Tag: ನಿಶಾ ರವಿಕೃಷ್ಣನ್‌

  • ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

    ಅರೇರೇ ಯಾರೋ ಇವಳು ಅಂತಿದ್ದಾರೆ ವಿನಯ್ ರಾಜ್ ಕುಮಾರ್!

    ಈಗಾಗಲೇ ಸಿನಿಪ್ರಿಯರ ಮನಸ್ಸನ್ನ ಗೆದ್ದಿರುವಂತಹ `ಅಂದೊಂದಿತ್ತು ಕಾಲ’ (Andondittu Kaala) ಚಿತ್ರದ `ಮುಂಗಾರು ಮಳೆಯಲ್ಲಿ…’ ಎಂಬ ಹಾಡು ಸೂಪರ್ ಹಿಟ್ ಆಗಿದ್ದು, ಯೂಟ್ಯೂಬ್‌ನಲ್ಲಿ 36.4 ಮಿಲಿಯನ್ ವೀವ್ಸ್ ಆಗಿದೆ. ಹಾಗೆಯೇ ಈ ಸಾಂಗ್‌ನ ರೀಲ್ಸ್ ಬಹಳಷ್ಟು ಅಭಿಮಾನಿಗಳು ಮಾಡಿ ಅಪ್ಲೋಡ್ ಕೂಡ ಮಾಡಿದ್ದಾರೆ. ಇದು ಇಡೀ ಚಿತ್ರತಂಡದ ಸಂಭ್ರಮವನ್ನು ಹೆಚ್ಚು ಮಾಡಿದ್ದು, ಚಿತ್ರ ಯಶಸ್ವಿ ಆಗುವ ನಿರೀಕ್ಷೆಯಲ್ಲಿದ್ದಾರೆ. ಈಗ ತಮ್ಮ ಚಿತ್ರದ ಎರಡನೇ ಹಾಡನ್ನು ರಿಲೀಸ್ ಮಾಡುವುದರ ಜೊತೆಗೆ ಪತ್ರಿಕಾಗೋಷ್ಠಿ ಆಯೋಜನೆ ಮಾಡಿತ್ತು ಚಿತ್ರತಂಡ.

    ವೇದಿಕೆಯ ಮೇಲೆ ಈ ಚಿತ್ರದ ಮೊದಲ ಹಾಡಿನ ಫೀಮೇಲ್ ವರ್ಷನ್ ರುಚಿತ ರಾಜೇಶ್ ಎಂಬ ಯುವ ಗಾಯಕಿ ಹಾಡಿ ಗಮನ ಸೆಳೆದರು. ತದನಂತರ ಎರಡನೇ ಗೀತೆಯನ್ನು ಇಡೀ ರಾಜ್ಯಕ್ಕೆ 10ನೇ ತರಗತಿಯಲ್ಲಿ ಫಸ್ಟ್ ಬಂದ ಮಲ್ಲಸಂದ್ರದಲ್ಲಿರುವ ಬಿ.ಎನ್ ಆರ್ ಪಬ್ಲಿಕ್ ಸ್ಕೂಲ್ ಶಾಲೆಯ ವಿದ್ಯಾರ್ಥಿಗಳಿಂದ (School Students) ರಿಲೀಸ್ ಮಾಡಿಸಿದ್ದು ಮತ್ತೊಂದು ವಿಶೇಷವಾಗಿದ್ದು, ಇದಕ್ಕೆ ಕಾರಣ ಏನು ಎಂಬುವುದು ಹಾಡಿನಲ್ಲಿ ತಿಳಿಯುತ್ತದೆ.

    ನಟ ವಿನಯ್ ರಾಜಕುಮಾರ್ (Vinay Rajkumar) ಮಾತನಾಡುತ್ತಾ ಈ ಚಿತ್ರದ ಮೊದಲ ಸಾಂಗ್ ದೊಡ್ಡ ಹಿಟ್ ಆಗಿದೆ. ನಾನು ಕೂಡ ಸಾಂಗ್ ಅನ್ನು ಫ್ಯಾನ್ಸುಗಳು ರೀಲ್ಸ್ ಮಾಡಿದ್ದು ನೋಡಿದೆ. ಮಿಲಿಯನ್ಸ್ ವಿವ್ಯೂ ರಿಚ್ ಆಗಿರೋದು ನಮ್ಮ ತಂಡಕ್ಕೂ ನನಗೂ ಖುಷಿ ಇದೆ. ಈಗ ನಮ್ಮ ಚಿತ್ರದ 2ನೇ ಹಾಡು ಬಿಡುಗಡೆಯಾಗುತ್ತಿದೆ, ಇದು ನನ್ನ ಪೆವರೇಟ್ ಗೀತೆ. ನಾನು ನಿರ್ದೇಶಕ ಕೀರ್ತಿಗೆ ಇದನ್ನೇ ಮೊದಲು ಬಿಡಿ ಎಂದಿದ್ದೆ. ಈ ಚಿತ್ರದಲ್ಲಿ ನಾನು 16 ವರ್ಷದ ಹುಡುಗನ ಗೆಟಪ್‌ನಲ್ಲಿ ಮಾಡುವುದು ಚಾಲೆಂಜ್ ಆಗಿತ್ತು. ವೈಟ್ ಲಾಸ್ ಮಾಡುವುದು ಕಷ್ಟ ಆಗಿತ್ತು. ಹಾಡು ತುಂಬಾ ಚೆನ್ನಾಗಿ ಬಂದಿದೆ. ಲೊಕೇಶನ್, ಸಾಂಗ್ ಎಲ್ಲವೂ ಸೊಗಸಾಗಿದೆ. ಶಾಲಾ ದಿನಗಳಲ್ಲಿ ಇಷ್ಟಪಟ್ಟ ಹುಡುಗಿಯ ಹಿಂದೆ ಓಡಾಡಿದ್ದೇನೆ. ಆದರೆ ನಿಜ ಜೀವನದಲ್ಲಿ ಹತ್ತನೇ ತರಗತಿ ಓದುವಾಗ ನಾನು ಬಹಳ ಮುಗ್ಧ ಹುಡುಗ. ಮೂರು ಶೇಡ್ ಗಳಲ್ಲಿ ನನ್ನ ಪಾತ್ರ ಸಾಗುತ್ತದೆ. ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ. ನಿಮ್ಮ ಬೆಂಬಲ ಇರಲಿ ಎಂದರು. ಇನ್ನು ಈ ಚಿತ್ರದ ಶಾಲಾ ವಿದ್ಯಾರ್ಥಿಯ ಹಾಡಿನಲ್ಲಿ ಕಾಣಿಸಿಕೊಂಡಿರುವ ಯುವ ನಟಿ ನಿಶಾ ರವಿಕೃಷ್ಣನ್ ಮಾತನಾಡುತ್ತಾ ಇದರಲ್ಲಿ ನನ್ನದೊಂದು ಸಣ್ಣ ಪಾತ್ರವಾದರೂ ಬಹಳ ಇಂಪಾರ್ಟೆಂಟ್ ಆಗಿದೆ. ನಿರ್ದೇಶಕರು, ನಿರ್ಮಾಪಕರು ತುಂಬಾ ಸಹಕಾರ ನೀಡಿದ್ದಾರೆ. ಅದೇ ರೀತಿ ನಟ ವಿನಯ್ ರಾಜಕುಮಾರ್ ಜೊತೆ ಅಭಿನಯಿಸಿದ್ದು ಖುಷಿ ತಂದಿದೆ. ಸುಂದರ ಪ್ರಮುಖ ಪಾತ್ರವಾಗಿದ್ದು, ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂದರು.

    ನಿರ್ದೇಶಕ ಕೀರ್ತಿ ಕೃಷ್ಣಪ್ಪ ಮಾತನಾಡುತ್ತಾ ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈಗಾಗಲೇ ನಮ್ಮ ಚಿತ್ರದ ಮೊದಲ ಸಾಂಗ್ಸ್ ಮಿಲಿಯನ್ಸ್ ಗಟ್ಟಲೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದು, ಒಳ್ಳೆ ರೆಸ್ಪಾನ್ಸ್ ನಮಗೆ ಸಿಕ್ಕಿದೆ. ನಾವು ಆ ಸಾಂಗ್ ಶೂಟಿಂಗ್ ಮಾಡುವ ಬಹಳಷ್ಟು ಮಳೆ ಇತ್ತು, ಕೊರೋನಾ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ್ದು, ಆಗ ಯುಗಾದಿಯ ಹಬ್ಬ, ನಿರ್ಮಾಪಕರು ನಮ್ಮ ಜೊತೆ ಇದ್ದು ಸಂಭ್ರಮಿಸಿದ್ದ ಕ್ಷಣ ಮರೆಯಲು ಸಾಧ್ಯವಿಲ್ಲ. ನಮಗೆ ಏನು ಬೇಕು ಅದೆಲ್ಲವನ್ನು ನಿರ್ಮಾಪಕ ಭುವನ್ ಸುರೇಶ್ ನೀಡಿದ್ದಾರೆ. ನಿರ್ಮಾಪಕರು ಚಿತ್ರ ಚೆನ್ನಾಗಿ ಬರಲು ಬಹಳಷ್ಟು ಸಪ್ಪೋರ್ಟ್ ಮಾಡುತ್ತಿದ್ದಾರೆ. ನಮ್ಮ ಚಿತ್ರದಲ್ಲಿ ವಿನಯ್ ರಾಜಕುಮಾರ್ ಬಹಳ ಸಪೋರ್ಟ್ ಮಾಡಿದ್ದು, ತುಂಬಾ ಸೈಲೆಂಟ್ ವ್ಯಕ್ತಿತ್ವ, ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

    ಈಗ ಬಿಡುಗಡೆಯಾಗಿರುವ ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ವಿನಯ್ ರಾಜಕುಮಾರ್ ಹಾಗೂ ನಿಶಾ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪತ್ನಿಯವರು ನಟಿ ನಿಶಾ ರನ್ನು ಆಯ್ಕೆ ಮಾಡಿದ್ದು ಮರೆಯುವಂತಿಲ್ಲ. ನಮ್ಮ ಚಿತ್ರದ ಇನ್ನೂ ಮೂರು ಹಾಡು, ಟ್ರೇಲರ್ ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಆಗಸ್ಟ್ 29ರಂದು ಸಿನಿಮಾ ರಿಲೀಸ್ ಆಗಲಿದೆ. ಇದೊಂದು ಪ್ಯೂರ್ ಲವ್ ಹಾಗೂ ಗೆಳೆತನ ಚಿತ್ರವಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತೆ ಎಂದರು.

    ಭುವನ್ ಮ್ಯೂವಿಸ್ ಬ್ಯಾನರ್ ನ ಭುವನ್ ಸುರೇಶ್ ಮಾತನಾಡುತ್ತಾ ನನಗೆ ನಮ್ಮ ಹುಡುಗರ ಶ್ರಮದ ಬಗ್ಗೆ ಬಹಳ ನಂಬಿಕೆ ಇದೆ. ಚಿತ್ರ ಚೆನ್ನಾಗಿ ಬಂದಿದೆ. ಇದಕ್ಕೂ ಮೊದಲು ನಾನು ಕಾಲಾಪತ್ತರ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ಈಗಾಗಲೇ ಮುಂಗಾರು ಮಳೆಯಲ್ಲಿ… ಹಾಡು ದೊಡ್ಡ ಹಿಟ್ ಆಗಿದ್ದು , ನನ್ನ ರಾಜಕೀಯ ಸ್ನೇಹಿತರು ಹಾಗೂ ನಮ್ಮೂರಿನ ಜನರು ಹಾಡಿನ ಬಗ್ಗೆ ಮೆಚ್ಚುಗೆಯನ್ನು ತಿಳಿಸಿದ್ದಾರೆ. ಈಗ ನಮ್ಮ ಚಿತ್ರದ ಎರಡನೇ ಹಾಡು ಕೂಡ ಹಿಟ್ ಆಗಲಿ. ನಾನು ನನ್ನ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡುತ್ತೇನೆ. ನೀವು ಎಲ್ಲರೂ ಬಂದು ನೋಡಿ ಹರಸಿ ಎಂದರು. ಸಂಗೀತ ನಿರ್ದೇಶಕ ರಾಘವೇಂದ್ರ .ವಿ ಮಾತನಾಡುತ್ತಾ ನಮ್ಮ ಮೊದಲ ಸಾಂಗ್ ಮೇಘಾ ಹಿಟ್ ಆಗಿದ್ದು , ನಿಮ್ಮಗಳ ಪ್ರೋತ್ಸಾಹ ಇದಕ್ಕೆ ಕಾರಣ. ಈಗ ಎರಡನೇ ಹಾಡು ಎ2 ಮ್ಯೂಸಿಕ್ ನಲ್ಲಿ ರಿಲೀಸ್ ಆಗಿದೆ. ನಿರ್ದೇಶಕ, ನಿರ್ಮಾಪಕರಿಗೆ ಧನ್ಯವಾದ ಹೇಳುವೆ. ಇಡೀ ಸಾಂಗ್ ನಲ್ಲಿ ನಿಶಾ ಅವರ ಲುಕ್ ಹಾಗೂ ವಿನಯ್ ಇನೂಸೆಂಟ್ ಹೈಲಟ್ ಆಗಿದೆ. ಪ್ರತಿ ಶಾಟ್ ಕೂಡ ಅದ್ಭುತವಾಗಿ ಬಂದಿದೆ. ಚಿತ್ರದಲ್ಲಿ ಇನ್ನೂ ಮೂರು ಹಾಡುಗಳಿವೆ ಎಂದರು. ಇನ್ನೂ ಛಾಯಾಗ್ರಹಕ ಅಭಿಷೇಕ್ ಕಾಸರಗೋಡು , ಸಂಕಲನಗಾರ ಕೀರ್ತಿ, ನೃತ್ಯ ನಿರ್ದೇಶಕ ರಘು ಆರ್.ಜೆ ಚಿತ್ರದ ಕುರಿತು ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

    ಈಗ ‘ಅರೇರೇ ಯಾರೋ ಇವಳು …’ ಸಾಂಗ್ ರಿಲೀಸ್ ಆಗಿದ್ದು , 90ರ ಕಾಲಘಟ್ಟದಲ್ಲಿ ನಾಯಕ ವಿನಯ್ ರಾಜ್ ಕುಮಾರ್ ಹಾಗೂ ನಾಯಕಿ ನಿಶಾ ಹರಿಕೃಷ್ಣನ್ 10ನೇ ತರಗತಿ ವಿದ್ಯಾರ್ಥಿಗಳಾಗಿ ಅಭಿನಯಿಸಿದ್ದಾರೆ. ಹಾಡು ಮಧುರವಾಗಿ ಮನಮುಟ್ಟುವಂತಿದೆ. ಈ “ಅಂದೊಂದಿತ್ತು ಕಾಲ” ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಮತ್ತು ಅದಿತಿ ಜೊತೆಗೆ ನಿಶಾ ರವಿಕೃಷ್ಣನ್, ಜಗ್ಗಪ್ಪ, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದು, ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ ಮುಂತಾದ ಕಡೆ ಚಿತ್ರದ ಚಿತ್ರೀಕರಣವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ಚಿತ್ರ ತಂಡ ನೀಡಿದೆಯಂತೆ.

  • ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್

    ಕನಸಿನ ಮನೆ ಕಟ್ಟಿದ ಸಂಭ್ರಮದಲ್ಲಿ ನಿಶಾ ರವಿಕೃಷ್ಣನ್

    ‘ಗಟ್ಟಿಮೇಳ’ ಸೀರಿಯಲ್ ಖ್ಯಾತಿಯ ನಿಶಾ ರವಿಕೃಷ್ಣನ್ (Nisha Ravikrishnan) ಅವರು ಕನಸಿನ ಹೊಸ ಮನೆ ಗೃಹಪ್ರವೇಶ (House Warming) ಮಾಡಿದ ಸಂಭ್ರಮದಲ್ಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

     

    View this post on Instagram

     

    A post shared by Manjunath Magaji (@manjunathmagaji24)

    ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿರುವ ನಿಶಾ ಅವರಿಗೆ ಚೆಂದದ ಮನೆ ಕಟ್ಟಿಸಬೇಕು ಎಂಬ ಕನಸಿತ್ತು. ಅದರಂತೆ ಮೇ 9ರಂದು ಶುಭ ಶುಕ್ರವಾರ ನಿಶಾ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಗಣಪತಿ ಹೋಮ ಹಾಗೂ ಸತ್ಯನಾರಾಯಣ ಪೂಜೆ ಮಾಡಿಸಿ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಗೆ ದೇಣಿಗೆ ಘೋಷಿಸಿದ ವಿಜಯ್ ದೇವರಕೊಂಡ – ಫ್ಯಾನ್ಸ್ ಮೆಚ್ಚುಗೆ

    ಈ ಕಾರ್ಯಕ್ರಮದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿರುವ ‘ಅಣ್ಣಯ್ಯ’ ಸೀರಿಯಲ್ ತಂಡ ಕೂಡ ಭಾಗಿಯಾಗಿದ್ದರು. ನಟಿಗೆ ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Nagashree Begar (@nagashree__begar)

    ‘ಸರ್ವ ಮಂಗಲ ಮಾಂಗಲ್ಯೆ’ ಸೀರಿಯಲ್‌ನಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದ ನಿಶಾ ಆ ನಂತರ ಗಟ್ಟಿಮೇಳ ಸೀರಿಯಲ್‌ನಲ್ಲಿ ನಾಯಕಿಯಾಗಿ ಮಿಂಚಿದ್ದರು. ‘ರೌಡಿ ಬೇಡಿ’ ಎಂದೇ ಫೇಮಸ್ ಆಗಿದ್ದರು. ಈಗ ‘ಅಣ್ಣಯ್ಯ’ ಸೀರಿಯಲ್‌ನಲ್ಲಿ ಪಾರ್ವತಿ ಹೆಸರಿನ ಡಾಕ್ಟರ್ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ತೆಲುಗಿನ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ.

  • ಜಸ್ ಕರಣ್ ಸಿಂಗ್ ಧ್ವನಿಯಾದ ಹಾಡಿನೊಂದಿಗೆ ಎದೆಗಿಳಿದ ಅಂಶು!

    ಜಸ್ ಕರಣ್ ಸಿಂಗ್ ಧ್ವನಿಯಾದ ಹಾಡಿನೊಂದಿಗೆ ಎದೆಗಿಳಿದ ಅಂಶು!

    ಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ (Nisha Ravikrishnan) ನಾಯಕಿಯಾಗಿ ನಟಿಸಿರುವ ಚಿತ್ರ ‘ಅಂಶು’. ಇದುವರೆಗೂ ತನ್ನದೇ ಆದ ಗಟ್ಟಿತನದ ಸುಳಿವಿನೊಂದಿಗೆ ಸೆಳೆಯುತ್ತಾ ಬಂದಿರುವ ಈ ಚಿತ್ರದ ಅರ್ಥಪೂರ್ಣ ಹಾಡೊಂದು ಇದೀಗ ಬಿಡುಗಡೆಯಾಗಿದೆ. ಕೇಳಿದಾಕ್ಷಣವೇ ನೇರವಾಗಿ ಎದೆಗಿಳಿದು ಬಿಡುವ ಈ ಹಾಡಿಗೀಗ ಕೇಳುಗರಿಂದ ಭರಪೂರ ಮೆಚ್ಚುಗೆ ಹರಿದು ಬರಲಾರಂಭಿಸಿದೆ. ಚಿತ್ರ ಸನ್ನಿವೇಶಗಳಿಗೆ ತಕ್ಕುದಾಗಿ ರೂಪುಗೊಂಡಂತಿರುವ ಸದರಿ ಹಾಡು, ಒಂದಿಡೀ ಕಥೆಯ ಆತ್ಮವನ್ನೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವಂತೆ ಭಾಸವಾಗುತ್ತಿದೆ. ಇದೇ ನವೆಂಬರ್ 21ರಂದು ಬಿಡುಗಡೆಯಾಗಲಿರುವ ‘ಅಂಶು’ (Anshu Film) ಈ ಹಾಡಿನ ಮೂಲಕವೇ ಪ್ರೇಕ್ಷಕರಿಗೆಲ್ಲ ಮತ್ತಷ್ಟು ಆಪ್ತವಾಗಿದೆ.


    ಮೂಲತಃ ಪಂಜಾಬಿನವರಾಗಿದ್ದರೂ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಕನ್ನಡದವರೇ ಎಂಬಂತಾಗಿರುವಾತ ಗಾಯಕ ಜಸ್ ಕರಣ್ ಸಿಂಗ್. ಕನ್ನಡದಲ್ಲಿ ಬಹು ಬೇಡಿಕೆ ಹೊಂದಿರುವ ಜಸ್ ಕರಣ್ (Jaskaran Singh) ಈ ಹಾಡಿಗೆ ಧ್ವನಿಯಾಗಿದ್ದಾರೆ. ‘ನೀರಾ ಮೇಲೆ ಗುಳ್ಳೆ ಬಿಂಬ ಕಾಣೋ ವೇಳೆ, ನಿಜವು ಒಂದು ಸಳ್ಳೇ ಅಲೆಮಾರಿ’ ಎಂಬ ಸಮ್ಮೋಹಕ ಸಾಲುಗಳನ್ನು ಬರೆದಿರುವವರು ಮಹೇಂದ್ರ ಗೌಡ. ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿಗೆ ಕೇಳುಗರ ಕಡೆಯಿಂದ ಬರುತ್ತಿರೋ ಪ್ರತಿಕ್ರಿಯೆಗಳೇ ಎಲ್ಲವನ್ನೂ ಹೇಳುವಂತಿವೆ. ಇದರ ದೃಶ್ಯಗಳ ಮೂಲಕ ನಿಶಾ ರವಿಕೃಷ್ಣನ್ ಪಾತ್ರದ ಒಂದಷ್ಟು ಚಹರೆಗಳನ್ನೂ ಕೂಡ ಚಿತ್ರತಂಡ ಜಾಹೀರು ಮಾಡಿದೆ.

    ಇದು ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ. ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಪ್ರಮೋದ್ ಚಿನ್ನಸ್ವಾಮಿ, ಡಾ.ಮಧುರಾಜ್, ವೀರನ್ ಗೌಡ ಸಹ ನಿರ್ಮಾಪಕರಾಗಿ ಜೊತೆಯಾಗಿದ್ದಾರೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಣ, ಆಶಾ ಎಂ ಥಾಮಸ್ ವಸ್ತ್ರವಿನ್ಯಾಸದ ಮೂಲಕ ಈ ಚಿತ್ರ ಕಳೆಗಟ್ಟಿಕೊಂಡಿದೆ. ನವ ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ನವೆಂಬರ್ 21ರ ಗುರುವಾರ ಅಂಶು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

  • ಟ್ರೈಲರ್ ಮೂಲಕ ಬೆರಗು ಮೂಡಿಸೋ ನಿಶಾ ನಟನೆಯ ಅಂಶು

    ಟ್ರೈಲರ್ ಮೂಲಕ ಬೆರಗು ಮೂಡಿಸೋ ನಿಶಾ ನಟನೆಯ ಅಂಶು

    ಸಾಮಾಜಿಕ ಪಲ್ಲಟಗಳಿಗೆ ಕಣ್ಣಾದ ಕಥೆ ಹೊಂದಿರುವ ಚಿತ್ರಗಳೆಂದರೆ ಕನ್ನಡದ ಪ್ರೇಕ್ಷಕರಲ್ಲಿ ಒಂದು ಬಗೆಯ ಸೆಳೆತವಿದೆ. ಅಂಥಾದ್ದೊಂದು ಕಥೆ ಭಿನ್ನ ಜಾನರಿನಲ್ಲಿ, ಪಕ್ಕಾ ಕಮರ್ಶಿಯಲ್ ಬಗೆಯಲ್ಲಿ ರೂಪುಗೊಂಡಿದೆಯೆಂದರೆ ಅಂಥಾ ಸೆಳೆತ ಮತ್ತಷ್ಟು ತೀವ್ರವಾಗಿರುತ್ತದೆ. ಸದ್ಯ ಬಿಡುಗಡೆಗೊಂಡಿರುವ `ಅಂಶು’ (Anshu) ಚಿತ್ರದ ಟ್ರೈಲರ್ (Trailer) ನಲ್ಲಿಯೂ ಅಂಥಾದ್ದೊಂದು ಸೆಳೆತವಿದ್ದಂತಿದೆ. ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ `ಅಂಶು’ ಮಹಿಳಾ ಪ್ರಧಾನ ಕಥಾನಕವನ್ನು ಒಳಗೊಂಡಿರುವ ಚಿತ್ರ. ಅದರ ಒಟ್ಟಾರೆ ಸಾರದತ್ತ ಕುತೂಹಲ ಕೇಂದ್ರೀಕರಿಸುವಂತೆ ಮಾಡುವಲ್ಲಿ ಈ ಟ್ರೈಲರ್ ಯಶ ಕಂಡಿದೆ.

    ಈ ಚಿತ್ರದಲ್ಲಿ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಗಟ್ಟಿಮೇಳ ಸೀರಿಯಲ್ಲಿನ ಅಮೂಲ್ಯಾ ಪಾತ್ರದ ಮೂಲಕ ಮಿಂಚಿದ್ದ ನಿಶಾ ಈ ಟ್ರೈಲರ್‌ನಲ್ಲಿ ಸೀರಿಯಲ್ ಇಮೇಜನ್ನು ಮೀರಿದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಎಂ.ಸಿ ಚನ್ನಕೇಶವ ನಿರ್ದೇಶನದ ಚೊಚ್ಚಲ ಚಿತ್ರ ಅಂಶು. `ನಾವು ನಂಬೋದೆಲ್ಲ ನಿಜ ಅಲ್ಲ, ಸಹಿಸೋಕ್ ಆಗ್ದೆ ಇರೋದೆಲ್ಲ ಸುಳ್ಳಲ್ಲ’ ಅಂತ ಶುರುವಾಗುವ ಈ ಟ್ರೈಲರ್ ನೋಡಿದ ಮಂದಿಯಲ್ಲಿ ಒಂದಷ್ಟು ಪ್ರಶ್ನೆಗಳು ಮೂಡಿಕೊಂಡಿವೆ. ಅದಕ್ಕುತ್ತರವೆಂಬಂಥಾ, ಬೆರಗಿನ ಸಂಗತಿಗಳನ್ನು ಚಿತ್ರತಂಡ ತೆರೆದಿಟ್ಟಿದೆ. ಅದರ ಪ್ರಕಾರ ಹೇಳೋದಾದರೆ, ಇದೊಂದು ಸೈಕ್ಯಾಡೆಲಿಕ್ ಥ್ರಿಲ್ಲರ್ ಜಾನರಿನ ಚಿತ್ರ. ಈ ಸಮಾಜದಲ್ಲಿ ಇಂದಿನ ದಿನಮಾನದಲ್ಲಿ ಘಟಿಸುತ್ತಿರುವ ವಿಚಾರಗಳನ್ನಿಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದೃಷ್ಯೀಕರಿಸಲಾಗಿದೆಯಂತೆ. ಅದರ ಆವೇಗ ಎಂಥಾದ್ದಿದೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ಟ್ರೈಲರ್ ಮೂಡಿ ಬಂದಿದೆ.

    ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ರತನ್ ಗಂಗಾಧರ್,ಸಂಪತ್ ಶಿವಶಂಕರ್, ಕೃತಿ ನಾಣಯ್ಯ ನಿರ್ಮಾಣ ಕಾರ್ಯದ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಭಜರಂಗಿ೨, ವೇದ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ , ಈಗ ಬಾಲಿವುಡ್ಡಿನಲ್ಲೂ ಸಕ್ರಿಯರಾಗಿರುವ ಚಲುವರಾಜ್ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಜೈಚಂದ್ರ, ಪ್ರಮೋದ್  ಡಾ.ಮಧುರಾಜ್, ಮತ್ತು ವೀರನ್ ಗೌಡ ಕೂಡಾ ಅಂಶು ನಿರ್ಮಾಣದಲ್ಲಿ ಸಹಭಾಗಿಗಳಾಗಿದ್ದಾರೆ. ಈ ಹಿಂದೆ ಅಂಶು ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಗೊಂಡಿತ್ತು. ಲಂಡನ್ನಿನಲ್ಲಿ ಡಾಕ್ಟರ್ ಆಗಿರುವ ಮಧುರಾಜ್ ಅದನ್ನು ನೋಡಿ ಥ್ರಿಲ್ ಆಗಿ ನಿರ್ಮಾಣ ತಂಡಕ್ಕೆ ಸೇರಿಕೊಂಡಿದ್ದರಂತೆ.

     

    ಇನ್ನುಳಿದಂತೆ ನಿರ್ದೇಶಕ ಚನ್ನಕೇಶವ ಸೇಂಟ್ ಜೋಸೆಫ್ಸ್ ಯೂನಿವರ್ಸಿಟಿಯಲ್ಲಿ ಫಿಲಂ ಮೇಕಿಂಗ್ ಕೋರ್ಸ್ ಮುಗಿಸಿಕೊಂಡಿರುವವರು. ಅವರಿಲ್ಲಿ ಸಮಾಜಮುಖಿ ಕಥನವೊಂದಕ್ಕೆ ಕಮರ್ಶಿಯಲ್ ಧಾಟಿಯಲ್ಲಿ ದೃಷ್ಯ ರೂಪ ನೀಡಿದ್ದಾರೆ. ಇನ್ನುಳಿದಂತೆ ದೂಡಿ ಎಂಬ ತಮಿಳು ಚಿತ್ರ, ಕನ್ನಡದ ಗರುಡ ಪುರಾಣ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ್ದ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಕರಾಗಿ ಈ ಚಿತ್ರ ಭಾಗವಾಗಿದ್ದಾರೆ. ಜಿ.ವಿ ಪ್ರಕಾಶ್, ವಿದ್ಯಾಸಾಗರ್ ಜೊತೆ ಪ್ರೋಗ್ರಾಮರ್ ಆಗಿದ್ದ ಕೆ.ಸಿ ಬಾಲಸಾರಂಗನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆ ವಿಘ್ನೇಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಹೇಂದ್ರ ಗೌಡ ಸಂಭಾಷಣೆ ಮತ್ತು, ಸಾಹಿತ್ಯದ ಜವಾಬ್ದಾರಿ ನಿಭಾಯಿಸಿದ್ದಾರೆ. ಇವರು ಬರೆದಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಕೇಳುಗರ ಮೆಚ್ಚುಗೆ ಪಡೆದುಕೊಂಡಿವೆ. ಇನ್ನುಳಿದ ಮತ್ತೊಂದು ಹಾಡು ಇಷ್ಟರಲ್ಲಿಯೇ ಬಿಡುಗಡೆಗೊಳ್ಳಲಿದೆ. ಅದರ ಬೆನ್ನಲ್ಲಿಯೇ ಅಂಶು ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.

  • ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಗಟ್ಟಿಮೇಳ’ ನಟಿ

    ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಗಟ್ಟಿಮೇಳ’ ನಟಿ

    ನ್ನಡದ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ‘ಗಟ್ಟಿಮೇಳ’ (Gattimela) ಸೀರಿಯಲ್ ನಾಯಕಿ ನಿಶಾ ರವಿಕೃಷ್ಣನ್ (Nisha Ravikrishnan) ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ತೆಲುಗಿನಲ್ಲಿ ಬ್ಯುಸಿಯಾಗಿದ್ದ ನಟಿ ಈಗ ಕನ್ನಡದ ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ.

    ‘ಕಾಂತಾರ’ ಖ್ಯಾತಿಯ ಪ್ರಮೋದ್ ಶೆಟ್ಟಿ ಮತ್ತು ಅವರ ಪತ್ನಿ ಸುಪ್ರೀತಾ ಇದೀಗ ಹೊಸ ಸೀರಿಯಲ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ‘ಅಣ್ಣಯ್ಯ’ (Annayya) ಎಂಬ ಸೀರಿಯಲ್ ಲಾಂಚ್ ಆಗ್ತಿದೆ. ಈ ಪ್ರಾಜೆಕ್ಟ್‌ಗೆ ನಿಶಾ ನಾಯಕಿಯಾಗಿ ಫೈನಲ್ ಆಗಿದ್ದಾರೆ ಎನ್ನಲಾಗಿದೆ. ತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ನಿಶಾಗೆ ಹೀರೋ ಆಗಿ ಕೊಡಗಿನ ಕುವರ ವಿಕಾಶ್ ಉತ್ತಯ್ಯ ನಟಿಸಲಿದ್ದಾರೆ. ಸದ್ಯ ಸೀರಿಯಲ್ ಪ್ರೋಮೋ ರಿವೀಲ್ ಆಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ:ಭಾವಿ ಪತಿಗೆ ಕಾರ್ ಗಿಫ್ಟ್ ಮಾಡಿದ ‘ಅಗ್ನಿಸಾಕ್ಷಿ’ ನಟಿ

    ರೌಡಿ ಬೇಬಿ ನಿಶಾ ಮತ್ತೆ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅಣ್ಣಯ್ಯ ಧಾರಾವಾಹಿಯಲ್ಲಿ ಅವರ ಪಾತ್ರ ಹೇಗಿರಬಹುದು ಎಂಬ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಮತ್ತೆ ‘ಗಟ್ಟಿಮೇಳ’ ನಟಿ ಕನ್ನಡ ಟಿವಿ ಸೀರಿಯಲ್ ರೀ ಎಂಟ್ರಿ ಕೊಡ್ತಿರೋದು ಸಹಜವಾಗಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

  • ‘ಗಟ್ಟಿಮೇಳ’ ಧಾರಾವಾಹಿ ಅಂತ್ಯ: ಕಣ್ಣೀರಿಟ್ಟ ಫ್ಯಾನ್ಸ್

    ‘ಗಟ್ಟಿಮೇಳ’ ಧಾರಾವಾಹಿ ಅಂತ್ಯ: ಕಣ್ಣೀರಿಟ್ಟ ಫ್ಯಾನ್ಸ್

    ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಗಟ್ಟಿ ಮೇಳ’ದ ಕೊನೆಯ ಸಂಚಿಕೆ ಇಂದು ಪ್ರಸಾರವಾಗಲಿದೆ. ಈ ಮೂಲಕ ಜನಪ್ರಿಯ ಧಾರಾವಾಹಿಯೊಂದು ಅಂತ್ಯ ಕಾಣುತ್ತಿದೆ. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿರುವ ಈ ಧಾರಾವಾಹಿಯಲ್ಲಿ ರಕ್ಷ್ ಮತ್ತು ನಿಶಾ ರವಿಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

    ಕೊನೆಯ ಸಂಚಿಕೆಯ ಸಂದರ್ಭದಲ್ಲಿ ವಾಹಿನಿಯು ಪ್ರಶ್ನೆಯೊಂದನ್ನು ವೀಕ್ಷಕರಿಗೆ ಕೇಳಿದ್ದು, ನಿಮ್ಮ ನೆಚ್ಚಿನ ಗಟ್ಟಿಮೇಳ ಧಾರಾವಾಹಿ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ನೀವು ಏನನ್ನು ಮಿಸ್ ಮಾಡಿಕೊಳ್ತೀರಿ’ ಎಂದು ಜೀ ವಾಹಿನಿಯು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಅನೇಕ ನಾನಾ ರೀತಿಯ ಉತ್ತರಗಳನ್ನು ನೀಡಿದ್ದಾರೆ. ಈ ಧಾರಾವಾಹಿಯ ವೇದಾಂತ್ ಮತ್ತು ಅಮೂಲ್ಯ ಜೋಡಿಯನ್ನು ತುಂಬಾ ಮಿಸ್ ಮಾಡಿಕೊಳ್ಳೋದಾಗಿ ಕಾಮೆಂಟ್ ಮಾಡಿದ್ದಾರೆ.

    ಈ ಜನಪ್ರಿಯ ಧಾರಾವಾಹಿ ಆರಂಭವಾಗಿದ್ದು ಮಾರ್ಚ್ 2019ರಂದು. ಈಗಾಗಲೇ 1243 ಸಂಚಿಕೆಗಳನ್ನು ಧಾರಾವಾಹಿ ಪೂರೈಸಿದೆ. ಇಂದು ತನ್ನ ಕೊನೆಯ ಎಪಿಸೋಡ್ ಅನ್ನು ಪ್ರಸಾರ ಮಾಡುವ ಮೂಲಕ  ಜನಪ್ರಿಯ ಧಾರಾವಾಹಿಯೊಂದು ಅಂತ್ಯ ಹಾಡಿದಂತಾಗಿದೆ.

  • ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ

    ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ‘ಗಟ್ಟಿಮೇಳ’ ನಟಿ ನಿಶಾ

    ನ್ನಡ ಕಿರುತೆರೆಯ ಗಟ್ಟಿಮೇಳ (Gattimela) ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ (Kateel Durga Parameshwari) ಭೇಟಿ ನೀಡಿದ್ದಾರೆ. ಕರಾವಳಿ ನಟಿ ಅನ್ವಿತಾ ಸಾಗರ್ (Anvitha Sagar) ಜೊತೆ ನಿಶಾ ದಕ್ಷಿಣ ಕನ್ನಡದ ಕಟೀಲಿಗೆ ಬಂದಿದ್ದಾರೆ.

    ನಿಶಾ ರವಿಕುಮಾರ್ ಮತ್ತು ಅನ್ವಿತಾ ಸಾಗರ್ ಇಬ್ಬರೇ ಕಾರು ಓಡಿಸಿಕೊಂಡು ಮಂಗಳೂರಿಗೆ ಹೋಗಿ ದೇವರ ದರ್ಶನ ಪಡೆದಿದ್ದಾರೆ. ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ:ತುಳು ಭಾಷೆಯಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ- ಅನಂತ್ ನಾಗ್

    ಅಲ್ಲಿನ ಆನೆಯ ಜೊತೆ ಸೆಲ್ಫಿ ತೆಗೆದು ಆನೆಯ ಸೊಂಡಿಲಿಗೆ ಕಿಸ್ ಮಾಡಿದ್ದನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಖತ್ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ. ನಟಿಯರ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ನಟಿ ನಿಶಾ, ಕನ್ನಡ ಮತ್ತು ತೆಲುಗು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ. ‘ಅಂದೊಂದಿತ್ತು ಕಾಲ’ ಎಂಬ ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್, ಅದಿತಿ ಪ್ರಭುದೇವ (Aditi Prabhudeva) ಜೊತೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅನ್ವಿತಾ, ಗಟ್ಟಿಮೇಳ ಸೀರಿಯಲ್ ಜೊತೆ ತುಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ಕಿರುತೆರೆಯ ಜನಪ್ರಿಯ ನಟಿ ನಿಶಾ ರವಿಕೃಷ್ಣನ್ (Nisha Ravikrishnan) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಸೈಲೆಂಟ್ ಆಗಿ ‘ಗಟ್ಟಿಮೇಳ’ (Gatimela) ನಟಿ ಎಂಗೇಜ್ ಆಗಿದ್ದಾರೆ. ಈ ಕುರಿತ ನಟಿಯ ಪೋಸ್ಟ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಟಿವಿ ಪರದೆಯಲ್ಲಿ ಅಮೂಲ್ಯ ಎಂದೇ ಫೇಮಸ್ ಆಗಿರುವ ವೇದಾಂತ್‌ನ ಅರಗಿಣಿ ನಿಶಾ ರವಿಕೃಷ್ಣನ್ ಅವರು ‘ಗಟ್ಟಿಮೇಳ’ ಮತ್ತು ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ‘ಇಷ್ಟಕಾಮ್ಯ’ (Istakamya) ಸಿನಿಮಾದಲ್ಲಿ ಬ್ಯಾಕ್ ಡ್ಯಾನ್ಸರ್ ಆಗಿದ್ದ ನಿಶಾ, ಬಳಿಕ ‘ಸರ್ವ ಮಂಗಳ ಮಾಂಗಲ್ಯೇ’ ಸೀರಿಯಲ್‌ನಲ್ಲಿ ಹೀರೋ ತಂಗಿ ಪಾತ್ರದಲ್ಲಿ ಗುರುತಿಸಿಕೊಂಡರು. ಬಳಿಕ ‘ಗಟ್ಟಿಮೇಳ’ ಸೀರಿಯಲ್ಲಿ ನಾಯಕಿಯಾಗಿ ಮಿಂಚ್ತಿದ್ದಾರೆ.

    ನಟಿ ನಿಶಾ ಅವರು ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಸೀರೆಯಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚೆಂದದ ಅಡಿಬರಹ ನೀಡುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಸೈಲೆಂಟ್ ಆಗಿ ನಿಶಾ ಎಂಗೇಜ್ (Engage) ಆದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡ್ತಿದೆ. ಇದನ್ನೂ ಓದಿ:ಬಾಕ್ಸ್ ಆಫೀಸ್ ಬಾಚುತ್ತಿರುವ ದಿ ಕೇರಳ ಸ್ಟೋರಿ : 7 ದಿನಕ್ಕೆ ₹80 ಕೋಟಿ ಕಲೆಕ್ಷನ್

    ನಿಶಾ ಅವರು ತಮ್ಮ ಫೋಟೋ ಜೊತೆಗೆ ‘ನನ್ನ ಎದೆಯ ಬೀದಿಯಲಿ ಹೊಂಗನಸ ವ್ಯಾಪಾರಿ ನೀ’ ಎಂದು ಅಡಿಬರಹ ನೀಡಿದ್ದಾರೆ. ಮತ್ತೊಂದು ಪೋಸ್ಟ್ನಲ್ಲಿ  ‘ಜೀವನ ಹೂಬನ ಚಂದ ಈಗ ನಿನ್ನಿಂದ’ ಎಂದು ಬರೆದುಕೊಂಡಿದ್ದಾರೆ. ಈಗ ಅಭಿಮಾನಿಗಳು  ‘ಆ ಹೊಂಗನಸ ವ್ಯಾಪಾರಿ ಯಾರು..? ಯಾರಿಂದ ಚೆಂದ’ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನಿಶಾ ಅವರ ಸಾಲುಗಳಿಗೆ ಸೋತು ಅವರೂ ಕವಿ ಆಗಿದ್ದಾರೆ. ನಿಶಾಳನ್ನು ಗೊಂಬೆ ಎಂದು ಕರೆದು ಖುಷಿಪಟ್ಟಿದ್ದಾರೆ. ಸುಮ್ನೆ ಏನೇನೋ ಊಹಿಸಿಕೊಳ್ಳಬೇಡಿ ಎನ್ನುತ್ತಿದ್ದಾರೆ ಒಟ್ನಲ್ಲಿ ನಿಶಾ ಅವರು ಪ್ರೀತಿಯಲ್ಲಿ ಬಿದ್ದಿದ್ದಾರಾ? ಎಂಬ ಅನುಮಾನ ಶುರುವಾಗಿದೆ. ಆದರೆ, ಈ ಅನುಮಾನಗಳಿಗೆ ನಿಶಾ ಅವರೇ ಉತ್ತರ ನೀಡಬೇಕಿದೆ.

  • ದುಲ್ಕರ್ ಸಲ್ಮಾನ್ ಜೊತೆ `ಗಟ್ಟಿಮೇಳ’ ನಿಶಾ ರವಿಕೃಷ್ಣನ್

    ದುಲ್ಕರ್ ಸಲ್ಮಾನ್ ಜೊತೆ `ಗಟ್ಟಿಮೇಳ’ ನಿಶಾ ರವಿಕೃಷ್ಣನ್

    ನ್ನಡ ಕಿರುತೆರೆಯ `ಗಟ್ಟಿಮೇಳ’ ಸೀರಿಯಲ್ ಮೂಲಕ ಮನೆ ಮಾತಾಗಿರುವ ನಟಿ ನಿಶಾ ರವಿಕೃಷ್ಣನ್ ತೆಲುಗು ಕಿರುತೆರೆಯಲ್ಲೂ ಛಾಪೂ ಮೂಡಿಸುತ್ತಿದ್ದಾರೆ. ಸದ್ಯ ಮಾಲಿವುಡ್ ಸ್ಟಾರ್ ದುಲ್ಕರ್ ಸಲ್ಮಾನ್‌ಗೆ ನಿಶಾ ರವಿಕೃಷ್ಣನ್ ಜೊತೆಯಾಗಿದ್ದಾರೆ.

    `ಗಟ್ಟಿಮೇಳ’ ಸೀರಿಯಲ್‌ನ ಅಮೂಲ್ಯ ಆಗಿ ಸಾಕಷ್ಟು ಅಭಿಮಾನಿಗಳ ಮನಗೆದ್ದಿರುವ ನಿಶಾ ರವಿಕೃಷ್ಣನ್ ಈಗ ತೆಲುಗು ಕಿರುತೆರೆಯಲ್ಲೂ ಸಕ್ರಿಯರಾಗಿದ್ದಾರೆ. ಈ ವೇಳೆ ತೆಲುಗಿನ ಶೋವೊಂದರಲ್ಲಿ ದುಲ್ಕರ್ ಸಲ್ಮಾನ್ ಮತ್ತು ಮೃಣಾಲ್ `ಸೀತಾ ರಾಮಂ’ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಅವರನ್ನು ನಿಶಾ ಭೇಟಿಯಾಗಿದ್ದಾರೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ಶೋನಲ್ಲಿ ಸಹನಟ ಸಿದ್ದು ಜತೆ ನಿಶಾ ಹೆಜ್ಜೆ ಹಾಕಿದ್ದರು. ನಿಶಾ ಅವರ ಡ್ಯಾನ್ಸ್ ನೋಡಿ ದುಲ್ಕರ್ ಸಲ್ಮಾನ್ ಕೂಡ ಮೆಚ್ಚುಗೆ ಸೂಚಿಸಿದ್ದರು. ಈ ವೇಳೆ ದುಲ್ಕರ್ ಸಲ್ಮಾನ್ ಮಾತಿಗೆ ನಿಶಾ ಸಖತ್ ಖುಷಿಪಟ್ಟಿದ್ದಾರೆ. ಇಂದು 36ನೇ ವಸಂತಕ್ಕೆ ಕಾಲಿಟ್ಟಿರುವ ದುಲ್ಕರ್ ಸಲ್ಮಾನ್‌ಗೆ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ದುಲ್ಕರ್ ಜತೆಗಿನ ಫೋಟೋ ಹಂಚಿಕೊಂಡು ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]