Tag: ನಿವೇದಿತಾ ಗೌಡ

  • ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

    ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

    ವೈಭೋಗದ ಜೀವನದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ನಿವೇದಿತಾಗೆ ತಿಂಗಳಿಗೆ ಎಷ್ಟು ಹಣ ಬೇಕಾಗುತ್ತದೆ..? ತಿಂಗಳೊಂದರಂತೆ ಲೆಕ್ಕ ಹಾಕಿಕೊಂಡತೆ ಅವರ ಗಳಿಕೆ ಎಷ್ಟು..? ಇಂಥಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳಿಗೆ ಕಾಡುವ ಪ್ರಶ್ನೆ. ಇದೀಗ ನಿವೇದಿತಾ (Niveditha Gowda) ಆದಾಯ ಹಾಗೂ ಖರ್ಚಿನ ಕುರಿತು ಮೊದಲ ಬಾರಿ ಮನಬಿಚ್ಚಿ ಮಾತನಾಡಿದ್ದಾರೆ.

    ಸೋಶಿಯಲ್ ಮೀಡಿಯಾವೇ ನಿವೇದಿತಾ ಆದಾಯದ ಮೂಲವಾಗಿದ್ದು, ತಿಂಗಳಿಗೆ ಲಕ್ಷಕ್ಕೂ ಹೆಚ್ಚು ಆದಾಯ ಸಾಮಾನ್ಯವಾಗಿದೆ. ಇದರ ಜೊತೆ ಜೊತೆಗೆ ಹಲವು ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುತ್ತಾರೆ. ಜೊತೆಗೆ ಜಾಹೀರಾತುಗಳನ್ನೂ ಮಾಡಿ ಕೊಡುತ್ತಾರೆ. ಇದರಿಂದಲೇ ಹೆಚ್ಚಿನ ಗಳಿಕೆ ನಿವೇದಿತಾ ಗೌಡ ಪಡೆಯುತ್ತಾರಂತೆ. ಇದನ್ನೂ ಓದಿ: ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

    ಲೆಕ್ಕ ಇಟ್ಟುಕೊಂಡು ಖರ್ಚು ಮಾಡುವ ಅಭ್ಯಾಸವನ್ನ ನಿವೇದಿತಾ ರೂಢಿಸಿಕೊಂಡಿಲ್ಲವಂತೆ. ಒಂದಷ್ಟು ಹಣ ಖಾಯಂ ಆಗಿ ಖರ್ಚಾಗುತ್ತದೆ. ಹಾಗೇ ಒಂದಷ್ಟು ಹಣ ಖಾಯಂ ಆದಾಯವಾಗಿದೆ. ಹೀಗಾಗಿ, ಅವರು ಅಗತ್ಯಕ್ಕೆ ಬೇಕಾದಂತೆ ಯಾರ ಮೇಲೂ ಡಿಪೆಂಡ್ ಆಗದಂತೆ ಖರ್ಚು ಮಾಡುತ್ತಾರಂತೆ. ಆದರೆ, ಆ ಮೊತ್ತವನ್ನ ನಾನು ಹೇಳಲು ಇಷ್ಟಪಡುವುದಿಲ್ಲ ಎಂದು ‘ಪಬ್ಲಿಕ್ ಟಿವಿ’ಯ ಸಂದರ್ಶನದಲ್ಲಿ ನಿವೇದಿತಾ ಹೇಳಿದ್ದಾರೆ.

    ಕೆಲವೊಮ್ಮೆ ಆದಾಯಕ್ಕೆ ಅನುಗುಣವಾಗಿ ಖರ್ಚು ಮಾಡುವ ನಿವೇದಿತಾ ಹೆಚ್ಚಿನ ಹಣ ಗಳಿಕೆಯಾದರೆ, ಪ್ರವಾಸಕ್ಕೆ ತೆರಳುತ್ತಾರಂತೆ. ರೀಲ್ಸ್ ಹಾಕೋದ್ರ ಮೇಲೆ ಆದಾಯ ನಿಂತಿರುತ್ತೆ ಎಂದಿದ್ದಾರೆ ನಿವೇದಿತಾ. ಅಲ್ಲಿಗೆ ನಿವೇದಿತಾ ಪೋಸ್ಟ್ ಮಾಡುವ ಪ್ರತಿ ರೀಲ್ಸ್‌ಗೂ ಆದಾಯ ಇರುತ್ತೆ ಅನ್ನೋದು ರಿವೀಲ್ ಆಗಿದೆ. ಹೀಗಾಗಿ, ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಿಂದಲೇ ನಿವೇದಿತಾ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ

  • ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

    ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

    ನಿವೇದಿತಾ ಗೌಡ (Niveditha Gowda) ಸದಾ ವಿದೇಶಿ ಪ್ರವಾಸದಲ್ಲಿರುತ್ತಾರೆ. ಅಲ್ಲಿಂದಲೇ ರೀಲ್ಸ್ ಶೇರ್ ಮಾಡುತ್ತಾರೆ. ಹೆಚ್ಚು ಆಡಂಬರದ ಬದುಕು ಸವಿಯುತ್ತಾರೆ. ಆದರೆ ಸಿನಿಮಾದಲ್ಲೂ ನಿವೇದಿತಾ ಹೆಚ್ಚು ಸಕ್ರಿಯವಾಗಿಲ್ಲ. ಬೇರೆ ಆದಾಯವೂ ಕಾಣುವುದಿಲ್ಲ. ಇಷ್ಟಾದ್ಮೇಲೂ ನಿವೇದಿತಾ ಇಷ್ಟೊಂದು ಅದ್ಧೂರಿ ಜೀವನವನ್ನ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇದೇ ಪ್ರಶ್ನೆಗಳು ಅವರು ವಿದೇಶದಿಂದ ರೀಲ್ಸ್ ಪೋಸ್ಟ್ ಮಾಡ್ದಾಗ ಕಾಮೆಂಟ್ಸ್ನಲ್ಲಿ ಕೇಳಿಬರುತ್ತೆ. ಆ ಕುತೂಹಲಕ್ಕೀಗ ನಿವೇದಿತಾ ಗೌಡ ತೆರೆ ಎಳೆದಿದ್ದಾರೆ.

    ತಿಂಗಳಿಗೊಂದು ವಿದೇಶ ಪ್ರವಾಸ ಮಾಡಲು ನಿಮಗೆ ಹಣ ಎಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆಗೆ ಇದೀಗ ನಿವೇದಿತಾ ಗೌಡ ಉತ್ತರ ಕೊಟ್ಟಿದ್ದಾರೆ. `ನನ್ನ ಹಣವನ್ನ ನಾನೇ ಸಂಪಾದಿಸುತ್ತೇನೆ, ನಾನು ಯಾರಿಂದಲೂ ಹಣ ತೆಗೆದುಕೊಳ್ಳೋದಿಲ್ಲ. ನನಗೆ ತೃಪ್ತಿಯಾಗುವಷ್ಟು ಹಣ ಸೋಶಿಯಲ್ ಮೀಡಿಯಾದಿಂದ ಬರುತ್ತಿದೆ. ಅದೇ ನನ್ನ ಆದಾಯದ ಮೂಲ’ ಎಂದು ಹೇಳುವ ಮೂಲಕ ತಮ್ಮ ಕಾಸ್ಟ್ಲಿ ಲೈಫ್‌ಸ್ಟೈಲ್ ಗುಟ್ಟು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ

    ಹಣ ಎಲ್ಲಿಂದ ಬರುತ್ತೆ ಅನ್ನೋದಕ್ಕೆ ನಿವೇದಿತಾ ಮಾತು
    ನನ್ನ ಹಣವನ್ನು ನಾನೇ ಸಂಪಾದಿಸುತ್ತೇನೆ. ನಾನು ಯಾರ ಹಂಗಿನಲ್ಲೂ ಬದುಕುತ್ತಿಲ್ಲ. ನಾನು ಪ್ರವಾಸಕ್ಕೆ ಹೋಗುವಾಗ ಅಪ್ಪ-ಅಮ್ಮ ಹಣ ಬೇಕಾ ಅಂತ ಕೇಳ್ತಾರೆ. ಆದರೂ ನಾನು ತೆಗೆದುಕೊಳ್ಳುವುದಿಲ್ಲ. ದೇವರ ದಯೆಯಿಂದ ಹಿಂದಿನಿಂದಲೂ ನನ್ನ ಹಣವನ್ನು ನಾನೇ ಸಂಪಾದಿಸುತ್ತಿದ್ದೇನೆ. ಇಂಡಿಪೆಂಡೆಂಟ್ ಆಗಿ ಬದುಕುತ್ತಿದ್ದೇನೆ. ನನಗೆ ಯಾರ ಮೇಲೂ ಡಿಪೆಂಡ್ ಆಗುವುದು ಇಷ್ಟವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆದಾಯ ಚೆನ್ನಾಗಿದೆ. ಬಂದ ಕೂಡಲೇ ಟ್ರಿಪ್‌ಗೆ ಹೋಗುತ್ತೇನೆ. ನಾನು ಹಣವನ್ನ ಕೂಡಿಡಲು ಇಷ್ಟಪಡುವುದಿಲ್ಲ. ವಾಸ್ತವದಲ್ಲಿ ಬದುಕುತ್ತೇನೆ. ನನಗೆ ಒಳ್ಳೆ ಬಟ್ಟೆ ಹಾಕಿಕೊಳ್ಳುವುದು, ಒಳ್ಳೊಳ್ಳೆ ಶೂ ಧರಿಸುವುದು ಹಾಗೂ ಚೆನ್ನಾಗಿ ಕಾಣಬೇಕೆನ್ನುವುದು ಇಷ್ಟ. ಪ್ರವಾಸವೂ ನನ್ನಿಷ್ಟದ ಅಭ್ಯಾಸ. ನಾನು ಹೇರ್‌ವಾಶ್‌ಗೂ ವಾರಕ್ಕೆರಡು ದಿನ ಸಲೂನ್‌ಗೆ ಹೋಗುತ್ತೇನೆ ಅನ್ನೋದು ನಿಜ. ಆದರೆ ಹಿಂದೆಯೂ, ಈಗಲೂ ನಾನು ನನ್ನ ವೈಯಕ್ತಿಕ ಖರ್ಚಿಗಾಗಿ ಯಾರ ಮೇಲೂ ಡಿಪೆಂಡ್ ಆಗಿಲ್ಲ. ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡ್ತೀನಿ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದೀನಿ. ಅಲ್ಲಿಂದಲೇ ಸಾಕಷ್ಟು ಹಣ ನನಗೆ ಬರುತ್ತೆ. ಅದರಿಂದಲೇ ನಾನು ವೈಭೋಗದ ಜೀವನ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ

  • ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ನಿವಿ ಅಂಬಾಸಿಡರ್

    ಗಾಳಿಯಲ್ಲಿ ಬಟ್ಟೆ ಹಾರಿಸುವ ರೀಲ್ಸ್‌ಗೆ ನಿವಿ ಅಂಬಾಸಿಡರ್

    ಸೋಶಿಯಲ್ ಮೀಡಿಯಾದಿಂದಲೇ (Social Media) ಫೇಮಸ್ ಆಗಿರುವ ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ನಿವೇದಿತಾ ಗೌಡ (Niveditha Gowda) ಇನ್‌ಸ್ಟಾನಲ್ಲಿ ವಾರಕ್ಕೆರಡು ರೀಲ್ಸ್ ಶೇರ್ ಮಾಡದಿದ್ರೆ ನಿದ್ರೆನೇ ಮಾಡೋದಿಲ್ಲ.

    ಇದೀಗ ನಿವಿ ಮತ್ತೆ ಬೋಲ್ಡ್ ಲುಕ್‌ನ ವೀಡಿಯೋ ಶೇರ್ ಮಾಡಿದ್ದು ಎಂದಿನಂತೆ ಕಾಮೆಂಟ್ಸ್‌ಗಳಿಗೆ ಡೋಂಟ್‌ ಕೇಡ್‌ ಅಂದಿದ್ದಾರೆ. ಇದನ್ನೂ ಓದಿ: `ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು’…ಅಮ್ಮನಾಗುತ್ತಿರುವ ನಟಿ ಭಾವನಾ ಮೊದಲ ಮಾತು

    ಮತ್ತೆ ಬೋಲ್ಡ್ ಅವತಾರದಲ್ಲಿ ಫಾಲೋವರ್ಸ್‌ಗಳಿಗೆ ದರ್ಶನ ಕೊಟ್ಟಿದ್ದು, ಪಡ್ಡೆಗಳ ನಿದ್ದೆಗೆ ಕೊಳ್ಳಿಯಿಟ್ಟಿದ್ದಾರೆ. ಎಂದಿನಂತೆ ಅರ್ಧ ತುಂಡು ಬಟ್ಟೆಯಲ್ಲಿ ರೀಲ್ಸ್ ಮಾಡಿದ್ದಾರೆ. ಆ ಸ್ಕರ್ಟ್ ಗಾಳಿಯಲ್ಲಿ ಹಾರುವ ವೀಡಿಯೋವನ್ನ ಹಂಚಿಕೊಂಡಿದ್ದಾರೆ. ಬೈಯುತ್ತಲೇ ನಿವೇದಿತಾ ರೀಲ್ಸ್‌ಗೆ ಲೈಕ್‌ ಒತ್ತುತ್ತಾರೆ. ಪರಿಣಾಮ ಗಂಟೆಗೆ ಸಾವಿರಾರು ಲೈಕ್ಸ್, ಕಾಮೆಂಟ್ಸ್‌ಗಳು ಬಂದಿವೆ. ಇದನ್ನೂ ಓದಿ: ಮದುವೆಯಾಗದೆ ಅಮ್ಮನಾಗಲಿರುವ ಭಾವನಾ ರಾಮಣ್ಣ

    ಗಾಳಿಯಲ್ಲಿ ಬಟ್ಟೆ ಹಾರುವ ರೀಲ್ಸ್ ಟ್ರೆಂಡ್‌ಗೆ ನಿವೇದಿತಾ ಗೌಡ ಅಂಬಾಸಿಡರ್ ಎನ್ನುತ್ತಿದ್ದಾರೆ ಅವರ ಫಾಲೋವರ್ಸ್. ಪದೇ ಪದೇ ಈ ಥರಹದ ರೀಲ್ಸ್‌ಗಳನ್ನೇ ಶೇರ್ ಮಾಡುತ್ತಾ ಹೆಚ್ಚೆಚ್ಚು ವೀವ್ಸ್ ಪಡೆದು ಹಣಗಳಿಸುತ್ತಾರೆ ಈ ಇನ್‌ಸ್ಟಾ ಸ್ಟಾರ್.‌  ಇದನ್ನೂ ಓದಿ: ಜಾನಿ ಮಾಸ್ಟರ್ ಜೊತೆಗಿನ ಫೋಟೋ: ಟೀಕೆಗೆ ಒಳಗಾದ ನಯನತಾರಾ-ವಿಘ್ನೇಶ್

  • ಶಾರ್ಟ್‌ ಡ್ರೆಸ್‌ ಧರಿಸಿ ನಿವೇದಿತಾ ಹೊಸ ರೀಲ್ಸ್-‌ ಕಾಲೆಳೆದ ನೆಟ್ಟಿಗರು

    ಶಾರ್ಟ್‌ ಡ್ರೆಸ್‌ ಧರಿಸಿ ನಿವೇದಿತಾ ಹೊಸ ರೀಲ್ಸ್-‌ ಕಾಲೆಳೆದ ನೆಟ್ಟಿಗರು

    ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ (Niveditha Gowda) ಅವರು ಡಿವೋರ್ಸ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಬೋಲ್ಡ್ ಮತ್ತು ಆ್ಯಕ್ಟೀವ್ ಆಗಿದ್ದಾರೆ. ಇದೀಗ ಶಾರ್ಟ್ ಡ್ರೆಸ್ ಧರಿಸಿ ಸಿನಿಮಾ ಹಾಡೋದಕ್ಕೆ ಸಖತ್ ಆಗಿ ಸೊಂಟ ಬಳುಕಿಸಿದ್ದಾರೆ. ಇದನ್ನೂ ಓದಿ:ಭಾವಿ ಪತಿ ಜೊತೆ ವೈಷ್ಣವಿ ರೊಮ್ಯಾಂಟಿಕ್ ಡಿನ್ನರ್ ಡೇಟ್- ಸೂಪರ್‌ ಜೋಡಿ ಎಂದ ಫ್ಯಾನ್ಸ್

    ದಿನದಿಂದ ದಿನಕ್ಕೆ ನಿವೇದಿತಾ ಬೋಲ್ಡ್ ಅವತಾರ ತಾಳುತ್ತಿದ್ದಾರೆ. ಸದಾ ಒಂದಲ್ಲಾ ಒಂದು ರೀಲ್ಸ್ ಹಾಗೂ ಫೋಟೋಶೂಟ್ ಮೂಲಕ ಅವರು ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತಾರೆ. ಈಗ ಶಾರ್ಟ್ ಆಗಿರೋ ಬಟ್ಟೆ ಧರಿಸಿ ರೊಮ್ಯಾಂಟಿಕ್ ಹಾಡೋದಕ್ಕೆ ಹೆಜ್ಜೆ ಹಾಕಿದ್ದಾರೆ.

    ‘ಕೆಂಪೇಗೌಡ’ ಸಿನಿಮಾದ ‘ತರ ತರ ಹಿಡಿಸಿದೆ ಮನಸ್ಸಿಗೆ ನೀನು’ ಎಂಬ ಹಾಡು ಮಸ್ತ್ ಆಗಿ ಕುಣಿದಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಮತ್ತೆ ಲವ್ ಆಯ್ತಾ ಎಂದೆಲ್ಲಾ ನಟಿಗೆ ಕಾಲೆಳೆದಿದ್ದಾರೆ. ಇದನ್ನೂ ಓದಿ:18ನೇ ಆ್ಯನಿವರ್ಸರಿ ಸಂಭ್ರಮ: ಪತಿಯೊಂದಿಗಿನ ಫೋಟೋ ಹಂಚಿಕೊಂಡ ಐಶ್ವರ್ಯಾ ರೈ

    ಮಾಜಿ ಪತಿ ಚಂದನ್ ಶೆಟ್ಟಿ (Chandan Shetty) ಜೊತೆಗಿನ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾವನ್ನು ನಿವೇದಿತಾ ಶೂಟಿಂಗ್ ಮುಗಿಸಿ ಕೊಟ್ಟಿದ್ದಾರೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ.

  • ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಶೂಟಿಂಗ್ ಮುಗಿಸಿದ ನಿವೇದಿತಾ ಗೌಡ

    ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಶೂಟಿಂಗ್ ಮುಗಿಸಿದ ನಿವೇದಿತಾ ಗೌಡ

    ಮಾಜಿ ಪತಿ ಚಂದನ್ ಶೆಟ್ಟಿ (Chandan Shetty) ಜೊತೆಗೆ ನಟಿಸಿರುವ ‘ಮುದ್ದು ರಾಕ್ಷಸಿ’ (Muddu Rakshasi) ಚಿತ್ರದ ಶೂಟಿಂಗ್ ಅನ್ನು ನಿವೇದಿತಾ ಗೌಡ (Niveditha Gowda) ಮುಗಿಸಿ ಕೊಟ್ಟಿದ್ದಾರೆ. ‘ಮುದ್ದು ರಾಕ್ಷಸಿ’ ಸಿನಿಮಾ ಕಂಪ್ಲೀಟ್ ಆಗಿರುವ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    ಯಶಸ್ವಿಯಾಗಿ ‘ಮುದ್ದು ರಾಕ್ಷಸಿ’ ಸಿನಿಮಾ ಚಿತ್ರೀಕರಣ ಮುಗಿಸಿದ್ದೇವೆ. ಈ ಚಿತ್ರತಂಡವನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ನಿವೇದಿತಾ ಗೌಡ ಇನ್ಸ್ಟಾಗ್ರಾಂ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಖಡಕ್‌ ಮಾತು


    ‘ಮುದ್ದು ರಾಕ್ಷಸಿ’ ಎಂಬ ಸೈಕೋ ಥ್ರಿಲ್ಲರ್ ಕಥಾಹಂದರವಿರುವ ಈ ಸಿನಿಮಾದಲ್ಲಿ ಚಂದನ್ ಶೆಟ್ಟಿಗೆ ಪ್ರೇಮಿಯಾಗಿ ಲೀಡ್ ರೋಲ್‌ನಲ್ಲಿ ನಿವೇದಿತಾ ನಟಿಸಿದ್ದಾರೆ. ಇದನ್ನೂ ಓದಿ: ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ

    ಸಿನಿಮಾಗೆ ಪುನೀತ್ ಶ್ರೀನಿವಾಸ್ ಅವರು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಶ್ರೀ ಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ನಿರ್ಮಿಸಿದ್ದಾರೆ. ಶೂಟಿಂಗ್ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಅಭಿಮಾನಿಗಳಿಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.

    ಡಿವೋರ್ಸ್‌ಗೂ (Divorce) ಮುನ್ನ ಈ ಚಿತ್ರ ಸೆಟ್ಟೇರಿತ್ತು. ಆದರೆ ಕೆಲ ಭಾಗದ ಶೂಟಿಂಗ್ ಬಾಕಿ ಇದೆ ಎನ್ನುವಾಗ ಚಂದನ್ ಹಾಗೂ ನಿವೇದಿತಾ ತಮ್ಮ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟರು. ಆದರೆ ವೈಯಕ್ತಿಕ ಜೀವನದ ಏರಿಳಿತಗಳ ಪರಿಣಾಮ ತಮ್ಮ ವೃತ್ತಿಜೀವನದ ಮೇಲೆ ಬೀರದಂತೆ ನೋಡಿಕೊಂಡಿದ್ದಾರೆ. ಸಿನಿಮಾ ಮೇಲಿರುವ ಶ್ರದ್ಧೆಯಿಂದ ಬಾಕಿ ಉಳಿದಿದ್ದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗೆ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿ ಆಗಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

  • ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ

    ಲೈಫ್‌ಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿಯಾಗಿರೋಕೆ ತಂದೆಯೇ ಕಾರಣ- ನಿವೇದಿತಾ ಭಾವುಕ

    ‘ಬಿಗ್ ಬಾಸ್’ (Bigg Boss Kannada 5) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಶೋವೊಂದರಲ್ಲಿ ಜೀವನದಲ್ಲಿ ನಡೆದ ಸಂಕಷ್ಟದ ದಿನಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ ಎಂದು ನಿವೇದಿತಾ ಭಾವುಕರಾಗಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್‌ ಕ್ರಶ್‌ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್‌!

    ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಸ್ಪರ್ಧಿಯಾಗಿ ನಿವೇದಿತಾ ಆ್ಯಕ್ಟೀವ್ ಆಗಿದ್ದಾರೆ. ಡಿವೋರ್ಸ್ ಆದ್ಮೇಲೆ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಟಿ ಮಾತನಾಡಿದ್ದಾರೆ. ಈ ಶೋನಲ್ಲಿ ನಿವೇದಿತಾ ಹಾಗೂ ಧನರಾಜ್ ಆಚಾರ್ ಇಬ್ಬರೂ ತಂದೆ-ಮಗಳ ಬಾಂಧವ್ಯದ ಕುರಿತ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಆ ವೇಳೆ ನಿವೇದಿತಾ ಸಖತ್‌ ಎಮೋಷನಲ್‌ ಆಗಿ ಮಾತನಾಡಿದ್ದಾರೆ. ಇದನ್ನೂ ಓದಿ:L2: ಎಂಪುರಾನ್‌ ನಿರ್ದೇಶಕ ಪೃಥ್ವಿರಾಜ್‌ಗೆ ಐಟಿ ನೋಟಿಸ್‌ – ಸಂಭಾವನೆ ವಿವರ ನೀಡುವಂತೆ ಸೂಚನೆ

    ನನ್ನ ಲೈಫ್‌ನಲ್ಲಿ ಏನೇನೋ ಒಂದಷ್ಟು ಆದ್ಮೇಲೆ ನಾನು ಇಷ್ಟು ಗಟ್ಟಿ ಆಗಿರೋಕೆ ನನ್ನ ತಂದೆಯೇ ಕಾರಣ. ನಾನು ನಿನ್ನ ಜೊತೆಗೆ ಇದೀನಿ, ತಲೆ ಕೆಡಿಸಿಕೊಳ್ಳಬೇಡ ಅಂತ ಹೇಳುತ್ತಾರೆ. ಇದು ಅವರಿಗೆ ನಿಜಕ್ಕೂ ಕಷ್ಟ ಎಂದು ನಿವೇದಿತಾ ಅವರು ಹೇಳಿದ್ದಾರೆ. ನಿವೇದಿತಾ ಮಾತು ಕೇಳಿ ಐಶ್ವರ್ಯಾ, ಅನುಪಮಾ ಗೌಡ, ರಜತ್ ಕಣ್ಣೀರಿಟ್ಟಿದ್ದಾರೆ.

    ಆಗ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ನೆನಪಿರಲಿ ಪ್ರೇಮ್ ಮಾತನಾಡಿ, ಪ್ರಪಂಚದಲ್ಲಿ ತಂದೆ ಅನ್ನೋ ಜೀವನೇ ಹಾಗೆ. ವಿಶೇಷವಾಗಿ ಹೆಣ್ಣು ಮಕ್ಕಳು ಏನಾದರೂ ಕೇಳಿದಾಗ ಜೀವ ಬಿಟ್ಟು, ಏನು ಬೇಕಿದ್ರೂ ತಂದುಕೊಡ್ತಾರೆ ಎಂದು ಹೇಳಿದ್ದಾರೆ.

    ಡಿವೋರ್ಸ್‌ಗೂ ಮುನ್ನ ಒಪ್ಪಿಕೊಂಡಿದ್ದ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾವನ್ನು ಇತ್ತೀಚೆಗೆ ನಿವೇದಿತಾ ಗೌಡ ಮುಗಿಸಿಕೊಟ್ಟರು.

  • ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿದ ನಿವೇದಿತಾಗೆ ಕಾಲೆಳೆದ ನೆಟ್ಟಿಗರು

    ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿದ ನಿವೇದಿತಾಗೆ ಕಾಲೆಳೆದ ನೆಟ್ಟಿಗರು

    ‘ಬಿಗ್ ಬಾಸ್’ ಖ್ಯಾತಿಯ (Bigg Boss) ನಿವೇದಿತಾ ಗೌಡ (Niveditha Gowda) ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಟ್ರೋಲಿಗರ (Troll) ಕಾಟದ ನಡುವೆಯೂ ಹೊಸದೊಂದು ರೀಲ್ಸ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಬಾತ್‌ರೂಮ್‌ನಲ್ಲಿ ರೀಲ್ಸ್ ಮಾಡಿರೋ ನಿವೇದಿತಾಗೆ ನೆಟ್ಟಿಗರು ಕಾಲೆಳೆದಿದ್ದಾರೆ. ಇದನ್ನೂ ಓದಿ:ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಹೊಸ ರೀಲ್ಸ್ ಹಂಚಿಕೊಂಡ ನಿವೇದಿತಾ ಗೌಡ

    ಬ್ಲ್ಯಾಕ್ & ವೈಟ್ ಉಡುಗೆ ಧರಿಸಿ ರೀಲ್ಸ್‌ವೊಂದಕ್ಕೆ ನಿವೇದಿತಾ ಹೆಜ್ಜೆ ಹಾಕಿದ್ದಾರೆ. ಬೋಲ್ಡ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ರೀಲ್ಸ್ ಮಾಡಿದಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ನಿವೇದಿತಾ ಪೋಸ್ಟ್‌ಗೆ ಹರಿದು ಬರುತ್ತಿವೆ. ಮೊದಲು ನೀನು ರೀಲ್ಸ್ ಮಾಡೋದನ್ನು ಬಿಡಮ್ಮ ಎಂದೆಲ್ಲಾ ನಟಿಗೆ ನೆಟ್ಟಿಗರು ಟೀಕಿಸಿದ್ದಾರೆ. ಇದನ್ನೂ ಓದಿ:ಸಮಾಜ ಇರೋದೇ ಹೀಗೆ.. ಹೆಣ್ಣು ಮಕ್ಕಳನ್ನೇ ದೂಷಿಸ್ತಾರೆ – ಕೆಟ್ಟ ಟ್ರೋಲ್‌ ಬಗ್ಗೆ ನಿವಿ ಖಡಕ್‌ ಮಾತು


    ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಕೆಟ್ಟ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದರು. ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಮತ್ತಷ್ಟು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿಕೆ ನೀಡಿದ್ದರು.

    ಸದ್ಯ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಗೆ ನಾಯಕಿಯಾಗಿ ‘ಮುದ್ದು ರಾಕ್ಷಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸ್ಪರ್ಧಿಯಾಗಿದ್ದಾರೆ.

  • ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮಿನಿ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮಿನಿ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

    ‘ಬಿಗ್ ಬಾಸ್’ ಬೆಡಗಿ (Bigg Boss Kannada 5) ನಿವೇದಿತಾ ಗೌಡ (Niveditha Gowda) ಟ್ರೋಲ್‌ಗೆ ಡೋಂಟ್ ಕೇರ್ ಎನ್ನುತ್ತಾ ಮತ್ತೊಂದು ಬೋಲ್ಡ್ ಆಗಿರೋ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಮಿನಿ ಡ್ರೆಸ್ ಧರಿಸಿ ಮಿಂಚಿದ ನಿವೇದಿತಾ ಮೈಮಾಟಕ್ಕೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

    ಡಿವೋರ್ಸ್ (Divorce) ಬಳಿಕ ನಿವೇದಿತಾ ಮತ್ತಷ್ಟು ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ತಿದ್ದಾರೆ. ಸದಾ ಟ್ರೋಲಿಗರ ಬಾಯಿಗೆ ಆಹಾರವಾಗೋ ನಿವೇದಿತಾ ಮತ್ತೊಂದು ಬೋಲ್ಡ್ ವಿಡಿಯೋ ಹಂಚಿಕೊಂಡು ಪಡ್ಡೆಹುಡುಗರ ಹುಬ್ಬೇರುವಂತೆ ಮಾಡಿದ್ದಾರೆ.

    ಮಿನಿ ಡ್ರೆಸ್ ಧರಿಸಿ ನಿವೇದಿತಾ ಸೊಂಟ ಬಳುಕಿಸಿದ್ದಾರೆ. ರೀಲ್ಸ್‌ವೊಂದಕ್ಕೆ ಅವರು ಹೆಜ್ಜೆ ಹಾಕಿದ್ದಾರೆ. ಕ್ಯೂಟ್ ಆಗಿ ಕಾಣಿಸಿಕೊಂಡಿರೋ ನಿವಿನ ನೋಡಿ ಪಡ್ಡೆಹುಡುಗರು ಗೊಂಬೆ ಎಂದು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ:ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ

    ಇತ್ತೀಚೆಗೆ ಚಂದನ್ ಶೆಟ್ಟಿ ಜೊತೆಗಿನ ‘ಮುದ್ದು ರಾಕ್ಷಸಿ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ನಿವೇದಿತಾ ಕೆಟ್ಟ ಟ್ರೋಲ್‌ಗಳ ಬಗ್ಗೆ ಮಾತನಾಡಿದ್ದರು. ಈ ಸಮಾಜನೇ ಹೀಗೆ ಸದಾ ಹೆಣ್ಣು ಮಕ್ಕಳನ್ನ ದೂಷಿಸುತ್ತಾರೆ. ಎಷ್ಟಾದ್ರೂ ಸೊಸೈಟಿ ಬದಲಾಗಲ್ಲ ಹುಡುಗಿಯರನ್ನೇ ಬ್ಲೇಮ್ ಮಾಡುತ್ತಾರೆ. ಮಾತನಾಡೋಕೆ ಅವಕಾಶ ಇದೆ ಅಂತ ಮಾಡ್ತೀರಾ ಮಾಡಿ ಪರವಾಗಿಲ್ಲ. ನನಗೇನು ಬೇಜಾರಾಗಲ್ಲ, ನೋವು ಆಗಲ್ಲ, ನಾನು ಟ್ರೋಲ್ ಬಗ್ಗೆ ಕೇರ್ ಮಾಡಲ್ಲ. ಮತ್ತಷ್ಟು ಟ್ರೋಲ್ ಮಾಡಿ ಸುಮ್ಮನೆ ನೋಡ್ತೀನಿ ಅಷ್ಟೇ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ಬೋಲ್ಡ್ ಆಗಿ ನಿವೇದಿತಾ ಹೇಳಿಕೆ ನೀಡಿದ್ದರು.


    ಸದ್ಯ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿಗೆ (Chandan Shetty) ನಾಯಕಿಯಾಗಿ ‘ಮುದ್ದು ರಾಕ್ಷಸಿ’ (Muddu Rakshasi) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಕಿರುತೆರೆಯ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಸ್ಪರ್ಧಿಯಾಗಿದ್ದಾರೆ.

  • ಸಂಜನಾ ಆನಂದ್ ಜೊತೆಗಿನ 2ನೇ ಮದುವೆ ವದಂತಿಗೆ ತೆರೆ ಎಳೆದ ಚಂದನ್‌ ಶೆಟ್ಟಿ

    ಸಂಜನಾ ಆನಂದ್ ಜೊತೆಗಿನ 2ನೇ ಮದುವೆ ವದಂತಿಗೆ ತೆರೆ ಎಳೆದ ಚಂದನ್‌ ಶೆಟ್ಟಿ

    ರ‍್ಯಾಪರ್ ಚಂದನ್ ಶೆಟ್ಟಿ (Chandan Shetty) ಅವರು ನಿವೇದಿತಾ (Niveditha Gowda) ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ್ಮೇಲೆ ಸಂಜನಾ ಜೊತೆ ಹೆಸರು ಸದ್ದು ಮಾಡಿತ್ತು. ‘ಸಲಗ’ ನಟಿ ಸಂಜನಾ (Sanjana Anand) ಜೊತೆ ಚಂದನ್ 2ನೇ ಮದುವೆ ಆಗ್ತಾರೆ ಎಂದೇ ಸುದ್ದಿ ಹರಿದಾಡಿತ್ತು. ಅದಕ್ಕೆಲ್ಲಾ ಈಗ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಈ ಗಾಸಿಪ್‌ ಹೇಗೆ ಶುರುವಾಯ್ತು ಗೊತ್ತಿಲ್ಲ. ಈ  ವಿಚಾರ ಸುಳ್ಳು ಎಂದಿದ್ದಾರೆ.

    ಸಂಜನಾ ಆನಂದ್ ಜೊತೆ 2ನೇ ಮದುವೆ ಆಗ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿ ಬಗ್ಗೆ ಚಂದನ್ ಶೆಟ್ಟಿ ಮಾತನಾಡಿ, ಈ ರೀತಿ ಸುದ್ದಿ ಹರಿದಾಡೋದು ಕಾಮನ್. ಯಾರು ಗಾಸಿಪ್ ಶುರು ಮಾಡಿದ್ರು ಗೊತ್ತಿಲ್ಲ. ಈಗಿನ ಸೋಶಿಯಲ್ ಮೀಡಿಯಾ ಆ ರೀತಿ ಇದೆ. ಏನು ಮಾಡೋಕೆ ಆಗಲ್ಲ. ಯಾರೋ ಏನೋ ಒಂದು ಪೋಸ್ಟ್ ಹಾಕಿದ್ರೆ, ಅದನ್ನೇ ನಿಜ ಎಂದು ಜನ ನಂಬುತ್ತಾರೆ. ಆದರೆ ಈ ವಿಚಾರ ನನ್ನ ವೈಯಕ್ತಿಕ ಜೀವನಕ್ಕೆ ಅಷ್ಟಾಗಿ ಪರಿಣಾಮ ಬೀರಲಿಲ್ಲ. ಪಬ್ಲಿಕ್ ಫಿಗರ್ ಅಂದಾಗ ಹೀಗೆ ಸುದ್ದಿ ಹಬ್ಬೋದು ಕಾಮನ್, ಈ ವಿಚಾರ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ನಿರ್ದೇಶಕನ ಜೊತೆ ಶಾರುಖ್ ಖಾನ್ ಸಿನಿಮಾ

    ಇತ್ತ ಸಂಜನಾ ಆನಂದ್ ಕೂಡ ಮಾತನಾಡಿ, ಎಲ್ಲರೂ ಕಾಲ್ ಮಾಡಿ, ಚಂದನ್ ಜೊತೆ ಮದುವೆನಾ? ಎಂದೆಲ್ಲಾ ಕೇಳುತ್ತಿದ್ದರು. ಆ ರೀತಿ ನಮ್ಮ ನಡುವೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ‘ಸೂತ್ರಧಾರಿ’ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆ ಸಂಜನಾ ಸೊಂಟ ಬಳುಕಿಸಿದ್ದಾರೆ. ‘ಡ್ಯಾಶ್’ ಎಂಬ ಸ್ಪೆಷಲ್ ಹಾಡಿಗೆ ಅವರು ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ರಿಲೀಸ್ ಆಗ್ತಿದ್ದಂತೆ ಚಂದನ್ ಮತ್ತು ಸಂಜನಾ ಮದುವೆ ಆಗ್ತಾರೆ ಎಂದೆಲ್ಲಾ ಸುದ್ದಿ ಹಬ್ಬಿತ್ತು. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆಲ್ಲಾ ನಟ ಸ್ಪಷ್ಟನೆ ನೀಡಿದ್ದಾರೆ.

  • ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ: ಚಂದನ್ ಶೆಟ್ಟಿ ಸ್ಪಷ್ಟನೆ

    ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ: ಚಂದನ್ ಶೆಟ್ಟಿ ಸ್ಪಷ್ಟನೆ

    ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡಗೆ (Niveditha Gowda) ಮತ್ತೆ ಜೊತೆಯಾಗ್ತಾರಾ? ಎಂಬ ಅಭಿಮಾನಿಗಳ ಕುತೂಹಲಕ್ಕೆ ಚಂದನ್ ಶೆಟ್ಟಿ ಕ್ಲ್ಯಾರಿಟಿ ನೀಡಿದ್ದಾರೆ. ಇದು ಮಕ್ಕಳ ಆಟ ಅಲ್ಲ, ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ ಎಂದು ಚಂದನ್ (Chandan Shetty) ಹೇಳಿದ್ದಾರೆ. ಇದನ್ನೂ ಓದಿ:ಬ್ರೇಕಪ್ ಬೆನ್ನಲ್ಲೇ ಸಿನಿಮಾದಲ್ಲಿ ತಮನ್ನಾ ಆ್ಯಕ್ಟೀವ್- ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್

    ಡಿವೋರ್ಸ್ ಕುರಿತು ಎದುರಾದ ಪ್ರಶ್ನೆಗೆ ಚಂದನ್ ಪ್ರತಿಕ್ರಿಯಿಸಿ, ನಾವು ಡಿವೋರ್ಸ್ ಯಾಕೆ ತೆಗೆದುಕೊಂಡ್ವಿ ಎಂಬುದು ನಮ್ಮ ಪರ್ಸನಲ್ ವಿಚಾರ. ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿದ್ದೀನಿ. ಇದು ಮಕ್ಕಳ ಆಟ ಅಲ್ಲ, ಇಬ್ಬರೂ ಯೋಚಿಸಿ ಡಿವೋರ್ಸ್ ಪಡೆದಿದ್ದೇವೆ. ಅದು ಬಿಟ್ಟರೆ ಅವರಿಗೆ ಈಗ ಪಶ್ಚಾತ್ತಾಪ ಕಾಡ್ತಿಲ್ಲ. ಮತ್ತೆ ನಿವೇದಿತಾ ಜೊತೆ ಒಂದಾಗಲ್ಲ. ನಮ್ಮ ನಿರ್ಧಾರ ಸರಿಯಿದೆ ಎಂದಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾಗೆ ಕೆಟ್ಟ ಕಾಮೆಂಟ್ ಮಾಡಬೇಡಿ, ನಿಂದಿಸಬೇಡಿ ಎಂದು ಚಂದನ್ ಮಾತನಾಡಿದ್ದಾರೆ.

    ಇತ್ತೀಚೆಗೆ ಚಂದನ್ ನಟನೆಯ ಸಿನಿಮಾ ಸೆಟ್‌ನಲ್ಲಿ ನಿವೇದಿತಾ ಕಣ್ಣೀರಿಟ್ಟಿದ್ದರು. ಸಿನಿಮಾ ಸೀನ್ ಆಗಿದ್ದರೂ ನಿವೇದಿತಾ ನೈಜವಾಗಿ ನಟಿಸಿದ್ದರು. ಈ ಕುರಿತು ಮಾತನಾಡಿದ ಚಂದನ್, ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾ ಸೆಟ್‌ನಲ್ಲಿ ಸಿಕ್ಕಾಗ ನಿವೇದಿತಾ ಎಮೋಷನಲ್ ಆಗಲಿಲ್ಲ. ಅಲ್ಲೇ ಸೆಟ್‌ನಲ್ಲೇ ಅವರು ಕ್ಲ್ಯಾರಿಟಿ ನೀಡಿದ್ದಾರೆ. ಯಾವುದೇ ಸಿನಿಮಾ ಮುಗಿಯೋ ಟೈಮ್‌ನಲ್ಲಿ ಬೇಜರಾಗುತ್ತದೆ, ಅಳು ಬರುತ್ತದೆ ಎಂದು ನಿವೇದಿತಾ ಅಂದೇ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಾಗಿ ಎಮೋಷನಲಿ ಅವರಿಗೆ ನನ್ನೊಂದಿಗೆ ಯಾವುದೇ ರೀತಿಯ ಬಾಂಧವ್ಯವಿಲ್ಲ. ಇದೇ ಎಂದು ನನಗೂ ಕೂಡ ಅನಿಸಲಿಲ್ಲ. ಹಾಗೇ ಏನಾದರೂ ಇದ್ದಿದ್ರೆ ನಿವೇದಿತಾ ನೇರವಾಗಿ ನನಗೆ ಕರೆ ಮಾಡುತ್ತಿದ್ದರು. ಹಾಗೇನು ಅವರು ಮಾಡಲಿಲ್ಲ ಎಂದಿದ್ದಾರೆ.

    ಮತ್ತೆ ನಿವೇದಿತಾ ಜೊತೆ ಡಿವೋರ್ಸ್ (Divorce) ನಂತರ ನಟಿಸಿದ್ದು ಎಮೋಷನಲಿ ಸ್ವಲ್ಪ ಕಷ್ಟವಾಯಿತು. ಪರ್ವಾಗಿಲ್ಲ, ಸಿನಿಮಾಗಾಗಿ ಮಾಡಬೇಕಾಗುತ್ತದೆ ಎಂದರು ಚಂದನ್ ಶೆಟ್ಟಿ.