Tag: ನಿರ್ದೇಶಕ ಪ್ರೇಮ್

  • ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್

    ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ – `ಕೆಡಿ’ ಚಿತ್ರತಂಡದಿಂದ ಫಾನ್ಸ್‌ಗೆ ಗುಡ್‌ನ್ಯೂಸ್

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಹಾಗೂ ಪ್ರೇಮ್ (Orem) ಕಾಂಬಿನೇಷನ್‌ನ `ಕೆಡಿ’ (KD) ಚಿತ್ರತಂಡವು ಫಾನ್ಸ್‌ಗೆ ಗುಡ್‌ನ್ಯೂಸ್ ನೀಡಿದೆ. ದಿಢೀರ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವ ಸುದ್ದಿ ಅನೌನ್ಸ್ ಮಾಡಿರುವ ಟೀಮ್ ಶೀಘ್ರದಲ್ಲೇ ತೆರೆಗೆ ಬರ್ತೀವಿ ಎಂಬ ಲೇಟೆಸ್ಟ್ ಸುದ್ದಿಯನ್ನ ವೀಡಿಯೋ ಮಾಡಿ ಘೋಷಣೆ ಮಾಡಿದೆ.

    ಶೂಟಿಂಗ್ ಅಡ್ಡದಿಂದ ಸಿನಿಮಾ ತಂತ್ರಜ್ಞರ ಜೊತೆಗೂಡಿ ಧ್ರುವ ಸರ್ಜಾ ವೀಡಿಯೋ ಮೂಲಕ ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿರೋದನ್ನ ಘೋಷಿಸಿದ್ದಾರೆ. ಈ ವೀಡಿಯೋವನ್ನ ನಿರ್ದೇಶಕ ಪ್ರೇಮ್ ಇನ್ಸ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಗೋಲ್ಡನ್ ಕ್ವೀನ್ ಅಮೂಲ್ಯ ಕಮ್‌ಬ್ಯಾಕ್

    ಶನಿವಾರವಷ್ಟೇ ಕೆಡಿ ಚಿತ್ರತಂಡ ಸುದೀಪ್ ಎಂಟ್ರಿಯನ್ನ ರಿವೀಲ್ ಮಾಡಿತ್ತು. ಅಭಿಮಾನಿಗಳಿಗೆ ಇದು ಸಪ್ರೈಸ್‌ ಆಗಿತ್ತು. ಈ ವಿಷಯ ಅರಗಿಸಿಕೊಳ್ಳುವಷ್ಟರಲ್ಲೇ ಶೂಟಿಂಗ್ ಕಂಪ್ಲೀಟ್ ಆಗಿರುವ ಮಾಹಿತಿ ಕೊಟ್ಟಿದೆ ಚಿತ್ರತಂಡ. ಇಷ್ಟೇ ಅಲ್ಲದೆ ಶೀಘ್ರದಲ್ಲೇ ತೆರೆಗೆ ಬರಲಿದ್ದೇವೆ ಅನ್ನೋದಾಗಿ ಘೋಷಿಸಿದೆ.

    ಅಂದಹಾಗೆ ಕೆಡಿ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಪ್ರಯತ್ನದಲ್ಲಿದೆ ಎಂಬ ಸುದ್ದಿ ಇತ್ತು. ಅದಕ್ಕೀಗ ರೆಕ್ಕೆಪುಕ್ಕ ಬಂದಿದೆ. ಈಗಾಗ್ಲೇ ಡಿಸೆಂಬರ್‌ನಲ್ಲಿ ಮೂವರು ಬಿಗ್ ಸ್ಟಾರ್‌ಗಳ ಸಿನಿಮಾಗಳು ಸರತಿಯಲ್ಲಿ ನಿಂತಾಗಿದೆ. ಇದೀಗ `ಕೆಡಿ’ ಸಿನಿಮಾ ಎಲ್ಲಿ ಜಾಗ ಮಾಡಿಕೊಳ್ಳುತ್ತೆ ಅನ್ನೋದೇ ಲೆಕ್ಕಾಚಾರಕ್ಕೆ ಸಿಗದ ವಿಷಯ.

  • ದರ್ಶನ್‌-ಪ್ರೇಮ್‌ ಸಿನಿಮಾ ಮಾಡೇ ಮಾಡ್ತಾರೆ – ರಕ್ಷಿತಾ

    ದರ್ಶನ್‌-ಪ್ರೇಮ್‌ ಸಿನಿಮಾ ಮಾಡೇ ಮಾಡ್ತಾರೆ – ರಕ್ಷಿತಾ

    – ದರ್ಶನ್‌ಗೋಸ್ಕರ ವಿಜಯಲಕ್ಷ್ಮಿ ತುಂಬಾ ಕಷ್ಟಪಟ್ಟಿದ್ದಾರೆ ಎಂದ ನಟಿ

    ಬೆಂಗಳೂರು: ದರ್ಶನ್‌ ಹಾಗೂ ಪ್ರೇಮ್‌ (Darshan-Prem) ಸಿನಿಮಾ ಮಾಡೇ ಮಾಡ್ತಾರೆ, ಅದರ ಬಗ್ಗೆ ಡೌಟೇ ಇಲ್ಲ ಅಂತ ನಟಿ ರಕ್ಷಿತಾ (Rakshita) ಹೇಳಿದರು.

    ಬೆಂಗಳೂರಿನಲ್ಲಿ (Bengaluru) ಕಾರ್ಯಕ್ರಮವೊಂದರ ವೇಳೆ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಅವರು, ದರ್ಶನ್ ಹಾಗೂ ಪ್ರೇಮ್ ಸಿನಿಮಾ ಮಾಡ್ತಾರೆ ಅದ್ರ ಬಗ್ಗೆ ಡೌಟೇ ಇಲ್ಲ. ಯಾವ ಬ್ಯಾನರ್‌ ಅನ್ನೋದು ಮ್ಯಾಟರ್‌ ಆಗಲ್ಲ ಎಂದರು. ಇದನ್ನೂ ಓದಿ: ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್

    ಇದೇ ವೇಳೆ ದರ್ಶನ್‌ಗೆ ಮಗನ ಮದುವೆ ಬರುವಂತೆ ಇನ್ವಿಟೇಷನ್ ಕೊಟ್ಟಿದ್ದೀನಿ. ರಾಣಾನ ಚಿಕ್ಕವನಿದ್ದಾಗಿಂದ ದರ್ಶನ್ ನೋಡಿದ್ದಾನೆ. ಮದುವೆಗೆ ಬರ್ತೀನಿ ಅಂತ ಹೇಳಿದ್ದಾನೆ ಎಂದರು. ಇದನ್ನೂ ಓದಿ: ಸೈಫ್ ಅಲಿ ಖಾನ್ ಪುತ್ರನ ಸಿನಿಮಾಗೆ ಟೈಟಲ್ ಫಿಕ್ಸ್- ಪೋಸ್ಟರ್ ಔಟ್ 

    ಇನ್ನೂ ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಮಾತನಾಡಿದ ರಕ್ಷಿತಾ, ಅದೊಂದು ಕೆಟ್ಟಗಳಿಗೆ ಅದರಿಂದ ಆಚೆ ಬರಲಿ. ನನಗೆ ಅವ್ನು ಯಾವಾಗಲೂ ಫ್ಯಾಮಿಲಿನೇ. ನನ್ನ ಅಕ್ಕಪಕ್ಕದ ಜನ ಚನಾಗಿದ್ರೆ ನಾನು ಚನಾಗಿರ್ತೀನಿ ಅಂತಾ ನಾನು ಅನ್ಕೋತಿನಿ. ದರ್ಶನ್‌ಗೆ ಅವನ ಫ್ಯಾಮಿಲಿನೇ ದೊಡ್ಡ ಶಕ್ತಿ. ಅವನಿಗೋಸ್ಕರ ವಿಜಯಲಕ್ಷ್ಮೀ ತುಂಬಾ ಕಷ್ಟ ಪಟ್ಟಿದ್ದಾರೆ ಎಂದು ತಿಳಿಸಿದರು.

    ಸೋಶಿಯಲ್ ಮೀಡಿಯಾ ಒಳ್ಳೆದಕ್ಕೂ ಇದೆ ಕೆಟ್ಟದಕ್ಕೂ ಇದೆ. ನಾನೇನಾದ್ರು ಹೇಳ್ಬೇಕು ಅಂದ್ರೆ ಜಾಲತಾಣದಲ್ಲಿ ಹಾಕ್ತಿನಿ. ನನಗೆ ಗೊತ್ತಿರೋ ಪ್ರಕಾರ ಪ್ರೇಮ್ ದರ್ಶನ್ ಸಿನಿಮಾ ಮಾಡ್ತಾರೆ. ಬ್ಯಾನರ್ ಯಾವ್ದು ಅನ್ನೋದು ಮ್ಯಾಟರ್ ಆಗೋಲ್ಲ. ಯಾವುದೇ ಬ್ಯಾನರ್‌ ಅದ್ರೂ ಸಿನಿಮಾ ಮಾಡೇ ಮಾಡ್ತಾರೆ ಎಂದು ರಕ್ಷಿತಾ ಹೇಳಿದರು. ಇದನ್ನೂ ಓದಿ: ನಂಬಿಕೆ, ತಾಳ್ಮೆ ಇರಬೇಕು.. ಟೈಂ ತಗೊಂಡ್ರೂ ನಿಜ ಯಾವತ್ತೂ ಆಚೆ ಬರುತ್ತೆ: ರಾಗಿಣಿ

  • ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು: ನಿರ್ದೇಶಕ ಪ್ರೇಮ್

    ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು: ನಿರ್ದೇಶಕ ಪ್ರೇಮ್

    ಬೆಂಗಳೂರು: ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು ಎಂದು ನಿರ್ದೇಶಕ ಪ್ರೇಮ್ (Director Prem) ಕಿಡಿಕಾರಿದ್ದಾರೆ.

    ಹಸುವಿನ ಕೆಚ್ಚಲು (Cow’s Udder) ಕೊಯ್ದ ಘಟನೆ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮಕ್ಕಳು ಹುಟ್ಟಿದಾಗ ತಾಯಿ ಎದೆಹಾಲು ಕುಡಿಸಿ ಎನ್ನುತ್ತೇವೆ. ಗೋವನ್ನು ಮಾತೆ, ತಾಯಿ ಎನ್ನುತ್ತೇವೆ. ಆದರೆ ಅಂಥ ತಾಯಿ ಎದೆ ಕೊಯ್ದಿದ್ದಾನೆ. ಕರ್ನಾಟಕ ಪೊಲೀಸ್ ಸ್ಟ್ರಾಂಗ್ ಇದ್ದಾರೆ. ಅವರನ್ನು ಹಿಡಿದು ತಕ್ಕ ಶಿಕ್ಷೆ ಕೊಡಿಸುತ್ತಾರೆ. ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದು. ಆದರೆ ಅವರು ಕೈಗೆ ಸಿಕ್ಕರೇ ಅಲ್ಲೇ ಹೊಡೆದು ಸಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಚಾಮರಾಜಪೇಟೆಯಲ್ಲಿ (Chamrajpet) ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು (Cottonpet Police) ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದೆ.

    ಪ್ರಕರಣ ಏನು?
    ಬೀದಿಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ವಿನಾಯಕ ನಗರದಲ್ಲಿ ತಡರಾತ್ರಿ ಕರ್ಣ ಎಂಬುವರಿಗೆ ಸೇರಿದ್ದ 3 ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದರು. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದರು.

  • ಕ್ರೇಜಿ ಕ್ವೀನ್‍ಗೆ ಡಿ ಬಾಸ್ ವಿಶ್- ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ

    ಕ್ರೇಜಿ ಕ್ವೀನ್‍ಗೆ ಡಿ ಬಾಸ್ ವಿಶ್- ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡ ರಕ್ಷಿತಾ

    ಬೆಂಗಳೂರು: ಸ್ಯಾಂಡಲ್‍ವುಡ್ ಕ್ರೇಜಿ ಕ್ವೀನ್ ರಕ್ಷಿತಾ 36ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಹೋಮ್ ಕ್ವಾರೆಂಟೈನ್ ಹಿನ್ನೆಲೆ ಕುಟುಂಬದೊಂದಿಗೇ ಆಚರಿಸಿಕೊಂಡಿದ್ದಾರೆ. ಆದರೆ ಇದರ ನಡುವೆಯೂ ರಕ್ಷಿತಾ ಪತಿ, ನಿರ್ದೇಶಕ ಪ್ರೇಮ್ ಹಾಗೂ ಪುತ್ರ ಸೂರ್ಯ ವಿಭಿನ್ನ ಸರ್‍ಪ್ರೈಸ್ ನೀಡುವ ಮೂಲಕ ಭಾವನಾತ್ಮಕವಾಗಿ ಆಚರಿಸಿದ್ದಾರೆ.

    ಹುಟ್ಟುಹಬ್ಬದ ಸಂಭ್ರಮವನ್ನು ರಕ್ಷಿತಾ ಪ್ರೇಮ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ತಮ್ಮ ಕುಟುಂಬದವರನ್ನು ನೆನೆಸಿಕೊಂಡು ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಇನ್ನೂ ವಿಶೇಷವೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅವರ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಈ ಮೂಲಕ ಅವರ ಸಂತಸವನ್ನು ಇಮ್ಮಡಿಗೊಳಿಸಿದ್ದಾರೆ. ನನ್ನ ಆತ್ಮೀಯ ಗೆಳತಿಯರಲ್ಲೊಬ್ಬರಾದ ರಕ್ಷಿತಾ ಪ್ರೇಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಹ್ಯಾವ್ ಎ ಫ್ಯಾಬ್ಯುಲಸ್ ಇಯರ್ ಅಹೇಡ್ ಎಂದು ಟ್ವೀಟ್ ಮಾಡಿದ್ದಾರೆ.

    ನಿರ್ದೇಶಕ ಪ್ರೇಮ್ ಅವರು ಈ ಸಂಭ್ರಮ ಕ್ಷಣದ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ರಕ್ಷಿತಾ ಪ್ರೇಮ್ ಸಹ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ವಿಶ್ ಯು ಹ್ಯಾಪಿ ಬರ್ತ್‍ಡೇ ಗಾಡ್ ಬ್ಲೆಸ್ ಯು ಎಂದು ಬರೆದು ಹ್ಯಾಶ್ ಟ್ಯಾಗ್‍ನೊಂದಿಗೆ ರಕ್ಷಿತಾ ಹಾಗೂ ಹೃದಯದ ಎಮೋಜಿಗಳನ್ನು ಪ್ರೇಮ್ ಪೋಸ್ಟ್ ಮಾಡಿದ್ದಾರೆ.

    ಅಲ್ಲದೆ ಪ್ರೇಮ್ ಅವರೇ ರಕ್ಷಿತಾ ಅವರ ಹುಟ್ಟಹಬ್ಬ ಆಚರಣೆಗೆ ಸಂಪೂರ್ಣ ವ್ಯವಸ್ಥೆ ಮಾಡಿದ್ದು, ಮಗ ಸೂರ್ಯ ಕೇಕ್ ತಯಾರಿಸಿದ್ದಾನಂತೆ. ಈ ಮೂಲಕ ಅಮ್ಮನಿಗೆ ಸರ್ಪ್ರೈಸ್ ನೀಡಿದ್ದಾನೆ. ಕುಟುಂಬದವರೆಲ್ಲ ಸೇರಿ ಸಂಭ್ರಮದಿಂದಲೇ ಆಚರಿಸಿದ್ದು, ಸ್ನೇಹಿತರು ಹಾಗೂ ಕುಟುಂಬಸ್ಥರ ಗೈರು ಕಾಡುತ್ತಿದೆ. ಹೋಮ್ ಕ್ವಾರೆಂಟೈನ್ ಹಿನ್ನೆಲೆ ಬಹುತೇಕರು ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ. ಇದಕ್ಕಾಗಿ ರಕ್ಷಿತಾ ಸಹ ಬೇಸರಗೊಂಡಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ರಕ್ಷಿತಾ ಅವರ ಹುಟ್ಟುಹಬ್ಬವನ್ನು ಮನೆಯಲ್ಲೇ ಆಚರಿಸುತ್ತಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ.

    ಇದಕ್ಕೆ ಪ್ರತಿಯಾಗಿ ರಕ್ಷಿತಾ ಧನ್ಯವಾದ ತಿಳಿಸಿದ್ದು, ಸೂರ್ಯ, ಮಂಜು ಬೇಕಿಂಗ್ ಎ ಕೇಕ್…. ಪ್ರೇಮ್ ಎಲ್ಲವನ್ನೂ ಆಯೋಜಿಸಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಈ ಕ್ಷಣವನ್ನು ಸುಂದರವಾಗಿಸಲು ಪ್ರಯತ್ನಿಸಿದ್ದಾರೆ. ನನ್ನ ತಾಯಿ, ಕುಟುಂಬ ಹಾಗೂ ನನ್ನ ಸ್ನೇಹಿತರು ಸೇರಿದಂತೆ ನನ್ನ ಜೀವನದಲ್ಲಿ ಹತ್ತಿರವಾದವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಕೆಲವರು ನನ್ನೊಂದಿಗೆ ಲೈವ್ ಮಾಡುವ ಮೂಲಕ ಶುಭಕೋರುತ್ತಿರುವುದು ನೋಡಿ ನಗು ಬರುತ್ತಿದೆ. ನಿಮ್ಮ ಪ್ರೀತಿಯ ಶುಭಾಶಯಗಳಿಗೆ ಧನ್ಯವಾದಗಳು. ಹಲವರು ಶುಭ ಕೋರಿದ್ದನ್ನು ನಾನು ನೋಡಿದ್ದೇನೆ. ನೀವೆಲ್ಲರೂ ಸುರಕ್ಷಿತವಾಗಿರಿ…..ಲೆಟ್ಸ್ ಪಾರ್ಟಿ ಹಾರ್ಡ್ ಪೀಪಲ್…..ಐ ಲವ್ ಯು ಆಲ್ ಆ್ಯಂಡ್ ಥ್ಯಾಂಕ್ ಯು ಟು ಒನ್ ಆ್ಯಂಡ್ ಆಲ್ ಅಗೇನ್ ಎಂದು ಬರೆದುಕೊಂಡಿದ್ದಾರೆ. ಹ್ಯಾಷ್ ಟ್ಯಾಗ್‍ನೊಂದಿಗೆ ಲವ್, ಬರ್ತ್‍ಡೇ ಗರ್ಲ್, ಬರ್ತ್‍ಡೇ ಡ್ಯೂರಿಂಗ್ ಲಾಕ್‍ಡೌನ್ ಎಂದು ಹಾಕಿದ್ದಾರೆ.

     

    View this post on Instagram

     

    I wish for all of your wishes to come true.✨ Happieeee birthday my dea raks????❤️ God bless !!✨✨@rakshitha__official ????

    A post shared by Rachita Ram (@rachita_instaofficial) on

    ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದು, ನಿಮ್ಮೆಲ್ಲ ಹಾರೈಕೆಗಳು ಈಡೇರಲಿ ಎಂದು ಶುಭ ಕೋರುತ್ತೇನೆ. ಹ್ಯಾಪಿ ಬರ್ತ್‍ಡೇ ಮೈ ಡೀಯ್ ರಕ್ಸ್….ಗಾಡ್ ಬ್ಲೆಸ್ ಎಂದು ಬರೆದಿದ್ದಾರೆ. ಇದಕ್ಕೆ ರಕ್ಷಿತಾ ಪ್ರತಿಕ್ರಿಯಿಸಿ, ಥ್ಯಾಂಕ್ಯೂ ಮೈ ಲವ್ ಎಂದು ಕಮೆಂಟ್ ಮಾಡಿದ್ದಾರೆ. ಹೀಗೆ ರಕ್ಷಿತಾ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದಿದೆ.

  • `ಜೋಗಿ ಪ್ರೇಮ್’ ಅಲ್ಲ `ಟೋಪಿ ಪ್ರೇಮ್’ ಎಂದ್ರು ನಿರ್ಮಾಪಕ ಶ್ರೀನಿವಾಸ್!

    `ಜೋಗಿ ಪ್ರೇಮ್’ ಅಲ್ಲ `ಟೋಪಿ ಪ್ರೇಮ್’ ಎಂದ್ರು ನಿರ್ಮಾಪಕ ಶ್ರೀನಿವಾಸ್!

    ಬೆಂಗಳೂರು: ಜೋಗಿ, ಕರಿಯಾ, ಎಕ್ಸ್ ಕ್ಯೂಸ್ ಮೀ ಅಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪ್ರೇಮ್, ನನ್ನ ಬಳಿ ಸಿನಿಮಾ ಮಾಡುದಾಗಿ ಹೇಳಿ ಮುಂಗಡ ಹಣ ಪಡೆದು ಸಿನಿಮಾ ಮಾಡಿಲ್ಲ ಎಂದು ನಿರ್ಮಾಪಕ ಶ್ರೀನಿವಾಸ್ ಆರೋಪ ಮಾಡಿದ್ದಾರೆ. ಅಲ್ಲದೇ ಅವರು ಜೋಗಿ ಪ್ರೇಮ್ ಅಲ್ಲ ಟ್ರೋಪಿ ಪ್ರೇಮ್ ಎಂದು ಆರೋಪಿಸಿದ್ದಾರೆ.

    ನಗರದಲ್ಲಿ ಇಂದು ನಡೆದ ತಾರಕಾಸುರ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀನಿವಾಸ್, ನಿರ್ದೇಶಕ ಪ್ರೇಮ್ ನನ್ನ ಬಳಿ ಸಿನಿಮಾ ಮಾಡುತ್ತೇನೆ ಎಂದು ಹೇಳಿ 9 ವರ್ಷದ ಇಂದೇ 10 ಲಕ್ಷ ರೂ. ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ ಇನ್ನು ಹಣ ನೀಡದೆ ಅದೇ ಟೋಪಿ ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದರು.

    ಜೋಗಿ ಸಿನಿಮಾ ವೇಳೆಯೇ 72 ಲಕ್ಷ ರೂ. ನೀಡಿ ನಾನು ಅವರ ಸಿನಿಮಾದ ತೆಲುಗು ಭಾಷೆಯ ರೈಟ್ಸ್ ಪಡೆದೆ. ಬಳಿಕ ಅವರೊಂದಿಗೆ ಸಿನಿಮಾ ಮಾಡಲು ಹಣ ನೀಡಿದ್ದೆ. ಇತ್ತೀಚಿಗೆ ನನ್ನ ಆರೋಗ್ಯ ಸರಿ ಇಲ್ಲದ ಕಾರಣ ಅವರ ಬಳಿ ಹಣ ಕೇಳಲು ಮನೆಗೆ ತೆರಳಿದ್ದೆ. ಆಗ 2.50 ಲಕ್ಷ ರೂ. ನೀಡಿದರು. ಆದರೆ ಮುಂದಿನ ದಿನಗಳಲ್ಲಿ ಬಾಕಿ ಹಣ ಕೇಳಿದರೆ ನೀಡಿಲ್ಲ. ಅಷ್ಟೇ ಅಲ್ಲದೇ ಹಣ ಕೊಡುತ್ತೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದರು.

    ಪ್ರೇಮ್ ಅವರಿಗೆ ಹಣ ನೀಡುವ ಮೊದಲು ಅವರ ಎಲ್ಲಾ ಸಿನಿಮಾ ನೋಡಿದ್ದೆ. ಆ ಬಳಿಕ ಅವರಿಂದ ಸಿನಿಮಾ ಕಥೆಯನ್ನು ಕೂಡ ಕೇಳದೆ ಹಣ ನೀಡಿದ್ದೆ. ಆದರೆ ಅವರು ಸಿನಿಮಾ ಕೂಡ ಮಾಡಿಲ್ಲ, ಹಣವನ್ನು ವಾಪಸ್ ನೀಡಲ್ಲ. ಈಗ ಅವರ 50 ಕೋಟಿ ರೂ. ಸಿನಿಮಾ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ನಾನು ಯಾರ ಬಳಿಯೂ ಹಣ ಕೇಳುವುದಿಲ್ಲ. ಆದರೆ ಪ್ರೇಮ್ ಅವರ ಬಳಿ ನನ್ನಿಂದ ಸಿನಿಮಾ ಮಾಡಿಸಲು ಸಾಧ್ಯವಾಗಲಿಲ್ಲ. ಇಂದು ನಾನು ತೊಂದರೆಯಲ್ಲಿ ಇದ್ದೇನೆ ಹಣ ನೀಡಿ ಎಂದರೂ ಅವರು ನನಗೆ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ. ಮತ್ತೆ ಪ್ರೇಮ್ ಮನೆ ಬಳಿ ತೆರಳ ಬೇಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

    ಲೈಕ್, ಕಮೆಂಟ್‍ಗಾಗಿ ಇಷ್ಟ ಬಂದಂತೆ ಬರೆಯೋ ವಿಕೃತಕಾಮಿಗಳಿದ್ದಾರೆ: ಪ್ರೇಮ್

    – ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ: ವಿಲನ್ ನಿರ್ದೇಶಕ ಸವಾಲ್

    ಬೆಂಗಳೂರು: `ದಿ ವಿಲನ್’ ಸಿನಿಮಾ ಯಶಸ್ವಿಯಾಗಿ ಮೂಡಿಬಂದಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್, ಕಮೆಂಟ್ ಪಡೆಯಲು ವಿಕೃತಕಾಮಿಗಳು ತಮ್ಮಗೆ ಇಷ್ಟ ಬಂದಂತೆ ಬರೆಯುತ್ತಾರೆ. ನಿಮಗೆ ಅಷ್ಟು ತಾಕತ್ತಿದ್ರೆ ನೀವು ಸಿನಿಮಾ ಮಾಡಿ ಎಂದು ನಿರ್ದೇಶಕ ಪ್ರೇಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    `ದಿ ವಿಲನ್’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್, ಮಾಧ್ಯಮಗಳು ವಿಮರ್ಶೆ ಮಾಡಿ ನಮ್ಮ ಕಷ್ಟ, ಶ್ರಮವನ್ನು ತಿಳಿದು ಬಳಿಕ ನಮ್ಮ ತಪ್ಪುಗಳನ್ನು ತಿಳಿಸುತ್ತವೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಅವರೇ ಹೀರೋ ಆಗಿ, ವಿಮರ್ಶೆ ಮಾಡುವ ಬದಲು ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆ. ಸಿನಿಮಾ ಮಾಡಲು ಬಹಳ ಇಷ್ಟ ಇದೆ. ಆದರೆ ಮಾತು ಮಾತಿಗೂ ರಾಜಮೌಳಿ, ಮುರುಗದಾಸ್ ಎನ್ನುತ್ತೀರಾ. ಕೆಲವರು ತೆಲುಗು, ತಮಿಳು ಜನರಿಗೆ ಹೋಲಿಕೆ ಮಾಡಿ ನೋಡುತ್ತೀರಾ. ಕನ್ನಡ ಬಗ್ಗೆ ಅಭಿಮಾನ ಇಲ್ಲದೇ ಇದ್ದರೆ ನಾನು ಏನು ಮಾಡಲು ಆಗುತ್ತೆ. ಏಕೆ ನಮ್ಮ ಕಷ್ಟ ನಿಮಗೇ ಕಾಣಿಸುವುದಿಲ್ಲವಾ ಎಂದು ಪ್ರಶ್ನೆ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಇಂದು ಕನ್ನಡ ಸಿನಿಮಾವನ್ನು ಬೇರೆ ರಂಗದಲ್ಲಿ ಗುರುತಿಸವಂತೆ ಮಾಡಲು ಹಗಲು, ರಾತ್ರಿ ನನ್ನಂತಹ ಹಲವರು ದಿನ ನಿತ್ಯ ಕುಟುಂಬ ಬಿಟ್ಟು ಶ್ರಮಿಸುತ್ತಿದ್ದಾರೆ. ನಾಡಿನಲ್ಲಿ ಒಬ್ಬ ರೈತ ಹೇಗೆ ಎಲ್ಲವನ್ನೂ ಶ್ರಮ ವಹಿಸಿ ಮಾಡುತ್ತಾರೋ ಹಾಗೆಯೇ ನಾನು ಕೂಡ ಶ್ರಮಿಸಿದ್ದೇನೆ. ಒಂದೊಮ್ಮೆ ಆ ವರ್ಷ ಬೆಳೆ ಬರಲಿಲ್ಲ ಎಂದರೆ ರೈತ ಮತ್ತೆ ಪ್ರಯತ್ನ ಮಾಡುತ್ತಾರೆ. ನಾನು ಅಷ್ಟೇ. ಆದರೆ ನನ್ನ ಕೆಲಸಕ್ಕೆ ಬೆಲೆ ನೀಡದೇ ಇದ್ದರೂ ಪರವಾಗಿಲ್ಲ. ಆದರೆ ವೈಯಕ್ತಿಕ ಟೀಕೆ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದರು.

    ಪ್ರೇಮ್ ಚಾಲೆಂಜ್
    ನಿಮಗೇ ನನ್ನ ಸಿನಿಮಾ ಇಷ್ಟ ಆಗಿಲ್ಲ ಎಂದರೆ ವಿಮರ್ಶೆ ಮಾಡಿ. ಆದರೆ ಟೀಕೆ ಮಾಡುವ ಮೊದಲು ನಿಮ್ಮ ಹಣದಲ್ಲಿ ಒಂದು ಸಿನಿಮಾ ಮಾಡಲು ಕಥೆ ಸಿದ್ಧಪಡಿಸಿ, ನಾಯಕ ನಟರ ಪಡೆಯಿರಿ. ಬಳಿಕ ನನ್ನನ್ನು ಕೂಲಿ ಮಾಡುವ ವ್ಯಕ್ತಿಯಂತೆ ನಿರ್ದೇಶನ ಮಾಡಲು ಕರೆದು ನೋಡಿ ಬರುತ್ತೇನೆ. ಆಗ ಒಬ್ಬ ಕಲಾವಿದನ ಕಷ್ಟ ತಿಳಿಯುತ್ತದೆ. ಟೀಕೆ ಮಾಡುವವರು ಒಂದು ಸಿನಿಮಾ ಮಾಡಿ ಎಂದು ಸವಾಲು ಹಾಕುತ್ತಿದ್ದೇನೆ ಎಂದು ತಮ್ಮ ವಿರುದ್ಧ ಟೀಕೆ ಮಾಡಿದವರಿಗೆ ಚಾಲೆಂಜ್ ನೀಡಿದರು.

    ನಿಮಗೆ ನಟರ ಬಗ್ಗೆ ಅಷ್ಟು ಅಭಿಮಾನ ಇದ್ದರೆ ನಿಮಗೇ ಬೇಕಾದ ನಟ, ನಟಿ ಬಳಿ ಹೋಗಿ ಪ್ರೇಮ್ ಜೊತೆ ಸಿನಿಮಾ ಬೇಡ ಎಂದು ಹೇಳಿ. ಅವರ ನಿರ್ದೇಶನದಲ್ಲಿ ಮಾಡದಂತೆ ಹೇಳಿ. ನಾನು ಏನೂ ಹೇಳಲ್ಲ. ಏಕೆಂದರೆ ನಿಮ್ಮ ವೈಯಕ್ತಿಕ ಟೀಕೆಗಳು ನನಗೆ ಸಾಕಷ್ಟು ನೋವು ತಂದಿದೆ. ನನ್ನ ಬಳಿ ಸುಮಾರು 9 ವಿಡಿಯೋಗಳು ಇದೆ. ಅವುಗಳನ್ನು ನನ್ನ ವಕೀಲರ ಬಳಿ ನೀಡಿದ್ದೇನೆ. ವಿಡಿಯೋದಲ್ಲಿನ ವ್ಯಕ್ತಿಗಳ ವಿರುದ್ಧ ದೂರು ದಾಖಲು ಮಾಡುತ್ತೇನೆ. ದಯಮಾಡಿ ಅದರಲ್ಲಿ ನಿಮ್ಮ ಮಕ್ಕಳಿದ್ದರೆ ನಮ್ಮನ್ನು ಕ್ಷಮಿಸಿ ಅಮ್ಮ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇನೆ. ನಿಮ್ಮ ಟೀಕೆ ನೋಡಿದರೆ ನೀವು ಕುಟುಂಬದಲ್ಲಿ ಬೆಳೆದು ಬಂದಿಲ್ಲ ಎಂದು ಹೇಳುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ವಿಕೃತ ಮನಸ್ಸುಗಳಿವೆ. ಅವುಗಳ ವಿರುದ್ಧ ನ್ಯಾಯಾಲಯಕ್ಕೆ ಬೇಕಾದರೂ ಹೋಗುತ್ತೇನೆ ಎಂದರು.

    ವೈಯಕ್ತಿಕವಾಗಿ ಟೀಕೆ ಮಾಡಿದವರ ವಿರುದ್ಧ ನಾನು ಯುದ್ಧ ಸಾರುತ್ತೇನೆ. ಈ ಕುರಿತು ಫೇಸ್‍ಬುಕ್ ಪೇಜ್ ಆರಂಭಿಸುತ್ತೇನೆ. ಕನ್ನಡ ಯಾವುದೇ ಕಲಾವಿದನ ಬಗ್ಗೆ ವೈಯಕ್ತಿಕ ಟೀಕೆ ಮಾಡುವುದು ಬೇಡ ಎಂಬುವುದೇ ನನ್ನ ಮಾತಿನ ಉದ್ದೇಶ. ಯಾವುದೇ ನಿರ್ದೇಶಕ ಶೇ. 100ರಷ್ಟು ಎಲ್ಲರಿಗೂ ಒಪ್ಪಿಸಲು ಸಾಧ್ಯವಿಲ್ಲ. ಶೇ.80 ಜನ ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದರೆ, ಉಳಿದ ಶೇ.20 ಮಂದಿ ಮಾತ್ರ ಹೀಗೆ ಇರುತ್ತಾರೆ. ಎಲ್ಲಾ ನಟರು ಒಪ್ಪಿಯೇ ಸಿನಿಮಾ ಮಾಡುತ್ತಾರೆ. ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಒಪ್ಪಿಯೇ ಸಿನಿಮಾ ಮಾಡಿದ್ದಾರೆ. ಎಲ್ಲರೂ ಬೆಂಬಲ ನೀಡಿದ ಕಾರಣಕ್ಕೆ ಸಿನಿಮಾ ಆಗಿದೆ. ಈಗಲೂ ಶಿವರಾಜ್ ಕುಮಾರ್ ಅವರು ಒಂದು ಮಾತು ಹೇಳಿದರೆ ನಾನು ಆ ದೃಶ್ಯ ತೆಗೆಯಲು ಸಿದ್ಧ ಎಂದರು.

    ಇದೇ ವೇಳೆ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕನ್ನಡ ನಾಡಿನ ಜನರಿಗೆ ವಂದನೆ ತಿಳಿಸಲು ಸುದೀಪ್, ಶಿವಣ್ಣ ಅವರೊಂದಿಗೆ ನಾವು ಎಲ್ಲ ಕಡೆ ಹೋಗುತ್ತೇವೆ. ಈ ಕುರಿತು ಎರಡು ದಿನಗಳಲ್ಲಿ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಸಂಕಷ್ಟ!

    `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಸಂಕಷ್ಟ!

    ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ಮಲ್ಟಿಸ್ಟಾರ್ ಅಭಿನಯದ `ದಿ ವಿಲನ್’ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಸಂಕಷ್ಟ ಎದುರಾಗಿದೆ.

    `ದಿ ವಿಲನ್’ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಅಭಿನವ ಚಕ್ರವರ್ತಿ ಸುದೀಪ್ ಒಟ್ಟಿಗೆ ಅಭಿನಯಿಸಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಸೆನ್ಸಾರ್ ಅಂಗಳದಲ್ಲಿದೆ. ಸೆನ್ಸಾರ್ ಮಂಡಳಿ `ದಿ ವಿಲನ್’ ಸಿನಿಮಾ ವೀಕ್ಷಿಸಿದ ಬಳಿಕ `ಎ’ ಸರ್ಟಿಫಿಕೇಟ್ ಕೊಡಲು ಮುಂದಾಗಿದೆ. ಆದರೆ `ಎ’ ಸರ್ಟಿಫಿಕೇಟ್ ಬಗ್ಗೆ ನಿರ್ದೇಶಕ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಮಲ್ಟಿಪ್ಲೆಕ್ಸ್ ನಲ್ಲಿ `ಎ’ ಸರ್ಟಿಫಿಕೇಟ್ ನೀಡುವುದರಿಂದ ಹೆಚ್ಚಿನ ಎಫೆಕ್ಟ್ ಆಗುತ್ತದೆ ಎಂದು ಚಿತ್ರತಂಡದ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಸೆನ್ಸಾರ್ ಮಂಡಳಿ `ಯು’ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದು, `ಯು’ ಸರ್ಟಿಫಿಕೇಟ್ ಬೇಕಾದರೆ ಸಿನಿಮಾದಲ್ಲಿಯ 10 ನಿಮಿಷದ ದೃಶ್ಯವನ್ನು ಕತ್ತರಿಸುವುದಕ್ಕೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

    ಇತ್ತೀಚೆಗಷ್ಟೇ `ದಿ ವಿಲನ್’ ಚಿತ್ರತಂಡ ಅದ್ಧೂರಿಯಾಗಿ ಕಾರ್ಯವನ್ನು ಆಯೋಜನೆ ಮಾಡಿ ಅಲ್ಲಿ ಆಡಿಯೋ ಲಾಂಚ್ ಮಾಡಿತ್ತು. ಈ ಹಿಂದೆಯೂ ಕೂಡ `ದಿ ವಿಲನ್’ ಸಿನಿಮಾದ ಟೀಸರ್ ಬಿಡುಗಡೆಗೊಂಡಾಗ ವಿವಾದವೂ ಹುಟ್ಟಿಕೊಂಡಿತ್ತು. ಅನೇಕ ಕಾರಣಗಳನ್ನ ಮುಂದಿಟ್ಟು ಶಿವಣ್ಣ ಅವರಿಗೆ ಈ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಶಿವರಾಜ್‍ಕುಮಾರ್ ಅಭಿಮಾನಿಗಳು `ದಿ ವಿಲನ್’ ಸಿನಿಮಾ ಬಹಿಷ್ಕಾರ ಹಾಕುತ್ತೇವೆ ಎಂದು ಹಠ ಹಿಡಿದು, ಅನೇಕ ಷರತ್ತುಗಳನ್ನ ಮುಂದಿಟ್ಟಿದ್ದರು.

    ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದರು. “ಕಳೆದ ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಶಿವಣ್ಣ ಅವರ ವಿಚಾರವಾಗಿ ಪ್ರೇಮ್ ಅವರಿಗೆ ಅಸಮಾಧಾನವಿದೆ ಎಂದು ವರದಿಯಾಗಿತ್ತು. ಆದರೆ ಈ ಕುರಿತು ನಿರ್ಧಾರ ಮಾಡಬೇಕಾಗಿದ್ದು ಶಿವಣ್ಣ ಅವರು, ಒಂದೊಮ್ಮೆ ಶಿವಣ್ಣ ಅವರು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುತ್ತೇನೆ. ಸಿನಿಮಾ ಬಿಡುಗಡೆಗೂ ಮೊದಲೇ ಅಸಮಾಧಾನ ವ್ಯಕ್ತಪಡಿಸಿದರೆ ನಾನು ಏನು ಮಾಡಲು ಸಾಧ್ಯ. ಆದ್ದರಿಂದ ಸಿನಿಮಾ ಬಂದರೆ ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ಲಭಿಸಲಿದೆ. ತಾಳ್ಮೆವಹಿಸಿ, ಅತೀ ಶೀಘ್ರದಲ್ಲಿ ನಿಮ್ಮ ಮುಂದೇ ಸಿನಿಮಾ ತರುತ್ತೇನೆ ಎಂದು ಹೇಳಿದ್ದರು.

    ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ `ದಿ ವಿಲನ್’ ಸಿನಿಮಾವು ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಇದೊಂದು ಮಲ್ಟಿ ಸ್ಟಾರ್ ಗಳ ಚಿತ್ರವಾಗಿದೆ. ಇದರಲ್ಲಿ ವಿಶೇಷತೆ ಎಂದರೆ ಕಿಚ್ಚ ಮತ್ತು ಶಿವಣ್ಣ ಒಟ್ಟಾಗಿ ಆಭಿನಯಿಸುತ್ತಿರುವುದು. ಈ ಸಿನಿಮಾದಲ್ಲಿ ಬಹುಭಾಷಾ ನಟಿ ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಮತ್ತೊಂದು ವಿವಾದದಲ್ಲಿ `ದಿ ವಿಲನ್’ – ಸಿನಿಮಾ ನೋಡಿ ಆಮೇಲೆ ಮಾತ್ನಾಡಿ ಅಂದ್ರು ನಿರ್ದೇಶಕ ಪ್ರೇಮ್

    ಬೆಂಗಳೂರು: “ಸಿನಿಮಾ ನೋಡಿ ಆಮೇಲೆ ಮಾತನಾಡಿ, ಇಲ್ಲವೇ ಶಿವಣ್ಣಾವ್ರೇ ನನಗೆ ಇದು ತಪ್ಪು ಅನ್ನೋದನ್ನು ಹೇಳಲಿ, ಆಗ ನೀವೆಲ್ಲಾ ಹೇಳಿದಂತೆ ಕೇಳ್ತೀನಿ “ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

    ವಾರದ ಹಿಂದೆ ರಿಲೀಸ್ ಆಗಿದ್ದ `ದಿ ವಿಲನ್’ ಸಿನಿಮಾದ ಟೀಸರ್ ಜೊತೆ ವಿವಾದವೂ ಹುಟ್ಟಿಕೊಂಡಿತ್ತು. ಅನೇಕ ಕಾರಣಗಳನ್ನ ಮುಂದಿಟ್ಟು ಶಿವಣ್ಣ ಅವರಿಗೆ ಈ ಚಿತ್ರದಲ್ಲಿ ಅವಮಾನ ಮಾಡಲಾಗಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿಮಾನಿಗಳು `ದಿ ವಿಲನ್’ ಸಿನಿಮಾ ಬಹಿಷ್ಕಾರ ಹಾಕುತ್ತೇವೆ ಎಂದು ಹಠ ಹಿಡಿದು, ಅನೇಕ ಷರತ್ತುಗಳನ್ನ ಮುಂದಿಟ್ಟಿದ್ದರು.

    ಸದ್ಯ ವಿಷ್ಯವಾಗಿ ಇದೀಗ `ದಿ ವಿಲನ್’ ಚಿತ್ರ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಶಿವಣ್ಣ ಅವರ ವಿಚಾರವಾಗಿ ಪ್ರೇಮ್ ಅವರಿಗೆ ಅಸಮಾಧಾನವಿದೆ ಎಂದು ವರದಿಯಾಗಿತ್ತು. ಆದರೆ ಈ ಕುರಿತು ನಿರ್ಧಾರ ಮಾಡಬೇಕಾಗಿದ್ದು ಶಿವಣ್ಣ ಅವರು, ಒಂದೊಮ್ಮೆ ಶಿವಣ್ಣ ಅವರು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರಿಸುತ್ತೇನೆ. ಸಿನಿಮಾ ಬಿಡುಗಡೆಗೂ ಮೊದಲೇ ಅಸಮಾಧಾನ ವ್ಯಕ್ತಪಡಿಸಿದರೆ ನಾನು ಏನು ಮಾಡಲು ಸಾಧ್ಯ. ಅದ್ದರಿಂದ ಸಿನಿಮಾ ಬಂದರೆ ನಿಮಗೆ ಈ ಕುರಿತು ಸಂಪೂರ್ಣ ಮಾಹಿತಿ ಲಭಿಸಲಿದೆ. ಅದ್ದರಿಂದ ತಾಳ್ಮೆವಹಿಸಿ, ಆತೀ ಶೀಘ್ರದಲ್ಲಿ ನಿಮ್ಮ ಮುಂದೇ ಸಿನಿಮಾ ತರುತ್ತೇನೆ ಎಂದು ಹೇಳಿದ್ದಾರೆ.

    ಈ ಹಿಂದೆಯೂ ದಿ ವಿಲನ್ ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. `ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ ಒನ್ ಅಂತಾರೋ’ ಎಂದು ಸಾಹಿತ್ಯವಿರುವ ಹಾಡಿಗೆ ಶಿವಣ್ಣ ಸಖತ್ ಡಾನ್ಸ್ ಮಾಡಿದ್ದರು.