Tag: ನಿವೃತ್ತ ಯೋಧ

  • ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

    ಹನಿಟ್ರ್ಯಾಪ್ – ನಾಪತ್ತೆಯಾಗಿದ್ದ ನಿವೃತ್ತ ಯೋಧನ ಮೃತದೇಹ ಪಂಪಿನ ಕೆರೆಯಲ್ಲಿ ಪತ್ತೆ

    ಮಡಿಕೇರಿ: ವಿವಾಹಿತ ಮಹಿಳೆಯಿಂದ ಹಾನಿಟ್ಯ್ರಾಪ್‌ಗೆ (Honeytrap) ಒಳಗಾದ ನಿವೃತ್ತ ಯೋಧ (Retired Soldier) ಡೆತ್ ನೋಟ್ ಬರೆದಿಟ್ಟು ಮಂಗಳವಾರ ರಾತ್ರಿಯಿಂದ ನಾಪತ್ತೆಯಾಗಿದ್ದರು. ಅವರ ಮೃತದೇಹ ಇದೀಗ ಅವರ ಮನೆ ಸಮೀಪದ ಪಂಪಿನ ಕೆರೆಯಲ್ಲಿ ಪತ್ತೆಯಾಗಿದೆ.

    ಮೃತ ಮಾಜಿ ಯೋಧನನ್ನು ಸಂದೇಶ್ ಎಂದು ಗುರುತಿಸಲಾಗಿದೆ. ಮಾಜಿ ಯೋಧ ಕಣ್ಮರೆಯಾಗಿ 30 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಬುಧವಾರ ರಾತ್ರಿ 8:20 ರ ಸುಮಾರಿಗೆ ಕೆರೆಯ 40 ಆಡಿ ಆಳದಲ್ಲಿ ಸಂದೇಶ್ ಮೃತದೇಹ ಪತ್ತೆಯಾಗಿದೆ.

    ಬೆಳಗ್ಗೆಯಿಂದಲೂ ಅಗ್ನಿಶಾಮಕ ದಳ, ಸ್ಥಳೀಯರು ಕೆರೆಯಲ್ಲಿ ಹುಡುಕಾಟ ನಡೆಸಿದ್ದರು. ಯಾವುದೇ ಪ್ರಯೋಜನ ಆಗದೇ ಇದ್ದ ಸಂದರ್ಭದಲ್ಲಿ ಮಲ್ಪೆಯ ಹೆಸರಾಂತ ಮುಳುಗು ತಜ್ಞ ಈಶ್ವರ್ ಮತ್ತು ತಂಡದವರನ್ನು ಕರೆಸಿ ಮೃತದೇಹದ ಶೋಧ ಕಾರ್ಯವನ್ನು ಮಾಡಲಾಗಿತ್ತು. 1 ಗಂಟೆಗೂ ಅಧಿಕ ಕಾಲ ಕರೆಯಲ್ಲಿ ಆಕ್ಸಿಜನ್‌ನೊಂದಿಗೆ ಶೋಧ ಕಾರ್ಯ ನಡೆಸಲಾಗಿದ್ದು, ಈ ವೇಳೆ ಮಾಜಿ ಯೋಧನ ಮೃತ ದೇಹ ಪತ್ತೆಯಾಗಿದೆ. ಇದನ್ನೂ ಓದಿ: ಬಸ್‌ಗಳ ನಡುವೆ ಭೀಕರ ಅಪಘಾತ – ಮಿನಿ ಬಸ್ ಛಿದ್ರ

    ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದ ಮಾಜಿ ಸೈನಿಕ ಸಂದೇಶ್ ತನ್ನ ಸಾವಿಗೆ ಜೀವಿತ, ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾರ್ಟ್ ಮಾಲೀಕ ಸತ್ಯ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟು ಮಂಗಳವಾರ ಸಂಜೆ ಪಂಪಿನ ಕೆರೆಗೆ ಹಾರಿದ್ದರು.

    ಇದೀಗ ಡೆತ್‌ನೋಟ್ ಆಧರಿಸಿ ಮಡಿಕೇರಿ ನಗರ ಠಾಣೆಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಮಾರ್ಗದರ್ಶನದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳಿಂದ ಪ್ರಕರಣದ ವಿವಿಧ ಆಯಾಮಗಳ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ. ಇದನ್ನೂ ಓದಿ: ಸೌಜನ್ಯ ರೇಪ್ & ಮರ್ಡರ್ ಕೇಸ್- ಸಂತೋಷ್ ರಾವ್‍ನೇ ಆರೋಪಿ ಅಂತಾ ಮೇಲ್ಮನವಿ ಸಲ್ಲಿಸಿದ ಸಿಬಿಐ

  • ವಿವಾಹಿತೆಯಿಂದ ಹನಿಟ್ರ್ಯಾಪ್ – ಡೆತ್‍ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ

    ವಿವಾಹಿತೆಯಿಂದ ಹನಿಟ್ರ್ಯಾಪ್ – ಡೆತ್‍ನೋಟ್ ಬರೆದಿಟ್ಟು ನಿವೃತ್ತ ಯೋಧ ನಾಪತ್ತೆ

    ಮಡಿಕೇರಿ: ಮಹಿಳೆಯೊಬ್ಬಳಿಂದ ಹನಿಟ್ರ್ಯಾಪ್‍ಗೊಳಗಾಗಿ (Honeytrap) ನಿವೃತ್ತ ಯೋಧನೊಬ್ಬ (Retired Soldier) ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾದ ಘಟನೆ ನಗರದ (Madikeri) ಉಕ್ಕುಡ ಎಂಬಲ್ಲಿ ನಡೆದಿದೆ.

    ನಾಪತ್ತೆಯಾದ ನಿವೃತ್ತ ಯೋಧನನ್ನು ಸಂದೇಶ್ (40) ಎಂದು ಗುರುತಿಸಲಾಗಿದೆ. ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ರೈಲಿನ ಮೇಲೆ ಬಿದ್ದ ಕಾರು – ಮೂವರು ಸಾವು, ಇಬ್ಬರಿಗೆ ಗಾಯ

    ಸಂದೇಶ್ ಫೇಸ್‍ಬುಕ್‍ನಲ್ಲಿ ಪರಿಚಯವಾದ ವಿವಾಹಿತ ಮಹಿಳೆಯೊಬ್ಬಳ ಸ್ನೇಹಕ್ಕೆ ಬಿದ್ದು ಆಕೆಯಿಂದಲೇ ಹನಿಟ್ರ್ಯಾಪ್‍ಗೆ ಒಳಗಾಗಿದ್ದಾನೆ. ಆಕೆಯ ಕಾಟ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ್ ಡೆತ್‍ನೋಟ್ ಬರೆದಿಟ್ಟಿದ್ದಾನೆ. ಮಂಗಳವಾರದಿಂದ ಕೆರೆಯಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ನ್ಯಾಯ ಕೊಡಿಸುವಂತೆ ಸಂದೇಶ್ ಪತ್ನಿ ಕಣ್ಣೀರು ಹಾಕಿದ್ದಾಳೆ.

    ಈ ಸಂಬಂಧ ಮಡಿಕೇರಿ ನಗರ ಪೊಲೀಸ್‌ (Police) ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುರುಘಾಶ್ರೀಗೆ ಜೈಲಾ? ಬೇಲಾ? ಇಂದು ಹೈಕೋರ್ಟ್ ನಿರ್ಧಾರ

  • 5,499 ರೂ. ಸ್ಪೀಕರ್‌ ಬುಕ್‌ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ

    5,499 ರೂ. ಸ್ಪೀಕರ್‌ ಬುಕ್‌ ಮಾಡಿ 1 ಲಕ್ಷ ರೂ. ಕಳೆದುಕೊಂಡ ನಿವೃತ್ತ ಯೋಧ

    ಬೆಂಗಳೂರು: ನಿವೃತ್ತ ಯೋಧರೊಬ್ಬರಿಂದ (Retire Soldier) ಹಂತ ಹಂತವಾಗಿ 1 ಲಕ್ಷ ರೂ. ಹಣ ಹಾಕಿಸಿಕೊಂಡು ಯಾಮಾರಿಸಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಮಹೇಶ್‌ ವಂಚನೆಗೊಳಗಾದ ನಿವೃತ್ತ ಯೋಧ. ಮೋಸ ಮಾಡಲೆಂದೇ ವಂಚಕ MOSA1122@SBI ಯುಪಿಐ ಐಡಿ ಮಾಡಿದ್ದ. ಫೋನ್ ಮಾಡಿ ಅಕೌಂಟ್ ಚೆಕ್ ಮಾಡು ಅಂತ ಹೇಳಿದ್ದ. ಬ್ಯಾಂಕ್ ಅಪ್ಲಿಕೇಶನ್ ಓಪನ್ ಮಾಡ್ತಿದ್ದಂತೆ ಹಣ ಮಂಗಮಾಯವಾಗಿದೆ. ಇದನ್ನೂ ಓದಿ: ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ: ವಿವಾದಿತ ಹೇಳಿಕೆ ನೀಡಿದ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ

    ನಿವೃತ್ತ ಯೋಧ 5,499 ರೂ. ಮೌಲ್ಯದ ಸ್ಪೀಕರ್ ಬುಕ್ ಮಾಡಿದ್ದರು. ನಂತರ ಬುಕ್ಕಿಂಗ್ ಕ್ಯಾನ್ಸಲ್ ಆಗಿತ್ತು. ಮೂರು ದಿನದಲ್ಲಿ ನಿಮ್ಮ ಖಾತೆಗೆ ಹಣೆ ಜಮೆ ಆಗುತ್ತೆ ಅನ್ನೋ ಸಂದೇಶ ಕೂಡ ಬಂದಿತ್ತು. ಹಣ ಜಮೆ ಆಗದಿದ್ದಾಗ ಮಹೇಶ್‌ ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ ಹುಡುಕಿದ್ದರು.

    ಕರೆ ಮಾಡಿದ ಬಳಿಕ ಮತ್ತೊಂದು ನಂಬರ್‌ನಿಂದ ವಂಚಕ ಕರೆ ಮಾಡಿದ್ದ. RUSKDESK ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಓಕೆ ಬಟನ್ ಪ್ರೆಸ್ ಮಾಡುವಂತೆ ಹೇಳಿದ್ದ. ತಕ್ಷಣಕ್ಕೆ ಅಕೌಂಟ್‌ನಿಂದ 81 ಸಾವಿರ ಹಣ ಕಡಿತಗೊಂಡಿದೆ. ಮತ್ತೆ ಕರೆ ಮಾಡಿ ವಿಚಾರಿಸಿದಾಗ ತಪ್ಪಾಗಿ ನಂಬರ್ ಟೈಪ್ ಮಾಡಿದ್ದೀರಿ ಎಂದಿದ್ದ ವಂಚಕ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ AI ಕ್ಯಾಮೆರಾ – ಇಷ್ಟಬಂದಂತೆ ವಾಹನ ಚಲಾಯಿಸಿದ್ರೆ ಬೀಳುತ್ತೆ ದಂಡ

    ಹಣ ನಿಮ್ಮ ಖಾತೆಗೆ ಬರುತ್ತೆ ಎಂದು ಪದೇ ಪದೆ ಅಕೌಂಟ್ ಪರೀಕ್ಷಿಸಲು ಹೇಳುತ್ತಿದ್ದ. ಹಂತ ಹಂತವಾಗಿ 1 ಲಕ್ಷ ರೂ. ಹಣ ಅಕೌಂಟ್‌ನಿಂದ ಮಾಯವಾಗಿದೆ. ನಿವೃತ್ತ ಯೋಧ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ

    ಕುಡಿದ ಮತ್ತಿನಲ್ಲಿ ಫುಟ್‌ಪಾತ್‌ ಮೇಲೆ ಚಲಾಯಿಸಿದ ಚಾಲಕ – ಅಪಘಾತಕ್ಕೆ ನಿವೃತ್ತ ಯೋಧ ಬಲಿ

    ಬೆಂಗಳೂರು: (Bengaluru) ನಗರದಲ್ಲಿ ತಡರಾತ್ರಿ ಭೀಕರ ರಸ್ತೆ ಅಪಘಾತದಿಂದಾಗಿ ನಿವೃತ್ತ ಯೋಧರೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಪಾದಾಚಾರಿಗಳು ಗಾಯಗೊಂಡಿರುವ ಘಟನೆ ನಡೆದಿದೆ.

    ನಿವೃತ್ತ ಯೋಧ ರವಿಶಂಕರ್‌ (59) ಮೃತರು ಎಂದು ಗುರುತಿಸಲಾಗಿದೆ. ಹೋಟೆಲ್‌ ಬಳಿ ನಿಂತಿದ್ದ ಪಾದಾಚಾರಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಓಲಾ, ಉಬರ್, ರ್‍ಯಾಪಿಡೋ ಸುಲಿಗೆ- ಪ್ರಯಾಣಿಕರಿಗೂ ಬ್ಲೇಡ್, ಚಾಲಕರಿಗೂ ಕತ್ತರಿ

    ಏರ್ಪೋರ್ಟ್ ರಸ್ತೆ ಸಮೀಪದ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಕಾರು ಚಾಲಕ ಪೂವಯ್ಯ ಫುಟ್‌ಪಾತ್‌ ಮೇಲೆ ಕಾರು ಚಲಾಯಿಸಿದ್ದಾನೆ. ಈ ವೇಳೆ ಫುಟ್‌ಪಾತ್‌ ಮೇಲೆ ನಿಂತಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

    ಹೋಟೆಲ್ ಸಿಬ್ಬಂದಿ ರಾಘವೇಂದ್ರ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ನಿವೃತ್ತ ಯೋಧ ರವಿಶಂಕರ್ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ನಮ್ಮ ದೇಶದಲ್ಲಿ ಯಾವುದರಿಂದ್ಲೂ ಧರ್ಮವನ್ನು ಹೊರಗೆ ತೆಗೆಯೋಕೆ ಆಗಲ್ಲ: ಬಿ.ಎಲ್ ಸಂತೋಷ್

    Live Tv
    [brid partner=56869869 player=32851 video=960834 autoplay=true]

  • ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

    ಹಾವೇರಿ: ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಊರಿಗೆ ಮರಳಿದ ನಿವೃತ್ತ ಯೋಧನಿಗೆ ಗ್ರಾಮದ ಜನರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಹಾವೇರಿ ತಾಲೂಕು ಚಿಕ್ಕಲಿಂಗದಹಳ್ಳಿ ಗ್ರಾಮದ ಉಳಿವೆಪ್ಪ ಕಿವುಡೇರ ಹದಿನೇಳು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶ ಸೇವೆ ಮಾಡಿದ್ದಾರೆ. ಜಮ್ಮು ಕಾಶ್ಮೀರ, ಪಂಜಾಬ್ ಹರಿಯಾಣ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯಾಗಿ ಇಂದು ಊರಿಗೆ ಮರಳಿದ್ದಾರೆ.

    ಚಿಕ್ಕಲಿಂಗದಹಳ್ಳಿ ಗ್ರಾಮದ ಜನರು ತೆರೆದ ವಾಹನದಲ್ಲಿ ನಿವೃತ್ತ ಯೋಧನನ್ನ ಮೆರವಣಿಗೆ ಮಾಡಿದರು. ಹಾವೇರಿ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಯೋಧನಿಗೆ ಮಾಲಾರ್ಪಣೆ ಮಾಡಿದರು. ಗ್ರಾಮದ ಯುವಕರು ಹಾಗೂ ಜನರು ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಿಂದ ತೆರೆದ ವಾಹನದ ಮೂಲಕ ಮೆರವಣಿಗೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡರು. ಡೊಳ್ಳು ಭಾರಿಸುತ್ತಾ ಪಟಾಕಿ ಸಿಡಿಸಿ ದೇಶ ಸೇವೆ ಮಾಡಿದ ಯೋಧ ಉಳಿವೆಪ್ಪನ್ನ ಅದ್ಧೂರಿಯಾಗಿ ಸ್ವಾಗತಿಸಿದರು.

  • ಗ್ರಾಮಸ್ಥರಿಂದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

    ಗ್ರಾಮಸ್ಥರಿಂದ ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

    ಹಾವೇರಿ: ಸತತವಾಗಿ 17 ವರ್ಷಗಳ ಕಾಲ ದೇಶ ಸೇವೆ ಮುಗಿಸಿ ನಿವೃತ್ತಿಯಾದ ಯೋಧನನ್ನು ಅದ್ಧೂರಿಯಾಗಿ ಮೆರವಣಿಗೆ ನಡೆಸಿ ಗ್ರಾಮಸ್ಥರು ಬರಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೇರೂರು ಗ್ರಾಮದಲ್ಲಿ ನಡೆದಿದೆ.

    ಯೋಧ ಮಹೇಶ್ ಬಣಕಾರ 17 ವರ್ಷಗಳ ಆರ್ಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ, ಜಮ್ಮುಕಾಶ್ಮೀರ ಸೇರಿದಂತೆ ವಿವಿಧ ಗಡಿಭಾಗದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಇವತ್ತು ನಿವೃತ್ತಿ ಹೊಂದ ಸ್ವ-ಗ್ರಾಮಕ್ಕೆ ಆಗಮಿಸಿದ್ದಾರೆ.

    ಹಾವೇರಿ ನಗರ ಮತ್ತು ಹೇರೂರು ಗ್ರಾಮದಲ್ಲಿ ಯೋಧ ಮಹೇಶವರನ್ನ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು. ಅಭಿಮಾನಿಗಳು ಹಾಗೂ ದೇಶಾಭಿಮಾನಿಗಳು ಹಾರ ಹಾಗೂ ಸನ್ಮಾನಿಸಿ ಸ್ವಾಗತ ಮಾಡಿಕೊಂಡರು. ವಾದ್ಯ ಮೇಳಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಿ ಜಿಲ್ಲೆಯ ಯೋಧನನ್ನ ಆತ್ಮೀಯವಾಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

  • ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಯಲವಿಗಿ ಜನತೆ

    ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ ಕೋರಿದ ಯಲವಿಗಿ ಜನತೆ

    ಹಾವೇರಿ: ಸುಮಾರು ಇಪ್ಪತ್ತು ವರ್ಷಗಳ ಕಾಲ ಭಾರತಾಂಬೆಯ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮಕ್ಕೆ ಆಗಮಿಸಿದ ವೀರಯೋಧ ನಾಗರಾಜ ನಾಗಪ್ಪನವರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

    ನಾಗರಾಜ ನಾಗಪ್ಪನವರ್ ಅವರು ತಮ್ಮ 18 ವರ್ಷದ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ್ದು,ಬಳಿಕ ಮತ್ತೆ ಎರಡು ವರ್ಷ ಹೆಚ್ಚಿನ ಸೇವೆಯನ್ನು ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದರು. ಈ ಹಿನ್ನೆಲೆಯಲ್ಲಿ ಯಲವಿಗಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕೇಕ್ ಕತ್ತರಿಸಿ ನಿವೃತ್ತ ಯೋಧನಿಗೆ ವಿಶೇಷ ಗೌರವ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ವೀರಯೋಧ ನಾಗರಾಜ್, ದೇಶ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಹೆತ್ತ ತಾಯಿಯ ಹಾಗೂ ಭೂಮಿತಾಯಿಯ ಋಣ ತೀರಿಸಲು ಸಿಕ್ಕಿರುವ ಅವಕಾಶವಾಗಿದ್ದು, ನಿಜಕ್ಕೂ ನನಗೆ ನನ್ನ ದೇಶ ಸೇವೆ ಖುಷಿ ತಂದಿದೆ ಎಂದರು.

    ಮುಖ್ಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ನಿವೃತ್ತಿ ನಂತರವೂ ಕಾರ್ಯನಿರ್ವಹಿಸಿದ್ದೇನೆ. ನಮ್ಮ ಊರಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಎಲ್ಲೆಡೆಯೂ ಯೋಧರಿಗೆ ಗೌರವ ಸಲ್ಲಿಸುತ್ತಾರೆ. ಇದರಿಂದ ಯೋಧನ ಸೇವೆಗೆ ಸಿಕ್ಕ ಒಂದು ಗೌರವವಾಗಿದೆ ಎಂದು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ ಗ್ರಾಮಸ್ಥರಿಗೆ ಧನ್ಯವಾದ ತಿಳಿಸಿದರು.

  • ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

    ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

    ಮಡಿಕೇರಿ: ಕೊರೊನಾ ಆತಂಕದಿಂದ ಮನೆಯಲ್ಲೇ ಇದ್ದ ನಿವೃತ್ತ ಯೋಧ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೋಣಕೆರೆಯಲ್ಲಿ ನಡೆದಿದೆ.

    ಚೋಣಕೆರೆಯ ಗ್ರಾಮದ 74 ವರ್ಷದ ಉತ್ತಯ್ಯ ಆತ್ಮಹತ್ಯೆಗೆ ಶರಣಾದ ನಿವೃತ್ತ ಯೋಧ. ತಮ್ಮ ಮನೆಯ ಮಲಗುವ ಕೋಣೆಯಲ್ಲೇ ಸ್ವತಃ ತಾವೇ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉತ್ತಯ್ಯ ಹಲವು ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದರಿಂದಾಗಿಯೇ ಮನೆಯಲ್ಲಿದ್ದ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಪಿಐ ದಿವಾಕರ್ ಮತ್ತು ನಾಪೋಕ್ಲು ಠಾಣೆ ಎಸ್‍ಐ ಕಿರಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಸ್ತಿಗಾಗಿ ಅಪ್ಪನನ್ನೇ ಹೊರ ಹಾಕಿದ ಮಗ- ಬೀದಿಯಲ್ಲಿ ನಿವೃತ್ತ ಯೋಧ

    ಆಸ್ತಿಗಾಗಿ ಅಪ್ಪನನ್ನೇ ಹೊರ ಹಾಕಿದ ಮಗ- ಬೀದಿಯಲ್ಲಿ ನಿವೃತ್ತ ಯೋಧ

    ಚಿಕ್ಕಮಗಳೂರು: ಆಸ್ತಿಗಾಗಿ ಮಗನೇ ಹೆತ್ತ ತಂದೆಯನ್ನು ಮನೆಯಿಂದ ಹೊರ ಹಾಕಿದ್ದು, ನಿವೃತ್ತ ಯೋಧ ತಿನ್ನೋಕೆ ಅನ್ನವಿಲ್ಲದೆ, ಮಲಗೋಕೆ ಸೂರಿಲ್ಲದೆ ಪಾಳುಬಿದ್ದ ಬಸ್ ನಿಲ್ದಾಣದಲ್ಲೇ ಬದುಕುವಂತಾಗಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಮಲಪುರದಲ್ಲಿ ಘಟನೆ ನಡೆದಿದ್ದು, ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಾಮಪ್ಪ(77) ಅವರು ತಿನ್ನೋಕೆ ಅನ್ನವಿಲ್ಲದೆ, ಮಲಗೋಕೆ ಸೂರಿಲ್ಲದೆ ಪಾಳುಬಿದ್ದ ಬಸ್ ನಿಲ್ದಾಣದಲ್ಲಿ ಬದುಕುತ್ತಿದ್ದಾರೆ. ರಾಮಪ್ಪ ಅವರು ಕೊಪ್ಪದ ಬಸ್ ನಿಲ್ದಾಣದಲ್ಲಿ ನಿರ್ಗತಿಕನಂತೆ ಬದುಕುತ್ತಿದ್ದು, ತಾವೇ ಕಟ್ಟಿದ ಮನೆಯಲ್ಲಿ ತನಗೇ ಆಶ್ರಯ ಸಿಗದೆ ಕೊಪ್ಪದ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಮಲಗುತ್ತಿದ್ದಾರೆ. ಅಲ್ಲದೆ ಸಮೀಪದ ಮುಸುರೇ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿ-ಇಲ್ಲಿ ಊಟ-ತಿಂಡಿ ಮಾಡಿ ದಿನ ದೂಡುತ್ತಿದ್ದಾರೆ.

    ಮಾಜಿ ಸೈನಿಕ ರಾಮಪ್ಪ ಅವರು 1965ರ ಪಾಕಿಸ್ತಾನ ಹಾಗೂ 1971ರ ಬಾಂಗ್ಲಾ ವಿರುದ್ಧದ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ. 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದಿದ್ದಾರೆ. ಇಂದು ತನ್ನದೇ ಮನೆಯಲ್ಲಿ ಊಟಕ್ಕೂ ಗತಿ ಇಲ್ಲದೆ, ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿದ್ದಾರೆ. ಮಗ ಮನೆಯಿಂದ ಹೊರಹಾಕಿದ ಮೇಲೆ ರಾಮಪ್ಪ ಹರಿಹರಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಬಳಿಕ ಕೊಪ್ಪ ತಹಶೀಲ್ದಾರರಿಗೂ ದೂರು ನೀಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.

    ನನ್ನ ಮಗ-ಸೊಸೆ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ನಾನು ಕಟ್ಟಿದ ಮನೆಯಲ್ಲೇ ನನ್ನನ್ನು ಇರಲು ಬಿಡದೆ ಹೊರ ಹಾಕಿದ್ದಾರೆ. ಇಬ್ಬರೂ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗೋಗರೆದಿದ್ದಾರೆ. ನನ್ನ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹಾರ್ಟ್ ಆಪರೇಶನ್ ಆಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಯವಿಟ್ಟು ನನ್ನ ಮನೆಯನ್ನು ನನಗೆ ಕೊಡಿಸಿ ಎಂದು ತಹಶೀಲ್ದಾರರಿಗೆ ದೂರು ನೀಡಿದ್ದಾರೆ. ಇದು ಸಾಂಸಾರಿಕ ಜಗಳ, ಇಲ್ಲಿ ತಪ್ಪು ನಿವೃತ್ತ ಸೈನಿಕ ರಾಮಪ್ಪರದ್ದೋ ಅಥವಾ ಮಗ ರಾಜಶಂಕರನದ್ದೋ ಗೊತ್ತಿಲ್ಲ. ಆದರೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ಹೋರಾಡಿದ ಸೈನಿಕನೋರ್ವ ಹೀಗೆ ಮನೆ-ಮಠ, ಊಟ-ತಿಂಡಿ ಇಲ್ಲದೆ ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿರುವುದು ನೋವಿನ ಸಂಗತಿಯಾಗಿದೆ.

  • ದಂಪತಿಯನ್ನ ಹಾರೆಯಿಂದ ಬರ್ಬರವಾಗಿ ಕೊಲೆಗೈದ ಪಾಪಿ

    ದಂಪತಿಯನ್ನ ಹಾರೆಯಿಂದ ಬರ್ಬರವಾಗಿ ಕೊಲೆಗೈದ ಪಾಪಿ

    ಮಂಗಳೂರು: ಹಾಡಹಗಲೇ ನಿವೃತ್ತ ಸೈನಿಕ ಹಾಗೂ ಆತನ ಪತ್ನಿಯನ್ನ ಹಾರೆಯಿಂದ ಬರ್ಬರವಾಗಿ ಕೊಲೆಗೈದ ಅಮಾನವೀಯ ಘಟನೆ ನಗರ ಹೊರವಲಯದ ಕಿನ್ನಿಗೋಳಿ ಏಳಿಂಜೆಯಲ್ಲಿ ನಡೆದಿದೆ.

    ನಿವೃತ್ತ ಯೋಧ ವಿನ್ಸೆಂಟ್ ಡಿಸೋಜ (48) ಹಾಗೂ ಪತ್ನಿ ಹೆಲಿನ್ ಡಿಸೋಜ (43) ಹತ್ಯೆಗೊಳಗಾದವರು. ನೆರೆ ಮನೆಯ ಅಲ್ಪನ್ಸ್ ಸಲ್ಡಾ (51) ಕೊಲೆಗೈದ ಆರೋಪಿ.

    ವಿನ್ಸೆಂಟ್ ಡಿಸೋಜ ಪ್ರಸ್ತುತ ವಿದೇಶಿ ಹಡಗಿನಲ್ಲಿ ಕೆಲಸ ಮಾಡುತ್ತಿದ್ದರು. ವಿನ್ಸೆಂಟ್ ಹಾಗೂ ಅಲ್ಪನ್ಸ್ ಸಲ್ಡಾ ನೆರೆಮನೆಯವರಾಗಿದ್ದು,  ಎರಡೂ ಮನೆಗಳ ಕಾಂಪೌಂಡ್ ಗೋಡೆಗೆ ಮರ ತಾಗಿಕೊಂಡಿತ್ತು. ಹೀಗಾಗಿ ಇಬ್ಬರ ಮಧ್ಯೆ ಕಳೆದ ಕೆಲವು ದಿನಗಳಿಂದ ಗಲಾಟೆ ನಡೆದಿತ್ತು. ಇಂದು ಕೂಡ ಇದೇ ವಿಚಾರವಾಗಿ ಆರಂಭವಾದ ಜಗಳದಲ್ಲಿ ಕೋಪಗೊಂಡ ಅಲ್ಪನ್ಸ್ ಸಲ್ಡಾ ಚಾಕು, ಪಿಕ್ಕಾಸು ಹಾಗೂ ಹಾರೆಯಿಂದ ಹಲ್ಲೆ ನಡೆಸಿದ್ದಾನೆ.

    ಗಂಭೀರವಾಗಿ ಗಾಯಗೊಂಡಿದ್ದ ವಿನ್ಸೆಂಟ್ ಡಿಸೋಜ ಸ್ಥಳದಲ್ಲೇ ಸಾವನ್ನಪಿದ್ದರೆ, ಪತ್ನಿ ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.  ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷಾ, ಪಣಂಬೂರು ಎಸಿಪಿ ಬೆಳ್ಳಿಯಪ್ಪ ಸೇರಿದಂತೆ ಮುಲ್ಕಿ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.