Tag: ನಿವೃತ್ತಿ

  • IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    IPL Champions | ಟ್ರೋಫಿ ಗೆದ್ದ ಬೆನ್ನಲ್ಲೇ ಐಪಿಎಲ್‌ ನಿವೃತ್ತಿ ಬಗ್ಗೆ ಕೊಹ್ಲಿ ಹೇಳಿದ್ದೇನು?

    ಅಹಮದಾಬಾದ್‌: ಇಡೀ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳು ಆರ್‌ಸಿಬಿ (RCB) ಟ್ರೋಫಿ ಗೆದ್ದ ಖುಷಿಯಲ್ಲಿದ್ದಾರೆ. ಪಟಾಕಿ ಸಿಡಿಸಿ, ಸಿಹಿ ಹಂಚಿ, ಬೇಡಿಕೆ ಈಡೇರಿಸಿದ ದೇವರುಗಳಿಗೆ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಆರ್‌ಸಿಬಿ ಅಭಿಮಾನಿಗಳ ಸಾಮ್ರಾಜ್ಯ ಕಟ್ಟಿದ ಕೊಹ್ಲಿಗೂ ಧನ್ಯವಾದ ಹೇಳ್ತಿದ್ದಾರೆ. ಈ ನಡುವೆ ನಿವೃತ್ತಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಕೊಹ್ಲಿ (Virat Kohli) ಉತ್ತರಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಸದ್ಯಕ್ಕೆ ನಿವೃತ್ತಿ ಇಲ್ಲ ಎನ್ನುವ ಗುಡ್‌ನ್ಯೂಸನ್ನೂ ಕೊಟ್ಟಿದ್ದಾರೆ.

    ನಿವೃತ್ತಿಯ ಕುರಿತು ಸಂದರ್ಶಕರೊಬ್ಬರು ಕೇಳಿದ ಪ್ರಶ್ನೆಗೆ, ನನಗೆ ಈ ಆಟ ಆಡಲು ಇನ್ನೂ ಕೆಲ ವರ್ಷಗಳ ಅವಕಾಶವಿದೆ. ನಿವೃತ್ತಿಗೆ ಇನ್ನೂ ಸಮಯವಿದೆ. ಅದಕ್ಕೂ ಮೊದಲು ನನ್ನಲ್ಲಿರುವ ಸಂಪೂರ್ಣ ಆಟ ಆಡಲು ಭಯಸುತ್ತೇನೆ. ಕೊನೆಗೂ ನನ್ನ ಮಡಿಲಿಗೆ ಕಪ್ ಕೊಟ್ಟಿದ್ದಕ್ಕೆ ಆ ದೇವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: IPL Champions | ಚುಟುಕು ಕದನದಲ್ಲಿ ಈವರೆಗೆ ಚಾಂಪಿಯನ್ಸ್‌ ಪಟ್ಟ ಗೆದ್ದವರ ಕಂಪ್ಲೀಟ್‌ ಲಿಸ್ಟ್‌ ಇಲ್ಲಿದೆ…

    ಅಲ್ಲದೇ… ನಾನು ಈ ರಾತ್ರಿ ಮಗುವಿನಂತೆ ಮಲಗುತ್ತೇನೆ ಎಂದು ಹೇಳಿದ್ದರಲಲ್ದೇ… ನನ್ನ ಹೃದಯ, ಆತ್ಮ ಎರಡೂ ಬೆಂಗಳೂರಿಗಾಗಿಯೇ.. ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡುತ್ತೇನೆ ಎಂದು ಭಾವುಕವಾಗಿ ನುಡಿದರು. ಇದನ್ನೂ ಓದಿ: ನಮ್ಮ ಬೆಂಗಳೂರು ಕಾಯುತ್ತಿದೆ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳೊಟ್ಟಿಗೆ ಆನಂದಿಸಬೇಕು – ಬೆಂಗ್ಳೂರು ಮರೆಯದ ಕೊಹ್ಲಿ

    ನಾನು ಪ್ರಭಾವಿ ಆಟಗಾರನಾಗಿ ಆಡಲು ಬಯಸುವುದಿಲ್ಲ, ನಾನು ಫೀಲ್ಡಿಂಗ್ ಮಾಡಿ ಪ್ರಭಾವ ಬೀರಲು ಬಯಸುತ್ತೇನೆ ಎಂದರಲ್ಲದೇ, ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವೋ ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. 18 ವರ್ಷಗಳು ಕಳೆದಿವೆ. ಈ ಬಾರಿ ನಾನು ನನ್ನ ಯೌವನವನ್ನು ಮರೆತು ನನ್ನ ಅತ್ಯುನ್ನತೆಯ ಆಟವನ್ನು ನೀಡಿದ್ದೇನೆ. ನನ್ನಲ್ಲಿರುವ ಎಲ್ಲವನ್ನೂ ನಾನು ಅದಕ್ಕೆ ನೀಡಿದ್ದೇನೆ. ಈ ದಿನ ಬರುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಕೊನೆಯ ಚೆಂಡು ಎಸೆದ ತಕ್ಷಣ ಭಾವುಕನಾಗಿದ್ದೆ. ಈ ಫ್ರಾಂಚೈಸಿಗಾಗಿ ಅವರು (ಎಬಿ ಡಿವಿಲಿಯರ್ಸ್) ತುಂಬಾ ಮಾಡಿದ್ದಾರೆ. ಇದನ್ನೂ ಓದಿ:  ನನ್ನ ಹೃದಯ, ಆತ್ಮ ಬೆಂಗಳೂರಿಗಾಗಿ… ಐಪಿಎಲ್‌ ಆಡುವ ಕೊನೇ ದಿನದವರೆಗೂ ಇದೇ ತಂಡಕ್ಕಾಗಿ ಆಡ್ತೀನಿ – ಕೊಹ್ಲಿ ಭಾವುಕ

    ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ
    ಬಳಿಕ ಕಪ್‌ ಗೆದ್ದ ಸಂಭ್ರಮದಲ್ಲೂ ಬೆಂಗಳೂರನ್ನು ಮರೆಯದ ಕೊಹ್ಲಿ… ಕಪ್‌ ಗೆದ್ದ ಸಂಭ್ರಮವನ್ನ ಅಭಿಮಾನಿಗಳ ಜೊತೆಗೆ ಆನಂದಿಸಬೇಕು. ನಮ್ಮ ನಗರ ಸಂಭ್ರಮಿಸಲು ಕಾಯುತ್ತಿದೆ ಅಂತ ನೆನಪಿಸಿಕೊಂಡರು. ಯಾರೋ ಒಬ್ಬರು ಬೆಂಗಳೂರಿನ ಒಂದು ವಿಡಿಯೋ ಕಳಿಸಿದ್ರು, ಇಡೀ ನಗರ ಪಟಾಕಿ ಸಿಡಿಸಿ ಸಂಭ್ರಮಿಸುತ್ತು. ಆ ಅನುಭವವೇ ಬೇರೆ ಅದನ್ನು ಹೇಳಲು ಆಗುವುದಿಲ್ಲ, ಅನುಭವಿಸಬೇಕು ಅಂತ ಹೇಳಿದ್ರು. ಈ ಮೂಲಕ ಬೆಂಗಳೂರಿನಲ್ಲಿ ಸಂಭ್ರಮಾಚಣೆ ನಡೆಸುವ ಸುಳಿವುಕೊಟ್ಟರು.

    ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಈಡೇರಿದೆ. ಒಂದು ಬಾರಿಯಾದರೂ ಕಪ್‌ ಗೆಲ್ಲಬೇಕೆಂಬ 18 ವರ್ಷಗಳ ಕನಸು ಈ ಬಾರಿ ನನಸಾಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ʻಈ ಸಲ ಕಪ್‌ ನಮ್ದೇʼ ಎಂದು ಹುರಿದುಂಬಿಸುತ್ತಿದ್ದ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್‌ ಪಂದ್ಯದಲ್ಲಿ ಆರ್‌ಸಿಬಿ 6 ರನ್‌ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಮೊದಲ ಬಾರಿಗೆ ಟ್ರೋಫಿ ಮುಡಿಗೇರಿಸಿಕೊಂಡಿತು.

  • ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

    ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

    ನವದೆಹಲಿ: ಆರು ಬಾರಿ ವಿಶ್ವ ಚಾಂಪಿಯನ್ ಹಾಗೂ 2012 ರ ಒಲಿಂಪಿಕ್ ಪದಕ ವಿಜೇತೆಯಾಗಿರುವ ಮಾಂಗ್ಟೆ ಚುಂಗ್ನೈಜಾಂಗ್ ಮೇರಿ ಕೋಮ್ (Mary Kom) ಬಾಕ್ಸಿಂಗ್‌ಗೆ (Boxing) ನಿವೃತ್ತಿ ಘೋಷಿಸಿದ್ದಾರೆ.

    ಇಂಟರ್‌ ನ್ಯಾಷನಲ್‌ ಬಾಕ್ಸಿಂಗ್‌ ಅಸೋಸಿಯೇಷನ್ ​​(IBA) ನಿಯಮದ ಪ್ರಕಾರ, 40 ವರ್ಷ ವಯಸ್ಸಿನವರೆಗೆ ಮಾತ್ರ ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಆದರೆ ಇದೀಗ ಮೇರಿಯವರಿಗೆ 41 ವರ್ಷ ವಯಸ್ಸಾಗಿದ್ದರಿಂದ ಬುಧವಾರ ನಿವೃತ್ತಿ (Retirement) ಘೋಷಣೆ ಮಾಡಿದ್ದಾರೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಬಾಕ್ಸಿಂಗ್‌ ನಲ್ಲಿ ಹೋರಾಡುವ ಹಸಿವು ನನಗೆ ಇನ್ನೂ ಇದೆ. ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಹೀಗಾಗಿ ಇಂದು ನಾನು ಬಲವಂತವಾಗಿ ತೊರೆಯುತ್ತಿದ್ದೇನೆ ನಾನು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ತುಂಬಾ ದುಃಖದಿಂದ ಇಂದು ನನ್ನ ಬಾಕ್ಸಿಂಗ್‌ ಗ್ಲೌಸ್‌ ಅನ್ನು ಬಿಚ್ಚಿಡುತ್ತಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ರಿಯಾಯಿತಿ ದರದಲ್ಲಿ ಅಯೋಧ್ಯೆಗೆ ಟೂರ್ ಪ್ಲ್ಯಾನ್- ಬಿಜೆಪಿಗೆ ಕಾಂಗ್ರೆಸ್ ಟಕ್ಕರ್

    ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜೊತೆಗೆ ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿಕೊಂಡಿದ್ದಾರೆ. AIBA ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯರಾದರು. ಅವರು 2005, 2006, 2008 ಮತ್ತು 2010 ಆವೃತ್ತಿಗಳಲ್ಲಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದರು. 2008ರಲ್ಲಿ ಅವಳಿ ಮಕ್ಕಳು ಹಾಗೂ 2012 ರ ಒಲಿಂಪಿಕ್ ಪದಕವನ್ನು ಗೆದ್ದ ನಂತರ ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದ್ದರು.

  • ಜ.31 ರಂದು ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ನಿವೃತ್ತಿ

    ಜ.31 ರಂದು ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ ನಿವೃತ್ತಿ

    – ರಾಜಕೀಯಕ್ಕೆ ಹೋಗಲ್ಲ ಎಂದ ಡಾಕ್ಟರ್

    ಬೆಂಗಳೂರು: ಜಯದೇವ ಆಸ್ಪತ್ರೆ (Jayadev Hospital) ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ (CN Manjunath) ಸೇವಾವಧಿ ಇದೇ ತಿಂಗಳ 31ರಂದು ಮುಕ್ತಾಯವಾಗಲಿದೆ. ಡಾ.ಸಿ.ಎನ್ ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಸಲು ರಾಜ್ಯ ಸರ್ಕಾರ ಆಸಕ್ತಿ ತೋರಿಸಿಲ್ಲ. ಹೀಗಾಗಿ ಡಾ.ಸಿ.ಎನ್ ಮಂಜುನಾಥ್ ಅವರು ಜನವರಿ 31ರಂದು ನಿವೃತ್ತಿ ಪ್ರಕಟಿಸಲು ತಯಾರಿ ನಡೆಸಿದ್ದಾರೆ. ಅಲ್ಲದೇ, ತಮ್ಮನ್ನು ರಾಜ್ಯ ಸರ್ಕಾರ ಸರಿಯಾಗಿ ಬೀಳ್ಕೊಡದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಇನ್ನೂ ಚುನಾವಣೆಯಲ್ಲಿ (Election) ಸ್ಪರ್ಧೆ ಮಾಡುತ್ತಾರೆ ಎಂಬ ವದಂತಿಯನ್ನು ಮಂಜುನಾಥ್ ತಳ್ಳಿ ಹಾಕಿದ್ದಾರೆ. ಕಳೆದ ಬಾರಿ ಡಾ.ಮಂಜುನಾಥ್ ಸೇವಾವಧಿ ಮುಕ್ತಾಯವಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಸರ್ಕಾರ ಆರು ತಿಂಗಳ ಕಾಲ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿತ್ತು. ಡಾ.ಮಂಜುನಾಥ್ ನಿವೃತ್ತಿ ಆಗುತ್ತಿರುವ ಹಿನ್ನೆಲೆ ಜಯದೇವ ಆಸ್ಪತ್ರೆ ನಿರ್ದೇಶಕರ ಹುದ್ದೆಗೆ ಪೈಪೋಟಿ ಆರಂಭವಾಗಿದೆ. ಈಗಾಗಲೇ 15ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ನಡುವೆ ಸಿಎಂ ಆಪ್ತ, ಮೈಸೂರು ಮೂಲದ ವೈದ್ಯರೊಬ್ಬರನ್ನು ಜಯದೇವ ಆಸ್ಪತ್ರೆ ನಿರ್ದೇಶಕ ಸ್ಥಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಒಂದೇ ದಿನ ಚುನಾವಣೆ, ರಾಜ್ಯ ಬಜೆಟ್ ಬೇಡ – ರಾಜ್ಯಪಾಲರಿಗೆ ಬಿಜೆಪಿ ದೂರು

    ಈ ಕುರಿತು ಪ್ರತಿಕ್ರಿಯಿಸಿರುವ ಡಾ.ಮಂಜುನಾಥ್, ಕಲಬುರಗಿ ಜಯದೇವ ಕಂಪ್ಲೀಟ್ ಮಾಡಿ ನಿವೃತ್ತಿ ಆಗಬೇಕು ಎಂದು ಇದ್ದೆ. ಆದರೆ ಇಷ್ಟರ ಒಳಗಡೆ ಈ ರೀತಿ ನಿರ್ಧಾರ ಆಗಿದೆ. ಜನಸಾಮಾನ್ಯರು, ಜನರು ನನಗೆ ಗೌರವ ಕೊಡುತ್ತಾ ಇದ್ದಾರೆ. ಗೌರವಯುತವಾಗಿ ಕಳಹಿಸಿಕೊಡುತ್ತಿದ್ದಾರೆ. ರಾಜಕೀಯಕ್ಕೆ ನಾನು ಹೋಗಲ್ಲ. ನನ್ನ ಮೊದಲ ಆಯ್ಕೆ ನನ್ನ ವೃತ್ತಿ. ಇಲ್ಲಿಂದ ಹೊರ ಹೋದ ಮೇಲೂ ನಾನು ನನ್ನ ವೃತ್ತಿಯಲ್ಲಿ ಮುಂದುವರೆಯುತ್ತೇನೆ. ರಾಜಕೀಯ ಇದೆಲ್ಲ ಗಾಳಿ ಸುದ್ದಿ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ತಿಂಗಳ ಅಂತ್ಯದಲ್ಲಿ ಜಾತಿ ಜನಗಣತಿ ವರದಿ ಸರ್ಕಾರಕ್ಕೆ ಕೊಡುತ್ತೇವೆ: ಜಯಪ್ರಕಾಶ್ ಹೆಗ್ಡೆ

  • 41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    41 ಕೋಟಿಯೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ – ಬೆರಗಾಗಿಸಿದ 22 ವರ್ಷದ ಗೂಗಲ್ ಟೆಕ್ಕಿಯ ಫ್ಯೂಚರ್ ಪ್ಲ್ಯಾನ್

    ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕರು ಸಾಕಷು ಹಣವನ್ನು ಉಳಿತಾಯ ಮಾಡಲು ಹಾಗೂ ಹೂಡಿಕೆ (Investment) ಮಾಡಲು ಬಯಸುತ್ತಾರೆ. ಈ ಮೂಲಕ ಬೇಗನೆ ನಿವೃತ್ತರಾಗಲು ಬಯಸುತ್ತಾರೆ. ಇಲ್ಲೊಬ್ಬ ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ (Google Software Engineer) ತನ್ನ 22 ವಯಸ್ಸಿನಲ್ಲಿ ವೃತ್ತಿಯನ್ನು ಪ್ರಾರಂಭಿಸುತ್ತಲೇ ತಮ್ಮ 35ನೇ ವಯಸ್ಸಿನೊಳಗೆ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ.) ಹೂಡಿಕೆ ಮಾಡಿ, ನಿವೃತ್ತಿ (Retirement) ಹೊಂದುವ ಗುರಿಯನ್ನು ಹೊಂಡಿದ್ದಾರೆ. ಅವರ ಫ್ಯೂಚರ್ ಪ್ಲ್ಯಾನ್ ಯುವಕರಿಗೆ ಸ್ಪೂರ್ತಿದಾಯಕವಾಗಿದೆ.

    ಗೂಗಲ್‌ನ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ 22 ವರ್ಷದ ಎಥಾನ್ ನ್ಗುನ್ಲಿ (Ethan Nguonly) ಇಂತಹ ಒಂದು ಯೋಜನೆಯನ್ನು ಮಾಡಿದ್ದಾರೆ. ಕ್ಯಾಲಿಫೋರ್ನಿಯಾದ ಆರೆಂಜ್ ಕೌಂಟಿಯಲ್ಲಿ ವಾಸವಿರೋ ಟೆಕ್ಕಿ ತನ್ನ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರ ಮಹತ್ವದ ಬಗ್ಗೆ ತನ್ನ ಹೆತ್ತವರು ಹೇಗೆ ಪ್ರೋತ್ಸಾಹ ನೀಡಿದರು ಎಂದು ವಿವರಿಸಿದ್ದಾರೆ.

    ನೀವು ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟು ಬಿಟ್ಟರೆ ಅದು ಯಾವುದೇ ಕೆಲಸಕ್ಕೂ ಬರಲ್ಲ. ಕಾಲಾನಂತರ ಅದು ನಿಷ್ಪ್ರಯೋಜಕ ಆಗಿಬಿಡುತ್ತದೆ. ಆದರೆ ನಿಮ್ಮ ಹಣದಿಂದ ಏನಾದರೂ ಪ್ರಯೋಜನ ಆಗಬೇಕೆಂದರೆ ಅದನ್ನು ಹೂಡಿಕೆ ಮಾಡಿ ಎಂದು ಪೋಷಕರು ತನಗೆ ತಿಳಿಸಿದ್ದಾಗಿ ನ್ಗುನ್ಲಿ ಹೇಳಿದ್ದಾರೆ.

    ನಾನು ಚಿಕ್ಕವನಿದ್ದಾಗಲೇ ಯೋಚಿಸುತ್ತಿದ್ದ ಮುಖ್ಯ ವಿಷಯವೆಂದರೆ, ಈ ಹಣ ಎಲ್ಲಾ ದೊಡ್ಡದಾಗುತ್ತಾ ಹೋಗುತ್ತದೆ, ಬೆಳೆಯುತ್ತಲೇ ಇರುತ್ತದೆ. ಆದರೆ ಇದಕ್ಕಾಗಿ ನಾವು ಯಾವುದೇ ಕೆಲಸ ಮಾಡುವ ಅಗತ್ಯವೇ ಇಲ್ಲ. ಇದು ನಿಜವಾಗಿಯೂ ನನ್ನ ಹಣವನ್ನು ಹೂಡಿಕೆಗಳಲ್ಲಿ ವಿನಿಯೋಗಿಸಬಹುದು ಎಂಬ ನನ್ನ ಕಲ್ಪನೆಯನ್ನು ಬಹಿರಂಗಪಡಿಸಿತು. ಅದಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡೋ ಬದಲು ಅದನ್ನು ಹೂಡಿಕೆ ಮಾಡುವುದೇ ಉತ್ತಮ ಎಂದು ಹೇಳಿದರು.

    ನ್ಗುನ್ಲಿ ಇಂತಹ ಯೋಜನೆಯೊಂದಿಗೆಯೇ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗಿ ಅವರು ಯಾವುದೇ ಸಾಲ ಮಾಡುವ ಪರಿಸ್ಥಿತಿ ಎದುರಾಗಿಲ್ಲ. ನಂತರ ಅವರು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡೇ ಮಾಹಿತಿ ಹಾಗೂ ಡೇಟಾ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಿದರು. 2022ರ ಆಗಸ್ಟ್‌ನಲ್ಲಿ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ. ಸ್ನಾತಕೋತ್ತರ ಪದವಿ ಪಡೆಯುವುದಕ್ಕೂ ಮೊದಲೇ ನ್ಗುನ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಗೂಗಲ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

    ನ್ಗುನ್ಲಿ ವಾರ್ಷಿಕ ಆದಾಯ 194,000 ಡಾಲರ್ (ಸುಮಾರು 1.60 ಕೋಟಿ ರೂ.). ಪ್ರಸ್ತುತ ಅವರು ತಮ್ಮ ನಿವೃತ್ತಿ ಹಾಗೂ ಇತರ ಹೂಡಿಕೆ ಖಾತೆಗಳಲ್ಲಿ ಹಾಗೂ ಫ್ಲೋರಿಡಾ ಮತ್ತು ಕ್ಯಾಲಿಫೋರ್ನಿಯಾದ ಮನೆಗಳಲ್ಲಿ 135,000 ಡಾಲರ್ (ಸುಮಾರು 1.11 ಕೋಟಿ ರೂ.) ಹೂಡಿಕೆ ಮಾಡಿದ್ದಾರೆ. ತಮ್ಮ ವೇತನದಲ್ಲಿ ಅವರು 35% ರಷ್ಟು ಹೂಡಿಕೆಗಳಲ್ಲಿ ವಿನಿಯೋಗಿಸಲು ಮುಂದಾಗಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್‌ನಲ್ಲೂ ವಿನಿಯೋಗಿಸಲು ಯೋಜಿಸಿದ್ದಾರೆ. ಇದನ್ನೂ ಓದಿ: ಪಾಕ್‌, ಚೀನಾಗೆ ಠಕ್ಕರ್‌ ಕೊಡಲು ʻಇಂದ್ರಜಾಲ್‌ʼ ಅಸ್ತ್ರ – ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅನಾವರಣ

    ನ್ಗುನ್ಲಿ ಊಟಕ್ಕಾಗಿ ಹೆಚ್ಚೇನೂ ಖರ್ಚು ಮಾಡಲ್ಲ. ಏಕೆಂದರೆ ಗೂಗಲ್ ಉಚಿತ ಊಟ, ಉಪಹಾರ ನೀಡುತ್ತದೆ. ಬ್ರ್ಯಾಂಡೆಡ್ ಬಟ್ಟೆಗಳಿಗಾಗಿ ಹೆಚ್ಚಿನ ಖರ್ಚು ಮಾಡಲ್ಲ. ಬದಲಿಗೆ ಸರಳ ಹಾಗೂ ಕೈಗೆಟಕೋ ಬೆಲೆಯಲ್ಲಿ ಸಿಗುವ ಬಟ್ಟೆಗಳಲ್ಲಿ ಧರಿಸಲು ಇಷ್ಟ ಪಡುತ್ತಾರೆ. ಪ್ರಯಾಣವನ್ನು ಹೆಚ್ಚು ಇಷ್ಟಪಡೋ ಅವರು ವರ್ಷಕ್ಕೆ 3-4 ಬಾರಿ ಪ್ರವಾಸ ಹೋಗುತ್ತಾರೆ. ಐಷಾರಾಮಿ ವಸತಿಗೆ ಹಣ ವ್ಯಯಿಸುವ ಬದಲು ಕಡಿಮೆ ವೆಚ್ಚದ ಆಯ್ಕೆಗಳನ್ನು ಮಾಡುತ್ತಾರೆ.

    5 ಮಿಲಿಯನ್ ಡಾಲರ್‌ನೊಂದಿಗೆ 35ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯೋ ಗುರಿಯನ್ನು ತಲುಪಲು ನ್ಗುನ್ಲಿ ತಮ್ಮ ನಿವೃತ್ತಿ ಖಾತೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಲು ಯೋಜಿಸಿದ್ದಾರೆ. ಪ್ರತಿ 2 ವರ್ಷಗಳಿಗೊಮ್ಮೆ ಹೊಸ ಆಸ್ತಿಯನ್ನು ಖರೀದಿ ಮಾಡುವ ಮೂಲಕ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್ಫೋಲಿಯೋಗೆ ಸೇರಿಸುತ್ತಾರೆ. ನಾನು 67ನೇ ವಯಸ್ಸಿನಲ್ಲಿ ಪರ್ವತ ಏರಲು ಬಯಸಲ್ಲ. ಬದಲಿಗೆ ಎಲ್ಲಿಯವರೆಗೆ ಯುವಕನಾಗಿ, ಆರೋಗ್ಯವಾಗಿರುತ್ತೇನೋ ಅಲ್ಲಿಯವರೆಗೆ ಪ್ರಯಾಣವನ್ನು ಮಾಡಿ ಅನುಭವ ಪಡೆಯುತ್ತೇನೆ ಎಂದು ನ್ಗುನ್ಲಿ ಹೇಳುತ್ತಾರೆ. ಇದನ್ನೂ ಓದಿ: ದೇಶದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು 32 ಕಂಪನಿಗಳಿಂದ ಅರ್ಜಿ – 75 ಸಾವಿರ ಉದ್ಯೋಗ ಸೃಷ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೇಶ ಸೇವೆ ಮಾಡಿ ವಾಪಸಾದ ಯೋಧರಿಗೆ ಅದ್ದೂರಿ ಸ್ವಾಗತ

    ದೇಶ ಸೇವೆ ಮಾಡಿ ವಾಪಸಾದ ಯೋಧರಿಗೆ ಅದ್ದೂರಿ ಸ್ವಾಗತ

    ರಾಮನಗರ/ಹಾಸನ: ದೇಶ ಸೇವೆ ಮಾಡಿ ತವರಿಗೆ ವಾಪಸಾದ ಯೋಧರಿಗೆ (Soldier) ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ರಾಮನಗರ (Ramanagara) ಮತ್ತು ಹಾಸನದಲ್ಲಿ (Hassan) ಯೋಧರಿಗೆ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿ ಬರಮಾಡಿಕೊಂಡಿದ್ದಾರೆ.

    ಭಾರತೀಯ ಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ರಾಮನಗರದ ಆರ್ಕೇಶ್ವರ ಬಡಾವಣೆಯ ಹೆಚ್ ಶಂಕರ್ ಅವರಿಗೆ ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಶಂಕರ್ ಅವರನ್ನು ಬರ ಮಾಡಿಕೊಂಡ ಸಾರ್ವಜನಿಕರು ಹೂವಿನ ಹಾರ ಹಾಕಿ ಸನ್ಮಾನಿಸಿದರು. ಶಂಕರ್ ಅವರ ಪರವಾಗಿ ಘೋಷಣೆಗಳನ್ನು ಕೂಗಿ ಅಭಿನಂದಿಸಿದರು.

    ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಮನೆಯವರೆಗೆ ಕರೆತಂದರು. ಎಂಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದ ಶಂಕರ್ ತ್ರಿವರ್ಣ ಧ್ವಜ ಹಿಡಿದು ಸಾರ್ವಜನಿಕರ ಗೌರವ ಸ್ವೀಕರಿಸಿದರು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಮೆರವಣಿಗೆಯಲ್ಲಿ ಸಾಥ್ ನೀಡಿದರು.

    20 ವರ್ಷ ದೇಶ ಸೇವೆ ಮಾಡಿ ಊರಿಗೆ ವಾಪಸ್ ಬಂದ ಸೈನಿಕನಿಗೆ ಸ್ನೇಹಿತರು ಹಾಗೂ ಸಂಬಂಧಿಕರು ಅದ್ದೂರಿ ಸ್ವಾಗತ ಕೋರಿದ್ದಾರೆ. ಹಾಸನ ತಾಲೂಕಿನ, ಅಂಬುಗ ಗ್ರಾಮದ ಚಿಕ್ಕೇಗೌಡ ಹಾಗೂ ಸಣ್ಣಮ್ಮ ದಂಪತಿಯ ಎರಡನೇ ಪುತ್ರ ದಿನೇಶ್ 2004 ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದು ಪಂಜಾಬ್, ಜಮ್ಮು ಕಾಶ್ಮೀರ ಸೇರಿ ಹಲವೆಡೆ ದೇಶ ಸೇವೆ ಸಲ್ಲಿಸಿದ್ದಾರೆ. 20 ವರ್ಷ ಸೇವೆ ಪೂರೈಸಿ ಭಾನುವಾರ ಹಾಸನದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್‌ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ

    ದೇಶದ ಗಡಿ ಕಾಯ್ದು ತವರಿಗೆ ಮರಳಿದ ದಿನೇಶ್‌ಗೆ ಪತ್ನಿ ವನಿತಾ, ಮಗಳು ಐಶ್ವರ್ಯ, ಕುಟುಂಬ ಸದಸ್ಯರು ಆರತಿ ಬೆಳಗಿ ವೀರ ಪುತ್ರನನ್ನು ತವರಿಗೆ ಸ್ವಾಗತ ಮಾಡಿದರು. ಕೊಡಗು ಡಿಹೆಚ್‌ಒ ಡಾ. ಸತೀಶ್ ಹಾರ ಹಾಕಿ ಶಾಲು ಹೊದಿಸಿ ಸ್ವಾಗತ ಕೋರಿದರು. ರೈಲ್ವೇ ನಿಲ್ದಾಣದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. ದೇಶ ಪ್ರೇಮದ ಘೋಷಣೆ ಕೂಗಿ ಹಾಸನದ ಪ್ರಮುಖ ಬೀದಿಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.

    ದೇಶ ಸೇವೆಗೆ ಸೇರಿದ ನಂತರ ದಿನೇಶ್ ಎಂಎ ಪದವಿ ಪಡೆದಿದ್ದಾರೆ. ಕರ್ತವ್ಯ ಪೂರೈಸಿ ವಾಪಸ್ ಬಂದ ಸೈನಿಕನಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ ಗೆಳೆಯರು ದೇಶಾಭಿಮಾನ ಮೆರೆದರು. ಇದನ್ನೂ ಓದಿ: ಜನಾಂಗೀಯ ಸಂಘರ್ಷದ ಹಿಂದೆ ವಿದೇಶಗಳ ಹಸ್ತಕ್ಷೇಪ – ಮಣಿಪುರ ಸಿಎಂ ಬಿರೇನ್ ಸಿಂಗ್ ಅನುಮಾನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕರ್ತವ್ಯ ಸಮಯದಲ್ಲಿ ಲಂಚ ಪಡೆದ ಮಹಿಳಾಧಿಕಾರಿ – ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

    ಕರ್ತವ್ಯ ಸಮಯದಲ್ಲಿ ಲಂಚ ಪಡೆದ ಮಹಿಳಾಧಿಕಾರಿ – ಕಡ್ಡಾಯ ನಿವೃತ್ತಿಗೊಳಿಸಿ ಆದೇಶ

    ತುಮಕೂರು: ಕರ್ತವ್ಯ ಸಮಯದಲ್ಲಿ ಲಂಚ (Bribe) ಪಡೆದಿದ್ದ ಮಹಿಳಾಧಿಕಾರಿಗೆ ಮುದ್ರಾಂಕ ಇಲಾಖೆ (Department Of Stamps) ಆಯುಕ್ತರು ಕಡ್ಡಾಯ ನಿವೃತ್ತಿಗೊಳಿಸಿ (Retirement) ಆದೇಶ ಹೊರಡಿಸಿದ್ದಾರೆ.

    ಗುಬ್ಬಿ (Gubbi) ತಾಲೂಕಿನ ಉಪನೋಂದಣಿ ಕಚೇರಿಯಲ್ಲಿನ ಪ್ರಥಮ ದರ್ಜೆ ಸಹಾಯಕಿ ಯಶೋಧ ವಿರುದ್ಧ ಆದೇಶ ಹೊರಡಿಸಲಾಗಿದೆ. ಈಕೆ ಕರ್ತವ್ಯದ ಸಮಯದಲ್ಲಿ ಲಂಚ ಪಡೆದುಕೊಂಡಿದ್ದರು. ಲಂಚ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನೂ ಓದಿ: ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ

    ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋವನ್ನು ಆಧರಿಸಿ ತನಿಖೆ ನಡೆಸಲಾಗಿತ್ತು. ತನಿಖೆಯಲ್ಲಿ ಲಂಚ ಪಡೆದದ್ದು ಸಾಬೀತಾದ ಹಿನ್ನೆಲೆ ಕಡ್ಡಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ವರುಣಾರ್ಭಟ – ರಾಜಧಾನಿಗೆ 2 ದಿನ ಯೆಲ್ಲೋ ಅಲರ್ಟ್

  • ಇನ್ಫೋಸಿಸ್ ಮಂಡಳಿಯಿಂದ ಕಿರಣ್ ಮಜುಂದಾರ್ ಶಾ ನಿವೃತ್ತಿ

    ಇನ್ಫೋಸಿಸ್ ಮಂಡಳಿಯಿಂದ ಕಿರಣ್ ಮಜುಂದಾರ್ ಶಾ ನಿವೃತ್ತಿ

    ಬೆಂಗಳೂರು: ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಇನ್ಫೋಸಿಸ್‌ನಲ್ಲಿ (Infosys) ಸ್ವತಂತ್ರ ನಿರ್ದೇಶಕಿಯಾಗಿ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿದ್ದು, ಮಾರ್ಚ್ 22 ರಿಂದ ಜಾರಿಗೆ ಬರುವಂತೆ ನಿವೃತ್ತರಾಗಿದ್ದಾರೆ (Retirement) ಎಂದು ಕಂಪನಿ ತಿಳಿಸಿದೆ.

    ಬಯೋಕಾನ್‌ನ (Biocon) ಕಿರಣ್ ಮಜುಂದಾರ್ ಶಾ ಅವರು ಇನ್ಫೋಸಿಸ್ ಮಂಡಳಿಯ ಸ್ವತಂತ್ರ ನಿರ್ದೇಶಕಿಯಾಗಿ ನಿವೃತ್ತರಾಗಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದೀಗ ಇನ್ಫೋಸಿಸ್‌ನ ಮಂಡಳಿಯು ನಾಮನಿರ್ದೇಶನ ಹಾಗೂ ಸಂಭಾವನೆಯ ಶಿಫಾರಸಿನ ಆಧಾರದ ಮೇಲೆ ಮಾರ್ಚ್ 23ರಿಂದ ಕಂಪನಿಯ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಡಿ ಸುಂದರಂ ಅವರನ್ನು ನೇಮಿಸಿಕೊಂಡಿದೆ.

    ಇನ್ಫೋಸಿಸ್ ಕುಟುಂಬದ ಇಂತಹ ಅವಿಭಾಜ್ಯ ಸದಸ್ಯರಾಗಿರುವ ಕಿರಣ್ ಮಜುಂದಾರ್ ಶಾ ಅವರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಲವು ವರ್ಷಗಳಿಂದ ಮಂಡಳಿಗೆ ಅಮೂಲ್ಯವಾದ ಮಾರ್ಗದರ್ಶನ ಮತ್ತು ನಾಯಕತ್ವವನ್ನು ನೀಡಿರುವುದಕ್ಕೆ, ಅವರು ನನ್ನ ಅದ್ಭುತವಾದ ಸ್ನೇಹಿತೆ ಹಾಗೂ ಸಹೋದ್ಯೋಗಿಯಾಗಿರುವುದರಿಂದ ನಾನು ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ತಿಳಿಸುತ್ತೇನೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಲ್ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

    ಕಿರಣ್ ಮಜುಂದಾರ್ ಶಾ ಅವರು 2014 ರಲ್ಲಿ ಇನ್ಫೋಸಿಸ್ ಮಂಡಳಿಗೆ ಸ್ವತಂತ್ರ ನಿರ್ದೇಶಕಿಯಾಗಿ ಮತ್ತು 2018 ರಲ್ಲಿ ಪ್ರಮುಖ ಸ್ವತಂತ್ರ ನಿರ್ದೇಶಕಿಯಾಗಿ ನೇಮಕಗೊಂಡರು. ಅವರು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಸಿಎಸ್‌ಆರ್ ಸಮಿತಿಯ ಅಧ್ಯಕ್ಷರಾಗಿ ಮಂಡಳಿಯ ಅಪಾಯ ನಿರ್ವಹಣೆ ಮತ್ತು ಇಎಸ್‌ಜಿ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

  • ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    ಡಿ.18ರ ಫೈನಲ್‌ ನನ್ನ ಕೊನೆಯ ವಿಶ್ವಕಪ್‌ ಪಂದ್ಯ – ನಿವೃತ್ತಿ ಖಚಿತಪಡಿಸಿದ ಮೆಸ್ಸಿ

    ದೋಹಾ: ಡಿಸೆಂಬರ್ 18 ರಂದು ನಡೆಯುವ ಫಿಫಾ ವಿಶ್ವಕಪ್ 2022 ರ (FIFA World Cup 2022) ಫೈನಲ್‌ ಪಂದ್ಯ ತನ್ನ ಕೊನೆಯ ಆಟ ಎಂದು ಅರ್ಜೆಂಟಿನಾ (Argentina) ತಂಡದ ನಾಯಕ ಹಾಗೂ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ (Lionel Messi) ತಿಳಿಸಿದ್ದಾರೆ. ಆ ಮೂಲಕ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ.

    ಫೈನಲ್‌ನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡುವ ಮೂಲಕ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ಇಚ್ಛಿಸಿದ್ದೇನೆ ಎಂದು ಮೆಸ್ಸಿ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಸಾಧನೆ ಎಲ್ಲರಿಗೂ ಗೊತ್ತು – ರೊನಾಲ್ಡೊಗೆ ಭಾವನಾತ್ಮಕ ಸಂದೇಶ ರವಾನಿಸಿದ ಕೊಹ್ಲಿ

    ಹಲವು ವರ್ಷಗಳ ನಂತರ ಮುಂದಿನ ವಿಶ್ವಕಪ್‌ ಪಂದ್ಯ ನಡೆಯುತ್ತದೆ. ಅಲ್ಲಿ ಇಂಥಹ ಸಾಧನೆ ಮಾಡಲು ಆಗುವುದಿಲ್ಲ ಎಂದು ನನಗೆ ಎನ್ನಿಸುತ್ತಿದೆ. ಹೀಗಾಗಿ ವಿದಾಯ ಹೇಳುವುದು ಉತ್ತಮ ಎನಿಸುತ್ತಿದೆ ಎಂದು ಮೆಸ್ಸಿ ಸ್ಪಷ್ಟಪಡಿಸಿದ್ದಾರೆ. 35 ವರ್ಷ ವಯಸ್ಸಿ ಮೆಸ್ಸಿ ಈ ಬಾರಿ ತಮ್ಮ ಐದನೇ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ.

    ನಿನ್ನೆ ನಡೆದ ಫಿಫಾ ವಿಶ್ವಕಪ್‌ ಸೆಮಿಫೈನಲ್‌ ಪಂದ್ಯದಲ್ಲಿ 3-0 ಗೋಲುಗಳಿಂದ ಕ್ರೊವೇಷಿಯಾವನ್ನು ಅರ್ಜೆಂಟಿನಾ ತಂಡ ಮಣಿಸಿತ್ತು. ತಂಡವನ್ನು ಸದ್ಯ ಮೆಸ್ಸಿ ಮುನ್ನಡೆಸಿದರು. ಭಾನುವಾರ ವಿಶ್ವಕಪ್‌ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    Live Tv
    [brid partner=56869869 player=32851 video=960834 autoplay=true]

  • ನನಗೆ ನೀವು ಕೊಟ್ಟಿರುವ ಪೊಷಿಷನ್‌ ಸಾಕು, ಇನ್ಯಾವುದೂ ಬೇಡ – ಡಿಕೆಶಿ ರಾಜಕೀಯ ನಿವೃತ್ತಿ ಸುಳಿವು!

    ನನಗೆ ನೀವು ಕೊಟ್ಟಿರುವ ಪೊಷಿಷನ್‌ ಸಾಕು, ಇನ್ಯಾವುದೂ ಬೇಡ – ಡಿಕೆಶಿ ರಾಜಕೀಯ ನಿವೃತ್ತಿ ಸುಳಿವು!

    ರಾಮನಗರ: (Ramanagara) ನನಗೆ ನೀವು ಕೊಟ್ಟಿರುವ ಪೊಷಿಷನ್ ಸಾಕು, ಇನ್ಯಾವ ಪೊಷಿಷನ್ ಬೇಡ. ನನಗೆ ಇದೀಗ 60 ವರ್ಷ ತುಂಬಿದೆ ಎಂದು ರಾಜಕೀಯ ನಿವೃತ್ತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (D.K.Shivakumar) ಸುಳಿವು ನೀಡಿದ್ದಾರೆ.

    ಆಯುಧ ಪೂಜೆ ದಿನ ಕನಕಪುರದ ತಮ್ಮ ನಿವಾಸದಲ್ಲಿ ಶಿಕ್ಷಣ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿರುವ ವೀಡಿಯೋ ವೈರಲ್‌ ಆಗಿದೆ. ನಾನು ಇನ್ನು 8-10 ವರ್ಷ ಮಾತ್ರ ರಾಜಕಾರಣ ಮಾಡಬಹುದು. ಆ ನಂತರ ರಾಜಕೀಯ ಮಾಡಲು ಆಗಲ್ಲ. ಕನಕಪುರ ಕ್ಷೇತ್ರದ ಜನರು ನನಗೆ ಮತ ನೀಡಿ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ರಾಜಕೀಯ ನಿವೃತ್ತಿ ಪಡೆಯುವುದರ ಒಳಗಾಗಿ ಈ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಬದಲಾವಣೆ ತರಬೇಕು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಒಪ್ಪಿಗೆ – ಹಾಲಿ ಎಷ್ಟಿದೆ? ಎಷ್ಟು ಏರಿಕೆಯಾಗಿದೆ?

    ನಾನು ಯಾವುದೇ ಪ್ರತಿಫಲ ನಿರೀಕ್ಷೆ ಮಾಡುವುದಿಲ್ಲ. ನಾನು ಸಾಕಷ್ಟು ಸಂಪಾದನೆ ಮಾಡಿದ್ದೇನೆ. ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ನನ್ನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಅನುಭವಿಸುತ್ತೇನೆ ಎಂದು ಹೇಳಿದ್ದಾರೆ.

    ಈ ತಾಲೂಕಿನಲ್ಲಿ ಯಾವುದೇ ವಿಚಾರಕ್ಕೂ ಯಾರ ಮುಂದೆಯೂ ಕೈಚಾಚಿಲ್ಲ. ಯಾವುದೇ ಕಾಮಗಾರಿಯಲ್ಲೂ ಕಮಿಷನ್ ಪಡೆದಿಲ್ಲ. ಜಾತಿ ಮೇಲೆ ನನಗೆ ನಂಬಿಕೆ ಇಲ್ಲ. ನೀತಿಯ ಮೇಲೆ ನನಗೆ ನಂಬಿಕೆ ಇದೆ ಅಷ್ಟೇ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ಜಿಲ್ಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಶಾಸಕ ಸಿಂಧ್ಯ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವರು ರಾಜಕೀಯ ಮಾಡಿದ್ದಾರೆ. ಆದರೆ ಅವರ‍್ಯಾರು ಶಿಕ್ಷಣ ಸಂಸ್ಥೆಗೆ ಅಷ್ಟು ಕೆಲಸ ಮಾಡಿಲ್ಲ. ನಾನು ಬಂದ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ. ಇನ್ನುಳಿದದ್ದನ್ನ ಈಗ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಕಳೆದ 25 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ಈಗಿನ ಶಿಕ್ಷಣ ಸಂಸ್ಥೆ ಬಗ್ಗೆ ನಂಬಿಕೆ ಇಲ್ಲ. ಅದನ್ನು ಬದಲಾಯಿಸಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿವೃತ್ತಿ ಹೊಂದಿರುವ, ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ: ಸಿಜೆಐ ರಮಣ

    ನಿವೃತ್ತಿ ಹೊಂದಿರುವ, ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ: ಸಿಜೆಐ ರಮಣ

    ನವದೆಹಲಿ: ನಿವೃತ್ತಿ ಹೊಂದಿರುವ ಅಥವಾ ತನ್ನ ವೃತ್ತಿ ಜೀವನದಿಂದ ನಿವೃತ್ತಿ ಹೊಂದಲಿರುವ ವ್ಯಕ್ತಿಗೆ ಭಾರತದಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಹೇಳಿದ್ದಾರೆ.

    ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳು ನೀಡಿದ್ದ ಉಚಿತ ಕೊಡುಗೆಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ರಮಣ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಸಮಸ್ಯೆಯನ್ನು ಪರಿಶೀಲಿಸಲು ಸಮಿತಿಯನ್ನು ಸ್ಥಾಪಿಸಬೇಕು ಎಂಬ ವಿಚಾರ ಬಂದಾಗ ಹಿರಿಯ ವಕೀಲ ವಿಕಾಸ್ ಸಿಂಗ್, ಇಂತಹ ಸಮಿತಿಗೆ ನ್ಯಾ. ಲೋಧಾ ಅವರಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವ ವಹಿಸಬೇಕು ಎಂದು ಕೋರ್ಟ್‌ ಗಮನಕ್ಕೆ ತಂದರು. ಇದನ್ನೂ ಓದಿ: ಮುಸ್ಲಿಂ ಕಾನೂನಿನಲ್ಲಿ ಪೋಷಕರ ಅನುಮತಿಯಿಲ್ಲದೇ ಅಪ್ರಾಪ್ತೆ ವಿವಾಹವಾಗಬಹುದು: ಕೋರ್ಟ್‌

    ಈ ವೇಳೆ ನಿವೃತ್ತರಾಗುವ ಅಥವಾ ನಿವೃತ್ತಿಯಾಗಲಿರುವ ವ್ಯಕ್ತಿಗೆ ಈ ದೇಶದಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ಸಿಜೆಐ ರಮಣ ಉತ್ತರ ನೀಡಿದರು. ಸಿಜೆಐ ರಮಣ ಇನ್ನೆರಡು ದಿನಗಳಲ್ಲಿ ಸೇವೆಯಿಂದ ನಿವೃತ್ತರಾಗಲಿದ್ದಾರೆ.

    ರಮಣ ಅವರು 2014ರ ಫೆಬ್ರವರಿ 17 ರಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು. 2021ರ ಏಪ್ರಿಲ್‌ 24 ರಂದು ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡ ಇವರು ಆಗಸ್ಟ್‌ 26 ರಂದು ನಿವೃತ್ತರಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]