Tag: ನಿವೇದಿತಾ ಗೌಡ

  • ನಾವು ಇಟಲಿಗೆ ಹೋಗಿಲ್ಲ, ಪ್ಯಾರಿಸ್ ಪ್ರವಾಸ ರದ್ದು ಮಾಡಿದ್ದೇವೆ: ಚಂದನ್

    ನಾವು ಇಟಲಿಗೆ ಹೋಗಿಲ್ಲ, ಪ್ಯಾರಿಸ್ ಪ್ರವಾಸ ರದ್ದು ಮಾಡಿದ್ದೇವೆ: ಚಂದನ್

    – ನೆದರ್‌ಲ್ಯಾಂಡಿನ ಕಠಿಣ ನಿಯಮ ಇರಲಿಲ್ಲ
    – ಬೆಂಗಳೂರಿನಲ್ಲಿ ಕಠಿಣ ನಿಯಮಗಳಿತ್ತು

    ಮಂಡ್ಯ: ಬಿಗ್ ಬಾಸ್ ಸೀಸನ್-5 ವಿಜೇತ, ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಮುಗಿಸಿಕೊಂಡು ಹನಿಮೂನ್‍ಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಹನಿಮೂನ್‍ಗೆ ಹೋಗಿರುವ ಚಂದನ್ ಹಾಗೂ ನಿವೇದಿತಾ ಅವರ ಆರೋಗ್ಯ ತಪಾಸಣೆ ಮಾಡಬೇಕು ಎಂಬ ಮಾತುಗಳು ಕೇಳಿ ಬಂತು. ಹೀಗಾಗಿ ಚಂದನ್ ಹಾಗೂ ನಿವೇದಿತಾ ನಾವು ಇಟಲಿಗೆ ಹೋಗಿಲ್ಲ, ನಾವು ಆರೋಗ್ಯವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದನ್, ನಮ್ಮ ನೆದರ್‌ಲ್ಯಾಂಡ್ ಪ್ರವಾಸ ತುಂಬಾ ಚೆನ್ನಾಗಿತ್ತು. ಮಾರ್ಚ್ 1ರಂದು ನಾವು ನೆದರ್‌ಲ್ಯಾಂಡ್‍ಗೆ ಹೋಗಿದ್ವಿ. ಅಲ್ಲಿ ಮೂರು ದಿನ ಇದ್ದು, ನಾವು ಪ್ಯಾರಿಸ್‍ಗೆ ಹೋಗಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವುದು ತಿಳಿಯಿತು. ಹೀಗಾಗಿ ಮಾರ್ಚ್ 6ರಂದೇ ನಾವು ಭಾರತಕ್ಕೆ ವಾಪಸ್ ಬಂದಿದ್ದೇವೆ ಎಂದರು.

     

    View this post on Instagram

     

    #amsterdam ❤️ with my love @niveditha__gowda #chandanshetty

    A post shared by Chandan Shetty (@chandanshettyofficial) on

    ನಾವು ನೆದರ್‌ಲ್ಯಾಂಡ್‍ಗೆ ಹೋದಾಗ ಅಲ್ಲಿ ಏನೂ ಆಗಿರಲಿಲ್ಲ. ಈ ರೀತಿ ಆಗುತ್ತೆ ಎಂದು ಗೊತ್ತಾಗುತ್ತಿದ್ದರೆ, ನಾವು ಅಲ್ಲಿಗೆ ಹೋಗುತ್ತಿರಲಿಲ್ಲ. ಅಲ್ಲಿಗೆ ಪ್ರವಾಸಕ್ಕೆ ಹೋಗಲು ನಾವು ಟಿಕೆಟ್ ಬುಕ್ ಮಾಡುವಾಗ ಚೀನಾದಲ್ಲಿ ಮಾತ್ರ ಕೊರೊನಾ ಇದೆ ಎಂದು ಗೊತ್ತಿತ್ತು. ಆದರೆ ನಾವು ನೆದರ್‌ಲ್ಯಾಂಡ್‍ಗೆ ಹೋಗಿ ಎರಡು ದಿನ ಆದ್ಮೇಲೆ ಪ್ಯಾರಿಸ್‍ನಲ್ಲೂ ಕೊರೊನಾ ಹರಡಿದೆ ಎಂಬ ವಿಷಯ ತಿಳಿಯಿತು. ಆಗ ತಕ್ಷಣ ನಾವು ಪ್ಯಾರೀಸ್ ಪ್ರವಾಸವನ್ನು ರದ್ದು ಮಾಡಿದೆವು ಎಂದರು.

     

    View this post on Instagram

     

    Chilling with my wife ❄️????❤️ @niveditha__gowda

    A post shared by Chandan Shetty (@chandanshettyofficial) on

    ನಾನು ಮಾರ್ಚ್ ಮೂರನೇ ತಾರೀಖಿನ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಅಲ್ಲಿಂದ ವಾಪಸ್ ಬರುವಾಗ ಯಾರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿರಲಿಲ್ಲ. ಯಾರಿಗೂ ಕೊರೊನಾ ಭಯ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಕಠಿಣ ನಿಯಮಗಳು ಇರಲಿಲ್ಲ. ನಾವು ಬೆಂಗಳೂರಿಗೆ ವಾಪಸ್ ಬಂದಾಗ ಇಲ್ಲಿ ಪರಿಶೀಲನೆ ಮಾಡುವುದನ್ನು ಶುರು ಮಾಡಿದ್ದರು ಎಂದು ಚಂದನ್ ಹೇಳಿದರು.

     

    View this post on Instagram

     

    Status : Married ❤️???? @niveditha__gowda PC: @theweddingshotsco

    A post shared by Chandan Shetty (@chandanshettyofficial) on

    ನಾವು ಇಟಲಿಗೆ ಹೋಗೇ ಇಲ್ಲ. ಇದು ಯಾರೋ ಬೇಕು ಅಂತಾನೇ ಹೇಳುತ್ತಿದ್ದಾರೆ. ಯಾವುದೇ ರೀತಿಯ ಸಾಕ್ಷಿ, ಪುರಾವೆ ಇಲ್ಲದೆ ಯಾಕೆ ಹೀಗೆ ಹೇಳುತ್ತಿದ್ದಾರೆ ನಮಗೆ ಗೊತ್ತಿಲ್ಲ. ಯಾರೋ ನಮಗೆ ಕಾಲೆಳೆಯಲು ಈ ರೀತಿ ಮಾಡುತ್ತಿದ್ದಾರೆ. ನಮಗೆ ಇದು ಈಗ ಕಾಮನ್ ಆಗಿದೆ. ನಾವು ಇಟಲಿಗೆ ಹೋಗೇ ಇಲ್ಲ. ನಾವು ನೆದರ್‌ಲ್ಯಾಂಡ್‍ಗೆ ಹೋಗಿದ್ವಿ. ನೆದರ್‍ಲ್ಯಾಂಡ್‍ನಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದೀವಿ ಎಂದರು.

     

    View this post on Instagram

     

    With love of my life ❤️???? @niveditha__gowda #chandanshetty @theweddingshotsco

    A post shared by Chandan Shetty (@chandanshettyofficial) on

    ವೀಸಾ ಕ್ಯಾನ್ಸಲ್ ಬಗ್ಗೆ ಯಾರೋ ಯೂಟ್ಯೂಬ್‍ನಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ. ಈ ವಿಷಯ ಮೊದಲು ಕೇಳಿದಾಗ ನಾವು ಪ್ರತಿಕ್ರಿಯಿಸಲು ಹೋಗಿಲ್ಲ. ಯೂಟ್ಯೂಬ್‍ನಲ್ಲಿ ಇವಾಗ ನಾವು ನೋಡೋ 10 ವಿಡಿಯೋದಲ್ಲಿ 8 ವಿಡಿಯೋ ಸುಳ್ಳಾಗಿ ಇರುತ್ತೆ. ಹಾಗಾಗಿ ನಾವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದ್ದ ಕಾರಣ ನಮಗೆ ಸ್ಪಷ್ಟನೆ ನೀಡಬೇಕು ಎಂದು ಎನಿಸಿತು. ಹಾಗಾಗಿ ನಾವು ಈಗ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಚಂದನ್ ತಿಳಿಸಿದರು.

  • ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

    ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

    ಮೈಸೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‍ಗೂ ಕೊರೊನಾ ಬಿಸಿ ತಟ್ಟುತ್ತಿದೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ನವದಂಪತಿಗಳಿಗೆ ಕಡ್ಡಾಯ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಮನವಿ ಸಲ್ಲಿಸಿದ್ದಾರೆ.

    ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ನಂತರ ಯೂರೋಪ್‍ಗೆ ಹನಿಮೂನ್ ಹೋಗಿದ್ದಾರೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣದಿಂದ ಅವರನ್ನು ತಪಾಸಣೆ ಮಾಡದೇ ನಿರ್ಲಕ್ಷ್ಯಿಸಬಾರದು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎಂದು ಮನವಿ ಮಾಡಲಾಗಿದೆ.

    ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅವರನ್ನು ತಪಾಸಣೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಚಂದನ್ ಶೆಟ್ಟಿ – ನಿವೇದಿತಾ ಗೌಡ ಮದುವೆ ನಂತರ ಯೂರೋಪ್‍ಗೆ ಪ್ರವಾಸ ಕೈಗೊಂಡಿದ್ದಾರೆ. ಯೂರೋಪ್‍ನ ಇಟಲಿಯಲ್ಲಿ ಈಗಾಗಲೇ ಶೇ.30 ರಷ್ಟು ಭಾಗ ಕೊರೊನಾ ಆವರಿಸಿದೆ. ಇದುವರೆಗೂ ಇಟಲಿಯಲ್ಲಿ 12,462 ಕೊರೊನಾ ಪಾಸಿಟಿವ್ ಕೇಸ್‍ಗಳು ಬೆಳಕಿಗೆ ಬಂದಿದ್ದು, 827 ಜನ ಮೃತಪಟ್ಟಿದ್ದಾರೆ.

  • ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಬಿಗ್‍ಬಾಸ್ ಜೋಡಿ

    ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಬಿಗ್‍ಬಾಸ್ ಜೋಡಿ

    ಬೆಂಗಳೂರು: ಬಿಗ್‍ಬಾಸ್ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಳೆದವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ಹನಿಮೂನ್‍ಗಾಗಿ ವಿದೇಶಕ್ಕೆ ಹಾರಿದ್ದಾರೆ.

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಫೆಬ್ರವರಿ 25, 26 ರಂದು ಮೈಸೂರಿನಲ್ಲಿ ಸಪ್ತಪದಿ ತುಳಿದಿದ್ದರು. ಈಗ ಚಂದನ್ ತನ್ನ ಪತ್ನಿಯೊಂದಿಗೆ ಹನಿಮೂನ್‍ಗೆ ವಿದೇಶಕ್ಕೆ ಹೋಗಿದ್ದಾರೆ. ಹನಿಮೂನ್‍ಗೆ ಹೋಗುವ ಮುನ್ನ ಏರ್‌ಪೋರ್ಟ್‌ನಲ್ಲಿ ಇಬ್ಬರು ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ತಾವೂ ಹನಿಮೂನ್‍ಗೆ ಹೋಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರ್ತಿದ್ದೆ, ಇನ್ಮುಂದೆ ಹೆಂಡ್ತಿ ಇರ್ತಾಳೆ: ಚಂದನ್

    ಕಳೆದ ದಿನ ನಿವೇದಿತಾ ಇಬ್ಬರ ಪಾಸ್‍ಪೋರ್ಟ್ ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಜೊತೆಗೆ ಹನಿಮೂನ್‍ಗೆ ಯಾವ ವಿದೇಶಕ್ಕೆ ಹೋಗಲಿದ್ದೇವೆ ಎಂಬುದನ್ನು ತಿಳಿಸಿದ್ದರು. ಚಂದನ್ ಮತ್ತು ನಿವೇದಿತಾ ಜೋಡಿ ನೆದರ್‌ಲ್ಯಾಂಡ್‌ನ ಆಂಸ್ಟರ್ಡ್ಯಾಮ್ ಹೋಗಿದ್ದು, ಅಲ್ಲಿನ ಸುತ್ತಮುತ್ತಲ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಜಾಗ್ವಾರ್ ಕಾರು ಗಿಫ್ಟ್

    ಮದುವೆಯ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಚಂದನ್ ಶೆಟ್ಟಿ, ನಿವೇದಿತಾಗೆ ಹನಿಮೂನ್‍ಗಾಗಿ ಪ್ಯಾರಿಸ್‍ಗೆ ಹೋಗಬೇಕು ಎಂಬ ಆಸೆ ಇದೆ. ಹೀಗಾಗಿ ಅಲ್ಲಿಗೆ ಹೋಗುವುದಾಗಿ ತಿಳಿಸಿದ್ದರು. ಈಗ ಬಿಗ್‍ಬಾಸ್ ಜೋಡಿ  ಹನಿಮೂನ್‍ಗೆ ಆಂಸ್ಟರ್ಡ್ಯಾಮ್ ಗೆ ಹೋಗಿದ್ದಾರೆ.

    https://www.instagram.com/p/B9L8peMJMIM/

    ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆದಿತ್ತು. ಮದುವೆಯ ಉಡುಗೊರೆಯಾಗಿ ಚಂದನ್ ಪೋಷಕರು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

  • ಬಿಗ್‍ಬಾಸ್ ಟ್ರೋಫಿನೂ ಬಂತು, ವಿನ್ನರೂ ಸಿಕ್ಕಿದ್ರು: ನಿವೇದಿತಾ

    ಬಿಗ್‍ಬಾಸ್ ಟ್ರೋಫಿನೂ ಬಂತು, ವಿನ್ನರೂ ಸಿಕ್ಕಿದ್ರು: ನಿವೇದಿತಾ

    ಮೈಸೂರು: ನನಗೆ ಬಿಗ್‍ಬಾಸ್ ಟ್ರೋಫಿನೂ ಬಂತು, ಜೊತೆಗೆ ವಿನ್ನರೂ ಸಿಕ್ಕಿದ್ದಾರೆ ಎಂದು ನಿವೇದಿತಾ ಗೌಡ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿವೇದಿತಾ ಗೌಡ, ಬಿಗ್‍ಬಾಸ್‍ಗೆ ಹೋಗುವಾಗ ನನ್ನ ಜೀವನದಲ್ಲಿ ಈ ರೀತಿಯ ಟ್ವಿಸ್ಟ್ ಸಿಗುತ್ತೆ ಎಂದುಕೊಂಡಿರಲಿಲ್ಲ. ಆದರೆ ಇದು ನನ್ನ ಜೀವನದ ಸುಂದರವಾದ ಟ್ವಿಸ್ಟ್. ಇದು ಜೀವನ ಪೂರ್ತಿ ನೆನಪಿನಲ್ಲಿರುತ್ತದೆ. ಇವರು ಬಿಗ್‍ಬಾಸ್ ವಿನ್ನರ್, ನಾನು ಇವರನ್ನು ಮದುವೆಯಾಗಿದ್ದೇನೆ. ಹೀಗಾಗಿ ಟ್ರೋಫಿನೂ ಬಂತೂ, ವಿನ್ನರೂ ಸಿಕ್ಕಿದ್ದಾರೆ ನನಗೆ ಎಂದು ಸಂತಸದಿಂದ ಹೇಳಿದರು. ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಜಾಗ್ವಾರ್ ಕಾರು ಗಿಫ್ಟ್

    ಬಿಗ್‍ಬಾಸ್ ಇಲ್ಲ ಎಂದಿದ್ದರೆ ನಾವು ಭೇಟಿಯಾಗುತ್ತಿರಲಿಲ್ಲ. ಹೀಗಾಗಿ ನಾವಿಬ್ಬರೂ ಒಬ್ಬೊಬ್ಬರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಬಿಗ್‍ಬಾಸ್ ಕಾರಣ. ಬಿಗ್‍ಬಾಸ್ ಹೋಗುವ ಮೊದಲೇ ಚಂದನ್ ಶೆಟ್ಟಿ ಗೊತ್ತಿತ್ತು. ಆದರೆ ಆ ಸಂದರ್ಭದಲ್ಲಿ ಚಂದನ್ ಸಿಂಗರ್ ಅನ್ನೋ ಭಾವನೆ ಇತ್ತು. ಈಗ ಅವರನ್ನು ಅರ್ಥ ಮಾಡಿಕೊಂಡು ಮದುವೆಯಾದ ಮೇಲೆ ಬೇರೆ ಭಾವನೆ ಇದೆ ಎಂದರು. ಇದನ್ನೂ ಓದಿ: ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರ್ತಿದ್ದೆ, ಇನ್ಮುಂದೆ ಹೆಂಡ್ತಿ ಇರ್ತಾಳೆ: ಚಂದನ್

    ಚಂದನ್ ಮನೆಯವರು ತುಂಬಾ ಒಳ್ಳೆಯವರು. ನನಗೆ ಗೊತ್ತಿಲ್ಲದ್ದನ್ನು ಅವರೇ ಹೇಳಿಕೊಡುತ್ತಾರೆ. ನನ್ನ ಕನಸಿನ ರೀತಿ ಮದುವೆಯಾಗಿದೆ. ಇದೇ ರೀತಿ ಮದುವೆಯಾಗಬೇಕು ಎಂಬ ಆಸೆ ಇತ್ತು. ಹೀಗಾಗಿ ಮದುವೆ ಕೆಲಸದ ಜೊತೆಗೆ ನಾನು ಅವರಿಗೆ ಒತ್ತಡ ಹಾಕುತ್ತಿದ್ದೆ. ಆದರೂ ಅವರು ಎಲ್ಲವನ್ನೂ ನಿಭಾಯಿಸಿಕೊಂಡು ನನ್ನ ಇಷ್ಟದಂತೆ ಎಲ್ಲವನ್ನೂ ತಯಾರು ಮಾಡಿದ್ದರು ಎಂದು ಮದುವೆ ಬಗ್ಗೆ ನಿವೇದಿತಾ ಗೌಡ ಮಾತನಾಡಿದರು.

  • ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರ್ತಿದ್ದೆ, ಇನ್ಮುಂದೆ ಹೆಂಡ್ತಿ ಇರ್ತಾಳೆ: ಚಂದನ್

    ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರ್ತಿದ್ದೆ, ಇನ್ಮುಂದೆ ಹೆಂಡ್ತಿ ಇರ್ತಾಳೆ: ಚಂದನ್

    ಮೈಸೂರು: ಇಷ್ಟು ದಿನ ಒಬ್ಬನೇ ಮನೆಯಲ್ಲಿ ಇರುತ್ತಿದ್ದೆ. ಇನ್ಮುಂದೆ ನನ್ನ ಜೊತೆ ಹೆಂಡತಿ ಕೂಡ ಇರುತ್ತಾಳೆ ಎಂದು ರ‍್ಯಾಪರ್ ಚಂದನ್ ಶೆಟ್ಟಿ ಮದುವೆಯಾದ ನಂತರ ಮೊದಲ ಬಾರಿಗೆ ಮಾತನಾಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವರ ಚಂದನ್, ಇವತ್ತಿನಿಂದ ಜೀವನ ಬೇರೆ ತರನೇ ಇರುತ್ತದೆ. ಇಷ್ಟು ದಿನ ಒಬ್ಬನೇ ಮನೆಯಲ್ಲಿ ಇರುತ್ತಿದ್ದೆ. ಇನ್ಮುಂದೆ ನನ್ನ ಜೊತೆ ಹೆಂಡತಿ ಕೂಡ ಇರುತ್ತಾಳೆ. ತುಂಬಾ ಖುಷಿಯಾಗುತ್ತಿವೆ. ಜೀವನದಲ್ಲಿ ಮದುವೆ ಅನ್ನೋದು ತುಂಬಾ ಮುಖ್ಯವಾದ ವಿಚಾರವಾಗಿದೆ. ಇವತ್ತಿನಿಂದ ಜೀವನವೂ ತುಂಬಾ ಚೆನ್ನಾಗಿರುತ್ತೆ ಅಂದುಕೊಂಡಿದ್ದೀನಿ ಎಂದು ಸಂತಸದಿಂದ ಹೇಳಿದರು. ಇದನ್ನೂ ಓದಿ: ನಾನಿಷ್ಟಪಟ್ಟ ಹುಡ್ಗನೊಂದಿಗೆ ಮದ್ವೆಯಾಗಿದ್ದು ತುಂಬಾನೇ ಖುಷಿಯಾಗಿದೆ: ನಿವೇದಿತಾ

    ಕರ್ನಾಟಕ ಜನತೆ ಎಲ್ಲರೂ ಪ್ರೀತಿ ಕೊಟ್ಟಿದ್ದೀರಾ. ನಿಮ್ಮೆಲ್ಲರ ಆಶೀರ್ವಾದದಿಂದ ನಾವಿಬ್ಬರು ಇಂದು ಮದುವೆಯಾಗಿದ್ದೇವೆ. ಜೀವನ ಪೂರ್ತಿ ನೆನಪಿನಲ್ಲಿ ಉಳಿಯುವಂತೆ ಮದುವೆ ಮಾಡಿಕೊಳ್ಳುಬೇಕು ಅಂದುಕೊಂಡಿದ್ದೆವು. ಅದೇ ರೀತಿ ಮದುವೆ ಕೂಡ ಅದ್ಧೂರಿಯಾಗಿ ಆಗಿದೆ. ನಿಜಕ್ಕೂ ತುಂಬಾ ಖುಷಿಯಾಗಿದೆ ಎಂದು ಚಂದನ್ ಹೇಳಿದರು.

    ಕಳೆದ ವರ್ಷದ ‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿತ್ತು. ಬಳಿಕ ಸ್ವತಃ ಚಂದನ್ ಅವರೇ ಕ್ಷಮೆ ಕೇಳಿದ್ದರು. ನಂತರ ಅಕ್ಟೋಬರ್ 21ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಲ್ಲಿ ನಿಶ್ಚಿತಾರ್ಥ ನಡೆದಿದ್ದು, ಇಂದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ನಾನಿಷ್ಟಪಟ್ಟ ಹುಡ್ಗನೊಂದಿಗೆ ಮದ್ವೆಯಾಗಿದ್ದು ತುಂಬಾನೇ ಖುಷಿಯಾಗಿದೆ: ನಿವೇದಿತಾ

    ನಾನಿಷ್ಟಪಟ್ಟ ಹುಡ್ಗನೊಂದಿಗೆ ಮದ್ವೆಯಾಗಿದ್ದು ತುಂಬಾನೇ ಖುಷಿಯಾಗಿದೆ: ನಿವೇದಿತಾ

    ಮೈಸೂರು: ಬಿಗ್ ಬಾಸ್ ಸೀಸನ್ 5ರಲ್ಲಿ ಅರಳಿದ ‘ಪ್ರೀತಿ’ ಇಂದು ಜೊತೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಧು ನಿವೇದಿತಾ ಗೌಡ, ನಾನು ಇಷ್ಟಪಟ್ಟ ಹುಡುಗನೊಂದಿಗೆ ಮದುವೆಯಾಗಿದ್ದು ತುಂಬಾನೆ ಖುಷಿ ತಂದಿದೆ ಎಂದು ಹೇಳಿದ್ದಾರೆ.

    ನನ್ನ ಕನಸು ನನಸಾಗಿದೆ. ಚಿಕ್ಕ ಚಿಕ್ಕ ವಿಷಯಗಳನ್ನು ಕೂಡ ನಾನು ತುಂಬಾ ದೊಡ್ಡದಾಗಿ ಪರಿಗಣಿಸುತ್ತೇನೆ. ನನಗಂತೂ ತುಂಬಾನೇ ಖುಷಿಯಾಗಿದೆ. ವಿಶೇಷವಾಗಿ ಚಂದನ್ ಜೊತೆ ಮದುವೆಯಾಗಿರುವುದು ಖುಷಿ ತಂದಿದೆ. ಯಾಕೆಂದರೆ ನಾನು ಇಷ್ಟ ಪಟ್ಟ ಹುಡುಗ ಚಂದನ್, ಅವರೊಂದಿಗೆ ಇಂದು ಮದುವೆಯಾಗಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

    ನಮಗೆ ಮದುವೆ ನಿಶ್ಚಯವಾಗಿದ್ದಾಗಿಂದಲೂ ಹಾರೈಕೆಗಳು ತುಂಬಾನೇ ಬರುತ್ತಿದ್ದವು. ಅದರಲ್ಲೂ ನಿನ್ನೆ ನನಗೆ ಮತ್ತಷ್ಟು ಖುಷಿಯಾಗಿದೆ. ಎಷ್ಟೋ ಜನ ಬಂದು ವಿಶ್ ಮಾಡಿದ್ದಾರೆ. ಸಮಯವಾದರು ಕೂಡ ವೈಟ್ ಮಾಡಿ ನಮಗಿಬ್ಬರಿಗೆ ಶುಭಾಶಯ ತಿಳಿಸಿದ್ದಾರೆ. ಒಟ್ಟಿನಲ್ಲಿ ಅವರ ಪ್ರೀತಿ ನಮಗೆ ಸ್ಫೂರ್ತಿಯಾಗುತ್ತಿತ್ತು. ಹೀಗಾಗಿ ನಮಗೆ ಶುಭ ಹಾರೈಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಬಾರ್ಬಿ ಡಾಲ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಜೋಡಿ

    ಕಳೆದ ವರ್ಷದ ‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿತ್ತು. ಬಳಿಕ ಸ್ವತಃ ಚಂದನ್ ಅವರೇ ಕ್ಷಮೆ ಕೇಳಿದ್ದರು. ನಂತರ ಅಕ್ಟೋಬರ್ 21ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಲ್ಲಿ ನಿಶ್ಚಿತಾರ್ಥ ನಡೆದಿದ್ದು, ಇಂದು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಇವರಿಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಜೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‍ಬಾಸ್ ಜೋಡಿ

    ಮೈಸೂರು: ಕನ್ನಡ ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 5’ರಲ್ಲಿ ಆರಂಭವಾದ ‘ಪ್ರೀತಿ’ ಯ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಬಿಗ್‍ಬಾಸ್ ಜೋಡಿ ಮದುವೆ ನಡೆದಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆದಿದೆ. ಬೆಳಗ್ಗೆ 8.15 ರಿಂದ 9 ಗಂಟೆಗೆ ಧಾರಾ ಮುಹೂರ್ತವಿತ್ತು. ಮೀನ ಲಗ್ನದಲ್ಲಿ ನಿವೇದಿತಾಳನ್ನು ಚಂದನ್ ಶೆಟ್ಟಿ ವರಿಸಿದ್ದಾರೆ.

    ಈ ಕಾರ್ಯಕ್ರಮದಲ್ಲಿ ನಿವೇದಿತಾ ಪೋಷಕರಾದ ಹೇಮ ಮತ್ತು ರಮೇಶ್, ಚಂದನ್‍ಶೆಟ್ಟಿ ಪೋಷಕರಾದ ಪ್ರೇಮಲತಾ ಹಾಗೂ ಪರಮೇಶ್, ಆಪ್ತರು, ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ನಿವೇದಿತಾಗೆ ಚಂದನ್ ತಾಳಿ ಕಟ್ಟಿದ್ದಾರೆ.

     

    ಮಂಗಳವಾರ ಸಂಜೆ ಚಂದನ್ ಮತ್ತು ನಿವೇದಿತಾ ಆರತಕ್ಷತೆ ನಡೆದಿದೆ. ಬೇಬಿ ಡಾಲ್ ಮೆರೂನ್ ಕಲರ್ ಗೌನ್‍ನಲ್ಲಿ ಮಿಂಚಿದರೆ, ಚಂದನ್ ಕೂಡ ಅದೇ ಕಲರ್ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದರು.

  • ಮೈಸೂರಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಆರತಕ್ಷತೆ

    ಮೈಸೂರಲ್ಲಿ ಚಂದನ್ ಶೆಟ್ಟಿ- ನಿವೇದಿತಾ ಆರತಕ್ಷತೆ

    ಮೈಸೂರು: ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ಆರಂಭವಾದ ‘ಪ್ರೀತಿ’ಯ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಹೌದು, ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರ ಮದುವೆ ನಾಳೆ ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ನಡೆಯಲಿದ್ದು, ಇಂದು ಆರತಕ್ಷತೆ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದಾರೆ.

    ಇಂದು ಬೆಳಗ್ಗಿನಿಂದಲೇ ವಧು-ವರರ ಮನೆಯಲ್ಲಿ ಸಂಪ್ರದಾಯದ ಪ್ರಕಾರ ಹಲವಾರು ಶಾಸ್ತ್ರಗಳನ್ನು ಮುಗಿಸಿ ಜೋಡಿ ಇದೀಗ ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ಗೆ ತೆರಳಿದ್ದು, ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ. ಬೇಬಿ ಡಾಲ್ ಮೆರೂನ್ ಕಲರ್ ಗೌನ್‍ನಲ್ಲಿ ಮಿಂಚಿದರೆ, ಚಂದನ್ ಕೂಡ ಅದೇ ಕಲರ್ ಧಿರಿಸಿನಲ್ಲಿ ಕಂಗೊಳಿಸುತ್ತಿದ್ದಾರೆ.  ಆರತಕ್ಷತೆ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್, ಅಕುಲ್ ಬಾಲಾಜಿ, ಧ್ರುವ ಸರ್ಜಾ ದಂಪತಿ ಹಾಗೂ ಮತ್ತಿತರ ಗಣ್ಯರು ಭಾಗಿಯಾಗಿದ್ದರು.

    ನಿವೇದಿತಾ ಗೌಡ ಹಾಗೂ ಚಂದನ್‍ಶೆಟ್ಟಿ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆಯಲಿದೆ. ನಾಳೆ (ಫೆ.26) ಬೆಳಿಗ್ಗೆ 8.15ರಿಂದ 9 ಗಂಟೆಗೆ ಧಾರಾ ಮುಹೂರ್ತವಿದ್ದು, ಮೀನ ಲಗ್ನದಲ್ಲಿ ನಿವೇದಿತಾಳನ್ನು ಚಂದನ್ ಶೆಟ್ಟಿ ವರಿಸಲಿದ್ದಾರೆ. ವಿವಾಹ ಸಮಾರಂಭಕ್ಕೆ ಸ್ಯಾಂಡಲ್ ವುಡ್ ಗಣ್ಯರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಸಾಕ್ಷಿ ಆಗುವ ಸಾಧ್ಯತೆ ಇದೆ.

    ಕಳೆದ ವರ್ಷದ ‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಹಾಡಲು ಬಂದಿದ್ದ ಚಂದನ್ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೊಳಗಾಗಿತ್ತು. ಬಳಿಕ ಸ್ವತಃ ಚಂದನ್ ಅವರೇ ಕ್ಷಮೆ ಕೇಳಿದ್ದರು. ಕಳೆದ ವರ್ಷ ಅಕ್ಟೋಬರ್ 21ರಂದು ಮೈಸೂರಿನ ಸದರ್ನ್ ಸ್ಟಾರ್ ಹೋಟೆಲಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು.

  • ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಂದನ್, ನಿವೇದಿತಾ

    ಬುಧವಾರ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಚಂದನ್, ನಿವೇದಿತಾ

    ಮೈಸೂರು: ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ಬುಧವಾರ ಮೈಸೂರಿನಲ್ಲಿ ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗುತ್ತಿದೆ.

    ಮೈಸೂರಿನ ದಟ್ಟಗಹಳ್ಳಿಯ ನಿವೇದಿತಾ ಗೌಡ ಮನೆಯಲ್ಲಿ ಮದುವೆ ಕಾರ್ಯಗಳು ಜೋರಾಗಿ ನಡೆದಿದ್ದು, ಫೆ.25 ಮತ್ತು 26ರಂದು ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿರುವ ವಿವಾಹಕ್ಕೆ ಗಣ್ಯರ ದಂಡೇ ಹರಿದು ಬರುತ್ತಿದೆ. ಈ ಮದುವೆ ಸಮಾರಂಭಕ್ಕೆ ಸ್ಯಾಂಡಲ್‍ವುಡ್‍ನ ಕಲಾವಿದರು, ಗಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಸಾಕ್ಷಿ ಯಾಗುವ ನಿರೀಕ್ಷೆ ಇದೆ.

    ಚಂದನ್ ಹಾಗೂ ನಿವೇದಿತಾ ಮದುವೆ ಆಮಂತ್ರಣ ನೀಡುವಲ್ಲಿ ಇಷ್ಟು ದಿನ ಬ್ಯುಸಿಯಾಗಿದ್ದರು. ಇತ್ತೀಚೆಗೆಷ್ಟೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವು ಗಣ್ಯರಿಗೆ ಲಗ್ನ ಪತ್ರಿಕೆ ನೀಡಿದ್ದರು. ದರ್ಶನ್ ಅವರನ್ನು ಭೇಟಿಯಾಗಿದ್ದ ಸಂತಸವನ್ನು ಚಂದನ್ ಮತ್ತು ನಿವೇದಿತಾ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಹೀಗೆ ಸಿನಿಮಾರಂಗದವರಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದಾರೆ.

    ಯುವ ದಸರಾದ ಸರ್ಕಾರಿ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಬಳಿಕ ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

  • ಬಿಗ್‍ಬಾಸ್ ಜೋಡಿಯಿಂದ ದರ್ಶನ್ ಭೇಟಿ

    ಬಿಗ್‍ಬಾಸ್ ಜೋಡಿಯಿಂದ ದರ್ಶನ್ ಭೇಟಿ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್- 5’ ವಿನ್ನರ್ ಮತ್ತು ನಿವೇದಿತಾ ಗೌಡ ಇಬ್ಬರೂ ಭೇಟಿ ಮಾಡಿದ್ದಾರೆ.

    ಇತ್ತೀಚೆಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕ್ಲಿಕ್ಕಿಸಿಕೊಂಡ ಫೋಟೋವನ್ನು ಚಂದನ್ ಮತ್ತು ನಿವೇದಿತಾ ಇಬ್ಬರೂ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಆ ಫೋಟೋಗೆ “ಡಿ-ಬಾಸ್ ಒಬ್ಬ ಅದ್ಭುತ ವ್ಯಕ್ತಿ ಮತ್ತು ವ್ಯಕ್ತಿತ್ವ” ಎಂದು ಚಂದನ್ ಶೆಟ್ಟಿ ಕ್ಯಾಪ್ಷನ್ ಕೊಟ್ಟಿದ್ದಾರೆ. ಇನ್ನೂ ನಿವೇದಿತಾ ಗೌಡ ಕೂಡ ‘ನೀವು ರತ್ನ ಸರ್’ ಎಂದು ಬರೆದುಕೊಂಡಿದ್ದಾರೆ. ಚಂದನ್ ಹಾಗೂ ನಿವೇದಿತಾ ಇದೇ ತಿಂಗಳು 25 ಮತ್ತು 26 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಹೀಗಾಗಿ ತಮ್ಮ ಮದುವೆಗೆ ಆಹ್ವಾನ ನೀಡಲು ದರ್ಶನ್ ಮನೆಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಭೇಟಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಮದುವೆ ಮೈಸೂರಿನ ಕನ್ವೆನ್ಶನ್ ಹಾಲ್‍ನಲ್ಲಿ ನಡೆಯಲಿದೆ.

    ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ವಿಚಾರವನ್ನು ಚಂದನ್ ಅಧಿಕೃತವಾಗಿ ಹೇಳಿಕೊಂಡಿದ್ದರು. ಬಳಿಕ ಅಕ್ಟೋಬರ್ 21ರಂದು ಚಂದನ್ ಶೆಟ್ಟಿ ತಮ್ಮ ಆತ್ಮೀಯ ಗೆಳತಿ ಬಾರ್ಬಿ ಗರ್ಲ್ ನಿವೇದಿತಾ ಗೌಡ ಜೊತೆ ಮೈಸೂರಿನ ಖಾಸಗಿ ಹೋಟೆಲಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಶುಭ ಸಮಾರಂಭದಲ್ಲಿ ಎರಡೂ ಕುಟುಂಬದ ಸದಸ್ಯರು ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು.

    https://www.instagram.com/p/B8JFZ7UlOtk/

    ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳಿದ್ದರು. ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದ್ದವು. ಆದ್ರೆ ಎಲ್ಲಿಯೂ ಚಂದನ್ ಮತ್ತು ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಕೊನೆಗೆ ದಸರಾ ಹಬ್ಬದಂದು ತಮ್ಮ ಪ್ರೀತಿಯನ್ನು ಚಂದನ್ ಹೇಳಿಕೊಂಡಿದ್ದರು.