Tag: ನಿಷೆಧ

  • ರಾಟ್‌ವೀಲರ್, ಪಿಟ್‌ಬುಲ್ ತಳಿಯ ನಾಯಿಗೆ ಈ ನಗರದಲ್ಲಿ ನಿಷೇಧ – ಉಲ್ಲಂಘಿಸಿದ್ರೆ ದಂಡ

    ರಾಟ್‌ವೀಲರ್, ಪಿಟ್‌ಬುಲ್ ತಳಿಯ ನಾಯಿಗೆ ಈ ನಗರದಲ್ಲಿ ನಿಷೇಧ – ಉಲ್ಲಂಘಿಸಿದ್ರೆ ದಂಡ

    ಲಕ್ನೋ: ಮನುಷ್ಯರ ಮೇಲೆ ನಾಯಿಗಳಿಂದಾಗುತ್ತಿರುವ (Dog) ದಾಳಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಉತ್ತರ ಪ್ರದೇಶದ ಈ ಒಂದು ನಗರದಲ್ಲಿ ರಾಟ್‌ವೀಲರ್ (Rottweiler) ಹಾಗೂ ಪಿಟ್‌ಬುಲ್ (Uttar Pradesh) ತಳಿಯ ನಾಯಿಗಳನ್ನು ನಿಷೇಧಿಸಲಾಗಿದೆ.

    ಹೌದು, ಕಾನ್ಪುರ (Kanpur) ಮುನ್ಸಿಪಲ್ ಕಾರ್ಪೊರೇಷನ್ ಪಿಟ್‌ಬುಲ್ ಹಾಗೂ ರಾಟ್‌ವೀಲರ್ ತಳಿಯ ನಾಯಿಗಳನ್ನು ನಿಷೇಧಿಸಿದೆ. ಈ ತಳಿಯ ನಾಯಿಗಳನ್ನು ಸಾಕಿರುವುದು ಕಂಡುಬಂದಲ್ಲಿ ಅವುಗಳನ್ನು ವಶಪಡಿಸಿಕೊಳ್ಳಲಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ 5,000 ರೂ. ದಂಡ ಹಾಕಿಸಲಾಗುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ಹೆಸರು ಬದಲಾವಣೆಗೆ ಮುಂದಾದ ಶೋಭಾ ಕರಂದ್ಲಾಜೆ – ಏನಿದು ಹೊಸ ವರಸೆ?

    ಈ ತಳಿಯ ನಾಯಿಗಳು ಆಕ್ರಮಣಕಾರಿ ಹಾಗೂ ಮನುಷ್ಯರಿಗೆ ಅಪಾಯಕಾರಿಯಾಗಿದೆ ಎಂದು ನಿಗಮ ಅಭಿಪ್ರಾಯಪಟ್ಟಿದೆ. ಈ ನಾಯಿಗಳು ಆರೋಗ್ಯವಾಗಿರಲು ಫಾರ್ಮ್ಹೌಸ್‌ನಂತಹ ತೆರೆದ ಸ್ಥಳದ ಅಗತ್ಯವಿದೆ. ಆದರೂ, ಜನರು ತಮ್ಮ ಮನೆಗಳಲ್ಲಿ ಇಕ್ಕಟ್ಟಾದ ಸ್ಥಳಗಳಲ್ಲಿ ಸಾಕುಪ್ರಾಣಿಗಳಾಗಿ ಇರಿಸುತ್ತಾರೆ. ಈ ಕಾರಣದಿಂದಾಗಿ ಅವು ಮನುಷ್ಯರ ಮೇಲೆ ಆಕ್ರಮಣ ಮಾಡುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಮನೆ ಬಾಗಿಲಿಗೆ ಪಡಿತರ – ಮಮತಾ ಬ್ಯಾನರ್ಜಿಯ ನೂತನ ಯೋಜನೆ ಕಾನೂನುಬಾಹಿರ ಎಂದ ಹೈಕೋರ್ಟ್

    ನಾಯಿಗಳಿಂದ ಜನರನ್ನು ರಕ್ಷಿಸಲು, ಅವುಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ನಗರದ ವ್ಯಾಪ್ತಿಯಲ್ಲಿ ಅವುಗಳ ಸಂತಾನೋತ್ಪತ್ತಿ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ನಗರಸಭೆ ಆಯುಕ್ತರಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಕಳುಹಿಸಲಾಗುವುದು ಎಂದು ವರದಿಯಾಗಿದೆ.

    ಕೆಲವು ವಾರಗಳ ಹಿಂದೆ ಲಕ್ನೋದಲ್ಲಿ ಪಿಟ್‌ಬುಲ್ ತಳಿಯ ನಾಯಿಯೊಂದು ತನ್ನ ಮಾಲೀಕನನ್ನೇ ಕೊಂದಿತ್ತು.

    Live Tv
    [brid partner=56869869 player=32851 video=960834 autoplay=true]

  • ತಲೆಯಿಂದ ಕಾಲಿನವರೆಗೆ ದೇಹ ಮುಚ್ಚಿಕೊಳ್ಳಿ – ಅಫ್ಘಾನ್ ಮಹಿಳೆಯರಿಗೆ ತಾಲಿಬಾನ್ ಆದೇಶ

    ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಶನಿವಾರ ಎಲ್ಲಾ ಅಫ್ಘಾನ್ ಮಹಿಳೆಯರಿಗೆ ಸಾರ್ವಜನಿಕವಾಗಿ ತಲೆಯಿಂದ ಕಾಲಿನವರೆಗೂ ಸಂಪೂರ್ಣ ಉಡುಪುಗಳನ್ನು ಧರಿಸಲು ಆದೇಶಿಸಿದೆ.

    ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನದ ಸರ್ಕಾರ ಪತನವಾಗಿ ತಾಲಿಬಾನ್ ಆಡಳಿತಕ್ಕೆ ಬಂತು. ಅಂದಿನಿಂದ ಅಲ್ಲಿನ ನಾಗರಿಕರಿಗೆ, ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡಿರುವ ತಾಲಿಬಾನ್ ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದೆ. ಇದನ್ನೂ ಓದಿ: 21 ವರ್ಷಗಳಿಂದ ಪತ್ನಿ ಶವದೊಂದಿಗಿದ್ದ ವೃದ್ಧನಿಂದ ಕೊನೆಗೂ ಅಂತ್ಯಕ್ರಿಯೆ!

    ತಾಲಿಬಾನ್ ಇತ್ತೀಚೆಗೆ ಹೊರಡಿಸಿರುವ ಆದೇಶಗಳಲ್ಲಿ ಮುಖ್ಯವಾಗಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಇತ್ತೀಚೆಗೆ ತಾಲಿಬಾನ್ ಮಹಿಳೆಯರಿಗೆ ಒಂಟಿಯಾಗಿ ಪ್ರಯಾಣಿಸುವುದನ್ನು ನಿಷೇಧಿಸಿತ್ತು. ಆದರೆ ಈ ಕಾನೂನಿಗೆ ಪ್ರಜೆಗಳು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮೌನವಾಗಿ ಕಾನೂನನ್ನು ನಿರ್ಲಕ್ಷಿಸಲಾಗಿದೆ. ಇದನ್ನೂ ಓದಿ: ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

    ತಾಲಿಬಾನ್‌ನ ಇತ್ತೀಚೆಗೆ ಕಾಬೂಲ್ ಹಾಗೂ ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್(ವಾಹನ ಪರವಾನಗಿ) ನೀಡುವುದನ್ನೂ ನಿಲ್ಲಿಸಿದೆ. ಅಫ್ಘಾನಿಸ್ತಾನದಲ್ಲಿ ಆಹಾರ ಹಾಗೂ ಅಗತ್ಯ ವಸ್ತುಗಳ ಸರಬರಾಜಿನ ತೀವ್ರ ಕೊರತೆ ಉಂಟಾಗಿದೆ. ದೇಶ ವಿನಾಶಕಾರಿ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ನಡುವೆಯೂ ಹಲವಾರು ನಿಷೇಧಗಳನ್ನು ಹೇರುತ್ತಿದೆ.