Tag: ನಿವೇದಿತಾ ಗೌಡ

  • ವೈರಲ್ ಆಗುತ್ತಿದೆ ನಿವೇದಿತಾ- ಚಂದನ್ ಶೆಟ್ಟಿ ಲಿಪ್‌ಲಾಕ್ ವೀಡಿಯೋ

    ವೈರಲ್ ಆಗುತ್ತಿದೆ ನಿವೇದಿತಾ- ಚಂದನ್ ಶೆಟ್ಟಿ ಲಿಪ್‌ಲಾಕ್ ವೀಡಿಯೋ

    ಸಿನಿಮಾ ರಂಗದ ದಿ ಬೆಸ್ಟ್ ಕಪಲ್ ಆಗಿ ಗಮನ ಸೆಳೆದಿರುವ ನಿವೇದಿತಾ(Niveditha) ಮತ್ತು ಚಂದನ್ ಶೆಟ್ಟಿ(Chandan Shetty) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಲಿಪ್‌ಲಾಕ್‌ (LipLock) ವೀಡಿಯೋ ಮೂಲಕ ಈ ಜೋಡಿ ಸದ್ದು ಮಾಡ್ತಿದ್ದಾರೆ. ಚಂದನ್ ಪತ್ನಿಗೆ ಲಿಪ್‌ಲಾಕ್ ಮಾಡಿರೋದನ್ನ ನೋಡಿ ನಿವಿ ಜೊತೆ ಫ್ಯಾನ್ಸ್ ಕೂಡ ಅಚ್ಚರಿಪಟ್ಟಿದ್ದಾರೆ.

    ಬಿಗ್ ಬಾಸ್‌ನಿಂದ(Bigg Boss) ಪರಿಚಿತರಾದ ಚಂದನ್ ಮತ್ತು ನಿವೇದಿತಾ ಗೌಡ ನಿಜ ಜೀವನದಲ್ಲೂ ಜೋಡಿಯಾಗಿ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಇತ್ತೀಚೆಗೆ ಶ್ರೇಯಸ್ ಮಂಜು(Shreyas Manju) ನಟನೆಯ ರಾಣಾ ಚಿತ್ರದ `ಗಲ್ಲಿ ಬಾಯ್’ ಹಾಡು ಬರೆದಿದ್ದರು. ಈ ಸಾಂಗ್ ಒಂದೊಳ್ಳೆ ರೀಚ್ ಪಡೆದು ಸಖತ್ ವಿವ್ಸ್ ಕೂಡ ಆಗುತ್ತಿದೆ. ಇದೀಗ ಈ ಹಾಡಿಗೆ ಚಂದನ್ ದಂಪತಿ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಚಂದನ್ ಮತ್ತು ನಿವಿ ಜೋಡಿ ಇದೀಗ ಗಲ್ಲಿ ಬಾಯ್ ಹಾಡಿಗೆ ರೀಲ್ಸ್ ಮಾಡಿದ್ದಾರೆ. ನೋ ಎನ್ನದೇ ಯೆಸ್ ಅಂದರೆ ಅಫಿಶಿಯಲ್ ಆಗಿ ಪಪ್ಪಿ ಕೊಡುವೆ ಎಂದು ಈ ಸಾಲು ಬಂದಾಗ ಚಂದನ್ ಕೂಡ ನಿವಿಗೆ ಲಿಪ್‌ಲಾಕ್ ಮಾಡಿದ್ದಾರೆ. ಒಂದು ಕ್ಷಣ ನಿವಿ ಕೂಡ ಶಾಕ್ ಆಗಿದ್ದಾರೆ. ಆದರೂ ಡ್ಯಾನ್ಸ್ ಮುಂದುವರೆಸಿಕೊಂಡು ಹೋಗಿದ್ದಾರೆ.

    ಕೆಲ ಅಭಿಮಾನಿಗಳು ಚಂದನ್ ದಂಪತಿಯ ವೀಡಿಯೋ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಈ ಜೋಡಿಯನ್ನ ಬಾಯ್ಕಾಟ್ ಮಾಡಿ ಎಂದು ಗರಂ ಆಗಿದ್ದಾರೆ. ಒಟ್ನಲ್ಲಿ ಚಂದು ಮತ್ತು ನಿವಿ ಲಿಪ್ ಲಾಕ್ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹಾಸ್ಟೆಲ್ ನಲ್ಲಿ ಅಕ್ಕಿ ಹಿಟ್ಟು ಮುಖಕ್ಕೆ ಬಳಸುತ್ತಿದ್ದೆ, ಫಸ್ಟ್ ಟೈಮ್ ರೊಟ್ಟಿ ಮಾಡಿದ್ದೀನಿ : ನಿವೇದಿತಾ ಗೌಡ

    ಹಾಸ್ಟೆಲ್ ನಲ್ಲಿ ಅಕ್ಕಿ ಹಿಟ್ಟು ಮುಖಕ್ಕೆ ಬಳಸುತ್ತಿದ್ದೆ, ಫಸ್ಟ್ ಟೈಮ್ ರೊಟ್ಟಿ ಮಾಡಿದ್ದೀನಿ : ನಿವೇದಿತಾ ಗೌಡ

    ವಾರಕ್ಕೊಂದು ಹೊಸ ಹೊಸ ಅಡುಗೆ ಮಾಡುವ ಮೂಲಕ ನಿವೇದಿತಾ ಗೌಡ (Nivedita Gowda) ಪಾಕ ಪ್ರಪಂಚಕ್ಕೂ ಕಾಲಿಡುತ್ತಿದ್ದಾರೆ. ತಮಗೆ ಗೊತ್ತಿರುವ, ಕೇಳಿರುವ ಅಡುಗೆಯನ್ನೂ ಮಾಡುವ ಅವರು ಈ ಬಾರಿ ಅಕ್ಕಿ ರೊಟ್ಟಿ ಮಾಡುವುದಕ್ಕೆ ಮುಂದಾಗಿದ್ದಾರೆ. ತಾವು ಅಕ್ಕಿ ರೊಟ್ಟಿಯನ್ನು ಹೇಗೆ ಮಾಡಿದ್ದಾರೆ ಎನ್ನುವುದನ್ನು ಶೂಟ್ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಈಗ ಸಖತ್ ವೈರಲ್ ಕೂಡ ಆಗಿದೆ.

    ಅಕ್ಕಿ ರೊಟ್ಟಿ (Akki Rotti) ಹೇಗೆ ಮಾಡುವುದೋ ಗೊತ್ತಿಲ್ಲ, ಆದರೂ ಮಾಡುತ್ತಿರುವೆ ಎಂದು ಮಾತು ಶುರು ಮಾಡುವ ನಿವೇದಿತಾ, ತಮ್ಮ ಉದ್ದನೆಯ ಉಗುರುಗಳ ಬಗ್ಗೆ ಹೇಳುತ್ತಾರೆ. ಬೆರಳಿನಲ್ಲಿ ಉಗುರುಗಳು ಉದ್ದ ಇರುವ ಕಾರಣಕ್ಕಾಗಿ ಅಕ್ಕಿ ಹಿಟ್ಟು ಹೇಗೆ ಕಲಸುತ್ತೇನೋ ಗೊತ್ತಿಲ್ಲ. ಉಗುರುಗಳು ಸಪೋರ್ಟ್ ಮಾಡುತ್ತಿಲ್ಲವೆಂದು ಕಾಮಿಡಿ ಮಾಡುತ್ತಾರೆ. ಅಲ್ಲದೇ, ಹಾಸ್ಟೆಲ್ ನಲ್ಲಿ ಇದ್ದಾಗ ಅಕ್ಕಿ ಹಿಟ್ಟನ್ನು ಮುಖಕ್ಕೆ ಹಚ್ಚಿಕೊಳ್ಳಲು ಬಳಸುತ್ತಿದ್ದೆ. ಇದೇ ಮೊದಲ ಬಾರಿಗೆ ರೊಟ್ಟಿ ಮಾಡಲು ಬಳಸುತ್ತಿರುವುದಾಗಿಯೂ ಅವರು ಹೇಳುತ್ತಾರೆ. ಇದನ್ನೂ ಓದಿ: ಧ್ರುವ ಸರ್ಜಾ ಜೊತೆ ಸ್ಕ್ರೀನ್ ಶೇರ್ ಮಾಡ್ತಾರಾ ರವಿಮಾಮನ ಬೆಡಗಿ ಶಿಲ್ಪಾ ಶೆಟ್ಟಿ

    ಈರುಳ್ಳಿ ಹೆಚ್ಚುವಾಗ ಮೆಡಿಕಲ್ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳುವ ನಿವೇದಿತಾ ‘ಮೆಡಿಕಲ್ ಸ್ಟೂಡೆಂಟ್ ಪ್ರಾಣಿಗಳನ್ನು ಕಟ್ ಮಾಡುತ್ತಾರಲ್ಲ, ನನಗೆ ಆ ಫೀಲ್ ಆಗುತ್ತಿದೆ ಎನ್ನುತ್ತಾರೆ. ಅಲ್ಲದೇ, ತಮಗೆ ಸಬ್ಬಸಗಿ ಅಂದರೆ ತುಂಬಾ ಇಷ್ಟ. ಅದರ ಘಮಲು ಇನ್ನೂ ಇಷ್ಟ ಎಂದು ಆ ಸೊಪ್ಪನ್ನು ಪರಿಚಯಿಸುತ್ತಾರೆ. ಕರಿಬೇವು ಹಿಡಿದುಕೊಂಡು, ಅಯ್ಯೋ ಇದು ನನಗೆ ಸಖತ್ ಕನ್ಫ್ಯೂಸ್ ಮಾಡುತ್ತಿದೆ ಎಂದು ಹೇಳುತ್ತಾರೆ. ಒಂದು ರೀತಿಯಲ್ಲಿ ತಮಾಷೆಯಾಗಿಯೇ ನರೇಟ್ ಮಾಡುತ್ತಾ ಹೋಗಿದ್ದಾರೆ ನಿವಿ.

    ಇವತ್ತು ಅಕ್ಕಿರೊಟ್ಟಿ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಂತೆಯೇ ಪತಿ ಚಂದನ್ ಶೆಟ್ಟಿ (Chandan Shetty) ಬೆಳಗ್ಗೆಯೇ ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದಾರಂತೆ. ಹಾಗಾಗಿ ಅಕ್ಕಿ ರೊಟ್ಟಿ ತಿನ್ನಲು ಯಾರೂ ಇಲ್ಲ, ನಾನು ಅಡುಗೆ (Cooking) ಮಾಡುತ್ತಿದ್ದೇನೆ ಎಂದು ಕೇಳುತ್ತಿದ್ದಂತೆಯೇ ಚಂದನ್ ಹೊರಟೇ ಬಿಟ್ಟರು. ಇದೀಗ ನಾನು ಮಾಡಿದ ಅಕ್ಕಿರೊಟ್ಟಿಯನ್ನು ನಾನೇ ತಿನ್ನಬೇಕು ಎಂದು ಚಂದನ್ ಕಾಲು ಎಳೆಯುತ್ತಾರೆ. ಈವರೆಗೂ ಗಂಡನ ಮೇಲೆಯೇ ಎಲ್ಲ ಪ್ರಯೋಗ ಮಾಡಿದ ನಿವೇದಿತಾ, ಆ ವೇಳೆಯಲ್ಲಿ ಚಂದನ್ ಇಲ್ಲದೇ ಇರುವುದಕ್ಕೆ ಬೇಸರಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ನಿವೇದಿತಾ ಗೌಡ ‘ಸ್ಮೋಕ್’ ಮಾಡಿಲ್ಲ, ಹೊಗೆ ಬಿಟ್ಟಿದ್ದಕ್ಕೆ ಕಾರಣ ಬೇರೆಯೇ ಇದೆ

    ರಡು ದಿನಗಳ ಹಿಂದೆಯಷ್ಟೇ ‘ಗಿಚ್ಚಿ ಗಿಲಿ ಗಿಲಿ’ ರಿಯಾಲಿಟಿ ಶೋ ರನ್ನರ್ ಅಪ್ ಆಗಿ ಹೊರ ಹೊಮ್ಮಿರುವ ನಟಿ ನಿವೇದಿತಾ ಗೌಡ (Nivedita Gowda),  ಶೂಟಿಂಗ್ ಇರದೇ ಇರುವ ಕಾರಣಕ್ಕಾಗಿ ಬೆಂಗಳೂರಿನ ವಿವಿಪುರಂನಲ್ಲಿರುವ (VV Puram) ಫುಡ್ ಸ್ಟ್ರೀಟ್‍ ಗೆ ಭೇಟಿ ನೀಡಿದ್ದಾರೆ. ಅಲ್ಲಿ ಹತ್ತಾರು ಬಗೆಯ ತಿಂಡಿ, ಚಾಟ್ಸ್ ಸವಿದಿದ್ದಾರೆ. ಕೊನೆಯಲ್ಲಿ ಬಾಯಿಯಿಂದ ಹೊಗೆ ಬಿಟ್ಟು ಎಲ್ಲರನ್ನೂ ಕನ್ಫೂಸ್ ಮಾಡಿದ್ದಾರೆ. ಇದೀಗ ಆ ವಿಡಿಯೋ ಟ್ರೋಲ್ ಆಗುತ್ತಿದೆ.

    ಸೋಷಿಯಲ್ ಮೀಡಿಯಾದಲ್ಲಿ ನಿವಿ ಯಾವಾಗಲೂ ಬ್ಯುಸಿ. ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುತ್ತಲೇ ಅವುಗಳನ್ನು ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಲೇ ಇರುತ್ತಾರೆ. ರೀಲ್ಸ್ ನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದವರು, ಇದೀಗ ತಿಂಡಿ, ತಿನಿಸು ಮಾಡುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದ್ದಾರೆ. ಮಾಡಿದ ಅಡುಗೆಯನ್ನು ಚಂದನ್ (Chandan Shetty) ಮೇಲೆ ಪ್ರಯೋಗ ಮಾಡಿಯೇ ಸೇಡು ತೀರಿಸಿಕೊಳ್ಳುತ್ತಾರೆ. ಇದನ್ನೂ ಓದಿ:ಮತ್ತೆ ಒಂದಾದ ʻಪಂಚರಂಗಿ’ ದಿಗಂತ್‌- ನಿಧಿ ಸುಬ್ಬಯ್ಯ ಜೋಡಿ

    ಫುಡ್ ಬಗ್ಗೆ ಮಾತನಾಡಿದಾಗೆಲ್ಲ ನಿವಿ ಅಭಿಮಾನಿಗಳು ನೀವು ವಿವಿಪುರಂ ಫುಡ್ ಸ್ಟ್ರೀಟ್‍ ಗೆ (Food Street) ಹೋಗಿಲ್ಲವಾ? ಎಂದು ಎಲ್ಲರೂ ಕೇಳುತ್ತಿದ್ದರಂತೆ. ಈವರೆಗೂ ಅವರು ಅಲ್ಲಿಗೆ ಹೋಗಿಲ್ಲವಂತೆ. ಹಾಗಾಗಿ ಗಿಚ್ಚಿಗಿಲಿಗಿಲಿ ಮುಗಿಯುತ್ತಿದ್ದಂತೆಯೇ ಫುಡ್ ಸ್ಟ್ರೀಟ್ ಗೆ ಬಂದು, ಅಲ್ಲಿನ ವಿವಿಧ ತಿಂಡಿ ತಿನಿಸುಗಳನ್ನು ಸವಿದಿದ್ದಾರೆ. ಮೂವತ್ತಕ್ಕೂ ಹೆಚ್ಚು ಬಗೆಯ ತಿಂಡಿಗಳು ಇಲ್ಲಿದ್ದರೂ, ನನಗೆ ಐದಾರು ಮಾತ್ರ ತಿನ್ನುವುದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಅಲ್ಲದೇ, ಬೇರೆ ಬೇರೆ ತಿಂಡಿ ತಿನಿಸುಗಳ ಬಗ್ಗೆಯೂ ಪರಿಚಯ ಮಾಡಿಕೊಟ್ಟಿದ್ದಾರೆ.

    ಚಾಟ್ಸ್ (Chats)ತಿನ್ನುವುದು ಮುಗಿಯುತ್ತಿದ್ದಂತೆಯೇ ಸ್ಮೋಕಿಂಗ್ (Smoke) ಐಸ್ ಕ್ರೀಮ್ ಕೂಡ ಸವಿದಿದ್ದು, ಐಸ್ ಕ್ರೀಮ್ ತಿನ್ನುವಾಗ ಬರುವ ಹೊಗೆಯನ್ನು ಕ್ಯಾಮೆರಾ ಮುಂದೆ ಬಿಟ್ಟಿದ್ದಾರೆ. ಹಾಗಾಗಿ ನಿವೇದಿತಾ ಸ್ಮೋಕ್ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ, ಅವರು ತಿಂದಿದ್ದು ಹೊಗೆ ಬರುವ ಐಸ್ ಕ್ರೀಮ್ ಎನ್ನುವುದು ಅವರು ಹಾಕಿರುವ ವಿಡಿಯೋ ನೋಡಿಯೇ ಗೊತ್ತಾಗುತ್ತದೆ. ಏನೇ ಆಗಲಿ, ನಿವಿ ಸಖತ್ ಎಂಜಾಯ್ ಮಾಡಿದ್ದಾರೆ ಫುಡ್ ಸ್ಟ್ರೀಟ್ ನಲ್ಲಿ.

    Live Tv
    [brid partner=56869869 player=32851 video=960834 autoplay=true]

  • `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಕಿರುತೆರೆಯ ಜನಪ್ರಿಯ ಶೋ `ಗಿಚ್ಚಿ ಗಿಲಿಗಿಲಿ’ (Gicchi Giligili) ಶೋಗೆ ತೆರೆಬಿದ್ದಿದೆ. ಕಾಮಿಡಿ ಶೋನ ವಿನ್ನರ್ ಬಗ್ಗೆ ಪ್ರೇಕ್ಷಕರಿಗೆ ಕುತೂಹಲ ಕೆರಳಿಸಿತ್ತು. ಇದೀಗ ಈ ರಿಯಾಲಿಟಿ ಶೋನ ವಿನ್ನರ್ ನಾನ್ ಆಕ್ಟರ್ ವಿಭಾಗದಲ್ಲಿ ವನ್ಷಿಕಾ(Vamshika) ಗೆದ್ದಿದ್ದಾರೆ. ರನ್ನರ್ ಅಪ್ ಆಗಿ ನಿವೇದಿತಾ ಗೌಡ(Niveditha Gowda) ಎರಡನೇ ಸ್ಥಾನ ಸಿಕ್ಕಿದೆ.

    ಅಭಿಮಾನಿಗಳ ಅಚ್ಚು ಮೆಚ್ಚಿನ ಕಾಮಿಡಿ ಶೋ ಆಗಿ ʻಗಿಚ್ಚಿ ಗಿಲಿಗಿಲಿʼ ಮನೆ ಮಾತಾಗಿತ್ತು. ಕಳೆದ ಸೆಪ್ಟೆಂಬರ್ 17 ಮತ್ತು 18ರಂದು ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಈ ರಿಯಾಲಿಟಿ ಶೋನಲ್ಲಿ ಎರಡು ಆಕ್ಟರ್ ಮತ್ತು ಎರಡು ನಾನ್ ಆಕ್ಟರ್ ವಿಭಾಗದಲ್ಲಿ ವಿನ್ನರ್ ಮತ್ತು ರನ್ನರ್ ಅಪ್‌ ಅನೌನ್ಸ್ ಮಾಡಲಾಯಿತು. ಸೃಜನ್ ಲೋಕೇಶ್ ಮತ್ತು ನಟಿ ಶ್ರುತಿ, ಮಾಲಾಶ್ರೀ ಅವರ ನೇತೃತ್ವದಲ್ಲಿ ಶೋ ಅದ್ಬುತವಾಗಿ ಮೋಡಿ ಬಂದಿದೆ.

    `ಗಿಚ್ಚಿ ಗಿಲಿಗಿಲಿ’ ಸೀಸನ್ ವಿನ್ನರ್, ನಾನ್ ಆಕ್ಟರ್ ವಿಭಾಗದಲ್ಲಿ ವನ್ಷಿಕಾ ಅಂಜನಿ ಕಶ್ಯಪಾಗೆ ಗೆಲುವಿನ ಕಿರೀಟ ಒಲಿದು ಬಂದಿದೆ. ಆಕ್ಟರ್ ವಿಭಾಗದಲ್ಲಿ ಶಿವುಗೆ ವಿನ್ನರ್ ಪಟ್ಟ ದಕ್ಕಿದೆ. ಇನ್ನೂ ಈ ಸೀಸನ್‌ನ ರನ್ನರ್ ಅಪ್, ನಾನ್ ಆಕ್ಟರ್ ವಿಭಾಗದಲ್ಲಿ ನಿವೇದಿತಾ ಗೌಡ ಗುರುತಿಸಿಕೊಂಡ್ರೆ, ಆಕ್ಟರ್ ವಿಭಾಗದಲ್ಲಿ ವಿನೋದ್ ಎರಡನೇ ಸ್ಥಾನ ಒಲಿದಿದೆ. ಇದನ್ನೂ ಓದಿ: ಪತ್ನಿ ಮಹಾಲಕ್ಷ್ಮಿಗಾಗಿ ‘ಡೆಲಿವರಿ ಬಾಯ್’ ಆದರಂತೆ ರವೀಂದರ್: ಮನದಾಳ ಬಿಚ್ಚಿಟ್ಟ ಮನ್ಮಥ

    ಇನ್ನೂ ಮೊದಲ ಸ್ಥಾನ ಪಡೆದವರಿಗೆ ವಿನ್ನರ್ ಟ್ರೋಫಿ ಜೊತೆ 5 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಎರಡನೇ ಸ್ಥಾನ ಪಡೆದವರಿಗೆ ರನ್ನರ್ ಅಪ್ ಟ್ರೋಫಿ ಜೊತೆ 3 ಲಕ್ಷ ರೂಪಾಯಿ ಬಹುಮಾನ ಕೊಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ನನಗೆ ಮಕ್ಕಳು ಮಾಡಿಕೊಳ್ಳೊ ಪ್ಲ್ಯಾನ್ ಇಲ್ಲ’ ಎಂದ ಚೆಂದನದ ಗೊಂಬೆ ನಿವೇದಿತಾ ಗೌಡ

    ‘ನನಗೆ ಮಕ್ಕಳು ಮಾಡಿಕೊಳ್ಳೊ ಪ್ಲ್ಯಾನ್ ಇಲ್ಲ’ ಎಂದ ಚೆಂದನದ ಗೊಂಬೆ ನಿವೇದಿತಾ ಗೌಡ

    ಮಾಜಿ ಬಿಗ್ ಬಾಸ್ ಸ್ಪರ್ಧಿ (Bigg Boss) , ಗಾಯಕ ಚಂದನ್ ಶೆಟ್ಟಿ ಅವರ ಪತ್ನಿ ನಿವೇದಿತಾ ಗೌಡ (Niveditha Gowda) ಆಗಾಗ್ಗೆ ಸೋಷಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಇರುತ್ತಾರೆ. ಅಲ್ಲದೇ, ರೀಲ್ಸ್ ಮೂಲಕ ರಂಜಿಸುತ್ತಾರೆ. ಸದಾ ಚಟುವಟಿಕೆಯಿಂದಲೇ ಇರುವ ನಿವೇದಿತಾ ಗೌಡ, ಇತ್ತೀಚೆಗಷ್ಟೇ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳು ಪದೇ ಪದೇ ಈ ಪ್ರಶ್ನೆ ಕೇಳುವ ಬಗ್ಗೆ ಅವರು ನೆನಪಿಸಿಕೊಂಡಿದ್ದಾರೆ.

    ಅಭಿಮಾನಿಯೊಬ್ಬ ನೀವು ಮಕ್ಕಳನ್ನು (Kids) ಹೊಂದುವುದು ಯಾವಾಗ ಎಂದು ಕೇಳಿದ ಪ್ರಶ್ನೆಗೆ ಅಷ್ಟೇ ಕೂಲ್ ಆಗಿಯೇ ಉತ್ತರಿಸಿರುವ ನಿವೇದಿತಾ, ‘ಸದ್ಯಕ್ಕೆ ಮಕ್ಕಳನ್ನು ಮಾಡಿಕೊಳ್ಳುವ ಯಾವುದೇ ಪ್ಲ್ಯಾನ್ (Planning) ಇಲ್ಲ. ಇನ್ನೂ ನಾನು ಜೀವನವನ್ನು ಎಂಜಾಯ್ ಮಾಡಬೇಕು. ಟೂರ್ ಮಾಡಬೇಕು. ಎಲ್ಲವೂ ಆದ ನಂತರವೇ ನೋಡೋಣ’ ಎಂದು ಉತ್ತರಿಸಿದ್ದಾರೆ. ಪದೇ ಪದೇ ಇದೇ ಪ್ರಶ್ನೆಯನ್ನೂ ಹಲವರು ಕೇಳಿದ್ದಾರೆ. ಇಷ್ಟು ಬೇಗ ನಾನು ಯಾಕೆ ಮಗು ಮಾಡಿಕೊಳ್ಳಬೇಕು ಎಂದು ಅವರೂ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಬ್ಯೂಟಿಫುಲ್ ಹುಡುಗಿಯರ ನಡುವೆ ‘ಶಿವಾಜಿ ಸುರತ್ಕಲ್ 2’ ಸಿನಿಮಾ ಒಲವಿನ ಟೀಸರ್

    ಮದುವೆಯಾದ ನಂತರ ನೆಚ್ಚಿನ ನಟ ನಟಿಯರು ಯಾವಾಗ ಮಗು ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಹಲವರದ್ದು. ಹಾಗಾಗಿ ಇಂತಹ ಪ್ರಶ್ನೆಗಳನ್ನು ಅಭಿಮಾನಿಗಳು ಅವಕಾಶ ಸಿಕ್ಕಾಗ ಕೇಳಿಕೊಳ್ಳುತ್ತಲೇ ಇದ್ದಾರೆ. ಸಂಜನಾ, ಪ್ರಣಿತಾ, ರಾಧಿಕಾ ಪಂಡಿತ್ ಸೇರಿದಂತೆ ಹಲವು ನಟಿಯರು ಮದುವೆಯ ನಂತರ ಪಕ್ಕಾ ಪ್ಲ್ಯಾನ್ ಮಾಡಿಕೊಂಡೆ ತಾಯಿ ಆಗಿದ್ದಾರೆ. ಹಾಗಾಗಿ ನಿವೇದಿತಾ ಗೌಡಗೂ ಕೂಡ ಅಭಿಮಾನಿಗಳು ಈ ರೀತಿಯ ಪ್ರಶ್ನೆಗಳನ್ನು ಕೇಳುವುದು ಸಹಜವಾಗಿದೆ.

    ಸದ್ಯ ನಿವೇದಿತಾ ಗೌಡ ರಿಯಾಲಿಟಿ ಶೋ, ರೀಲ್ಸ್ (Reels) ಅಂದುಕೊಂಡು ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ (Chandan Shetty) ಹೀರೋ ಆಗಿ ಲಾಂಚ್ ಆಗಿದ್ದಾರೆ. ಅಲ್ಲದೇ, ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಗಾಯಕರಾಗಿಯೂ ಸಿಕ್ಕಾಪಟ್ಟೆ ಬ್ಯುಸಿ. ಮಕ್ಕಳನ್ನು ಮಾಡಿಕೊಳ್ಳದೇ ಇರುವುದಕ್ಕೆ ಇದೆಲ್ಲವೂ ಕಾರಣ ಇರಬಹುದು.

    Live Tv
    [brid partner=56869869 player=32851 video=960834 autoplay=true]

  • ಬೋರಾದಾಗೆಲ್ಲ ಶಾಪಿಂಗ್ ಮಾಡ್ತಾರಂತೆ ನಿವೇದಿತಾ ಗೌಡ

    ಬೋರಾದಾಗೆಲ್ಲ ಶಾಪಿಂಗ್ ಮಾಡ್ತಾರಂತೆ ನಿವೇದಿತಾ ಗೌಡ

    ಬಿಗ್ ಬಾಸ್ ಮಾಜಿ ಸ್ಪರ್ಧಿ, ನಟಿ ನಿವೇದಿತಾ ಗೌಡ ವಿಂಟರ್ ಶಾಪಿಂಗ್ ಮಾಡಿದ್ದಾರೆ. ಈ ಕುರಿತು ಅವರು ವಿಡಿಯೋವೊಂದನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಮೊನ್ನೆಯಷ್ಟೇ ನನಗೆ ಸಖತ್ ಬೋರ್ ಆಗಿತ್ತು. ಹಾಗಾಗಿ ಶಾಪಿಂಗ್ ಮಾಡಲು ಹೋಗಿದ್ದೆ ಎಂದು ಮಾತು ಶುರು ಮಾಡಿ, ಏನೆಲ್ಲ ಶಾಪಿಂಗ್ ಮಾಡಿದ್ದಾರೆ ಎನ್ನುವುದನ್ನೂ ತೋರಿಸಿದ್ದಾರೆ.

    ಅವರ ಬಳಿ ಕೆಂಪು ಬಣ್ಣದ ಡ್ರೆಸ್ ಇದೆಯಂತೆ. ಆ ಡ್ರೆಸ್ ಗೆ ಮ್ಯಾಚ್ ಆಗುವಂತಹ ಹೀಲ್ಸ್ ಬೇಕಿತ್ತಂತೆ. ಅದನ್ನು ಖರೀದಿಸಲು ಹೋಗಿ ಬೇರೆ ಏನೆಲ್ಲ ಪರ್ಚೇಸ್ ಮಾಡಬೇಕಾಯಿತು ಎಂಬುದನ್ನು ವಿವರಿಸಿದ್ದಾರೆ. ಶಾಪಿಂಗ್ ಮಾಡಿರುವ ವಸ್ತುಗಳನ್ನು ಅವರು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಕೂಡ ಆಗಿದೆ. ಇದನ್ನೂ ಓದಿ:ಮತ್ತೆ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್

    ಕೆಂಪು ಬಣ್ಣದ ಹೀಲ್ಸ್ ಖರೀದಿಸಲು ಹೋಗಿದ್ದೆ. ಆದರೆ, ಅಂಗಡಿಗೆ ಹೋದಾಗ ಏನೆಲ್ಲ ಹೊಸ ಹೊಸ ವಸ್ತುಗಳು ಬಂದಿದ್ದವು. ಎಲ್ಲವನ್ನೂ ಖರೀದಿಸಬೇಕು ಅಂತ ಅನಿಸಿತು. ಅದರಲ್ಲೂ ನನಗೆ ಬ್ಯಾಗ್ ಗಳು ಅಂದರೆ ತುಂಬಾ ಇಷ್ಟ ಹಾಗಾಗಿ ಅಷ್ಟೊಂದು ಬ್ಯಾಗ್ ಖರೀದಿಸಿದೆ ಎಂದು ಹೇಳಿಕೊಂಡಿದ್ದಾರೆ. ಯಾವ ವಸ್ತುಗಾಗಿ ಶಾಪಿಂಗೆಗೆ ಹೋಗಿದ್ದೆನೋ, ಅದನ್ನು ಬಿಟ್ಟು ಬಿಳಿದೆಲ್ಲವನ್ನೂ ತಂದೆ ಎಂದು ಹೇಳಿಕೊಂಡಿದ್ದಾರೆ. ಕೆಂಪು ಹೀಲ್ಸ್ ಗಾಗಿ ಮತ್ತೊಮ್ಮೆ ಶಾಪಿಂಗ್ ಗೆ ಹೋಗಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದನ್ ಶೆಟ್ಟಿ ಜೊತೆಗೆ ‘ಮಾಯಗಾರ’ನ ಇಷ್ಟ ಪಡುತ್ತಿದ್ದಾರಂತೆ ಬೇಬಿ ಡಾಲ್ ನಿವೇದಿತಾ ಗೌಡ

    ಚಂದನ್ ಶೆಟ್ಟಿ ಜೊತೆಗೆ ‘ಮಾಯಗಾರ’ನ ಇಷ್ಟ ಪಡುತ್ತಿದ್ದಾರಂತೆ ಬೇಬಿ ಡಾಲ್ ನಿವೇದಿತಾ ಗೌಡ

    ಸೋಷಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳನ್ನು ಎಂಗೇಜ್ ಆಗಿಡುವ ನಿವೇದಿತಾ ಗೌಡ ಹೊಸ ಹೊಸ ಸುದ್ದಿಗಳನ್ನು ಕೊಡುತ್ತಲೇ ಇರುತ್ತಾರೆ. ಅದರಲ್ಲೂ ರೀಲ್ಸ್ ನಲ್ಲಿ ಹೊಸ ಹಳೆ ಹಾಡಿಗೆ ಹೆಜ್ಜೆ ಹಾಕುತ್ತಾ, ಅಭಿಮಾನಿಗಳನ್ನು ರಂಜಿಸುತ್ತಾರೆ. ಈ ಸಲವೂ ಅವರು ವಿಶೇಷ ಹಾಡಿಗೆ ಸೊಂಟ ಬಳಕುಸಿದ್ದು, ಈ ವಿಡಿಯೋ ರಿಪೀಟ್ ಆದರೂ, ನನ್ನಿಷ್ಟದ ಹಾಡು ಎಂದು ಬರೆದುಕೊಂಡಿದ್ದಾರೆ.

    ರವಿಚಂದ್ರನ್ ಅಭಿನಯದ ರಾಮಾಚಾರಿ ಸಿನಿಮಾದ ‘ಆಕಾಶದಾಗೆ ಯಾರೋ ಮಾಯಗಾರನೋ’ ಹಾಡೆಂದರೆ ನಿವೇದಿತಾ ಗೌಡ ಅವರಿಗೆ ಅಚ್ಚುಮೆಚ್ಚಂತೆ. ಹಾಗಾಗಿಯೇ ರಾಮಚಾರಿಯ ಹುಡುಗಿ ಮಾಲಾಶ್ರೀ ಅವರ ಗೆಟಪ್ ನಲ್ಲೇ ಕಾಸ್ಟ್ಯೂಮ್ ಹಾಕಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಮಾಯಾಗಾರನ ಹಾಡು ಯಾವಾಗಲೂ ನನಗೆ ಇಷ್ಟವೆಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    1991ರಲ್ಲಿ ಬಿಡುಗಡೆಯಾದ ರಾಮಾಚಾರಿಯ ಬಹುತೇಕ ಹಾಡುಗಳು ಹಿಟ್. ಅದರಲ್ಲೂ ಮನೋ ಮತ್ತು ಎಸ್.ಜಾನಕಿ ಅವರ ಧ್ವನಿಯಲ್ಲಿ ಮೂಡಿ ಬಂದ  ಆಕಾಶದಾಗೆ ಯಾರೋ ಮಾಯಗಾರನೋ ಹಾಡು ಎವರ್ ಗ್ರೀನ್. ಈ ಹಾಡಿನಲ್ಲಿ ರವಿಚಂದ್ರನ್ ಮತ್ತು ಮಾಲಾಶ್ರೀ ಕಂಡ ರೀತಿಯು ಸೊಗಸು ಸೊಗಸು. ಈ ಕಾರಣಕ್ಕಾಗಿಯೇ ನಿವೇದಿತಾ ಗೌಡ ಅವರಿಗೂ ಈ ಹಾಡು ಇಷ್ಟವಂತೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕನ್ನಡದ ವಿಚಾರಕ್ಕೆ ಟ್ರೋಲ್ ಆದ ನಿವೇದಿತಾ ಗೌಡ

    ಮತ್ತೆ ಕನ್ನಡದ ವಿಚಾರಕ್ಕೆ ಟ್ರೋಲ್ ಆದ ನಿವೇದಿತಾ ಗೌಡ

    ಕಿರುತೆರೆಯ ದೊಡ್ಮನೆಯ ಶೋನ ಚಂದನದ ಗೊಂಬೆ ನಿವೇದಿತಾ ಗೌಡ ಮತ್ತೆ ಕನ್ನಡದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸದ್ಯ ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ `ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ನಿವೇದಿತಾ ಮಾತನಾಡಿರುವ ಈ ಮಾತು ಇದೀಗ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ.

    ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಸದ್ಯ ಸಿನಿಮಾಗಳಲ್ಲಿ ನಟಿಸಲು ತೆರೆಮರೆಯಲ್ಲಿ ಭರ್ಜರಿ ತಯಾರಿ ಮಾಡಿಕೊಳ್ತಿದ್ದಾರೆ. ಇನ್ನೊಂದ್ ಕಡೆ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ತಿದ್ದಾರೆ. ಈ ವಾರಾಂತ್ಯದಲ್ಲಿ ಪ್ರಸಾರವಾಗುವ ಸಂಚಿಕೆಯ ಪ್ರೋಮೋ ನೆಟ್ಟಿಗರನ್ನ ಸೆಳೆಯುತ್ತಿದೆ. ಶೋನಲ್ಲಿ ಚಂದನ್ ಶೆಟ್ಟಿ ಸ್ಪೆಷಲ್ ಎಂಟ್ರಿ ಕೊಟ್ಟಿದ್ದಾರೆ.

    ಅತಿಥಿಯಾಗಿ ಚಂದನ್ ಶೆಟ್ಟಿ `ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ನಿರೂಪಕ ನಿಮ್ಮ ಪಾದ ಪೂಜೆ ಆಗಿಲ್ವಾ ಚಂದನ್ ಅಂತಾ ಕೇಳಿದ್ದಾರೆ. ಆಗ ಚಂದನ್, ಇಲ್ಲಾ ಇನ್ನೂ ಆಗಿಲ್ಲ ಎಂದಿದ್ದಾರೆ. ನಿವೇದಿತಾ ಸಂಜೆ ಮನೆಗೆ ಹೋದ್ಮಲೆ ಭೀಮನ ಅಮಮಾಸೆ, ಅವಮಾಸೆ ಮಾಡ್ತಿನಿ ಅಂತಾ ಪದ ಬಳಕೆ ಮಾಡಿದ್ದಾರೆ. ನಟಿ ಶೃತಿ ಅವರು ಈ ಪೂಜೆ ಆಚರಣೆಯನ್ನ ನಿವಿಗೆ ಕೇಳಿದ್ದಾರೆ. ತಟ್ಟೆ ಇಟ್ಟು, ತಟ್ಟೆಯ ಮೇಲೆ ಕಾಲಿಟ್ಟು ನೀರು ಹಾಕಿ, ಉಜ್ಜಬೇಕು ಎಂದಿದ್ದಾರೆ. ನಿವೇದಿತಾ ಅವರ ಈ ಮಾತು ಪ್ರೇಕ್ಷಕರನ್ನ ನಗೆಯಗಡಲಲ್ಲಿ ತೇಲಿಸಿದೆ. ಇದನ್ನೂ ಓದಿ:ಚಿತ್ರರಂಗದಲ್ಲಿ ಶಿವಣ್ಣ- ರವಿಚಂದ್ರನ್ ಬರ್ತಡೇ ಸಂಭ್ರಮಕ್ಕೆ ಭರ್ಜರಿ ಪ್ಲ್ಯಾನ್

    ಒಂದ್‌ಕಡೆ ನಿವೇದಿತಾ ಮಾತು ಒಂದಿಷ್ಟು ಜನ ತಮಾಷೆಯಾಗಿ ತೆಗೆದುಕೊಂಡ್ರೆ, ಮತ್ತೊಂದಿಷ್ಟು ಜನ ನಿವಿಯ ಕನ್ನಡ ಕೇಳಿ ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    Breaking- ಅಭಿಮಾನಿಗಳಿಗೆ ನಿವೇದಿತಾ ಗೌಡ ಗುಡ್ ನ್ಯೂಸ್

    ಬಿಗ್ ಬಾಸ್ ರಿಯಾಲಿಟಿ ಶೋನಿಂದ ಗಮನ ಸೆಳೆದು ಅಪಾರ ಅಭಿಮಾನಿಗಳ ಮನಗೆದ್ದಿರುವ ನಿವೇದಿತಾ ಗೌಡ ಸದ್ಯ ವೈಯಕ್ತಿಕ ಜೀವನ, ನಟನೆ ಅಂತಾ ಫುಲ್ ಬ್ಯುಸಿಯಾಗಿದ್ದಾರೆ. ಈಗ ತಮ್ಮ ಅಭಿಮಾನಿಗಳಿಗೆ ನಿವೇದಿತಾ, ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಕನ್ನಡ ಕಿರುತೆರೆಯ ದೊಡ್ಮನೆ ಶೋ ಮೂಲಕ ಸಿಕ್ಕಾಪಟ್ಟೆ ನೇಮು ಫೇಮು ಗಿಟ್ಟಿಸಿಕೊಂಡಿರುವ ನಿವಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಇದ್ರೂ, ಇದುವರೆಗೂ ಯಾವುದೇ ಸಿನಿಮಾದಲ್ಲಿ ನಿವೇದಿತಾ ಕಾಣಿಸಿಕೊಂಡಿರಲಿಲ್ಲ. ಈಗ ಬೆಳ್ಳಿಪರದೆಯಲ್ಲಿ ಮಿಂಚಲು ಚಂದನದ ಗೊಂಬೆ ನಿವಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ನೇಪಾಳದಲ್ಲೂ ರಿಲೀಸ್ ಆಗಲಿದೆ ವಿಕ್ರಾಂತ್ ರೋಣ: 27 ದೇಶಗಳಲ್ಲಿ ಪ್ರಿವ್ಯೂ ಶೋ

    ಇತ್ತೀಚೆಗಷ್ಟೇ ನಿವೇದಿತಾ ಮಿಸೆಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಹರಿದು ಬರುತ್ತಿದೆ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಆಫರ್ಸ್‌ ಅರಿಸಿ ಬಂದಿದೆ. ಈಗಾಗಲೇ ಕಥೆ ಕೇಳಿ, ಥ್ರಿಲ್ ಆಗಿರುವ ನಿವೇದಿತಾ ಕಂಟೆಂಟ್ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಪವರ್‌ಫುಲ್ ಪಾತ್ರದಲ್ಲಿ ಟಾಲಿವುಡ್ ಸಿನಿಮಾರಂಗದಲ್ಲಿ ರಂಜಿಸಲು ಸಜ್ಜಾಗಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಭಿನ್ನ ಪಾತ್ರದ ಮೂಲಕ ಗಮನ ಸೆಳೆಯಲು ರೆಡಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಸಿನಿಮಾದ ಬಗ್ಗೆ ನಟಿ ನಿವೇದಿತಾ ಅವರೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ಚಂದನ್ ಶೆಟ್ಟಿ ಮನೇಲಿ ಇರದೇ ಹೋದರೆ ನಿವೇದಿತಾ ಗೌಡಗೆ ಭಯಂಕರ ಭಯವಂತೆ

    ನಿನ್ನೆಯಷ್ಟೇ ಮಿಸೆಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ನಟಿ ನಿವೇದಿತಾ ಗೌಡ, ತಮ್ಮ ಖಾಸಗಿ ಬದುಕಿನ ಬಗ್ಗೆ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಮನೆಯಲ್ಲಿ ಒಂಟಿಯಾಗಿ ಇರುವುದು ತುಂಬಾ ಕಷ್ಟ ಎಂದು ಹೇಳಿದ್ದಾರೆ. ರಾತ್ರಿ ಹೊತ್ತು ಪತಿ ಚಂದನ್ ಶೆಟ್ಟಿ ಮನೆಯಲ್ಲಿ ಇರದೇ ಇದ್ದರೆ, ಇಡೀ ರಾತ್ರಿ ನಿದ್ದೆಯೇ ಬರುವುದಿಲ್ಲ ಎನ್ನುವ ಸಂಗತಿಯನ್ನೂ ಅವರು ಹೇಳಿದ್ದಾರೆ.

    ರಾತ್ರಿ ಹೊತ್ತು ಒಬ್ಬಳೆ ಮನೆಯಲ್ಲಿ ಇದ್ದರೆ ತುಂಬಾ ಭಯವಾಗುತ್ತದೆ. ಹಾಗಾಗಿ ಇಡೀ ಮನೆ ಬೆಳಕಿನಿಂದ ತುಂಬಿರುತ್ತದೆ. ಅಷ್ಟೂ ಲೈಟ್ಸ್ ಆನ್ ಮಾಡಿಕೊಂಡೇ ಮನೆತುಂಬಾ ಓಡಾಡಿಕೊಂಡಿರುತ್ತೇನೆ. ನನ್ನಿಷ್ಟದ ವೆಬ್ ಸೀರಿಸ್ ನೋಡುತ್ತೇನೆ. ಒಂದೊಂದು ವೆಬ್ ಸೀರಿಸ್ ಅನ್ನು ಹತ್ತಿಪ್ಪತ್ತು ಬಾರಿ ನೋಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಈ ಸಲುವಾಗಿಯೇ ಆದಷ್ಟು ಒಂಟಿಯಾಗಿ ಇರದಂತೆ ಪತಿ ಎಚ್ಚರಿಕೆ ವಹಿಸುತ್ತಾರೆ ಎಂದೂ ಗಂಡನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಂಪೂರ್ಣ ಬೆತ್ತಲೆ:ಕಣ್ಣುಮುಚ್ಚಿಕೊಂಡ ದೀಪಿಕಾ

    ಮಿಸೆಸ್ ಇಂಡಿಯಾ ತಯಾರಿ ಬಗ್ಗೆಯೂ ಅವರು ಅನಿಸಿಕೆಗಳನ್ನು ಹಂಚಿಕೊಂಡಿದ್ದು, ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿ ಆಗಬೇಕು ಎನ್ನುವುದು ಅವರ ಚಿಕ್ಕಂದಿನ ಕನಸಾಗಿತ್ತಂತೆ. ಅದಕ್ಕೆ ಪ್ರೋತ್ಸಾಹ ನೀಡಿದ್ದು ಅವರು ತಾಯಿ ಎನ್ನುವುದನ್ನೂ ಹೇಳಿದ್ದಾರೆ. ಹಲವು ದಿನಗಳಿಂದ ಕಷ್ಟಪಟ್ಟು ಮಿಸೆಸ್‍ ಇಂಡಿಯಾ ಸ್ಪರ್ಧೆಗಾಗಿ ತಯಾರಿ ನಡೆಸಿದ್ದನ್ನೂ ಅವರು ಹಂಚಿಕೊಂಡಿದ್ದಾರೆ. ಕೊನೆಗೂ ಆ ಟೈಟಲ್ ಅನ್ನು ಗೆಲ್ಲುವಲ್ಲಿ ಸಫಲರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]