Tag: ನಿಶ್ಚತಾರ್ಥ

  • ಸ್ಯಾಂಡಲ್‍ವುಡ್ ನಿರ್ಮಾಪಕನ ಜೊತೆ ನಟಿ ಭಾವನಾ ಮೆನನ್ ನಿಶ್ಚಿತಾರ್ಥ

    ಸ್ಯಾಂಡಲ್‍ವುಡ್ ನಿರ್ಮಾಪಕನ ಜೊತೆ ನಟಿ ಭಾವನಾ ಮೆನನ್ ನಿಶ್ಚಿತಾರ್ಥ

    ತಿರುವನಂತಪುರಂ: ಬಹುಭಾಷಾ ನಟಿ ಭಾವನಾ ಮೆನನ್‍ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಸ್ಯಾಂಡಲ್‍ವುಡ್‍ನಲ್ಲಿ ರೋಮಿಯೋ ಚಿತ್ರದ ನಿರ್ಮಾಪಕ ನವೀನ್ ಜೊತೆ ನಟಿ ಭಾವನರವರ ಎಂಗೇಜ್‍ಮೆಂಟ್ ನೆರವೇರಿದೆ.

    ನವೀನ್ ಮತ್ತು ಭಾವನ ನಡುವೆ ಲವ್ ಇದೆ ಎಂದು ಗಾಂಧಿನಗರದಲ್ಲಿ ಗಾಸಿಪ್‍ಗಳು ಹರಿದಾಡಿದ್ದವು. ಈಗ ಮಾತಿಗೆ ಪುಷ್ಟಿ ಎನ್ನುವಂತೆ ಇಂದು ಭಾವನಾ ಮತ್ತು ನವೀನ್ ನಿಶ್ಚಿತಾರ್ಥ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

    ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜು ವಾರಿಯರ್ ಹಾಗೂ ಸಂಯುಕ್ತ ವರ್ಮಾ ಉಪಸ್ಥಿತರಿದ್ದರು.

    ನವೀನ್ ಹಾಗೂ ಭಾವನಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು ಇದೇ ಜೂನ್‍ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಹರಿದಾಡುತಿತ್ತು.

    ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ ‘ವಿಷ್ಣುವರ್ಧನ್’ ಹಾಗೂ ‘ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

    ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ