Tag: ನಿರ್ಭಯಾ ಪ್ರಕರಣ

  • 7 ವರ್ಷದಿಂದ ಜೈಲು – 1 ಲಕ್ಷಕ್ಕೂ ಅಧಿಕ ಹಣ ಸಂಪಾದಿಸಿದ ನಿರ್ಭಯಾ ದೋಷಿಗಳು

    7 ವರ್ಷದಿಂದ ಜೈಲು – 1 ಲಕ್ಷಕ್ಕೂ ಅಧಿಕ ಹಣ ಸಂಪಾದಿಸಿದ ನಿರ್ಭಯಾ ದೋಷಿಗಳು

    – 23 ಬಾರಿ ಜೈಲಿನ ನಿಯಮ ಉಲ್ಲಂಘನೆ

    ನವದೆಹಲಿ: 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಕಳೆದ 7 ವರ್ಷದಿಂದ ಜೈಲಿನಲ್ಲಿದ್ದು, ಅಲ್ಲಿ ಬರೋಬ್ಬರಿ 1,37,000 ರೂ. ಹಣವನ್ನು ಸಂಪಾದಿಸಿದ್ದಾರೆ.

    ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಅಕ್ಷಯ್ ಠಾಕುರ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಕಳೆದ 7 ವರ್ಷದ ಜೈಲು ವಾಸದಲ್ಲಿ 1,37,000 ರೂ. ಹಣವನ್ನು ಸಂಪಾದಿಸಿದ್ದಾರೆ. ಈ 7 ವರ್ಷದಲ್ಲಿ ಮುಕೇಶ್ ಜೈಲಿನಲ್ಲಿ ಯಾವುದೇ ಕೆಲಸ ಮಾಡಲು ನಿರಾಕರಿಸಿದ ಕಾರಣಕ್ಕೆ ಅತ ಯಾವುದೇ ಹಣವನ್ನು ಸಂಪಾದಿಸಿಲ್ಲ. ಆದರೆ ಅಕ್ಷಯ್ 69 ಸಾವಿರ ರೂ., ವಿನಯ್ 39 ಸಾವಿರ ರೂ. ಹಾಗೂ ಪವನ್ 29 ಸಾವಿರ ರೂ. ಹಣವನ್ನು ಜೈಲಿನಲ್ಲಿ ಕೆಲಸ ಮಾಡಿ ಸಂಪಾದಿಸಿದ್ದಾರೆ. ಇದನ್ನೂ ಓದಿ: ನಿರ್ಭಯಾ ಕೇಸ್ – ಕಾಮುಕರ ಗಲ್ಲು ಶಿಕ್ಷೆ ಮುಂದೂಡಿಕೆ?

    ಅಷ್ಟೇ ಅಲ್ಲದೆ ಈ ನಾಲ್ವರು ದೋಷಿಗಳು ಸುಮಾರು 23 ಬಾರಿ ಜೈಲಿನ ನಿಯಮವನ್ನು ಉಲ್ಲಂಘಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದಕ್ಕೆ ವಿನಯ್ 11 ಬಾರಿ, ಅಕ್ಷಯ್ 1 ಬಾರಿ, ಮುಕೇಶ್ 3 ಬಾರಿ ಹಾಗೂ ಪವನ್‍ಗೆ 8 ಬಾರಿ ಶಿಕ್ಷೆ ಕೂಡ ನೀಡಲಾಗಿದೆ.

  • ದೆಹಲಿ ಚುನಾವಣಾ ಕಣಕ್ಕೆ ನಿರ್ಭಯ ಸಂತ್ರಸ್ತೆಯ ತಾಯಿ?

    ದೆಹಲಿ ಚುನಾವಣಾ ಕಣಕ್ಕೆ ನಿರ್ಭಯ ಸಂತ್ರಸ್ತೆಯ ತಾಯಿ?

    ನವದೆಹಲಿ : ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 7 ವರ್ಷಗಳ ಕಾನೂನು ಹೋರಾಟದ ಬಳಿಕ ಸಂತ್ರಸ್ತೆಗೆ ನ್ಯಾಯ ದೊರಕಿದೆ. ಜನವರಿ 22 ಬೆಳಗ್ಗೆ 7 ಗಂಟೆಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಡೆತ್ ವಾರಂಟ್ ಜಾರಿ ಮಾಡಿದೆ. ನಿರಂತರ ಕಾನೂನು ಹೋರಾಟ ಮಾಡಿದ ಸಂತ್ರಸ್ತೆಯ ತಾಯಿ ಆಶಾದೇವಿ ಅವರ ಧೈರ್ಯವನ್ನು ಇಡೀ ದೇಶವೇ ಮೆಚ್ಚಿ ಅಭಿನಂದಿಸಿದ್ದು ಈ ಜನಪ್ರಿಯತೆಯನ್ನು ಬಳಸಿಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ.

    ಆಶಾದೇವಿ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸುದ್ದಿ ಕೇಳಿ ಬಂದಿದೆ. ಕೆಲವು ಪಕ್ಷಗಳು ಈ ನಿಟ್ಟಿನಲ್ಲಿ ಚರ್ಚೆ ಮಾಡಿದ್ದು, ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗುತ್ತಿದೆ.

    ದೆಹಲಿಯಲ್ಲಿ ಫೆಬ್ರವರಿ 8 ರಂದು ಮತದಾನಕ್ಕೆ ದಿನಾಂಕ ನಿಗದಿಯಾಗಿದ್ದು, 11 ರಂದು ಫಲಿತಾಂಶ ಹೊರಬರಲಿದೆ. ಇದಕ್ಕೂ ಮೊದಲು ಅಂದರೆ ಜನವರಿ 22 ರಂದು ನಿರ್ಭಯ ದೋಷಿಗಳಿಗೆ ಗಲ್ಲು ಶಿಕ್ಷೆಯಾಗಲಿದೆ. ಈ ವೇಳೆ ಇಡೀ ದೇಶ ಸಂಭ್ರಮವನ್ನು ವ್ಯಕ್ತಪಡಿಸಲಿದೆ.

    ಪ್ರಕರಣದಿಂದ ಇಡೀ ದೇಶಕ್ಕೆ ಪರಿಚಯವಾಗಿರುವ ನಿರ್ಭಯ ತಾಯಿ ಆಶಾದೇವಿಯನ್ನು ಚುನಾವಣಾ ಕಣಕ್ಕೆ ಇಳಿಸಿದರೆ ಆ ಕ್ಷೇತ್ರದಲ್ಲಿ ಗೆಲುವು ಖಚಿತ ಮತ್ತು ಪಕ್ಷದ ಕೆಲವು ಕ್ಷೇತ್ರಗಳ ಮೇಲೂ ಇದು ಪರಿಣಾಮ ಬರಲಿದೆ ಎನ್ನುವುದು ರಾಜಕೀಯ ಪಕ್ಷಗಳ ಲೆಕ್ಕಾಚಾರ. ಹೀಗಾಗಿ ಆಶಾದೇವಿ ಮಾತುಕತೆ ನಡೆಸಿದ್ದು, ಯಾವುದು ಅಂತಿಮವಾಗದ ಹಿನ್ನೆಲೆ ಯಾವುದೇ ಪಕ್ಷ ಬಹಿರಂಗವಾಗಿ ಈ ಬಗ್ಗೆ ಮಾತನಾಡಿಲ್ಲ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆಶಾದೇವಿ, ಮಗಳನ್ನ ಅತ್ಯಾಚಾರ ಮಾಡಿದ ದೋಷಿಗಳು ನೇಣು ಕುಣಿಕೆಯಲ್ಲಿ ನೇತಾಡುವುದನ್ನು ಮೊದಲು ನೋಡಬೇಕು. ಬಳಿಕ ಚುನಾವಣೆ ಸ್ವರ್ಧಿಸುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ. ಈ ಮೂಲಕ ಅವರು ಚುನಾವಣೆ ಸ್ಪರ್ಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕಿಲ್ಲ.

    ದೆಹಲಿಯಲ್ಲಿ ನೇರ ಫೈಟ್ ನೀಡುತ್ತಿರುವ ಬಿಜೆಪಿ ಮತ್ತು ಆಮ್ ಅದ್ಮಿ ಆಶಾದೇವಿ ಅವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಅವರ ಪರ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು ಏಳು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿದ ಅವರ ಧೈರ್ಯವನ್ನು ಹಾಡಿ ಹೊಗಳುತ್ತಿದ್ದಾರೆ. ಕೆಲವು ಗುಪ್ತ ಸಭೆಗಳು ಕೂಡಾ ನಡೆದಿದ್ದು ಗೆಲ್ಲುವ ಕುದುರೆ ಸೆಳೆಯಲು ಎರಡು ಪಾರ್ಟಿಗಳು ನಿರಂತರ ಪ್ರಯತ್ನ ಮಾಡುತ್ತಿವೆ.

  • ನಿರ್ಭಯಾ ಪ್ರಕರಣ ದೋಷಿಗಳಿಗೆ ಗಲ್ಲು – ಇದು ಅತ್ಯಾಚಾರಿಗಳಿಗೆ ಎಚ್ಚರಿಕೆಯ ಘಂಟೆ ಎಂದ ಸಿಎಂ

    ನಿರ್ಭಯಾ ಪ್ರಕರಣ ದೋಷಿಗಳಿಗೆ ಗಲ್ಲು – ಇದು ಅತ್ಯಾಚಾರಿಗಳಿಗೆ ಎಚ್ಚರಿಕೆಯ ಘಂಟೆ ಎಂದ ಸಿಎಂ

    ಹುಬ್ಬಳ್ಳಿ: ನಿರ್ಭಯಾ ಅತ್ಯಾಚಾರ ಪ್ರಕರಣದ ದೋಷಿಗಳಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ, ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಿದ್ದು ಸ್ವಾಗರ್ತಾಹವಾಗಿದೆ. ತ್ವರಿತಗತಿಯಲ್ಲಿ ನ್ಯಾಯದಾನವಾಗಿರುವುದು ಸ್ವಾಗತಾರ್ಹ. ಈ ರೀತಿಯ ಪ್ರಕರಣಗಳಲ್ಲಿ ಪಾಲ್ಗೊಳ್ಳುವ ಆರೋಪಿಗಳಿಗೆ ಇದು ಎಚ್ಚರಿಕೆ ಘಂಟೆಯಾಗಿದೆ ಎಂದು ಹೇಳಿದರು.

    8 ವರ್ಷದ ಹಿಂದೆ ದೇಶಾದ್ಯಂತ ಕಿಚ್ಚು ಹೊತ್ತಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ನಿರ್ಭಯಾ ತೀರ್ಪು ಪ್ರಶ್ನಿಸಿ ದೋಷಿ ಅಕ್ಷಯ್ ಠಾಕೂರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದ್ದು ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದೆ.

    ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್‍ಎ ಬೊಬ್ಡೆ, ವಿಚಾರಣೆಯ ಪೀಠದಿಂದ ದಿಢೀರ್ ಹಿಂದೆ ಸರಿದ ಕಾರಣ ಇಂದು ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಆರ್ ಭಾನುಮತಿ, ಅಶೋಕ್ ಭೂಷಣ್ ಮತ್ತು ಎಎಸ್ ಬೋಪಣ್ಣ ಅವರ ಪೀಠದಲ್ಲಿ ನಡೆಯಿತು.

    ಏನಿದು ಪ್ರಕರಣ?
    2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಆದರೆ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆ ಆತ ಮಾತ್ರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು.

    ಆದರೆ ಆತನ ಕ್ಷಮದಾನ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿಗಳಿಗೂ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿತ್ತು. 2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು.

  • ಕೇವಲ ಅಪರಾಧಿಗಳಲ್ಲ ನಮ್ಮ ಹಕ್ಕುಗಳ ಬಗ್ಗೆಯೂ ಯೋಚಿಸಿ : ಕಣ್ಣೀರಿಟ್ಟ ನಿರ್ಭಯಾ ತಾಯಿ

    ಕೇವಲ ಅಪರಾಧಿಗಳಲ್ಲ ನಮ್ಮ ಹಕ್ಕುಗಳ ಬಗ್ಗೆಯೂ ಯೋಚಿಸಿ : ಕಣ್ಣೀರಿಟ್ಟ ನಿರ್ಭಯಾ ತಾಯಿ

    ನವದೆಹಲಿ: ಕೇವಲ ಅಪರಾಧಿಗಳ ಹಕ್ಕುಗಳ ಬಗ್ಗೆ ಯೋಚನೆ ಮಾಡುತ್ತಿದ್ದಿರಿ, ಸ್ವಲ್ಪ ಹಕ್ಕುಗಳ ಬಗ್ಗೆಯೂ ಒಮ್ಮೆ ಯೋಚಿಸಿ ಎಂದು ನಿರ್ಭಯಾ ತಾಯಿ ಆಶಾದೇವಿ ಕೋರ್ಟ್ ಹಾಲ್‍ನಲ್ಲೇ ಕಣ್ಣೀರಿಟ್ಟು ಅಸಮಧಾನ ಹೊರ ಹಾಕಿದ್ದಾರೆ.

    ನಿರ್ಭಯಾ ಅತ್ಯಾಚಾರ ಪ್ರಕರಣ ದೋಷಿಗಳಿಗೆ ಡೆತ್ ವಾರೆಂಟ್ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನಾಯಾಧೀಶರ ಮುಂದೆ ಅರ್ಜಿದಾರೇ ಆಶಾದೇವಿ ಆಹವಾಲು ತೋಡಿಕೊಂಡಿದ್ದಾರೆ.

    ಆಶಾದೇವಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಪಟಿಯಾಲ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ನ್ಯಾ.ಸತೀಶ್ ಕುಮಾರ್ ಅರೋರಾ ವಿಚಾರಣೆ ನಡೆಸಿದರು. ಈ ವೇಳೆ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ನಾಲ್ವರು ಅಪರಾಧಿಗಳ ಪೈಕಿ ಇಬ್ಬರು ಕ್ಷಮದಾನಕ್ಕೆ ಅರ್ಜಿ ಸಲ್ಲಿಸಲಿದ್ದು ಇನ್ನಿಬ್ಬರು ನಿರಾಕರಿಸಿದ್ದಾರೆ ಎಂದು ಮಾಹಿತಿ ನೀಡಿದರು. ವಾದ ಆಲಿಸಿದ ಪೀಠ ದೋಷಿಗಳಿಗೆ ಹೊಸ ನೋಟಿಸ್ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿ ಜನವರಿ ಏಳಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದರು.

    ಸುಪ್ರೀಂಕೋರ್ಟ್ ಪ್ರಕರಣ ನಾಲ್ವರು ಆರೋಪಿಗಳಿಗೆ ಗಲ್ಲು ಖಾಯಂ ಮಾಡಿದೆ. ಪುನರ್ ಪರಿಶೀಲನಾ ಅರ್ಜಿಗಳು ರದ್ದಾಗಿದ್ದು ಅವರಿಗೆ ಶೀಘ್ರ ಡೆತ್ ವಾರೆಂಟ್ ಜಾರಿ ಮಾಡುವಂತೆ ಆಶಾದೇವಿ ಪರ ವಕೀಲರು ಮನವಿ ಮಾಡಿಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಆಶಾದೇವಿ ಕೇವಲ ಅಪರಾಧಿಗಳ ಹಕ್ಕು ಬಗ್ಗೆ ಮಾತನಾಡುತ್ತಿದ್ದಿರಿ. ನಮ್ಮ ಹಕ್ಕುಗಳು ಏನಾಗಬೇಕು ಅಂತಾ ಕಣ್ಣೀರಿಟ್ಟರು ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸತೀಶ್ ಕುಮಾರ್ ಅರೋರಾ ನಾವು ಇಲ್ಲಿ ನ್ಯಾಯವನ್ನೇ ಎತ್ತಿ ಹಿಡಿಯಲು ಇದ್ದೇವೆ ಎಂದು ಪ್ರತಿಕ್ರಿಯಿಸಿದರು.

    ಪ್ರಕರಣ ಸಂಬಂಧ ನಾಲ್ವರು ಅಪರಾಧಿಗಳು ಜೊತೆ 3:15 ಕ್ಕೆ ವಿಡಿಯೋ ಕಾನ್ಪರೆನ್ಸ್ ಮಾಡಿದ ನ್ಯಾಯಾಧೀಶರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜನವರಿ ಏಳರಂದು ನಡೆಯಲಿರುವ ವಿಚಾರಣೆ ವೇಳೆ ಡೆತ್ ವಾರೆಂಟ್ ನೋಟಿಸ್ ಜಾರಿ ಆಗುವ ಸಾಧ್ಯತೆ ಇದೆ.

  • ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    ಶೀಘ್ರದಲ್ಲೇ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ

    ನವದೆಹಲಿ: 2012ರ `ನಿರ್ಭಯಾ’ ಅತ್ಯಾಚಾರ ಪ್ರಕರಣದ ದೋಷಿರ್ಯೋವ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ. ಆದ್ದರಿಂದ ಶೀಘ್ರದಲ್ಲೇ ದೋಷಿಗಳನ್ನು ಗಲ್ಲಿಗೇರಿಸಲಾಗುವುದು ಎನ್ನಲಾಗಿದೆ.

    ಈ ಸಂಬಂಧ ದೆಹಲಿ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು, ಇದನ್ನು ಗೃಹ ಸಚಿವಾಲಯ ಪರಿಶೀಲಿಸಿ, ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರಿಗೆ ರವಾನಿಸಲಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ರಾಷ್ಟ್ರಪತಿಗಳು ತೆಗೆದುಕೊಳ್ಳಲಿದ್ದಾರೆ. ಆದರೆ ಅವರು ಕೂಡ ದೆಹಲಿ ಸರ್ಕಾರದಂತೆ ಕ್ಷಮಾದಾನ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: 10ನೇ ತರಗತಿ ಬಾಲಕಿ ಮೇಲೆ ಗ್ಯಾಂಗ್ ರೇಪ್ – ಪೊಲೀಸ್ ಮಗನ ಜೊತೆ ಸಿಆರ್​ಪಿಎಫ್​ ಯೋಧನಿಂದ ಕೃತ್ಯ

    2012ರ ಡಿ. 16ರಂದು ದೆಹಲಿಯಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರಗೈದು, ಕೊಲೆ ಮಾಡಿ ದುರುಳರು ವಿಕೃತಿ ಮೆರೆದಿದ್ದರು. ಈ ಪ್ರಕರಣ ಸಂಬಂಧ ರಾಮ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ, ಅಕ್ಷಯ್ ಠಾಕೂರ್, ಮುಕೇಶ್ ಸಿಂಗ್ ಬಂಧಿಸಲಾಗಿತ್ತು. ಆದರೆ 2013ರ ಮಾರ್ಚ್ ನಲ್ಲಿ ತಿಹಾರ್ ಜೈಲಿನಲ್ಲಿಯೇ ರಾಮ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದನು. ಬಳಿಕ ಈ ದುಷ್ಟರ ಕೃತ್ಯ ಸಾಬೀತಾಗಿ, ಅವರನ್ನು ದೋಷಿಗಳು ಎಂದು ಪರಿಗಣಿಸಿ ಇನ್ನುಳಿದ ನಾಲ್ವರಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅವರಲ್ಲಿ ಮೂವರಿಗೆ ಕ್ಷಮಾದಾನ ಕೋರುವ ಯಾವುದೇ ಅವಕಾಶ ಇರಲಿಲ್ಲ. ಆದರೆ ವಿನಯ್ ಶರ್ಮಾಗೆ ಅವಕಾಶವಿದ್ದ ಹಿನ್ನೆಲೆ ಆತ ಮಾತ್ರ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದನು. ಇದನ್ನೂ ಓದಿ: ಅತ್ಯಾಚಾರ ಸಂತ್ರಸ್ತೆಯ ಖಡಕ್ ಪ್ರಶ್ನೆಗೆ ತಲೆ ತಗ್ಗಿಸಿ ನಿಂತ ಐಸಿಸ್ ರೇಪಿಸ್ಟ್

    ಆದರೆ ಆತನ ಕ್ಷಮದಾನ ಅರ್ಜಿಯನ್ನು ಬುಧವಾರ ದೆಹಲಿ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಾಷ್ಟ್ರಪತಿಗಳಿಗೂ ದೋಷಿಯ ಕ್ಷಮಾದಾನ ಅರ್ಜಿ ತಿರಸ್ಕರಿಸುವಂತೆ ಶಿಫಾರಸು ಮಾಡಿದೆ. ಒಂದು ವೇಳೆ ಗೃಹ ಸಚಿವಾಲಯ ದೋಷಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ ನಿರ್ಭಯಾ ಪ್ರಕರಣದ ನಾಲ್ವರು ಅತ್ಯಚಾರಿಗಳನ್ನು ಗಲ್ಲಿಗೇರಿಸುವುದು ಖಚಿತ.

    2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅತ್ಯಾಚಾರಿಗಳ ವಿರುದ್ಧ ಸಾರ್ವಜನಿಕರು ಹೋರಾಟ, ಪ್ರತಿಭಟನೆಗಳನ್ನು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ, ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತನ್ನಿ ಎಂಬ ಕೂಗು ಕೇಳಿಬಂದಿತ್ತು. ಇದನ್ನೂ ಓದಿ: ಕೊಲೆಗೈದು ಮಹಿಳೆ ಶವದ ಮೇಲೆ ರೇಪ್ – ವಿಡಿಯೋ ಸೆರೆಹಿಡಿದ ವಿಕೃತಕಾಮಿ ಅರೆಸ್ಟ್

    ನಿರ್ಭಯಾ ಪ್ರಕರಣದ ರೀತಿಯೇ ನವೆಂಬರ್ 27ರಂದು ಹೈದರಾಬಾದಿನಲ್ಲಿಯೂ ಪಶುವೈದ್ಯೆಯ ಅತ್ಯಾಚಾರ ಪ್ರಕರಣ ನಡೆದಿದ್ದು, ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಹೆತ್ತವರು ಕೂಡ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿ, ತಮ್ಮ ಮಕ್ಕಳ ದುಷ್ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ಹೈದರಾಬಾದ್ ಅತ್ಯಾಚಾರ, ಕೊಲೆ ಪ್ರಕರಣದ ಬಳಿಕ ದೇಶದಲ್ಲಿ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅಪ್ರಾಪ್ತೆಯರು, ಮಹಿಳೆಯರು ಮಾತ್ರವಲ್ಲದೆ ವೃದ್ಧೆಯರ ಮೇಲೂ ಕಾಮುಕರು ಕ್ರೌರ್ಯ ಮೆರೆದ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ದೇಶದೆಲ್ಲೆಡೆ ಆತ್ಯಾಚಾರಿಗಳನ್ನು ಗಲ್ಲಿಗೇರಿಸಿ ಆಗ ಹೆಣ್ಣನ್ನು ಕಾಮ ದೃಷ್ಠಿಯಿಂದ ನೋಡುವ ದುರುಳರು ಹೆದರುತ್ತಾರೆ ಎಂದು ಜನರು ಆಗ್ರಹಿಸುತ್ತಿದ್ದಾರೆ.

  • ಮತದಾನ ಜಾಗೃತಿ ಬ್ಯಾನರಿನಲ್ಲಿ ನಿರ್ಭಯಾ ಪ್ರಕರಣ ಅಪರಾಧಿ ಫೋಟೋ

    ಮತದಾನ ಜಾಗೃತಿ ಬ್ಯಾನರಿನಲ್ಲಿ ನಿರ್ಭಯಾ ಪ್ರಕರಣ ಅಪರಾಧಿ ಫೋಟೋ

    – ಚುನಾವಣಾ ಆಯೋಗ ಎಡವಟ್ಟಿಗೆ ವ್ಯಾಪಕ ಆಕ್ರೋಶ

    ಚಂಡೀಗಢ: ಮತದಾನ ಜಾಗೃತಿ ಬ್ಯಾನರ್ ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಫೋಟೋ ಹಾಕಿ ಪಂಜಾಬ್ ಚುನಾವಣಾ ಆಯೋಗವು ಎಡವಟ್ಟು ಮಾಡಿಕೊಂಡಿದೆ.

    ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಜಾಗೃತಿ ಬ್ಯಾನರ್ ಗಳನ್ನು ಹೋಶಿಯಾರ್​ಪುರದ ಸರ್ಕಾರಿ ಕಚೇರಿಗಳ ಸಂಕೀರ್ಣದಲ್ಲಿ ಹಾಕಲಾಗಿತ್ತು. ಆದರೆ ಯಾರೊಬ್ಬರೂ ಇದನ್ನು ಗಮನಿಸಿರಲಿಲ್ಲ. ಚುನಾವಣೆ ಮುಗಿದು 2 ತಿಂಗಳು ಕಳೆದ ನಂತರ ಶುಕ್ರವಾರ ವ್ಯಕ್ತಿಯೊಬ್ಬರು ಚುನಾವಣಾ ಆಯೋಗದಿಂದ ಆಗಿರುವ ಎಡವಟ್ಟನ್ನು ಪತ್ತೆ ಹಚ್ಚಿದ್ದಾರೆ. ಈ ಮತದಾನ ಜಾಗೃತಿ ಬ್ಯಾನರ್ ನಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್​ ಸಿಂಗ್ ಫೋಟೋವನ್ನು ಮುದ್ರಿಸಲಾಗಿದೆ.

    ಚುನಾವಣಾ ಆಯೋಗ ಎಡವಟ್ಟನ್ನು ಜನಸಾಮಾನ್ಯರು ಗುರುತಿಸಿದ್ದು, ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ಅಧಿಕಾರಿಗಳ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಂಜಾಬ್ ಕ್ಯಾಬಿನೆಟ್ ಸಚಿವ ಶ್ಯಾಮ್ ಅರೋರ್ ಅವರು, ಗೊತ್ತಿಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳು ಫೋಟೋವನ್ನು ಹಾಕಿರಬಹುದು. ತಪ್ಪಾದ ಗುರುತಿನ ಪತ್ರವನ್ನು ಅಧಿಕಾರಿಗಳು ಬಳಸಿರಬಹುದು. ಈ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಮುಖೇಶ್ ಸಿಂಗ್ 2012ರಲ್ಲಿ ನಡೆದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದ ಅಪರಾಧಿ. ಮುಖೇಶ್ ಸಿಂಗ್, ನಾನು ಅಪರಾಧ ಎಸಗಿಲ್ಲ. ಕೇವಲ ಬಸ್ ಜಾಲನೆ ಮಾಡುತ್ತಿದ್ದೆ ಎಂದು ಕೋರ್ಟ್ ನಲ್ಲಿ ಹೇಳಿಕೆ ನೀಡಿದ್ದ. ಆತನನ್ನು ಸೇರಿದಂತೆ ಒಟ್ಟು 4 ಜನ ಅಪರಾಧಿಗಳಿಗೆ ದೆಹಲಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಅಪರಾಧಿಗಳು ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.

  • ನಿರ್ಭಯಾ ತಾಯಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಂಗ್ಲಿಯಾನ

    ನಿರ್ಭಯಾ ತಾಯಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಂಗ್ಲಿಯಾನ

    ಬೆಂಗಳೂರು: ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವ ಭರದಲ್ಲಿ ತಾಯಿ ದೇಹವನ್ನ ಉದಾಹರಣೆ ನೀಡಿ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನರ ಹೇಳಿಕೆ ಇದೀಗ ವಿವಾದ ಎಬ್ಬಿಸಿದೆ.

    ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಿರ್ಭಯ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಂಗ್ಲಿಯಾನ, ನಿರ್ಭಯಾ ತಾಯಿಯ ಫಿಸಿಕ್ ನೋಡಿದ್ರೇ ನಿರ್ಭಯ ಸೌಂದರ್ಯ ಹೇಗಿರಬಹುದು ಅನ್ನೋದು ನನ್ನ ಕಣ್ಣ ಮುಂದೆ ಬಂತು ಅನ್ನೊ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

    ವೇದಿಕೆ ಮೇಲೆ ಈ ಪದ ಬಳಕೆ ಮಾಡಿದಾಗಲೇ ಕಾರ್ಯಕ್ರಮದಲ್ಲಿ ವಿರೋದ ವ್ಯಕ್ತವಾಗಿದೆ. ನಿರ್ಭಯಾ ಪ್ರಶಸ್ತಿ ಸ್ವೀಕರಿಸಲು ಬಂದ ಹಲವು ಮಹಿಳೆಯರು ಪ್ರಶಸ್ತಿಯನ್ನ ಸ್ವೀಕರಿಸದೇ ಹೊರ ನಡೆದಿದ್ರು. ನಿರ್ಭಯಾ ಪ್ರಕರಣ ಇಡೀ ಭಾರತ ಮಾತ್ರವಲ್ಲ ವಿಶ್ವದಲ್ಲೇ ಹೆಣ್ಣಿನ ರಕ್ಷಣೆಯ ಬಗ್ಗೆ ಪ್ರಶ್ನೆ ಎತ್ತಿತ್ತು. ವೇದಿಕೆ ಮೇಲೆ ನಿರ್ಭಯಾ ತಾಯಿ ಇದ್ದಾಗಲೇ ಸಾಂಗ್ಲಿಯಾನ ಈ ರೀತಿ ಮಾತನಾಡಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

    ನಿರ್ಭಯಾ ಪ್ರಕರಣ ನಡೆದು ಹಲವು ವರ್ಷಗಳಾಗಿದ್ರೂ, ಅದೇ ಹೆಸರಿನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ ಡಿಐಜಿ ರೂಪ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಸಹ ಭಾಗವಹಿಸಿದ್ರು. ಇತ್ತ ಸಾಂಗ್ಲಿಯಾನಾರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯುಟಿಸಿ ಮತ್ತು ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಶನ್ ಅನ್ನೊ ಎನ್ ಜಿಒ ಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆದಿತ್ತು.