Tag: ನಿರ್ದೇಶನ

  • ರಣವೀರ್ ಸಿಂಗ್ ಚಿತ್ರಕ್ಕೆ ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಎಂಟ್ರಿ

    ರಣವೀರ್ ಸಿಂಗ್ ಚಿತ್ರಕ್ಕೆ ಹನುಮಾನ್ ಚಿತ್ರ ಖ್ಯಾತಿಯ ಡೈರೆಕ್ಟರ್ ಎಂಟ್ರಿ

    ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ (Ranveer Singh) ನಟನೆಯ ಹೊಸ ಚಿತ್ರಕ್ಕೆ ಹನುಮಾನ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಸದ್ಯಕ್ಕೆ ಆ ಚಿತ್ರಕ್ಕೆ ರಾಕ್ಷಸ  (Rakshasa)ಎನ್ನುವ ಹೆಸರನ್ನೂ ಇಡಲಾಗಿದೆಯಂತೆ. ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ, ಮುಂದಿನ ದಿನಗಳಲ್ಲಿ ಇದು ಬಹಿರಂಗವಾಗಬಹುದು ಎನ್ನುತ್ತಿದೆ ಬಿಟೌನ್.

    ಈ ನಡುವೆ  ಹನುಮಾನ್ 2 ಚಿತ್ರದ ಕುರಿತಂತೆ ಮತ್ತೊಂದು ಹೊಸ ಅಪ್ ಡೇಟ್ ನೀಡಿದ್ದಾರೆ ನಿರ್ದೇಶಕ ಪ್ರಶಾಂತ್. ಅಂಜನಾದ್ರಿ 2.0 ಹೆಸರಿನ ವಿಡಿಯೋವೊಂದನ್ನು ಶೇರ್ ಮಾಡಿರುವ ನಿರ್ದೇಶಕರು ಅಂಜನಾದ್ರಿ ಗ್ರಾಮದ ಹಿನ್ನೆಲೆಯನ್ನು ತೋರಿಸುವಂತಹ ವಿವರಗಳನ್ನು ಈ ವಿಡಿಯೋದಲ್ಲಿ ನೀಡಿದ್ದಾರೆ.

    ಈ ಹಿಂದೆ ಅಯೋಧ್ಯೆಯಲ್ಲಿ ರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಐತಿಹಾಸಿಕ ಕ್ಷಣದಲ್ಲಿ ಇಡೀ ದೇಶವೇ ಸಾಕ್ಷಿಯಾಗಿತ್ತು. ಈ ಶುಭ ದಿನದಂದು, ಹನುಮಾನ್ ಸಿನಿಮಾ ನಿರ್ದೇಶಕ ಪ್ರಶಾಂತ್ ವರ್ಮಾ (Prashant Verma) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ತಮ್ಮ ಮುಂಬರುವ ಚಿತ್ರ ‘ಜೈ ಹನುಮಾನ್’ (Hanuman 2) ಸಿನಿಮಾಗಾಗಿ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ಇಂದು ಜೈ ಹನುಮಾನ್ ಸಿನಿಮಾದ ಸ್ಟ್ರಿಪ್ಟ್ ಪೂಜೆ ನೆರವೇರಿಸಿದ್ದಾರೆ.

    ಪ್ರಶಾಂತ್ ವರ್ಮಾ ಅವರ ಸೂಪರ್ ಹೀರೋ ಚಿತ್ರ ಹನುಮಾನ್ ಜನವರಿ 12 ರಂದು ಬಿಡುಗಡೆಯಾಯಿತು. ತೇಜ ಸಜ್ಜ (Teja Sajja), ವರಲಕ್ಷ್ಮಿ ಶರತ್‌ಕುಮಾರ್, ಅಮೃತ ಅಯ್ಯರ್ ಮತ್ತು ವಿನಯ್ ರೈ ನಟಿಸಿರುವ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಸಕ್ಸಸ್ ಬೆನ್ನಲ್ಲೇ ಜೈ ಹನುಮಾನ್ ಸಿನಿಮಾದ ಕೆಲಸ ಶುರುವಾಗಿವೆ.

     

    ಹನುಮಾನ ಸಿನಿಮಾ ಮೂಲಕ ಪ್ರಶಾಂತ್ ವರ್ಮಾ ರಾಷ್ಟ್ರವ್ಯಾಪಿ ಜನಪ್ರಿಯರಾಗಿದ್ದಾರೆ. ಸೃಜನಶೀಲ ನಿರ್ದೇಶಕರು ಪ್ರಶಾಂತ್ ವರ್ಮಾ ಸಿನಿಮಾಟಿಕ್ ಯೂನಿವರ್ಸ್ (PVCU) ನಿಂದ ಮತ್ತೊಂದು ಮಹಾಕಾವ್ಯ ಸಾಹಸವನ್ನು ಪ್ರೇಕ್ಷಕರ ಎದುರು ತರುತ್ತಿದ್ದಾರೆ. ಅದರ ಭಾಗವಾಗಿ ಜೈ ಹನುಮಾನ್ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಸೀಕ್ವೆಲ್‌ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ನ್ನು ಸಿದ್ಧಪಡಿಸಿದ್ದಾರೆ.

  • ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ: ಶಿವರಾಜ್ ಕುಮಾರ್

    ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ: ಶಿವರಾಜ್ ಕುಮಾರ್

    ಪ್ಪುಗಾಗಿ ನಾನು ಸಿನಿಮಾ ಮಾಡಬೇಕು ಎಂದು ಹಲವಾರು ಹೇಳಿದ್ದರು ಶಿವರಾಜ್ ಕುಮಾರ್ (Shivaraj Kumar). ಅಲ್ಲದೇ, ಅಪ್ಪು, ರಾಘವೇಂದ್ರ ರಾಜಕುಮಾರ್ ಮತ್ತು ತಾವು ಒಟ್ಟಿಗೆ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ಎರಡೂ ಕನಸುಗಳು ಈಡೇರಲಿಲ್ಲ. ಇದೀಗ ಶಿವರಾಜ್ ಕುಮಾರ್ ಮತ್ತೊಂದು ಮನದ ಬಯಕೆಯನ್ನು ಹೊರ ಹಾಕಿದ್ದಾರೆ. ತಾವು ಸಿನಿಮಾವೊಂದನ್ನು ನಿರ್ದೇಶನ (Direction) ಮಾಡಬೇಕು ಎಂದಿದ್ದಾರೆ.

    ಈಗಾಗಲೇ ತಾವೊಂದು ಕಥೆಯನ್ನೂ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ಈಡೇರಿಸಿಕೊಳ್ಳುವ ಮಾತುಗಳನ್ನೂ ಹೇಳಿದ್ದಾರೆ. ಈ ಕನಸು ನನಸಾಗತ್ತೋ ಇಲ್ಲವೋ ಗೊತ್ತಿಲ್ಲ. ನಿರ್ದೇಶನವನ್ನು ಮಾಡಬೇಕು ಎನ್ನುವ ತುಡಿತ ಇದ್ದೇ ಇದೆ ಎಂದಿದ್ದಾರೆ. ಅಪ್ಪು ಮತ್ತು ಅನಂತ್ ನಾಗ್ ಅವರಿಗೆ ಸಿನಿಮಾ ಮಾಡಬೇಕು ಎಂದು ಈ ಹಿಂದೆಯೂ ಶಿವಣ್ಣ ಹೇಳಿದ್ದರು.

     

    ತಾವು ಯಾವ ರೀತಿಯ ಮತ್ತು ಎಂತಹ ಕಥೆಯನ್ನು ಸಿನಿಮಾ ಮಾಡಬೇಕು ಎನ್ನುವ ಸ್ಪಷ್ಟತೆ ಇದೆಯಂತೆ. ಧನುಷ್ ರೀತಿಯ ಕಲಾವಿದರು ತಮ್ಮ ಕಥೆಗೆ ಒಪ್ಪುತ್ತಾರೆ ಎಂದೆಲ್ಲ ಅವರು ಹೇಳಿಕೊಂಡಿದ್ದಾರೆ. ಶಿವಣ್ಣರ ಆಸೆ ಆದಷ್ಟು ಬೇಗ ಈಡೇರಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ನಿರ್ದೇಶನಕ್ಕೆ ಮುಂದಾದ ಅಂಬಿ ಚಿತ್ರದ ನಿರ್ದೇಶಕ ಗುರುದತ್

    ಮತ್ತೆ ನಿರ್ದೇಶನಕ್ಕೆ ಮುಂದಾದ ಅಂಬಿ ಚಿತ್ರದ ನಿರ್ದೇಶಕ ಗುರುದತ್

    ‘ಅಂಬಿ ನಿಂಗೆ ವಯಸ್ಸಾಯ್ತೋ’ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ರೆಬಲ್ ಸ್ಟಾರ್ ಅಂಬರೀಷ್ ಹೀರೋ ಆಗಿ ಮಿಂಚಿದ್ದ ಕೊನೆಯ ಸಿನಿಮಾ. 2018ರಲ್ಲಿ ರಿಲೀಸ್ ಆ ಚಿತ್ರ ಬಿಡುಗಡೆಯಾಗಿತ್ತು. ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದಲ್ಲಿ ಅಂಬಿ ಜೊತೆಗೆ ಕಿಚ್ಚ ಸುದೀಪ್ ಕೂಡ ನಟಿಸಿದ್ದರು. ಅಂಬರೀಷ್ ಅವರ ಯವ್ವನದ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಸುಹಾಸಿನಿ, ಶ್ರುತಿ ಹರಿಹರನ್ ಹೀಗೆ ಆ ಸಿನಿಮಾದಲ್ಲಿ ದೊಡ್ಡ ತಾರಾಬಳಗವೆ ಇತ್ತು. ಸ್ಟಾರ್ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದು ಮತ್ಯಾರು ಅಲ್ಲ ಗುರುದತ್ ಗಾಣಿಗ (Gurudatta). ಚಿಕ್ಕ ವಯಸ್ಸಿನಲ್ಲೇ ದೊಡ್ಡ ದೊಡ್ಡ ಸ್ಟಾರ್‌ಗಳಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದರು ಗುರುದತ್. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಗುರು ಕನ್ನಡ ಸಿನಿಮಾ ಅಭಿಮಾನಿಗಳ ಹೃದಯಗೆದಿದ್ದರು, ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿದರು.

    ಚೊಚ್ಚಲ ನಿರ್ದೇಶನದಲ್ಲೇ ಅಂಬರೀಷ್ (Ambareesh), ಸುದೀಪ್ ಅವರಂತಹ ದೊಡ್ಡ ಕಲಾವಿದರಿಗೆ ಆಕ್ಷನ್ ಕಟ್ ಹೇಳಿದ್ದ  ಗುರುದತ್ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. ಗ್ಯಾಪ್‌ನ ಬಳಿಕ ಗುರು ಮತ್ತೆ ನಿರ್ದೇಶನದ ಕ್ಯಾಪ್ ಧರಿಸುತ್ತಿದ್ದಾರೆ. ಸುಮಾರು 5 ವರ್ಷಗಳ ಬಳಿಕ ಗುರುದತ್ ಗಾಣಿಗ ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ  ಬರಲು ಸಜ್ಜಾಗಿದ್ದಾರೆ. ಈ ಬಾರಿ ಗುರು ಯಾವ ಸ್ಟಾರ್‌ಗೆ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಕೌತುಕ ಹೆಚ್ಚಾಗಿದೆ. ಮೂಲಗಳ ಪ್ರಕಾರ ಗುರು ಸ್ಟಾರ್ ನಟನಿಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಹೊಸ ಸಿನಿಮಾದ ಎಲ್ಲಾ ತಯಾರಿ ನಡೆದಿದ್ದು ಸದ್ಯದಲ್ಲೇ ಟೈಟಲ್ ಮತ್ತು ಹೀರೋ ಅನೌನ್ಸ್  ಮಾಡಲು ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಗುರು. ವಿಭಿನ್ನ ಕಾನ್ಸೆ‌ಪ್ಟ್‌ನ ಸಿನಿಮಾ ಮೂಲಕ ಗುರು ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಗುರು ಅವರ 2ನೇ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಂಬಿ ಸಿನಿಮಾ ಬಳಿಕ ಗುರು ಎಲ್ಲೋಗಿದ್ರೂ, ಏನ್ಮಾಡುತ್ತಿದ್ದರು ಎನ್ನುವ ಪ್ರಶ್ನೆ ಕೂಡ ಅನೇಕರಲ್ಲಿತ್ತು. ಆದರೆ ಇತ್ತೀಚೆಗಷ್ಟೆ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ನಿರ್ಮಾಪಕರಾಗಿ ಸರ್ಪ್ರೈಸ್ ಎಂಟ್ರಿ ಕೊಟ್ಟರು.

     ಅಂಬಿ ಸಿನಿಮಾದ ಬಳಿಕ ನಿರ್ದೇಶಕ ಗುರು ನಿರ್ಮಾಣದ  ಕಡೆ ಮುಖ ಮಾಡಿದ್ದರು. ಈಗಾಗಲೇ ಟೀಸರ್ ಮೂಲಕ ಸದ್ದು ಮಾಡುತ್ತಿರುವ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ಚೊಚ್ಚಲ ನಿರ್ಮಾಣದ ಪ್ರಯತ್ನಕ್ಕೂ ಕೈ ಹಾಕಿದ್ದಾರೆ ಗುರು. ಈ ನಡುವೆ ತಮ್ಮ 2ನೇ ನಿರ್ದೇಶನದ ಚಿತ್ರದ ತಯಾರಿಯಲ್ಲಿದ್ದಾರೆ. ಮೊದಲ ಸಿನಿಮಾದಲ್ಲೇ ಮೋಡಿಮಾಡಿದ್ದ ಗುರು ಈ ಬಾರಿ ಯಾವ ಸಿನಿಮಾ ಮೂಲಕ, ಯಾವ ಸ್ಟಾರ್ ನಟನಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಸದ್ಯದಲ್ಲೇ ಬಹಿರಂಗವಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ದೇಶನದ ಜೊತೆಗೆ ನಟನೆಗೂ ಸೈ ಎಂದ ಸತ್ಯಪ್ರಕಾಶ್

    ನಿರ್ದೇಶನದ ಜೊತೆಗೆ ನಟನೆಗೂ ಸೈ ಎಂದ ಸತ್ಯಪ್ರಕಾಶ್

    ತ್ತೀಚಿನ ದಿನಗಳಲ್ಲಿ ಹಲವು ನಿರ್ದೇಶಕರು ತಮ್ಮ ವಿಭಿನ್ನ ರೀತಿಯ ಕಥೆಯನ್ನು ತೆರೆ ಮೇಲೆ ತರಲು ತಾವೇ ನಟನೆಗಿಳಿಯುತ್ತಿದ್ದಾರೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಡಿ ಸತ್ಯಪ್ರಕಾಶ್‌ (Satya Prakash). ರಾಮಾ ರಾಮಾ ರೇ (Rama Rama Re) ಮತ್ತು ಒಂದಲ್ಲಾಎರಡಲ್ಲಾ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಮಾಡಿದ್ದ ಇವರು ತಮ್ಮ ಮೊದಲೆರೆಡು ಸಿನಿಮಾಗಳಿಗೆ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆದವರು. ಕೆಲ ದಿನಗಳ ಹಿಂದೆಯಷ್ಟೇ ಇವರ ನಿರ್ದೇಶನಲ್ಲಿ (Director) ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಎಂಬ ಸಿನಿಮಾ ಮೂಡಿ ಬಂದಿತ್ತು. ನಿರ್ದೇಶನದ ಜತೆಗೆ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಾಡುವ ಸತ್ಯ ಸಿನಿಮಾಗಳ ವಿತರಣೆಯನ್ನು ಸಹ ಕಳೆದ ಒಂದೂವರೆ  ವರ್ಷಗಳಿಂದ ಮಾಡುತ್ತಿದ್ದಾರೆ.

    ಈಗಾಗಲೇ 35ಕ್ಕೂ ಹೆಚ್ಚಿನ ಸಿನಿಮಾಗಳನ್ನು ಸತ್ಯ ಸಿನಿ‌ ಡಿಸ್ಟ್ರಿಬ್ಯೂಟರ್ಸ್ ವತಿಯಿಂದ ವಿತರಿಸಿದ್ದಾರೆ.  ಈಗ ಅವರು ತಮ್ಮ ಮುಂದಿನ ಸಿನಿಮಾವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದು, ಈ ಚಿತ್ರದಲ್ಲಿ ತಾವು ಸಹ ಒಂದ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.

    ಕೊಂಚ ಫ್ಯಾಂಟಸಿ ಮತ್ತು ಕಮರ್ಷಿಯಲ್‌ ಎಲಿಮೆಂಟ್‌ಗಳಿರುವ ಈ ಹೊಸ ಸಿನಿಮಾದಲ್ಲಿ ಫ್ರೆಶ್‌ ಆಗಿರುವ ನಕ್ಕು ನಗಿಸುವಂತಹ ಕಥೆಯನ್ನು ಸಿನಿಮಾದಲ್ಲಿ ಸತ್ಯಪ್ರಕಾಶ್‌ ಹೇಳಲಿದ್ದಾರೆ. ಈ ಚಿತ್ರದಲ್ಲಿ ಸತ್ಯಪ್ರಕಾಶ್‌ ಜತೆಗೆ ಅಥರ್ವ ಪ್ರಕಾಶ್ ಎಂಬ ಯುವಕ ಕೂಡಾ ನಟಿಸುತ್ತಿದ್ದಾರೆ. ಸತ್ಯಪ್ರಕಾಶ್‌ ಅವರೇ ನಿರ್ದೇಶನ ಮಾಡಿದ್ದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸಿನಿಮಾದಲ್ಲಿ ಅಥರ್ವ ಪ್ರಕಾಶ್   ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು.  ವಿಶೇಷ ಎಂದರೆ ಈ ಸಿನಿಮಾದಲ್ಲಿ ಸತ್ಯಪ್ರಕಾಶ್‌ ನಿರ್ದೇಶನ, ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜತಗೆ ನಿರ್ಮಾಣವನ್ನು ಸಹ ತಮ್ಮ ಸತ್ಯಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಮಾಡುತ್ತಿದ್ದಾರೆ.

    ಸದ್ಯಕ್ಕೆ ಸಿನಿಮಾ ಅನೌನ್ಸ್‌ಮೆಂಟ್‌ ಮಾತ್ರ ಈಗ ಮಾಡಿದ್ದು,   ಸತ್ಯಪ್ರಕಾಶ್‌ ಅವರ ಹಿಂದಿನ ಸಿನಿಮಾಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡ ಈ ಚಿತ್ರದಲ್ಲಿಯೂ ಮುಂದುವರೆಯಲಿದೆ. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು  ಈ ಸಿನಿಮಾದ ಭಾಗವಾಗಲಿದ್ದಾರೆ. ಸದ್ಯಕ್ಕೆ ಸಿನಿಮಾಗೆ ಇನ್ನೂ ಟೈಟಲ್‌ ಇಟ್ಟಿಲ್ಲ, ಸದ್ಯದಲ್ಲೇ ಸಣ್ಣ ಟೀಸರ್‌ ಮೂಲಕ ಟೈಟಲ್‌ ಅನ್ನುಅನೌನ್ಸ್‌ ಮಾಡಲಿದ್ದಾರಂತೆ. ಇನ್ನೊಂದು ವಿಶೇಷ ಎಂದರೆ ಸತ್ಯಪ್ರಕಾಶ್‌ ಕಥೆ ಬರೆದಿರುವ ‘ಕಾಲಾ ಪತ್ಥರ್‌’ ಮತ್ತು ‘ಅನ್ಲಾಕ್‌ ರಾಘವ’ ಇದೇ ವರ್ಷ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಒಂದು ನಿರೀಕ್ಷೆ ಇದೆ.

     

    ‘ಈಗ ಮಾಡಲು ಹೊರಟಿರುವ ಕಥೆಯನ್ನು ನಾನೇ ಬರೆದಿದ್ದೇನೆ. ಈ ಚಿತ್ರದಲ್ಲಿಎರಡು ಪ್ರಮುಖ ಪಾತ್ರಗಳು ಬರಲಿದ್ದು, ಒಂದನ್ನು ನಾನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕೆ ನಾನು ಸೂಕ್ತವಾಗಿ ಹೊಂದಿಕೆಯಾಗುತ್ತೇನೆ ಎಂದು ಅನಿಸಿ ಮೇಲೆ ನಟನಾಗಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಒಂದು ಭಾವನಾತ್ಮಕ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಾಗಲಿದೆ. ’ಎನ್ನುವುದು ಸತ್ಯಪ್ರಕಾಶ್‌ ಮಾತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಿಚ್ಚ 46 ಚಿತ್ರಕ್ಕೆ ಟೈಟಲ್ ಘೋಷಣೆ : ಯಾರಿದು ಮ್ಯಾಕ್ಸ್?

    ಕಿಚ್ಚ 46 ಚಿತ್ರಕ್ಕೆ ಟೈಟಲ್ ಘೋಷಣೆ : ಯಾರಿದು ಮ್ಯಾಕ್ಸ್?

    ಲವು ದಿನಗಳಿಂದ ಕಿಚ್ಚನ ಅಭಿಮಾನಿಗಳು ಕಾಯುತ್ತಿದ್ದ ದಿನ ಬಂದೇ ಬಿಟ್ಟಿದೆ. ಸುದೀಪ್ (Kichcha Sudeep) ಅವರ 46ನೇ ಚಿತ್ರಕ್ಕೆ ಹೊಸ ಬಗೆಯ ಟೈಟಲ್ ಇಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಟೈಟಲ್ ಅನಾವರಣಕ್ಕಾಗಿಯೇ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಇದೀಗ ಆ ಕೆಲಸವನ್ನು ಚಿತ್ರತಂಡ ಮಾಡಿದೆ. ಕಿಚ್ಚ 46 ಚಿತ್ರಕ್ಕೆ ‘ಮ್ಯಾಕ್ಸ್’ (Max) ಎಂದು ಹೆಸರಿಡಲಾಗಿದೆ. ಈ ಮ್ಯಾಕ್ಸ್ ಯಾರು? ಅವನು ಹಿನ್ನೆಲೆ ಏನು ಎನ್ನುವ ಕುತೂಹಲ ಮತ್ತೆ ಮೂಡಿದೆ.

    ಹುಟ್ಟುಹಬ್ಬಕ್ಕೆ ಕಿಚ್ಚನ ಮತ್ತೊಂದು ಸರ್ ‍ಪ್ರೈಸ್

    ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಮಾಣಿಕ್ಯ’ ಬಿಡುಗಡೆಯಾಗಿ 10 ವರ್ಷಗಳ ನಂತರ ಸುದೀಪ್ ‘ಕೆಕೆ’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರವನ್ನು ಕೆ ಆರ್ ಜಿ ಸ್ಟುಡಿಯೋಸ್ ನಡಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ.

    ಸುದೀಪ್ ಅವರ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರು ನಿರ್ದೇಶನಕ್ಕೆ ಮರಳಿರುವ ವಿಷಯ ಅವರ ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಚಿತ್ರಕ್ಕೆ ‘God Forgives, I don’t – King Kichcha’ ಎಂಬ ಅಡಿಬರಹವಿದ್ದು, ಈ ಚಿತ್ರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ನಿರ್ದೇಶಕರಾದ ಸುದೀಪ್, ಇದುವರೆಗೂ ಆರು ಚಿತ್ರಗಳನ್ನು ನಿರ್ದೇಶನ ಮಾಡಿದ್ದು, ‘ಕೆಕೆ’ ಅವರ ನಿರ್ದೇಶನದ ಏಳನೇ ಚಿತ್ರವಾಗಿದೆ. ಹಾಗೆಯೇ, ಇದು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಆರನೇ ಚಿತ್ರವಾಗಿದೆ . ‘ರತ್ನನ್ ಪ್ರಪಂಚ’ ಚಿತ್ರದ ಮೂಲಕ ಪ್ರಾರಂಭವಾದ ಕೆ ಆರ್ ಜಿ ಸ್ಟುಡಿಯೋಸ್ ಚಿತ್ರ ಪಯಣ, ಸತತವಾಗಿ ಮುಂದುವರೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಹಲವು ಗುಣಮಟ್ಟದ ಚಿತ್ರಗಳು ಬಿಡುಗಡೆಯಾಗಲಿಕ್ಕೆ ಸಜ್ಜಾಗಿವೆ.

    ಸುದೀಪ್ ನಿರ್ದೇಶನದಲ್ಲಿ ಚಿತ್ರ ನಿರ್ಮಿಸುತ್ತಿರುವ ಕುರಿತು ಮಾತನಾಡುವ ಕಾರ್ತಿಕ್ ಗೌಡ, ‘ಹುಚ್ಚ’ ಚಿತ್ರದಿಂದ ನಾನು ಸುದೀಪ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಜೊತೆಗೆ ಕೆಲಸ ಮಾಡುವುದು ನನ್ನ ಕನಸಾಗಿತ್ತು. ಆ ಕನಸು ಇದೀಗ ನನಸಾಗುತ್ತಿದ್ದು, ಅವರು ನಟನೆಯ ಜೊತೆಗೆ ನಿರ್ದೇಶನ ಸಹ ಮಾಡುತ್ತಿರುವುದು ನಮ್ಮ ಸಂಭ್ರಮವನ್ನು ಇಮ್ಮಡಿಗೊಳಿಸಿದೆ’ ಎನ್ನುತ್ತಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಲ್ಕರ್ ಸಲ್ಮಾನ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈರೆಕ್ಟರ್

    ದುಲ್ಕರ್ ಸಲ್ಮಾನ್ ಚಿತ್ರಕ್ಕೆ ರಾಜ್ ಬಿ ಶೆಟ್ಟಿ ಡೈರೆಕ್ಟರ್

    ನ್ನಡದ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ (Malayalam) ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಇದೀಗ ಮತ್ತೊಂದು ಅಚ್ಚರಿ ಸುದ್ದಿಯೊಂದು ಮಲಯಾಳಂ ಚಿತ್ರೋದ್ಯಮದಿಂದ ಬಂದಿದ್ದು, ದುಲ್ಕರ್ ಸಲ್ಮಾನ್ ಗಾಗಿ ರಾಜ್ ಶೆಟ್ಟಿ ಚಿತ್ರವೊಂದನ್ನು ನಿರ್ದೇಶನ (Direction) ಮಾಡಲಿದ್ದಾರೆ.

    ಈ ಅಚ್ಚರಿಯ ಸುದ್ದಿಯನ್ನು ಹಂಚಿಕೊಂಡಿದ್ದು ಸ್ವತಃ ದುಲ್ಕರ್ ಸಲ್ಮಾನ್ (Dulquer Salmaan). ಅವರದ್ದೇ ನಿರ್ಮಾಣ ಸಂಸ್ಥೆಯಿಂದ ಈ ಚಿತ್ರ ಮೂಡಿ ಬರಲಿದೆ ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲಿಗೆ ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರರಂಗಕ್ಕೆ ನಿರ್ದೇಶಕರಾಗಿ ಹಾರಲಿದ್ದಾರೆ ಎನ್ನುವುದು ಲೇಟೆಸ್ಟ್ ಮಾಹಿತಿ.  ಇದನ್ನೂ ಓದಿ: ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ತಾತ್ಕಾಲಿಕ ಸ್ಥಗಿತ- ಪ್ರವಾಸಿಗರಿಗೆ ನಿರಾಸೆ

    ರಾಜ್ ಬಿ ಶೆಟ್ಟಿ (Raj B Shetty)ಅವರ ನಿರ್ದೇಶನದಲ್ಲಿ ಕೆಲಸ ಮಾಡುವುದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ದುಲ್ಕರ್ ಮಾತನಾಡಿದ್ದು, ಉಳಿದಂತೆ ಯಾವ ವಿಚಾರವನ್ನೂ ಅವರು ಹಂಚಿಕೊಂಡಿಲ್ಲ. ಬಟ್, ರಾಜ್ ಬಿ ಶೆಟ್ಟಿ ಮಲಯಾಳಂ ಚಿತ್ರೋದ್ಯಮಕ್ಕೆ ನಿರ್ದೇಶಕರಾಗಿ ಬರುವುದು ಪಕ್ಕಾ ಎನ್ನುವುದನ್ನು ಖಚಿತ ಪಡಿಸಿದ್ದಾರೆ.

     

    ಸದ್ಯ ಶೆಟ್ಟರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ಟೋಬಿ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕು. ಅದರ ನಡುವೆ ರಮ್ಯಾಗಾಗಿ ಒಂದು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವರಾಜ್ ಕುಮಾರ್ ಜೊತೆ ಒಂದು ಸಿನಿಮಾ ಮಾಡಬೇಕಿದೆ. ಈ ಮಧ್ಯ ಯಾವಾಗ ನಿರ್ದೇಶನ ಮಾಡುತ್ತಾರೋ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿರ್ದೇಶಕನಾದ ‘ಗೊಂಬೆಗಳ ಲವ್’ ಹೀರೋ ಅರುಣ್

    ನಿರ್ದೇಶಕನಾದ ‘ಗೊಂಬೆಗಳ ಲವ್’ ಹೀರೋ ಅರುಣ್

    ಗೊಂಬೆಗಳ ಲವ್ (Gombegala Love) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ಅರುಣ್ (Arun), ಆನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ಈ ಹಿಂದೆಯಷ್ಟೇ ವಿಜಯ್ ಪ್ರಸಾದ್ ನಿರ್ದೇಶನದ ‘ಪೆಟ್ರೊಮ್ಯಾಕ್ಷ್’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಅವರು ನಿರ್ವಹಿಸಿದ್ದರು. ಇದೀಗ ನಟನೆಗೆ ಅಲ್ಪ ವಿರಾಮ ಹೇಳಿ ನಿರ್ದೇಶನದತ್ತ ಮುಖ ಮಾಡಿದ್ದಾರೆ.

    ಅರುಣ್ ಸಿನಿಮಾ ರಂಗಕ್ಕೆ ಬಂದಿದ್ದೇ ನಿರ್ದೇಶಕನಾಗಲು. ಆದರೆ, ಅವರನ್ನು ನಟನನ್ನಾಗಿ ಚಿತ್ರೋದ್ಯಮ ಸ್ವೀಕರಿಸಿತು. ಗೊಂಬೆಗಳ ಲವ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿತು. ಆನಂತರ ಹಲವು ಸಿನಿಮಾಗಳಲ್ಲಿ ಅವರು ನಾಯಕರಾಗಿ ನಟಿಸಿದರೂ, ನಿರ್ದೇಶನ ಮಾಡಬೇಕು ಎನ್ನುವ ತುಡಿತ ಇದ್ದೇ ಇತ್ತು. ಈಗ ಅದು ಈಡೇರುತ್ತಿದೆ. ಇದನ್ನೂ ಓದಿ:ಮದುವೆ ನಂತರ ನೀರು ಬಿಸಿ ಮಾಡಿದ್ದು ಬಿಟ್ಟು ಬೇರೆ ಅಡುಗೆ ಮಾಡಿಲ್ವಂತೆ- ಕಿಯಾರಾ ಅಡ್ವಾಣಿ

    ಅರುಣ್ ಕುಮಾರ್ ನಿರ್ದೇಶನದ ಮೊದಲ ಚಿತ್ರಕ್ಕೆ ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ನಾಯಕ. ನಾಳೆ ಬೆಳಗ್ಗೆ ಬೆಂಗಳೂರಿನ ಮುದ್ದೀನಪಾಳ್ಯದಲ್ಲಿ ಈ ಹೊಸ ಚಿತ್ರಕ್ಕೆ ಮುಹೂರ್ತ ನಿಗದಿಯಾಗಿದೆ. ಚಾಮರಾಜನಗರದ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, ಗ್ಯಾಂಗ್ ಸ್ಟರ್ ಕಥೆಯನ್ನು ಹೇಳಲಿದ್ದಾರಂತೆ ಅರುಣ್.

     

    ಅರುಣ್ ಪ್ರತಿಭಾವಂತ ನಟ, ನಿರ್ದೇಶನದ ವಿಭಾಗದಲ್ಲೂ ಕೆಲಸ ಮಾಡಿದ ಅನುಭವವಿದೆ. ಎಲ್ಲವನ್ನೂ ಹದವಾಗಿ ಬೆರೆಸಿಕೊಂಡು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಮೊದಲ ಚಿತ್ರದಲ್ಲೇ ಅವರು ಹೆಸರಾಂತ ನಟರಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಾಳೆ ಈ ಸಿನಿಮಾದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಸಿಗಲಿವೆ. ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ ಅವರು ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮ್ಮದೇ ನಿರ್ದೇಶನದ 2 ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

    ತಮ್ಮದೇ ನಿರ್ದೇಶನದ 2 ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ರಕ್ಷಿತ್ ಶೆಟ್ಟಿ

    ಟ ರಕ್ಷಿತ್ ಶೆಟ್ಟಿ (Rakshit Shetty) ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದ ಕೆಲಸದಲ್ಲೇ ಕಳೆದು ಹೋಗಿದ್ದಾರೆ ಎಂದು ಹೇಳಲಾಗಿತ್ತು. ಮುಂದಿನ ಅವರ ಸಿನಿಮಾಗಳು ಯಾವವು? ಏನು ಮಾಡಲಿದ್ದಾರೆ? ನಿರ್ದೇಶನವಾ ಅಥವಾ ಬೇರೆ ನಿರ್ದೇಶಕರ (Directer) ಸಿನಿಮಾದಲ್ಲಿ ನಟನೆಯಾ ಎನ್ನುವ ಪ್ರಶ್ನೆಗಳು ಮೂಡಿದ್ದವು. ಇದೀಗ ರಕ್ಷಿತ್ ಎಲ್ಲದಕ್ಕೂ ಉತ್ತರ ನೀಡಿದ್ದಾರೆ.

    ಗುರು ಪೂರ್ಣಿಮೆಯ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ರಕ್ಷಿತ್, ತಮ್ಮ ಮುಂದಿನ ಕನಸು ಮತ್ತು ಪ್ರಾಜೆಕ್ಟ್ ಗಳ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಯಾವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವುದನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸ್ಪೂರ್ತಿ ತುಂಬಬಲ್ಲಂತಹ ಕೆಲವು ಮಾತುಗಳನ್ನೂ ರಕ್ಷಿತ್ ಆಡಿದ್ದಾರೆ.

    ಮುಂದಿನ ನಾಲ್ಕು ವರ್ಷಗಳ ಒಳಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುವ ಗುರಿಯನ್ನು ಹೊಂದಿರುವುದಾಗಿ ಹೇಳಿರುವ ರಕ್ಷಿತ್, ರಿಚರ್ಡ್ ಆಂಟನಿ (Richard Antony) ಮತ್ತು ಪುಣ್ಯಕೋಟಿ (Punyakoti) ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ಸಿನಿಮಾಗಳ ಕುರಿತಂತೆ ನಾಲ್ಕು ವರ್ಷಗಳನ್ನು ಕಳೆದಿದ್ದೇನೆ. ಇನ್ನೂ ನಾಲ್ಕು ವರ್ಷ ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ:ಖ್ಯಾತ ನಟ ಧನುಷ್ ಮೇಲೆ ನಿಷೇಧದ ತೂಗುಕತ್ತಿ

    ಯಶಸ್ಸು ಎನ್ನುವುದು ಕೆಲವರಿಗೆ ರಾತ್ರೋರಾತ್ರಿ ಸಿಕ್ಕಿದೆ. ಇನ್ನೂ ಕೆಲವರು ತಪಸ್ಸು ಮಾಡಬೇಕು ಎನ್ನುತ್ತಾ ತಾವು ನಡೆದು ಬಂದು ಹಾದಿಯನ್ನು ರಕ್ಷಿತ್ ನೆನಪಿಸಿಕೊಂಡಿದ್ದಾರೆ. ನಿರ್ದೇಶನ ಎನ್ನುವುದು ಎಂತಹದ್ದು ಎಂದೂ ತಿಳಿಸಿರುವ ಅವರು, ಅದನ್ನು ತಾವು ಎಂಜಾಯ್ ಮಾಡಬೇಕು ಎನ್ನುವ ಮಾತುಗಳನ್ನೂ ಆಡಿದ್ದಾರೆ.

     

    ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗೆ ಪ್ರೇರಣೆ ಏನು? ತಮಗೆ ಕಥೆ ಹುಟ್ಟಿದ್ದು ಎಲ್ಲಿ? ತಾವು ಬೆಳೆದು ಬಂದ ಪರಿಸರ ಎಂತಹದ್ದು ಎಂದೂ ಹೇಳಿಕೊಂಡಿರುವ ರಕ್ಷಿತ್, ಪರಶುರಾಮ ಮತ್ತು ಆತನ ಕೊಡಲಿಯೇ ತಮ್ಮ ನಿರ್ದೇಶನದ ಎರಡು ಸಿನಿಮಾಗಳಿಗೆ ಸ್ಫೂರ್ತಿ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಯಕಿ ಪ್ರಧಾನ ಸಿನಿಮಾಗೆ ಸ್ಕ್ರಿಪ್ಟ್ ರೆಡಿ ಮಾಡಿದ ನಿರ್ದೇಶಕ ವಿಜಯ್ ಪ್ರಸಾದ್

    ನಾಯಕಿ ಪ್ರಧಾನ ಸಿನಿಮಾಗೆ ಸ್ಕ್ರಿಪ್ಟ್ ರೆಡಿ ಮಾಡಿದ ನಿರ್ದೇಶಕ ವಿಜಯ್ ಪ್ರಸಾದ್

    ನ್ನಡದ ಪ್ರತಿಭಾವಂತ ನಿರ್ದೇಶಕ (Director) ವಿಜಯ್ ಪ್ರಸಾದ್ (Vijay Prasad) ‘ಪೆಟ್ರೊಮ್ಯಾಕ್ಸ್’ ಸಿನಿಮಾ ನಂತರ ಮತ್ತೊಂದು  ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದಾರೆ. ಈ ಬಾರಿ ಅವರು ಮಹಿಳಾ ಪ್ರಧಾನ (Female lead) ಸಿನಿಮಾವನ್ನು ಮಾಡಲಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ನಾಯಕನಷ್ಟೇ ನಾಯಕಿಗೂ ಪ್ರಧಾನ್ಯತೆ ಇದ್ದರೂ, ಈ ಸಿನಿಮಾ ನಾಯಕಿಗೆ ಮತ್ತಷ್ಟು ಜವಾಬ್ದಾರಿ ನೀಡಲಿದೆಯಂತೆ.

    ಹೊಸ ಸಿನಿಮಾದ (New Movie) ಕುರಿತಾಗಿ ತಮ್ಮ ಬೇಸರವನ್ನು ಹೊರ ಹಾಕಿರುವ ಅವರು, ‘ಮೂರು ಚಿತ್ರ ನಿರ್ಮಾಣ ಸಂಸ್ಥೆಗಳೊಂದಿಗೆ ಮಾತುಕತೆ ಮುಗಿಸಿದೆ (ಹೆಸರು ಬೇಡ). ಯಾರೊಬ್ಬರೂ ಕಥೆ ಕೇಳಲಿಲ್ಲ. ಕೇಳಿದ್ದು ಎರಡೇ, ಒಂದು ಡಬ್ಬಲ್ ಮೀನಿಂಗ್ ಡೈಲಾಗ್, ಇನ್ನೊಂದು ಅವರೇ ನಾಯಕ ಆಗಬಹುದೇ ಎಂದು. ಆದರೆ, ಈ ಬಾರಿ ನನ್ನ ಪ್ರಯಾಣವೇ ಬೇರೆ. ಕಾರಣ ನಾಯಕಿಯೇ ಚಿತ್ರದ ಜೀವಾಳ. ಹಿಂದಿನ ನಿರಾಸೆಗೆ ಕ್ಷಮೆ ಇರಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಅಪ್ಪ- ಅಮ್ಮನ ಕ್ಯೂಟ್ ಲವ್‌ ಸ್ಟೋರಿ ಹಂಚಿಕೊಂಡು ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ವಿಶ್‌ ‌

    ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ 2 ಸಿನಿಮಾ ರಿಲೀಸ್ ಗೆ ರೆಡಿಯಿದೆ. ಪರಿಮಳ ಲಾಡ್ಜ್ ಹೆಸರಿನ ಸಿನಿಮಾವನ್ನೂ ಅವರು ಘೋಷಣೆ ಮಾಡಿದ್ದರು. ಪರಿಮಳ ಲಾಡ್ಜ್ ಗಿಂತ ಮುಂಚೆ ಈ ಹೊಸ ಸಿನಿಮಾ ಸೆಟ್ಟೇರಲಿದೆಯಂತೆ. ಅಗಸ್ಟ್ ನಿಂದ ಶೂಟಿಂಗ್ ಮಾಡುವ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದಾರೆ.

    ನಾಯಕಿ ಪ್ರಧಾನ ಸಿನಿಮಾವಾಗಿದ್ದರಿಂದ ಹೊಸ ನಾಯಕಿಯೊಂದಿಗೆ ಸಿನಿಮಾ ಶುರು ಮಾಡುತ್ತಾರಾ ಅಥವಾ ಹೆಸರಾಂತ ನಟಿಯೊಂದಿಗೆ ಸಿನಿಮಾ ಮಾಡುತ್ತಾರಾ ಎನ್ನುವ ಕುರಿತು ಅವರು ಏನೂ ಹೇಳಿಲ್ಲ. ನಿರ್ಮಾಪಕರು ಸಿಕ್ಕ ನಂತರ ಬಹುಶಃ ಎಲ್ಲದಕ್ಕೂ ಸ್ಪಷ್ಟತೆ ಸಿಗಬಹುದು.

  • Exclusive- ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸ್ತಿಲ್ಲ ಯಾಕೆ? ಅದಕ್ಕೊಂದು ಕಾರಣವಿದೆ

    Exclusive- ರಕ್ಷಿತ್ ಶೆಟ್ಟಿ ಎಲ್ಲಿಯೂ ಕಾಣಿಸ್ತಿಲ್ಲ ಯಾಕೆ? ಅದಕ್ಕೊಂದು ಕಾರಣವಿದೆ

    ಚಾರ್ಲಿ 777 ಸಿನಿಮಾ ರಿಲೀಸ್ ನಂತರ ರಕ್ಷಿತ್ ಶೆಟ್ಟಿ (Rakshit Shetty) ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಯಾವುದೇ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗುತ್ತಿಲ್ಲ. ಚಾರ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದರೂ, ಅವರು ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಅದಕ್ಕೊಂದು ಕಾರಣವಿದೆ. ಮುಂದಿನ ಸಿನಿಮಾಗಾಗಿ (New Movie) ಅವರು ಹೇರ್ ಸ್ಟೈಲ್ ಮತ್ತು ಬಾಡಿ ಶೇಪ್ ಬದಲಾಯಿಸಿಕೊಂಡಿದ್ದಾರೆ. ಅದು ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕಾಗಿ ಆಚೆ ಕಾಣಿಸಿಕೊಳ್ಳುತ್ತಿಲ್ಲವಂತೆ.

    ಸಿನಿಮಾ ಕಾರ್ಯಕ್ರಮ ಅಥವಾ ಯಾವುದೇ ಖಾಸಗಿ ಕಾರ್ಯಕ್ರಮಗಳಿಗೆ ರಕ್ಷಿತ್ ಶೆಟ್ಟಿ ಅವರನ್ನು ಆಹ್ವಾನಿಸಿದರೆ, ಅವರು ಒಪ್ಪಿಕೊಳ್ಳದೇ ಇರುವ ಕಾರಣ ಇದೆ. ಪಾತ್ರಕ್ಕಾಗಿ ಅವರು ವಿವಿಧ ರೀತಿಯಲ್ಲಿ ತಯಾರಾಗಿದ್ದರಿಂದ, ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿಲ್ಲ. ಆದರೂ, ಮೊನ್ನೆ ದೇವಸ್ಥಾನವೊಂದಕ್ಕೆ ಅವರು ಭೇಟಿ ನೀಡಿದ್ದಾರೆ. ಅಲ್ಲಿಯೂ ಆದಷ್ಟು ಜನರಿಂದ ಮತ್ತು ಕ್ಯಾಮೆರಾಗಳಿಂದ ದೂರ ಉಳಿದಿದ್ದಾರೆ.

    ಸದ್ಯ ರಕ್ಷಿತ್ ಶೆಟ್ಟಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿದ ನಂತರ ಹೊಂಬಾಳೆ ಫಿಲ್ಮ್ಸ್ (Hombale Films) ಗಾಗಿ ಅವರು ಸಿನಿಮಾವೊಂದನ್ನು ನಿರ್ದೇಶನ ಮಾಡಬೇಕಿದೆ. ಆ ಸಿನಿಮಾ ಕೆಲಸದಲ್ಲೂ ಶೆಟ್ಟಿ ಬ್ಯೂಸಿಯಾಗಿದ್ದಾರೆ. ಹಾಗಾಗಿ ಅವರು ಹೆಚ್ಚೆಚ್ಚು ಜನರೊಂದಿಗೆ ಬೆರೆಯುತ್ತಿಲ್ಲ. ಮತ್ತು ಸಿನಿಮಾ ತಂಡದೊಂದಿಗೆ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಪೃಥ್ವಿ ಶಾ ಯಾರು ಅಂತಾನೇ ಗೊತ್ತಿಲ್ಲ, ಆತ ಕುಡಿದು ಬಂದಿದ್ದ – ಸಪ್ನಾ ಗಿಲ್

    ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಹುತೇಕ ಕೆಲಸ ಬಹುತೇಕ ಮುಗಿದಿದೆ. ಅಲ್ಲದೇ ರಕ್ಷಿತ್ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಮನೆಯೊಂದನ್ನು ಕಟ್ಟುತ್ತಿದ್ದಾರೆ. ಮನೆಯಲ್ಲಿ ಸ್ಟುಡಿಯೋ, ಆಫೀಸ್ ಸೇರಿದಂತೆ ಸಿನಿಮಾ ಸಂಬಂಧಿ ಅಷ್ಟೂ ಚಟುವಟಿಕೆಗಳು ಅದೇ ಕಟ್ಟಡದಲ್ಲಿ ನಡೆಯಲಿವೆಯಂತೆ. ಆ ಕೆಲಸದಲ್ಲೂ ತಮ್ಮನ್ನು ತಾವು ತೊಡಗಿಕೊಂಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಶೆಟ್ಟರು ಮನೆಯಲ್ಲೇ ಬೀಡುಬಿಟ್ಟಿದ್ದಾರೆ.