ಮಂಡ್ಯ: ಗಣೇಶ ಮೆರವಣಿಗೆ (Ganesh Procession) ವೇಳೆ ಕಲ್ಲುತೂರಾಟ ನಡೆಸಿ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆವರೆಗೆ ಮದ್ದೂರು (Madduru) ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಘಟನಾ ನಡೆದ ಸ್ಥಳಕ್ಕೆ ರಾತ್ರಿಯೇ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಆಗಮಿಸಿ ರೌಂಡ್ ಹಾಕಿದರು. ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಂಗಳವಾರ ಬೆಳಗ್ಗೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂಓದಿ: ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ –ಮದ್ದೂರುಉದ್ವಿಗ್ನ
ತಮಿಳು ಕಾಲೋನಿಯ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡಲು ಮೆರವಣಿಗೆ ಮಾಡಿದ್ದಾರೆ. ರಾಮ್ ರಹೀಮ್ ನಗರದಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ಕಲ್ಲು ಬಿದ್ದಿದೆ. ನಂತರ ಎರಡೂ ಕಡೆಯಿಂದ ಕಲ್ಲು ತೂರಾಟ ಆಗಿದೆ. ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಂಬಂಧ ಒಂದು ಸ್ವಯಂಪ್ರೇರಿತ ಇನ್ನೊಂದು ಅಜಯ್ ಎಂಬ ಗಾಯಾಳು ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದೇವೆ. 21 ಜನರನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದವರ ಪೈಕಿ ಇಬ್ಬರು ಮಾತ್ರ ಚನ್ನಪಟ್ಟಣದವರು ಉಳಿದವರು ಸ್ಥಳೀಯರಾಗಿದ್ದಾರೆ. ಸದ್ಯ ಬಿಗಿ ಭದ್ರತೆ ಮಾಡಿದ್ದೇವೆ ಎಂದು ಹೇಳಿದರು.
ಇಬ್ಬರು ಸಿಬ್ಬಂದಿಗೆ ಸಹ ಏಟು ಬಿದ್ದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಇದ್ದ ಕಾರಣ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ವಿವರಿಸಿದರು.
ಇಂಫಾಲ್: ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ 3 ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಸಡಿಲಗೊಳಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ (District Magistrate) ಆದೇಶ ಹೊರಡಿಸಿದೆ.
ಮೈತೇಯಿ ಸಮುದಾಯದ ಅರಂಬಾಯಿ ತೆಂಗೋಲ್ ಸಂಘಟನೆಯ ನಾಯಕನ ಬಂಧನದ ವಿರುದ್ಧ ಮಣಿಪುರದಲ್ಲಿ ಪ್ರತಿಭಟನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜೊತೆಗೆ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ತೌಬಲ್, ಬಿಷ್ಣುಪುರ ಮತ್ತು ಕಕ್ಟಿಂಗ್ ಜಿಲ್ಲೆಗಳಲ್ಲಿ ವಿಎಸ್‌ಎಟಿ, ವಿಪಿಎನ್ ಸೇರಿದಂತೆ ಇಂಟರ್‌ನೆಟ್ ಹಾಗೂ ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು.
ಪ್ರತಿಭಟನಾಕಾರರು ಮೈತೆಯಿ ಸ್ವಯಂಸೇವಕ ಗುಂಪು ಅರಂಬಾಯಿ ತೆಂಗೋಲ್‌ಗೆ ಸೇರಿದವರಾಗಿದ್ದು, ತಮ್ಮ ನಾಯಕನ ಬಿಡುಗಡೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದರು. ಅಲ್ಲದೇ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಹುಲಿ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ
ಮೈಸೂರು: ಉದಯಗಿರಿ (Udayagiri) ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣದ ಕಿಚ್ಚು ಇನ್ನೂ ಆರಿಲ್ಲ. ಪೊಲೀಸರ ತನಿಖೆ ಇನ್ನೂ ಸಾಗುತ್ತಿದೆ. ಈ ನಡುವೆಯೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಜನ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಿವೆ. ಕೌಂಟರ್ ಆಗಿ ದಲಿತ ಸಂಘಟನೆಗಳು ಮಾನವೀಯ ಚಳವಳಿ ಆಯೋಜಿನೆ ಮಾಡಿವೆ. ಆದರೆ ಪೊಲೀಸರು ಯಾವುದೇ ಅನುಮತಿ ನೀಡಲು ನಿರಾಕರಿಸಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣದ ಪೊಲೀಸರಿಗೆ ದೊಡ್ಡ ಕಗ್ಗಂಟಾಗಿದೆ. ಪೊಲೀಸರಿಗೆ ಕಲ್ಲು ತೂರಿದ 980 ಪುಂಡರು ಎಲ್ಲಿದ್ದಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಘಟನೆ ನಡೆದು 13 ದಿನ ಕಳೆದರೂ ಪುಂಡರು ಪೊಲೀಸರ ಕೈಗೆ ಸಿಕ್ಕಿಲ್ಲ. ಮೌಲ್ವಿಯನ್ನು ಮಾತ್ರ ಜೈಲಿಗೆ ಕಳುಹಿಸಿ ಉದಯಗಿರಿ ಪ್ರಕರಣದಲ್ಲಿ ಮೈಸೂರು ಪೊಲೀಸರು ತಣ್ಣಗಾದ್ರಾ ಅನ್ನೋ ಅನುಮಾನ ಶುರುವಾಗಿದೆ. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ
ಉದಯಗಿರಿ ಠಾಣೆ ಮೇಲೆ ಸಾವಿರಕ್ಕೂ ಹೆಚ್ಚು ಜನ ಕಲ್ಲು ತೂರಾಟ ನಡೆಸಿದ್ದರು ಎನ್ನಲಾಗುತ್ತಿತ್ತು. ಅದನ್ನು ಎಫ್‌ಐಆರ್‌ನಲ್ಲೂ ಉಲ್ಲೇಖಿಸಲಾಗಿತ್ತು. ಸಿಸಿಟಿವಿಯಲ್ಲಿ ಇರುವ ಅಷ್ಟೂ ಜನ ಠಾಣೆ ಧ್ವಂಸಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಸಿಸಿಟಿವಿಯಲ್ಲಿ ಇರೋ ಅಷ್ಟು ಪುಂಡರ ಬಂಧನ ಯಾವಾಗ ಅನ್ನೋ ಕೂಗು ಕೇಳಿಬಂದಿದೆ. ಗಲಭೆಗೆ ಪ್ರಚೋದಿಸಿದ ಮೌಲ್ವಿ ಮಾತ್ರ ಜೈಲಿಗೆ ಕಳುಹಿಸಿ ಪೊಲೀಸ್ರು ಸುಮ್ಮನಾದ್ರಾ? ಅಥವಾ ಪೊಲೀಸರ ಮೇಲೆ ಯಾರಾದ್ರೂ ಒತ್ತಡ ತಂದ್ರಾ ಅನ್ನೋ ಅನುಮಾನ ಮೂಡಿದೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ರಾಯರ ವೃಂದಾವನಕ್ಕೆ ವಿಶೇಷ ಪೂಜೆ
ನವದೆಹಲಿ: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಆವರಣದಲ್ಲಿ ಡ್ರೋನ್ ಹಾರಾಟ ಹಾಗೂ ಲೇಸರ್ ಕಿರಣಗಳ ಚಟುವಟಿಕೆಗಳನ್ನು ನಡೆಸದಂತೆ ದೆಹಲಿ ಪೊಲೀಸರು (Delhi Police) ಸೆಕ್ಷನ್ 144 ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಐಜಿಐ ವಿಮಾನ ನಿಲ್ದಾಣದಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಲೇಸರ್ ಕಿರಣಗಳಿಂದ (Laser Beams) ಪೈಲಟ್‌ಗಳ ದೃಷ್ಟಿ ವಿಚಲಿತಗೊಳ್ಳುವ ಘಟನೆಗಳು ಬೆಳಕಿಗೆ ಬಂದಿವೆ. ವಿಮಾನಗಳ ಲ್ಯಾಂಡಿಂಗ್ ಸಂದರ್ಭದಲ್ಲಿ ಹೀಗೆ ಪೈಲಟ್‌ಗಳ ದೃಷ್ಟಿಯು ವಿಚಲಿತಗೊಳ್ಳವುದರಿಂದ ಸಿಬ್ಬಂದಿ ಹಾಗೂ ವಿಮಾನದ ಸುರಕ್ಷತೆಗೆ ಅಪಾಯ ಉಂಟುಮಾಡಬಹುದು. ಇದನ್ನೂ ಓದಿ: ಪಾಕ್ ಪರ ಬೇಹುಗಾರಿಕೆ – ಬ್ರಹ್ಮೋಸ್ ಏರೋಸ್ಪೇಸ್‍ನ ಮಾಜಿ ಇಂಜಿನಿಯರ್‌ಗೆ ಜೀವಾವಧಿ ಶಿಕ್ಷೆ
ಅಲ್ಲದೇ ವಿಮಾನ ನಿಲ್ದಾಣದ ಸುತ್ತಮುತ್ತ ಮನೆಗಳು, ಹೋಟೆಲ್ ರೆಸ್ಟೋರೆಂಟ್‌ಗಳು ಇದ್ದು, ಲೇಸರ್ ಹಾಗೂ ಲೈಟಿಂಗ್ಸ್ ಗಳನ್ನು ಬಳಸಲಾಗುತ್ತದೆ. ಇವು ಪೈಲಟ್‌ಗಳು ವಿಮಾನ ಲ್ಯಾಡಿಂಗ್ ಮಾಡುವ ಸಂದರ್ಭದಲ್ಲಿ ದೃಷ್ಟಿ ವಿಚಲನಕ್ಕೆ ಕಾರಣವಾಗುತ್ತದೆ. ಪ್ರಸ್ತುತ ಲೇಸರ್ ಕಿರಣಗಳ ಬಳಕೆ ನಿಯಂತ್ರಿಸಲು ಯಾವುದೇ ಪರ್ಯಾಯ ಕ್ರಮಗಳು ಇಲ್ಲದ ಕಾರಣ, ಜೀವಹಾನಿ ಮತ್ತು ವಿಮಾನ ಸುರಕ್ಷತೆಗಳ ಕಾರಣಕ್ಕೆ ಲೇಸರ್ ಚಟುವಟಿಕೆಗಳಿಗೆ ನಿಷೇಧಾಜ್ಞೆ (Section 144) ವಿಧಿಸಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆಗೈದು ಡೋರ್ ತೆಗೆಯಲು ಯತ್ನ- ಆರೋಪಿ ಅರೆಸ್ಟ್
ಡ್ರೋನ್ ಹಾರಾಟಕ್ಕೂ ನಿಷೇಧ:
ವಿವಿಐಪಿಗಳ ಓಡಾಟ ಹೆಚ್ಚಾಗಿರುವ ಸಂದರ್ಭಗಳಲ್ಲಿ ಡ್ರೋನ್‌ಗಳು (Drones), ಪ್ಯಾರಾಗ್ಲೈಡರ್ ಹಾಗೂ ಮಾನವ ರಹಿತ ಡ್ರೋನ್‌ಗಳನ್ನು ಬಳಸಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದಾರೆ ಎಂಬ ಮಾಹಿತಿಗಳು ಗುಪ್ತಚರ ಇಲಾಖೆಗೆ ಆಗಾಗ್ಗೆ ಬಂದಿವೆ. ಈ ಕಾರಣಗಳಿಂದ ವಿಮಾನ ನಿಲ್ದಾಣ ಆವರಣದಲ್ಲಿ ಸಾರ್ವಜನಿಕರಿಂದ ಡ್ರೋನ್ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಐಪಿಸಿ ಸೆಕ್ಷನ್ 188 ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಮಂಡ್ಯ: ಟಿಪ್ಪು ಜಯಂತಿ (Tippu Jayanti) ಆಚರಣೆಗೆ ಚಿಂತನೆ ನಡೆಸಿರುವ ಹಿನ್ನೆಲೆ ಮಂಡ್ಯದ (Mandya) ಶ್ರೀರಂಗಪಟ್ಟಣದಲ್ಲಿ (Srirangapatna) ಇಂದು (ಶುಕ್ರವಾರ) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಟಿಪ್ಪು ವಕ್ಫ್ ಎಸ್ಟೇಟ್‌ನಿಂದ ಟಿಪ್ಪು ಜಯಂತಿ ನಡೆಸಲು ಚಿಂತನೆ ನಡೆಸಲಾಗಿದೆ. ಮೈಸೂರು ಸೇರಿದಂತೆ ಹಲವೆಡೆಯಿಂದ ಜನ ಸೇರುವ ಸಾಧ್ಯತೆಯಿದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಗೊಳಿಸಿ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಮೆರವಣಿಗೆ, ಪ್ರತಿಭಟನೆ, ರ‍್ಯಾಲಿಗಳಿಗೆ ನಿರ್ಬಂಧಿಸಲಾಗಿದೆ. ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ, ಡಿಜೆ ಬಳಕೆಗೂ ನಿಷೇಧ ಹೇರಲಾಗಿದೆ. ಘೋಷಣೆ ಕೂಗದಂತೆ, ಪ್ರಚೋದನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆಯೂ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಹಿಟ್ ಆ್ಯಂಡ್ ರನ್‌ಗೆ ವ್ಯಕ್ತಿ ಬಲಿ
ಸಾರ್ವಜನಿಕರ ಆಸ್ತಿ-ಪಾಸ್ತಿ, ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಮೇಲೆ ನಿಗಾವಹಿಸಲಾಗುತ್ತಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪುಂಡರ ಹುಚ್ಚಾಟ – ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನಗಳು ಜಖಂ
ಬೆಂಗಳೂರು: ಜೀವನದಿ ಕಾವೇರಿಗಾಗಿ (Cauvery River) ಶುಕ್ರವಾರ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಬಂದ್‌ಗೆ 1,600ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಿಜೆಪಿ-ಜೆಡಿಎಸ್ ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಜೀವಜಲಕ್ಕಾಗಿ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಲಿವೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಬಂದ್ ನಡೆಯಲಿದೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳು ಬಂದ್ (National Highway) ಆಗುವ ಸಾಧ್ಯತೆಗಳಿವೆ. ರಾಜಧಾನಿಯಲ್ಲಿ ಕನ್ನಡ ಒಕ್ಕೂಟ ಬೃಹತ್ ಮೆರವಣಿಗೆಗೆ ಪ್ಲಾನ್ ಮಾಡಿದೆ. ಬಂದ್‌ಗೆ ಬೆಂಬಲ ನೀಡುವಂತೆ ಕನ್ನಡ ಹೋರಾಟಗಾರರು ಬೆಂಗಳೂರು ಜನತೆಯಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: Karnataka Bandh : ಶಾಲಾ, ಕಾಲೇಜುಗಳಿಗೆ ರಜೆ ನೀಡೋ ಅಧಿಕಾರ ಡಿಸಿಗಳಿಗೆ ಬಿಟ್ಟ ಶಿಕ್ಷಣ ಇಲಾಖೆ
ಬೆಂಗಳೂರಿನಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ ಪೊಲೀಸ್ ಇಲಾಖೆ ನಿಷೇಧಾಜ್ಞೆ ಜಾರಿ ಮಾಡಿದೆ. ಫ್ರೀಡಂ ಪಾರ್ಕ್ ಬಿಟ್ಟು ಬೇರೆಡೆ ಯಾವುದೇ ಪ್ರತಿಭಟನೆ, ರ‍್ಯಾಲಿಗಳಿಗೆ ಅವಕಾಶ ಇರುವುದಿಲ್ಲ. ಬಂದ್ ವೇಳೆ ಸಾವು ನೋವು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾದರೆ ಬಂದ್‌ಗೆ ಕರೆ ನೀಡಿರುವ ಸಂಘಟನೆಗಳೇ ಹೊಣೆ ಆಗುತ್ತವೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಬಲವಂತವಾಗಿ ವಾಹನ ತಡೆ, ಅಂಗಡಿ ಮುಂಗಟ್ಟು ಮುಚ್ಚಿಸುವಂತಿಲ್ಲ. ಒಂದೊಮ್ಮೆ ಬಲವಂತದ ಕ್ರಮಗಳಿಗೆ ಮುಂದಾದ್ರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ತೀವಿ ಎಂದು ತಾಕೀತು ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಹ ಬಂದ್‌ಗೆ ಅವಕಾಶ ಇಲ್ಲವೆಂದು ಹೇಳಿದ್ದಾರೆ. ಆದ್ರೆ ಕನ್ನಡ ಒಕ್ಕೂಟಗಳು ಮಾತ್ರ ಇದಕ್ಕೆ ಡೋಂಟ್‌ಕೇರ್ ಎಂದಿವೆ. ಇದನ್ನೂ ಓದಿ: ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ – ಹಸುಗೂಸಿನೊಂದಿಗೆ ಬೀದಿಗೆ ಬಿದ್ದ ದಂಪತಿ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ತುಮಕೂರು, ರಾಮನಗರ, ಮಂಡ್ಯ, ಹಾಸನ, ಚಿಕ್ಕಮಗಳೂರು, ಧಾರವಾಡ, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರದ 2 ತಾಲೂಕಲ್ಲಿ ಮಾತ್ರ ಬಂದ್) ಜಿಲ್ಲೆಗಳು ಸಂಪೂರ್ಣ ಸ್ಥಬ್ಧವಾಗುವ ಸಾಧ್ಯತೆಗಳಿವೆ. ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಯಾದಗಿರಿ, ಕೊಡಗು, ಗದಗ, ಕಲಬುರಗಿ, ರಾಯಚೂರು, ಶಿವಮೊಗ್ಗ, ಕೊಪ್ಪಳ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಬಂದ್‌ಗೆ ಕರೆ ನೀಡದಿರುವುದರಿಂದ ಎಂದಿನಂತೆ ಈ ಜಿಲ್ಲೆಗಳಲ್ಲಿ ಕೆಲ ನಡೆಯಲಿದೆ.
ಏನೆಲ್ಲಾ ಸೇವೆ ಬಂದ್?
ಓಲಾ ಊಬರ್, ಆಟೋ, ಗೂಡ್ಸ್ ವಾಹನ, ಹೋಟೆಲ್, ಚಿತ್ರಮಂದಿರ, ಜಿಮ್, ಹೋಟೆಲ್, ಮಾಲ್, ಬೀದಿ ಬದಿ ವ್ಯಾಪಾರ, ಕೆ.ಆರ್ ಮಾರ್ಕೆಟ್, ಶಾಲಾ ವಾಹನಗಳು, ಸಿನಿಮಾ ಶೂಟಿಂಗ್, ಆಭರಣ ಮಳಿಗೆಗಳು ಬಂದ್ ಆಗಿರಲಿವೆ.
ಏನಿರುತ್ತೆ?
ಆಸ್ಪತ್ರೆ, ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ನಮ್ಮ ಮೆಟ್ರೋ, ರೈಲು, ವಿಮಾನ, ಹಾಲು, ತರಕಾರಿ, ಬ್ಯಾಂಕ್, ಪೋಸ್ಟ್ ಆಫೀಸ್ ಸೇವೆ ಇರಲಿವೆ.
ಇರುತ್ತಾ? ಇರಲ್ವಾ?
ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಕಾರ್ಯಾಚರಣೆ ಇರುತ್ತೆ ಎಂದು ಹೇಳಲಾಗಿದೆ. ಆದ್ರೆ, ನೌಕರರು ಕರ್ತವ್ಯಕ್ಕೆ ಹಾಜರಾಗ್ತಾರಾ ಅನ್ನುವ ಬಗ್ಗೆ ಸ್ಪಷ್ಟವಾಗಿಲ್ಲ.
ಎಲ್ಲೆಲ್ಲೆ ಶಾಲಾ ಕಾಲೇಜುಗಳು ರಜೆ?
ಬೆಂಗಳೂರು, ಕೋಲಾರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಬೇರೆಡೆಗೆ ರಜೆ ಘೋಷಿಸುವ ನಿರ್ಧಾರವನ್ನು ಬಿಇಓಗಳ ವಿವೇಚನೆಗೆ ಬಿಡಲಾಗಿದೆ.
ರಾಯಚೂರು: ಮೇ 10 ರಂದು ಸಂಜೆ ಮತದಾನದ ಬಳಿಕ ಜಿಲ್ಲೆಯ ಮಸ್ಕಿ (Maski) ಪಟ್ಟಣದಲ್ಲಿ ನಡೆದ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಕಾರ್ಯಕರ್ತರ ಗಲಾಟೆ ಹಿನ್ನೆಲೆ 12 ಜನರ ವಿರುದ್ಧ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ನೀಡಲು ಯಾರೂ ಮುಂದೆ ಬಾರದ ಹಿನ್ನೆಲೆ ಪೊಲೀಸರೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಕೊಂಡಿದ್ದಾರೆ.
ಗಲಾಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಸಹೋದರ ಸಿದ್ದನಗೌಡ ಸೇರಿ ಹಲವರಿಗೆ ಗಾಯಗಳಾಗಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡು ಕಡೆ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್‌ಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆ ಪೊಲೀಸರಿಗೆ ಪ್ರತಾಪ್ ಗೌಡ ಪಾಟೀಲ್ ದೂರು ನೀಡಿದ್ದಾರೆ. ಹೀಗಾಗಿ ಗಲಾಟೆ ಹಿನ್ನೆಲೆ ಇಡೀ ಮಸ್ಕಿ ಕ್ಷೇತ್ರ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇದನ್ನೂ ಓದಿ: ಮತ್ತೆ ಕರ್ನಾಟಕದಲ್ಲಿ ರೆಸಾರ್ಟ್ ರಾಜಕೀಯ? – ಶಾಸಕರು, ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ತಂತ್ರ
ಮತ ಎಣಿಕೆ ಹಿನ್ನೆಲೆ ಮಸ್ಕಿ ಸೇರಿ ಜಿಲ್ಲೆಯಾದ್ಯಂತ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ 14 ರಾತ್ರಿ 10 ಗಂಟೆಯವರೆಗೆ ಕಲಂ 144 ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸ್ವಗ್ರಾಮ ತುರವಿಹಾಳ ಹಾಗೂ ಮಸ್ಕಿ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳೀಯ ಪೊಲೀಸ್ ಸಿಬ್ಬಂದಿ ಜೊತೆಗೆ ಕೆಎಸ್‌ಆರ್‌ಪಿ ಹಾಗೂ ಕೇಂದ್ರ ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಜೆಡಿಎಸ್ ಮುಖಂಡರ ಮಧ್ಯೆ ಗಲಾಟೆ – ಕೈ ಮುಖಂಡನಿಗೆ ಚಾಕು
ಯಾದಗಿರಿ: ಯಾದಗಿರಿ (Yadgiri) ಜಿಲ್ಲೆಯಲ್ಲಿ ಮತದಾನ ಪೂರ್ಣಗೊಳ್ಳುವ ವೇಳೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕೆಂಭಾವಿ ಮತ್ತು ಸುರಪುರ ಪಟ್ಟಣಗಳಲ್ಲಿ 2 ದಿನಗಳ ಕಾಲ ಸೆಕ್ಷನ್ 144 ಜಾರಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಮೇ 10ರಂದು ಬೆಳಗ್ಗೆಯಿಂದ ಸಂಜೆಯವರೆಗೆ ಶಾಂತಿಯುತವಾಗಿ ಮತದಾನ (Voting) ಪ್ರಕ್ರಿಯೆ ನಡೆದಿತ್ತು. ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆ ಕೆಂಭಾವಿ (Kembhavi) ಮತ್ತು ಸುರಪುರ (Surapura) ಪಟ್ಟಣಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ಗಲಾಟೆಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ: ಒಂದೇ ಅವಧಿಯಲ್ಲಿ ಒಬ್ಬ 2 ಅಸೆಂಬ್ಲಿ, 2 ಎಂಪಿ ಚುನಾವಣೆ ಎದುರಿಸಿದ್ರೆ ಅದು ನಾನೊಬ್ಬನೇ: ಪುಟ್ಟರಾಜು
ಘಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪರಿಸ್ಥಿತಿಯನ್ನು ಅವಲೋಕಿಸಿ 2 ದಿನಗಳ ಕಾಲ ಸೆಕ್ಷನ್ 144 ಜಾರಿಗೊಳಿಸಿ ಆದೇಶಿಸಿದ್ದಾರೆ. ಮೇ 10ರ ಸಂಜೆ 6 ಗಂಟೆಯಿಂದ ಮೇ 12ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಈ ಎರಡು ದಿನಗಳ ಕಾಲ ಪಟ್ರೋಲಿಂಗ್ ಮತ್ತು ಗಸ್ತು ಪಡೆ ಇಲ್ಲೇ ಠಿಕಾಣಿ ಹೂಡಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ನನಗಿಂತ ಗಟ್ಟಿ ಅಲ್ಲವೇ ಅಲ್ಲ: ಜಿಟಿಡಿ
ಯಾದಗಿರಿ: ನಗರದ ಹತ್ತಿಕುಣಿ ಸರ್ಕಲ್ ಬಳಿ ಇರುವ ವಿವಾದಿತ ಟಿಪ್ಪು ಸರ್ಕಲ್ (Tippu Circle) ವಿವಾದ ತೀವ್ರ ಜಟಾಪಟಿಗೆ ಕಾರಣವಾಗಿದ್ದು, ಎರಡು ಕೋಮುಗಳ ನಡುವಿನ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿದೆ. ಇಂದು ಶಿವಾಜಿ ಸಂಘಟನೆಯಿಂದ ಸರ್ಕಲ್ ತೆರವುಗೊಳಿಸೋದಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಸಂಘರ್ಷದ ಮುನ್ಸೂಚನೆ ಅರಿತ ಪೊಲೀಸರು ತೀವ್ರ ನಿಗಾವಹಿಸಿದ್ದು, 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಯಾದಗಿರಿ ನಗರದಲ್ಲೀಗ ಟಿಪ್ಪು ಸರ್ಕಲ್ ವಿವಾದ ಶುರುವಾಗಿದ್ದು, ಎರಡು ಕೋಮುಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ನಗರದ ಹತ್ತಿಕುಣಿ ರಸ್ತೆ ಬಳಿ 2010ರಲ್ಲಿ ನಿರ್ಮಾಣವಾಗಿರುವ ಟಿಪ್ಪು ಸರ್ಕಲ್ ಅನಧಿಕೃತವಾಗಿದೆ ಅಂತಾ ಜೈ ಶಿವಾಜಿ ಸಂಘಟನೆ ಆರೋಪಿಸಿದೆ. ಅನಧಿಕೃತವಾಗಿ ನಿರ್ಮಾಣ ಮಾಡಿರೋ ವೃತ್ತದಲ್ಲಿ ಹಾಕಿರುವ ನಾಮಫಲಕವನ್ನ ತೆರವುಗೊಳಿಸಬೇಕು ಅಂತಾ ಒತ್ತಾಯಿಸಿ, ಗಡುವನ್ನೂ ನೀಡಲಾಗಿತ್ತು. ಆ ಗಡುವು ಮುಕ್ತಾಯವಾಗಿದ್ದು, ಪ್ರತಿಭಟನಾ ಮೆರವಣಿಗೆ ಟಿಪ್ಪು ಸರ್ಕಲ್ ಗೆ ಬಂದು ನಾವೇ ನಾಮಫಲಕ ಕಿತ್ತೊಗಿತೀವಿ ಅಂತಾ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಸವಾಲು ಹಾಕಿದ್ದಾರೆ. ಹೀಗಾಗಿ ಟಿಪ್ಪು ಸರ್ಕಲ್ ಬಳಿ ಇರೋ ಏರಿಯಾದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: BMTC ಬಸ್‍ನಿಂದ ಬರೋಬ್ಬರಿ 167 ಲೀಟರ್ ಡೀಸೆಲ್ ಕಳ್ಳತನ!
ಪ್ರತಿಭಟನೆ ಮೂಲಕ ನಾವೇ ಸರ್ಕಲ್ ಕಿತ್ತು ಹಾಕ್ತೀವಿ ಎಂದಿದ್ದ ಶಿವಾಜಿ ಸಂಘಟನೆ ಅಧ್ಯಕ್ಷ ಪರಶುರಾಮ್ ಶೇಗೂರಕರ್ ಹೇಳಿಕೆಗೆ ಟಿಪ್ಪು ಸಂಘಟನೆ ಮುಖಂಡರು ಕೆಂಡಕಾರಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಲ್ ತೆರವು ಮಾಡೋದಕ್ಕೆ ಬಿಡೋದಿಲ್ಲ ಅಂತಾ ಟಿಪ್ಪು ಸಂಘಟನೆಯಿಂದ ಪ್ರತಿ ಸವಾಲ್ ಹಾಕಲಾಗಿದ್ದು, ಸಾವು ನೋವಾದ್ರೆ ನಾವು ಕಾರಣ ಅಲ್ಲ ಅಂತಾ ಎರಡೂ ಸಂಘಟನೆಯವ್ರು ಹೇಳಿಕೆ ಕೊಟ್ಟಿದ್ದಾರೆ. ಈಗಾಗಲೇ ಎರಡೂ ಸಂಘಟನೆಯ ಮುಖಂಡರನ್ನ ಕರೆಸಿ ವಾರ್ನ್ ಮಾಡಿರೋ ಪೊಲೀಸರು ಟಿಪ್ಪು ಸರ್ಕಲ್ ಏರಿಯಾದಲ್ಲಿ 144 ಸೆಕ್ಷನ್ ಜಾರಿ (144 Section) ಮಾಡಿದ್ದಾರೆ. ಯಾವುದೇ ಹೋರಾಟಕ್ಕೂ ಪ್ರತಿಭಟನೆಗೆ ಅವಕಾಶ ಇಲ್ಲ ಅಂತಾ ಪ್ರತಿಭಟನೆ ಮಾಡಲು ನಿರ್ಧರಿಸಿದ್ದವ್ರಿಗೆ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಟಿಪ್ಪು ಸರ್ಕಲ್ ಬಳಿ ಡಿಆರ್ ವ್ಯಾನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಸದ್ಯ ವಿವಾದಿತ ಟಿಪ್ಪು ಸರ್ಕಲ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಿರೋದ್ರಿಂದ, ಪ್ರತಿಭಟನೆಗೆ ಅವಕಾಶ ಇಲ್ಲ ಅನ್ನೋದನ್ನ ಪೊಲೀಸರು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ರೆ ಹಠಕ್ಕೆ ಬಿದ್ದಿರೋ ಹೋರಾಟಗಾರರು ಸರ್ಕಲ್ ತೆರವುಗೊಳಿಸೋತನಕ ಹೋರಾಟ ಕೈ ಬಿಡೋದಿಲ್ಲ ಅಂತಾ ಪಟ್ಟು ಹಿಡಿದಿದ್ದು, ಏನಾಗುತ್ತೋ ಅನ್ನೋ ಆತಂಕ ಯಾದಗಿರಿ ಜನರಲ್ಲಿ ಮನೆ ಮಾಡಿದೆ.