ಸ್ಟೈಲೀಶ್ ಆಗಿ ಸೀರೆಯುಟ್ಟು ಹಾಟ್ ಆಗಿ ನಿಶ್ವಿಕಾ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದಾರೆ. ಹೇರ್ ಸ್ಟೈಲ್‌ನಲ್ಲಿ ಮಿಂಚುತ್ತಾ ವಿವಿಧ ಭಂಗಿಯಲ್ಲಿ ನಟಿ ಪೋಸ್ ನೀಡಿದ್ದಾರೆ. ನಟಿಯ ಮುದ್ದಾದ ನಗುವಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.
ಇನ್ನೂ 2018ರಲ್ಲಿ ‘ಅಮ್ಮ ಐ ಲವ್ ಯೂ’ ಚಿತ್ರದ ಮೂಲಕ ನಿಶ್ವಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ನಟಿಸಿದರು.
ವಾಸು ನಾನು ಪಕ್ಕಾ ಕಮರ್ಷಿಯಲ್, ಪಡ್ಡೆಹುಲಿ, ಜೆಂಟಲ್‌ಮ್ಯಾನ್, ರಾಮರ್ಜುನ, ಸಖತ್, ಗಾಳಿಪಟ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿಶ್ವಿಕಾ ನಾಯಕಿಯಾಗಿ ನಟಿಸಿದರು.
ಈ ವರ್ಷ ತೆರೆಕಂಡ ‘ಕರಟಕ ದಮನಕ’ ಸಿನಿಮಾದಲ್ಲಿ ‘ಹಿತ್ತಲಕ ಕರಿಬ್ಯಾಡ ಮಾವ’ ಹಾಡಿಗೆ ಖ್ಯಾತ ನಟ ಪ್ರಭುದೇವ ಜೊತೆ ನಿಶ್ವಿಕಾ ಹೆಜ್ಜೆ ಹಾಕಿದರು. ಈ ಸಾಂಗ್ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಯೋಗರಾಜ್ ಭಟ್ ನಿರ್ದೇಶನ ಮಾಡಿದರು.
ಇದರ ಜೊತೆಗೆ ತೆಲುಗಿನಲ್ಲೂ ನಟಿಗೆ ಉತ್ತಮ ಅವಕಾಶಗಳು ಅರಸಿ ಬರುತ್ತಿವೆ. ಉತ್ತಮ ಕಥೆಗಾಗಿ ನಿಶ್ವಿಕಾ ಎದುರು ನೋಡ್ತಿದ್ದಾರೆ. ಸೂಕ್ತ ಕಥೆ ಸಿಕ್ಕಿದ್ದಲ್ಲಿ ನಟಿ ಟಾಲಿವುಡ್‌ಗೂ ಪಾದಾರ್ಪಣೆ ಮಾಡುತ್ತಾರೆ.
ಈ ವರ್ಷ ‘ಮಹಾನಟಿ’ ಎಂಬ ಶೋನಲ್ಲಿ ಪ್ರೇಮಾ, ತರುಣ್ ಸುಧೀರ್, ರಮೇಶ್ ಅರವಿಂದ್ ಜೊತೆ ನಿಶ್ವಿಕಾ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.
ಪಡ್ಡೆಹುಲಿ, ಜಂಟಲ್‌ಮ್ಯಾನ್ ಸಿನಿಮಾ ಖ್ಯಾತಿಯ ನಿಶ್ವಿಕಾ ನಾಯ್ಡು (Nishvika Naidu) ಇದೀಗ ರಶ್ಮಿಕಾ ಮಂದಣ್ಣ (Rashmika Mandanna) ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಬಳಿ ಸಕ್ಸಸ್‌ಗಾಗಿ ರಶ್ಮಿಕಾ ನಂತರ ನಿಶ್ವಿಕಾ ಕೂಡ ಪೂಜೆ ಮಾಡಿಸಿದ್ದಾರೆ. ಇದರ ವಿಡಿಯೋವನ್ನು ಜ್ಯೋತಿಷಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮತ್ತೆ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ ‘ಸೀತಾರಾಮಂ’ ಜೋಡಿ
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ನಿಶ್ವಿಕಾ ಈಗ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ. ಪೂಜೆಯ ಕಾರ್ಯದ ಬಳಿಕ ನಟಿಯ ಕುರಿತು ಮಾತನಾಡಿರುವ ವೇಣು ಸ್ವಾಮಿ, ನಿಶ್ವಿಕಾ ಕನ್ನಡದ ನಟಿ, ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಪ್ರಭುದೇವ ಅವರೊಂದಿಗೆ ಡ್ಯಾನ್ಸ್ ಮಾಡೋದು ಸುಮ್ಮನೆ ಅಲ್ಲ. ಪ್ರಭುದೇವ ಅವರಿಗೆ ಸಮವಾಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನಿಶ್ವಿಕಾ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ. ನಿಶ್ವಿಕಾಗೆ ಶುಭವಾಗಲಿ ಎಂದಿದ್ದಾರೆ.
ನಿಶ್ವಿಕಾ ಜಾತಕವನ್ನು ನಾನು ನೋಡಿದ್ದೀನಿ, ಅವರು ಒಳ್ಳೆಯ ಜಾತಕವನ್ನು ಹೊಂದಿದ್ದಾರೆ. ತೆಲುಗಿನಲ್ಲೂ (Tollywood) ಖ್ಯಾತಿ ಪಡೆದುಕೊಳ್ಳಬೇಕು. ಸ್ಟಾರ್ ಆಗಿ ಬೆಳೆಯುವಂತಹ ಜಾತಕವನ್ನು ಅವರು ಹೊಂದಿದ್ದಾರೆ. ಶೀಘ್ರವೇ ಅವರಿಗೆ ಯಶಸ್ಸು ಅಂತ ಪ್ರಾರ್ಥನೆ ಮಾಡ್ತೇನೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕೂಡ ವೇಣು ಸ್ವಾಮಿ ಬಳಿ ಪೂಜೆ ಮಾಡಿಸಿದರು. ಈಗ ಅವರು ನ್ಯಾಷನಲ್ ಸ್ಟಾರ್ ಆಗಿ ಬೆಳೆದಿದ್ದಾರೆ. ಬೆಂಗಳೂರಿನ ಬೆಡಗಿ ನಿಧಿ ಅಗರ್ವಾಲ್ ಕೂಡ ಪೂಜೆ ಮಾಡಿಸಿದರು. ಅವರು ತೆಲುಗಿನ ಸ್ಟಾರ್ ನಟರಿಗೆ ನಾಯಕಿಯಾಗಿ ನಟಿಸಿದ್ದಾರೆ. ಈಗ ಅದೇ ಹಾದಿಯಲ್ಲಿ ನಿಶ್ವಿಕಾ ಹೆಜ್ಜೆ ಇಟ್ಟಿದ್ದಾರೆ.
ನಟಿ ನಿಶ್ವಿಕಾ ನಾಯ್ಡುಗೆ (Nishvika Naidu) ನಾಳೆ ಹುಟ್ಟು ಹಬ್ಬದ (Birthday) ಸಂಭ್ರಮ. ಆದರೆ ಈ ಬಾರಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲವಂತೆ. ಹಾಗಂತ ಅವರೇ ಪೋಸ್ಟ್ ಮಾಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಭಾವನೆಗಳು ಏರುಪೇರಾದ ಕಾರಣದಿಂದಾಗಿ ಅವರು ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.
ಈ ವರ್ಷ ನನ್ನ ಜೀವನದಲ್ಲಿ ವೈಕ್ತಿಕವಾಗಿ ಭಾವನೆಗಳಲ್ಲಿ ಏರುಪೇರಾಗಿದೆ. ನನ್ನ ಲಿಯೋ ಇತ್ತೀಚೆಗೆ ನಮ್ಮನ್ನು ಬಿಟ್ಟು ಹೊರಟು ಬಿಟ್ಟು. ಈ ಆಕಸ್ಮಿಕ ಘಟನೆ ನನ್ನ ಜೀವನಕ್ಕೆ ಮತ್ತು ಭಾವನೆಗೆ ತುಂಬಾ ನೋವನ್ನುಂಟು ಮಾಡಿದೆ. ಹಾಗಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಯಾರೂ ನನ್ನ ಮನೆ ಹತ್ತಿರ ಬರಬೇಡಿ. ಭೇಟಿ ಮಾಡಬೇಡಿ. ಉಡುಗೊರೆ ತರಬೇಡಿ. ಇದ್ದಲ್ಲೇ ನನಗೆ ವಿಶ್ ಮಾಡಿ, ಹಾರೈಸಿ ಎಂದು ಅವರು ಕೇಳಿಕೊಂಡಿದ್ದಾರೆ. ನಿಶ್ವಿಕಾ ಸದ್ಯ ರಿಯಾಲಿಟಿ ಶೋವೊಂದರ ನಿರ್ಣಾಯಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ ಬೊಂಬಾಟ್ ಭೋಜನದಲ್ಲಿ (Bombat Bhojana) ಇದೀಗ ನವ ಸಂವತ್ಸರದ ಮೊದಲ ಹಬ್ಬ ಯುಗಾದಿಯ (Ugadi) ಸಂಭ್ರಮಾಚರಣೆ ಬೊಂಬಾಟ್ ಆಗಿ ನಡೆಯುತ್ತಿದೆ. ಇದನ್ನೂ ಓದಿ: ಮದುವೆಗೂ ಮುನ್ನ ಮೊದಲ ಪ್ರೀತಿಯ ಬಗ್ಗೆ ಸನ್ನಿ ಶಾಕಿಂಗ್ ಕಾಮೆಂಟ್
ಸಿಹಿ ಕಹಿ ಚಂದ್ರು (Sihi Kahi Chandru) ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಈ ಬಾರಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ವಾರವಿಡೀ ಸ್ಯಾಂಡಲ್‌ವುಡ್ ತಾರೆಗಳು ಆಗಮಿಸಲಿದ್ದಾರೆ.
ಬೇವು ಬೆಲ್ಲದ ಸವಿ ಹಂಚಲು ಇದೇ ಏಪ್ರಿಲ್ 8ರಂದು ಸೋಮವಾರ ನಟ ಸತೀಶ್ ನೀನಾಸಂ, ಮಂಗಳವಾರ ನಟಿ ನಿಶ್ವಿಕಾ ನಾಯ್ಡು (Nishvika Naidu) ಹಾಗೂ ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಬುಧವಾರ ನಟ ದಿಗಂತ್, ಗುರುವಾರ ಶಿವರಾಜ್ ಕೆಆರ್ ಪೇಟೆ, ಶುಕ್ರವಾರ ಕಿರುತೆರೆ ನಟ ಕಿರಣ್ ರಾಜ್ (Kiran Raj) ಹಾಗೂ ಶನಿವಾರ ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾ ಖ್ಯಾತಿಯ ದಡ್ಡ ಪ್ರವೀಣ ಆಗಮಿಸುತ್ತಿದ್ದಾರೆ. ಹೀಗಾಗಿ ವಾರಪೂರ್ತಿ ಮಧ್ಯಾಹ್ನ ವೀಕ್ಷಕರಿಗೆ ಬೊಂಬಾಟ್ ಮನರಂಜನೆ ಸಿಗಲಿದೆ.
ಯುಗಾದಿಯ ಪ್ರಯುಕ್ತ ಬೊಂಬಾಟ್ ಭೋಜನದಲ್ಲಿ ಬರುತ್ತಿದೆ ಹಬ್ಬದ ವಿಶೇಷ ಸಂಚಿಕೆಗಳು ಏಪ್ರಿಲ್ 8ರಿಂದ ಏಪ್ರಿಲ್ 14 ರವರೆಗೆ ಸೋಮ-ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.
ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿರುವ, ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi) ಚಿತ್ರದ ಮೊದಲ ಹಾಡು ‘ಹೊಡಿರೆಲೆ ಹಲಗಿ’ (Hodirele Halagi) ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಈ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತ್ತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡನ್ನು 16ಲಕ್ಷ ಜನ ವೀಕ್ಷಿಸಿದ್ದಾರೆ. ಪ್ರಶಂಸೆಯ ಮಳೆಯನ್ನೇ ಸುರಿಸುತ್ತಿದ್ದಾರೆ. ಮುಂದಿನ ಹಾಡು ಯಾವಾಗ ಬಿಡುಗಡೆಯಾಗುವುದೊ? ಎಂಬ ನಿರೀಕ್ಷೆಯಲ್ಲಿದ್ದಾರೆ.
ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ‘ಗರಡಿ’ ತಂಡ ಸಂತಸ ವ್ಯಕ್ತಪಡಿಸಿದೆ. ಯೋಗರಾಜ್ ಭಟ್ (Yogaraj Bhat) ಅವರು ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು (Nishvika Naidu) ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಕ್ವೀನ್ ನಿಶ್ವಿಕಾ ನಾಯ್ಡು (Nishvika Naidu) ಅವರು ಪ್ರತಿಭಾವಂತ ನಟಿ ಮಾತ್ರವಲ್ಲ ಅದ್ಭುತ ಡ್ಯಾನ್ಸ್ರ್ ಕೂಡ ಹೌದು. ತಾನು ಡ್ಯಾನ್ಸ್ ಮಾಡೋಕೂ ಸೈ ಅಂತಾ ಭಟ್ರ ಗರಡಿಯಲ್ಲಿ ನಟಿ ಸೊಂಟ ಬಳುಕಿಸಿರೋದೇ ಸಾಕ್ಷಿ. ‘ಹೊಡಿರಲೆ ಹಲಗಿ’ ಅಂತಾ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ
ಚಿತ್ರರಂಗದಲ್ಲಿ ಈಗ ಟ್ರೆಂಡ್ ಬದಲಾಗಿದೆ. ನಾಯಕಿಯಾಗಿಯೇ ಗುರುತಿಸಿಕೊಳ್ಳಬೇಕು ಅನ್ನೋದಕ್ಕಿಂತ ಒಳ್ಳೆಯ ಪಾತ್ರದಲ್ಲಿ ತಾವು ಕಾಣಿಸಿಕೊಳ್ಳಬೇಕು ಎಂದು ಯೋಚಿಸುವ ಮನಸ್ಥಿತಿ ಬದಲಾಗಿದೆ. ನಾಯಕಿ ಪಾತ್ರಕ್ಕೆ ಅಂಟಿಕೂರದೇ ಐಟಂ ಹಾಡಿಗೂ ನಾಯಕಿಯರು ಹೆಜ್ಜೆ ಹಾಕಲು ಮನಸ್ಸು ಮಾಡ್ತಿದ್ದಾರೆ. ಈ ಪ್ರಯೋಗವನ್ನ ಕತ್ರಿನಾ ಕೈಫ್, ಕರೀನಾ, ಸಮಂತಾ, ತಮನ್ನಾ ಭಾಟಿಯಾ ಹೀಗೆ ಹಲವು ನಟಿಯರು ಸೊಂಟ ಬಳುಕಿಸಿ ಗೆದ್ದಿದ್ದಾರೆ. ಈಗ ಅದೇ ದಾರಿಯಲ್ಲಿ ಕನ್ನಡದ ನಟಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಇಟ್ಟಿದ್ದಾರೆ. ಯೋಗರಾಜ್ ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi Film Kannada) ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ಭಟ್ಟರು ಬರೆದ ‘ಹೊಡಿರೆಲೆ ಹಲಗಿ’ ಹಾಡು ಇಂದು (ಜೂನ್ 14) ಬಿಡುಗಡೆ ಆಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳ ಝಲಕ್ ತೋರಿಸಲಾಗಿದೆ. ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ’ ಸಾಂಗ್ ಮೂಡಿಬಂದಿದೆ. ಮೇಘನಾ ಹಳಿಯಾಳ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ.
ಯೋಗರಾಜ್ ಭಟ್ ಅವರು ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ’ ಸಾಂಗ್ ಕೂಡ ಅದೇ ಶೈಲಿಯಲ್ಲಿ ಮೂಡಿ ಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಸಾಂಗ್ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್‌ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಸೌಮ್ಯ ಫಿಲ್ಮ್ಸ್, ಕೌರವ ನಿರ್ಮಾಣ ಸಂಸ್ಥೆ ಕಡೆಯಿಂದ ಗರಡಿ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಸೂರ್ಯ, ಬಿಸಿ ಪಾಟೀಲ್ (B.C. Patil), ಸೋನಾಲ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ.
ಸ್ಯಾಂಡಲ್ವುಡ್ (Sandalwood) ಬ್ಯೂಟಿ ಕ್ವೀನ್ ನಿಶ್ವಿಕಾ ನಾಯ್ಡು (Nishvika Naidu) ಅವರು ಪ್ರತಿಭಾವಂತ ನಟಿ ಮಾತ್ರವಲ್ಲ ಅದ್ಭುತ ಡ್ಯಾನ್ಸ್ರ್ ಕೂಡ ಹೌದು. ತಾನು ಡ್ಯಾನ್ಸ್ ಮಾಡೋಕೂ ಸೈ ಅಂತಾ ಭಟ್ರ ಗರಡಿಯಲ್ಲಿ ನಟಿ ಸೊಂಟ ಬಳುಕಿಸಿರೋದೇ ಸಾಕ್ಷಿ. ‘ಹೊಡಿರಲೆ ಹಲಗಿ’ ಅಂತಾ ನಿಶ್ವಿಕಾ ನಾಯ್ಡು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದನ್ನೂ ಓದಿ:ಹೊಸ ಐಷಾರಾಮಿ ಕಾರು ಖರೀದಿಸಿದ ‘ಕೆಜಿಎಫ್’ ಸ್ಟಾರ್ ಯಶ್
ಚಿತ್ರರಂಗದಲ್ಲಿ ಈಗ ಟ್ರೆಂಡ್ ಬದಲಾಗಿದೆ. ನಾಯಕಿಯಾಗಿಯೇ ಗುರುತಿಸಿಕೊಳ್ಳಬೇಕು ಅನ್ನೋದಕ್ಕಿಂತ ಒಳ್ಳೆಯ ಪಾತ್ರದಲ್ಲಿ ತಾವು ಕಾಣಿಸಿಕೊಳ್ಳಬೇಕು ಎಂದು ಯೋಚಿಸುವ ಮನಸ್ಥಿತಿ ಬದಲಾಗಿದೆ. ನಾಯಕಿ ಪಾತ್ರಕ್ಕೆ ಅಂಟಿಕೂರದೇ ಐಟಂ ಹಾಡಿಗೂ ನಾಯಕಿಯರು ಹೆಜ್ಜೆ ಹಾಕಲು ಮನಸ್ಸು ಮಾಡ್ತಿದ್ದಾರೆ. ಈ ಪ್ರಯೋಗವನ್ನ ಕತ್ರಿನಾ ಕೈಫ್, ಕರೀನಾ, ಸಮಂತಾ, ತಮನ್ನಾ ಭಾಟಿಯಾ ಹೀಗೆ ಹಲವು ನಟಿಯರು ಸೊಂಟ ಬಳುಕಿಸಿ ಗೆದ್ದಿದ್ದಾರೆ. ಈಗ ಅದೇ ದಾರಿಯಲ್ಲಿ ಕನ್ನಡದ ನಟಿ ನಿಶ್ವಿಕಾ ನಾಯ್ಡು ಕೂಡ ಹೆಜ್ಜೆ ಇಟ್ಟಿದ್ದಾರೆ. ಯೋಗರಾಜ್ ಭಟ್ಟರ ಗರಡಿಯಲ್ಲಿ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ (Garadi Film Kannada) ಸಿನಿಮಾದ ವಿಶೇಷ ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದಾರೆ. ಭಟ್ಟರು ಬರೆದ ‘ಹೊಡಿರೆಲೆ ಹಲಗಿ’ ಹಾಡು ಇಂದು (ಜೂನ್ 14) ಬಿಡುಗಡೆ ಆಗಿದೆ. ಈ ಲಿರಿಕಲ್ ವಿಡಿಯೋದಲ್ಲಿ ಒಂದಷ್ಟು ಡ್ಯಾನ್ಸ್ ಸ್ಟೆಪ್‌ಗಳ ಝಲಕ್ ತೋರಿಸಲಾಗಿದೆ. ಜೊತೆಗೆ ಮೇಕಿಂಗ್ ವಿಡಿಯೋ ಕೂಡ ಇದರಲ್ಲಿ ಇದೆ. ಎ. ಹರ್ಷ ಅವರ ನೃತ್ಯ ನಿರ್ದೇಶನದಲ್ಲಿ ನಿಶ್ವಿಕಾ ನಾಯ್ಡು ಅವರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಅವರ ಕುಣಿತ ನೋಡಿ ಪಡ್ಡೆಗಳಿಗೆ ಕಿಕ್ ಏರುವಂತಿದೆ. ವಿ. ಹರಿಕೃಷ್ಣ ಅವರ ಸಂಗೀತ ನಿರ್ದೇಶನದಲ್ಲಿ ‘ಹೊಡಿರೆಲೆ ಹಲಗಿ’ ಸಾಂಗ್ ಮೂಡಿಬಂದಿದೆ. ಮೇಘನಾ ಹಳಿಯಾಳ್ ಅವರು ಈ ಗೀತೆಗೆ ಧ್ವನಿ ನೀಡಿದ್ದಾರೆ.
ಯೋಗರಾಜ್ ಭಟ್ ಅವರು ಮತ್ತಾರೂ ಊಹಿಸಲಾಗದಂತಹ ಪದಪುಂಜಗಳ ಮೂಲಕ ಅವರು ಸಾಹಿತ್ಯ ರಚಿಸುತ್ತಾರೆ. ‘ಹೊಡಿರೆಲೆ ಹಲಗಿ’ ಸಾಂಗ್ ಕೂಡ ಅದೇ ಶೈಲಿಯಲ್ಲಿ ಮೂಡಿ ಬಂದಿದೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ಅವರು ಈ ಸಾಂಗ್ ಬರೆದಿದ್ದಾರೆ. ಕಲಾ ನಿರ್ದೇಶಕ ಹೊಸಮನೆ ಮೂರ್ತಿ ಅವರು ಹಾಕಿದ ವಿಶೇಷವಾದ ಸೆಟ್‌ಗಳಲ್ಲಿ ಇಡೀ ಹಾಡನ್ನು ಶೂಟ್ ಮಾಡಲಾಗಿದೆ. ಸೌಮ್ಯ ಫಿಲ್ಮ್ಸ್, ಕೌರವ ನಿರ್ಮಾಣ ಸಂಸ್ಥೆ ಕಡೆಯಿಂದ ಗರಡಿ ಚಿತ್ರವನ್ನ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಸೂರ್ಯ, ಬಿಸಿ ಪಾಟೀಲ್, ಸೋನಾಲ್, ಧರ್ಮಣ್ಣ ಕಡೂರು ಸೇರಿದಂತೆ ಹಲವರು ನಟಿಸಿದ್ದಾರೆ.
ಅಮ್ಮಾ ಐ ಲವ್‌ಯೂ, ಜೆಂಟಲ್‌ಮೆನ್, ಪಡ್ಡೆಹುಲಿ, ದಿಲ್ ಪಸಂದ್, ಗುರು ಶಿಷ್ಯರು, ಸಖತ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.
ಸರಿಗಮಪ (Sarigamapa) ಖ್ಯಾತಿಯ ಹನುಮಂತುಗೆ (Hanumantu) ಮದುವೆ ಯಾವಾಗ ಎನ್ನುವ ಪ್ರಶ್ನೆ ಅನೇಕ ಸಲ ಕೇಳಿ ಬಂದಿದೆ. ಹಲವು ಬಾರಿ ಗಾಸಿಪ್ ಮೂಲಕ ಈ ದೇಸಿ ಗಾಯಕನ ಮದುವೆಯನ್ನು ಕೂಡ ಮಾಡಿದ್ದಾರೆ. ಇಂಥದ್ದೊಂದು ಸುದ್ದಿ ಆದಾಗ ನಾಚೂತ್ತಲೇ ಹನುಮಂತು ನಿರಾಕರಿಸಿದ್ದಾರೆ. ಈ ಹುಡುಗನ ಮದುವೆ ಆಗುವ ಹುಡುಗಿ ಹೇಗಿರಬಹುದು? ಯಾರೆಲ್ಲ ಪ್ರಪೋಸ್ ಮಾಡಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ. ಜೀ ಕನ್ನಡದ ವೇದಿಕೆಯ ಮೇಲೆ ಸ್ಯಾಂಡಲ್ ವುಡ್ ನಟಿ ನಿಶ್ವಿಕಾ ನಾಯ್ಡು ಪ್ರಪೋಸ್ ಮಾಡಿದ್ದಾರೆ.
ರಿಯಾಲಿಟಿ ಶೋ ನಲ್ಲಿ ನಿಶ್ವಿಕಾ ನಾಯ್ಡು (Nishvika Naidu) ಅತಿಥಿಯಾಗಿ ಬಂದಿದ್ದರು. ಅದೇ ವೇದಿಕೆಯಲ್ಲಿ ಹನುಮಂತು ಕೂಡ ರಾಕಿಭಾಯ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದರು. ಇದೇ ವೇಳೆಯಲ್ಲಿ ನಿರೂಪಕಿ ಶ್ವೇತಾ ಚಂಗಪ್ಪ ಗೆಸ್ಟ್ ಚೇರ್ ಮೇಲೆ ಕೂತಿದ್ದ ನಿಶ್ವಿಕಾನ ತೋರಿಸುತ್ತಾ, ಇಂತಹ ಸುಂದರ ಹುಡುಗಿ ಕಂಡರೆ ಏನನಿಸುತ್ತದೆ ಎಂದು ಕೇಳಿದರು. ಆಗ ನಿಶ್ವಿಕಾ ಹಾರ್ಟ್ ಸಿಂಬಲ್ ತೋರಿಸುತ್ತಾ, ಪ್ರಪೋಸ್ (Propose) ಮಾಡಿದರು. ಅಲ್ಲದೇ, ನನಗಾಗಿ ಒಂದು ರೋಮ್ಯಾಂಟಿಕ್ ಸಾಂಗ್ ಹಾಡು ಎಂದು ನಿವೇದನೆ ಮಾಡಿದರು. ಅದಕ್ಕೆ ಹನುಮಂತು ನಾಚುತ್ತಲೇ ರಿಯ್ಯಾಕ್ಟ್ ಮಾಡಿದರು.
ನಿಶ್ವಿಕಾ ನಾಯ್ಡು ರೋಮ್ಯಾಂಟಿಕ್ ಗೀತೆ (Singer) ಹೇಳಲು ಹೇಳಿದರೆ, ಭಜನಿ ಪದ ಹಾಡುತ್ತೇನೆ ಎಂದು ಉತ್ತರಿಸಿದರು ಹನುಮಂತು. ರೋಮ್ಯಾಂಟಿಕ್ ಆಗಿ ಮಾತನಾಡುವುದು ಹೇಗೆ ಗೊತ್ತಾ? ಎಂದು ನಿಶ್ವಿಕಾ ನಾಯ್ಡು ಕೇಳಿದರು. ಹನುಮಂತು ಇಲ್ಲವೆಂದರು. ಹಾಗಾದರೆ, ನಾನು ಹೇಳಿ ಕೊಡಲಾ? ಎಂದು ಮತ್ತೆ ಪ್ರಶ್ನೆ ಮಾಡಿದರು ನಿಶ್ವಿಕಾ. ಹೇಳಿಕೊಡು ‘ಅಕ್ಕಾ’ ಎನ್ನುತ್ತಾ ನಿಶ್ವಿಕಾ ಅವರ ರೋಮ್ಯಾಂಟಿಕ್ ಮೂಡ್ ಅನ್ನೇ ಹಾಳು ಮಾಡಿದರು.
ಆದರೂ, ನಿಶ್ವಿಕಾಗಾಗಿ ಹನುಮಂತು ಹಾಡುತ್ತಾ, ‘ಸಂಸಾರ’ ಅಷ್ಟೊಂದು ಸಲೀಸಲ್ಲ. ಕೇಳು ಅಕ್ಕ ಎನ್ನುವ ಅರ್ಥದಲ್ಲಿ ಭಜನೆ ಪದವೊಂದನ್ನು ಹೇಳಿದರು. ಈ ಹಾಡು ಕೇಳುತ್ತಲೇ ಕೂತಲ್ಲಿಯೇ ನಿದ್ದೆಗೆ ಜಾರಿದರು ನಿಶ್ವಿಕಾ. ಇದೊಂದು ರೀತಿಯಲ್ಲಿ ಫನ್ನಿ ಫನ್ನಿಯಾಗಿಯೇ ವೇದಿಕೆಯ ಮೇಲೆ ನಡೆಯಿತು. ಆದರೆ, ಅದೇ ಮುಗ್ಧತೆಯಲ್ಲೇ ಹನುಮಂತು ವೇದಿಕೆಯ ಮೇಲಿದ್ದರು.
Live Tv
[brid partner=56869869 player=32851 video=960834 autoplay=true]
ಡಾರ್ಲಿಂಗ್ ಕೃಷ್ಣ (Darling Krishna) ನಾಯಕರಾಗಿ ನಟಿಸಿರುವ, ಬಹು ನಿರೀಕ್ಷಿತ ” ದಿಲ್ ಪಸಂದ್” (Dil Pasand) ಚಿತ್ರ ನವೆಂಬರ್ 11ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಇತ್ತೀಚೆಗೆ ಘೋಷಣೆ ಮಾಡಿದೆ. ರಶ್ಮಿ ಫಿಲಂಸ್ ಲಾಂಛನದಲ್ಲಿ ಸುಮಂತ್ ಕ್ರಾಂತಿ (Sumanth Kranti) ಅವರು ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ (Shivatejas) ನಿರ್ದೇಶಿಸಿದ್ದಾರೆ. ಪ್ರೇಮಕಥೆಯೊಂದಿಗೆ, ಕೌಟುಂಬಿಕ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದೆ.
ಚಿತ್ರೀಕರಣ ನಂತರದ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದ್ದು, ಮಾಸಾಂತ್ಯಕ್ಕೆ ಟೀಸರ್ ಬಿಡುಗಡೆಯಾಗುವ ಸಾಧ್ಯತೆಯಿದೆ. ನಾಲ್ಕು ಸುಮಧುರ ಹಾಡುಗಳಿಗೆ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನವಿದೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್
ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು (Nishvika Naidu) ಅಭಿನಯಿಸಿದ್ದಾರೆ. ಮೇಘ ಶೆಟ್ಟಿ, ಸಾಧು ಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸೌಂಡ್ ಮಾಡುತ್ತಿರುವ `ಗಾಳಿಪಟ -2′ ಸಿನಿಮಾದ ಸಕ್ಸಸ್ ನಂತರ ನಿರ್ದೇಶಕ ಯೋಗರಾಜ್ ಭಟ್, ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್ ಸಿನಿಮಾಗೆ ಡೈರೆಕ್ಷನ್ ಮಾಡಲು ಸಜ್ಜಾಗಿದ್ದಾರೆ. ಈ ಸ್ಟಾರ್ ನಟರಿಗೆ ನಾಯಕಿಯರನ್ನ ಕೂಡ ಯೋಗರಾಜ್ ಭಟ್ ಹುಡುಕಿದ್ದಾರೆ.
ಇತ್ತೀಚೆಗಷ್ಟೇ ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ನಲ್ಲಿ ನಿರ್ದೇಶನ ಮಾಡುವುದಾಗಿ ಭಟ್ರು ಅಧಿಕೃತವಾಗಿ ಹೇಳಿದ್ದರು. ಇದೀಗ ಈ ಸಿನಿಮಾಗಾಗಿ ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಚಿತ್ರಕ್ಕೆ ಚಂದನವನದ ಪ್ರತಿಭಾವಂತ ನಾಯಕಿಯರನ್ನೇ ಭಟ್ರು ಹುಡುಕಿದ್ದಾರೆ.
ಬಿಗ್ ಸ್ಟಾರ್‌ಗಳಿರುವ ಈ ಪ್ರಾಜೆಕ್ಟ್ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದೇ ಆಗಸ್ಟ್ 20ಕ್ಕೆ ಸಿನಿಮಾ ಕೂಡ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್‌ವುಡ್‌ನ ಚೆಂದದ ನಟಿ ನಿಶ್ವಿಕಾ ನಾಯ್ಡು ಬತ್ತಳಿಕೆಯಲ್ಲಿ ಕೈ ತುಂಬಾ ಸಿನಿಮಾಗಳಿವೆ. ಹೊಸ ಬಗೆಯ ಪಾತ್ರಗಳ ಮೂಲಕ ಸೌಂಡ್ ಮಾಡ್ತಿದ್ದಾರೆ. ಸದ್ಯ ನಿಶ್ವಿಕಾ ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿ, ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ.
ಚಂದನವನದ ಮುದ್ದು ಮೊಗದ ಸುಂದರಿ ನಿಶ್ವಿಕಾ, ಚಿರಂಜೀವಿ ಸರ್ಜಾಗೆ ಅಮ್ಮಾ ಐ ಲವ್ ಯೂ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಪರಿಚಿತರಾದರು. ಬಳಿಕ ಪಡ್ಡೆಹುಲಿ, ಜಂಟಲ್‌ಮೆನ್, ಸಖತ್, ಚಿತ್ರಗಳ ಮೂಲಕ ಮೋಡಿ ಮಾಡಿದ್ದರು. ಸದ್ಯ ನಿಶ್ವಿಕಾ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿದ್ದಾರೆ. ನಯಾ ಲಕ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ಠಾಕ್ರೆ ಅಭಿಮಾನಿಗಳು
ಬ್ಲ್ಯಾಕ್ ಕಲರ್ ಲಾಂಗ್ ಡ್ರೆಸ್‌ನಲ್ಲಿ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸಖತ್ ಬೆಡಗಿಯ ಹೊಸ ಲುಕ್ಕಿಗೆ ಪಡ್ಡೆಹುಡುಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇನ್ನು ನಿಶ್ವಿಕಾ ಬತ್ತಳಿಕೆಯಲ್ಲಿ `ಗಾಳಿಪಟ 2′, `ಗುರು ಶಿಷ್ಯರು’, `ದಿಲ್ ಪಸಂದ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯದಲ್ಲೇ ಒಂದೊಂದೇ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.