Tag: ನಿವೇದಿತಾ ಗೌಡ

  • ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    `ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಇತ್ತೀಚೆಗೆ ತಮಗೆ ವಾಂತಿಯಾಗುತ್ತಿದೆ, ಪ್ರೆಗ್ನೆಂಟ್ ಎಂದು ನ್ಯೂಸ್ ಕೊಟ್ಟಿದ್ದರು. ಈ ಬೆನ್ನಲ್ಲೇ ನಿವೇದಿತಾ ಹೊಸ ಅವತಾರದಲ್ಲಿ ಬಂದಿದ್ದಾರೆ. ನಟಿಯ ಹೊಸ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

    ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ನಟಿ ನಿವೇದಿತಾ ಗೌಡ ಇತ್ತೀಚಿಗೆ ರಿಯಾಲಿಟಿ ಶೋನಲ್ಲಿ ಪ್ರೆಗ್ನೆಂಟ್ ಆಗಿದ್ದೇನೆ ಎಂದು ಸುದ್ದಿ ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಕಂಟೆಂಟ್‌ಗಾಗಿ ನಟಿ ಹೀಗೆ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದರು. ಇದನ್ನೂ ಓದಿ: ದುಶ್ಚಟಗಳಿಗೆ ದಾಸನಾಗಿದ್ದ ನನ್ನನ್ನು ಸರಿದಾರಿಗೆ ತಂದಿದ್ದು ನನ್ನ ಪತ್ನಿ: ರಜನಿಕಾಂತ್

    ಈಗ ಪೇಪರ್ ಡ್ರೆಸ್ (Paper Dress) ತೊಟ್ಟು ನೆಟ್ಟಿಗರ ಗಮನ ಸೆಳೆದಿದ್ದಾರೆ. ಕಪ್ಪು ಬಣ್ಣದ ಟೀ ಶರ್ಟ್ ಮೇಲೆ ಪೇಪರ್ ಡ್ರೆಸ್ ಧರಿಸಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ವೀಡಿಯೋ ನೋಡ್ತಿದ್ದಂತೆ ನಿವೇದಿತಾರನ್ನು ಜ್ಯೂನಿಯರ್ ಉರ್ಫಿ ಜಾವೇದ್ ಎಂದು ಕರೆದಿದ್ದಾರೆ. ಉರ್ಫಿ ಜಾವೇದ್ (Urfi Javed) ಅವರಂತೆ ಕಾಣುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಲೆ ಸುತ್ತುತ್ತಿದೆ, ವಾಂತಿಯಾಗ್ತಿದೆ ಎಂದು ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ

    ತಲೆ ಸುತ್ತುತ್ತಿದೆ, ವಾಂತಿಯಾಗ್ತಿದೆ ಎಂದು ಸಿಹಿ ಸುದ್ದಿ ಹಂಚಿಕೊಂಡ ನಿವೇದಿತಾ ಗೌಡ

    `ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ತಮ್ಮ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. `ಗಿಚ್ಚಿ ಗಿಲಿಗಿಲಿ’ (Gicchi Giligili) ವೇದಿಕೆಯ ಮೇಲೆ ನಿವೇದಿತಾ ಹೊಸ ಅತಿಥಿಯ ಆಗಮನದ ಬಗ್ಗೆ ಮಾತನಾಡಿದ್ದಾರೆ.

    ಇತ್ತೀಚಿಗಷ್ಟೇ ಚಂದನ್ ಶೆಟ್ಟಿ (Chandan Gowda) ಮತ್ತು ನಿವೇದಿತಾ ಗೌಡ (Niveditha Gowda) ಪೋಷಕರಾಗುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಎಂಬ ಸುದ್ದಿ ಹರಿದಾಡಿತ್ತು. ಇದಾದ ಬಳಿಕ ಸ್ವತಃ ಚಂದನ್ ಶೆಟ್ಟಿ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ಸದ್ಯ ನಾವು ಮಕ್ಕಳನ್ನ ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿ ಇಲ್ಲಾ ಎಂದು ನಟ ಮಾತನಾಡಿದ್ದರು. ಈ ಬೆನ್ನಲ್ಲೇ ಶೋನಲ್ಲಿ ನಿವೇದೀತಾ ಮಾತನಾಡಿರುವ ವಿಚಾರ ಸಖತ್ ಸದ್ದು ಮಾಡ್ತಿದೆ.

    ಪ್ರಸ್ತುತ ನಟಿ ನಿವೇದಿತಾ ಗಿಚ್ಚಿ ಗಿಲಿಗಿಲಿ-2ನಲ್ಲಿ ಸ್ಪರ್ಧಿಸುತ್ತಿದ್ದಾರೆ. ವೇದಿಕೆಯ ಮೇಲೆ ಸ್ಕಿಟ್ ಮುಗಿದು ತೀರ್ಪುಗಾರರ ಬಳಿ ಮಾತನಾಡುವಾಗ ನಿವೇದಿತಾ ತಾನು ತಾಯಿಯಾಗುತ್ತಿದ್ದೇನೆ ಎಂದು ಸ್ವತಃ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ನಾಯಕಿ ಹನಿ ರೋಸ್ ಜೊತೆ ಬಾಲಯ್ಯ ಪಾರ್ಟಿ

    ಒಂದು ತಟ್ಟೆಯಲ್ಲಿ ಮಾವಿನಕಾಯಿ, ಹುಣಸೆ ಹಣ್ಣು ತಂದು ವೇದಿಕೆಯ ಮೇಲೆ ಇಟ್ಟರು ನಿರೂಪಕ ನಿರಂಜನ್ ಇದೆಲ್ಲಾ ಏನು ಎಂದು ಪ್ರಶ್ನೆ ಮಾಡಿದ್ದಾರೆ. ನಿವಿ ಜೋಕ್ ಮಾಡುತ್ತಲೇ ಇದು ಬಟ್ಟೆ ಇರುವ ಹುಣಸೇ ಮತ್ತೊಂದು ಬಟ್ಟೆ ತೆಗೆದಿರುವ ಹುಣಸೆ ಎಂದು ಉತ್ತರಿಸಿದ್ದಾರೆ. ಎಲ್ಲಾ ಓಕೆ ಈಗ ಇದೆಲ್ಲಾ ತಂದಿರುವುದು ಯಾಕೆಂದು ತೀರ್ಪುಗಾರ್ತಿ ಶ್ರುತಿ (Actress Shruthi) ಕೇಳಿದಾಗ `ನನಗೆ ಎರಡು ತಿಂಗಳು ನಾನು ಪ್ರೆಗ್ನೆಂಟ್’ ಎಂದು ನಿವೇದಿತಾ ಹೇಳುತ್ತಾರೆ. ಒಂದು ನಿಮಿಷ ಪ್ರತಿಯೊಬ್ಬರು ಶಾಕ್ ಆಗುತ್ತಾರೆ.

    ಈ ಸೀಸನ್‌ನಲ್ಲಿ ನಾನು ತುಂಬಾ ಗ್ಲೋ ಆಗಿ ಕಾಣುತ್ತೀದ್ದೀನಿ ಎಂದು ಸಾಧು ಸರ್ ಹೇಳಿದ್ರು. ಅದಕ್ಕೆ ಕಾರಣ ಇದೆ ಎಂದು ನಿವಿ ಮಾತನಾಡಿದ್ದಾರೆ. ಬಳಿಕ ಎರಡು ತಿಂಗಳು ಎಂದು ಹೇಳಿದರೆ ಜನರಿಗೆ ಅರ್ಥ ಆಗುವುದಿಲ್ಲ ಏನೆಂದು ವಿವರಿಸಿ ಹೇಳು ನಿರಂಜನ್ ಹೇಳುತ್ತಾರೆ. ನನಗೆ ತಲೆ ಸುತ್ತು, ವಾಮಿಟಿಂಗ್, ಬೆಳಗ್ಗೆ ಎದ್ದೇಳಲು ಆಗುವುದಿಲ್ಲ ಎನ್ನುತ್ತಾರೆ. ನಾನು ಪ್ರೆಗ್ನೆಂಟ್ ಎಂದು ವೇದಿಕೆಯಲ್ಲಿ ಹೇಳಿದ್ದಾರೆ. ವಾಹಿನಿಯ ಖಾತೆಯಲ್ಲಿ ಈ ವೀಡಿಯೋ ಸದ್ದು ಮಾಡ್ತಿದೆ.

    ಈಗ ನಿವೇದಿತಾ ಮಾತು ಕೇಳಿ ಇದೆಲ್ಲಾ ಶುದ್ಧ ಸುಳ್ಳು ಕಂಟೆಂಟ್‌ಗಾಗಿ ಹೀಗೆ ಮಾಡ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಅಷ್ಟಕ್ಕೂ ಇದು ನಿಜಾನಾ ಎಂದು ವಾರಾಂತ್ಯದ ಶೋನಲ್ಲಿ ಉತ್ತರ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸದ್ಯಕ್ಕೆ ನಾವು ಸಿದ್ಧರಿಲ್ಲ- Fat+Her ಪೋಸ್ಟ್‌ಗೆ ಚಂದನ್‌ ಶೆಟ್ಟಿ ರಿಯಾಕ್ಷನ್

    ಸದ್ಯಕ್ಕೆ ನಾವು ಸಿದ್ಧರಿಲ್ಲ- Fat+Her ಪೋಸ್ಟ್‌ಗೆ ಚಂದನ್‌ ಶೆಟ್ಟಿ ರಿಯಾಕ್ಷನ್

    ಸ್ಯಾಂಡಲ್‌ವುಡ್‌ ನಟ ಚಂದನ್ ಶೆಟ್ಟಿ (Chandan Shetty) ತಂದೆಯಾಗುತ್ತಿದ್ದಾರೆ. ನಿವೇದಿತಾ, ಚಂದನ್ ಮನೆಗೆ ಪುಟ್ಟ ಮಗುವಿನ ಆಗಮನವಾಗುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಸೆನ್ಸೇಷನ್ ಕ್ರಿಯೆಟ್ ಮಾಡಿತ್ತು. ಈಗ ಈ ಎಲ್ಲಾ ಊಹಾಪೋಹಗಳಿಗೆ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಬಿಗ್ ಬಾಸ್ ವಿನ್ನರ್ (Bigg Boss Kannada) ಚಂದನ್ ಶೆಟ್ಟಿ ನಿನ್ನೆಯಷ್ಟೇ ತಮ್ಮ ಪತ್ನಿ ನಿವೇದಿತಾ ಗೌಡ ಜೊತೆ ಒಂದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ರೀಲ್ಸ್ ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮಗುವನ್ನ ಬರಮಾಡಿಕೊಳ್ಳುತ್ತಿದ್ದಾರಾ, ಸಿಹಿ ಸುದ್ದಿಯನ್ನ ಈ ರೀತಿ ರಿವೀಲ್ ಮಾಡಿದ್ದಾರಾ ಅಂತೆಲ್ಲಾ ಕಾಮೆಂಟ್ ಹಾಕಲು ಆರಂಭಿಸಿದರು.

    ವೀಡಿಯೋದಲ್ಲಿ Fat+Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಕೇಳಿದ್ದಾರೆ. ಅದಕ್ಕೆ ಉತ್ತರ ಫಾದರ್ ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಕಮೆಂಟ್‌ಗಳ ಮೂಲಕ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಭಿಮಾನಿಗಳ ವಲಯದಲ್ಲಿ ಈ ತುಣುಕು ವೈರಲ್ ಆಗಿದೆ. ಈ ವೀಡಿಯೋಯಿಂದಲೇ ಚಂದನ್ ತಂದೆಯಾಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹೆ ಮಾಡಿದ್ದರು. ಇದನ್ನೂ ಓದಿ: ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡರ (Niveditha Gowda) ರೀಲ್ಸ್ ನೋಡಿದ ಆತ್ಮೀಯರೂ ಕೂಡ ಕರೆ ಮಾಡಿ ದಂಪತಿಗೆ ಅಭಿನಂದನೆಗಳನ್ನ ತಿಳಿಸುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲೇ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ತಂದೆಯಾಗುತ್ತಿಲ್ಲ. ಅದು ರೀಲ್ಸ್ ಅಷ್ಟೇ ಎಂದು ಚಂದನ್ ಶೆಟ್ಟಿ ಇನ್ಸ್ಟಾಗ್ರಾಮ್ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ.

    ನಾವು ಇನ್ನೂ ಮಗುವಿಗೆ ಸಿದ್ಧರಿಲ್ಲ. ಮಗುವಿನ ನಿರೀಕ್ಷೆಯಲ್ಲಿರುವಾಗ ಖಂಡಿತವಾಗಿಯೂ ಘೋಷಿಸುತ್ತೇವೆ ಎಂದು ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಗೆ ಉತ್ತರ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಚಂದನ್ ಶೆಟ್ಟಿ -ನಿವೇದಿತಾ

    ಚಂದನವನದ ಚೆಂದದ ಜೋಡಿ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ (Niveditha Gowda) ತಮ್ಮ ಅಭಿಮಾನಿಗಳಿಗೆ ಕೊನೆಗೂ ಗುಡ್ ನ್ಯೂಸ್ ನೀಡಿದ್ದಾರೆ. ಈ ಜೋಡಿಯ ಬಗ್ಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

    ಬಿಗ್ ಬಾಸ್ (Bigg Boss Kannada) ವಿನ್ನರ್ ಚಂದನ್ ಶೆಟ್ಟಿ ಅವರು ಸಿಹಿ ಸುದ್ದಿ ನೀಡಿದ್ದಾರೆ. ತಾವು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇರುವ ಬಗ್ಗೆ ವಿಶೇಷ ವಿಡಿಯೋ ಮೂಲಕ ಅವರು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ದುಬೈಗೆ ಹಾರಿದ ಮಾಲಾಶ್ರೀ ಪುತ್ರಿ ರಾಧನಾ ರಾಮ್

    ವೀಡಿಯೋದಲ್ಲಿ Fat+Her ಅಂದರೆ ಏನು ಎಂದು ನಿವೇದಿತಾ ಗೌಡಗೆ ಚಂದನ್ ಕೇಳಿದ್ದಾರೆ. ಅದಕ್ಕೆ ಉತ್ತರ ಫಾದರ್ ಹಾಗಾಗಿ ಚಂದನ್ ಶೆಟ್ಟಿ ತಂದೆ ಆಗುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಕಮೆಂಟ್‌ಗಳ ಮೂಲಕ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಭಿಮಾನಿಗಳ ವಲಯದಲ್ಲಿ ಈ ತುಣುಕು ವೈರಲ್ ಆಗಿದೆ.

    ಬಿಗ್‌ ಬಾಸ್‌ ಶೋನಲ್ಲಿ ಪರಿಚಯವಾದ ಈ ಜೋಡಿ, 2020ರಲ್ಲಿ ಚಂದನ್, ನಿವೇದಿತಾ ಹಸೆಮಣೆ ಏರಿದ್ದರು. ಈಗ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಅಧಿಕೃತವಾಗಿ ಹೇಳುವವೆರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಶ್ಮಿಕಾ ನಂತರ ಟ್ರೋಲಿಗರ ಕಣ್ಣಿಗೆ ಗುರಿಯಾದ್ರು ನಿವೇದಿತಾ ಗೌಡ

    ರಶ್ಮಿಕಾ ನಂತರ ಟ್ರೋಲಿಗರ ಕಣ್ಣಿಗೆ ಗುರಿಯಾದ್ರು ನಿವೇದಿತಾ ಗೌಡ

    ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗಿರುವ ನಟಿ ಅಂದ್ರೆ ರಶ್ಮಿಕಾ ಮಂದಣ್ಣ ಆದರೆ ಇತ್ತೀಚೆಗೆ ನಿವೇದಿತಾ ಗೌಡ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಮೆಣಸಿನ ಕಾಯಿ ಬಜ್ಜಿ ಮಾಡಿದ್ದ ವೀಡಿಯೋ ಮೂಲಕ ನಿವಿ ಈಗ ಸಖತ್ ಹಿಗ್ಗಾಮುಗ್ಗ ಟ್ರೋಲ್ ಆಗಿದ್ದಾರೆ.

    ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ರಶ್ಮಿಕಾ ಮಂದಣ್ಣ ಅದ್ಯಾವಾಗ ಎಂಟ್ರಿ ಕೊಟ್ರೋ ಅಂದಿನಿಂದ ಇಂದಿನವರೆಗೂ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಲೇ ಇದ್ದಾರೆ. ಈ ಸಾಲಿಗೆ ನಿವೇದಿತಾ ಗೌಡ ಕೂಡ ಸೇರಿದ್ದಾರೆ. ರಶ್ಮಿಕಾ ನಂತರ ಅತೀ ಹೆಚ್ಚು ಟ್ರೋಲ್‌ ಆಗಿರುವ ನಟಿ ನಿವೇದಿತಾ ಅವರಾಗಿದ್ದು, ಕಳೆದ ಬಾರಿ ಒಂಟಿಯಾಗಿ ಬಾಲಿಗೆ ಹೋಗಿದ್ದ ನಿವಿಗೆ, ಚಂದನ್ ಎಲ್ಲಿ ಎಂದು ಸಖತ್ ಚರ್ಚೆಗೆ ಗ್ರಾಸವಾಗಿದ್ದರು. ಈಗ ಮೆಣಸಿನಕಾಯಿ ಬಜ್ಜಿ ಮಾಡಿರುವ ಪರಿಣಾಮ, ನಟಿ ಟ್ರೋಲ್ ಆಗಿದ್ದಾರೆ.

    ನಿವೇದಿತಾಗೆ ಅಡುಗೆ ಅಷ್ಟಾಗಿ ಬರೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಗೊತ್ತಿಲ್ಲದ್ದನ್ನು ತಿಳಿದುಕೊಳ್ಳುವ ಗುಣವಿದೆ. ಅವರದ್ದೇ ಸ್ಟೈಲಿನಲ್ಲಿ, ಕಾರದ ಮೆಣಸಿನಕಾಯಿ ಬಜ್ಜಿ ಮಾಡಿರುವ ರೀತಿ ಈಗ ಟ್ರೋಲಿಗರಿಗೆ ಆಹಾರವಾಗಿದೆ. ಅಡುಗೆಯ ವೀಡಿಯೋ ತಮ್ಮದೇ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್‌ ಮಾಡಿ ನಟಿ ಟ್ರೋಲ್‌ ಆಗಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಚಿತ್ರದಲ್ಲಿ ಅಬ್ಬರಿಸಲಿದ್ದಾರಾ ರಾಣಾ ದಗ್ಗುಭಾಟಿ?

    ನಿವೇದಿತಾ ಮಾತು, ಅಡುಗೆ ಎಲ್ಲವೂ ನೋಡಿ ರಶ್ಮಿಕಾ ಮುಂದಿನ ವರ್ಷನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಕಿನಿ ತೊಟ್ಟು ಪೋಸ್‌ ಕೊಟ್ಟ ನಿವೇದಿತಾಗೆ ಬೆವರಿಳಿಸಿದ ನೆಟ್ಟಿಗರು

    ಬಿಕಿನಿ ತೊಟ್ಟು ಪೋಸ್‌ ಕೊಟ್ಟ ನಿವೇದಿತಾಗೆ ಬೆವರಿಳಿಸಿದ ನೆಟ್ಟಿಗರು

    `ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ(Niveditha Gowda) ಪ್ರವಾಸಿಗರ ಸ್ವರ್ಗ ಬಾಲಿಗೆ ಹಾರಿದ್ದಾರೆ. ಒಂಟಿಯಾಗಿ ತಮ್ಮ ಪ್ರವಾಸದ ದಿನವನ್ನ ಎಂಜಾಯ್ ಮಾಡ್ತಿದ್ದಾರೆ. ಹೀಗಿರುವಾಗ ಇದೀಗ ಮತ್ತೆ ಟ್ರೋಲಿಗರ ಬಾಯಿಗೆ ನಿವಿ ಗುರಿಯಾಗಿದ್ದಾರೆ. ಬಿಕಿನಿ ತೊಟ್ಟ ನಟಿಗೆ ನೆಟ್ಟಿಗರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಿವೇದಿತಾ ಶೇರ್ ಮಾಡಿರುವ ಬಿಕಿನಿ ವೀಡಿಯೋ ಈಗ ಸಖತ್ ಸದ್ದು ಮಾಡುತ್ತಿದೆ.

    ಸದಾ ಟ್ರೋಲ್ ಆಗುವ ನಿವೇದಿತಾ (Niveditha Gowda) ಈ ಬಾರಿ ತುಸು ಜಾಸ್ತಿಯೇ ಟ್ರೋಲ್ ಆಗಿದ್ದಾರೆ. ಬಾಲಿಯಲ್ಲಿ (Bali) ಏಕಾಂಗಿಯಾಗಿ ಎಂಜಾಯ್ ಮಾಡ್ತಿರುವ ನಟಿ, ಬಿಕಿನಿಯಲ್ಲಿ ಸೊಂಟ ಬಳುಕಿಸಿದ್ದಾರೆ. ಮದುವೆ ಆದ ಮೇಲೆ ಹೇಗಿರಬೇಕು ಎಂದು ನಟಿಗೆ ನೆಟ್ಟಿಗರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿನ್ನ ಗಂಡನ ಮುಂದೆ ನಿನ್ನನ್ನು ಪ್ರದರ್ಶಿಸು, ಸಾರ್ವಜನಿಕ ಮುಂದೆ ಅಲ್ಲ ಎಂದು ನಿವೇದಿತಾ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಬಾಲಿಗೆ ತೆರಳಿದ್ದ ನಟಿಗೆ ಚಂದನ್ ಶೆಟ್ಟಿ (Chandan Shetty) ಎಲ್ಲಿ ಎಂದು ಟ್ರೋಲ್ ಮಾಡಿದ್ದರು. ನಿವಿ ಬಿಕಿನಿ ಅವತಾರಕ್ಕೆ ಫ್ಯಾನ್ಸ್ ರಾಂಗ್ ಆಗಿದ್ದಾರೆ. ಮದುವೆ ಆದ ಮೇಲೆ ರಾಧಿಕಾ ಪಂಡಿತ್ ಹೇಗಿದ್ದಾರೆ ನೋಡಿ. ಅವರನ್ನ ನೋಡಿ ಕಲಿಯಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಚಂದನ್ ಶೆಟ್ಟಿ ಅವರನ್ನ ಮಾರಿಕೊಂಡು ತಿನ್ನುತ್ತೀರಾ ಎಂದು ಕಿಡಿಕಾರಿದ್ದಾರೆ. ನಿನ್ನ ಗಂಡನ ಮುಂದೆ ನಿನ್ನನ್ನು ಪ್ರದರ್ಶಿಸು, ಸಾರ್ವಜನಿಕ ಮುಂದೆ ಅಲ್ಲ ಎಂದು ನೆಟ್ಟಿಗರು ಫುಲ್ ರಾಂಗ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ?: ಗರಂ ಆದ ನಿವೇದಿತಾ

    ಗಂಡನ ಹಣ ಖರ್ಚು ಮಾಡಿದರೆ ನಿಮಗೇನು ಸಮಸ್ಯೆ?: ಗರಂ ಆದ ನಿವೇದಿತಾ

    ಟಿ, ಗಾಯಕ ಚಂದನ್ ಶೆಟ್ಟಿ ಅವರ ಪತ್ನಿ ನಟಿ ನಿವೇದಿತಾ ಗೌಡ ಸದ್ಯ ಬಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ತಾವು ಒಬ್ಬರೇ ಬಾಲಿಗೆ ಹೋದ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ನಿವಿ. ಬಾಲಿಯಲ್ಲಿ ಕಳೆದ ದಿನಗಳನ್ನು ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಒಂದೊಂದೇ ಪೋಸ್ಟ್ ಮಾಡುತ್ತಿದ್ದಾರೆ. ಈ ಫೋಟೋ ಕಂಡು ಕೆಲವರು ಕೆಟ್ಟದ್ದಾಗಿ ನಿವೇದಿತಾಗೆ ಕಾಮೆಂಟ್ ಮಾಡಿದ್ದಾರೆ. ಇದರಿಂದಾಗಿ ನಿವಿ ಸಹಜವಾಗಿಯೇ ಗರಂ ಆಗಿದ್ದಾರೆ.

    ಗಂಡ ದುಡಿದ ದುಡ್ಡಿನಲ್ಲಿ ಒಬ್ಬಳೇ ಎಂಜಾಯ್ ಮಾಡುತ್ತಿದ್ದೀಯಾ? ಎಂದು ಕೆಲವರು ಕೆಟ್ಟದ್ದಾಗಿಯೇ ಕಾಮೆಂಟ್ ಮಾಡಿದ್ದು, ಅದಕ್ಕೆ ನಿವಿ ಅಷ್ಟೇ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ. ‘ನಾನು ನನ್ನ ದುಡ್ಡಿನಲ್ಲಿ ಪ್ರವಾಸ ಮಾಡುತ್ತಿರುವುದು. ನನಗೂ ದುಡಿಯುವ ಶಕ್ತಿ ಇದೆ. ಹುಡುಗರು ಸೋಲೋ ಟ್ರಿಪ್ ಹೋದರೆ, ಯಾರಿಗೂ ಏನೂ ಅನಿಸುವುದಿಲ್ಲ. ಹುಡುಗಿಯರು ಹೋದರೆ, ಈ ರೀತಿ ಕೆಟ್ಟ ಕಾಮೆಂಟ್ ಮಾಡುತ್ತೀರಿ. ಅಷ್ಟಕ್ಕೂ ನಾನು ನನ್ನ ಗಂಡನ ದುಡ್ಡಿನಲ್ಲಿ ಹೋದರೆ ನಿಮಗೇನು ಸಮಸ್ಯೆ? ಎಂದು ಹೇಳುವ ಮೂಲಕ ಚಳಿ ಬಿಡಿಸಿದ್ದಾರೆ.. ಇದನ್ನೂ ಓದಿ: ಮದುವೆ ಬಗ್ಗೆ ವೈಷ್ಣವಿ ತುಂಬಾ ಕನಸು ಕಂಡಿದ್ದಳು: ತಂದೆ ರವಿಕುಮಾರ್

    ಕಿರುತೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಗೌಡ ಬಳಿಕ ನಟನೆ, ಮಾಡೆಲಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಟ್ರಿಪ್ ಫೋಟೋ, ವೀಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಸದ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದಾರೆ. ಇನ್ನೂ ಸದ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

    ಹನಿಮೂನ್ ಸ್ಪಾಟ್ ಬಾಲಿಯಲ್ಲಿ ಒಂಟಿಯಾಗಿ ನಿವೇದಿತಾ ಗೌಡ ಮೋಜು- ಮಸ್ತಿ

    ಬಿಗ್ ಬಾಸ್‌ನ ಮಾಜಿ ಸ್ಪರ್ಧಿ ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಗೌಡ (Niveditha Gowda)  ಮತ್ತೆ ಸುದ್ದಿಯಲ್ಲಿದ್ದಾರೆ. ಚಂದನ್ ಶೆಟ್ಟಿನ ಬಿಟ್ಟು ಏಂಕಾಗಿಯಾಗಿ ಬಾಲಿಗೆ(Bali) ನಿವೇದಿತಾ ಗೌಡ ಹಾರಿದ್ದಾರೆ. ಪ್ರವಾಸಿಗರ ಸ್ಪರ್ಗ ಎಂದೇ ಕರೆಯಲಾಗುವ ಇಂಡೋನೇಷ್ಯಾ ದೇಶದ ಬಾಲಿಯಲ್ಲಿ ನಿವೇದಿತಾ ಎಂಜಾಯ್ ಮಾಡ್ತಿದ್ದಾರೆ. ಈ ಕುರಿತ ಫೋಟೋ, ವೀಡಿಯೋವನ್ನ ನಟಿ ಹಂಚಿಕೊಂಡಿದ್ದಾರೆ.

    ಕಿರುತೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಗೌಡ ಬಳಿಕ ನಟನೆ, ಮಾಡೆಲಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಯಲ್ಲಿ ನಟಿ ಕಾಲ ಕಳೆಯುತ್ತಿದ್ದಾರೆ. ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್‌ನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಟ್ರಿಪ್ ಫೋಟೋ, ವೀಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಸದ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ರೀತಿಯಲ್ಲಿಯೇ ಕೈ ಸನ್ನೆ ಮಾಡಿ ರಿಷಬ್ ತಿರುಗೇಟು

    ಇನ್ನೂ ಸದ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಬಿಗ್ ಬಾಸ್‌ನ(Bigg Boss) ಮಾಜಿ ಸ್ಪರ್ಧಿ, ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಗೌಡ (Niveditha Gowda) ಮತ್ತೆ ಸುದ್ದಿಯಲ್ಲಿದ್ದಾರೆ. ಚಂದನ್ ಶೆಟ್ಟಿನ ಬಿಟ್ಟು ಒಂಟಿಯಾಗಿ ಬಾಲಿಗೆ ನಿವೇದಿತಾ ಗೌಡ ಹಾರಿದ್ದಾರೆ.

    ಕಿರುತೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಿವೇದಿತಾ ಗೌಡ ಬಳಿಕ ನಟನೆ, ಮಾಡೆಲಿಂಗ್, ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಎಲ್ಲಾ ಕೆಲಸಕ್ಕೂ ಬ್ರೇಕ್ ಹಾಕಿ, ಬಾಲಿಗೆ ಹಾರಿದ್ದಾರೆ. ಪತಿ ಚಂದನ್‌ನ ಬಿಟ್ಟು ಸೋಲೋ ಟ್ರಿಪ್ ಹೊರಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ದೀಪಿಕಾ ದಾಸ್ ವೈಲ್ಡ್ ಕಾರ್ಡ್ ಎಂಟ್ರಿ

    ಬಾಲಿಗೆ ತಾವು ಸೋಲೋ ಟ್ರಿಪ್ ಹೊರಟಿರುವುದಾಗಿ ಹೇಳಿದ ಬೆನ್ನಲ್ಲೇ ಫ್ಯಾನ್ಸ್, ಚಂದನ್ ಎಲ್ಲಿ ಅಂತಾ ಕೇಳ್ತಿದ್ದಾರೆ. ಸದ್ಯ ತಮ್ಮ ಸೋಲೋ ಟ್ರಿಪ್‌ನ್ನ ನಿವೇದಿತಾ ಸಖತ್ ಆಗಿ ಏಂಜಾಯ್ ಮಾಡ್ತಿದ್ದಾರೆ.

    ಇನ್ನೂ ಸದ್ಯದಲ್ಲೇ ನಿವೇದಿತಾ ಗೌಡ, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಅದಕ್ಕಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಒಂದೂವರೆ ವರ್ಷದ ಬಳಿಕ ಮನೆಯ‌ ಫಸ್ಟ್ ಸಿಲಿಂಡರ್‌ ಮೊನ್ನೆ ಖಾಲಿಯಾಯ್ತು:ನಿವೇದಿತಾ ಗೌಡ

    ಒಂದೂವರೆ ವರ್ಷದ ಬಳಿಕ ಮನೆಯ‌ ಫಸ್ಟ್ ಸಿಲಿಂಡರ್‌ ಮೊನ್ನೆ ಖಾಲಿಯಾಯ್ತು:ನಿವೇದಿತಾ ಗೌಡ

    `ಬಿಗ್ ಬಾಸ್’ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಬೆಳ್ಳಿತೆರೆಯಲ್ಲಿ ರಂಜಿಸಲು ತೆರೆಮರೆಯಲ್ಲಿ ಸಕಲ ತಯಾರಿ ಮಾಡುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಿವೇದಿತಾ ಗೌಡ ಸಿಲಿಂಡಲ್ ಸೀಕ್ರೆಟ್ ಕುರಿತು ಬಾಯ್ಬಿಟ್ಟಿದ್ದಾರೆ.

    ದೊಡ್ಮನೆಯಲ್ಲಿ ಸದ್ದು ಮಾಡಿದ ಮೇಲೆ ಚಂದನ್ ಶೆಟ್ಟಿ (Chandan Shetty) ಜತೆ ಹಸೆಮಣೆ ಏರಿದ ನಿವೇದಿತಾ ಈಗ ಖುಷಿ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಸದ್ಯ ದೀಪಾವಳಿ ಹಬ್ಬದ ಪ್ರಯುಕ್ತ `ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2′ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ನಿವೇದಿತಾ, ಅವರ ಮನೆಯ ಸೀಕ್ರೆಟ್‌ವೊಂದನ್ನ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ನಿವೇದಿತಾ ಅವರು ಮನೆಗೆ ಶಿಫ್ಟ್ ಆಗಿ ಒಂದೂವರೆ ವರ್ಷವಾಗಿದೆ. ಅವರ ಮನೆಯ ಫಸ್ಟ್ ಸಿಲಿಂಡರ್ ಮೊನ್ನೆ ಖಾಲಿಯಾಗಿದೆ ಎಂದು ಸೃಜನ್ ಲೋಕೇಶ್ ಕಾಲೆಳೆದಿದ್ದಾರೆ. ಇನ್ನೂ ಜಾಸ್ತಿ ದಿನ ಬರುತ್ತಿತ್ತು ಅಮ್ಮಾ ಮನೆಗೆ ಬಂದು ಅಡುಗೆ ಮಾಡಿ, ಬೇಗ ಖಾಲಿಯಾಗಿ ಹೋಯ್ತು ಎಂದು ನಿವೇದಿತಾ ಹೇಳಿದ್ದಾರೆ. ಈ ಶತಮಾನದ ಮಾದರಿ ಹೆಣ್ಣು ಎಂದು ನಿರೂಪಕ ನಿರಂಜನ್ ದೇಶಪಾಂಡೆ ಕೂಡ ತಮಾಷೆ ಮಾಡಿದ್ದಾರೆ. ಈ ಮೂಲಕ ಮನೆಯಲ್ಲಿ ನಿವಿ ಅಡುಗೆ ಮಾಡಲ್ಲ ಎಂಬುದು ರಿವೀಲ್‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]