Tag: ನಿವೇದಿತಾ ಗೌಡ

  • ಚಂದನ್ ಶೆಟ್ಟಿ-ನಿವೇದಿತಾ  ಜೋಡಿಯ ಹೊಸ ಹೆಜ್ಜೆ ‘ನಾದ ಯೋಗಿ’

    ಚಂದನ್ ಶೆಟ್ಟಿ-ನಿವೇದಿತಾ ಜೋಡಿಯ ಹೊಸ ಹೆಜ್ಜೆ ‘ನಾದ ಯೋಗಿ’

    ಸಂಗೀತ ನಿರ್ದೇಶಕ, ಗಾಯಕ ಹಾಗೂ ಈಗ ನಾಯಕನಾಗೂ ಚಂದನ್ ಶೆಟ್ಟಿ (Chandan Shetty) ಜನಪ್ರಿಯ. ಕಳೆದ ಎಂಟು ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಹುಟ್ಟುಹಬ್ಬದ ದಿನ ತಮ್ಮ ಮೊದಲ ಹಾಡು ಬಿಡುಗಡೆ ಮಾಡಿದ್ದರು‌. ಈ ಬಾರಿಯ ಹುಟ್ಟುಹಬ್ಬದಂದು ನಾದಯೋಗಿ (Nada Yogi) ಎಂಬ ಯೂಟ್ಯೂಬ್ ಚಾನಲ್ ಆರಂಭಿಸಿದ್ದಾರೆ.

    ಈ ನೂತನ ಯೂಟ್ಯೂಬ್ ಚಾನಲ್ ಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ (Nivedita Gowda) ಚಾಲನೆ ನೀಡಿದರು.  ಗಣಪತಿ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ಕುರಿತಾದ ‘ಗಂ ಗಣಪತಿ’ ಹಾಡಿನೊಂದಿಗೆ ಚಾನಲ್ ಆರಂಭವಾಗಿದೆ. ಈ ಕುರಿತು ಚಂದನ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಕಳೆದ ಎಂಟು ವರ್ಷಗಳ ಹಿಂದೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ  ಮೊದಲ ಹಾಡು ಬಿಡುಗಡೆಯಾಗಿತ್ತು. ಈಗ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ನಾದ ಯೋಗಿ ಎಂಬ ಹೊಸ ಯೂಟ್ಯೂಬ್ ಚಾನಲ್ ಅನ್ನು ಜೀರೋ ಸಬ್ ಸ್ಕ್ರೈಬರ್ ನೊಂದಿಗೆ ಆರಂಭಿಸಿದ್ದಾರೆ. ಈ ಚಾನಲ್ ಬರೀ ಭಕ್ತಿಗೀತೆಗಳಿಗೆ ಮೀಸಲು ಆಗಿರಲಿದೆ. ಇದನ್ನೂ ಓದಿ: ಗಣೇಶ ಹಬ್ಬಕ್ಕೆ’ಕೆಂದಾವರೆ’ ಫಸ್ಟ್ ಲುಕ್ ರಿಲೀಸ್- ಹೊಸಬರ ತಂಡಕ್ಕೆ ಅಶ್ವಿನಿ ಪುನೀತ್ ಸಾಥ್

    ಈಗಿನ ಯುವಜನತೆಗೆ ಆಧ್ಯಾತ್ಮಿಕತೆಯನ್ನು ಪರಿಚಯಿಸುವ ಸಲುವಾಗಿ ನಾದಯೋಗಿ ಚಾನಲ್ ಅನ್ನು ಆರಂಭಿಸಿದ್ದೇನೆ. ಇದಕ್ಕೆ ನನಗೆ ಮೈಸೂರಿನ ಅರ್ಜುನ್ ಅವದೂತರು ಪ್ರೇರಣೆ. ಇದರ ಮೊದಲ ಗೀತೆಯಾಗಿ ಗಂ ಗಣಪತಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದೇವೆ‌. ಮುಂದೆ ಕೂಡ ಹನುಮ, ಶಿವ ಸೇರಿದಂತೆ ಅನೇಕ ದೇವರುಗಳ ಹಾಡುಗಳನ್ನು ಬಿಡುಗಡೆ ಮಾಡುತ್ತೇವೆ‌. ಈಗ ಬಿಡುಗಡೆಯಾಗಿರುವ ಗಣಪತಿ ಹಾಡಿನಲ್ಲಿ ನಲವತ್ತೆಂಟು ಗಣಪತಿ ನಾಮಗಳಿದೆ. ನನ್ನ ತಮ್ಮ ಪುನೀತ್ ಅದ್ಭುತವಾಗಿ ಈ ಹಾಡಿನ ವಿಡಿಯೋ ಮಾಡಿದ್ದಾನೆ. ನಾನೇ ಹಾಡಿದ್ದೇ‌ನೆ. ಮುಂದೆ ನಾದ ಯೋಗಿಯಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಅವಕಾಶ ನೀಡಲಾಗುವುದು ಎಂದು ಚಂದನ್ ಶೆಟ್ಟಿ ತಿಳಿಸಿದರು‌.

    ಚಂದನ್ ಶೆಟ್ಟಿ ಅವರ ನೂತನ ಪ್ರಯತ್ನಕ್ಕೆ  ಶುಭಕೋರಲು ನಿರ್ಮಾಪಕರಾದ ಸಂಜಯ್ ಗೌಡ, ಗೋವಿಂದರಾಜು, ನವರಸನ್ ಮುಂತಾದ ಗಣ್ಯರು ಆಗಮಿಸಿ ಶುಭ ಕೋರಿದರು. ಪುನೀತ್ ಶೆಟ್ಟಿ ಅವರು ಹಾಡಿನ ಬಗ್ಗೆ ಮಾತನಾಡಿದರು. ಸಮಾರಂಭದ ನಂತರ ಕೇಕ್ ಕಟ್ ಮಾಡುವ ಮೂಲಕ ಚಂದನ್ ಶೆಟ್ಟಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೋವಾದಲ್ಲಿ ನಿವೇದಿತಾ ವೆಕೇಷನ್- ಫೋಟೋ ಹಂಚಿಕೊಂಡ ನಟಿ

    ಗೋವಾದಲ್ಲಿ ನಿವೇದಿತಾ ವೆಕೇಷನ್- ಫೋಟೋ ಹಂಚಿಕೊಂಡ ನಟಿ

    ಬಿಗ್ ಬಾಸ್ (Bigg Boss Kannada) ಬ್ಯೂಟಿ ನಿವೇದಿತಾ ಗೌಡ(Niveditha Gowda)  ಅವರು ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಗೋವಾದಲ್ಲಿ ನಟಿ ಮಸ್ತ್ ಮಜಾ ಮಾಡ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ 2’ ರಿಯಾಲಿಟಿ ಶೋ ಮುಗಿದ ಮೇಲೆ ಪ್ರವಾಸದತ್ತ ನಟಿ ಬ್ಯುಸಿಯಿದ್ದಾರೆ.

    ಕಿರುತೆರೆಯ ಬೋಲ್ಡ್ & ಬ್ಯೂಟಿಫುಲ್ ನಟಿ ನಿವೇದಿತಾ ಗೌಡ ಅವರು ಕೆರಿಯರ್ ವಿಚಾರದಲ್ಲಿ ಸುದ್ದಿಯಾಗೋದಕ್ಕಿಂತ ಪ್ರವಾಸ, ಪತಿಯ ಜೊತೆಗಿನ ರೀಲ್ಸ್, ಟ್ರೋಲ್‌ಗಳ ವಿಚಾರವಾಗಿಯೇ ಸೌಂಡ್ ಮಾಡುತ್ತಾರೆ. ಈಗ ಗೋವಾದಲ್ಲಿ (Goa) ನಿವೇದಿತಾ ಗೌಡ ವೆಕೇಷನ್ ಮಾಡ್ತಿದ್ದಾರೆ. ಗೋವಾದ ಸುಂದರ ತಾಣಗಳಿಗೆ ಚಂದನ್ ಪತ್ನಿ ಭೇಟಿ ನೀಡ್ತಿದ್ದಾರೆ. ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    ಇದೀಗ ಗೋವಾದ ವೆಕೇಷನ್‌ನ ಹೊಸ ಫೋಟೋವೊಂದನ್ನ ನಟಿ ಪೋಸ್ಟ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚ್ತಿದ್ದಾರೆ. ನಿವಿ ನಯಾ ಫೋಟೋ ನೋಡ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಎಷ್ಟು ಅಂತಾ ಟ್ರಾವೆಲ್ ಮಾಡ್ತೀರಾ? ನಿಮ್ಮ ಪತಿಯ ಹಣವನ್ನೇಲ್ಲಾ ಖಾಲಿ ಮಾಡ್ತೀರಾ ಅಂತಾ ನಟಿಯ ಕಾಲೆಳೆದಿದ್ದಾರೆ. ಅದಕ್ಕೆ, ನಿವಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

    ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಇದೀಗ ನಟನಾ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ (Sandalwood) ನಟಿಯಾಗಿ ಮಿಂಚಲು ನಿವೇದಿತಾ ತಾಲೀಮು ನಡೆಸುತ್ತಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಅಪ್‌ಡೇಟ್ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಗುರು ಕ್ಲೀನ್ ಮಾಡೋದಕ್ಕೆ ಟೂತ್‌ಬ್ರಶ್ ಬಳಸುತ್ತೀನಿ ಎಂದ ನಿವಿಗೆ ನೆಟ್ಟಿಗರಿಂದ ಕ್ಲಾಸ್

    ಉಗುರು ಕ್ಲೀನ್ ಮಾಡೋದಕ್ಕೆ ಟೂತ್‌ಬ್ರಶ್ ಬಳಸುತ್ತೀನಿ ಎಂದ ನಿವಿಗೆ ನೆಟ್ಟಿಗರಿಂದ ಕ್ಲಾಸ್

    ‘ಬಿಗ್ ಬಾಸ್’ (Bigg Boss Kannada) ಬೆಡಗಿ ನಿವೇದಿತಾ ಗೌಡ ‘ಗಿಚ್ಚಿ ಗಿಲಿ ಗಿಲಿ 2’ (Gicci Gili Gili 2) ಶೋ ಮುಗಿದ ಬಳಿಕ ತಮ್ಮ ಯೂಟ್ಯೂಬ್ ಸ್ಟೋರಿಗಳನ್ನ ಮಾಡುತ್ತ ಬ್ಯುಸಿಯಾಗಿದ್ದಾರೆ. ಆಲ್ಬಂ ಸಾಂಗ್, ಸಿನಿಮಾ ಅಂತಾ ಒಂದಲ್ಲಾ ಒಂದು ವಿಚಾರವಾಗಿ ಚಂದನ್ ಪತ್ನಿ ಆಕ್ಟೀವ್ ಆಗಿದ್ದಾರೆ. ಇದೀಗ ನಟಿ ಟೂತ್‌ಬ್ರಶ್‌ನಲ್ಲಿ ಉಗುರು ಕ್ವೀನ್ ಮಾಡುವ ಬಗ್ಗೆ ಅಚ್ಚರಿಯ ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟನ ಜೊತೆಗಿನ ಡೇಟಿಂಗ್ ಒಪ್ಪಿಕೊಂಡ ನಟಿ ತಮನ್ನಾ

    ಟಿಕ್ ಟಾಕ್ ಸ್ಟಾರ್ ಆಗಿದ್ದ ನಿವೇದಿತಾ ಗೌಡ ದೊಡ್ಮನೆಗೆ ಕಾಲಿಟ್ಟ ಮೇಲೆ ಅವರ ಲಕ್ ಚೇಂಜ್ ಆಯ್ತು. ನೇಮು, ಫೇಮ್ ಜೊತೆಗೆ ಒಳ್ಳೆಯ ಲೈಫ್ ಪಾರ್ಟ್ನರ್‌ ಕೂಡ ಕಂಡುಕೊಂಡರು. ಈಗ ಚಂದನ್ ಶೆಟ್ಟಿ (Chandan Shetty) ಜೊತೆಗಿನ ದಾಂಪತ್ಯ (Wedding) ಬದುಕು ಮತ್ತು ಸಿನಿಮಾ ಕೆರಿಯರ್ ಎರಡನ್ನು ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ಸದ್ಯ ತನ್ನದೇ ಯೂಟ್ಯೂಬ್ ಚಾನೆಲ್‌ನಲ್ಲಿ ನಿವಿ ಆಡಿದ ಮಾತುಗಳು ಸಖತ್ ಸದ್ದು ಮಾಡುತ್ತಿದೆ.

    ಶೂಟಿಂಗ್ ಸಮಯದಲ್ಲಿ ನಾನು ಎರಡು ಬ್ಯಾಗ್ ತೆಗೆದುಕೊಂಡು ಹೋಗುವೆ. ಸಣ್ಣ ಬ್ಯಾಗ್‌ನ ಅಸಿಸ್ಟೆಂಟ್ ಕೈಗೆ ಕೊಡುವೆ. ಏನ್ ಬೇಕಿದ್ದರೂ ಮಾಡಿ ಆದರೆ ನನ್ನ ಬ್ಯಾಗ್ ಮಾತ್ರ ಮಿಸ್ ಮಾಡಬೇಡಿ. ಅದು ನಿಮ್ಮ ಜೊತೆಗಿರಲಿ. ಏಕೆಂದರೆ ನನ್ನ ದುಬಾರಿ ವಸ್ತುಗಳು ಆ ಬ್ಯಾಗ್‌ನಲ್ಲಿ ಇರುತ್ತದೆ. ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋನಲ್ಲಿ ನನಗೆ ಪಾತ್ರಗಳು ಇರುತ್ತದೆ. ಒಂದು ಸ್ಕಿಟ್ ನಡೆದ ನಂತರ ಮತ್ತೊಂದಕ್ಕೆ ಬದಲಾಗಬೇಕು. ಶೂಟಿಂಗ್ ಮುಗಿಸಿದ ಮರು ದಿನ ಹಾಸಿಗೆಯಿಂದ ಎದ್ದೇಳಲು ಆಗಲ್ಲ. 5 ದಿನ ಟ್ರೈನಿಂಗ್ ಪಡೆದು 6ನೇ ದಿನ ಚಿತ್ರೀಕರಣ ನಡೆಯುತ್ತದೆ. ತಿಂಗಳು ಪೂರ್ತಿ ಚಿತ್ರೀಕರಣ ನಡೆಯುತ್ತದೆ.

    ಬ್ಯಾಗ್‌ನಿಂದ ನಿವೇದಿತಾ ಮೊದಲು ಹೀಲ್ ಚಪ್ಪಲ್ ತೆಗೆದು ತೋರಿಸಿದ್ದಾರೆ. ಕ್ಯಾಮೆರಾ ಎದುರು ನಾನು ಮಾತನಾಡುವಾಗ ಈ ಸ್ಲಿಪ್ಪರ್‌ ಧರಿಸಿದರೆ ಉದ್ದ ಕಾಣುವೆ. ಎಲ್ಲಾ ವಸ್ತ್ರಕ್ಕೂ ಮ್ಯಾಚ್ ಆಗುತ್ತದೆ ಎಂದಿದ್ದಾರೆ. ವೆಟ್ ವೈಪ್ಸ್ ಬ್ಯಾಗ್‌ನಲ್ಲಿ ಇರುತ್ತದೆ. ಆದರೆ ಒಂದು ದಿನವೂ ಬಳಸಿಲ್ಲವಂತೆ ಶೂಟಿಂಗ್ ಮುಗಿಯುವುದು. ರಾತ್ರಿ 2 ಗಂಟೆ ಆಗುತ್ತದೆ ಮನೆಗೆ ಬಂದು ಮಲಗಿದರೆ ಸಾಕು ಅನಿಸುತ್ತದೆ ಅಂತೆ. ಪರ್ಫ್ಯೂಮ್, ಬಾಡಿ ಲೋಷನ್, ಮೊಬೈಲ್ ಚಾರ್ಜರ್‌ ಹಾಗೂ ಕೊಡೆ ಬ್ಯಾಗ್‌ನಲ್ಲಿರುತ್ತದೆ ಎಂದು ವಿಡಿಯೋದಲ್ಲಿ ನಿವಿ ಮಾತನಾಡಿದ್ದಾರೆ.

    ಚಳಿ ತಡೆಯಲು ಕ್ಯಾಪ್ ಹಾಗೂ ಕಲರ್ ಕಲರ್ ಲಿಪ್‌ಸ್ಟಿಕ್ ಇರುತ್ತದೆ. ಯಾರಿಗೂ ಗೊತ್ತಿಲ್ಲ ಬ್ಯಾಗ್‌ನಲ್ಲಿ ನಾನು ಟೂತ್‌ಬ್ರಶ್ ಇಟ್ಟುಕೊಂಡಿರುವೆ. ಒಂದು ಸ್ಕಿಟ್‌ನಲ್ಲಿ ಅವತಾರ್ ವೇಷ ಧರಿಸಿದ್ದೆ. ಮೈ ಕೈ ಎಲ್ಲಾ ನೇರಳೆ ಬಣ್ಣ ಬಟ್ಟೆ ಹಾಕುತ್ತಾರೆ ಅಂದುಕೊಂಡೆ. ಆದರೆ ಅಷ್ಟರಲ್ಲಿ ಫುಲ್ ಬಾಡಿ ಪೇಂಟ್ ಮಾಡಿಬಿಟ್ಟರು. ಟೂತ್‌ಬ್ರಶ್ (Toothbrush) ಹಲ್ಲು ಉಜ್ಜಲು ಬಳಸಬೇಕು. ಆದರೆ ಉಗುರು ಕ್ಲೀನ್ ಮಾಡುವುದಕ್ಕೆ ಬಳಸುವೆ ಎಂದು ನಿವಿ ಹೇಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.‌ ನಿವಿಯ ಈ ಮಾತು ಕೇಳಿ ನೆಟ್ಟಿಗರು ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದೆಲ್ಲಾ ಬೇಕಾ ಎಂದಿದ್ದಾರೆ.?

  • ರೆಡ್ ಡ್ರೆಸ್‌ನಲ್ಲಿ ಕಂಗೊಳಿಸಿದ ನಿವಿ- ಗೌನ್ ನೋಡಿ ಟಾರ್ಪಲ್ ಎಂದ ನೆಟ್ಟಿಗರು

    ರೆಡ್ ಡ್ರೆಸ್‌ನಲ್ಲಿ ಕಂಗೊಳಿಸಿದ ನಿವಿ- ಗೌನ್ ನೋಡಿ ಟಾರ್ಪಲ್ ಎಂದ ನೆಟ್ಟಿಗರು

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ನಿವೇದಿತಾ ಗೌಡ ಅವರು ಸದ್ಯ ನಟನೆಯಲ್ಲಿ ಗುರುತಿಸಿಕೊಳ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ 2’ (Gicchi Giligil 2) ಶೋ ಮುಗಿಯುತ್ತಿದ್ದಂತೆ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ನಿವಿ ನಯಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಚಂದನ್ (Chandan Shetty) ಪತ್ನಿ ನಿವೇದಿತಾ, ‘ಬಿಗ್ ಬಾಸ್’ ಬಳಿಕ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಎರಡು ಸೀಸನ್‌ನಲ್ಲಿ ನಟಿಸಿ ನಿವಿ ಸೈ ಎನಿಸಿಕೊಂಡಿದ್ದಾರೆ.

    ಇದೀಗ ‘ಗಿಚ್ಚಿ ಗಿಲಿಗಿಲಿ’ ಶೋ ಮುಗಿದಿದೆ. ಕಾರ್ಯಕ್ರಮಕ್ಕೆ ತೆರೆ ಬೀಳುತ್ತಿದ್ದಂತೆ ನಿವೇದಿತಾ ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ಬಣ್ಣದ ಗೌನ್ ಧರಿಸಿ ನಿವೇದಿತಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾಗೆ ಬೋಲ್ಡ್ ಆಗಿ ನಟಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ವಿನಯ್ ರಾಜ್‌ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾಗೆ ಚಾಲನೆ

    ನಿವೇದಿತಾ ಹೊಸ ಫೋಟೋಶೂಟ್ ವೈರಲ್ ಆಗ್ತಿದ್ದಂತೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ಸ್ ಹರಿದು ಬಂದಿದೆ. ನಿವಿ ಫೋಟೋ ನೋಡಿ, ಕರೆ ಬಳಿ ನಿಮಗೇನು ಕೆಲಸ ಅಂತಿದ್ದಾರೆ. ಇನ್ನೂ ಕೆಲವರು, ನಿಮ್ಮ ಬಟ್ಟೆ ಕೊಡಿ ಟಾರ್ಪಲ್ ಹಾಕಿಕೊಳ್ತೀವಿ ಅಂತಿದ್ದಾರೆ. ಈ ಮೂಲಕ ಮತ್ತೆ ನಿವೇದಿತಾ ಫೋಟೋ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

  • ನೀರೊಳಗೂ ರೊಮ್ಯಾನ್ಸ್ ಮಾಡಿದ ಚಂದನ್ ಶೆಟ್ಟಿ-ನಿವ್ವಿ

    ನೀರೊಳಗೂ ರೊಮ್ಯಾನ್ಸ್ ಮಾಡಿದ ಚಂದನ್ ಶೆಟ್ಟಿ-ನಿವ್ವಿ

    ಗಾಯಕ ಚಂದನ್ ಶೆಟ್ಟಿ (Chandan Shetty) ಮತ್ತು ಕಿರುತೆರೆ ನಟಿ ಹಾಗೂ ಚಂದನ್ ಪತ್ನಿ ನಿವೇದಿತಾ ಗೌಡ (Nivedita Gowda) ಹಾಲಿಡೇ ಮೂಡ್ ನಲ್ಲಿದ್ದಾರೆ. ಪ್ರವಾಸದಲ್ಲಿ ವಿಡಿಯೋವೊಂದನ್ನು ಮಾಡಿದ್ದು, ಆ ವಿಡಿಯೋ ಸಖತ್ ವೈರಲ್ ಆಗಿದೆ. ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅಂಡರ್ ವಾಟರ್ ಶೂಟ್ ಮಾಡಿದ್ದು, ನೀರಿನೊಳಗೆ ರೊಮ್ಯಾನ್ಸ್ (Romance) ಮಾಡಿದ್ದಾರೆ.

    ಅಂಡರ್ ವಾಟರ್ (Underwater) ನಲ್ಲಿ ತುಟಿಗೆ ತುಟಿ ಬೆರೆಸಿ ರೊಮ್ಯಾಂಟಿಕ್ ಆಗಿ ವಿಡಿಯೋ ಶೂಟ್ ಮಾಡಿದ್ದು, ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಚಂದನ್ ಶೆಟ್ಟಿ. ಈ ವಿಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ಸ್ ಬರುತ್ತಿವೆ. ಕೆಲವರು ಸಪೋರ್ಟ್ ಮಾಡಿದರೆ ಇನ್ನೂ ಕೆಲವರು ಖಾಸಗಿ ಸಂಗತಿಗಳನ್ನು ಬಹಿರಂಗವಾಗಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಸಮಂತಾ ನಟನೆಯ ಹಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಕಾಮೆಂಟ್ ಗಳು ಏನೇ ಇರಲಿ ಚಂದನ್ ಮತ್ತು ನಿವೇದಿತಾ ಕೆಲ ಹೊತ್ತು ನೀರಿನೊಳಗೆ ರೊಮ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳಿಗೆ ಉಚಿತ ಮನರಂಜನೆ ನೀಡಿದ್ದಾರೆ. ದಾಂಪತ್ಯದ ಅನ್ಯೋನ್ಯತೆಗೆ ಸಾಕ್ಷಿ ಎನ್ನುವಂತೆ ವಿಡಿಯೋ ಮಾಡಿದ್ದಾರೆ. ಆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • ರಾಮಾಚಾರಿ ಸ್ಟೈಲಿನಲ್ಲಿ ಬರ್ತ್‌ಡೇ ಕೇಕ್‌ ಕ್ಯಾಂಡಲ್‌ ಹಚ್ಚಿದ ನಿವೇದಿತಾ

    ರಾಮಾಚಾರಿ ಸ್ಟೈಲಿನಲ್ಲಿ ಬರ್ತ್‌ಡೇ ಕೇಕ್‌ ಕ್ಯಾಂಡಲ್‌ ಹಚ್ಚಿದ ನಿವೇದಿತಾ

    ಚಂದನದ ಗೊಂಬೆ ನಿವೇದಿತಾ ಗೌಡ (Niveditha Gowda) ಅವರು ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನ ಆಚರಿಸಿದ್ದರು. ರಾಮಾಚಾರಿ ಸ್ಟೈಲಿನಲ್ಲಿಯೇ ನಿವೇದಿತಾ ಕೇಕ್ ಕ್ಯಾಂಡಲ್ ಹಚ್ಚಿದ್ದಾರೆ. ದುಬಾರಿ ಕಾರು ಮಾತ್ರವಲ್ಲ ಮತ್ತೊಂದು ದುಬಾರಿ ಉಡುಗೊರೆಯೊಂದನ್ನ ಚಂದನ್ ಶೆಟ್ಟಿ (Chandan Shetty) ಪತ್ನಿಗೆ ನೀಡಿದ್ದಾರೆ.

    ಪತ್ನಿ ನಿವೇದಿತಾ ಹುಟ್ಟುಹಬ್ಬಕ್ಕೆ ಐಷಾರಾಮಿ ಕಾರೊಂದನ್ನ ಚಂದನ್ ಗಿಫ್ಟ್ ಮಾಡಿದ್ದರು. ನಿವೇದಿತಾ ಗೌಡ ಹುಟ್ಟುಹಬ್ಬವನ್ನ (ಮೇ.12) ಅದ್ದೂರಿಯಾಗಿ ಆಚರಿಸಿದ್ದಾರೆ. ಬೆಂಗಳೂರಿನ ಪಬ್‌ವೊಂದರಲ್ಲಿ ಚಂದನ್ ಫುಲ್ ಬಲೂನ್‌ಗಳಿಂದ ಅಲಂಕಾರ ಮಾಡಿದ್ದಾರೆ. ಬರ್ತ್‌ಡೇ (Birthday) ಕ್ಯಾಂಡಲ್‌ನ ಸಿಗರೇಟ್ ರೀತಿ ಹಚ್ಚಿದ ನಿವೇದಿತಾ, ಕೇಕ್‌ನ ಕತ್ತರಿಸಿ ಎಂಜಾಯ್ ಮಾಡಿದ್ದಾರೆ. ಬಳಿಕ ನಿವಿ ಕೈಗೆ ಒಂದು ಗಿಫ್ಟ್ ಕೊಟ್ಟು ಓಪನ್ ಮಾಡಲು ಹೇಳಿದ್ದಾರೆ. ತೆರೆಯುತ್ತಿದ್ದಂತೆ ಚಿನ್ನದ ಸರ ಕಾಣಿಸಿಕೊಂಡಿದೆ. ತಕ್ಷಣವೇ ಚಂದನ್ ಅದನ್ನು ನಿವಿ ಕೊರಳಿಗೆ ಎಲ್ಲರ ಎದುರು ಹಾಕಿದ್ದಾರೆ. ನನ್ನ ಡ್ರೆಸ್‌ಗೆ ಮ್ಯಾಚ್ ಆಗುತ್ತಿದೆ ನನಗೆ ಇಷ್ಟ ಆಯ್ತು ಎಂದು ಖುಷಿ ಪಟ್ಟಿದ್ದಾರೆ. ಸೃಜನ್ ಲೋಕೇಶ್, ಜಗಪ್ಪ, ಮಹಿತಾ, ಸುಶ್ಮಿತಾ, ಪ್ರಶಾಂತ್, ಜಾನವಿ, ವಿನೋದ್ ಗೊಬ್ಬರಗಾಲ, ನಿರಂಜನ್ ದೇಶಪಾಂಡೆ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ನನ್ನ ಬರ್ತಡೇ ಸೆಲೆಬ್ರೇಷನ್ ಅದ್ಧೂರಿಯಾಗಿ ನಡೆಯಿತು. ಬರ್ತಡೇ ಮುಗಿಯಿತು ಎಂದು ಬೇಜಾರ್ ಆಗುತ್ತಿದೆ. ನನ್ನ ಜೀವನದಲ್ಲಿ ಬೆಸ್ಟ್ ಹುಟ್ಟುಹಬ್ಬವನ್ನು ಈ ವರ್ಷ ಆಚರಿಸಿಕೊಂಡಿರುವೆ. ನನ್ನ ವೀಕ್ಷಕರು ನನಗೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ. ಇದೇ ರೀತಿ ಪ್ರೀತಿ ಕೊಡಿ ಎಂದು ನಿವಿ ಹೇಳಿದ್ದಾರೆ.

    ಟಿಕ್ ಟಾಕ್ ಮಾಡುತ್ತಿದ್ದ ನಿವೇದಿತಾ ವೀಡಿಯೋಗಳು ಅಂದು ಭರ್ಜರಿ ವಿವ್ಸ್ ಗಳಿಸುತ್ತಿತ್ತು. ಇದರಿಂದಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವ ಅವಕಾಶ ಗಳಿಸಿದ್ರು. ಈ ಶೋ ಬಳಿಕ ಅವರ ಜನಪ್ರಿಯತೆ ಜಾಸ್ತಿಯಾಯಿತು. ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಚಂದನ್- ನಿವೇದಿತಾ ಮೈಸೂರಿನಲ್ಲಿ ಮದುವೆಯಾದರು.

  • ನಿವೇದಿತಾ ಹುಟ್ಟುಹಬ್ಬಕ್ಕೆ ಚಂದನ್ ಶೆಟ್ಟಿ ಕಡೆಯಿಂದ ದುಬಾರಿ ಗಿಫ್ಟ್

    ನಿವೇದಿತಾ ಹುಟ್ಟುಹಬ್ಬಕ್ಕೆ ಚಂದನ್ ಶೆಟ್ಟಿ ಕಡೆಯಿಂದ ದುಬಾರಿ ಗಿಫ್ಟ್

    ಬಿಗ್ ಬಾಸ್ ಶೋ (Bigg Boss Kannada) ಮೂಲಕ ಮನೆ ಮಾತಾದ ನಿವೇದಿತಾ ಗೌಡ (Niveditha Gowda) ಅವರು ತಮ್ಮ 25ನೇ ವರ್ಷದ ಹುಟ್ಟುಹಬ್ಬವನ್ನು(Birthday)  ಆಚರಿಸಿಕೊಂಡಿದ್ದಾರೆ. ಬರ್ತ್‌ಡೇ 2 ದಿನ ಮುಂಚಿತವಾಗಿಯೇ ವಿಶೇಷ ಗಿಫ್ಟ್ (Gift) ಸಹ ನೀಡಿದ್ದಾರೆ. ಪತ್ನಿಗೆ ರೊಮ್ಯಾಂಟಿಕ್ ಆಗಿ ಚಂದನ್ ವಿಶ್ ಮಾಡಿದ್ದಾರೆ.

    ನಿವೇದಿತಾ ಗೌಡ (Niveditha Gowda) ಅವರು ಟಿಕ್ ಟಾಕ್ ಮೂಲಕ ಜನಪ್ರಿಯತೆ ಪಡೆದು ದೊಡ್ಮನೆಗೆ ಕಾಲಿಟ್ಟ ನಟಿ, ಬಳಿಕ ಚಂದನ್ ಶೆಟ್ಟಿ ಜೊತೆ ಪ್ರೇಮಾಂಕುರವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂದನ್, ತಮ್ಮ ಸಂಗೀತ ಸಂಯೋಜನೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ಮೋಡಿ ಮಾಡ್ತಿದ್ರೆ, ನಿವಿ ‘ಗಿಚ್ಚಿ ಗಿಲಿ ಗಿಲಿ ಶೋ’ ಮೂಲಕ ಸದ್ದು ಮಾಡ್ತಿದ್ದಾರೆ.

    ಪತ್ನಿ ಹುಟ್ಟುಹಬ್ಬದ ಪ್ರಯುಕ್ತ 58 ಲಕ್ಷ ರೂಪಾಯಿಯ ಟೊಯೊಟಾ ಫಾರ್ಚುನರ್ ಲೆಜೆಂಡರ್ ಕಾರ್‌ ಚಂದನ್ ಖರೀದಿಸಿದ್ದಾರೆ. ಪತ್ನಿ ಮತ್ತು ತಾಯಿಯ ಜೊತೆ ದೇವಸ್ಥಾನಕ್ಕೆ ತೆರಳಿ ಕಾರಿಗೆ ಪೂಜೆ ಮಾಡಿಸಿದ್ದಾರೆ. ಮೇ 12ರಂದು ಪತ್ನಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ಹುಟ್ಟುಹಬ್ಬದ ಶುಭಾಶಯಗಳು. ಇಂದು ನೀನು ನಿನ್ನ ಜನ್ಮದಿನ ಆಚರಿಸುತ್ತಿರುವೆ, ನಿನಗೆ ಒಳ್ಳೆಯದಾಗಲಿ ಎಂದು ಬಯಸುವೆ. ನಾನು ನನ್ನ ಜೀವನದಲ್ಲಿ ಭೇಟಿ ಆಗಿರುವ ಅದ್ಭುತ, ಸುಂದರವಾದ ವ್ಯಕ್ತಿ ನೀನು. ನಿನ್ನನ್ನು ನನ್ನ ಜೀವನದಲ್ಲಿ ಪಡೆದಿರೋದಿಕ್ಕೆ ತುಂಬ ಪುಣ್ಯ ಮಾಡಿದ್ದೇನೆ. ನಿನ್ನ ನಗು ನನ್ನ ಜೀವನವನ್ನು ಬೆಳಕಾಗಿಸುತ್ತದೆ, ನಿನ್ನ ನಗು ನನ್ನ ಹೃದಯಕ್ಕೆ ಸಂತೋಷ ನೀಡುವುದು. ನಿನ್ನ ಪ್ರೀತಿ ಜೀವನದಲ್ಲಿ ಎದುರಾಗುವ ಎಲ್ಲ ಸವಾಲುಗಳನ್ನು ಎದುರಿಸಲು ಶಕ್ತಿ ನೀಡುತ್ತದೆ. ಈ ವಿಶೇಷ ದಿನ ನಾನು ನಿನಗೆ ತುಂಬ ಪ್ರೀತಿ ಕೊಡ್ತೀನಿ, ನಾವು ಒಟ್ಟಾಗಿ ಕಳೆದ ಸಮಯವನ್ನೆಲ್ಲ ನೆನಪಿಸಿಕೊಂಡು ಸಂಭ್ರಮಿಸೋಣ. ನಿನ್ನ ಕನಸುಗಳು ಈಡೇರಲಿ, ಖುಷಿ, ನಗುವಿನ ಜೊತೆ ಬಾಳು. ನನ್ನ ಸುಂದರ ಪತ್ನಿಗೆ ಹುಟ್ಟುಹಬ್ಬದ ಶುಭಾಶಯಗಳು. ಪದಗಳಲ್ಲಿ ಹೇಳಲಾಗದಷ್ಟು ನಾನು ನಿನ್ನ ಪ್ರೀತಿಸುವೆ ಎಂದು ಬರೆದುಕೊಂಡಿದ್ದಾರೆ. ಚಂದನ್ ಪದಗಳಿಗೆ ನಿವಿ ಫಿದಾ ಆಗಿದ್ದಾರೆ. ಧನ್ಯವಾದಗಳು ‘ಐ ಲವ್ ಯೂ’ ಎಂದು ನಿವಿ ಕಾಮೆಂಟ್ ಮೂಲಕ ರಿಯಾಕ್ಟ್ ಮಾಡಿದ್ದಾರೆ.

  • ಸೀರೆಯುಟ್ಟು ಮಿಂಚಿದ ನಿವೇದಿತಾಗೆ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು

    ಸೀರೆಯುಟ್ಟು ಮಿಂಚಿದ ನಿವೇದಿತಾಗೆ ರಾ ರಾ ನಾಗವಲ್ಲಿ ಎಂದ ನೆಟ್ಟಿಗರು

    ಬಿಗ್ ಬಾಸ್ (Bigg Boss Kannada) ಬೆಡಗಿ ನಿವೇದಿತಾ ಗೌಡ (Niveditha Gowda) ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದವರು. ಸದಾ ಒಂದಲ್ಲಾ ಒಂದು ಫೋಟೋಶೂಟ್ ಅಥವಾ ವೀಡಿಯೋ ಮೂಲಕ ಸದ್ದು ಮಾಡ್ತಿರುತ್ತಾರೆ. ಇದೀಗ ಚಂದನ್ ಪತ್ನಿ, ನಿವೇದಿತಾ ಅವರ ಹೊಸ ಫೋಟೋಶೂಟ್ ಟ್ರೋಲಿಗರ ಬಾಯಿಗೆ ಆಹಾರವಾಗಿದೆ.

    ರೀಲ್ಸ್‌ನಿಂದ ಅಪಾರ ಅಭಿಮಾನಿಗಳ ಗಮನ ಸೆಳೆದ ಬೆಡಗಿ ನಿವೇದಿತಾ ಗೌಡ ಅವರು ದೊಡ್ಮನೆ ಅಂಗಳಕ್ಕೆ ಕಾಲಿಟ್ಟು, ತಮ್ಮ ಬಬ್ಲಿ ಲುಕ್- ಕ್ಯೂಟ್ ಮಾತುಗಳು ಮೂಲಕ ಪ್ರೇಕ್ಷಕರನ್ನ ಗಮನ ಸೆಳೆದರು. ಬಳಿಕ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ (Chandan Shetty) ಅವರನ್ನ ಪ್ರೀತಿಸಿ ನಿವೇದಿತಾ ಮದುವೆಯಾದರು. ಮದುವೆಯ ಬಳಿಕವೂ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ಸಲ್ಮಾನ್ ಖಾನ್ ನಾಯಕಿ ದಿಶಾ ಪಟಾನಿ

    ಕೆಂಪು ಬಣ್ಣದ ಸೀರೆ ಉಟ್ಟು ಪೋಸ್ ಕೊಟ್ಟಿದ ಫೋಟೋವನ್ನ ನಿವೇದಿತಾ ಶೇರ್ ಮಾಡಿದ್ದಾರೆ. ಬ್ರೈಡಲ್ ರೆಡ್ ಕಲರ್ (Red Saree) ಸೀರೆ ಜೊತೆ ಸ್ಲೀವ್‌ಲೆಸ್ ಬ್ಲೌಸ್ ಉಟ್ಟು ಆಭರಣ ಧರಿಸಿ ದೊಡ್ಡ ಗಾತ್ರದಲ್ಲಿ ಕುಂಕುಮ ಇಟ್ಟಿದ್ದರು. ಹಾಗೇ ರೆಡ್ ಲಿಪ್‌ಸ್ಟಿಕ್ ಹಚ್ಚಿದ್ದಾರೆ. ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿವೇದಿತಾ ಗೌಡ ಫೋಟೋ ನೋಡಿದ ನೆಟ್ಟಿಗರು ಬಗೆ ಬಗೆಯಲ್ಲಿ ಕಾಮೆಂಟ್ ಮಾಡುತ್ತಿದ್ದು, ನಿವೇದಿತಾಗೆ ರಾ ರಾ ನಾಗವಲ್ಲಿ ಅಂತ ಕರೆದು ನಾಗವಲ್ಲಿ ಪಟ್ಟ ಕೊಟ್ಟು ಟ್ರೋಲ್ ಮಾಡುತ್ತಿದ್ದಾರೆ.

    ‘ಗಿಚ್ಚಿ ಗಿಲಿ ಗಿಲಿ 2’ ಶೋ ನಂತರ ತಮ್ಮ ಯೂಟ್ಯೂಬ್ ಕೆಲಸದತ್ತ ನಿವೇದಿತಾ ಬ್ಯುಸಿಯಾಗಿದ್ದಾರೆ. ಸಿನಿಮಾ- ಕಿರುತೆರೆ ಅಂತಾ ಚಂದನ್ ಪತ್ನಿ ಆಕ್ಟೀವ್ ಆಗಿದ್ದಾರೆ.

  • ಪತಿ ದುಡ್ಡು ವೇಸ್ಟ್ ಮಾಡುತ್ತೀರಾ ಎಂದವರಿಗೆ ನಿವೇದಿತಾ ಗೌಡ ಖಡಕ್ ಉತ್ತರ

    ಪತಿ ದುಡ್ಡು ವೇಸ್ಟ್ ಮಾಡುತ್ತೀರಾ ಎಂದವರಿಗೆ ನಿವೇದಿತಾ ಗೌಡ ಖಡಕ್ ಉತ್ತರ

    ಬಿಗ್ ಬಾಸ್ (Bigg Boss Kannada) ಬೆಡಗಿ ನಿವೇದಿತಾ ಗೌಡ (Niveditha Gowda) ಸದ್ಯ ರಿಯಾಲಿಟಿ ಶೋಗಳಲ್ಲಿ ಆಕ್ಟೀವ್ ಆಗಿದ್ದಾರೆ. ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ವಿಶೇಷ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಚಂದನ್‌ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಉತ್ತರಿಸಿದ್ದಾರೆ.

    ಸದ್ಯ ಮದುವೆ, ಸಂಸಾರ, ಕೆರಿಯರ್ ಅಂತಾ ಬ್ಯುಸಿಯಿರುವ ನಟಿ ನಿವಿ ಎಲ್ಲಿ ಸಿಕ್ಕರೂ ನಿಮ್ಮ ವಯಸ್ಸು ಎಷ್ಟು? ನಿಮ್ಮ ಗಂಡ ಹೆಸರು ಏನು? ಯಾವಾಗ ಮದುವೆ ಆಗಿದ್ದು? ಪ್ರಗ್ನೆಂಟ್ ಆಗಿದ್ದೀರಾ? ಎಂದು ಪದೇ ಪದೇ ಪ್ರಶ್ನೆ ಕೇಳುತ್ತಾರೆ. ಹೀಗಾಗಿ ಗೂಗಲ್‌ನಲ್ಲಿ ಅತಿ ಹೆಚ್ಚು ಗೂಗಲ್ ಮಾಡಿರುವ ಪ್ರಶ್ನೆಗಳಿಗೆ ಇದೀಗ ಉತ್ತರ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಪತಿ ಹಣವನ್ನ ಖರ್ಚು ಮಾಡ್ತೀರಾ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

    ಪ್ರತಿ ಸಲ ಪ್ರೆಗೆನ್ಸಿ ವಿಚಾರವೇ ಚರ್ಚೆ ಆಗುತ್ತಿರುತ್ತದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಪ್ರಗ್ನೆಂಟ್ ಆಗಿಲ್ಲ. ವರ್ಷದಲ್ಲಿ ಕನಿಷ್ಠ 2-3 ಸಲ ಈ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಮುಂದೊಂದು ದಿನ ನಾನು ನಿಜವಾಗಲೂ ಪ್ರೆಗ್ನೆಂಟ್ ಆದಾಗ, ಹೇಳಿದ್ರು ಯಾರು ಕೂಡ ನಂಬಲ್ಲ. ಆ ಸಂದರ್ಭ ಬಂದಾಗ ನಾನೇ ಅನೌನ್ಸ್ ಮಾಡ್ತೀನಿ ಎಂದಿದ್ದಾರೆ ನಿವೇದಿತಾ.

    ಮುಂದುವರೆದು ಪತಿ ಹಣ ವೇಸ್ಟ್ ಮಾಡ್ತೀನಿ ಎಂದವರಿಗೆ ನಟಿ ಉತ್ತರ ನೀಡಿದ್ದಾರೆ. ಪ್ರತಿಯೊಬ್ಬರ ಕಾಮೆಂಟ್‌ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ. ಜನರಿಗೆ ಬೇಸಿಕ್ ಕಾಮನ್‌ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ. ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್‌ರೂಮ್‌ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ. ಇದನ್ನೂ ಓದಿ: ದುಬೈನಲ್ಲಿ ರಾಮ್‌ ಚರಣ್ ಪತ್ನಿ ಉಪಾಸನಾ ಬೇಬಿ ಶವರ್‌ ಸಂಭ್ರಮ

    ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡುವುದು ತಪ್ಪಲ್ಲ. ಆದರೆ ಹುಡುಗಿ ಪ್ರವಾಸ ಮಾಡಿದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ. ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ. ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿರುವೆ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ. ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದರು ನಿಮಗೆ ಏನು ಸಮಸ್ಯೆ? ಅದು ನಿಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ನಿವೇದಿತಾ ಪ್ರತಿಕ್ರಿಯೆ  ನೀಡಿದ್ದಾರೆ.

  • `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    `ಬಿಗ್ ಬಾಸ್’ (Bigg Boss) ಮತ್ತು `ಗಿಚ್ಚಿ ಗಿಲಿಗಿಲಿ’ (Gichchi Giligili) ಶೋ ಮೂಲ ಮನೆಮಾತಾದ ನಟಿ ನಿವೇದಿತಾ ಮತ್ತೆ ಸುದ್ದಿಯಲ್ಲಿದ್ದಾರೆ. `ಅವತಾರ್’ (Avatar) ಸಿನಿಮಾದ ಲುಕ್‌ನಿಂದ ನಿವೇದಿತಾ ಎಂಟ್ರಿ ಕೊಟ್ಟಿರುವ ಫೋಟೋ ಮತ್ತು ವೀಡಿಯೋ ಸಾಮಾಜಿಕ ಸದ್ದು ಮಾಡ್ತಿದೆ.

    ಸೋಷಿಯಲ್ ಮೀಡಿಯಾ ಸೆನ್ಸೆಷನಲ್ ಆಗಿರುವ ನಿವೇದಿತಾ ಗೌಡ (Niveditha Gowda) ಸದಾ ಸುದ್ದಿರುತ್ತಾರೆ. ಕಳೆದ ಬಾರಿ ನ್ಯೂಸ್ ಪೇಪರ್ ಅನ್ನೇ ಡ್ರೆಸ್ ಮಾಡಿಕೊಂಡಿದ್ದ ನಟಿ ಈಗ ಅವತಾರ್ ಲುಕ್ ಮೂಲಕ ಹೊಸ ಅವತಾರವೆತ್ತಿದ್ದಾರೆ. ಇದನ್ನೂ ಓದಿ: ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು : ಮರಣೋತ್ತರ ವರದಿಯಲ್ಲೇನಿದೆ?

    ವಿನೋದ್ ಗೊಬ್ಬರಗಾಲ (Vinod Gobbaragala)  ಜೊತೆ ನಿವೇದಿತಾ, ಅವತಾರ್ ಲುಕ್ ಮೂಲಕ ಗಿಚ್ಚಿ ಗಿಲಿಗಿಲಿ-2 ಶೋನಲ್ಲಿ ಕಾಮಿಡಿ ಪ್ರೇಮ ಕಥೆ ಮೂಲಕ ಕಮಾಲ್ ಮಾಡಿದ್ದಾರೆ. ಫೆ.5ರಂದು ಈ ಏಪಿಸೋಡ್ ಪ್ರಸಾರ ಕೂಡ ಆಗಿದೆ. ನಿವಿ ನಟನೆ ಜಡ್ಜ್‌, ಪ್ರೇಕ್ಷಕರಿಗೆ ಇಷ್ಟವಾಗಿದೆ.

    `ಅವತಾರ್’ ಲುಕ್ ತುಂಬಾ ಮುದ್ದಾಗಿ ಕಾಣಿಸಿಕೊಂಡಿರುವ ನಿವೇದಿತಾ ಅವರ ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಿವಿ ಪ್ರಯತ್ನಕ್ಕೆ ನೆಟ್ಟಿಗರು ಕೂಡ ಭೇಷ್ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k