Tag: ನಿವೇದಿತಾ ಗೌಡ

  • ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ವೋಟ್ ಮಾಡಿದ ಬಾರ್ಬಿ ಗರ್ಲ್ ಗೆ ಡಬಲ್ ಖುಷಿ

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಭರ್ಜರಿಯಿಂದ ಸಾಗುತ್ತಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ.

    ಬಿಗ್ ಬಾಸ್ ಸೀಸನ್ 5ನ ಕಾರ್ಯಕ್ರಮದ ಸ್ಪರ್ಧಿ ನಿವೇದಿತಾ ಗೌಡ ಇದೇ ಮೊದಲ ಬಾರಿಗೆ ಮತದಾನ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 192ರಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ಮೈಸೂರಿನ ದಟ್ಟಗಳ್ಳಿ ಕನಕದಾಸ ನಗರದಲ್ಲಿರುವ ಮತಗಟ್ಟೆ ಕೇಂದ್ರಕ್ಕೆ ಪೋಷಕರ ಜೊತೆ ಹೋಗಿ ನಿವೇದಿತಾ ಗೌಡ ಮತದಾನ ಮಾಡಿದ್ದಾರೆ. ಇಂದು ನಿವೇದಿತಾ ಗೌಡ ಹುಟ್ಟಿದ ದಿನವಾಗಿದೆ. ಇಂದೇ ಮೊದಲ ಬಾರಿ ಮತದಾನ ಮಾಡಿದ್ದಾರೆ. ತಾನು ಹುಟ್ಟಿದ ದಿನದಂದೇ ಮೊದಲ ಮತದಾನ ಮಾಡಿದ್ದ ಖುಷಿಯಲ್ಲಿದ್ದು, ತುಂಬಾ ಸಂತಸವಾಗಿದೆ. ಇದೇ ಮೊದಲ ಬಾರಿಗೆ ನಾನು ಮತದಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಜೊತೆಗೆ ಅವರ ತಾಯಿ ಮತ್ತು ನಿವೇದಿತಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

    ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ಇಂದು ನಿರ್ಧರಿಸಲಿದ್ದಾರೆ.

    https://www.instagram.com/p/Biqkvm8hxZN/?hl=en&taken-by=chandanshettyofficial

  • ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!

    ಮತದಾನ ಜಾಗೃತಿ ವಿಡಿಯೋ ಬಿಡುಗಡೆಗೊಳಿಸಿದ ನಿವೇದಿತಾ ಗೌಡ!

    ಮೈಸೂರು: ಮತದಾನದ ಕುರಿತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ ಜಾಗೃತಿ ಮೂಡಿಸುತ್ತಿದ್ದಾರೆ.

    ಮತದಾನ ಮಾಡಿದವರೇ ನಿಜವಾದ ಬಿಗ್‍ಬಾಸ್ ಎಂದು ನಿವೇದಿತಾ ಗೌಡ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ. ಜಿಲ್ಲಾ ಪಂಚಾಯ್ತಿ ವತಿಯಿಂದ ಆಯೋಜಿಸಿರುವ ಮತ ಜಾಗೃತಿ ಕಾರ್ಯಕ್ರಮಕ್ಕೆ ನಿವೇದಿತಾ ಗೌಡ ರಾಯಭಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮತದಾನ ಮಾಡುವಂತೆ ಮನವಿಯ ಜಾಗೃತಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    ನಾವು ನೀವು ಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಒಂದು ನಿಯಮವನ್ನು ಪಾಲಿಸಬೇಕು. ನಮ್ಮದ್ದು ಪ್ರಜಾಪ್ರಭುತ್ವ ದೇಶ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪಭ್ರುಗಳು. ಇದನ್ನು ಯಶಸ್ಸು ಗಳಿಸಲು ಪ್ರಜೆಗಳಾದ ನಮ್ಮೆಲರ ಕರ್ತವ್ಯ. ಅದಕ್ಕಾಗಿ ನಾವು ನಮ್ಮ ಮತವನ್ನು ಮತಗಟ್ಟೆಗೆ ಬಂದು ಚಲಾಯಿಸಬೇಕು ಎಂದು ನಿವೇದಿತಾ ಹೇಳಿದ್ದಾರೆ.

    ಚುನಾವಣೆ ದಿನ ಮತಗಟ್ಟೆಗೆ ಹೋಗಿ ನಾನು ನನ್ನ ಮತವನ್ನು ಹಾಕುತ್ತಿದ್ದಿನಿ. ನೀವು ಕೂಡ ಮತಗಟ್ಟೆಗೆ ಬಂದು ನಿಮ್ಮ ಮತವನ್ನು ಚಲಾಯಿಸಿ. ನಾವು ನಮ್ಮ ನರೆಹೊರೆಯವರ ಮತದಾನದ ಬಗ್ಗೆ ಜಾಗೃತಿ ಮೂಡಿಸೋಣ ಹಾಗೂ ಕಡ್ಡಾಯವಾಗಿ ಅವರು ಸಹ ಮತ ಹಾಕುವಂತೆ ಮಾಡೋಣ ಎಂದು ತಿಳಿಸಿದ್ದಾರೆ.

    ಜಾಗೃತ ಮತದಾರ ಪ್ರಜಾಪ್ರಭುತ್ವದ ನೇತಾರ, ಮತದಾನ ಮಾಡುವ ಮತದಾರರೇ ನಿಜವಾದ ಬಿಗ್ ಬಾಸ್ ಎಂದು ಹೇಳುವ ಮೂಲಕ ಬಿಗ್ ಬಾಸ್-5ರ ಸ್ಪರ್ಧಿ ನಿವೇದಿತಾ ಗೌಡ ಮತದಾನದ ಜಾಗೃತಿ ಮೂಡಿಸಿದ್ದಾರೆ.

  • ನಿವೇದಿತಾ ಮನೆಗೆ ಚಂದನ್ ಸರ್ಪ್ರೈಸ್ ಭೇಟಿ- ನಿಮ್ಮಿಬ್ಬರ ಮದ್ವೆ ಯಾವಾಗ? ಎಂದು ಅಭಿಮಾನಿ ಕೇಳಿದ್ದಕ್ಕೆ ಹೀಗಂದ್ರು

    ನಿವೇದಿತಾ ಮನೆಗೆ ಚಂದನ್ ಸರ್ಪ್ರೈಸ್ ಭೇಟಿ- ನಿಮ್ಮಿಬ್ಬರ ಮದ್ವೆ ಯಾವಾಗ? ಎಂದು ಅಭಿಮಾನಿ ಕೇಳಿದ್ದಕ್ಕೆ ಹೀಗಂದ್ರು

    ಬೆಂಗಳೂರು: ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಮೈಸೂರಿನಲ್ಲಿರುವ ನಿವೇದಿತಾ ಗೌಡ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಈ ವೇಳೆ ಚಂದನ್ ಶೆಟ್ಟಿ ಫೇಸ್ ಬುಕ್ ಲೈವ್ ಮಾಡಿದ್ದು, ಅಭಿಮಾನಿಯೊಬ್ಬರು ನಿಮ್ಮ ಮತ್ತು ನಿವೇದಿತಾ ಮದುವೆ ಯಾವಾಗ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ನಾನು ಈಗ ನಿವೇದಿತಾ ಗೌಡ ಮನೆಯಲ್ಲಿದ್ದೇನೆ. ತುಂಬಾ ದಿನದಿಂದ ನಿವೇದಿತಾಳನ್ನು ಭೇಟಿಯಾಗಲು ಕಾಯುತ್ತಿದೆ. ಸುಮಾರು ಕಡೆ ಇಬ್ಬರೂ ಒಂದೇ ಜಾಗದಲ್ಲಿದ್ದರೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಚಂದನ್ ಹೇಳಿದ್ರು. ಈ ವೇಳೆ ನಿವೇದಿತಾ ಕೂಡ ಮಾತನಾಡಿ ಚಂದನ್ ನನ್ನ ಮನೆಗೆ ಬರುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆದರೆ ಈಗ ನನಗೆ ಖುಷಿಯಾಗಿದೆ. ಚಂದನ್ ನಮ್ಮ ಮನೆಗೆ ಬರುತ್ತಿರುವುದು ಮೊದಲೇ ಗೊತ್ತಿದ್ದರೆ ನಾನು ಕಾಲೇಜಿನಿಂದ ಬೇಗ ಬರುತ್ತಿದೆ ಎಂದು ಹೇಳಿದ್ರು.

    ಈ ವೇಳೆ ಫೇಸ್ ಬುಕ್ ಲೈವ್‍ನಲ್ಲಿ ಅಭಿಮಾನಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಸದ್ಯ ನಮಗೆ ಆ ತರಹ ಯಾವುದೇ ಅಲೋಚನೆಗಳಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಮ್ಮ ಶಾರ್ಟ್ ವಿಡಿಯೋಗಳನ್ನು ನೋಡಿದ್ದೀವಿ. ಆ ವಿಡಿಯೋ ನೋಡಿ ನಮಗೆ ಖುಷಿಯಾಯಿತು. ಆ ವಿಡಿಯೋಗಳಲ್ಲಿ ನಮ್ಮಿಬ್ಬರ ಸಂಭಾಷಣೆ ನೋಡಿ ಖುಷಿಯಾಯಿತು ಎಂದು ಚಂದನ್ ಹಾಗೂ ನಿವೇದಿತಾ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಈ ಹಿಂದೆ ಚಂದನ್ ತಮ್ಮ ಗೆಳಯನಾದ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ಬಿಗ್ ಬಾಸ್ ಸೀಸನ್ ರನ್ನರ್ ಅಪ್ ದಿವಾಕರ್ ಮತ್ತು ಅವರ ಪತ್ನಿ ಮಮತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ಚಂದನ್ ಶೆಟ್ಟಿ ಭೇಟಿ ನೀಡಿ ದಿವಾಕರ್ ದಂಪತಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದರು. ಈ ವೇಳೆ ದಿವಾಕರ್ ದಂಪತಿ, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಚಂದನ್ ಸಂಭ್ರಮಿಸಿದರು.


  • ಕನ್ನಡವನ್ನ ಇಂಗ್ಲಿಷ್ ಸ್ಟೈಲಲ್ಲಿ ಮಾತಾಡ್ತಾಳೆ ಬೆಂಗಳೂರಿನ ಜೂನಿಯರ್ ನಿವೇದಿತಾ ಗೌಡ

    ಕನ್ನಡವನ್ನ ಇಂಗ್ಲಿಷ್ ಸ್ಟೈಲಲ್ಲಿ ಮಾತಾಡ್ತಾಳೆ ಬೆಂಗಳೂರಿನ ಜೂನಿಯರ್ ನಿವೇದಿತಾ ಗೌಡ

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಕನ್ನಡವನ್ನ ಇಂಗ್ಲಿಷ್ ರೀತಿ ಮಾತಾಡಿ ನಿವೇದಿತಾ ಗೌಡ ಫುಲ್ ಫೇಮಸ್ ಆಗಿದ್ದಾರೆ. ಬೆಂಗಳೂರು ನಗರದಲ್ಲೂ ಕೂಡ ಜೂನಿಯರ್ ನಿವೇದಿತಾ ಗೌಡ ಇದ್ದಾಳೆ. ಈ ಪುಟ್ಟ ಪೋರಿ ತನ್ನ ಸ್ಟೈಲು, ಲುಕ್, ಡೈಲಾಗ್ ನಲ್ಲಿ ರಿಯಲ್ ನಿವೇದಿತಾ ಗೌಡ ಅವರನ್ನ ಫಾಲೋ ಮಾಡ್ತಿದ್ದಾಳೆ.

    ಬಿಗ್ ಬಾಸ್ ನಲ್ಲಿದ್ದ ನಿವೇದಿತಾ ಗೌಡ ತನ್ನ ಮಾತು, ಬಬ್ಲಿ ಬಬ್ಲಿ ಆ್ಯಕ್ಟಿಂಗ್ ಗೆ ಸುದ್ದಿಯಾದವರು. ಆದ್ರೆ ಇದೀಗ ಸುದ್ದಿಯಲ್ಲಿರೋದು ಜೂನಿಯರ್ ನಿವೇದಿತಾ ಗೌಡ ಅಲಿಯಾಸ್ ದಿಯಾಂಶು ಗೌಡ. ಈಕೆ ಕನ್ನಡವನ್ನ ಇಂಗ್ಲಿಷ್ ಸ್ಟೈಲಲ್ಲೇ ಮಾತಾಡ್ತಾ, ಸೀನಿಯರ್ ನಿವೇದಿತಾ ಹೇರ್ ಸ್ಟೈಲ್ ರೀತಿ ಮಾಡ್ಕೊಂಡು ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾಳೆ.

    ಬೆಂಗಳೂರಿನ ಬ್ಯಾಟರಾಯನಪುರ ನಿವಾಸಿಯಾಗಿರೋ ಈ ಪುಟಾಣಿ ಈಗ್ಲೇ ಫೇಮಸ್ ಆಗಿದ್ದಾಳೆ. ಓಂ ಸಾಯಿರಾಂ ಕ್ರಿಯೇಷನ್ ಮೂಲಕ ಯೂಟ್ಯೂಬ್‍ನಲ್ಲಿ ಮಿಂಚ್ತಿದ್ದಾಳೆ. ಓಂ ಸಾಯಿರಾಂ ಕ್ರಿಯೇಷನ್‍ನ ಪ್ರಕಾಶ್ ಚಿರು ಈಕೆ ಸೇಮ್ ನಿವೇದಿತಾ ಗೌಡ ರೀತಿ ಇರೋದನ್ನ ಪತ್ತೆ ಮಾಡಿ ಫೇಮಸ್ ಆಗೋ ಹಾಗೆ ಮಾಡಿದ್ದಾರೆ. ವಿಶ್ವ ಸುಂದರಿ ಆಗ್ಬೇಕು, ವಿಜ್ಞಾನಿ ಆಗಬೇಕು ಅಂತ ಜೂ. ನಿವೇದಿತಾ ಗೌಡ ಹೇಳುತ್ತಾಳೆ.

    https://youtu.be/8Zk5qIE2XAc

  • ವೇದಿಕೆ ಮೇಲೆ ಎಲ್ಲರ ಸಮ್ಮುಖದಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿಯಿಂದ ಫೋನ್ ಕಾಲ್!

    ವೇದಿಕೆ ಮೇಲೆ ಎಲ್ಲರ ಸಮ್ಮುಖದಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿಯಿಂದ ಫೋನ್ ಕಾಲ್!

    ಕಾರವಾರ: ಬಿಗ್ ಬಾಸ್-5 ಗೆದ್ದ ನಂತರ ರ‍್ಯಾಪರ್ ಚಂದನ್ ಶೆಟ್ಟಿ ಎಲ್ಲರ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ದಿವಕರ್ ಬಿಟ್ಟರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಜೊತೆ ಹೆಚ್ಚು ಸಲುಗೆಯಿಂದ ಇದ್ದರು. ಇವರ ಸ್ನೇಹ ನೋಡಿ ಎಲ್ಲರೂ ಖುಷಿಪಡುತ್ತಿದ್ದರು.

    ಈಗ ಬಿಗ್ ಬಾಸ್ ಮನೆಯಿಂದ ಹೊರಬಂದರೂ ಚಂದನ್ ಹಾಗೂ ನಿವೇದಿತಾ ತಮ್ಮ ಸ್ನೇಹವನ್ನು ಮುಂದುವರೆಸುಕೊಂಡು ಹೋಗುತ್ತಿದ್ದು, ಇತ್ತೀಚಿಗೆ ಕುಮುಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದನ್ ವೇದಿಕೆ ಮೇಲೆ ಎಲ್ಲರ ಸಮ್ಮುಖದಲ್ಲಿ ನಿವೇದಿತಾಗೆ ಫೋನ್ ಮಾಡಿ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಗೆದ್ದ ನಂತರ ಮೊದಲ ಬಾರಿ ತವರೂರಿಗೆ ಭೇಟಿ ನೀಡಿದ ಚಂದನ್ ಶೆಟ್ಟಿ

    ಬಿಗ್ ಬಾಸ್ ಮನೆಯಲ್ಲಿ ಆಕೆ ಯಾವಾಗಲೂ ಚಂದನ್, ಚಂದನ್ ಎಂದು ಕರೆದು ನನ್ನನ್ನು ಆ್ಯಕ್ಟೀವ್ ಆಗಿ ಇರುವಂತೆ ಮಾಡಿದ್ದಳು. ಏನಾದರೂ ಮಾಡೋಣ ಎಂದು ಹೇಳಿತ್ತಿದ್ದಳು. ಆ ಸಮಯದಲ್ಲೇ ನಾನು ಬಿಗ್ ಬಾಸ್ ಮನೆಯಲ್ಲಿ 40ಕ್ಕೂ ಹೆಚ್ಚು ಹಾಡುಗಳನ್ನು ಮಾಡುವ ಹಾಗೇ ಮಾಡಿದ್ದಳು ಎಂದು ಚಂದನ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಜವಾಗ್ಲೂ ವೈಷ್ಣವಿನ ಚಂದನ್ ಶೆಟ್ಟಿ ಮದುವೆ ಆಗ್ತಾರಾ?- ಬಿಗ್ ಬಾಸ್ ವಿನ್ನರ್ ಹೇಳಿದ್ದು ಹೀಗೆ!

    ನಿವೇದಿತಾ ಗೌಡರನ್ನು ಚಂದನ್ ಫೋನ್ ಮಾಡಿ,”ನಾನು ಈಗ ಕುಮುಟಾದಲ್ಲಿದ್ದೇನೆ ಹಾಗೂ ನನ್ನ ಮುಂದೆ 60 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ನೀನು ಮಾತನಾಡುತ್ತಿರುವುದು ಎಲ್ಲರೂ ಕೇಳಿಸಿಕೊಳ್ಳುತ್ತಿದ್ದಾರೆ. ಕುಮುಟಾ ಜನತೆಗೆ ಏನಾದರೂ ತಿಳಿಸುತ್ತೀಯಾ” ಎಂದು ಚಂದನ್ ಕೇಳಿದ್ದಕ್ಕೆ,”ನೀವು ಚಂದನ್ ಶೋ ತುಂಬಾ ಎಂಜಾಯ್ ಮಾಡುತ್ತಿದ್ದೀರ ಎಂದು ನನಗೆ ಗೊತ್ತು. ಚಂದನ್ ಎಂದು ಅವನಿಗೆ ಪ್ರೋತ್ಸಾಹ ನೀಡಿ” ಎಂದು ನಿವೇದಿತಾ ಹೇಳಿದರು. ಇದನ್ನೂ ಓದಿ: ಬಿಗ್ ಬಾಸ್ ಹಣದಲ್ಲಿ ದಿವಾಕರ್ ಗೂ ಕೊಡ್ಬೇಕಿತ್ತು ಅಂದವ್ರಿಗೆ ಚಂದನ್ ನೀಡಿದ ಚೆಂದದ ಉತ್ತರ!

    ಅದೇ ಕಾರ್ಯಕ್ರಮದಲ್ಲಿ ಚಂದನ್ ತನ್ನ ಆತ್ಮೀಯ ಗೆಳೆಯ ದಿವಾಕರ್ ಅವರಿಗೂ ಫೋನ್ ಮಾಡಿ ಕುಮುಟಾದಲ್ಲಿರುವ ವಿಷಯವನ್ನು ತಿಳಿಸಿದ್ದರು. ಅಷ್ಟೇ ಅಲ್ಲದೇ ಅವರ ಜೊತೆ ಸ್ವಲ್ಪ ಖುಷಿಯಾಗಿ ಮಾತನಾಡಿದರು. ಇನ್ನೂ ದಿವಾಕರ್ ಕೂಡ ಚಂದನ್ ಅವರ ಕಾರ್ಯಕ್ರಮಕ್ಕೆ ಶುಭಾಶಯ ತಿಳಿಸಿದ್ದರು. ಇದನ್ನೂ ಓದಿ: ಆತ್ಮೀಯ ಗೆಳೆಯ ದಿವಾಕರ್ ಗೆ ಸಿಹಿ ಸುದ್ದಿ ನೀಡಿದ ಚಂದನ್ ಶೆಟ್ಟಿ

    https://www.youtube.com/watch?v=gOV8LFvmXsI

  • ಚಂದನ್ ನಂಗೆ ಯಾಕೆ ವಿಶೇಷ ವ್ಯಕ್ತಿ: ಬೊಂಬೆ ನಿವೇದಿತಾ ಹೇಳ್ತಾರೆ ಓದಿ

    ಚಂದನ್ ನಂಗೆ ಯಾಕೆ ವಿಶೇಷ ವ್ಯಕ್ತಿ: ಬೊಂಬೆ ನಿವೇದಿತಾ ಹೇಳ್ತಾರೆ ಓದಿ

    ಬೆಂಗಳೂರು: ಬಿಗ್ ಬಾಸ್ ಸೀಸನ್ 5ರ ವಿನ್ನರ್ ಹಾಸನ ಮೂಲದ ಚಂದನ್ ಶೆಟ್ಟಿ ಅವರು ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕಚೇರಿಗೆ ಬಂದು ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ವೇಳೆ ಗೆಳತಿ ನಿವೇದಿತಾ ಗೌಡ ಅವರು ಮೈಸೂರಿನಿಂದ ಪೋನ್ ಮೂಲಕ ಮಾತನಾಡಿ ಚಂದನ್ ಒಬ್ಬ ಒಳ್ಳೆಯ ಗೆಳೆಯ ಎಂಬುದನ್ನು ನಿರೂಪಿಸಿದ್ರು.

    ಮೈಸೂರಿನಲ್ಲಿ ತುಂಬಾ ಚೆನ್ನಾಗಿಯೇ ಜನ ರೆಸ್ಪಾನ್ಸ್ ಮಾಡಿದ್ದಾರೆ. ಎಲ್ಲರೂ ನನ್ನ ತುಂಬಾ ಇಷ್ಟ ಪಡುತ್ತಿದ್ದಾರೆ. ನಾನು ಎಲ್ಲೇ ಹೋದ್ರೂ ಪ್ಲೀಸ್ ಚಂದನ್ ಅಂತ ಕರೆಯಿರಿ ಎಂದು ಜನ ಹೇಳುತ್ತಿದ್ದಾರೆ. ಆವಾಗ ನಾನು ಚಂದನ್.. ಚಂದನ್ ಎಂದು ಕರೆಯುತ್ತೇನೆ. ಒಟ್ಟಿನಲ್ಲಿ ಎಲ್ಲರಿಗೂ ನಾನು ಚಂದನ್ ಅಂತ ಕರೆಯುವುದು ತುಂಬಾ ಇಷ್ಟ ಅಂತ ನಿವೀ ಹೇಳಿದ್ರು. ಇದನ್ನೂ ಓದಿ: ಬೌನ್ಸರ್ ಗಳು ನನ್ನನ್ನು ಪಬ್‍ನಿಂದ ಹೊರ ಹಾಕಿದ್ದೆ ಸ್ಫೂರ್ತಿ ಆಯ್ತು!

    ಬಿಗ್ ಬಾಸ್ ಮನೆಯಲ್ಲಿ ಅವಳು ಯಾವಾಗಲೂ ಚಂದನ್ ಚಂದನ್ ಅಂತ ಕರೆಯುವುದು ಎಲ್ಲರಿಗೂ ಒಂದು ಸ್ವಲ್ಪ ಬೇಜಾರಾಗ್ಬಿಟ್ಟಿತ್ತು. ಹೀಗಾಗಿ ಎಲ್ಲರೂ ರೇಗ್ಸಿ ರೇಗ್ಸಿ ಅವಳು ಕರೆಯುವುದನ್ನೇ ಬಿಡಿಸಿದ್ರು. ನೋಡು ನಿವಿ ಇದೀಗ ಜನ ಅದನ್ನೇ ಜಾಸ್ತಿ ಇಷ್ಟಪಡುತ್ತಿದ್ದಾರೆ ಅಂತ ಚಂದನ್ ಅವರು ನಿವೇದಿತಾಳಿಗೆ ಹೇಳಿದ್ರು. ಇದನ್ನೂ ಓದಿ: ಚಂದನ್ ಶೆಟ್ಟಿ ನನಗೆ ಯಾಕೆ ಸ್ಪೆಷಲ್ ಅಂತ ಹೇಳಿದ್ರು ಅರ್ಜುನ್ ಜನ್ಯ

    ಇದೇ ಸಂದರ್ಭದಲ್ಲಿ ವಿನ್ ಆದ ಬಗ್ಗೆ ಎಷ್ಟು ಖುಷಿಯಾಯ್ತು ನಿಂಗೆ ಅಂತ ನಿವೇದಿತಾ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಚಂದನ್, ತುಂಬಾ ಖುಷಿಯಾಗ್ತಿದೆ. ನಾನು ಗೆಲ್ತೀನಿ ಅನ್ನೋದನ್ನು ನಿರೀಕ್ಷೆ ಮಾಡಿರಲಿಲ್ಲ. ಚಂದನ್ ನೀವು ಮಾಡೋ ಮ್ಯೂಸಿಕ್ ಇಷ್ಟವಾಗ್ತಿದೆ ಅಂತ ಜನ ಹೇಳ್ತಿದ್ದಾರೆ ಹೊರತು ಯಾರೂ ಗುಡ್ ಹ್ಯೂಮನ್ ಬೀಯಿಂಗ್ ಅಂತ ಹೇಳ್ತಿಲ್ಲ ಅಂತ ಅಂದು ನಿನ್ನ ಜೊತೆ ಕೇಳಿದ್ದೆ ಅಲ್ವಾ ಅಂದ್ರು.

    ವೇಳೆ ನಿವೇದಿತಾ ಗೌಡ ಅವರು, ನಾನು ಹೇಳಿದ್ದೆ ತಾನೇ ನೀನು ಒಳ್ಳೆಯ ವ್ಯಕ್ತಿ ಅಂತ. ಹೌದು, ಆದ್ರೆ ನಂಗೆ ಗೊತ್ತಿರಲಿಲ್ಲ. ಅವಾಗ ನೀನು ಹೇಳಿದ್ದಕ್ಕೆ ಸಮಾಧಾನ ಪಟ್ಟುಕೊಳ್ತಿದ್ದೆ ಅಂತ ಹೇಳಿದ್ರು.

    ಚಂದನ್ ಯಾಕೆ ಸ್ಪೆಷಲ್: ಬಿಗ್ ಬಾಸ್ ಮನೆಯಲ್ಲಿ ಖುಷಿ, ದುಃಖ ಎರಡನ್ನೂ ನಿವೇದಿತಾ ಹಂಚಿಕೊಳ್ತಿದ್ದೀದ್ದು ಚಂದನ್ ಜೊತೆ. ಹೀಗಾಗಿ ಯಾಕೆ ಚಂದನ್ ನಿಮಗೆ ಸ್ಪೆಷಲ್ ಅಂತ ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ನಿವೀ,  ಚಂದನ್ ಒಬ್ಬರೇ ನನ್ನ ಮೈಂಡ್ ಸೆಟ್ ನ್ನು ಅರ್ಥ ಮಾಡಿಕೊಳ್ಳುತ್ತಿದ್ದ ವ್ಯಕ್ತಿ. ಆದ್ರೆ ಅವಾಗ ನನಗೆ ಅನ್ನಿಸುತ್ತಿತ್ತು. ಯಾಕೆ ನಾನು ಚಂದನ್ ಅವರನ್ನು ಹಚ್ಚಿಕೊಂಡಿದ್ದೀನಿ. ಅವರು ಹೇಳಿದ್ರೆ ಮಾತ್ರ ನನಗೆ ಸಮಾಧಾನವಾಗುತ್ತದೆ ಅಂತ. ಆದ್ರೆ ಇದೀಗ ಅರ್ಥವಾಗುತ್ತಿದೆ. ಆ ಮನೆಯೊಳಗಡೆ ಚಂದನ್ ಮಾತ್ರ ನನ್ನ ತುಂಬಾ ಇಷ್ಟಪಡುತ್ತಿದ್ದದು. ನಾನು ಹೇಗಿದ್ದೀನಿ ಹಾಗೇಯೇ ಅವರು ನನ್ನ ಸ್ವೀರಿಸುತ್ತಿದ್ದರು ಅಂತ ಹೇಳಿದ್ರು.

    ಬಿಗ್ ಬಾಸ್ ಮನೆಯಲ್ಲಿ ನನಗೆ ನಿವೀ, ದಿವಾಕರ್ ಹಾಗೂ ಸಮೀರ್ ಆಚಾರ್ಯ ಈ ಮೂವರೇ ನನ್ನ ಪ್ರೋತ್ಸಾಹಿಸುತ್ತಿದ್ದರು. ಮನೆಯಲ್ಲಿ ಎಲ್ಲರೂ ಅವರವರಿಗೆ ಬೇಜಾರಾದಾಗ ನನ್ನ ಬಳಿ ಬಂದು ಹಾಡು ಹೇಳಿಸುತ್ತಿದ್ದರು. ಆ ಸಂದರ್ಭದಲ್ಲಿ ನಾನು ಹಾಡು ಹೇಳಿ ಅವರನ್ನು ಖುಷಿ ಪಡಿಸುತ್ತಿದ್ದೆ ಅಂತ ತಮ್ಮ ಮನದಾಳದ ಮಾತುಗಳನ್ನು ಪಬ್ಲಿಕ್ ಟಿವಿ ಕಚೇರಿಯಲ್ಲಿ ಬಿಚ್ಚಿಟ್ಟರು. ಚಂದನ್ ಶೆಟ್ಟಿಯವರು ನಿವೇದಿತಾ ಗೌಡ ಅವರಿಗೆ ಒಂದು ಟೆಡ್ಡಿಬೇರನ್ನು ಉಡುಗೊರೆಯಾಗಿ ನೀಡಿದ್ದಾರೆ.

    https://www.youtube.com/watch?v=_5g4UpRbWiE

  • ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!

    ಬಿಗ್ ಬಾಸ್ ನ ಬಾರ್ಬಿ ಡಾಲ್ ಮದುವೆಯಾಗೋ ಹುಡುಗ ಹೀಗಿರಬೇಕಂತೆ!

    ಬೆಂಗಳೂರು: ಬಿಗ್‍ಬಾಸ್ ಸೀಸನ್ 5 ನಲ್ಲಿ ಭಾಗವಹಿಸಿರುವ ಸ್ಪರ್ಧಿಗಳಲ್ಲಿ ಬಾರ್ಬಿ ಡಾಲ್ ಎಂದೇ ಪ್ರಸಿದ್ಧಿಯಾಗಿರುವ ಮೈಸೂರಿನ ನಿವೇದಿತಾಗೌಡ ಮನೆಯ ಒಳಗೆ ಹಾಗೂ ಹೊರಗೆ ಸಖತ್ ಸುದ್ದಿಯಾಗುತ್ತಿದ್ದು, ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.

    ನಿವೇದಿತಾ ಗೌಡ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದಾರೆ. ಶುಕ್ರವಾರ ರಾತ್ರಿ ಬಿಗ್ ಬಾಸ್ ಮನೆಯಲ್ಲಿ ನಿನ್ನನ್ನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ದಿವಾಕರ್, ಜೆಕೆ, ಜಗನ್ ಹಾಗೂ ಚಂದನ್ ಅವರು ಪ್ರಶ್ನೆಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಬಾರ್ಬಿ ಡಾಲ್ ತನ್ನ ಕನಸಿನ ಹುಡುಗನ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ನನ್ನ ಹುಡುಗ ನನಗಿಂತ ಸ್ವಲ್ವ ಎತ್ತರವಿರಬೇಕು, ನನ್ನನ್ನು ತುಂಬಾ ಪ್ರೀತಿ ಮಾಡಬೇಕು. ಆದರೆ ಅದನ್ನು ತೋರಿಸಿಕೊಳ್ಳಬಾರದು. ಸಿಕ್ಸ್ ಪ್ಯಾಕ್ ಬಾಡಿ ಇಲ್ಲದೇ ಇದ್ದರೂ ಪರವಾಗಿಲ್ಲ ಅಚ್ಚುಕಟ್ಟಾದ ಮೈಕಟ್ಟು ಇರಬೇಕು. ವಯಸ್ಸಿನಲ್ಲಿ ನನಗಿಂತ 5 ವರ್ಷಕ್ಕೆ ದೊಡ್ಡವನಾಗಿರಬೇಕು. ಯಾವುದಾದರೂ ಒಂದು ಕಾರು ಇರಬೇಕು. ಶ್ರೀಮಂತರಾಗದಿದ್ದರೂ ಮಧ್ಯಮ ವರ್ಗದವರಾಗಿರಬೇಕು. ಕಷ್ಟ ಇರಬಾರದು, ಯಾವುದೇ ಚಿಂತೆ ಇರಬಾರದು, ಯಾವಾಗಲೂ ಸಂತೋಷದಿಂದ ಇರಬೇಕು ಎಂದು ಹೇಳಿದ್ದಾರೆ.

    ಇನ್ನು ಹುಡುಗನ ಕೆಲಸದ ಬಗ್ಗೆ ಮಾತನಾಡುವಾಗ ಹುಡುಗ ಡಾಕ್ಟರ್, ಇಲ್ಲವೇ ನಟರಾಗಿರಬಾರದು. ಏಕೆಂದರೆ ಡಾಕ್ಟರ್ ಹಾಗೂ ನಟರು ನನ್ನ ಜೊತೆ ಜಾಸ್ತಿ ಟೈಮ್ ಕಳೆಯೋಕೆ ಆಗುವುದಿಲ್ಲ. ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆ ಹೋದರೆ ಸಂಜೆ 6 ಗಂಟೆಗೆ ಮನೆಯಲ್ಲಿರಬೇಕಾಗುತ್ತದೆ. ನಟರು ಬೇರೆ ಹುಡುಗಿ ಜೊತೆ ಅಭಿನಯಿಸುತ್ತಾರೆ ಆಗ ನನಗೆ ಜಲಸ್ ಆಗುತ್ತದೆ. ನನ್ನ ಹುಡುಗನಿಗೂ ನನ್ನ ಬಗ್ಗೆ ತುಂಬಾ ಜಲಸ್ ಇರಬೇಕು. ನನ್ನನ್ನು ಬೇಕಾದಾಗ ಶಾಪಿಂಗ್‍ಗೆ ಕರೆದುಕೊಂಡು ಹೋಗಬೇಕು. ಆಗಾಗ ನನಗೆ ಸಪ್ರ್ರೈಸ್ ಉಡುಗೊರೆ ಕೊಡಿಸಬೇಕು ಎಂದರು.

    ಕೊನೆಯದಾಗಿ ನಾನು ಮದುವೆಯಾಗುವ ಹುಡುಗನಿಗೆ ಯಾವುದೇ ಗರ್ಲ್‍ಫ್ರೆಂಡ್ ಇರಬಾರದು. ಯಾರಿಗೂ ಕೂಡ ಹಗ್ ಮತ್ತು ಕಿಸ್ ಮಾಡಿರಬಾರದು. ಇಷ್ಟೆಲ್ಲಾ ಲಕ್ಷಣಗಳನ್ನು ಹೊಂದಿರುವ ಹುಡುಗ ಸಿಕ್ಕರೆ ಮದುವೆ ಆಗುತ್ತೀನಿ ಎಂದು ನಿವೇದಿತಾ ತಿಳಿಸಿದ್ದಾರೆ. ಇವರ ಕನಸಿನ ಹೀರೋನ ಬಗ್ಗೆ ಕೇಳುತ್ತಾ ಕುಳಿತ್ತಿದ್ದ ದಿವಾಕರ್, ಚಂದನ್, ಜೆಕೆ ದಂಗಾದರು.