Tag: ನಿಶಾ ಯೋಗೇಶ್ವರ್

  • ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

    ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

    – ಸಿಪಿವೈ ಪುತ್ರಿ ನಿಶಾ ಭೇಟಿ ವಿಚಾರಕ್ಕೆ ಡಿಸಿಎಂ ಪ್ರತಿಕ್ರಿಯೆ

    ಬೆಂಗಳೂರು: ಸಿ.ಪಿ ಯೋಗೇಶ್ವರ್ (C.P Yogeshwar) ಪುತ್ರಿ ನಿಶಾ (Nisha Yogeshwar) ನನ್ನ ಹಾಗೂ ನನ್ನ ತಮ್ಮನನ್ನು ಭೇಟಿ ಮಾಡಿದ್ದರು. ಅಪ್ಪ ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಗಳ ವಿಚಾರ ಸರಿ ಹೋಗಬಹುದು. ಅವಳು ಇನ್ನೂ ಮದುವೆಯಾಗಬೇಕು, ತಂದೆ ಹಾಲು ಎರೆಯಬೇಕು, ಅಕ್ಷತೆ ಕಾಳು ಹಾಕಬೇಕು. ನನಗೆ ಅವಳ ಬಗ್ಗೆ ಹಾಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಎಲ್ಲಾ ಗೊತ್ತು ಅವರ ಅಮ್ಮನೂ ನನಗೆ ಪರಿಚಯವಿದ್ದಾರೆ. ಯೋಗೇಶ್ವರ್ ಅವರ ಈಗಿನ ಸಂಸಾರದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

    ಆ ಹೆಣ್ಣು ಮಗಳು ಬಹಳ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಸೇರುತ್ತೇನೆ ಎಂದರೆ ನಮ್ಮ ಪಕ್ಷದ ಸ್ಥಳಿಯ ನಾಯಕರ ಜೊತೆ ಮಾತನಾಡುತ್ತೇನೆ. ನಿಶಾ ಯೋಗೇಶ್ವರ್ ಧೈರ್ಯವಂತ ಹೆಣ್ಣು ಮಗಳು, ಏನೋ ಧೈರ್ಯ ಮಾಡಿದ್ದಾಳೆ. ನಾಳೆ ಜನ ಅಪ್ಪ ಮಗಳನ್ನು ಯಾಕೆ ದೂರ ಮಾಡಿದೆ ಎಂದು ನನ್ನನ್ನು ಪ್ರಶ್ನೆ ಮಾಡ್ತಾರೆ. ಅದಕ್ಕಾಗಿ ನಾನು ಸುಮ್ಮನಿದ್ದೇನೆ. ಮದುವೆಯಾಗಿ ಅವರದೇ ಕುಟುಂಬ ಇದ್ದಿದ್ದರೆ ವಿಚಾರ ಬೇರೆಯಾಗುತ್ತಿತ್ತು ಎಂದಿದ್ದಾರೆ.

    ರಾಜರಾಜೇಶ್ವರಿಗೆ ಹೋಗಿ ಒಂದು ಕೈ ಮುಗಿಯಬೇಕು. ಅಲ್ಲಿ ನಮ್ಮ ಅಭ್ಯರ್ಥಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಡಿ.ಕೆ ಸುರೇಶ್ ಮಾಡಿದ ಕೆಲಸ ಜನರಿಗೆ ಈಗ ಅರ್ಥವಾಗಿದೆ. ಮಾನವೀಯತೆ, ನಮ್ಮ ತಮ್ಮ ಎನ್ನುವುದನ್ನು ಪಕ್ಕಕ್ಕೆ ಇಡಿ. ಕೋವಿಡ್ ಸಂದರ್ಭದಲ್ಲಿ ಯಾರು ಆಚೆಗೆ ಬರಲಿಲ್ಲ. ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ತರಕಾರಿಗೆ ಬೆಲೆ ಸಿಗಬೇಕು ಎಂದು ಹೋರಾಡಿದ್ದರು. ಮನೆ ಮನೆಗೆ ಹೋಗಿ ಸುರೇಶ್ ಕೆಲಸ ಮಾಡಿದ್ದರು. ಈಗ ಬಿಜೆಪಿ ಗೊಂದಲದ ಗೂಡಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

    ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು, ಆಗ ಏನು ಕೆಲಸ ಮಾಡಿದ್ರು? ಕೆಲಸ ಮಾಡದವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಏಕಾಏಕಿ ಡ್ರಾಪ್ ಮಾಡಿ ವೀಕ್ ಸ್ಟ್ಯಾಟರ್ಜಿಯನ್ನು ಬಿಜೆಪಿ ಮಾಡಿದೆ. ನಾವು ಯುವಕರಿಗೆ ಮಣೆ ಹಾಕಿದ್ದೇವೆ. ಬಿಜೆಪಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಲು ಮುಂದಾಗಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಒಂದು ಮಾಡಲು ರೋಡ್ ಶೋ ಮಾಡುತ್ತಿದ್ದಾರೆ. ದಿನಪ್ರತಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಕಾರ್ಯಕರ್ತರ ಒಂದಾಗಿ ಯಾಕೆ ಸಭೆ ಮಾಡಲಿಲ್ಲ. ಇವರಿಬ್ಬರ ಮೈತ್ರಿ ನೋಡಿ ನಾಚಿಕೆಯಾಗುತ್ತಿದೆ. ಆ ದಿನ ಸುಮಲತಾ ಮನೆಗೆ ಹೋಗಬೇಡ ಎಂದವರು ಇವತ್ತು ಸುಮಲತಾ ಮನೆಗೆ ಹೋಗುತ್ತಿದ್ದಾರೆ. ಮೈತ್ರಿ ಸರ್ಕಾರ ತೆಗೆದವರ ಜೊತೆಗೆ ತಬ್ಬಾಡುತ್ತಿದ್ದಾರೆ. ನಾನು ಯಾವ ಅನ್ಯಾಯ ಮಾಡಿದ್ದೆ ಕುಮಾರಸ್ವಾಮಿಗೆ? ನಾನು ವಿಷ ಹಾಕಿದ್ದೆ ಎನ್ನುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೆ ಎನ್ನುತ್ತಿದ್ದಾರೆ. ಸರ್ಕಾರ ಉಳಿಸಲು ನಾನು ಮಳೆ-ಬಿಸಿಲಲ್ಲಿ ನಿಂತು ಹೋರಾಡಿದ್ದೆ ಎಂದಿದ್ದಾರೆ.

    ಮಹಿಳೆ ಅಡುಗೆ ಮನೆಗೆ ಸೀಮಿತ ಎಂಬ ಶಾಮನೂರು ಹೇಳಿಕೆ ವಿಚಾರವಾಗಿ, ಹೆಣ್ಣು ಕುಟುಂಬದ ಕಣ್ಣು, ಪಾಪ ಅವರಿಗೆ ವಯಸ್ಸಾಗಿದೆ. ಆರು ಜನ ಮಹಿಳೆಯರಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ಹೆಣ್ಣು ಮಕ್ಕಳಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ. ಶಾಮನೂರು ಹೇಳಿಕೆ ಖಂಡನೀಯ ಎಂದಿದ್ದಾರೆ. ಇದನ್ನೂ ಓದಿ: ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

  • ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

    ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

    ರಾಮನಗರ: ಸಮಾಜದಲ್ಲಿ ಕೆಲ ಬದಲಾವಣೆಗಳನ್ನ ತರುವ ನಿಟ್ಟಿನಲ್ಲಿ ಕಾಂಗ್ರೆಸ್ (Congress) ಸೇರಲು ಚಿಂತಿಸಿದ್ದೇನೆ ಎಂದು ಮಾಜಿ ಸಚಿವ ಯೋಗೇಶ್ವರ್‌ ಪುತ್ರಿ ನಿಶಾ (Nisha Yogeshwar) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ರಾಜಕೀಯಕ್ಕೆ (Politics) ಬರಬೇಕು ಎನ್ನುವುದು ನನ್ನ ವೈಯಕ್ತಿಕ ಆಯ್ಕೆ. ನಾನು ಪ್ರಬುದ್ಧಳು, ನನಗೆ ನನ್ನದೇ ಆದ ಕನಸುಗಳಿವೆ. ಈಗಿರುವ ರಾಜಕೀಯ ಪಕ್ಷಗಳಲ್ಲಿ ಕಾಂಗ್ರೆಸ್ ಸೂಕ್ತ ಎನ್ನಿಸಿದೆ ಎಂದು ಹೇಳಿದರು. ಇದನ್ನೂ ಓದಿ: ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

     

    ಸೇರ್ಪಡೆ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ. ಅದಕ್ಕೆ ಸಮಯ ಬೇಕು ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುತ್ತೇನೆ. ಈ ಬಗ್ಗೆ ನಮ್ಮ ಮನೆಯಲ್ಲೂ ಚರ್ಚೆ ಆಗಿದ್ದು, ಮನೆಯವರ ಸಮ್ಮತಿಯಿಂದಲೇ ನಾನು ವೈಯಕ್ತಿಕ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತಿಳಿಸಿದರು.

    ಸದ್ಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ನಾನು ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಿಲ್ಲ. ನಾನು ಇನ್ನೂ ಕಾಂಗ್ರೆಸ್ ಸೇರ್ಪಡೆ ಆಗಿಲ್ಲ. ಮುಂದೆ ಕಾಂಗ್ರೆಸ್ ಸೇರ್ಪಡೆ ಆದ ಬಳಿ ಪಕ್ಷ ಕೊಡುವ ಜವಾಬ್ದಾರಿ ಸ್ವೀಕರಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಯಾವುದೇ ಚಿಂತನೆ ಮಾಡಿಲ್ಲ. ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ಹೇಳಿದರು.

     

  • ಕೈ ನಾಯಕರ ಜೊತೆ ಕಾಣಿಸಿಕೊಂಡ ಸಿ.ಪಿ ಯೋಗೇಶ್ವರ್ ಪುತ್ರಿ!

    ಕೈ ನಾಯಕರ ಜೊತೆ ಕಾಣಿಸಿಕೊಂಡ ಸಿ.ಪಿ ಯೋಗೇಶ್ವರ್ ಪುತ್ರಿ!

    – ಅಪ್ಪನ ರಾಜಕೀಯ ಬದ್ಧವೈರಿ ಜೊತೆ ಫೋಟೋ

    ರಾಮನಗರ: ಮಾಜಿ ಸಚಿವ ಹಾಗೂ ಬಿಜೆಪಿ ಪ್ರಭಾವಿ ನಾಯಕ ಸಿ. ಪಿ ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ (Nisha Yogeshwar) ಕಾಂಗ್ರೆಸ್ ಪಡಸಾಲೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿಗೆ ಕಾರಣವಾಗಿದ್ದಾರೆ.

    ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ (Congress) ನಾಯಕರ ಜೊತೆ ಕಾಣಿಸಿಕೊಂಡು ಚರ್ಚೆಗೆ ಗ್ರಾಸವಾಗಿದ್ದಾರೆ. ಚನ್ನಪಟ್ಟಣ ಮೂಲದ ಕಾಂಗ್ರೆಸ್ ನಾಯಕ ರಘುನಂದನ್ ರಾಮಣ್ಣ (Raghunandan Ramanna) ಇಂದು ಬೆಂಗಳೂರು ಮೈಸೂರು ಇನ್ಸ್ಫಾಸ್ಟ್ರಕ್ಟರ್ ಕಾರಿಡಾರ್ ಪ್ರದೇಶ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡುವ ಕಾರ್ಯಕ್ರಮದಲ್ಲಿ ನಿಶಾ ಯೋಗೇಶ್ವರ್ ಭಾಗಿಯಾಗಿದ್ದಾರೆ. ಈ ವೇಳೆ ಸಿಪಿ ಯೋಗೇಶ್ವರ್ (C.P Yogeshwar) ರಾಜಕೀಯ ಬದ್ಧ ವೈರಿ ಸಂಸದ ಡಿ.ಕೆ. ಸುರೇಶ್ (D.K Suresh) ಜೊತೆ ನಿಂತು ಫೋಟೋ ತೆಗೆಸಿಕೊಂಡಿರುವ ನಿಶಾ ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಜೆಡಿಎಸ್ ಸಮಾವೇಶ, ಸುಮ್ಮನೆ ಕೂರೋದಕ್ಕಾಗುತ್ತಾ?: ವಿರೋಧಿಗಳಿಗೆ ದೊಡ್ಡಗೌಡ್ರು ಟಾಂಗ್

    ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Election 2024) ಬಿಜೆಪಿ ಮತ್ತು ಜೆಡಿಎಸ್ (BJP- JDS) ಮೈತ್ರಿ ಅಭ್ಯರ್ಥಿಯಾಗಿ ಸಿ. ಪಿ. ಯೋಗೇಶ್ವರ್ ಕಣಕ್ಕಿಳಿಯಲಿದ್ದಾರೆ ಎನ್ನುವ ಚರ್ಚೆ ಇದೆ. ಇದರ ನಡುವೆ ಯೋಗೇಶ್ವ‌ರ್ ಪುತ್ರಿ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರಘುನಂದನ್ ರಾಮಣ್ಣನವರಿಗೆ ಶುಭಕೋರುವ ಸಲುವಾಗಿ ನಿಶಾ ಯೋಗೇಶ್ವ‌ರ್ ಕಚೇರಿಗೆ ಹೋಗಿದ್ದರು ಎನ್ನಲಾಗಿದ್ದು, ಚುನಾವಣೆ ಹೊಸ್ತಿಲಲ್ಲಿ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

    ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಸಕ್ರಿಯವಾಗಿರುವ ನಿಶಾ ಯೋಗೇಶ್ವರ್ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎನ್ನುವ ಚರ್ಚೆಯೂ ಇದೆ. ಕಳೆದ ಕೆಲವು ದಿನಗಳ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರನ್ನೂ ಭೇಟಿ ಮಾಡಿದ್ದ ನಿಶಾ, ಈಗ ಮತ್ತೆ ಸಂಸದ ಸುರೇಶ್ ಜೊತೆ ಕಾಣಿಸಿಕೊಂಡಿರುವುದು ಚನ್ನಪಟ್ಟಣ ಭಾಗದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.

  • ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಸಿಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ

    ಮಂಡ್ಯ: ಮಾಜಿ ಸಚಿವ, ಬಿಜೆಪಿ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಗೆ ಕಾನೂನು ಕಂಟಕ ಪ್ರಾರಂಭವಾಗಿದೆ.

    ನಿಶಾ ಯೋಗೇಶ್ವರ್ ಸರಿಯಾಗಿ ಬಾಡಿಗೆ, ಕಂದಾಯ ಪಾವತಿ ಮಾಡದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಹೋರಾಟಕ್ಕೆ ನಿರ್ಧಾರಿಸಲಾಗಿದೆ. ನಿಶಾ ಅವರು ಡೆಕ್ಕನ್ ಫೀಲ್ಡ್ ಆಗ್ರೋ ಇಂಡಸ್ಟ್ರೀಸ್ ಮಾಲೀಕರಾಗಿದ್ದು, ಈ ಕಂಪನಿ 2017ರಲ್ಲಿ ಗೋದಾಮು ಬಾಡಿಗೆಗೆ ಪಡೆದುಕೊಂಡಿತ್ತು. ಗೋದಾಮು ಮಂಡ್ಯ ಜಿಲ್ಲೆಯ ಮದ್ದೂರಿನ ಟಿಎಪಿಸಿಎಂಎಸ್ ಗೆ ಸೇರಿದೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಈ ಕಂಪನಿ ಒಪ್ಪಂದದಂತೆ ಬಾಡಿಗೆ, ಕಂದಾಯವನ್ನು ಪಾವತಿ ಮಾಡುತ್ತಿಲ್ಲ. ಏ.2018ರಿಂದಲೂ ಬಾಡಿಗೆ, ಕಂದಾಯ ಪಾವತಿಸಿಲ್ಲ ಎಂದು ಆರೋಪ ಮಾಡಲಾಗಿದೆ. ಗೋದಾಮು ಬಾಡಿಗೆ ಇನ್ನೂ 42.47 ಲಕ್ಷ ಬಾಕಿ ಇದೆ. ಖಾಲಿ ಜಾಗದ ನೆಲ ಬಾಡಿಗೆ 1.09ಲಕ್ಷ ಬಾಕಿ ಇದೆ. ಪುರಸಭೆಯ ಕಂದಾಯ 4.78 ಲಕ್ಷ ರೂ. ಬಾಕಿ ಇದೆ. ಈ ಪರಿಣಾಮ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಕಾನೂನು ಕ್ರಮಕ್ಕೆ ನಿರ್ಧರಿಸಿದೆ.