡಿವೋರ್ಸ್ ನೀಡಿ ಮತ್ತೆ ಸಿನಿಮಾದತ್ತ ನಟಿ ಮುಖ ಮಾಡಿದ್ದಾರೆ.
ವೈಯಕ್ತಿಕ ಜೀವನ ಸರಿ ಇಲ್ಲದೇ ಇರುವ ಕಾರಣ, ಮತ್ತೆ ಬೆಳ್ಳಿಪರದೆಯಲ್ಲಿ ನಟಿ ಮಿಂಚ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ನಿಹಾರಿಕಾ ನಿರ್ಧಾರಕ್ಕೆ ಕುಟುಂಬದ ಸಹಮತವಿಲ್ಲ. ಆದರೂ ಅವರ ವಿರುದ್ಧ ನಿಂತು ನಿಹಾರಿಕಾ ನಾಯಕಿಯಾಗಲು ತಯಾರಿ ಮಾಡ್ತಿದ್ದಾರೆ ಎನ್ನಲಾಗಿತ್ತು. ಇದೀಗ ಈ ಸುದ್ದಿ ನಡುವೆ ಮತ್ತೊಂದು ಸುದ್ದಿ ಸೌಂಡ್ ಮಾಡ್ತಿದೆ. ತೆಲುಗಿನ ನಟ ತರುಣ್ (Actor Tarun) ಜೊತೆ ನಿಹಾರಿಕಾ 2ನೇ ಮದುವೆಯಾಗಲು (Wedding) ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವಿಚಾರ ನಿಜಾನಾ ಎಂಬುದರ ಬಗ್ಗೆ ತರುಣ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ಸಿದ್ದರಾಮಯ್ಯ ಬಯೋಪಿಕ್: ಪಾರ್ಟ್ 1 ಚಿತ್ರಕ್ಕೆ ನಿರೂಪ್ ಭಂಡಾರಿ ಹೀರೋ
ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮಿಂಚಿದ್ದ ನಟ ತರುಣ್ ಈಗ ಬ್ಯುಸಿನೆಸ್ ಫೀಲ್ಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಇತ್ತೀಚಿಗೆ ತರುಣ್ ತಾಯಿ ರೋಜಾ ಅವರು ನನ್ನ ಮಗ ಮದುವೆಯಾಗುತ್ತಾನೆ. ದೊಡ್ಮನೆಯ ಹುಡುಗಿಯನ್ನೇ ಮದುವೆಯಾಗುತ್ತಾರೆ ಎಂದು ಮಾತನಾಡಿದ್ದರು. ಹಾಗಾಗಿ ನಿಹಾರಿಕಾ ಜೊತೆ ತರುಣ್ ಹೆಸರು ಕೇಳಿ ಬಂದಿತ್ತು.
ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ನಟ ಪ್ರತಿಕ್ರಿಯಿಸಿ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು, ನಿಹಾರಿಕಾ ಜೊತೆ ನಾನು ಮದುವೆಯಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಳಿಕ ನನ್ನ ಮದುವೆ ಬಗ್ಗೆ ಮುಂದಿನ ದಿನಗಳಲ್ಲಿ ನಾನೇ ತಿಳಿಸುತ್ತೇನೆ ಎಂದು ತರುಣ್ ರಿಯಾಕ್ಟ್ ಮಾಡಿದ್ದಾರೆ.
ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಕೊನಿಡೆಲಾ- ಚೈತನ್ಯ ಜಿವಿ ಡಿವೋರ್ಸ್ ಆಗಿರೋದನ್ನ ಖಚಿತಪಡಿಸಿದ್ದಾರೆ. ಕೆಲ ತಿಂಗಳುಗಳಿಂದ ನಿಹಾರಿಕಾ (Niharika) ದಾಂಪತ್ಯ ಬದುಕು ಸರಿಯಿಲ್ಲ ಎಂಬ ಸುದ್ದಿ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈ ಎಲ್ಲಾ ಸುದ್ದಿಗೂ ನಟಿ ನಿಹಾರಿಕಾ, ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಉತ್ತರಿಸಿದ್ದಾರೆ. ಪತಿ ಜೊತೆ ಬೇರೆ ಆಗಿರೋದ್ದರ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಮೆಗಾಸ್ಟಾರ್ ಮನೆಯ ಮುದ್ದಿನ ಮಗಳು ನಿಹಾರಿಕಾ ಅವರ ಮದುವೆಯನ್ನ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮಾಡಿಕೊಟ್ಟಿದ್ದರು. ಹಲವು ವರ್ಷಗಳ ಪ್ರೀತಿ, ಎರಡೂವರೆ ವರ್ಷದ ದಾಂಪತ್ಯಕ್ಕೆ ಈಗ ಬ್ರೇಕ್ ಬಿದ್ದಿದೆ. ನಿಹಾರಿಕಾ- ಚೈತನ್ಯ ಇಬ್ಬರು ಡಿವೋರ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು- ಚೈತನ್ಯ ಬೇರೆಯಾಗಬೇಕು ಎಂದು ನಿರ್ಧರಿಸಿದ್ದೇವೆ. ಇಂತಹ ಕಠಿಣ ಸಂದರ್ಭದಲ್ಲಿ ನಮ್ಮ ಜೊತೆಯಾಗಿರೋದ್ದಕ್ಕೆ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ಹೊಸ ಜೀವನಕ್ಕೆ ಕಾಲಿಡಲು ನಮ್ಮ ಪ್ರೈವೆಸಿಯನ್ನ ಗೌರವಿಸಿ ಎಂದು ನಟಿ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಈ ಮೂಲಕ ಕಾಮೆಂಟ್ ಬಾಕ್ಸ್ ಆಫ್ ಮಾಡಿ, ಡಿವೋರ್ಸ್ ಆಗಿರೋದನ್ನ ನಟಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:‘ತೇಜಸ್’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಿದ ಕಂಗನಾ
ಟಾಲಿವುಡ್‌ನ (Tollywood) ನಟ ಚಿರಂಜೀವಿ (Megastar Chiranjeevi) ಅವರ ಸಹೋದರ, ನಟ ನಾಗ ಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಈ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ತಿಳಿಸಿರಲಿಲ್ಲ. ಇದೀಗ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ನಿಹಾರಿಕಾ- ಚೈತನ್ಯ(Chaitanya) ದಾಂಪತ್ಯ ಬದುಕು ಅಂತ್ಯಗೊಂಡಿದ್ದು, ಈಗಾಗಲೇ ಇಬ್ಬರಿಗೂ ಕೌಟುಂಬಿಕ ನ್ಯಾಯಾಲಯವು ಡಿವೋರ್ಸ್‌ಗೆ ಮಂಜೂರು ನೀಡಿದೆ. ಆದರೆ ಈ ಡಿವೋರ್ಸ್‌ಗೆ ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ.
ನಟಿ ನಿಹಾರಿಕಾ ಅವರ ಮದುವೆಯು ಪ್ರಭಾಕರ್ ರಾವ್ ಅವರ ಪುತ್ರ ಚೈತನ್ಯ ಜೊನ್ನಲಗಡ್ಡ ಅವರ ಜೊತೆ 2020ರ ಡಿಸೆಂಬರ್ 9ರಂದು ನಡೆದಿತ್ತು. ರಾಜಸ್ಥಾನದ ಉದಯಪುರದಲ್ಲಿನ ಒಬೆರಾಯ್ ಉದಯ್ ವಿಲಾಸ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇಡೀ ಮೆಗಾ ಸ್ಟಾರ್ ಕುಟುಂಬವು ಮದುವೆಗೆ ಹಾಜರಾಗಿತ್ತು. ವೈಭವದಿಂದ ನಡೆದಿತ್ತು. ಈ ಮದುವೆಯಲ್ಲಿ ಇಡೀ ಕುಟುಂಬವು ಹಾಡಿ ಕುಣಿದಿತ್ತು. ಆದರೆ ನಿಹಾರಿಕಾ ಅವರ ಮದುವೆ ಕೇವಲ ಎರಡೂವರೆ ವರ್ಷಗಳಲ್ಲಿ ಮುರಿದುಬಿದ್ದಿರುವುದು ಬೇಸರದ ಸಂಗತಿ.
ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ನಿಹಾರಿಕಾ ಡಿವೋರ್ಸ್ ವಿಷಯವು ಸಾಕಷ್ಟು ಚರ್ಚೆ ಆಗಿತ್ತು. ನಿಹಾರಿಕಾ ಮತ್ತು ಚೈತನ್ಯ ಇನ್ಸ್ಟಾಗ್ರಾಂ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ನಿಹಾರಿಕಾ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಅತ್ತ ಚೈತನ್ಯ ಅವರ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಹಾರಿಕಾ ಜೊತೆಗಿದ್ದ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಯು ಎಲ್ಲ ಕಡೆ ಹಬ್ಬಿಕೊಂಡಿತ್ತು. ಇದೀಗ ವದಂತಿ ನಿಜವಾಗಿದೆ.
ಇದರ ಜೊತೆ ಮೆಗಾ ಫ್ಯಾಮಿಲಿ ನಟ ಪವನ್ ಕಲ್ಯಾಣ್ ಮೂರನೇ ಮದುವೆಯೂ ಮುರಿದುಬಿತ್ತಾ? ಹೀಗೊಂದು ಅನುಮಾನ ಕಾಡುತ್ತಿದೆ. ಟಾಲಿವುಡ್ ಸ್ಟಾರ್ ಪವನ್ ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿದ್ದು, ಮೂರನೇ ಮದುವೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೋಡಿದರೆ ಮೂರನೇ ಪತ್ನಿಗೂ ಡಿವೋರ್ಸ್ ನೀಡಿದ್ದಾರಾ ಎನ್ನುವ ಗುಮಾನಿ ಎದ್ದಿದೆ. ಒಟ್ನಲ್ಲಿ ಪವನ್ ಕಲ್ಯಾಣ್, ಶ್ರೀಜಾರಂತೆಯೇ ನಿಹಾರಿಕಾ ಕೂಡ ದಾಂಪತ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ (Divorce) ಆಗಿದೆ. ಚಿರಂಜೀವಿ ಮನೆ ಮಗಳು ನಿಹಾರಿಕಾ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ. ಹಲವು ವರ್ಷಗಳ ಪ್ರೀತಿಗೆ ನಟಿ ಡಿವೋರ್ಸ್ ನೀಡುವ ಮೂಲಕ ಅಂತ್ಯ ಹಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪುತ್ರಿ ಶ್ರೀಜಾ ದಾಂಪತ್ಯಕ್ಕೆ ಬ್ರೇಕ್ ಬಿದ್ದ ಬೆನ್ನಲ್ಲೇ ನಿಹಾರಿಕಾ (Niharika) ಕೂಡ ಡಿವೋರ್ಸ್ ಹಾದಿ ಹಿಡಿದಿದ್ದಾರೆ.
ಟಾಲಿವುಡ್‌ನ ನಟ ಚಿರಂಜೀವಿ ಅವರ ಸಹೋದರ, ನಟ ನಾಗ ಬಾಬು ಪುತ್ರಿ ನಿಹಾರಿಕಾ ಕೊನಿಡೆಲಾ ಅವರ ದಾಂಪತ್ಯಕ್ಕೆ ಬ್ರೇಕ್ ಬಿದ್ದಿದೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಈ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ತಿಳಿಸಿರಲಿಲ್ಲ. ಇದೀಗ ಸಿಕ್ಕಿರುವ ಅಧಿಕೃತ ಮಾಹಿತಿ ಪ್ರಕಾರ, ನಿಹಾರಿಕಾ- ಚೈತನ್ಯ ಜೊನ್ನಲಗಡ್ಡ ದಾಂಪತ್ಯ ಬದುಕು ಅಂತ್ಯಗೊಂಡಿದ್ದು, ಈಗಾಗಲೇ ಇಬ್ಬರಿಗೂ ಕೌಟುಂಬಿಕ ನ್ಯಾಯಾಲಯವು ಡಿವೋರ್ಸ್‌ಗೆ ಮಂಜೂರು ನೀಡಿದೆ ಎನ್ನಲಾಗಿದೆ. ಆದರೆ ಈ ಡಿವೋರ್ಸ್‌ಗೆ ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ.
ನಟಿ ನಿಹಾರಿಕಾ ಅವರ ಮದುವೆಯು ಪ್ರಭಾಕರ್ ರಾವ್ ಅವರ ಪುತ್ರ ಚೈತನ್ಯ ಜೊನ್ನಲಗಡ್ಡ ಅವರ ಜೊತೆ 2020ರ ಡಿಸೆಂಬರ್ 9ರಂದು ನಡೆದಿತ್ತು. ರಾಜಸ್ಥಾನದ ಉದಯಪುರದಲ್ಲಿನ ಒಬೆರಾಯ್ ಉದಯ್ ವಿಲಾಸ್‌ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಇಡೀ ಮೆಗಾ ಸ್ಟಾರ್ ಕುಟುಂಬವು ಮದುವೆಗೆ ಹಾಜರಾಗಿತ್ತು. ವೈಭವದಿಂದ ನಡೆದಿಂದ ಮದುವೆಯಲ್ಲಿ ಇಡೀ ಕುಟುಂಬವು ಹಾಡಿ ಕುಣಿದಿತ್ತು. ಆದರೆ ನಿಹಾರಿಕಾ ಅವರ ಮದುವೆ ಕೇವಲ ಎರಡೂವರೆ ವರ್ಷಗಳಲ್ಲಿ ಮುರಿದುಬಿದ್ದಿರುವುದು ಬೇಸರದ ವಿಷ್ಯವಾಗಿದೆ. ಇದನ್ನೂ ಓದಿ:3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?
ನಿಹಾರಿಕಾ ಮತ್ತು ಚೈತನ್ಯ ಪರಸ್ಪರ ಒಪ್ಪಿಗೆಯೊಂದಿಗೆ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದರು. ನಿಹಾರಿಕಾ ಡಿವೋರ್ಸ್ ವಿಷಯವು ಸಾಕಷ್ಟು ಚರ್ಚೆ ಆಗಿತ್ತು. ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ನಿಹಾರಿಕಾ ಅವರು ಮದುವೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ರು. ಅತ್ತ ಚೈತನ್ಯ ಅವರ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಿಹಾರಿಕಾ ಜೊತೆಗಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಅನುಮಾನವನ್ನು ಹುಟ್ಟುಹಾಕಿತ್ತು. ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ವದಂತಿಯು ಎಲ್ಲ ಕಡೆ ಹಬ್ಬಿಕೊಂಡಿತ್ತು. ಇದೀಗ ವದಂತಿ ನಿಜವಾಗಿದೆ.
ಇದರ ಜೊತೆ ಮೆಗಾ ಫ್ಯಾಮಿಲಿ ನಟ ಪವನ್ ಕಲ್ಯಾಣ್ (Pawan Kalyan) ಮೂರನೇ ಮದುವೆಯೂ ಮುರಿದುಬಿತ್ತಾ? ಹೀಗೊಂದು ಅನುಮಾನ ಕಾಡುತ್ತಿದೆ. ಟಾಲಿವುಡ್ ಸ್ಟಾರ್ ಪವನ್ ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿದ್ದು, ಮೂರನೇ ಮದುವೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೋಡಿದರೆ ಮೂರನೇ ಪತ್ನಿಗೂ ಡಿವೋರ್ಸ್ ನೀಡಿದ್ದಾರಾ ಎನ್ನುವ ಗುಮಾನಿ ಎದ್ದಿದೆ. ಒಟ್ನಲ್ಲಿ ಪವನ್ ಕಲ್ಯಾಣ್, ಶ್ರೀಜಾರಂತೆಯೇ ನಿಹಾರಿಕಾ ಕೂಡ ದಾಂಪತ್ಯದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ಮೆಗಾಸ್ಟಾರ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಜೂನ್ 9ಕ್ಕೆ ವರುಣ್ ತೇಜ್- ಲಾವಣ್ಯ(Lavanya) ಎಂಗೇಜ್‌ಮೆಂಟ್ ಅದ್ದೂರಿಯಾಗಿ ನಡೆಯಿತು. ಕುಟುಂಬಸ್ಥರು, ಆಪ್ತರಿಗಷ್ಟೇ ಇದ್ದ ಆಹ್ವಾನದಲ್ಲಿ ನಟ ಚಿರಂಜೀವಿ ಅವರ ಅಳಿಯ ಚೈತನ್ಯ ಜಿವಿ ಗೈರಾಗಿದ್ದು, ನಿಹಾರಿಕಾ(Niharika) ಡಿವೋರ್ಸ್ (Divorce) ವಿಚಾರಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.
ಮೆಗಾ ಪ್ರಿನ್ಸ್ ವರುಣ್-ಲಾವಣ್ಯ ಮೊದಲು ಭೇಟಿಯಾಗಿದ್ದು, 2016ರಲ್ಲಿ ಬಳಿಕ 2017ರಲ್ಲಿ ಇಬ್ಬರು ಮಿಸ್ಟರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದ ಶೂಟಿಂಗ್ ವೇಳೆ ವರುಣ್ ತೇಜ್, ಲಾವಣ್ಯ ತ್ರಿಪಾಠಿ ಇಬ್ಬರೂ ಕ್ಲೋಸ್ ಆಗಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದವರು ಬರಬರುತ್ತಾ ಪ್ರೀತಿಯಲ್ಲಿ ಬಿದ್ದಿದ್ದರು. ಇದನ್ನೂ ಓದಿ:ಮೊದಲ ವರ್ಷದ ವಿವಾಹ ಸಂಭ್ರಮದಲ್ಲಿ ‘ಸ್ವಯಂವಿವಾಹಿತೆ’ ಕ್ಷಮಾ ಬಿಂದು
ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ, ಅದು ಪಬ್ಲಿಕ್ ಆಗದಂತೆ ನೋಡಿಕೊಂಡಿದ್ದಾರೆ. ಹಲವು ವರ್ಷಗಳವರೆಗೂ ಇಬ್ಬರೂ ಡೇಟಿಂಗ್ ಮಾಡುತ್ತಿರುವ ವಿಷಯ ಗೊತ್ತೇ ಇರಲಿಲ್ಲ. ಆದರೆ, ಅಂತರಿಕ್ಷಂ ಸಿನಿಮಾದ ವೇಳೆ ಇಬ್ಬರ ಬಗ್ಗೆ ಮೊದಲ ಬಾರಿಗೆ ಗಾಳಿಸುದ್ದಿ ಹಬ್ಬಿತ್ತು. ಅಲ್ಲಿಂದ ಎಂಗೇಜ್‌ಮೆಂಟ್ ಆಗುವವರೆಗೂ ಪ್ರೀತಿಯ ಬಗ್ಗೆ ಎಲ್ಲೂ ಈ ಜೋಡಿ ರಿಯಾಕ್ಟ್ ಮಾಡಿರಲಿಲ್ಲ. ಇದೀಗ ವರುಣ್-ಲಾವಣ್ಯ ಅವರ ಎಂಗೇಜ್‌ಮೆಂಟ್‌ನಲ್ಲಿ ನಿಹಾರಿಕಾ ಪತಿ ಚೈತನ್ಯ ಗೈರಾಗಿರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.
ಈ ದಿನಕ್ಕಾಗಿ ಕಾಯುತ್ತಿದ್ದೆ, ನನ್ನ ಕುಟುಂಬಕ್ಕೆ ಸ್ವಾಗತ ಅಂತಾ ಸಹೋದರ ವರುಣ್ (Varun Tej) ಮತ್ತು ಭಾವಿ ಅತ್ತಿಗೆ ಜೊತೆ ಖುಷಿಯಿಂದ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ನಿಹಾರಿಕಾ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಅಪ್‌ಲೋಡ್ ಮಾಡ್ತಿದ್ದಂತೆ ಚೈತನ್ಯ ಎಲ್ಲಿ ಎಂದು ನಟಿ ಕಾಮೆಂಟ್ಸ್‌ಗಳ ಮೂಲಕ ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ.
ವರುಣ್ ನಿಶ್ಚಿತಾರ್ಥದ ಸಂಭ್ರಮದಲ್ಲಿ ಚೈತನ್ಯ ಮಿಸ್ಸಿಂಗ್ ಆಗಿರೋದು ನಿಹಾರಿಕಾ ಜೊತೆಗಿನ ಡಿವೋರ್ಸ್ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಮೂಲಗಳ ಪ್ರಕಾರ, ನಿಹಾರಿಕಾ- ಚೈತನ್ಯ (Chaitanya) ಡಿವೋರ್ಸ್ ಪಡೆದಿರುವುದು ನಿಜ. ಹಾಗಾಗಿ ಇದೀಗ ನಿಹಾರಿಕಾ, ಆಕ್ಟಿಂಗ್-ನಿರ್ಮಾಣ ಅಂತಾ ಬ್ಯುಸಿಯಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದಲ್ಲಿ ಮಕ್ಕಳಾದ ಶ್ರೀಜಾ, ನಿಹಾರಿಕಾ ಡಿವೋರ್ಸ್ ವಿಚಾರ ಸದ್ಯ ಟಾಲಿವುಡ್ ಹಾಟ್ ಟಾಪಿಕ್ ಆಗಿದೆ.