Tag: ನಿವೃತ್ತ ಜೀವನ

  • ಸಾಂಸ್ಕೃತಿಕ ನಗರದಲ್ಲಿ ನಿವೃತ್ತ ಜೀವನ ಕಳೆಯಲಿದ್ದಾರೆ ಸಿದ್ದರಾಮಯ್ಯ

    ಸಾಂಸ್ಕೃತಿಕ ನಗರದಲ್ಲಿ ನಿವೃತ್ತ ಜೀವನ ಕಳೆಯಲಿದ್ದಾರೆ ಸಿದ್ದರಾಮಯ್ಯ

    ಬೆಂಗಳೂರು: ರಾಜಕೀಯ ಸಂಧ್ಯಾ ಕಾಲದಲ್ಲಿ ತವರು ನೆಲಕ್ಕೆ ಮರಳಲು ಮಾಜಿ ಸಿಎಂ ಸಿದ್ದತೆ ಆರಂಭಿಸಿದ್ದಾರೆ. ರಾಜಕೀಯ ನಿವೃತ್ತಿ ಪಡೆದ ನಂತರ ತವರು ನೆಲದ ಕನಸಿನ ಮನೆಯಲ್ಲಿ ನಿವೃತ್ತಿ ಜೀವನ ಕಳೆಯಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ.

    ಮಾಜಿ ಸಿಎಂ ಮೈಸೂರು ಹೊರ ವಲಯದ ದಟ್ಟಕಳ್ಳಿಯಲ್ಲಿ ನಿವೇಶನವೊಂದನ್ನ ಖರೀದಿಸಿ ಅಲ್ಲಿ ಮನೆ ನಿರ್ಮಾಣಕ್ಕೆ ಮುಂದಾಗಿದ್ದರೆ. ಇದಕ್ಕೂ ಮೊದಲು ತಮ್ಮ ನಿವೃತ್ತ ಜೀವನವನ್ನ ಮೈಸೂರು ಹೊರ ವಲಯದ ಕಾಟೂರು ಫಾರ್ಮ್ ಹೌಸ್ ನಲ್ಲಿ ಕಳೆಯಲು ಬಯಸಿದ್ದರು. ಆದರೆ ಅದೇ ಫಾರ್ಮ್ ಹೌಸ್ ಆವರಣದಲ್ಲಿ ಪುತ್ರ ರಾಕೇಶ್ ಅಂತ್ಯ ಸಂಸ್ಕಾರ ಮಾಡಲಾಗಿದೆ. ಅದೇ ಫಾರ್ಮ್‍ಹೌಸ್ ನಲ್ಲಿ ಇದ್ದರೆ ಮಗನ ನೆನಪು ಬಿಟ್ಟು ಬಿಡದೆ ಕಾಡುತ್ತದೆ ಎಂಬ ಕಾರಣಕ್ಕೆ ತಮ್ಮ ಮನಸ್ಸು ಬದಲಿಸಿದ್ದಾರೆ.

    ಹೊಸದಾಗಿ ದಟ್ಟಕಳ್ಳಿ ಯಲ್ಲಿ ನಿವೇಶನ ಖರೀದಿ ಮಾಡಿ ಅಲ್ಲಿ ಮನೆ ಕಟ್ಟಿಸಲು ಮುಂದಾಗಿದ್ದಾರೆ. ತಮ್ಮ ಮೊದಲ ಬಯಕೆಯಂತೆ ಕಾಟೂರು ಫಾರ್ಮ್‍ಹೌಸ್ ನಲ್ಲಿ ಇರುವ ನಿರ್ಧಾರ ಕೈ ಬಿಟ್ಟಿದ್ದಾರೆ. ಬದಲಿಗೆ ಮೈಸೂರು ಹೊರ ವಲಯದಲ್ಲಿ ಮನೆ ನಿರ್ಮಿಸಿ ಅಲ್ಲೇ ನಿವೃತ್ತ ಜೀವನ ಕಳೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

    ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಎಲ್ಲೂ ಮಾತನಾಡದ ಸಿದ್ದರಾಮಯ್ಯ ನಿವೃತ್ತಿಯ ಬದುಕನ್ನು ಮೈಸೂರಿನಲ್ಲೇ ಕಳೆಯಲು ಮನೆ ನಿರ್ಮಾಣ ಕಾರ್ಯದ ಸಿದ್ಧತೆ ಆರಂಭಿಸಿದ್ದಾರೆ.