Tag: ನಿಲ್ದಾಣ

  • ಸಂಕಷ್ಟದ ಸಮಯ, ಗಡಿಗಳನ್ನು ಮುಕ್ತವಾಗಿಡಿ-ವಿಶ್ವಸಂಸ್ಥೆ ಕರೆ

    ಸಂಕಷ್ಟದ ಸಮಯ, ಗಡಿಗಳನ್ನು ಮುಕ್ತವಾಗಿಡಿ-ವಿಶ್ವಸಂಸ್ಥೆ ಕರೆ

    ನವದೆಹಲಿ: ಸಂಕಷ್ಟದ ಸಮಯ, ಗಡಿಗಳನ್ನು ಮುಕ್ತವಾಗಿಡಿ ಎಂದು ಅಫ್ಘಾನ್ ನೆರೆರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ ನೀಡಿದೆ.

    ಸದ್ಯ, ಅಪಾಯದಲ್ಲಿರುವವರಿಗೆ ಯಾವುದೇ ದಾರಿಯಿಲ್ಲ ಎಂದಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಮಾನವ ವಕ್ತಾರ ಶಬಿಯಾ ಮಂಟೂ, ಅಫ್ಘಾನಿಸ್ತಾನದಲ್ಲಿ ಬೆಳೆಯುತ್ತಿರುವ ಪರಿಸ್ಥಿತಿಯಲ್ಲಿ ನಾಗರಿಕರು, ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯ ಅಪಾಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ನಮ್ಮ ನೆರವು ಬೇಕಿದೆ: ಸೋನುಸೂದ್

    ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಜನಸಂದಣಿ ಮತ್ತು ರನ್ ವೇನಲ್ಲಿ ವಿಮಾನಗಳಲ್ಲಿ ನೇತಾಡುತ್ತಿರುವ ವ್ಯಕ್ತಿಗಳ ವೀಡಿಯೋ ತುಣುಕನ್ನು ಪ್ರಸ್ತಾಪಿಸಿರುವ ಮಂಟೂ, ಅಫ್ಘಾನಿಸ್ತಾನ ತೊರೆಯಲು ಸಾಧ್ಯವಾಗದೆ ಉಳಿದಿರುವವರನ್ನು ಮರೆಯಲು ಸಾಧ್ಯವಿಲ್ಲ. ಈ ಸ್ಥಳಾಂತರಿಸುವಿಕೆಗಳು ಜೀವರಕ್ಷಕವಾಗಿವೆ, ಅವುಗಳು ನಿರ್ಣಾಯಕವಾಗಿವೆ, ಅವುಗಳು ಅಗತ್ಯವಿದೆ. ಇದಕ್ಕೆ ಅಂತಾರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದಿದ್ದಾರೆ.

    ಈ ವರ್ಷದ ಆರಂಭದಿಂದಲೂ, ಯುಎನ್‍ಹೆಚ್‍ಸಿಆರ್ ದೇಶದ 230,000 ಜನರಿಗೆ ತುರ್ತು ಸಹಾಯ ಒದಗಿಸಿದೆ. ಇದರಲ್ಲಿ ನಗದು ನೆರವು, ನೈರ್ಮಲ್ಯ ಬೆಂಬಲ ಮತ್ತು ಇತರ ಪರಿಹಾರ ವಸ್ತುಗಳು ಸೇರಿವೆ. ಸ್ಥಳಾಂತರಗೊಂಡ ಸುಮಾರು ಅರ್ಧ ಮಿಲಿಯನ್ ಆಫ್ಘಾನ್ನರಿಗೆ ಅಗತ್ಯಗಳ ಮೌಲ್ಯಮಾಪನಗಳು ನಡೆಯುತ್ತಿವೆ. ಅವರಲ್ಲಿ 80ಪ್ರತಿಶತ ಮಹಿಳೆಯರು ಮತ್ತು ಮಕ್ಕಳು ಎಂದು ಯುಎನ್ ಸಂಸ್ಥೆ ಹೇಳಿದೆ.

  • ನಿಲ್ದಾಣಕ್ಕೆ ಬರುತ್ತಿದ್ದಂತೆ ಹೊತ್ತಿ ಉರಿದ ರೈಲು

    ನಿಲ್ದಾಣಕ್ಕೆ ಬರುತ್ತಿದ್ದಂತೆ ಹೊತ್ತಿ ಉರಿದ ರೈಲು

    ಲಕ್ನೋ: ರೈಲು ನಿಲ್ದಾಣಕ್ಕೆ ಬರುತ್ತಿರುವಾಗಲೇ ಶತಾಬ್ದಿ  ಎಕ್ಸ್‌ಪ್ರೆಸ್ ಪಾರ್ಸಲ್ ಕೋಚ್ ಬೆಂಕಿಯಿಂದ ಧಗಧಗನೆ ಉರಿದಿದೆ.

    ದೆಹಲಿ ಹಾಗೂ ಘಾಜಿಯಾಬಾದ್ ನಡುವೆ ಸಂಚಾರ ನಡೆಸುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲ್ವೆ ಪಾರ್ಸೆಲ್ ಕೋಚ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ರೈಲು ನಿಲ್ದಾಣಕ್ಕೆ ಬರುತ್ತಿರುವಾಗಲೇ ಈ ಅವಘಡ ಉಂಟಾಗಿದೆ.

    ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಬ್ಬಂದಿ ಕೂಡಲೇ ಅಗ್ನಿಶಾಮಕದಳ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಕೂಡಲೇ ಬೋಗಿಯನ್ನು ಇತರ ಕೋಚ್‍ಗಳಿಂದ ಬೇರ್ಪಡಿಸಲಾಯಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ.

  • ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಲಾಕ್‍ಡೌನ್ ಮುಗಿದಿದ್ದೆ ತಡ ರೈಲ್ವೆ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನ

    ಬೆಂಗಳೂರು: ಒಂದು ವಾರದ ಲಾಕ್‍ಡೌನ್ ಅಂತ್ಯವಾಗಿದ್ದೆ ತಡ ಬೆಂಗಳೂರಿನಲ್ಲಿ ವಾಸವಿದ್ದ ಬೇರೆ ಬೇರೆ ರಾಜ್ಯದವರು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಕಡೆ ಮುಖ ಮಾಡಿದ್ದಾರೆ.

    ಒಂದು ವಾರಗಳ ಕಾಲ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಮಾತ್ರ ಲಾಕ್‍ಡೌನ್ ಮಾಡಲಾಗಿತ್ತು. ರೈಲು ಮತ್ತು ವಿಮಾನ ಓಡಾಟವನ್ನು ನಿಲ್ಲಿಸಿರಲಿಲ್ಲ. ಆದರೆ ರೈಲ್ವೆ ನಿಲ್ದಾಣಕ್ಕೆ ಹೋಗಲು ಯಾವುದೇ ಬಸ್, ಆಟೋ, ಕ್ಯಾಬ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಬೇರೆ ಬೇರೆ ರಾಜ್ಯದ ಕಾರ್ಮಿಕರು ಒಂದು ವಾರ ಬೆಂಗಳೂರಿನಲ್ಲಿ ಲಾಕ್‍ಡೌನ್ ಆಗಿದ್ದರು. ಇದೀಗ ಲಾಕ್‍ಡೌನ್ ಅಂತ್ಯವಾಗುತ್ತಿದ್ದಂತೆ ಕಾರ್ಮಿಕರು ರೈಲ್ವೆ ನಿಲ್ದಾಣದ ಕಡೆ ಬರುತ್ತಿದ್ದಾರೆ.

    ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಮುಂದೆ ಜನ ಕ್ಯೂ ನಿಂತಿದ್ದು, ಸಾವಿರಾರು ಜನ ಲಗೇಜ್ ಸಮೇತ ಬೆಂಗಳೂರನ್ನ ತೊರೆಯುತ್ತಿದ್ದಾರೆ. ಬೆಳ್ಳಂಬೆಳ್ಳಗ್ಗೆ ಹೊರ ರಾಜ್ಯದವರು ಬೆಂಗಳೂರನ್ನ ತೊರೆಯಲು ಮುಂದಾಗಿದ್ದು, ಬಿಹಾರ, ಪಾಟ್ನಾ ಮತ್ತು ಅಸ್ಸಾಂ ಕಡೆ ಹೋಗುವುದಕ್ಕೆ ಕಾರ್ಮಿಕರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ ಹಾಕಿಕೊಳ್ಳದೆ ಜನ ಲಗೇಜ್ ಇಟ್ಟಿಕೊಂಡು ಕಾಯುತ್ತಿದ್ದಾರೆ.

    ಈ ಮೂಲಕ ಲಾಕ್‍ಡೌನ್ ಅಂತ್ಯ ಆಗಿದ್ದೆ ತಡ ಬೇರೆ ಬೇರೆ ರಾಜ್ಯಗಳಿಗೆ ಹೋಗಲು ಸಾವಿರಾರು ಜನ ಸಾಲು ಗಟ್ಟಿ ನಿಂತಿದ್ದಾರೆ. ಪ್ರತಿಯೊಬ್ಬ ಪ್ರಯಾಣಿಕನಿಗೂ ಟೆಂಪ್ರೇಚರ್ ಚೆಕ್ ಮಾಡಿ, ವೈದ್ಯಕೀಯ ತಪಾಸಣೆ ಮಾಡಿ ರೈಲು ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಅಲ್ಲದೇ ಹೊಂ ಕ್ವಾರಂಟೈನ್ ಸೀಲ್ ಚೆಕ್ ಮಾಡಿ ಒಳಗಡೆ ಬಿಡಲಾಗುತ್ತಿದೆ.

  • KSRTC ಬಸ್ ನಿಲ್ದಾಣದ ಲಾಡ್ಜನ್ನೇ ಬಾರ್ ಮಾಡ್ಕೊಂಡ ಪ್ರಯಾಣಿಕರು..!

    KSRTC ಬಸ್ ನಿಲ್ದಾಣದ ಲಾಡ್ಜನ್ನೇ ಬಾರ್ ಮಾಡ್ಕೊಂಡ ಪ್ರಯಾಣಿಕರು..!

    ದಾವಣಗೆರೆ: ಬಸ್ ನಿಲ್ದಾಣದ ಲಾಡ್ಜನ್ನೇ ಬಾರ್ ಮಾಡಿಕೊಂಡು ಪ್ರಯಾಣಿಕರು ಕುಡಿಯುತ್ತಾ ಕುಳಿತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ ಘಟನೆ ದಾವಣಗೆರೆಯ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ನಂದಿನಿ ಲಾಡ್ಜ್ ಮೇಲೆ ಕೆಟಿಜೆ ನಗರ ಪೊಲೀಸರು ದಾಳಿ ನಡೆಸಿದ್ದು, ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಲಾಡ್ಜ್ ಗಳಲ್ಲಿ ಮದ್ಯ ಸೇವನೆಗೆ ಅವಕಾಶಗಳಿಲ್ಲ. ಆದರೆ ನಿಯಮ ಮೀರಿ ನಂದಿನಿ ಲಾಡ್ಜ್ ನಲ್ಲಿ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದರಲ್ಲದೆ ಅಲ್ಲೇ ಕುಳಿತು ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು.

    ಇದರಿಂದ ಬಸ್ ಚಾಲಕರು ಹಾಗೂ ನಿರ್ವಾಹರು ಮದ್ಯ ಸೇವನೆ ಮಾಡಿ ಬಸ್ ಚಾಲನೆ ಮಾಡುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಸಾಮಾಜಿಕ ಕಾರ್ಯಕರ್ತರ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ 6 ಮದ್ಯದ ಬಾಟಲಿಗಳನ್ನು ಹಾಗೂ ಲಾಡ್ಜ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಚಾಲಕರು ಹಾಗೂ ನಿರ್ವಾಹಕರು ಮದ್ಯ ಸೇವನೆ ಮಾಡಿ ಬಸ್ ಚಲಾವಣೆ ಮಾಡುತ್ತಿರುವುದು ತಿಳಿದುಬಂದಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಧಾನಸೌಧದ ಮುಂಭಾಗ, ಮೆಟ್ರೋ ಅಂಡರ್‍ಪಾಸ್ ಮೇಲಿರುವ ರಸ್ತೆಯಲ್ಲಿ ಭಾರೀ ಬಿರುಕು

    ವಿಧಾನಸೌಧದ ಮುಂಭಾಗ, ಮೆಟ್ರೋ ಅಂಡರ್‍ಪಾಸ್ ಮೇಲಿರುವ ರಸ್ತೆಯಲ್ಲಿ ಭಾರೀ ಬಿರುಕು

    ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಮಹಾ ಮಳೆಗೆ ವಿಧಾನಸೌಧದ ಮುಂಭಾಗದಲ್ಲಿರುವ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದೆ.

    ವಿಧಾನ ಸೌಧದ ಮುಂಭಾಗ ಮತ್ತು ಅಂಬೇಡ್ಕರ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು ವಾಹನಗಳು ಚಲಿಸಿದಾಗ ಗಢ ಗಢ ಎನ್ನುತ್ತಿದೆ. ಘನವಾಹನಗಳಾದ ಬಸ್, ಲಾರಿ ಬಂದರೆ ರಸ್ತೆ ಸಂಪೂರ್ಣ ಕುಸಿದುಬಿದ್ದಂತೆ ಆಗುತ್ತಿದೆ.

    ರಸ್ತೆ ಕೆಳಭಾಗದಲ್ಲಿ ಮೆಟ್ರೋ ರೈಲಿನ ಅಂಡರಪಾಸ್ ಸಹ ಇದೆ. ಕೂಡಲೇ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದೆ ದೊಡ್ಡ ಅನಾಹುತವಾಗುವ ಸಾಧ್ಯತೆಯಿದೆ.

     

    https://youtu.be/7geiwdyVck0