Tag: ನಿರ್ದೇಶಕ ಗುರುಪ್ರಸಾದ್

  • ಆತ್ಮಹತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್

    ಆತ್ಮಹತ್ಯೆಗೂ ಮುನ್ನ ಹಗ್ಗ, ಕರ್ಟನ್ ಖರೀದಿಸಿದ್ದ ಗುರುಪ್ರಸಾದ್

    ಬೆಂಗಳೂರು: ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಮೊದಲೇ ಹಗ್ಗ, ಕರ್ಟನ್ ಖರೀದಿಸಿದ್ದರು ಎಂಬ ಮಾಹಿತಿಯು ಪೊಲೀಸ್ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಹಲವು ಅನುಮಾನಗಳಿಗೆ ಕಾರಣವಾಗಿರುವ ನಡುವೆ ಕೆಲವೊಂದು ಕುತೂಹಲಕರವಾದ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೊಲೀಸರಿಗೆ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರುವುದು ಗೊತ್ತಾಗಿದೆ.

    ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಿರ್ಧರಿಸಿದ್ದ ಗುರುಪ್ರಸಾದ್, ಹೊಸದಾಗಿ ಹಗ್ಗ ಖರೀದಿ ಮಾಡಿದ್ದರಂತೆ. ಹಾಗೇ ಹಗ್ಗ ಖರೀದಿ ಮಾಡಿಕೊಂಡು ಮನೆಗೆ ಬಂದು ಕಿಟಕಿಯಿಂದ ಹೊರಗೆ ಯಾರಿಗೂ ಕಾಣಬಾರದು ಎಂದು ಹೊಸದಾಗಿ ಕರ್ಟನ್‌ಗಳು ಹಾಕಿ ಕವರ್ ಮಾಡಿದ್ದಾರೆ. ನಂತರ ಮನೆಯ ಬಾಗಿಲಿನ ಒಳಗಿನಿಂದಲೇ ಚಿಲಕ ಹಾಕಿ ಅಲ್ಲೇ ಇದ್ದ ದಿವಾನ್ ಮೇಲಿಂದ ಕೆಳಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಅನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ಚಾಮರಾಜನಗರ| ‘ಮಿಸ್ಟರ್‌ ಬಿಆರ್‌ಟಿ’ ಎಂದೇ ಹೆಸರಾಗಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಸಾವು

    ಗುರುಪ್ರಸಾದ್ ಆತ್ಮಹತ್ಯೆಗೆ ಆರ್ಥಿಕ ಕಾರಣಗಳೇನಾದರು ಇದೆಯಾ ಅಥವಾ ವೈಯಕ್ತಿಕ ಕಾರಣಗಳಾ ಅನ್ನುವ ವಿಚಾರಕ್ಕೂ ತನಿಖೆ ನಡೆಯುತ್ತಿದೆ. ಅದರ ಜೊತೆಗೆ ಆತ್ಮಹತ್ಯೆ ನಡೆದಿದ್ದು ಯಾವಾಗ ಅನ್ನುವುದಕ್ಕೂ ಉತ್ತರ ಸಿಕ್ಕಿದೆ. ಗುರುಪ್ರಸಾದ್, ಕಳೆದ ಅ.29ರಂದು ಕೊನೆಯ ಬಾರಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಆ ನಂತರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಫ್ಲಾಟ್‌ಗೆ ಅ.29ರಂದು ಸಂಜೆ ಹೋಗಿರುವುದನ್ನು ಅಲ್ಲಿನ ಕೆಲವರು ನೋಡಿದ್ದಾರೆ. ಪೊಲೀಸರ ತನಿಖೆ ವೇಳೆಯೂ, ಗುರುಪ್ರಸಾದ್ ಅ.29ರ ರಾತ್ರಿ 7-8 ಗಂಟೆ ಹೊತ್ತಿನಲ್ಲಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಕೋಲಾರದಲ್ಲಿ 16 ವರ್ಷಗಳ ಬಳಿಕ ಪೂರ್ಣಗೊಂಡ ಹೊಸ ಜಲಾಶಯ

    ಈ ನಡುವೆ, ಗುರುಪ್ರಸಾದ್ ನಾಲ್ಕು ಮೊಬೈಲ್‌ಗಳನ್ನು ಬಳಸುತ್ತಿದ್ದರು ಎನ್ನಲಾಗಿದ್ದು, ಆ ನಾಲ್ಕು ಮೊಬೈಲ್‌ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಕೆಲ ಡಿಲಿಟೇಡ್ ಮಸೇಜ್‌ಗಳು ಕೂಡ ಪತ್ತೆಯಾಗಿವೆ. ಕೊನೆಯ ಬಾರಿಗೆ ಯಾರು ಸಂಪರ್ಕ ಮಾಡಿದ್ದರು? ಹಣಕಾಸಿನ ವಿಚಾರವಾ? ಬೇರೆ ಏನಾದರೂ ಕಾರಣ ಇದೆಯಾ ಅನ್ನುವುದು ತನಿಖೆಯ ನಂತರವೇ ತಿಳಿಯಬೇಕಿದೆ. ಇದನ್ನೂ ಓದಿ: Kanpur| ಖಾಸಗಿ ಆಸ್ಪತ್ರೆ ನಿರ್ದೇಶಕನಿಂದ 22 ವರ್ಷದ ನರ್ಸ್ ಮೇಲೆ ಅತ್ಯಾಚಾರ

  • ಕಾರವಾರ | ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದ ಗುರುಪ್ರಸಾದ್!

    ಕಾರವಾರ | ಖಿನ್ನತೆಯಿಂದ ಬಳಲುತಿದ್ದ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದ ಗುರುಪ್ರಸಾದ್!

    ಕಾರವಾರ: ಚಲನಚಿತ್ರ ನಿರ್ದೇಶಕ ಗುರುಪ್ರಸಾದ್ (Guruprasad) ಆತ್ಮಹತ್ಯೆಗೆ ಶರಣಾಗಿದ್ದು, ಈ ಹಿಂದೆ ಅವರು ಮಾಡಿದ್ದ ಮಾನವೀಯ ಕಾರ್ಯವೊಂದು ಜನರ ಮೆಚ್ಚುಗೆಗೆ ಕಾರಣವಾಗಿದೆ.

    ಕಾರವಾರದಲ್ಲಿ (Karwar) ಈ ಹಿಂದೆ ಸಿನಿಮಾ ಚಿತ್ರೀಕರಣದ ವೇಳೆ ಮಾನಸಿಕ ಖಿನ್ನತೆಗೊಳಗಾಗಿ (Depression) ಬೀದಿ ಸುತ್ತುತ್ತಿದ್ದ ವ್ಯಕ್ತಿಯೊಬ್ಬರಿಗೆ ಅವರು ಧೈರ್ಯ ತುಂಬಿದ್ದರು. ಅಲ್ಲದೇ ಆತನಿಗೆ ಕ್ಷೌರ ಮಾಡಿಸಿ ಹೊಸ ಬಟ್ಟೆ ಕೊಡಿಸಿ ಮಾನವೀಯತೆ ಮೆರೆದಿದ್ದರು.

    2016ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣಕ್ಕೆ ಚಿತ್ರದ ಶೂಟಿಂಗ್‌ಗೆ ಅವರು ಬಂದಿದ್ದರು. ಈ ವೇಳೆ ಗೋಕರ್ಣದಲ್ಲಿ ತಿರುಗಾಡುತ್ತಿದ್ದ ಮುತ್ತಣ್ಣ ಎಂಬ ವ್ಯಕ್ತಿ ಖಿನ್ನತೆಗೊಳಗಾಗಿ, ಉದ್ದನೆಯ ಕೂದಲು ಬಿಟ್ಟು ತಿರುಗುತ್ತಿದ್ದರು. ಅವರನ್ನು ನೋಡಿ ಮರುಗಿದ್ದ ಗುರುಪ್ರಸಾದ್‌, ಬಳಿಗೆ ಕರೆಸಿಕೊಂಡು ಆತನಿಗೆ ಕಟಿಂಗ್ ಮಾಡಿಸಿ, ಹೊಸ ಬಟ್ಟೆ ತೊಡಿಸಿದ್ದರು.

    ಚಿತ್ರೀಕರಣದ ವೇಳೆ ಆತನನ್ನು ಕೆಲಸಕ್ಕೆ ಸಹ ಸೇರಿಸಿಕೊಂಡಿದ್ದರು. ಈ ಮೂಲಕ ಆತನಿಗೆ ಧೈರ್ಯ ತುಂಬಿ ದುಡಿಮೆಯ ಹಾದಿ ತೋರಿಸಿದ್ದರು‌.