Tag: ನಿರ್ಮಲಾ

  • ಬಳ್ಳಾರಿ | ಪಿಯುಸಿ ಟಾಪರ್‌ಗಳಿಗೆ ಸ್ಕೂಟಿ ಜೊತೆ 5 ಲಕ್ಷ ಸಹಾಯ ಮಾಡಿದ ಜಮೀರ್

    ಬಳ್ಳಾರಿ | ಪಿಯುಸಿ ಟಾಪರ್‌ಗಳಿಗೆ ಸ್ಕೂಟಿ ಜೊತೆ 5 ಲಕ್ಷ ಸಹಾಯ ಮಾಡಿದ ಜಮೀರ್

    ಬಳ್ಳಾರಿ: ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ಟಾಪರ್ ಆದ ವಿಜಯನಗರ (Vijayanagara) ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ವೈಯಕ್ತಿಕವಾಗಿ ತಲಾ ಐದು ಲಕ್ಷ ರೂ. ಹಾಗೂ ದ್ವಿಚಕ್ರ ವಾಹನ ಬಹುಮಾನ ನೀಡಿ ಸನ್ಮಾನಿಸಿದ್ದಾರೆ.

    ಅಲ್ಲದೇ ಜಿಲ್ಲೆಯಲ್ಲಿ ಉತ್ತಮ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ. ನಗದು ನೀಡಿದ್ದಾರೆ. ಪಿಯುಸಿ ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದ ಸಂಜನಾಬಾಯಿ ಹಾಗೂ 600ಕ್ಕೆ 596 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದ ನಿರ್ಮಲಾ ಇಬ್ಬರೂ ಬಡತನದಲ್ಲೇ ಹುಟ್ಟಿ, ಬೆಳೆದಿದ್ದ ವಿದ್ಯಾರ್ಥಿನಿಯರು. ಹೀಗಾಗಿ ವಿದ್ಯಾರ್ಥಿನಿಯರ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲ ಆಗಲಿ ಎಂಬ ಸದುದ್ದೇಶದಿಂದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸನ್ಮಾನಿಸಿ, ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಎರಡು ದಿನಗಳ ಕಾಲ ಮಳೆ ಮುನ್ಸೂಚನೆ – ಯೆಲ್ಲೋ ಅಲರ್ಟ್ ಘೋಷಣೆ

    ಈ ವೇಳೆ ಶಾಸಕರಾದ ಗವಿಯಪ್ಪ, ಲತಾ ಮಲ್ಲಿಕಾರ್ಜುನ, ಶ್ರೀನಿವಾಸ್, ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ದಿವಾಕರ್, ಎಸ್ ಪಿ ಹರಿಬಾಬು ಉಪಸ್ಥಿತರಿದ್ದರು. ಇದನ್ನೂ ಓದಿ: ದಾವಣಗೆರೆ | ಬ್ಲಡ್‌ ಕ್ಯಾನ್ಸರ್‌ನೊಂದಿಗೆ ಹೋರಾಡಿ ಎಸ್ಎಸ್ಎಲ್‌ಸಿಯಲ್ಲಿ ಶಾಲೆಗೆ ಫಸ್ಟ್ ಬಂದ ವಿದ್ಯಾರ್ಥಿನಿ

  • ನಿರ್ಮಲಾ ಮೌನ ಪ್ರಶಾಂತ್ ಸಂಬರ್ಗಿಗೆ ಸಂಕಟ

    ನಿರ್ಮಲಾ ಮೌನ ಪ್ರಶಾಂತ್ ಸಂಬರ್ಗಿಗೆ ಸಂಕಟ

    ವಾರಾಂತ್ಯದಲ್ಲಿ ಬಿಗ್‍ಬಾಸ್ ಜರ್ನಿ ಮುಗಿಸಿ ಹೊರನಡೆಯುವ ನಿರ್ಮಲಾ ಅವರಿಗೆ ಬಿಗ್‍ಬಾಸ್ ವಿಶೇಷ ಅಧಿಕಾರವನ್ನು ನೀಡಿದ್ದರು. ಆದರೆ ನಿರ್ಮಲಾ ಅವರ ಮೌನ ಪ್ರಶಾಂತ್ ಅವರಿಗೆ ಕುತ್ತು ತಂದಿದೆ.

    ಮುಂದಿನವಾರಕ್ಕೆ ಎಲಿಮಿನೇಷನ್‍ಗೆ ಯಾರನ್ನಾದರೂ ನಾಮಿನೇಟ್ ಮಾಡಬೇಕು ಎಂದು ಬಿಗ್‍ಬಾಸ್ ಹೇಳಿದಾಗ ನಿರ್ಮಲಾ ಅವರು ನನಗೆ ಮನೆಯಿಂದ ಹೊರ ಹೋಗುವಾಗ ಒಬ್ಬರನ್ನು ಉಳಿಸುವ ಅವಕಾಶವನ್ನು ಕೊಡಿಸಿ. ನನಗೆ ನಾಮಿನೇಟ್ ಮಾಡಲು ಇಷ್ಟವಿಲ್ಲ ಎಂದು ಬೇರೆಯದ್ದೇ ಮಾತನ್ನು ಪ್ರಾರಂಭಿಸಿದರು. ಕೊಂಚ ಸಮಯ ಬಿಗ್‍ಬಾಸ್ ನಿರ್ಮಲಾ ನಾಮಿನೇಟ್ ಹೆಸರನ್ನು ಸೂಚಿಸಲು ಕಾದಿದ್ದಾರೆ. ಆದರೆ ನಿರ್ಮಲಾ ಬಿಗ್‍ಬಾಸ್ ಹೇಳಿರುವ ವಿಚಾರವನ್ನು ಬಿಟ್ಟು ಬೇರೆಯದ್ದೇ ಮಾತನಾಡಲು ಪ್ರಾಂಭಿಸಿದಾಗ ಬೇಸರಗೊಂಡ ಬಿಗ್‍ಬಾಸ್, ನೀವು ಯಾರ ಹೆಸರನ್ನು ಸೂಚಿಸಿದ ಕಾರಣ ಪ್ರಶಾಂತ್ ಅವರನ್ನು ನೇರವಾಗಿ ನಾಮಿನೇಟ್ ಮಾಡುತ್ತೇವೆ ಎಂದು ಹೇಳಿ ಡೋರ್ ತೆರೆದು ಕಳುಹಿಸಿ ಕೊಟ್ಟಿದ್ದಾರೆ.

    ಸೇಫ್ ಎಂದು ನಿಟ್ಟುಸಿರು ಬಿಟ್ಟ ಸಂಬರ್ಗಿಗೆ ಶಾಕ್!

    2 ನೇವಾರ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಪ್ರಶಾಂತ್ ನಾನು ಸೇಫ್ ಎಂದು ಸಂತೋಷ ಪಡುವ ಹೊತ್ತಲ್ಲೇ ಮತ್ತೆ ನಾಮೆನೇಟ್ ಆಗಿದ್ದಾರೆ. ನಾಮಿನೇಟ್ ಆಗಲು ನಿರ್ಮಲಾ ಅವರೆ ಕಾರಣವಾಗಿದ್ದಾರೆ.

    ನಿರ್ಮಲಾ ನಡವಳಿಕೆಯಿಂದ ಬೇಸರ!

    ಮನೆಯಲ್ಲಿರುವ ಸದಸ್ಯರು ಒಂದೆ ಕಡೆ ಇದ್ದರೆ ನಿರ್ಮಲಾ ಅವರೆ ಬೇರೆ ಕಡೆ ಇರುತ್ತಿದ್ದರು. ನಿರ್ಮಲಾ ಅವರ ಹಾದಿಯೆ ಬೇರೆ ಆಗಿರುತ್ತಿತ್ತು. ಹೀಗೆ ನಿರ್ಮಲಾ ಬಿಗ್‍ಬಾಸ್ ಆದೇಶವನ್ನು ಪಾಲಿಸದ ಕಾರಣ ಪ್ರಶಾಂತ್ ಸಂಬರ್ಗಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.

    ಮನೆಯಿಂದ ಹೊರಹೋಗುವ ಮುನ್ನ ಒಬ್ಬರ ಹೆಸರನ್ನು ನೇರವಾಗಿ ನಾಮಿನೇಟ್‍ಗೆ ಸೂಚಿಸಿ ಎಂದು ಬಿಗ್‍ಬಾಸ್ ಹೇಳಿದ್ದರು. ನಿರ್ಮಲಾ ನನಗೆ ನಾಮಿನೇಟ್ ಮಾಡಲು ಇಷ್ಟವಿಲ್ಲ ಎಂದು ಸುಮ್ಮನೇ ನಿಂತಿದ್ದರು. ಹೀಗಾಗಿ ಯಾರು ಫೇಕ್ ಮತ್ತು ಯಾರು ಒಳ್ಳಯವರು ಎನ್ನುವ ಟಾಸ್ಕ್‍ನಲ್ಲಿ ನಿರ್ಮಲಾ, ಪ್ರಶಾಂತ್ ಅವರನ್ನು ಫೇಕ್ ಎಂದು ಸೂಚಿಸಿದ್ದರು. ಇದರ ಅನ್ವಯವಾಗಿ ಬಿಗ್‍ಬಾಸ್ ಪ್ರಶಾಂತ್ ಸಂಬರ್ಗಿಯನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ.