Tag: ನಿವೇದಿತಾ ಗೌಡ

  • ಮಿಸೆಸ್ ಇಂಡಿಯಾ ಆದ ಚಂದನ್ ರಾಣಿ ನಿವೇದಿತಾ ಗೌಡ

    ಮಿಸೆಸ್ ಇಂಡಿಯಾ ಆದ ಚಂದನ್ ರಾಣಿ ನಿವೇದಿತಾ ಗೌಡ

    ಬಿಗ್‍ಬಾಸ್ ರಿಯಾಲಿಟಿ ಶೋ ಮೂಲಕ ಖ್ಯಾತಿ ಪಡೆದಿರುವ ನಿವೇದಿತಾ ಗೌಡ, ರ‍್ಯಾಪರ್ ಚಂದನ್ ಶೆಟ್ಟಿ ಅವರ ಜೊತೆ ಸಪ್ತಪದಿ ತುಳಿದು ಸಾಂಸಾರಿಕ ಜೀವನದಲ್ಲಿ ಖುಷಿಯಾಗಿ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಇವರು ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಕಳೆದ 2 ತಿಂಗಳಿಂದ ಮಿಸೆಸ್ ಇಂಡಿಯಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಇವರು ಈಗ ಗೆಲುವಿನ ನಗೆ ಬೀರಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಪ್ಡೇಟ್‍ಗಳ ಬಗ್ಗೆ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿರುವ ಮುದ್ದು ಬೊಂಬೆ ನಿವೇದಿತಾ ಗೌಡ ಈಗ ಮಿಸೆಸ್ ಇಂಡಿಯಾ ಆಗಿದ್ದಾರೆ. ಮಿಸೆಸ್ ಇಂಡಿಯಾ ಆಗಲು ಅವರು ಮಾಡುತ್ತಿದ್ದ ತಯಾರಿಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದ ನಿವೇದಿತಾ ಗೆಲುವಿನ ಕಿರೀಟವನ್ನು ತಮ್ಮ ಮುಡಿಗೆ ಏರಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಮೀರ್ ಖಾನ್ ಮನೆಯ ಔತಣ ಕೂಟದಲ್ಲಿ ಧನುಷ್‌ ನಟನೆಯ ಹಾಲಿವುಡ್ ಚಿತ್ರತಂಡ

     

    View this post on Instagram

     

    A post shared by Mrs. India Inc (@mrsindiainc)

    ಮಿಸೆಸ್ ಇಂಡಿಯಾ ಆಗಿರುವ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ ನಿವೇದಿತಾ ತಂಡ, ಕೊನೆಗೂ ಜನರ ಹೃದಯವನ್ನು ಗೆದ್ದು ಅವರಿಗೆ ಇಷ್ಟವಾಗುವಂತೆ ಮಾಡುವುದು ನಿಜವಾದ ಸಾಧನೆ, ಅಲ್ಲವೇ? ಮಿಸೆಸ್ ಇಂಡಿಯಾ ಇಂಕ್‍ನ ಪೀಪಲ್ಸ್ ಚಾಯ್ಸ್ 2022 ರ ವಿಜೇತರಾದ ಶ್ರೀಮತಿ ನಿವೇದಿತಾ ಗೌಡ ಅವರು ನಮ್ರತೆಯಿಂದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಎಲ್ಲರಿಗೂ ಗೊತ್ತಿರುವಂತೆ ನಿವೇದಿತಾ ಗೌಡ ಒಂದು ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಅದರಲ್ಲಿ ಅವರು ಹೋಮ್ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್ ಕಲೆಕ್ಷನ್ ಸೇರಿದಂತೆ ಹಲವಾರು ರೀತಿಯ ವೀಡಿಯೋಗಳನ್ನು ಮಾಡಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಬಾರಿ ಮಿಸೆಸ್ ಇಂಡಿಯಾಗೆ ಅವರು ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಅವರ ಡಯೆಟ್ ಏನು ಎಂಬ ಬಗ್ಗೆ ಹೇಳಿದ್ದರು. ಇದನ್ನೂ ಓದಿ: ಸೊಳ್ಳೆ ಪರದೆ ಡ್ರೆಸ್ ಧರಿಸಿ ಬಂದ ಉರ್ಫಿ ಜಾವೇದ್‌ಗೆ ನೆಟ್ಟಿಗರಿಂದ ಫುಲ್ ಕ್ಲಾಸ್

    ಅಲ್ಲದೇ, ಈ ವೀಡಿಯೋದಲ್ಲಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾರೆ ಎಂಬುದನ್ನ ಸಹ ತೋರಿಸಿದ್ದಾರೆ. ಹೇಗೆ ನೈಸರ್ಗಿಕವಾಗಿ ಮುಖದ ಅಂದವನ್ನು ಹೆಚ್ಚು ಮಾಡಿಕೊಳ್ಳಬಹುದು ಎಂಬುದನ್ನ ತೋರಿಸಿದ್ದಾರೆ. ಫೇಸ್ ಮಸಾಜ್‍ಗಳನ್ನು ಹೇಳಿಕೊಟ್ಟಿದ್ದು, ಯಾವುದರಿಂದ ಏನು ಲಾಭ ಎಂಬುದನ್ನ ಸಹ ತಿಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • `ರಾ ರಾ ರಕ್ಕಮ್ಮಾ’ ಹಾಡಿಗೆ ಹೆಜ್ಜೆ ಹಾಕಿದ ಸ್ಯಾಂಡಲ್‌ವುಡ್ ತಾರೆಯರು

    `ರಾ ರಾ ರಕ್ಕಮ್ಮಾ’ ಹಾಡಿಗೆ ಹೆಜ್ಜೆ ಹಾಕಿದ ಸ್ಯಾಂಡಲ್‌ವುಡ್ ತಾರೆಯರು

    ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ `ವಿಕ್ರಾಂತ್ ರೋಣ’ ಸಿನಿಮಾ ಸಾಕಷ್ಟು ವಿಚಾರಗಳಿಂದ ಅಟ್ರಾಕ್ಟ್ ಮಾಡುತ್ತಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿರೋ `ರಾ ರಾ ರಕ್ಕಮ್ಮಾ’ ಸಾಂಗ್ ಅಂತೂ ಸಿನಿರಸಿಕರಿಗೆ ಮೋಡಿ ಮಾಡುತ್ತಿದೆ. ಸದ್ಯ ರಕ್ಕಮ್ಮಾ ಫೀವರ್ ಜೋರಾಗಿದ್ದು, ಈ ಹಾಡಿಗೆ ಸ್ಯಾಂಡಲ್‌ವುಡ್ ಸಲೆಬ್ರೆಟಿಸ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋಗಳ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಕಮಾಲ್ ಮಾಡುತ್ತಿದೆ.

     

    View this post on Instagram

     

    A post shared by Ashika Ranganath (@ashika_rangnath)

    `ವಿಕ್ರಾಂತ್ ರೋಣ’ ಚಿತ್ರದ ಸುದೀಪ್ ಮತ್ತು ಜಾಕ್ವೆಲಿನ್ ನಟನೆಯ `ರಾ ರಾ ರಕ್ಕಮ್ಮಾ’ ಸಾಂಗ್ ರಿಲೀಸ್ ಆಗಿ ಮಿಲಿಯನ್ ಗಟ್ಟಲೇ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಹಾಡಷ್ಟೇ ಟ್ರೆಂಡ್ ಆಗಿರೋದಲ್ಲ, ಈ ಹಾಡಿನ ರೀಲ್ಸ್ ಕೂಡ ಟ್ರೇಂಡ್ ಆಗಿದೆ. ಸಿನಿಪ್ರೇಕ್ಷಕರಷ್ಟೇ ಫಿದಾ ಆಗಿರೋದಲ್ಲ, ಇಡೀ ಚಿತ್ರರಂಗವೇ ಈ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸಿನಿ ಸಲೆಬ್ರೆಟಿಸ್ ಕೂಡ ರಕ್ಕಮ್ಮ ಹಾಡಿಗೆ ಜಬರ್‌ದಸ್ತ್ ಆಗಿ ಹೆಜ್ಜೆ ಆಗಿದ್ದಾರೆ. ಇದನ್ನೂ ಓದಿ: ಲೀಕ್ ಆಯ್ತು ನಯನತಾರಾ-ವಿಘ್ನೇಶ್ ಶಿವನ್ ಮದುವೆ ಆಮಂತ್ರಣ

     

    View this post on Instagram

     

    A post shared by Vaishnavi (@iamvaishnavioffl)

    `ಬಿಗ್ ಬಾಸ್’ ಖ್ಯಾತಿಯ ನಟಿ ವೈಷ್ಣವಿ ಗೌಡ, `ರಾ ರಾ ರಕ್ಕಮ್ಮಾ’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬ್ಲಾಕ್ ಕಲರ್ ಡ್ರೆಸ್‌ನಲ್ಲಿ ಜದರ್‌ದಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ಬಿಗ್ ಬಾಸ್‌ನ ಮತ್ತೊರ್ವ ಜೋಡಿ ಚಂದನ ಮತ್ತು ವಾಸುಕಿ ವೈಭವ್ ಕೂಡ ರಕ್ಕಮ್ಮಾ ಹಾಡಿಗೆ ಹೆಜ್ಜೆ ಹಾಕಿರೋದು ಸಿನಿಪ್ರಿಯರ ಗಮನ ಸೆಳೆಯುತ್ತಿದೆ.

    ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ, ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಕೂಡ `ವಿಕ್ರಾಂತ್ ರೋಣ’ ಹಾಡಿಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಬಾರೀ ವೈರಲ್ ಆಗುತ್ತಿದೆ. ಚಂದನವನದ ಪಟಾಕಿ ಪೋರಿ ಆಶಿಕಾ ರಂಗನಾಥ್ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಒಟ್ನಲ್ಲಿ ಚಿತ್ರರಂಗದ ತಾರೆಯರೆಲ್ಲ `ರಾ ರಾ ರಕ್ಕಮ್ಮ’ ಹಾಡಿಗೆ ಎಂಜಾಯ್ ಮಾಡ್ತಾ ಜಬರ್‌ದಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ.

  • `ರಾ ರಾ ರಕ್ಕಮ್ಮಾ’ ಹಾಡಿಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ ನಿವೇದಿತಾ ಗೌಡ-ಚಂದನ್ ಶೆಟ್ಟಿ

    `ರಾ ರಾ ರಕ್ಕಮ್ಮಾ’ ಹಾಡಿಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ ನಿವೇದಿತಾ ಗೌಡ-ಚಂದನ್ ಶೆಟ್ಟಿ

    ಕಿಚ್ಚ ಸುದೀಪ್ ನಟನೆಯ `ವಿಕ್ರಾಂತ್ ರೋಣ’ ಚಿತ್ರದ ಫೀವರ್ ಜೋರಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆದ ʻರಾ ರಾ ರಕ್ಕಮ್ಮಾ ಸಾಂಗ್‌ʼ  ಕ್ರೇಜ್ ಜೋರಾಗಿದೆ. ಸ್ಟಾರ್ ತಾರೆಯರು ಕೂಡ ಈ ಹಾಡಿಗೆ ಹೆಜ್ಜೆ ಹಾಕ್ತಿದ್ದಾರೆ. ಇದೀಗ ನಿವೇದಿತಾ ಮತ್ತು ಚಂದನ್ ಗೌಡ ದಂಪತಿಗೆ ರಕ್ಕಮ್ಮ ಸಾಂಗ್‌ಗೆ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದಾರೆ.

    ನಿವೇದಿತಾ ಮತ್ತು ಚಂದನ್ ಒಂದಲ್ಲಾ ಒಂದು ವಿಚಾರವಾಗಿ ಗಾಂಧಿನಗರದಲ್ಲಿ ಸುದ್ದಿಯಲ್ಲಿರುತ್ತಾರೆ. ಈಗ ಸುದೀಪ್ ಮತ್ತು ಜಾಕ್ವೆಲೀನ್ ನಟನೆಯ ಸೂಪರ್ ಹಿಟ್ ಹಾಡು `ರಾ ರಾ ರಕ್ಕಮ್ಮ’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದಾರೆ. ಅದರಲ್ಲೂ ನಿವಿ ಮತ್ತು ಚಂದನ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದು, ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ: ಶಾರುಖ್ ಖಾನ್ ಮಗ ಎಂಬ ಕಾರಣಕ್ಕೆ ಬಲಿಪಶು ಮಾಡಿದ್ದಾರೆಂದ ಶತ್ರುಘ್ನ ಸಿನ್ಹಾ.!

    ನಿವೇದಿತಾ ಮತ್ತು ಚಂದನ್ ಹೆಜ್ಜೆ ಹಾಕಿರುವ ʻರಾ ರಾ ರಕ್ಕಮ್ಮʼ ಸಾಂಗ್ ಸಖತ್ ವೈರಲ್ ಆಗುತ್ತಿದೆ. ಈ ಸಾಂಗ್‌ಗೆ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಅಭಿಮಾನಿಗಳಿಗೆ ನೀವು ಹೆಜ್ಜೆ ಹಾಕಿ ಅಂತಾ ಮನವಿ ಕೂಡ ಮಾಡಿದ್ದಾರೆ. ಒಟ್ನಲ್ಲಿ ರಾ ರಾ ರಕ್ಕಮ್ಮ ಫೀವರ್ ಜೋರಾಗಿದ್ದು, ಜುಲೈ 28ಕ್ಕೆ ಕಿಚ್ಚನ ದರ್ಶನ ಮಾಡುವುದಕ್ಕೆ ಫ್ಯಾನ್ಸ್ ಕಾಯ್ತಿದ್ದಾರೆ.

  • ಚಂದನದ ಗೊಂಬೆ ನಿವೇದಿತಾ ಗೌಡಗೆ ಫುಲ್ ಕ್ಲಾಸ್

    ಚಂದನದ ಗೊಂಬೆ ನಿವೇದಿತಾ ಗೌಡಗೆ ಫುಲ್ ಕ್ಲಾಸ್

    ಬಿಗ್ ಬಾಸ್ ಸ್ಪರ್ಧೆ ನಿವೇದಿತಾ ಗೌಡ ಇದೀಗ ಫುಲ್ ಬ್ಯುಸಿಯಾಗಿದ್ದಾರೆ. ಒಂದು ಕಡೆ ರಿಯಾಲಿಟಿ ಶೋ ಮತ್ತೊಂದು ಕಡೆ ಅವರೇ ನಂಬಿಕೊಂಡಿರುವ ರೀಲ್ಸ್ ಕಮಿಟ್ಮೆಂಟ್ ಗಳು ಇದರ ನಡುವೆ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ದಿನವೀಡಿ ಆ ಸಾಹಸ ಕೆಲಸದಲ್ಲೇ ಬ್ಯುಸಿಯಾಗಿದ್ದಾರೆ. ಅದೇನು ಅನ್ನುವುದನ್ನು ಅವರು ಅಭಿಮಾನಿಗಳಿಗೆ ನಿತ್ಯವೂ ವಿಡಿಯೋ ಅಥವಾ ಫೋಟೋ ಮೂಲಕ ಅಪ್ ಡೇಟ್ ಕೊಡುತ್ತಲೇ ಇರುತ್ತಾರೆ. ಇದನ್ನೂ ಓದಿ : ಯಶ್ ಆಸೆ ಈಡೇರಿಸುತ್ತಾರಾ ತಮಿಳಿನ ಖ್ಯಾತ ನಿರ್ದೇಶಕ ಶಂಕರ್

    ಸದ್ಯ ಕಾಮಿಡಿ ಶೋವೊಂದರಲ್ಲಿ ಕಲಾವಿದೆಯಾಗಿ ನಟಿಸುತ್ತಿರುವ ನಿವೇದಿತಾ ಗೌಡ, ಈ ನಡುವೆ ಮಿಸ್ಟ್ರೆಸ್ ಇಂಡಿಯಾ ಶೋನಲ್ಲಿ ಭಾಗಿಯಾಗುವ ಕನಸು ಕಂಡಿದ್ದಾರೆ. ಕೇವಲ ಭಾಗಿ ಆಗುವುದು ಮಾತ್ರವಲ್ಲ, ಅದಕ್ಕಾಗಿ ತರಬೇತಿಯನ್ನೂ ಪಡೆದುಕೊಳ್ಳುತ್ತಿದ್ದಾರೆ. ತಾವು ಏನೆಲ್ಲ ತರಬೇತಿ ಪಡೆಯುತ್ತಿದ್ದೇನೆ ಎನ್ನುವುದನ್ನು ಕೇವಲ ನಿವೇದಿತಾ ಗೌಡ ಮಾತ್ರವಲ್ಲ, ಅವರಿಗೆ ತರಬೇತಿ ಕೊಡುತ್ತಿರುವ ಸಂಸ್ಥೆಯು ಕೂಡ ಹಲವು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದೆ. ಇದನ್ನೂ ಓದಿ : ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

    ಮೊದ ಮೊದಲು ಆತ್ಮವಿಶ್ವಾಸದ ಕುರಿತು ನಿವೀ ತರಬೇತಿ ಪಡೆದಿದ್ದಾರಂತೆ. ಆನಂತರ, ಸ್ಟೈಲೀಶ್ ಮ್ಯಾನರಿಸಂ, ಕ್ಯಾಟ್ ವಾಕ್ ಹೇಗೆ ಮಾಡೋದು, ಕಾಸ್ಟ್ಯೂಮ್‍ ಸೆನ್ಸ್, ಹೀಗೆ ಹಲವು ಹಂತಗಳಲ್ಲಿ ಈ ಕುರಿತು ತರಬೇತಿ ಪಡೆಯುತ್ತಿದ್ದಾರಂತೆ. ಈ ತರಬೇತಿ ಪಡೆಯುವುದಕ್ಕಾಗಿ ತಾವು ಎಷ್ಟೊಂದು ಕಷ್ಟ ಪಡುತ್ತಿದ್ದೇನೆ ಎನ್ನುವ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ. ಹಾಗಾಗಿ ಫುಲ್ ಕ್ಲಾಸಿನಲ್ಲೇ ದಿನಗಳನ್ನು ಕಳೆಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

    ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗುವುದು ಅವರ ಕನಸಾಗಿತ್ತಂತೆ. ಅದಕ್ಕೆ ಈಗ ಅವಕಾಶ ಸಿಕ್ಕಿದೆ. ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಇಷ್ಟೊಂದು ತರಬೇತಿ ಪಡೆಯುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೇ, ತಮ್ಮಲ್ಲಿ ಏನೆಲ್ಲ ಬದಲಾವಣೆ ಆಗುತ್ತಿದೆ ಎನ್ನುವ ಕುರಿತು ಅವರು ಆಯಾ ಹಂತದ ಫೋಟೋ ಶೂಟ್ ಕೂಡ ಮಾಡಿಸಿಕೊಳ್ಳುತ್ತಿದ್ದಾರಂತೆ.

  • ಪತ್ನಿಯ ಹುಟ್ಟುಹಬ್ಬಕ್ಕೆ ಚಿಕ್ಕಮಗಳೂರಿಗೆ ಕರೆದುಕೊಂಡು ಹೋದ ಚಂದನ್ ಶೆಟ್ಟಿ

    ಪತ್ನಿಯ ಹುಟ್ಟುಹಬ್ಬಕ್ಕೆ ಚಿಕ್ಕಮಗಳೂರಿಗೆ ಕರೆದುಕೊಂಡು ಹೋದ ಚಂದನ್ ಶೆಟ್ಟಿ

    ಚಂದನದ ಗೊಂಬೆ ನಿವೇದಿತಾ ಗೌಡ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರಿಂದ ಚಿಕ್ಕಮಗಳೂರು ಅಂತಾ ಜಾಲಿ ಆಗಿ ರೈಡ್ ಮಾಡುತ್ತಾ ಬರ್ತಡೇ ಸಂಭ್ರಮವನ್ನು ಕುಟುಂಬದ ಜತೆ ನಿವೇದಿತಾ ಆಚರಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಕನ್ನಡ ಕಿರುತೆರೆಯ ಬಿಗ್ ಬಾಸ್ ಸೀಸನ್ 5ರ ಮೂಲಕ ಬೆಳಕಿಗೆ ಬಂದ ಪ್ರತಿಭೆ ನಿವೇದಿತಾ ಗೌಡ, ದೊಡ್ಮನೆ ಶೋನಲ್ಲಿ ತಮ್ಮ ಮುದ್ದು ಮುದ್ದಾದ ಮಾತಿನಿಂದ ಸಖತ್ ಆಕ್ಟೀವ್ ಆಗಿ ಕಾಣಿಸಿಕೊಂಡು ನಿವೇದಿತಾ ಸಖತ್ ಸೌಂಡ್ ಮಾಡಿದ್ರು. ಬಳಿಕ ರ‍್ಯಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆ ಆಗಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ನಿವಿ ತಮ್ಮ ಬರ್ತಡೇಯ ಖುಷಿಯ ಕ್ಷಣವನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಚಂದನ್ ಶೆಟ್ಟಿ ತಮ್ಮ ಪತ್ನಿಯ ಬರ್ತಡೇ ಸೆಲೆಬ್ರೇಶನ್ ಕುಟುಂಬ ಜತೆ ಕಲರ್‌ಫುಲ್ ಡೆಕೋರೇಷನ್ ಜತೆ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಬಳಿಕ ನಿವೇದಿತಾ ಬರ್ತಡೇ ನಿಮಿತ್ತ ಬೆಂಗಳೂರಿನಿಂದ ಚಿಕ್ಕಮಗಳೂರಿನಲ್ಲಿ ಜಾಲಿ ರೈಡ್ ಹೋಗಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನೂ ಓದಿ: ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ನಿವೇದಿತಾ ಗೌಡ ಸದ್ಯ ಗಿಚ್ಚಿ ಗಿಲಿ ಗಿಲಿ ಶೋ ಜತೆ ಮಿಸೆಸ್ ಇಂಡಿಯಾ ಕಾಂಪಿಟಿಷನ್‌ಗೂ ತಯಾರಿ ಮಾಡಿಕೊಳ್ತಿದ್ದಾರೆ. ಚಂದನ್ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  • ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಬಿಗ್ ಬಾಸ್ ನಂತರ ಸಿಲೆಬ್ರಿಟಿಯಾದ ಸಾಮಾನ್ಯ ಹುಡುಗಿ ನಿವೇದಿತಾ ಗೌಡ, ರಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆಯಾದ ನಂತರ ಇನ್ನೂ ಹೆಚ್ಚು ಸುದ್ದಿ ಮಾಡಿದ್ದರು. ಆನಂತರ ಅವರು ನಟನೆ, ಶೋಗಳಿಗಿಂತಲೂ ಅವರು ಹಾಕುತ್ತಿರುವ ವಿಡಿಯೋ, ಫೋಟೋಗಳಿಂದಾಗಿಯೇ ಹೆಚ್ಚು ಪ್ರಚಾರ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ: ತನ್ನ ಪುಟ್ಟ ರಾಜಕುಮಾರನಿಗಾಗಿ ಭಾವನಾತ್ಮಕ ಸಾಲು ಬರೆದ ಕಾಜಲ್ 

    ಇನ್ಸ್ಟ್, ರೀಲ್ಸ್ ಗಳಲ್ಲಿ ನಿತ್ಯವೂ ಅವರು ಒಂದಿಲ್ಲೊಂದು ವಿಡಿಯೋ ಅಪ್ ಡೇಟ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಪತಿ ಚಂದನ್ ಶೆಟ್ಟಿ ಅವರನ್ನು ಕಿಚಾಯಿಸುವುದರಲ್ಲೇ ಹೆಚ್ಚು ಸಮಯ ಕಳೆಯುತ್ತಿರುವ ನಿವೇದಿತಾ, ಇದೀಗ ಹೊಸ ಜವಾಬ್ದಾರಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಮಿಸೆಸ್ ಇಂಡಿಯಾ ಆಗುವ ಕನಸು ಕಾಣುತ್ತಿದ್ದಾರಂತೆ.

    ಮಿಸೆಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಇದೀಗ ಅಂಥದ್ದೇ ಕನಸು ಕಾಣುತ್ತಿದ್ದಾರಂತೆ ನಿವೇದಿತಾ ಗೌಡ. ಅದಕ್ಕಾಗಿ ಅವರು ತರಬೇತಿಯನ್ನು ಪಡೆಯುತ್ತಿದ್ದಾರಂತೆ. ಕ್ಯಾಟ್ ವಾಕ್ ಹೇಗೆ ಮಾಡುವುದು ಎನ್ನುವುದರ ಕುರಿತು ಟ್ರೈನಿಂಗ್ ಪಡೆಯುತ್ತಿದ್ದು, ಆ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮಂದಿರ ದಿನದ ವಿಶೇಷ ಫೋಟೋ ಶೇರ್ ಮಾಡಿದ ಸಿಂಡ್ರೆಲಾ 

    ಮಿಸೆಸ್ ಇಂಡಿಯಾ ಆಗಲು ಏನೆಲ್ಲ ತಯಾರಿ ಬೇಕು, ಹೇಗಿರಬೇಕು? ಯಾವೆಲ್ಲ ತರಬೇತಿ ಪಡೆಯಬೇಕು ಎನ್ನುವುದರ ಕುರಿತು ನುರಿತ ತರಬೇತಿದಾರರಿಂದ ಅವರು ಟ್ರೈನಿಂಗ್ ಪಡೆಯುತ್ತಿದ್ದಾರಂತೆ. ಮುಂದಿನ ದಿನಗಳಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲೂ ನಿವೇದಿತಾ ಭಾಗಿಯಾಗಲಿದ್ದಾರಂತೆ.

  • ಬೇಬಿ ಡಾಲ್ ನಿವೇದಿತಾ ತಾಯಿ ಆಗುತ್ತಿದ್ದಾರಾ?- ಚಂದನ್ ಶೆಟ್ಟಿ ಹೇಳಿದ್ದೇನು?

    ಬೇಬಿ ಡಾಲ್ ನಿವೇದಿತಾ ತಾಯಿ ಆಗುತ್ತಿದ್ದಾರಾ?- ಚಂದನ್ ಶೆಟ್ಟಿ ಹೇಳಿದ್ದೇನು?

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ಬಾಸ್‌ ಕಾರ್ಯಕ್ರಮ ಮೂಲಕವಾಗಿ ಜನಮನ್ನಣೆ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ. ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಈ ಜೋಡಿ ಹೊಸ ವಿಚಾರವೊಂದಕ್ಕೆ ಸುದ್ದಿಯಾಗಿದ್ದಾರೆ.


    ಈ ಜೋಡಿ ಏನ್ ಮಾಡಿದ್ರು, ಸುದ್ದಿ ಎನ್ನುವಷ್ಟರ ಮಟ್ಟಿಗೆ ಫೇಮಸ್ ಆಗಿರುವ ಚಂದನ್, ನಿವೇದಿತಾಗೆ ದೊಡ್ಡ ಮಟ್ಟದ ಅಭಿಮಾನಿಗಳ ಬಳಗವೇ ಇದೆ. ಸದ್ಯ ಈ ಜೋಡಿ ಪೋಷಕರಾಗುತ್ತಿದ್ದಾರೆ, ಬೇಬಿ ಡಾಲ್‌ಗೆ ಪುಟ್ಟ ಬೇಬಿ ಬರಲಿದೆ. ಚಂದನ್‌ಗೆ ಹೆಣ್ಣುಮಗುವಿನ ತಂದೆ ಆಗುವ ಆಸೆ ಅಂತೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಕಷ್ಟಪಟ್ಟು ಮಾಡುವ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಆಲಿಯಾ ಗರಂ


    ನಿವೇದಿತಾ ಹೊಸ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಲಿದ್ದಾರೆ. ಆದರೆ ಈ ಮಧ್ಯೆ ಅವರು ತಾಯಿ ಆಗುತ್ತಿದ್ದಾರೆ ಎನ್ನುವ ಸುದ್ದಿ ಮಾತ್ರ ಅಭಿಮಾನಿಗಳಿಗೆ ಸಂಭ್ರಮಕ್ಕೆ ಕಾರಣವಾಗಿದೆ. ಚಂದನ್ ಅವರಿಗೆ ಅವರಿಗೆ ಹೆಣ್ಣು ಮಗು ಎಂದರೆ ಬಹಳ ಇಷ್ಟವಂತೆ. ಹೀಗಾಗಿ ಅವರು ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನವ ಗುಸುಗುಸು ಸುದ್ದಿಯೊಂದು ಹರಿದಾಡುತ್ತಿದೆ. ಈ ಕುರಿತಾಗಿ ನಿವೇದಿತಾ, ಚಂದನ್ ಸ್ಪಷ್ಟನೆ ನೀಡಬೇಕಾಗಿದೆ.

    2020ರಲ್ಲಿ 26ರಂದು ಈ ಜೋಡಿ ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆಯಾದರು. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆಗೆ ಸಾಕ್ಷಿ ಆಗಿದ್ದರು. ಇದೀಗ ನಿವೇದಿತಾ ರಿಯಾಲಿಟಿ ಶೋನಲ್ಲಿ ತೊಡಗಿಕೊಂಡಿದ್ದಾರೆ. ಚಂದನ್ ಕೆಲವು ಸಿನಿಮಾಗಳಿಗೆ ಮ್ಯೂಸಿಕ್ ಮಾಡುವಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗೆ ಚಂದನ್, ನಿವೇದಿತಾ ಏನ್ ಹೇಳುತ್ತಾರೆ ಎಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

    ಚಂದನ್‌ ಶೆಟ್ಟಿ ಸ್ಪಷ್ಟನೆ: ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಇದು ಏಪ್ರಿಲ್‌ ಫೂಲ್‌ ಸುದ್ದಿಯಾಗಿದೆ ಎಂದು ಚಂದನ್‌ ಶೆಟ್ಟಿ ಪಬ್ಲಿಕ್‌ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ʼಆರ್‌ಆರ್‌ಆರ್‌ʼ ರಿಲೀಸ್ ಆದ ಕೆಲವೇ ದಿನಗಳಲ್ಲಿ 100 ಮಿಲಿಯನ್ ದಾಖಲೆ

  • ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಚಂದನ್, ನಿವೇದಿತಾ ದಾಂಪತ್ಯಕ್ಕೆ 2 ವರ್ಷ – ಔಟ್ ಆಫ್ ಸ್ಟೇಶನ್‍ಗೆ ಹಾರಿದ ಕ್ಯೂಟ್ ಜೋಡಿ

    ಬೆಂಗಳೂರು: ಸ್ಯಾಂಡಲ್‍ವುಡ್ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

    ಚಂದನ್ ಹಾಗೂ ನಿವೇದಿತಾ ಗೌಡ ಆಗಾಗ ಫೋಟೋ ಹಾಗೂ ವೀಡಿಯೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ. ಇತ್ತೀಚೆಗಷ್ಟೇ ಚಂದನ್ ಲಕ್ ಲಕ್ ಲಂಬೋರ್ಗಿನಿ ಹಾಡು ಬಿಡುಗಡೆ ಮಾಡಿದ್ದರು. ಇನ್ನೂ ಈ ಹಾಡು ಸಖತ್ ಸದ್ದು ಮಾಡಿತ್ತು. ಸದ್ಯ ಚಂದನ್ ನಿವೇದಿತಾ ಕೈ ಹಿಡಿದು ಇಂದಿಗೆ 2 ವರ್ಷ ತುಂಬಿದ್ದು, ಇದೇ ಖುಷಿಯಲ್ಲಿ ಜೋಡಿ ಔಟ್ ಆಫ್ ಸ್ಟೇಷನ್‍ನಲ್ಲಿ ಟೂರ್ ಹೊಡೆಯುತ್ತಿದ್ದಾರೆ.

    ಈ ವಿಶೇಷ ದಿನದಂದು ನಿವೇದಿತಾ ಗೌಡ ತಮ್ಮ ಮದುವೆಯ ಫೋಟೋಗಳನ್ನು ಕೊಲಾಜ್ ಮಾಡಿರುವ ಪುಟ್ಟ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೂ ಈ ಕ್ಯೂಟ್ ಜೋಡಿಗೆ ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಮತ್ತೊಬ್ಬ ರಾಜಕಾರಣಿ ಪುತ್ರ ಚಂದನವನದಲ್ಲಿ ‘ಗತವೈಭವ’ ಮಾಡಲು ಎಂಟ್ರಿ!

    ಬಿಗ್‍ಬಾಸ್ ಸೀಸನ್-5ರಲ್ಲಿ ಖ್ಯಾತಿ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಬಿಗ್‍ಬಾಸ್ ಮನೆಯಿಂದ ಹೊರಬಂದ ಮೇಲೆ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು. ಮೈಸೂರಿನ ದಸರಾ ಕಾರ್ಯಕ್ರಮದ ವೇಳೆ ಚಂದನ್ ನಿವೇದಿತಾ ಬಳಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಮೂಲಕ ನಿವೇದಿತಾ ಮುಂದೆ ಮದುವೆ ಪ್ರಪೋಸಲ್ ಇಟ್ಟರು. ಈ ವೇಳೆ ಚಂದನ್ ಪ್ರೀತಿಗೆ ಮನಸೋತು ನಿವೇದಿತಾ ಗೌಡ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.

    ನಂತರ 2020ರ ಫೆಬ್ರವರಿ 27ರಂದು ಮೈಸೂರಿನಲ್ಲಿ ಶುಭ ಮೂಹೂರ್ತದಲ್ಲಿ ಶುಭ ಮೂಹೂರ್ತದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಚಂದನ್ ನಿವೇದಿತರನ್ನು ವರಿಸಿದರು. ಈ ಜೋಡಿ ಮದುವೆಗೆ ಅನೇಕ ಚಿತ್ರರಂಗದ ಗಣ್ಯರು ಆಗಮಿಸಿ ಶುಭ ಕೋರಿದ್ದರು. ಇದನ್ನೂ ಓದಿ: ದೇಶ ವಿದೇಶದಲ್ಲಿ ಜೇಮ್ಸ್ ಅಬ್ಬರ ಶುರು – ಭಾರತ ಸೇರಿದಂತೆ ಒಟ್ಟು 15 ದೇಶಗಳಲ್ಲಿ ಜೇಮ್ಸ್!

  • ಚಂದನ್ ಶೆಟ್ಟಿ ದಂಪತಿಯಿಂದ ಕೊರೊನಾ ಜಾಗೃತಿ ರ‍್ಯಾಪ್ ಸಾಂಗ್

    ಚಂದನ್ ಶೆಟ್ಟಿ ದಂಪತಿಯಿಂದ ಕೊರೊನಾ ಜಾಗೃತಿ ರ‍್ಯಾಪ್ ಸಾಂಗ್

    – ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ
    – ಕೊರೊನಾ ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ

    ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ತಮ್ಮ ವಿಭಿನ್ನ ಶೈಲಿಯ ರ‍್ಯಾಪ್ ಸಾಂಗ್‍ಗಳ ಮೂಲಕ ಯುವ ಸಮುದಾಯಕ್ಕೆ ಹತ್ತಿರವಾಗಿದ್ದಾರೆ. ಕೊರೊನಾ ಬಗ್ಗೆ ದೇಶವನ್ನೇ ಸ್ತಬ್ಧವನ್ನಾಗಿಸಿದ್ದು, ಎಲ್ಲರೂ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಈ ಮಧ್ಯೆ ಹಾಡಿನ ಮೂಲಕ ಸಂಗೀತಗಾರರು ಜಾಗೃತಿ ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಸಿನಿಮಾ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಬರೆದಿದ್ದ ಸಾಹಿತ್ಯಕ್ಕೆ ಎಸ್.ಪಿ.ಬಾಲಸುಬ್ರಹ್ಮಣ್ಯ ಅವರು ಧ್ವನಿ ನೀಡಿದ್ದರು. ಇದೀಗ ಚಂದನ್ ಶೆಟ್ಟಿ ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ.

    ಕೊರೊನಾ ಇಡೀ ದೇಶವನ್ನೇ ಹಿಂಡಿ ಹಿಪ್ಪೆ ಮಾಡುತ್ತಿದ್ದು, ದೇಶದ ಜನತೆ ಭಯಭೀತರಾಗಿದ್ದಾರೆ. ಹೀಗಾಗಿ ಎಲ್ಲೆಡೆ ಜಾಗೃತಿ ಹೆಚ್ಚಾಗುತ್ತಿದ್ದು, ಸಿನಿಮಾ ತಾರೆಯರಂತೂ ಟೊಂಕ ಕಟ್ಟಿ ನಿಂತಿದ್ದಾರೆ. ಎಲ್ಲರೂ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದು, ಮನೆಯಲ್ಲೇ ಇರಿ, ಆರೋಗ್ಯವಾಗಿರಿ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಇದಕ್ಕೆ ತಕ್ಕಂತೆ ಸಂಗೀತಗಾರರು ಹಾಗೂ ಸಾಹಿತಿಗಳು ಸಹ ತಮ್ಮ ವಿಭಿನ್ನ ಶೈಲಿಯಲ್ಲಿ ಹಾಡು ರಚಿಸುವ ಮೂಲಕ ಜನರಿಗೆ ತಿಳಿ ಹೇಳುತ್ತಿದ್ದಾರೆ.

     

    View this post on Instagram

     

    Be home .. Be safe ..

    A post shared by Chandan Shetty (@chandanshettyofficial) on

    ರ‍್ಯಾಪರ್ ಚಂದನ್ ಶೆಟ್ಟಿ ಸಹ ತಮ್ಮ ಶೈಲಿಯಲ್ಲಿ ರ‍್ಯಾಪ್ ಗೀತೆಯನ್ನು ರಚಿಸಿದ್ದು, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಸೇರಿಕೊಂಡು ತಾವೇ ರಚಿಸಿದ ಹಾಡನ್ನು ಹೇಳಿದ್ದಾರೆ. ಇದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ರ‍್ಯಾಪ್ ಸಾಂಗ್ ಮೂಲಕ ಜನರಿಗೆ ತಿಳಿ ಹೇಳಿದ್ದಾರೆ. ಕೊರೊನಾ…ಕೊರೊನಾ….ಕೊರೊನಾ…..ನಿಂಗೆ ಸದ್ಯದಲ್ಲೇ ಮಾಡ್ತೀವಿ ತಿಥಿನಾ ಎಂಬ ಸಾಲುಗಳು ಯುವ ಸಮುದಾಯಕ್ಕೆ ಅಪ್ಯಾಯಮಾನವಾಗುತ್ತವೆ.

    ಎಣ್ಣೆ ಸಪ್ಲೈ ಮಾಡ್ಬೋದೇನೋ ಕುಡುಕ್ರೂ ಸ್ವಲ್ಪ ತಡ್ಕಳಿ, ನಾವೆಲ್ಲಾ ಮನೆಲೇ ಇರೋಣ, ಮಿಸ್ ಆದರೆ ಡೈರೆಕ್ಟೂ ಸ್ಮಶಾನ ಎಂಬ ಸಾಲುಗಳು ಯುವಕರನ್ನು ಹೆಚ್ಚು ಸೆಳೆಯುತ್ತವೆ. ಇದರೊಂದಿಗೆ ಮಾಸ್ಕ್, ಗುಂಪು ಸೇರದಂತೆ ಕೇಳಿಕೊಂಡಿದ್ದಾರೆ. ಇದು ಮೇಡ್ ಇನ್ ಚೀನಾ ಎಂದು ಹರಿಹಾಯ್ದಿದ್ದಾರೆ.

  • ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ: ನಿವೇದಿತಾ ಗೌಡ

    ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ: ನಿವೇದಿತಾ ಗೌಡ

    – ನಾವು ಅಲ್ಲಿ ಏನಾದರೂ ಇದ್ದಿದ್ರೆ ತುಂಬಾ ಡೇಂಜರ್ ಆಗ್ತಿತ್ತು
    – ಸರಿಯಾದ ಸಮಯಕ್ಕೆ ನಾವು ಭಾರತಕ್ಕೆ ಹಿಂದಿರುಗಿದ್ದೇವೆ

    ಮಂಡ್ಯ: ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ ಎಂದು ಗಾಯಕ ಚಂದನ್ ಪತ್ನಿ ನಿವೇದಿತಾ ಗೌಡ ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿವೇದಿತಾ ಗೌಡ, ನಮ್ಮ ಪ್ರವಾಸ ಚೆನ್ನಾಗಿತ್ತು. ಏಕೆಂದರೆ ನಾವು ಹೋಗಿದ್ದಾಗ ಅಲ್ಲಿ ಯಾವುದೇ ಆತಂಕದ ವಾತವರಣ ಇರಲಿಲ್ಲ. ನಾವು ತುಂಬಾ ಚೆನ್ನಾಗಿ ಕಾಲ ಕಳೆದಿದ್ದೇವೆ. ಯಾವಾಗ ಪ್ಯಾರಿಸ್ ಲಾಕ್‍ಡೌನ್ ಆಯ್ತೋ ನಾವು ಒಂದು ನಿರ್ಧಾರಕ್ಕೆ ಬಂದೇವು. ಎಲ್ಲಾ ದೇಶಗಳಿಗೆ ಕೊರೊನಾ ಹರಡುತ್ತಿತ್ತು. ಅಲ್ಲಿಯೂ ಹೋಗುವುದಕ್ಕೆ ಆಗಲ್ಲ. ಭಾರತಕ್ಕೆ ವಾಪಸ್ ಹೋಗೋಣ ಅಂತ ನಿರ್ಧರಿಸಿದ್ದೇವು ಎಂದು ನಿವೇದಿತಾ ತಿಳಿಸಿದರು.

     

    View this post on Instagram

     

    Current mood : #happy @chandanshettyofficial ????❤️

    A post shared by Niveditha Gowda ???? (@niveditha__gowda) on

    ನಮ್ಮ ಹನಿಮೂನ್ ಅರ್ಧಕ್ಕೆ ನಿಂತಿದ್ದಕ್ಕೆ ನನಗೆ ಬೇಸರ ಇಲ್ಲ. ನಮಗೆ ನಮ್ಮ ಆರೋಗ್ಯ ಮುಖ್ಯ ಹೀಗಾಗಿ ಯಾವುದೇ ಬೇಸರವಿಲ್ಲ. ಕೊರೊನಾ ಭೀತಿ ಕಳೆದ ಮೇಲೆ ನಾವು ಮತ್ತೆ ಹೋಗಬಹುದು. ಅದರ ಬಗ್ಗೆ ನಮಗೆ ಚಿಂತೆ ಇಲ್ಲ. ಮೊದಲು ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.

     

    View this post on Instagram

     

    Off to Amsterdam ✈❤ with @chandanshettyofficial ???????? Cute passport covers by @lit_little_things ????

    A post shared by Niveditha Gowda ???? (@niveditha__gowda) on

    ಕೊರೊನಾ ಬೇರೆ ದೇಶಗಳಲ್ಲಿ ಹರಡುತ್ತಿತ್ತು. ಯೂರೋಪ್‍ನಲ್ಲಿ ಕೊರೊನಾ ಹರಡಿಲ್ಲ. ಇಟಲಿ ಶಟ್‍ಡೌನ್ ಆಗಿತ್ತು ಎಂಬ ಸುದ್ದಿ ನಮಗೆ ತಿಳಿದುತ್ತು. ನಾವು ಹೋಗಿದ್ದ ಜಾಗಗಳು ತುಂಬಾ ಸೇಫ್ ಆಗಿತ್ತು. ಅಲ್ಲಿ ಯಾವುದೇ ಕೊರೊನಾ ಆತಂಕ ಇರಲಿಲ್ಲ. ಈಗ ಇಡೀ ವಿಶ್ವದಲ್ಲಿ ಕೊರೊನಾದ ಸ್ಥಿತಿ ಹೇಗೆ ಇದೆಯೋ ಅಲ್ಲಿ ಹಾಗೇ ಇರಲಿಲ್ಲ. ಆದರೆ ಈಗ ನಾವು ಅಲ್ಲಿ ಏನಾದರೂ ಇದ್ದಿದ್ದರೇ ತುಂಬಾ ಡೇಂಜರ್ ಆಗುತ್ತಿತ್ತು. ಸರಿಯಾದ ಸಮಯಕ್ಕೆ ನಾವು ಭಾರತಕ್ಕೆ ಹಿಂದಿರುಗಿದ್ದೇವೆ ಎಂದು ನಿವೇದಿತಾ ಹೇಳಿದರು.