Tag: ನಿರ್ಮಲಾ ಚೆನ್ನಪ್ಪ

  • ಬಿಗ್ ಮನೆಯಿಂದ ಹೊರನಡೆದ ಮತ್ತೊಬ್ಬ ಸೆಲೆಬ್ರಿಟಿ

    ಬಿಗ್ ಮನೆಯಿಂದ ಹೊರನಡೆದ ಮತ್ತೊಬ್ಬ ಸೆಲೆಬ್ರಿಟಿ

    – ಕೈ ಹಿಡಿಯದ ಬಿಗ್‍ಮನೆ ಅಭಿಮಾನಿಗಳು

    ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯಕ್ಕೆ ಮನೆಯಿಂದ ಒಬ್ಬರು ಹೊರಗೆ ಹೋಗಬೇಕು. ಮೊದಲವಾರ ಧನುಶ್ರೀ ಹೊರ ನಡೆದಿದ್ದರು. 2ನೇ ವಾರ ಯಾರು ಮನೆಯಲ್ಲಿ ತನ್ನ ಆಟವನ್ನು ಮುಗಿಸಿ ಹೊರ ನಡೆಯುತ್ತಾರೆ ಎನ್ನುವ ಪ್ರಶ್ನಗೆ ಉತ್ತರ ಸಿಕ್ಕಿದೆ.

    ಹೌದು. ಈ ಬಾರಿ ನಿರ್ಮಲಾ ಚೆನ್ನಪ್ಪ ಬಿಗ್‍ಬಾಸ್‍ಮನೆಯ ಜರ್ನಿಯನ್ನು ಮುಗಿಸಿದ್ದಾರೆ. ಮನೆಯಲ್ಲಿರುವ ಸದಸ್ಯರುಗಳಲ್ಲಿ ನಿರ್ಮಲಾ ಕೊಂಚ ವಿಭಿನ್ನವಾಗಿಯೇ ಇರುತ್ತಿದ್ದರು. ಒಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಅವರು ನಡೆದುಕೊಳ್ಳುವ ರೀತಿ, ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಅತೀ ಹೆಚ್ಚು ಚರ್ಚೆಗೊಳಗಾದ ಸದಸ್ಯರುಗಳಲ್ಲಿ ನಿರ್ಮಲಾ ಕೂಡ ಒಬ್ಬರು. ನಾಮಿನೇಷನ್‍ನಲ್ಲಿ ಹೆಚ್ಚು ಮತ ಕೂಡಾ ನಿರ್ಮಲಾ ಅವರಿಗೆ ಬಿದ್ದಿದ್ದವು. ಆದರೂ ಬಿಗ್‍ಬಾಸ್ ವೀಕ್ಷಕರು ನಿರ್ಮಲಾ ಚೆನ್ನಪ್ಪ ಅವರು ಕೈ ಹಿಡಿಯಲಿಲ್ಲ.

    ನಿರ್ಮಲಾ ಮನೆಯಲ್ಲಿ ಇರುವಷ್ಟು ದಿನ ಸಖತ್ ಆ್ಯಕ್ಟಿವ್ ಆಗಿದ್ದರು. ಜಗಳ, ಮಾತು, ಅಡುಗೆ ಮನೆ ವಿಚಾರ ಹೀಗೆ ನಾನಾ ವಿಷಯಗಳ ಕುರಿತಾಗಿ ಧ್ವನಿ ಎತ್ತುವ ಸದಸ್ಯೆಯಾಗಿದ್ದರು. ಆದರೆ ಮನೆಯಲ್ಲಿ ಇವರ ಆಟ ಅಭಿಮಾನಿಗಳಿಗೆ ಇಷ್ಟವಾಗಿಲ್ಲ ಎಂದು ಅನ್ನಿಸುತ್ತದೆ ಮನೆಯಿಂದ ಗೇಟ್‍ಪಾಸ್ ಕೊಟ್ಟಿದ್ದಾರೆ.

    ಒಂದೇ ಬಟ್ಟೆಯಲ್ಲಿ ಒಂದು ವಾರ ಇದ್ದ ನಿರ್ಮಲಾ!
    ಒಂದು ವಾರ ಒಂದೇ ಬಟ್ಟೆಯಲ್ಲಿ ಕಳೆದಿದ್ದರು. ಬಿಗ್‍ಬಾಸ್ ಬಟ್ಟೆ ಕಳಿಸುತ್ತಿದ್ದಂತೆ ಮಧ್ಯರಾತ್ರಿ ಸೀರೆ ಧರಿಸಿ ಮೇಕಪ್ ಹಾಕಿ ಮೂಲೆಯಲ್ಲಿ ಕ್ಯಾಮೆರಾ ಮುಂದೆ ಕುಳಿತು ಒಬ್ಬರೇ ಮಾತನಾಡುತ್ತಿರುವುದು ಮನೆಯವರಿಗೆ ಭಯ ತರಿಸಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಕೂಡ ಆಗಿತ್ತು.

    ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಗೀತಾ, ಚಂದ್ರಕಲಾ ಮೋಹನ್, ವಿಶ್ವನಾಥ್, ನಿರ್ಮಲಾ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು. ಆದರೆ ಇವರುಗಳ ಪೈಕಿ ನಿರ್ಮಲಾ ತನ್ನ ಆಟವನ್ನು ಮನೆಯಲ್ಲಿ ಮುಗಿಸಿ ಹೊರಬಂದಿದ್ದಾರೆ.

  • ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ಬೆಂಗಳೂರು: ಬಿಗ್‍ಬಾಸ್ ಮನೆ ಎಂದರೆ ಹೈ ಡ್ರಾಮಾ ಎಂದು ಗೊತ್ತು. ಪ್ರತಿಯೊಬ್ಬರು ಒಂದೊಂದು ಮುಖವಾಡ ತೊಟ್ಟು ನಾಟಕವಾಡುತ್ತಾರೆ ಅಂತ ಅಲ್ಲಿಯವರೇ ಹೇಳುತ್ತಿರುತ್ತಾರೆ. ಒಬ್ಬೊಬ್ಬರ ಮುಖವಾಡ ಕಳಚಿ ಬೀಳುತ್ತಿದೆ. ಹೀಗಿರುವಾಗ ಮನೆಯವರ ದೃಷ್ಟಿಯಲ್ಲಿ ನಿರ್ಮಲಾ ಎಂದರೆ ಕೊಂಚ ವಿಭಿನ್ನ. ಇವರ ಕುರಿತಾಗಿ ಅವರದ್ದೇ ಟೀಮ್‍ನವರು ಮಾತನಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಥೀಮ್‍ನಲ್ಲೊಂದು ಆಟವನ್ನು ಆಡಿಸಲಾಗುತ್ತಿದೆ. ವೈರಸ್ ಹಾಗೂ ಮನುಷ್ಯರ ಎಂದು ಆಟವಾಡುತ್ತಿದ್ದಾರೆ. ಆಟದ ವೇಳೆ ನಿರ್ಮಲಾ ಗಾಯಗೊಂಡಿದ್ದಾರೆ. ಆದರೆ ನಾನು ಆಟವಾಡುತ್ತೇನೆ ಎಂದು ಅವರ ತಂಡವದರ ಬಳಿ ನಿರ್ಮಲಾ ಕೇಳಿದ್ದಾರೆ. ಈ ವೇಳೆ ಶಂಕರ್ ಅಶ್ವಥ್, ನಿಧಿ ಸುಬ್ಬಯ್ಯ, ರಘು, ರಾಜೀವ್ ಅವರು ನಿರ್ಮಲಾ ಅವರ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಮಾಡುತ್ತಿದ್ದಾರೆ..!
    ನಿರ್ಮಲಾ ಅವರು ತಲೆಯನ್ನು ಯಾರೋ ಆಪರೇಟ್ ಮಾಡುತ್ತಿದ್ದಾರೆ. ಯಾರೋ ಕ್ರೇಜಿ ಅವರು ಎಂದು ಹೇಳಿ ನಕ್ಕಿದ್ದಾರೆ. ನಿರ್ಮಲಾ ಅವರು ಸಖತ್ ಟ್ಯಾಲೆಂಟ್. ಏನಾದರೂ ಹೇಳಿ ಸುಮ್ಮನಾಗಲ್ಲ ಕೈ ಬಾಯಿ ಆಡಿಸುತ್ತಾರೆ. ಆದರೆ ಜಗತ್ತಿನಲ್ಲಿ ಮುಖ್ಯವಾಗಿ ಕೈ, ಬಾಯಿ ಹಿಡಿತ ಇರಬೇಕು ಎಂದು ಹೇಳಿ ರಘು ಹೇಳಿದ್ದಾರೆ.

    ನಿರ್ಮಲಾನಂತೆ ಮಿಮಿಕ್ರಿ ಮಾಡಿದ ಶಂಕರ್ ಅಶ್ವಥ್!
    ಹೋಗು ಮನೆಗೆ ನಿನ್ನ ಹಣೆಬರ ಮನೆಗೆ ಹೋಗಬೇಕು ಎಂದೆ ಇದೆ, ದೇವರು ಇಲ್ಲಿವರೆಗೂ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಮನಸ್ಸು ಒಳ್ಳೆಯದು ಆದರೆ ಏನೊ ಹೊಸ ತರ ಮಾಡಲು ಹೋಗುತ್ತಾರೆ. ಈ ವೇಳೆ ನಿನ್ನ ಹೆಸರು ಏನು ಎಂದು ನಿರ್ಮಲಾ ಬಳಿ ಕೇಳಿದರೆ ಅವರ ಹೇಗೆ ಮತನಾಡುತ್ತಾರೆ ಎಂಬುದನ್ನು ಆ್ಯಕ್ಟ್ ಮಾಡಿ ಶಂಕರ್ ತೋರಿಸಿದ್ದಾರೆ ಈ ವೇಳೆ ಅಲ್ಲಿದ್ದ ವೈರಸ್ ಟೀಮ್ ತಂಡದ ಸದಸ್ಯರು ಅವರದ್ದೇ ಸದಸ್ಯರ ಕುರಿತಾಗಿ ಮಾತನಾಡಿ ಜೋರಾಗಿ ನಕ್ಕಿದ್ದಾರೆ.

    ಬಿಗ್ ಬಾಸ್ ಮನೆ ಒಂದು ವಾರ ಶಾಂತವಾಗಿತ್ತು. ಯಾವುದೇ ಜಗಳ ಎಂದು ಇರಲಿಲ್ಲಲ. ಆದರೆ ಬಿಗ್‍ಬಾಸ್ ಅಸಲಿ ಆಟ ಶುರುವಾಗಿದೆ. ಎಲ್ಲರ ನಗುಮುಖದ ಹಿಂದಿರುವ ಮುಖವಾಡ ಒಂದೊಂದಾಗಿಯೇ ಹೊರ ಬರುತ್ತಿದೆ. ಈ ಎಲ್ಲರ ನಗು, ಜಗಳ, ಆಟದ ಹಿಂದೆ ಇರುವವರು ಬಿಗ್‍ಬಾಸ್

  • ಬಿಗ್‍ಬಾಸ್ ಮನೆಯಲ್ಲಿ ನಿರ್ಮಲಾ ಕುರಿತು ಗುಸುಗುಸು!

    ಬಿಗ್‍ಬಾಸ್ ಮನೆಯಲ್ಲಿ ನಿರ್ಮಲಾ ಕುರಿತು ಗುಸುಗುಸು!

    ಬೆಂಗಳೂರು: ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ವಾಕ್ಸಮರ ಜಟಾಪಟಿ ಜೋರಾಗುತ್ತಿದೆ. ನಿರ್ಮಲಾ ಚೆನ್ನಪ್ಪ ಮತ್ತು ಅರವಿಂದ್ ನಡುವೆ ಬೆಂಕಿ ಕಡ್ಡಿ ವಿಚಾರವಾಗಿ ಹೊತ್ತಿಕೊಂಡ ಬೆಂಕಿಯನ್ನು ನೋಡಿದ ಇತರ ಸ್ಪರ್ಧಿಗಳು ನಿರ್ಮಲ ಅವರ ನಡವಳಿಕೆಯನ್ನು ಕಂಡು ತಮ್ಮ ತಮ್ಮಲ್ಲೇ ಗುಸುಗುಸು ಮಾತನಾಡುತ್ತಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಚೆನ್ನಪ್ಪ ಇತರ ಸ್ಪರ್ಧಿಗಳೊಂದಿಗೆ ನಡೆದುಕೊಳ್ಳುವ ರೀತಿಯನ್ನು ಗಮನಿಸಿದ ನಾಲ್ವರು ಸ್ಪರ್ಧಿಗಳಾದ ಚಂದ್ರಕಲಾ ಮೋಹನ್, ವಿಶ್ವನಾಥ್, ದಿವ್ಯ ಸುರೇಶ್, ಮತ್ತು ಗೀತಾ ತಮ್ಮ ತಮ್ಮಲ್ಲೇ ನಿರ್ಮಲಾ ಕುರಿತಂತೆ ಗುಸುಗುಸು ಮಾತನಾಡಿದ್ದಾರೆ. ನಿರ್ಮಲಾ ಅವರ ಬಾಯಿ ಸರಿಯಿಲ್ಲ ಅವರು ಆ ರೀತಿ ಇತರರೊಂದಿಗೆ ನಡೆದುಕೊಳ್ಳಬಾರದು. ಒಂದು ಹೆಣ್ಣಾಗಿ ತಮ್ಮ ಮಾತಿನ ಮೇಲೆ ಹಿಡಿತ ಇರಬೇಕೆಂದು ಚಂದ್ರಕಲಾ ಇತರೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ್ರು. ಟಾಸ್ಕ್ ವೇಳೆ ಅವರು ಇತರರಿಂದ ವಿಭಿನ್ನವಾಗಿ ಇರಬೇಕೆಂದು ಅಂದುಕೊಳ್ಳುತ್ತಾರೆ ಎಂದು ದಿವ್ಯ ತಮ್ಮ ಮನದ ಮಾತು ಹಂಚಿಕೊಂಡರು.

    ನಿರ್ಮಲ ಎಲ್ಲಾ ವಿಷಯಗಳನ್ನು ವೈಯಕ್ತಿವಾಗಿ ತೆಗೆದುಕೊಳ್ಳುತ್ತಾರೆ ಎದುರುಗಡೆ ಒಳ್ಳೆಯವರಾಗಿ ಕಂಡರೂ ಹಿಂದಿನಿಂದ ಬೇರೆಯ ರೀತಿಯಲ್ಲಿ ನೋಡುತ್ತಾರೆ ಅವರು ನಾಮಿನೇಶನ್ ಟೈಮ್‍ನಲ್ಲಿ ಅವರ ಹೆಸರು ಸೂಚಿಸಿದಾಗಲೂ ಅವರು ನಡೆದುಕೊಂಡ ರೀತಿ ಸರಿಯಿಲ್ಲ ಎಂದು ಗೀತಾ ಅವರ ವಾದ, ನಿರ್ಮಲ ಅವರಿಗೆ ಓವರ್ ಕಾನ್‍ಫಿಡೆನ್ಸ್, ಕೆಲ ವಿಚಾರಗಳಲ್ಲಿನ ಅವರ ನಿಲುವು ಸರಿಯಿಲ್ಲಾ ಎಂದು ತಮ್ಮ ತಮ್ಮಲ್ಲೇ ಮಾತನಾಡುವ ಮೂಲಕ ಅಭಿಪ್ರಾಯ ಮಂಡಿಸುತ್ತಾ ನಿರ್ಮಿಲಾ ಅವರನ್ನು ಟಾರ್ಗೆಟ್ ಮಾಡುವಂತಿದೆ ಇದೂ ಮುಂದಿನ ದಿನಗಳಲ್ಲಿ ಹೇಗೆ ಮುಂದುವರಿಯುತ್ತದೆ ಎಂದು ಕಾದು ನೋಡಬೇಕಾಗಿದೆ.

  • ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

    ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

    ಬೆಂಗಳೂರು: ಬಿಗ್ ಮನೆಯಲ್ಲಿರುವ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮುಖವಾಡಗಳಿವೆ. ಕೆಲವು ವಿಚಾರಗಳಲ್ಲಿ ಅವರ ಮುಖವಾಡ ಕಳಚಿ ಬೀಳುತ್ತದೆ. ಬಣ್ಣ ಬಣ್ಣದ ಮುಖವಾಡವನ್ನು ಕಳಚುವ ಕೆಲಸವನ್ನು ಬಿಗ್‍ಬಾಸ್ ಮಾಡುತ್ತಾರೆ. ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ.

    ರೂಲ್ಸ್ ಬ್ರೇಕ್ ಮಾಡಿದ ಚಂದ್ರಕಲಾ ಮೋಹನ್..!

    ಬಿಗ್‍ಬಾಸ್ ಮನೆಯಲ್ಲಿ ಕೆಲವು ರೂಲ್ಸ್ ಇರುತ್ತದೆ. ಅವುಗಳನ್ನು ಬ್ರೇಕ್ ಮಾಡಿದರೆ ತಪ್ಪಿಗೆ ತಕ್ಕ ಶಿಕ್ಷೆಯನ್ನು ಬಿಗ್‍ಬಾಸ್ ನೀಡುತ್ತಾರೆ. ಧನುಶ್ರೀ ಬಿಗ್‍ಬಾಸ್ ಮನೆಯ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅವರಿಂದಲೆ ಅಡುಗಗೆ ಬೇಕಾದ ತರಕಾರಿಗಳನ್ನು ಕಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಚಂದ್ರಕಲಾ ತಾವೇ ತರಕಾರಿ ಕಟ್ ಮಾಡಿ ರೂಲ್ಸ್ ಬ್ರೇಕ್ ಮಾಡಿದ್ದರು. ಈ ತಪ್ಪಿಗೆ ಮನೆಯಲ್ಲಿರುವ ಕೆಲವು ತರಕಾರಿಗಳನ್ನು ಬಿಗ್ ಬಾಸ್ ವಾಪಸ್ ಪಡೆದಿದ್ದರು.

    ಈ ವಿಚಾರವಾಗಿ ಮನೆಯವರ ಮನಸ್ಸಲ್ಲಿ ಕೊಂಚ ಬೇಸರವಿತ್ತು. ಆದರೆ ಯಾರು ಕೂಡ ಆ ಬೇಸರವನ್ನು ತೋರಿಸಿಕೊಳ್ಳದೆ ಸಮಾಧಾನ ಮಾಡಿಕೊಂಡಿದ್ದರು. ಆದರೆ ಚಂದ್ರಕಲಾ ಮೋಹನ್ ತಮ್ಮ ತಪ್ಪನ್ನು ನಿರ್ಮಲ ಚೆನ್ನಪ್ಪ ಮೇಲೆ ಎತ್ತಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ನಿರ್ಮಲಾ ನೀನು ಅಡುಗೆಗೆ ಬರುವುದಿಲ್ಲ. ಹೀಗಾಗಿ ನಾನೊಬ್ಬಳೇ ಅಡುಗೆ ಮಾಡುವ ಗಡಿಬಿಡಿಯಲ್ಲಿ ಹೀಗೆ ಆಯಿತು ಎಂದು ಅವರನ್ನು ಬಚಾವ್ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

    ತನ್ನದಲ್ಲದ ತಪ್ಪಿಗೆ ಕ್ಷಮೆ ಕೇಳಿದ ನಿರ್ಮಲಾ..!

    ನಿರ್ಮಲ ಅವರು ಕ್ಷಮೆ ಕೇಳಿದ್ದಾರೆ. ಆದರೂ ಕೂಡಾ ಚಂದ್ರಕಲಾ ಮೋಹನ್ ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ವಾರದ ಕಟ್ಟೆ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡಿದ್ದಾರೆ. ನಮ್ಮ ಮಾತುಗಳು ನಮ್ಮ ಸಣ್ಣತನವನ್ನು ಪ್ರದರ್ಶಿಸುತ್ತದೆ ಎಂದು ಕೆಲವು ಬುದ್ಧಿ ಮಾತುಗಳನ್ನು ಹೇಳಿ ಸಮಾಧಾನ ಮಾಡಿದ್ದಾರೆ.

    ಬಿಗ್‍ಬಾಸ್ ಮನೆ ಎಂದರೆ ಜಗಳ ಕಾಮನ್. ಒಬ್ಬರು ತಪ್ಪನ್ನು ಇನ್ನೊಬ್ಬರ ಮೇಲೆ ಬೆರಳು ಮಾಡಿ ತೋರಿಸುತ್ತಿರುವುದು ಹೊಸದೇನಲ್ಲ. ಆದರೆ ಯಾರು ತಪ್ಪು ಮಾಡಿದರೂ ಗುರುತಿಸಿ ಶಿಕ್ಷೆ ನೀಡುವವರು ಬಿಗ್‍ಬಾಸ್.