Tag: ನಿವೃತ್ತ ಏರ್ ಮಾರ್ಷಲ್ ಮುರುಳಿ

  • ತಾಂತ್ರಿಕ ದೋಷ ಅಲ್ಲ, ಹವಾಮಾನ ವೈಪರೀತ್ಯದಿಂದಲೇ ಪತನ: ನಿವೃತ್ತ ಏರ್ ಮಾರ್ಷಲ್ ಮುರುಳಿ

    ತಾಂತ್ರಿಕ ದೋಷ ಅಲ್ಲ, ಹವಾಮಾನ ವೈಪರೀತ್ಯದಿಂದಲೇ ಪತನ: ನಿವೃತ್ತ ಏರ್ ಮಾರ್ಷಲ್ ಮುರುಳಿ

    ಬೆಂಗಳೂರು: ತಾಂತ್ರಿಕ ದೋಷ ಅಲ್ಲ, ಹವಾಮಾನ ವೈಪರೀತ್ಯದಿಂದಲೇ ವಾಯು ಸೇನಾ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂದು ನಿವೃತ್ತ ಏರ್ ಮಾರ್ಷಲ್ ಮುರುಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರಿದ್ದ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಊಟಿ ಬಳಿಯ ಕೂನೂರಿನಲ್ಲಿ ಪತನಗೊಂಡಿದ್ದು, ರಾವತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕುರಿತಾಗಿ ಪಬ್ಲಿಕ್ ಟಿವಿ ಜೊತೆಗೆ ನಿವೃತ್ತ ಏರ್ ಮಾರ್ಷಲ್ ಮುರುಳಿ ಮಾತನಾಡಿದ್ದಾರೆ. ಇದನ್ನೂ ಓದಿ: CDS ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ- ಪತ್ನಿ ಸೇರಿ11 ಮಂದಿ ಸಾವು


    ಈ ಹಿಂದೆ ಕೂಡ ಜಾಗ್ವಾರ್ ಹೆಲಿಕಾಪ್ಟರ್ ಒಂದು ಕ್ರ್ಯಾಶ್ ಆಗಿತ್ತು. ಕೂನೂರು ವಾತಾವರಣ ಹೇಗೆ ಅಂತಾ ಹೇಳಲಿಕ್ಕೆ ಬರುವುದಿಲ್ಲ. ಒಂದು ಸಲ, ಮಂಜು, ಮೋಡ, ಅವರಿಸಿರುತ್ತದೆ. ಜನನೇ ಕಾಣಲ್ಲ ಆ ರೀತಿಯಾದ ವಾತಾವರಣ ಇರುತ್ತದೆ. ನನ್ನ ಕಣ್ಣು ಮುಂದೆಯೇ ಹೆಲಿಕಾಪ್ಟರ್ ಕ್ರ್ಯಾಶ್ ಆಗಿರೋದನ್ನು ನೋಡಿದ್ದೇನೆ. ಇದು ತಾಂತ್ರಿಕ ದೋಷದಿಂದ ಆಗಿರುವುದಲ್ಲ. ಹವಾಮಾನ ವೈಪರೀತ್ಯದಿಂದಲೇ ಆಗಿರುವ ಸಾಧ್ಯತೆ ಹೆಚ್ಚಿದೆ ಎಂದರು. ಇದನ್ನೂ ಓದಿ: ನಿಮಿಷಗಳ ಅಂತರದಲ್ಲಿ ಲ್ಯಾಂಡ್ ಆಗಬೇಕಿದ್ದ Mi-17V5 ಪತನ – 11 ಮಂದಿಯ ಮೃತದೇಹ ಪತ್ತೆ

    ವಿಐಪಿಗೆ ಹೆಲಿಕಾಪ್ಟರ್ ಲಾಂಚ್ ಮಾಡಬೇಕಾದರೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುತ್ತಾರೆ. ಹೆಲಿಕಾಪ್ಟರ್ ಎಂಜಿನ್ ಸೇರಿದಂತೆ ಹಲವು ಪರಿಶೀಲನೆ ನಡೆಸಿ ತೆಗೆಯುತ್ತಾರೆ. ಆದರೆ ವಾತಾವರಣ ಬದಲಾವಣೆಯಿಂದ ಈ ಅಪಘಾತ ನಡೆದಿರಬಹುದು ಎಂದು ತಿಳಿಸಿದರು.

    ಹೆಲಿಕಾಪ್ಟರ್ ರೂಟ್ ಮರಗಳ ಮಧ್ಯೆ ಮಾಡಿದ್ದರೆ ಬಚಾವ್ ಆಗಲು ಸಾಧ್ಯವೇ ಇಲ್ಲ. ರೂಟ್ ಮರಗಳ ಮಧ್ಯೆ ಮಾಡಲಿಲ್ಲ ಅಂದಿದ್ದರೆ ಬಚಾವ್ ಆಗಬಹುದಿತ್ತೇನೋ? ಲ್ಯಾಂಡಿಗ್ ಆಗಲು 5 ನಿಮಿಷ ಇದ್ದಾಗ ಪರ್ಯಾಯ ಮಾರ್ಗ ಹುಡುಕುವುದು ಕಷ್ಟ. ಈ ಘಟನೆಯಿಂದ ಬಿಪಿನ್ ರಾವತ್ ಅವರ ಪತ್ನಿ ತೀರಿಕೊಂಡಿರುವುದು ನೋವಿನ ಸಂಗತಿಯಾಗಿದೆ. ಬಿಪಿನ್ ರಾವತ್ ಅವರು ಸುರಕ್ಷಿತವಾಗಿ ಪಾರಾಗಲಿ ಎಂದು ಹೇಳಿದರು