Tag: ನಿವೃತ್ತ ನ್ಯಾಯಾಧೀಶ

  • ಲಂಚ ಆರೋಪ – ಹೈಕೋರ್ಟ್ ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

    ಲಂಚ ಆರೋಪ – ಹೈಕೋರ್ಟ್ ನಿವೃತ್ತ ಜಡ್ಜ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

    ಲಕ್ನೋ: ಖಾಸಗಿ ವೈದ್ಯಕೀಯ ಕಾಲೇಜೊಂದರ ಪರವಾಗಿ ತೀರ್ಪು ನೀಡುವುದಕ್ಕೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾರಾಯಣ್ ಶುಕ್ಲಾ ಅವರ ವಿರುದ್ಧ ಸಿಬಿಐ ಚಾರ್ಜ್‍ಶೀಟ್ ಸಲ್ಲಿಸಿದೆ.

    ಶುಕ್ಲಾ, ಚಂಡೀಗಢ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಐ.ಎಂ.ಖುದ್ದಿಸಿ ಸೇರಿದಂತೆ ಇತರೆ ಮೂವರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗಿದೆ. ಎಫ್‍ಐಆರ್‌ನಲ್ಲಿ ಉಲ್ಲೇಖಿಸಿರುವ ಆರೋಪಗಳನ್ನು ಸಾಕ್ಷ್ಯಗಳ ಮೂಲಕ ದೃಢಪಡಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಶೀಘ್ರವೇ 1 ನಿಮಿಷದ ಸ್ಟೋರಿ ಹಾಕಬಹುದು!

    ಇದು 2017ರ ಪ್ರಕರಣಕ್ಕೆ ಸಂಬಂಧಿಸಿದ ವಿಷಯವಾಗಿದೆ. 2019ರ ಡಿಸೆಂಬರ್‌ನಲ್ಲಿ ದಾಖಲಾಗಿದ್ದ ಎಫ್‍ಐಆರ್‌ನಲ್ಲಿ, ಆಗ ನ್ಯಾಯಾಧೀಶರಾಗಿದ್ದ ಶುಕ್ಲಾ ಅವರನ್ನು ಸೇರಿ ಇತರ ಆರು ಮಂದಿಯನ್ನು ಆರೋಪಿಗಳೆಂದು ಘೋಷಿಸಲಾಗಿತ್ತು.

    ಪ್ರಸಾದ್ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಪ್ರಸಾದ್ ಎಜುಕೇಷನ್ ಟ್ರಸ್ಟ್ (ಪಿಇಟಿ)ನಿಂದ ನಡೆಯುತ್ತಿತ್ತು. ಬಿ.ಪಿ.ಯಾದವ್, ಪ್ರಸಾದ್ ಯಾದವ್, ಸುಧೀರ್ ಗಿರಿ ಅವರ ಒಡೆತನದ ಸಂಸ್ಥೆ ಇದಾಗಿತ್ತು. ಸೌಲಭ್ಯಗಳ ಕೊರತೆಯಿಂದಾಗಿ ಎರಡು ವರ್ಷಗಳ ಕಾಲವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ 46 ಕಾಲೇಜುಗಳಿಗೆ 2017ರಲ್ಲಿ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿತ್ತು. ಆ ಕಾಲೇಜುಗಳ ಪೈಕಿ ಪ್ರಸಾದ್ ವೈದ್ಯಕೀಯ ವಿಜ್ಞಾನ ಸಂಸ್ಥೆಯೂ ಸೇರಿತ್ತು. ಇದನ್ನೂ ಓದಿ: ಪ್ರಧಾನಿ ಮೋದಿಗೆ ಭೂತಾನ್‍ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಗೌರವ

    ಸರ್ಕಾರದ ಆದೇಶವನ್ನು ಪ್ರಶ್ನಿಸಿ ಕಾಲೇಜು, ಸುಪ್ರೀಂ ಕೋರ್ಟ್ ಮೊರೆ ಹೋಯಿತು. ಕಾಲೇಜು ಪರಿಕರಗಳನ್ನು ಪುನಃ ಪರಿಶೀಲಿಸಲು ನಿರ್ದೇಶಿಸುವಂತೆ ಕೋರ್ಟ್‍ಗೆ ಮನವಿ ಮಾಡಿತ್ತು. ಕಾಲೇಜು ಮಂಡಳಿಯವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಖುದ್ದಿಸಿ ಮತ್ತು ಭಾವನಾ ಪಾಂಡೆ ಅವರೊಟ್ಟಿಗೆ ಸಂರ್ಪಕ ಸಾಧಿಸಿದ್ದರು. ಅಲ್ಲದೇ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ಕೂಡ ನೀಡಿದ್ದರು.

  • ಲಖಿಂಪುರ್ ಖೇರಿ ಘಟನೆ ತನಿಖೆಗೆ ಏಕ ಸದಸ್ಯ ಆಯೋಗ ರಚನೆ

    ಲಖಿಂಪುರ್ ಖೇರಿ ಘಟನೆ ತನಿಖೆಗೆ ಏಕ ಸದಸ್ಯ ಆಯೋಗ ರಚನೆ

    ಲಕ್ನೋ: ಲಖಿಂಪುರ್ ಖೇರಿಯಲ್ಲಿ ನಡೆದ ಅವಘಡದ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದ್ದು, ಪ್ರಕರಣದ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚಿಸಿದೆ.

    ಇಂದು ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಮಾಹಿತಿ ಬಿಡುಗಡೆಯಾಗಿದ್ದು, ನಿವೃತ್ತ ನ್ಯಾಯಾಧೀಶ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರಿಂದ ಸ್ವತಂತ್ರ ತನಿಖೆ ನಡೆಸಲು ತಿರ್ಮಾನಿಸಿದೆ. ಸೆಕ್ಷನ್ 3, 1952 ವಿಚಾರಣಾ ಆಯೋಗದ ಅಧಿನಿಯಮದ (1952ರ ನಂ.60) ಅಡಿಯಲ್ಲಿ ಪ್ರಕರಣ ತನಿಖೆ ನಡೆಸಲು ಸೂಚಿಸಿದ್ದು, ಸಮಿತಿ ರಚನೆಯಾದ ಎರಡು ತಿಂಗಳೊಳಗೆ ಘಟನೆಯ ಸಂಪೂರ್ಣ ಮಾಹಿತಿ ನೀಡುವಂತೆ ಕೋರಲಾಗಿದೆ. ಇದನ್ನೂ ಓದಿ: ಲಖೀಂಪುರ್ ಖೇರಿ ಹಿಂಸಾಚಾರ – ಮೃತ ರೈತರ ಕುಟುಂಬಸ್ಥರನ್ನು ಬಿಗಿದಪ್ಪಿ ರಾಹುಲ್, ಪ್ರಿಯಾಂಕಾ ಸಾಂತ್ವನ

    ಕಳೆದ ಭಾನುವಾರ ಉತ್ತರ ಪ್ರದೇಶದ ಲಖೀಂಪುರ್ ಖೇರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ನಡೆದಿದ್ದು, 8 ಜನ ಮೃತಪಟ್ಟಿದ್ದಾರೆ. ಸತ್ತವರಲ್ಲಿ ನಾಲ್ವರು ರೈತರಾಗಿದ್ದಾರೆ. ಮೂರು ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಓರ್ವ ಪತ್ರಕರ್ತ ಒಳಗೊಂಡಿದ್ದಾರೆ. ಈ ಕೃತ್ಯ ಖಂಡಿಸಿ ರೈತರು ಬಿಜೆಪಿ ಕಾರ್ಯಕರ್ತರು ಕಾರು ಚಲಾಯಿಸಿದ್ದ ಕಾರಿನ್ನು ಹೊಡೆದುರುಳಿಸಿ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

  • ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ದೇಶದ ದುರಂತ: ನಾಗಮೋಹನ್ ದಾಸ್

    ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ದೇಶದ ದುರಂತ: ನಾಗಮೋಹನ್ ದಾಸ್

    ಮಂಗಳೂರು: ಅಯೋಧ್ಯೆ ವಿಚಾರದಲ್ಲಿ ಹೀಗೇ ತೀರ್ಪು ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಇದು ದೇಶದ ದುರಂತ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಹೇಳಿದ್ದಾರೆ.

    ನಗರದಲ್ಲಿ ನಡೆದ ಎಡಪಂಥೀಯ ಚಿಂತಕರ ಜನನುಡಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಆದೇಶಕ್ಕಾಗಿ ಸುಪ್ರೀಂ ಕೋರ್ಟ್ ಮೇಲೆ ಒತ್ತಡ ಹೇರಲಾಗುತ್ತಿದೆ. ಅಷ್ಟೇ ಅಲ್ಲದೆ ಇಷ್ಟು ಸಮಯದೊಳಗಾಗಿ ತೀರ್ಪು ನೀಡಬೇಕೆಂಬ ಸೂಚನೆ ನೀಡಲಾಗುತ್ತೆ ಎಂದು ದೂರಿದರು. ಇದನ್ನು ಓದಿ: ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವುದು ನಿಜವೇ: ಪ್ರಕಾಶ್ ರೈ ಹೇಳಿದ್ದು ಏನು?

    ರಾಮ ಮಂದಿರ ನಿರ್ಮಾಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು ಒಪ್ಪಿಗೆಯಾಗದಿದ್ದರೆ ನಾವು ಸಹಿಸಲ್ಲ ಎನ್ನುವವರಿದ್ದಾರೆ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಕೆಲಸ ಆಗುತ್ತಿರುವುದು ದೇಶದ ದುರಂತ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv