Tag: ನಿರ್ವಹಣೆ

  • ಸಚಿವರಾದ್ರೂ ರಸ್ತೆಗಿಳಿದು ಟ್ರಾಫಿಕ್ ನಿರ್ವಹಣೆ ಕೆಲ್ಸ ಮಾಡಿದ್ರು

    ಸಚಿವರಾದ್ರೂ ರಸ್ತೆಗಿಳಿದು ಟ್ರಾಫಿಕ್ ನಿರ್ವಹಣೆ ಕೆಲ್ಸ ಮಾಡಿದ್ರು

    ಮಂಗಳೂರು: ಉನ್ನತ ಸ್ಥಾನದಲ್ಲಿದ್ದರು ಯಾವುದೇ ಬೇಸರವಿಲ್ಲದೆ ರಸ್ತೆ ಮಧ್ಯೆ ಟ್ರಾಫಿಕ್ ಪೋಲಿಸ್ ಜೊತೆ ಟ್ರಾಫಿಕ್ ಸೇವಕನಾಗಿ ನಿಂತ್ಕೊಂಡು ಸುಗಮವಾಗಿ ವಾಹನಗಳು ಸಂಚರಿಸುವಂತೆ ಸಚಿವರೊಬ್ಬರು ಕೆಲಸ ಮಾಡಿದ್ದಾರೆ.

    ಸಚಿವರಾದ ಮೇಲೆ ಝೀರೋ ಟ್ರಾಫಿಕ್‍ನಲ್ಲಿ ಓಡಾಡೋರನ್ನ ನೋಡಿದ್ದೀರಾ. ಆದ್ರೆ ಉನ್ನತ ಸ್ಥಾನದಲ್ಲಿದ್ದು, ಸಚಿವರಾಗಿದ್ದರೂ ಯಾವುದೇ ಮುಲಾಜಿಲ್ಲದೆ ಟ್ರಾಫಿಕ್ ಕೆಲಸ ಮಾಡೋದನ್ನ ನೀವು ನೋಡಿರಲ್ಲ. ಆದ್ರೆ ವಸತಿ ಹಾಗೂ ನಗರ ಪಾಲಿಕೆಗಳ ಸಚಿವರಾದ ಯುಟಿ ಖಾದರ್ ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಸೇವಕನಾಗಿ ಸಲೀಸಾಗಿ ವಾಹನ ಸಂಚರಿಸುವಂತೆ ಕೆಲಸ ಮಾಡಿ ಟ್ರಾಫಿಕ್ ಪೊಲೀಸರಿಗೆ ಸಹಾಯ ಮಾಡಿದ್ದಾರೆ.

    ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯ ಪಂಪ್ ವೆಲ್ ಬಳಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ದಿನ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಟ್ರಾಫಿಕ್ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಇಂದು ಸಚಿವ ಯುಟಿ ಖಾದರ್ ಪಂಪ್ ವೆಲ್ ಮಾರ್ಗದಲ್ಲಿ ಬರ್ತಿದ್ದಂತೆ ಟ್ರಾಫಿಕ್ ಹೆಚ್ಚಾಗಿತ್ತು. ಇದನ್ನ ಕಂಡು ಸಚಿವರು ತಾವೇ ಖುದ್ದಾಗಿ ಕಾರಿನಿಂದ ಇಳಿದು ಪೊಲೀಸರ ಜೊತೆಗೆ ನಿಂತು ಟ್ರಾಫಿಕ್ ನಿರ್ವಹಣೆ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಬೃಹತ್ ವಾಹನ ಸಂಚಾರಕ್ಕೆ ನಿಷೇಧ

    ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಬೃಹತ್ ವಾಹನ ಸಂಚಾರಕ್ಕೆ ನಿಷೇಧ

    ಬೆಂಗಳೂರು: ನಗರದ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಪ್ಲೈ ಓವರ್ ಮೇಲೆ ಬಸ್ ಮತ್ತು ಬೃಹತ್ ವಾಹನಗಳ ಸಂಚಾರವನ್ನು ಸೋಮವಾರ ಸಂಜೆ 6 ಗಂಟೆಯಿಂದ ನಿಷೇಧಿಸಲಾಗಿದೆ.

    ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಸಿಲ್ಕ್ ಬೋರ್ಡ್ ಗೆ ಸಂಪರ್ಕ ಕಲ್ಪಿಸುವ ಮೇಲ್ಸತುವೆ ಇದಾಗಿದ್ದು, ಈ ಸೇತುವೆ ನಿರ್ಮಾಣವಾಗಿ 8 ವರ್ಷಗಳಾಗಿದೆ. ಆದ್ದರಿಂದ ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ತಡೆ ಏರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಿರ್ವಹಣೆ ನಡೆಯಲಿದೆ.

    ಸೇತುವೆ ನಿರ್ವಹಣೆಗಾಗಿ ಬೃಹತ್ ವಾಹನಗಳ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಿಲ್ಲ. ಲಘು ವಾಹನಗಳಾದ ಕಾರು ಮತ್ತು ದ್ವಿಚಕ್ರ ವಾಹನಗಳು ಸಂಚಾರ ಎಂದಿನಂತೆ ನಡೆಯಲಿದೆ. ಈ ಕುರಿತು ಬಿಇಟಿಎಲ್ ಪ್ರಕಟಣೆ ನೀಡಿದ್ದು, ಪ್ಲೈ ಓವರ್ ಮೇಲೆ ಯಾವುದೇ ಅಪಾಯವಿಲ್ಲ, ಕೇವಲ ನಿರ್ವಹಣೆಗಾಗಿಯೇ ಬೃಹತ್ ವಾಹನಗಳಿಗೆ ಪ್ರವೇಶ ನೀಡಿಲ್ಲವೆಂದು ತಿಳಿಸಿದೆ.

    ಮೇಲ್ಸತುವೆ ಮೇಲಿನ ರಸ್ತೆ ಮತ್ತು ಜಾಯಿಂಟ್ ಗಳ ನಿರ್ವಹಣೆ ಹಾಗೂ ಪಾಥ್ ಹೋಲ್ಸ್ ನಿರ್ವಹಣೆಯ ನಡೆಯಲಿದೆಯೆಂದು ಪ್ರಕಟಣೆಯಲ್ಲಿ ಬಿಇಟಿಎಲ್ ನ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ರಾಷ್ಟ್ರಪತಿ ಭವನದ ಉದ್ಯಾನವನ ನಿರ್ವಹಣೆಗೆ 12.70 ಕೋಟಿ ರೂ. ವೆಚ್ಚ!

    ಬೆಳಗಾವಿ: ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಉದ್ಯಾನವನದ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 12.70 ಕೋಟಿ ರೂಪಾಯಿ ವೆಚ್ಚಮಾಡಲಾಗಿದೆ ಎಂದು ಆರ್ ಟಿಐ ಮೂಲಕ ಬಹಿರಂಗವಾಗಿದೆ.

    ನಗರದ ಆರ್ ಟಿಐ ಕಾರ್ಯಕರ್ತರಾದ ಭೀಮಪ್ಪ ಗಡಾದ ರವರು, ರಾಷ್ಟ್ರಪತಿ ಭವನ ಉದ್ಯಾನವನದ ಖರ್ಚು-ವೆಚ್ಚಗಳ ಬಗ್ಗೆ ಆರ್ ಟಿಐ ಅಡಿಯಲ್ಲಿ ಪ್ರಶ್ನಿಸಿದಾಗ ಈ ಸತ್ಯ ಹೊರಬಂದಿದೆ. ಉದ್ಯಾನವನದ ನಿರ್ವಹಣೆಗಾಗಿ ಇಷ್ಟೊಂದು ಹಣ ವೆಚ್ಚ ಮಾಡುವ ಅವಶ್ಯಕತೆ ಇದೆಯೇ ಎಂದು ಭೀಮಪ್ಪ ಗಡಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಆರ್ ಟಿಐ ಅಡಿಯಲ್ಲಿ ರಾಷ್ಟ್ರಪತಿ ಭವನದಿಂದ ಪಡೆದಿರುವ ಮಾಹಿತಿಯನ್ನು ಗುರುವಾರ ಸುದ್ದಿಮಾಧ್ಯಮಗಳಿಗೆ ಭೀಮಪ್ಪ ಗಡಾದ್ ಬಿಡುಗಡೆ ಮಾಡಿದ್ದಾರೆ. ಈ ವೇಳೆ ಮಾಹಿತಿ ನೀಡಿದ ಅವರು, ಉದ್ಯಾನವನ ನಿರ್ವಹಣೆಗಾಗಿ ಕಳೆದ ಮೂರು ವರ್ಷಗಳಲ್ಲಿ ಸುಮಾರು 12.70 ಕೋಟಿ ರೂ., ಹೂದೋಟ ಯಂತ್ರೋಪಕರಣಗಳ ಖರೀದಿಗಾಗಿ 1.46 ಕೋಟಿ ರೂ. ಹಾಗೂ ಉದ್ಯಾನವನ ಸಿಬ್ಬಂದಿಯವರ ವೇತನಕ್ಕಾಗಿ ಪ್ರತಿವರ್ಷ ಅಂದಾಜು 8.64 ಕೋಟಿ ರೂ. ವೆಚ್ಚ ಮಾಡಲಾಗಿದ್ದು ಸುಮಾರು 20 ಕೋಟಿ ಉದ್ಯಾನವನ ನಿರ್ವಹಣೆಗೆ ಖರ್ಚಾಗಿದೆ ಎಂದು ತಿಳಿಸಿದ್ದಾರೆ.

    ಇಷ್ಟೊಂದು ಹಣ ವೆಚ್ಚ ಮಾಡಿ ಉದ್ಯಾನವನ ನಿರ್ವಹಣೆ ಮಾಡುವುದರಿಂದ ಏನಾದರೂ ಪ್ರಯೋಜನವಾಗುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕೂಡಲೇ ರಾಷ್ಟ್ರಪತಿಗಳ ಈ ಕುರಿತು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

    ಸರ್ಕಾರದ ವಿವಿಧ ಯೋಜನೆಗಳ ಪಿಂಚಣಿಗೆ ಹಣ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತಿಲ್ಲ. ಪಿಂಚಣಿ ಬಂದಿಲ್ಲವೆಂದು ವಯೋವೃದ್ಧರು, ವಿಧವೆಯರು ಧರಣಿ ಮಾಡುವುದು ಎಲ್ಲಾ ಕಡೆ ನಡೆಯುತ್ತಲೇ ಇರುತ್ತದೆ. ಪರಿಸ್ಥಿತಿ ಹೀಗಿರುವಾಗ, ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಎಷ್ಟು ಸರಿ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.