Tag: ನಿವಾಸಿ

  • ವಿಡಿಯೋ: 9 ಅಡಿ ಉದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಜನ

    ವಿಡಿಯೋ: 9 ಅಡಿ ಉದ್ದದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಜನ

    ತುಮಕೂರು: ಜಿಲ್ಲೆಯ ಹುಲಿಯೂರುದುರ್ಗದ ಹಳೇಪೇಟೆಯಲ್ಲಿ ಹೆಬ್ಬಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

    ಪ್ರಕಾಶ್ ಎಂಬವರ ಮನೆಯ ನೀರಿನ ಟ್ಯಾಂಕ್ ಬಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಈ ಹೆಬ್ಬಾವನ್ನು ಕಂಡ ಜನರು ಬೆಚ್ಚಿಬಿದ್ದರು. ಅಲ್ಲದೆ ಸುಮಾರು ಎರಡು ಗಂಟೆಗಳ ಕಾಲ ಸ್ಥಳೀಯ ನಿವಾಸಿಗಳು ಭಯದಲ್ಲೇ ಕಾಲ ಕಳೆದಿದ್ದಾರೆ.

    ಹೆಬ್ಬಾವು ನೋಡಿದ ತಕ್ಷಣ ಸ್ಥಳೀಯರು ಸ್ನೇಕ್ ಚೇತನ್‍ಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಚೇತನ್, ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಹೆಬ್ಬಾವನ್ನು ರಕ್ಷಿಸಿ ಅದನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ. ಹೆಬ್ಬಾವನ್ನು ಸೆರೆಹಿಡಿಯುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

    ಸುಮಾರು 9 ಅಡಿ ಉದ್ದ ಇರುವ ಈ ಹೆಬ್ಬಾವು ಪಕ್ಕದ ಅರಣ್ಯ ಪ್ರದೇಶದಿಂದ ನಾಡಿಗೆ ಬಂದಿತ್ತು. ಸದ್ಯ ಹೆಬ್ಬಾವನ್ನು ಹಿಡಿದಿದ್ದರಿಂದ ಹಳೇ ಪೇಟೆ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

  • ದಾವಣಗೆರೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ

    ದಾವಣಗೆರೆಯಲ್ಲಿ ಶುಕ್ರವಾರ ಸುರಿದ ಮಳೆಗೆ ಮನೆಗಳು ಸಂಪೂರ್ಣ ಜಲಾವೃತ

    ದಾವಣಗೆರೆ: ಶುಕ್ರವಾರ ರಾತ್ರಿ ಸುರಿದ ಮಳೆಗೆ ದಾವಣಗೆರೆಯ ಭಾಷಾ ನಗರದ ಆರನೇ ಕ್ರಾಸ್ ನಲ್ಲಿರುವ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ನೂರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಅಲ್ಲಿನ ನಿವಾಸಿಗಳು ನೀರನ್ನು ಹೊರ ಹಾಕುತ್ತಿದ್ದಾರೆ.

    ಪ್ರತಿ ಬಾರಿ ಮಳೆ ಜಾಸ್ತಿ ಬಂದರೆ ಇಲ್ಲಿನ ನಿವಾಸಿಗಳು ನರಕವನ್ನು ಅನುಭವಿಸುವಂತಾಗುತ್ತದೆ. ಮಳೆ ನೀರು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿ ಮಾಡಿವೆ. ಇದನ್ನೂ ಓದಿ: ಕೇವಲ ಅರ್ಧ ಗಂಟೆ ಮಳೆಗೆ ತತ್ತರಿಸಿದ ಬೆಂಗ್ಳೂರು- 100ಕ್ಕೂ ಹೆಚ್ಚು ಮನೆ ಜಲಾವೃತ

    ಇಲ್ಲಿ ವಾಸಿಸುವ ಜನರು ಬಹುತೇಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದು, ಮನೆಗಳಿಗೆ ಏಕಾಏಕಿ ನೀರು ನುಗ್ಗಿದ ಹಿನ್ನಲೆ ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಹಾಗೂ ಅಡುಗೆ ಸಾಮಗ್ರಿಗಳು ಜಲಾವೃತಗೊಂಡಿದ್ದು, ಸಂಕಷ್ಟ ಅನುಭವಿಸುವಂತಾಗಿದೆ. ಅದರಲ್ಲೂ ಚಿಕ್ಕ ಚಿಕ್ಕ ಕಂದಮ್ಮಗಳಿದ್ದು ಮಾರಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪುವಂತಾಗಿದೆ.

    ಪ್ರತಿನಿತ್ಯ ನರಕದಲ್ಲಿ ಜೀವನ ಮಾಡುವ ನಮಗೆ ಒಳ್ಳೆಯ ಚರಂಡಿ ವ್ಯವಸ್ಥೆ ಹಾಗೂ ಮಳೆ ನೀರು ಸರಾಗವಾಗಿ ಹರಿಯುವ ರೀತಿ ವ್ಯವಸ್ಥೆ ಮಾಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದರು. ಹಲವು ಬಾರಿ ಇಲ್ಲಿನ ಸ್ಥಳೀಯರು ಜನ ಪ್ರತಿನಿಧಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಕೇವಲ ಚುನಾವಣೆಗೆ ಮಾತ್ರ ಬರ್ತಾರೆ ವಿನಃ ಸಮಸ್ಯೆಗಳನ್ನು ಬಗೆಹರಿಸಲು ಬರುವುದಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗನ ಸಾವಿನಿಂದ ಮನನೊಂದು 500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ್ರು!

    ಮಗನ ಸಾವಿನಿಂದ ಮನನೊಂದು 500ಕ್ಕೂ ಹೆಚ್ಚು ರಸ್ತೆಗುಂಡಿಗಳನ್ನು ಮುಚ್ಚಿದ್ರು!

    ಮುಂಬೈ: ಮೂರು ವರ್ಷದ ಹಿಂದೆ ತನ್ನ 16 ವರ್ಷದ ಮಗ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟಿರುವುದರಿಂದಾಗಿ ಆತನ ಸ್ಮರಣಾರ್ಥವಾಗಿ ಮುಂಬೈನ ವ್ಯಕ್ತಿಯೊಬ್ಬರು ಸುಮಾರು 556 ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

    ಮುಂಬೈ ನಿವಾಸಿ ದಾದಾರಾವ್ ಬಿಲ್ಹೊರೆ ಮಗ ಪ್ರಕಾಶ್ 2015ರ ಜುಲೈ 28ರಂದು ಬೈಕ್ ಸಮೇತ ಆಳವಾದ ರಸ್ತೆ ಗುಂಡಿಗೆ ಬಿದ್ದು ಮೃತಪಟ್ಟಿದ್ದನು. ಈ ಘಟನೆ ಮುಂಬೈನ ಜೋಗೇಶ್ವರಿ ವಿಖ್ರೋಲಿ ಲಿಂಕ್ ರೋಡ್(ಜೆವಿಎಲಾರ್)ನಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರಕಾಶ್ ತಂದೆ, ನನ್ನ ಮಗನಿಗಾದ ಸ್ಥಿತಿ ಯಾರಿಗೂ ಬರಬಾರದು. ಹೀಗಾಗಿ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ಭಾನುವಾರ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ.

    ನನ್ನ ಮಗನಂತೆ ಯಾರೂ ತಮ್ಮ ಜೀವ ಕಳೆದುಕೊಳ್ಳಬಾರದು. ಜನ ಇನ್ನು ಮುಂದೆ ಇಂತಹ ಸಮಸ್ಯೆಗಳನ್ನು ಎದುರಿಸಬಾರದು. ಹೀಗಾಗಿ ರಸ್ತೆ ಗುಂಡಿ ಮುಕ್ತ ಭಾರತವಾಗುವವರೆಗೆ ನಾನು ಈ ಕೆಲಸ ಮಾಡುತ್ತೇನೆ. ಹೆಚ್ಚು ಜನಸಂಖ್ಯೆ ಇರುವ ದೇಶ ನಮ್ಮದಾಗಿದೆ. ಹೀಗಾಗಿ ಇದರಲ್ಲಿ ಒಂದು ಲಕ್ಷ ಜನ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ರೆ, ನಮ್ಮದು ರಸ್ತೆ ಗುಂಡಿ ಮುಕ್ತ ದೇಶವಾಗುದ್ರಲ್ಲಿ ಯಾವುದೇ ಸಂಶಯವಿಲ್ಲ ಅಂತ ಬಿಲ್ಹೋರೆ ತಿಳಿಸಿದ್ದಾರೆ.

    ಬಿಲ್ಹೊರೆಯವರು ಹೇಳಿದಂತೆ ಎಲ್ಲರೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ಮಾಡಿದ್ರೆ ದೇಶದಲ್ಲಿ ಈ ಸಮಸ್ಯೆಯಿಂದ ಆದಷ್ಟು ಬೇಗ ಮುಕ್ತರಾಗಬಹುದು ಅಂತ ಬ್ರಿಹನ್ ಮುಂಬೈ ಮುನ್ಸಿಪಲ್ ಕಾಪೋರೇಶನ್(ಬಿಎಂಸಿ) ತಿಳಿಸಿದೆ.

    ಈ ಮಾನ್ಸೂನ್ ಸಮಯದಲ್ಲಿ ಇಡೀ ಮುಂಬೈನಲ್ಲಿ ಸುಮಾರು 6 ಮಂದಿ ರಸ್ತೆ ಗುಂಡಿಗೆ ಬಿದ್ದು ಜೀವ ಕಳೆದುಕೊಂಡಿದ್ದಾರೆ. ವರ್ಷದ ಮೊದಲು ರಾಜ್ಯದಲ್ಲಿ ರಸ್ತೆ ಗುಂಡಿಗಳ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನೆಯವರು ಪ್ರತಿಭಟನೆ ಕೂಡ ನಡೆಸಿದ್ದರು.