Tag: ನಿಷೇಧ

  • ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸವರ್ಷ ಆಚರಣೆಗೆ ಅವಕಾಶ ನೀಡ್ಬಾರ್ದು- ಪೊಲೀಸರಿಗೆ ದೂರು

    ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸವರ್ಷ ಆಚರಣೆಗೆ ಅವಕಾಶ ನೀಡ್ಬಾರ್ದು- ಪೊಲೀಸರಿಗೆ ದೂರು

    ಬೆಂಗಳೂರು: ನಗರದ ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದು ನಗರ ಪೊಲೀಸ್ ಆಯಕ್ತರಿಗೆ ಹಿಂದೂ ಜಾಗರಣ ವೇದಿಕೆ ದೂರು ಕೊಟ್ಟಿದ್ದಾರೆ.

    ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆ ವೇಳೆ ಅಹಿತಕರ ಘಟನೆಗಳು ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತೆ. ಅಹಿತಕರ ಘಟನೆಗಳು ನಡೆದರೆ ರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜ್ ಆಗುತ್ತದೆ. ಹಾಗಾಗಿ ಹೊಸ ವರ್ಷ ಆಚರಣೆಗೆ ಅವಕಾಶ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ.

    ಇದರ ಜೊತೆಗೆ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಎರಡು ರಸ್ತೆಯಲ್ಲಿ ಮದ್ಯ ಮಾರಾಟವನ್ನು ನಿಷೇಧ ಮಾಡುವಂತೆ ಒತ್ತಾಯಿಸಿದ್ದಾರೆ. ಹೊಸ ವರ್ಷ ಎಂದು ಯುವಕರು ಕುಡಿದ ಮತ್ತಿನಲ್ಲಿ ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದ ಘಟನೆ ಈ ಹಿಂದೆ ನಡೆದಿದೆ. ಹಾಗಾಗಿ ಮದ್ಯ ಮಾರಾಟ ನಿಷೇಧಿಸಬೇಕು ಹಾಗೂ ಹೊಸ ವರ್ಷ ಆಚರಣೆಗೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗಳೂರಿನಲ್ಲಿ 3 ದಿನ ಮದ್ಯ ಮಾರಾಟ ನಿಷೇಧ

    ಚಿಕ್ಕಮಗಳೂರಿನಲ್ಲಿ 3 ದಿನ ಮದ್ಯ ಮಾರಾಟ ನಿಷೇಧ

    ಚಿಕ್ಕಮಗಳೂರು: 3 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗದೆ.

    ಡಿಸೆಂಬರ್ 19ರಿಂದ 22ರ ವರೆಗೆ ಚಿಕ್ಕಮಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಅಂದರೆ ಗುರುವಾರದಿಂದ ಕಾಫಿನಾಡಲ್ಲಿ 3 ದಿನ ದತ್ತ ಜಯಂತಿ ಸಂಭ್ರಮಿಸಲಾಗುತ್ತದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ.

    ದತ್ತಜಯಂತಿ ಹಿನ್ನೆಲೆಯಲ್ಲಿ ಗಿರಿಶ್ರೇಣಿ ನೋಡಲು ಬರುವ ಪ್ರವಾಸಿಗರಿಗೂ ಜಿಲ್ಲಾಡಳಿತ ಮೂರು ದಿನಗಳ ಕಾಲ ನಿರ್ಬಂಧ ಹೇರಿದೆ. ಹೀಗಾಗಿ ಈ ಮೂರು ದಿನಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರವೇಶಕ್ಕೆ ಅನುಮತಿ ಇಲ್ಲ.

    ವಿ.ಎಚ್.ಪಿ, ಬಜರಂಗದಳ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ದತ್ತ ಜಯಂತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದತ್ತ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದೆ. ದತ್ತ ಜಯಂತಿ ಪ್ರಯುಕ್ತ ದತ್ತ ಪೀಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಫ್ಲೈಓವರ್​ನಲ್ಲಿ ಭಾರೀ ವಾಹನ ಓಡಾಟ ನಿಷೇಧ- ಹೆಚ್ಚಾಯ್ತು ಟ್ರಾಫಿಕ್

    ಎಲೆಕ್ಟ್ರಾನಿಕ್ ಸಿಟಿ ಎಲಿವೆಟೆಡ್ ಫ್ಲೈಓವರ್​ನಲ್ಲಿ ಭಾರೀ ವಾಹನ ಓಡಾಟ ನಿಷೇಧ- ಹೆಚ್ಚಾಯ್ತು ಟ್ರಾಫಿಕ್

    ಬೆಂಗಳೂರು: ನಗರದ ಹೊಸೂರು ಮುಖ್ಯರಸ್ತೆಯ ಎಲಿವೆಟೆಡ್ ಫ್ಲೈಓವರ್ ದುರಸ್ತಿ ಮಾಡುವ ಕಾರಣ ಸೋಮವಾರ ಮಧ್ಯರಾತ್ರಿಯಿಂದ ಭಾರೀ ವಾಹನ, ಲಾರಿ, ಬಸ್‍ಗಳ ಸಂಚಾರಕ್ಕೆ ನಿಷೇಧ ಹೇರಿದ್ದು, ಇದರಿಂದಾಗಿ ಹೊಸೂರು ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಹೆಚ್ಚಾಗಿದೆ.

    ಹೊಸೂರು ಮುಖ್ಯ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ 8 ವರ್ಷಗಳ ಹಿಂದೆ ಸುಮಾರು 9 ಕಿಲೋಮೀಟರ್ ಉದ್ದದ ಸಿಗ್ನಲ್ ರಹಿತ ಎಲಿವೆಟೆಡ್ ಫ್ಲೈ ಓವರ್ ನಿರ್ಮಿಸಲಾಗಿತ್ತು. ಇದರಿಂದಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಟಿ, ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಿತ್ತು.

    ಐಟಿ ಕಂಪನಿಗಳು ಬಿಎಂಟಿಸಿಯಿಂದ ಗುತ್ತಿಗೆ ಆಧಾರದಲ್ಲಿ ಬಸ್ ಗಳನ್ನು ಪಡೆದು ಉದ್ಯೋಗಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಿತ್ತು. ಇದೀಗ ನಿರ್ವಹಣೆಯ ಹಿನ್ನೆಲೆ ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್(ಬಿಇಟಿಎಲ್)ಭಾರೀ ವಾಹನಗಳಿಗೆ ಸುಮಾರು 2 ತಿಂಗಳ ಕಾಲ ನಿರ್ಬಂಧ ವಿಧಿಸಿರುವ ಹಿನ್ನೆಲೆ ಇದರ ಬಿಸಿ ಟೆಕ್ಕಿಗಳಿಗೆ ತಟ್ಟಿದ್ದು, ದುರಸ್ತಿ ಕಾರ್ಯ ಮುಗಿಯುವವರೆಗೂ ತಮ್ಮ ದ್ವಿಚಕ್ರ ವಾಹನ, ಕಾರ್ ಗಳಲ್ಲಿ ಸಂಚರಿಸಲು ಮುಂದಾಗಿದ್ದಾರೆ.

    ತಮಿಳುನಾಡಿನಿಂದ ಬೆಂಗಳೂರಿಗೆ ಬರುವ ಸಾರಿಗೆ ಬಸ್‍ಗಳು ಕೂಡ ನಿರ್ಬಂಧದ ಬಿಸಿ ತಟ್ಟಿದ್ದು, ಇದರಿಂದಾಗಿ ಸಿಲ್ಕ್ ಬೋರ್ಡ್‍ನಿಂದ ಎಲೆಕ್ಟ್ರಾನಿಕ್ ಸಿಟಿವರಗೆ ಇಂದಿನಿಂದ ಹೆಚ್ಚಿನ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಇಂದು ಸಂಜೆ 6ಗಂಟೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಓವರ್ ಮೇಲೆ ಬೃಹತ್ ವಾಹನ ನಿಷೇಧ

    ಇಂದು ಸಂಜೆ 6ಗಂಟೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಓವರ್ ಮೇಲೆ ಬೃಹತ್ ವಾಹನ ನಿಷೇಧ

    ಬೆಂಗಳೂರು: ಇಂದು ಸಂಜೆ 6 ಗಂಟೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೇಡ್ ಫ್ಲೈ ಓವರ್ ಮೇಲೆ ಬಸ್ ಮತ್ತು ಬೃಹತ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

    ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಸಿಲ್ಕ್ ಬೋರ್ಡ್‍ಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಇದಾಗಿದ್ದು, ಈ ಸೇತುವೆ ನಿರ್ಮಾಣವಾಗಿ 8 ವರ್ಷಗಳಾಗಿದ್ದರಿಂದ ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ತಡೆ ಏರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಿರ್ವಹಣೆ ನಡೆಯಲಿದ್ದು, ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ಅವಕಾಶವಿಲ್ಲ.

    ಲಘು ವಾಹನಗಳು, ಕಾರು, ದ್ವಿಚಕ್ರ ವಾಹನಗಳು ಸಂಚಾರ ಎಂದಿನಂತೆ ಇರಲಿದ್ದು ಫ್ಲೈ ಓವರ್ ಮೇಲೆ ಯಾವುದೇ ಅಪಾಯವಿಲ್ಲ. ಕೇವಲ ನಿರ್ವಹಣೆಗಾಗಿಯೇ ಬೃಹತ್ ವಾಹನಗಳಿಗೆ ಪ್ರವೇಶವಿಲ್ಲವೆಂದು ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್(ಬಿಇಟಿಎಲ್) ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

    ಮೇಲ್ಸೆತುವೆ ಮೇಲಿನ ರಸ್ತೆ ಮತ್ತು ಜಾಯಿಂಟ್‍ಗಳ ನಿರ್ವಹಣೆ ಹಾಗೂ ಪಾಟ್ ಹೋಲ್ಸ್ ನಿರ್ವಹಣೆಯ ನಡೆಯಲಿದೆಯೆಂದು ಪ್ರಕಟಣೆಯಲ್ಲಿ ಬಿಇಟಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಮರುನಾಮಕರಣ ಬೆನ್ನಲ್ಲೇ ಅಯೋಧ್ಯಾದಲ್ಲಿ ಮದ್ಯ, ಮಾಂಸಹಾರ ನಿಷೇಧಕ್ಕೆ ಯೋಗಿ ಸರ್ಕಾರ ಚಿಂತನೆ

    ಲಕ್ನೋ: ಫೈಜಾಬಾದ್ ನಗರವನ್ನು ಅಯೋಧ್ಯಾ ಎಂದು ಮರುನಾಮಕರಣ ಮಾಡಿದ ಬೆನ್ನಲ್ಲೇ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ಮಾರಾಟವನ್ನು ನಿಷೇಧ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸ್ಥಳೀಯ ಶ್ರೀಗಳಿಂದ ಜಿಲ್ಲೆಯಲ್ಲಿ ಮದ್ಯ ಹಾಗೂ ಮಾಂಸಹಾರ ನಿಷೇಧ ಮಾಡುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸರ್ಕಾರದ ಈ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ, ಸ್ಥಳೀಯ ಶ್ರೀಗಳು ಸರ್ಕಾರ ಮುಂದಿಟ್ಟಿರುವ ಬೇಡಿಕೆ ಬಗ್ಗೆ ನಮಗೆ ಅರಿವಿದೆ. ಸರ್ಕಾರ ಕಾನೂನಾತ್ಮಕವಾಗಿ ಮದ್ಯ ಹಾಗೂ ಮಾಂಸಮಾರಾಟ ನಿಷೇಧ ಮಾಡಲಿದೆ ಎಂದು ತಿಳಿಸಿದ್ದಾರೆ.

    ಅಯೋಧ್ಯಾ ನಗರ ಧಾರ್ಮಿಕ ಕೇಂದ್ರವಾಗಿದ್ದು, ಇಂತಹ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟ ಮಾಡಬಾರದು. ಇವುಗಳನ್ನು ನಿಷೇಧ ಮಾಡುವುದು ನಗರದ ಜನತೆಗೆ ಆರೋಗ್ಯಕರ ಜೀವನ ಶೈಲಿ ಮಾಡಲು ಕಾರಣವಾಗಲಿದೆ. ಇದರಿಂದ ನಗರದ ಸ್ವಚ್ಛತೆ ಹೆಚ್ಚಾಗಲಿದ್ದು, ಮಾಲಿನ್ಯ ಕಡಿಮೆ ಮಾಡಿ ಶುದ್ಧತೆಯ ಭಾವನೆ ಮೂಡಿಸುತ್ತದೆ ಎಂದು ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

    ಸತ್ಯೇಂದ್ರ ದಾಸ್ ಅವರ ಹೇಳಿಕೆಗೆ ಹಲವು ಶ್ರೀಗಳು ತಮ್ಮ ಸಹಮತಿಯನ್ನು ವ್ಯಕ್ತಪಡಿಸಿದ್ದು, ಇಡೀ ಜಿಲ್ಲೆಗೆ ಅನ್ವಯ ಆಗುವಂತೆ ಇದನ್ನು ನಿಷೇಧ ಮಾಡಬೇಕು ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಬ್ರಿ ಮಸೀದಿ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಮೊಹಮ್ಮದ್ ಇಕ್ಭಾಲ್ ಅನ್ಸಾರಿ ಅವರು ಈ ಕುರಿತು ರಾಜ್ಯ ಸರ್ಕಾರವೇ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

    ಆಯೋಧ್ಯಾನಗರದಲ್ಲಿ ಮದ್ಯ ಮತ್ತು ಮಾಂಸಹಾರ ಮಾರಾಟ ನಿಷೇಧ ಕ್ರಮದ ಕುರಿತು ಸಾರ್ವಜನಿಕರ ವಲಯದಿಂದ ಮಿಶ್ರಾ ಪ್ರತಿಕ್ರಿಯೆ ಕೇಳಿಬಂದಿದ್ದು, ಎರಡು ಉದ್ಯಮಗಳಲ್ಲಿ ತೊಡಗಿರುವವರು ಸರ್ಕಾರ ಚಿಂತನೆ ತಪ್ಪು. ಈಗಾಗಲೇ ನಗರದಲ್ಲಿ 200 ರಿಂದ 250 ಮಾಂಸ ಮಾರಾಟ ಮಳಿಗೆಗಳಿದ್ದು, ಕೇವಲ ಹೆಸರು ಬದಲಿಸಿದ ಮಾತ್ರಕ್ಕೆ ಇಂತಹ ನಿರ್ಧಾರ ಮಾಡುವುದು ಉತ್ತಮವಲ್ಲ. ಇದರಿಂದ ನಮ್ಮಂತಹ ಕುಟುಂಬಗಳು ಆದಾಯವನ್ನು ಕಳೆದುಕೊಳ್ಳಲಿದೆ. ಸರ್ಕಾರ ಈ ನಿರ್ಧಾರ ಕೈಗೊಂಡರೆ ನಮಗೇ ಸೂಕ್ತ ಉದ್ಯೋಗ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

    3 ತಿಂಗ್ಳಲ್ಲಿ 4,000ಕ್ಕೂ ಅಧಿಕ ಪೋರ್ನ್ ವೆಬ್‍ಸೈಟ್ ಸ್ಥಗಿತಗೊಳಿಸಿದ ಚೀನಾ!

    ಬೀಜಿಂಗ್: ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾ ಸರ್ಕಾರ ಅಶ್ಲೀಲ ವೆಬ್‍ಸೈಟ್ ಹಾಗೂ ಯುವಜನತೆಯ ಮನಸ್ಸಿನ ಮೇಲೆ ಪರಿಣಾಮ ಬೀರುವ ಸುಮಾರು 4,000 ಕ್ಕೂ ಅಧಿಕ ವೆಬ್‍ಸೈಟ್‍ಗಳನ್ನು ಸ್ಥಗಿತಗೊಳಿಸಿದೆ.

    ಮಾಧ್ಯಮಗಳ ಮಾಹಿತಿಗಳ ಪ್ರಕಾರ ಚೀನಾ ಸರ್ಕಾರ ಆನ್‍ಲೈನ್ ಸ್ವಚ್ಛತಾ ಆಂದೋಲನವನ್ನು ಪ್ರಾರಂಭಿಸಿದ್ದು, ಇದರಲ್ಲಿ ಅಂತರ್ಜಾಲದಲ್ಲಿ ಕಂಡುಬರುವ ನಿಯಮಬಾಹಿರ ಹಾಗೂ ಅಶ್ಲೀಲ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಇದಲ್ಲದೇ ಚೀನಾ ಸರ್ಕಾರವು ಆನ್‍ಲೈನ್ ಸ್ವಚ್ಛತಾ ಆಂದೋಲನದ ಮೂಲಕ ಅಶ್ಲೀಲ ದೃಶ್ಯ ಹಾಗೂ ಸಾಹಿತ್ಯ ಪ್ರಕಟಿಸುವ ಎಲ್ಲ ರೀತಿಯ ವೆಬ್‍ಸೈಟ್‍ಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ತಿಳಿದುಬಂದಿದೆ.

    ಚೀನಾವು ಕಳೆದ ಮೇ ತಿಂಗಳಿನಿಂದ ಈ ಆಂದೋಲನಕ್ಕೆ ಕರೆ ನೀಡಿದ್ದು, ಇಲ್ಲಿಯವರೆಗೆ ಒಟ್ಟು 4,000 ಕ್ಕೂ ಅಧಿಕ ಪೋರ್ನ್ ಸೈಟ್ ಸೇರಿದಂತೆ ಇತರೆ ವೆಬ್‍ಸೈಟ್‍ಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಆಂದೋಲನಕ್ಕೂ ಮುನ್ನ ಚೀನಾ ಸರ್ಕಾರ ಸುಮಾರು 1,47,000 ದತ್ತಾಂಶಗಳ ಮಾದರಿಗಳನ್ನು ಪರಶೀಲನೆ ನಡೆಸಿದೆ. ಬಳಿಕ ಈ ನಿರ್ಧಾರ ತೆಗೆದುಕೊಂಡಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳು ಪ್ರಕಟಿಸಿವೆ.

    ಕೇವಲ ಅಶ್ಲೀಲತೆಯನ್ನು ಪ್ರಕಟಿಸುವ ವೆಬ್‍ಸೈಟ್‍ಗಳು ಮಾತ್ರವಲ್ಲದೇ ಯುವಜನತೆಯನ್ನು ತಪ್ಪು ದಾರಿಗೆಳೆಯುವ ಇತರೆ 230 ಕ್ಕೂ ಅಧಿಕ ಸಂಸ್ಥೆಗಳಿಗೆ ಸಂಬಂಧಪಟ್ಟ ವೆಬ್‍ಸೈಟ್‍ಗಳನ್ನು ಸಹ ಕಿತ್ತುಹಾಕಿದೆ. ಇವುಗಳಲ್ಲಿ ಆನ್‍ಲೈನ್ ಕಾದಂಬರಿಗಳು, ಕಥೆಗಳು, ಪ್ರಚೋದನಾಕಾರಿ ಮತ್ತು ಅಶ್ಲೀಲ ಭಾಷಣದ ವಿಡಿಯೋಗಳು ವೆಬ್‍ಸೈಟ್‍ಗಳು ಸಹ ಸೇರಿವೆ. ಅಲ್ಲದೇ ಮುಂಬರುವ ದಿನಗಳಲ್ಲಿ ಮತ್ತಷ್ಟೂ ಕಠಿಣ ನಿಯಮಗಳನ್ನು ರೂಪಿಸುವುದಾಗಿ ಚೀನಾ ಸರ್ಕಾರ ಎಚ್ಚರಿಕೆ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪಿಒಪಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರೆ ಅನಿಷ್ಟ: ಅರ್ಚಕರ ಒಕ್ಕೂಟ

    ಪಿಒಪಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರೆ ಅನಿಷ್ಟ: ಅರ್ಚಕರ ಒಕ್ಕೂಟ

    ಬೆಂಗಳೂರು: ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ರೆ ಅನಿಷ್ಟ ಎಂದು ಅರ್ಚಕರ ಒಕ್ಕೂಟದ ಮುಖ್ಯಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್ ದೀಕ್ಷಿತ್ ಹೇಳಿದ್ದಾರೆ.

    ಪಿಒಪಿ ಗಣಪತಿ ಧರ್ಮಶಾಸ್ತ್ರಕ್ಕೆ ಅನಿಷ್ಟವಾಗಿದ್ದು, ಪೂಜೆಗೆ ನಿಷಿದ್ಧವಾಗಿದೆ. ಪಿಒಪಿ ಗಣಪತಿ ನೀರಿನಲ್ಲಿ ಕರಗಲ್ಲ, ಅದನ್ನ ಮಚ್ಚುಗಳಿಂದ ಒಡೆಯಲಾಗುತ್ತದೆ. ಹೀಗಾಗಿ ಪ್ರಕೃತಿಗೂ ಮಾರಕವಾಗಿದೆ ಎಂದು ಕೆ.ಎಸ್.ಎನ್ ದೀಕ್ಷಿತ್ ಹೇಳಿದರು.

    ಭಕ್ತಿಯ ಜೊತೆಗೆ ಜ್ಞಾನವೂ ಇರಬೇಕು, ಇಲ್ಲದಿದ್ದರೆ ಗಣಪ ಒಲಿಯಲ್ಲ. ಭಾರತೀಯ ಪೂಜಾ ಪದ್ಧತಿಯು ಆಧ್ಯಾತ್ಮ ವಿಜ್ಞಾನದ ತಳಹದಿಯಿಂದ ಕೂಡಿದೆ. ಪೃಥ್ವಿ ತತ್ವದ ಗಣಪತಿಯನ್ನು ಜೇಡಿ ಮಣ್ಣಿನಿಂದಲೇ ಮಾಡಬೇಕು. ದೇವತೆಗಳ ವಿಗ್ರಹಗಳನ್ನು, ಚಿತ್ರಗಳನ್ನು ತುಳಿದರೆ, ಕತ್ತರಿಸಿದರೆ ಮಹಾದೋಷ ಪ್ರಾಪ್ತಿಯಾಗುತ್ತದೆ ಎಂದು ಕೆ.ಎಸ್ ಉಮೇಶ್ ಶರ್ಮಾ ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಕರಾವಳಿಯಲ್ಲಿ ಬುಲ್‍ಟ್ರಾಲ್ ಮೀನುಗಾರಿಕೆ

    ಕೇಂದ್ರ ಸರ್ಕಾರ ನಿಷೇಧಿಸಿದ್ದರೂ ಕರಾವಳಿಯಲ್ಲಿ ಬುಲ್‍ಟ್ರಾಲ್ ಮೀನುಗಾರಿಕೆ

    ಮಂಗಳೂರು: ಕೇಂದ್ರ ಸರ್ಕಾರ ನಿಷೇಧಿಸಿರುವ ಬುಲ್‍ಟ್ರಾಲ್ ಮೀನುಗಾರಿಕೆ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮತ್ತೆ ಕಾಣಿಸಿಕೊಂಡಿದೆ.

    ಬಿಸ್ಮಿಲ್ಲಾ ಹೆಸರಿನ ಎರಡು ಮೀನುಗಾರಿಕಾ ದೋಣಿಗಳು ಅರಬ್ಬಿ ಸಮುದ್ರದ ಮಧ್ಯದಲ್ಲಿ ಕಾನೂನು ಬಾಹಿರವಾಗಿ ಬುಲ್ ಟ್ರಾಲ್ ಮೀನುಗಾರಿಕೆ ನಡೆಸುತ್ತಿದ್ದಾಗ ಸ್ಥಳೀಯ ಮೀನುಗಾರರು ಆಕ್ಷೇಪಿಸಿದ್ದಾರೆ. ಅಲ್ಲದೆ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗಳ ವಿಡಿಯೋವನ್ನು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ.

    ಎರಡು ಪರ್ಸೀನ್ ಬೋಟ್ ಮೂಲಕ ಬೃಹತ್ ಬಲೆಗಳನ್ನು ಹಾಕಿ ಮೀನು ಶಿಕಾರಿ ಮಾಡಲಾಗುತ್ತೆ. ಈ ರೀತಿಯ ಬುಲ್ ಟ್ರಾಲ್ ಮೀನುಗಾರಿಕೆಯಿಂದ ಮೀನಿನ ಸಂತತಿ ನಾಶವಾಗಿ ಮತ್ಸ್ಯಕ್ಷಾಮ ತಲೆದೂರುವ ಆತಂಕದಿಂದಾಗಿ ದೇಶಾದ್ಯಂತ ಕೇಂದ್ರ ಸರ್ಕಾರ ಈ ಮಾದರಿ ಮೀನುಗಾರಿಕೆಗೆ ನಿಷೇಧ ವಿಧಿಸಿತ್ತು. ಕಳೆದ ವರ್ಷದ ನವಂಬರಿನಲ್ಲಿ ಈ ರೀತಿಯ ಮೀನುಗಾಕೆಗೆ ನಿಷೇಧ ಹೇರಲಾಗಿತ್ತು. ಆದರೆ ಮಂಗಳೂರಿನ ಮೀನುಗಾರರೇ ಈ ರೀತಿಯ ಮೀನುಗಾರಿಕೆ ನಡೆಸುತ್ತಿದ್ದು, ಇತರೇ ಪರ್ಸೀನ್ ಬೋಟ್ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದೀಗ ಇಂತಹ ಮೀನುಗಾರಿಕೆ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮಾಡುವ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಮೀನುಗಾರಿಕೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾನಿಯಾ ಮಿರ್ಜಾಗೆ ಕಿರುಕುಳ: ಅಂತರಾಷ್ಟ್ರೀಯ ಪಂದ್ಯದಿಂದ ನಿಷೇಧಕ್ಕೊಳಗಾದ ಬಾಂಗ್ಲಾ ಕ್ರಿಕೆಟಿಗ!

    ಸಾನಿಯಾ ಮಿರ್ಜಾಗೆ ಕಿರುಕುಳ: ಅಂತರಾಷ್ಟ್ರೀಯ ಪಂದ್ಯದಿಂದ ನಿಷೇಧಕ್ಕೊಳಗಾದ ಬಾಂಗ್ಲಾ ಕ್ರಿಕೆಟಿಗ!

    ಢಾಕಾ: ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರವರಿಗೆ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಬಾಂಗ್ಲಾ ಕ್ರಿಕೆಟಿಗ ಶಬ್ಬೀರ್ ರೆಹಮಾನ್‍ಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ 6 ತಿಂಗಳ ಕಾಲ ಅಂತರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಿದೆ.

    2014 ರಲ್ಲಿ ಪಾಕಿಸ್ತಾನ ಕ್ರಿಕೆಟಿಗ ಶೋಯಬ್ ಮಲ್ಲಿಕ್ ಹಾಗೂ ಪತ್ನಿ ಸಾನಿಯಾ ಮಿರ್ಜಾ ಬಾಂಗ್ಲಾ ದೇಶಕ್ಕೆ ಪಂದ್ಯವೊಂದಕ್ಕೆ ಆಗಮಿಸಿದ್ದರು. ಈ ವೇಳೆ ಮೈದಾನವನ್ನು ಪ್ರವೇಶಿಸುತ್ತಿರುವಾಗ ಶಬ್ಬೀರ್ ರೆಹಮಾನ್ ಸಾನಿಯಾರವನ್ನು ಚುಡಾಯಿಸಿದ್ದರು. ಇದರಿಂದ ಕೋಪಗೊಂಡ ಶೋಯಬ್ ಮಲ್ಲಿಕ್ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಾಗೂ ಢಾಕಾ ಮೆಟ್ರೋ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದರ ಬಗ್ಗೆ ಬಾಂಗ್ಲಾ ಮಾಧ್ಯಮಗಳು ವರದಿ ಪ್ರಕಟಿಸಿದ್ದವು.

    ಮೈದಾನದ ಒಳಗೂ ಹಾಗೂ ಹೊರಗಡೆ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಶಬ್ಬೀರ್ ರೆಹಮಾನ್‍ರಿಂದಾಗಿ ಬಾಂಗ್ಲಾ ಕ್ರಿಕೆಟ್ ಮಂಡಳಿ ತೀವ್ರ ಮುಜುಗರಕ್ಕೀಡಾಗಿತ್ತು. ಹೀಗಾಗಿ ಪ್ರಕರಣಗಳ ತನಿಖೆ ನಡೆಸಲು ಶಿಸ್ತು ಪಾಲನಾ ಸಮಿತಿಯನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ನೇಮಕ ಮಾಡಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಬಾಂಗ್ಲಾ ಕ್ರಿಕೆಟ್ ಮಂಡಳಿ, ಶಬ್ಬೀರ್ ರೆಹಮಾನ್‍ಗೆ 6 ತಿಂಗಳ ಕಾಲ ಎಲ್ಲಾ ಅಂತರಾಷ್ಟ್ರೀಯ ಪಂದ್ಯಗಳಿಂದ ನಿಷೇಧ ಹೇರಿದೆ.

    ಈ ಮೊದಲು ಸಹ ಶಬ್ಬೀರ್ ಖಾಸಗಿ ಹೋಟೆಲ್‍ಗೆ ಅನುಮತಿ ಇಲ್ಲದೆ ಮಹಿಳೆಯನ್ನು ಕರೆದುಕೊಂಡು ಬಂದು ಕೊಠಡಿಯಲ್ಲಿರಿಸಿಕೊಂಡಿದ್ದಕ್ಕೆ 6 ತಿಂಗಳು ನಿಷೇಧಕ್ಕೆ ಒಳಗಾಗಿದ್ದರು. ಇನ್ನು ಶಿಕ್ಷೆಯ ಪ್ರಮಾಣ ಮುಗಿಯದೇ ಇರುವಾಗಲೇ ಮತ್ತೊಂದು ಶಿಕ್ಷೆಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಶಿರಾಡಿ ಘಾಟ್ ಸಂಚಾರ ನಿಷೇಧವಿದ್ದರೂ ಹಣ ಪಡೆದು ಲಾರಿ ಬಿಡುತ್ತಿರುವ ಪೊಲೀಸರು

    ಹಾಸನ: ಅನಿರ್ಧಿಷ್ಟಾವಧಿಗೆ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ನಿಷೇಧವಿದ್ದರೂ, ಪೊಲೀಸರು ಹಣ ಪಡೆದು ಲಾರಿಗಳನ್ನು ಬಿಡುತ್ತಿದ್ದಾರೆ. ಇನ್ನು ಇದನ್ನು ಪ್ರಶ್ನಿಸಲು ಹೋದ ಪಂಜಾಬ್ ಚಾಲಕನ ಮೇಲೆಯೇ ಪೊಲೀಸರು ದರ್ಪ ಮೆರೆದಿದ್ದಾರೆ.

    ಸಕಲೇಶಪುರದ ಗುಂಡ್ಯ ಚೆಕ್‍ಪೋಸ್ಟ್ ಬಳಿ ಶಿರಾಡಿ ಘಾಟ್ ಮೂಲಕ 12 ಚಕ್ರದ ಲಾರಿಗಳ ಸಂಚಾರಕ್ಕೆ ಪೊಲೀಸರು ಬಿಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಪಂಜಾಬ್ ಮೂಲದ ಲಾರಿ ಚಾಲಕ, ಪೊಲೀಸರು 500 ರೂ. ಪಡೆದ ನಿಷೇಧ ಇದ್ದರೂ ವಾಹನ ಬಿಡುತ್ತಿದ್ದಾರೆ. ನಾವು ಕಳೆದ ಹತ್ತು ದಿನಗಳಿಂದ ಇಲ್ಲಿ ಕಾದು ಕುಳಿತರೂ ಸಂಚಾರಕ್ಕೆ ಬಿಟ್ಟಿಲ್ಲ. ಆದರೆ ಈಗ ಹಣ ಪಡೆದು ಪೊಲೀಸರು ಬಿಡುತ್ತಿದ್ದಾರೆ ಎಂದು ಆರೋಪಿಸುತ್ತಾ ಮೊಬೈಲ್‍ನಲ್ಲಿ ವಿಡಿಯೋ ಮಾಡುತ್ತಿದ್ದರು. ಇದನ್ನು ಓದಿ: ಮಂಗಳೂರು-ಶಿರಾಡಿ-ಬೆಂಗಳೂರು ಸಂಚಾರಕ್ಕೆ ಸದ್ಯಕ್ಕೆ ಶುರುವಾಗಲ್ಲ!

    ಪೊಲೀಸರು ಚಾಲಕನಿಂದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದು. ಆದರೆ ಆತ ಮೊಬೈಲ್ ನೀಡದೆ, ನಾನು ಜಿಲ್ಲಾಧಿಕಾರಿಗೆ ದೂರು ನೀಡುತ್ತೇನೆ ಎಂದು ಹೇಳಿದರು. ಆದರೆ ಯಾವುದಕ್ಕೂ ಕ್ಯಾರೆ ಅನ್ನದ ಪೊಲೀಸರು, ಜಿಲ್ಲಾಧಿಕಾರಿ ಅಲ್ಲ ನಿಮ್ಮಪ್ಪಗೂ ಹೇಳು ಎಂದು ಅವಾಚ್ಯ ಪದಗಳಿಂದ ಬೈದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/veR3b6PZiZ0