Tag: ನಿರ್ದೇಶಕಿ

  • ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

    ಅತೀ ಚಿಕ್ಕ ವಯಸ್ಸಿನಲ್ಲೇ ನಟನೆ ಮತ್ತು ನಿರ್ದೇಶನವನ್ನು ಸಂಭಾಳಿಸಿಕೊಂಡು ಅಪರೂಪ ಎನ್ನುವಂತಹ ಚಿತ್ರ ಕೊಟ್ಟವರು ಐಶಾನಿ ಶೆಟ್ಟಿ. ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳದೇ ಪ್ರೇಕ್ಷಕರ ಮನತಟ್ಟುವಂತಹ ಪಾತ್ರಗಳಲ್ಲಿ ಈವರೆಗೂ ಅವರು ಕಾಣಿಸಿಕೊಂಡಿದ್ದಾರೆ. ಸದ್ಯ ಹೊಂದಿಸಿ ಬರೆಯಿರಿ ಮತ್ತು ಧರಣಿ ಮಂಡಲ ಚಿತ್ರಗಳಲ್ಲಿ ನಟಿಸಿರುವ ಇವರು, ಚಿತ್ರವೊಂದರ ನಿರ್ದೇಶನಕ್ಕೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿದ್ದಾರೆ.

    ಇಂಜಿನಿಯರಿಂಗ್ ಸ್ಟೂಡೆಂಟ್ ಬದುಕನ್ನು ಆಧರಿಸಿದ ‘ಹೊಂದಿಸಿ ಬರೆಯಿರಿ’ ಸಿನಿಮಾದಲ್ಲಿ ಐಶಾನಿ ಶೆಟ್ಟಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದು, ಮಹತ್ವಾಕಾಂಕ್ಷಿ ಇಟ್ಟುಕೊಂಡಿರುವ ಹುಡುಗಿಯ ಪಾತ್ರವನ್ನು ಈ ಸಿನಿಮಾದಲ್ಲಿ ಅವರು ನಿರ್ವಹಿಸಿದ್ದಾರೆ. ‘ಹೊಂದಿಸಿ ಬರೆಯಿರಿ ಸಿನಿಮಾ ಬಹುತೇಕರ ಬದುಕನ್ನು ಪ್ರತಿನಿಧಿಸುವಂಥದ್ದು. ಇಂಜಿನಿಯರಿಂಗ್ ವಿದ್ಯಾರ್ಥಿಗಳ ಜೀವನವನ್ನು ಸಿನಿಮಾದಲ್ಲಿ ತೋರಿಸಿದ್ದರೂ, ಅದು ಬದುಕಿನ ಬೇರೆ ಬೇರೆ ಮಜಲುಗಳ ದರ್ಶನ ಮಾಡಿಸುತ್ತದೆ. ನನ್ನ ಪಾತ್ರವೇ ವಿಶೇಷವಾಗಿದೆ.  ತನ್ನ ಜೀವನದ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡ ಹುಡುಗಿಯೊಬ್ಬಳು, ಅದನ್ನು ಪಡೆಯಲು ಏನೆಲ್ಲ ಹರಸಾಹಸ ಮಾಡುತ್ತಾಳೆ ಎನ್ನುವ ಹಿನ್ನೆಲೆಯಿದೆ. ಮೊನ್ನೆಯಷ್ಟೇ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ತುಂಬಾ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಅಂತಾರೆ ಐಶಾನಿ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಬೋಲ್ಡ್ ಕ್ಯಾರೆಕ್ಟರ್

    ಧರಣಿ ಮಂಡಲ ಸಿನಿಮಾದಲ್ಲಿ ಈವರೆಗೂ ಮಾಡದೇ ಇರುವಂತಹ ಪಾತ್ರವನ್ನು ಐಶಾನಿ ಶೆಟ್ಟಿ ನಿರ್ವಹಿಸಿದ್ದಾರಂತೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಹಾದಿ ತಪ್ಪಿರುವ ಹುಡುಗಿಯ ಬದುಕನ್ನು ಐಶಾನಿ ಪಾತ್ರ ಪ್ರತಿನಿಧಿಸುತ್ತದೆಯಂತೆ. ಅಲ್ಲದೇ, ಈವರೆಗೂ ನೋಡಿರದೇ ಇರುವ ಐಶಾನಿ ಅವರನ್ನು ಈ ಚಿತ್ರದಲ್ಲಿ ನೋಡಬಹುದು. ‘ನಿಜ, ನಾನು ಈವರೆಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೆ. ಆದರೆ, ಮೊದಲ ಬಾರಿಗೆ ಬೋಲ್ಡ್ ಆಗಿ ಇರುವಂಥ ಪಾತ್ರ ಪೋಷಿಸುತ್ತಿದ್ದೇನೆ. ಅವಳು ಎಲ್ಲ ರೀತಿಯಲ್ಲೂ ಬೋಲ್ಡ್. ಡೈಲಾಗ್, ಪಾತ್ರ ವರ್ತಿಸುವ ರೀತಿ, ಆಕೆಯ ಹಿನ್ನೆಲೆ ಹೀಗೆ ಎಲ್ಲವೂ ಹೊಸದಾಗಿದೆ. ಈ ಕಾರಣಕ್ಕಾಗಿ ಇಂಥದ್ದೊಂದು ಪಾತ್ರವನ್ನು ನಾನು ಒಪ್ಪಿಕೊಂಡೆ’ ಎನ್ನುವುದು ಐಶಾನಿ ಮಾತು. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

    ನಿರ್ದೇಶಕಿಯಾಗುವ ಕನಸು

    ಐಶಾನಿ ಶೆಟ್ಟಿ ಈಗಾಗಲೇ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅದಕ್ಕೆ ಹಲವು ಪ್ರಶಸ್ತಿಗಳು ಕೂಡ ಬಂದಿವೆ. ಈಗ ಸಿನಿಮಾ ಮಾಡುವತ್ತ ಮುಖ ಮಾಡಿದ್ದಾರೆ. ಈಗಾಗಲೇ ಕಥೆಯನ್ನು ಕೂಡ ಬರೆದುಕೊಂಡಿದ್ದಾರೆ. ತಮ್ಮೂರಿನ ಹಿನ್ನೆಲೆಯಾಗಿಟ್ಟುಕೊಂಡು ಕಥೆ ಸಿದ್ಧಪಡಿಸಿರುವ ಅವರು, ಈ ವರ್ಷ ಸಿನಿಮಾ ನಿರ್ದೇಶನವನ್ನು ಮಾಡಲಿದ್ದಾರಂತೆ. ನಿರ್ದೇಶನದ ಜತೆಗೆ ಈ ಸಿನಿಮಾದಲ್ಲಿ ಅವರೇ ಮುಖ್ಯ ಪಾತ್ರವನ್ನೂ ನಿಭಾಯಿಸುತ್ತಿರುವುದು ವಿಶೇಷ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

     

    ‘ನನ್ನೂರಿನ ಕಥೆಯನ್ನೇ ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇನೆ. ಅದೊಂದು ಅಪರೂಪದ ಕಥೆ. ಅದನ್ನು ನಾನು ಜನರಿಗೆ ಹೇಳಲೇಬೇಕಿದೆ. ಹಾಗಾಗಿ ಸಿನಿಮಾ ನಿರ್ದೇಶನಕ್ಕೆ ಮುಂದಾಗಿರುವೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊರುತಿದ್ದೇನೆ. ಆದಷ್ಟು ಬೇಗ ಎಲ್ಲ ಮಾಹಿತಿಯನ್ನೂ ಹಂಚಿಕೊಳ್ಳುತ್ತೇನೆ’ ಎಂದರು ಐಶಾನಿ.

  • ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

    ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

    ಬೆಂಗಳೂರು: ಪದವಿ ಪೂರ್ವ ಕಾಲೇಜು ನಿರ್ದೇಶಕಿಯನ್ನು ವರ್ಗಾವಣೆ ಮಾಡಲಾಗಿದೆ.

    ಪದವಿ ಪೂರ್ವ ಕಾಲೇಜುಗಳ ಸಮವಸ್ತ್ರ ವಿವಾದ ಹಿನ್ನೆಲೆ ಇಂದು ಪದವಿ ಪೂರ್ವ ಕಾಲೇಜು ನಿರ್ದೇಶಕಿಯನ್ನು ಸ್ನೇಹಲ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಸರ್ಕಾರ ಸ್ನೇಹಲ್ ಅವರಿಗೆ ಯಾವುದೇ ಹುದ್ದೆಯನ್ನು ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ.

    ಪ್ರಸ್ತುತ ಆ ಸ್ಥಾನಕ್ಕೆ ರಾಮಚಂದ್ರನ್ ಅವರನ್ನು ನೂತನ ಪಿಯು ಇಲಾಖೆ ನಿರ್ದೇಶಕನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಈ ಹಿಂದೆ ರಾಮಚಂದ್ರನ್ ಅವರು ಬೀದರ್ ಜಿಲ್ಲಾಧಿಕಾರಿಯಾಗಿದ್ದರು.

    ಇತ್ತೀಚೆಗೆ ಹಿಜಬ್‍ಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಸಂಘರ್ಷ ನಡೆಯುತ್ತಿದೆ. ಪರಿಣಾಮ ಸರ್ಕಾರ ನಿರ್ದೇಶಕಿಯನ್ನೇ ವರ್ಗವಣೆ ಮಾಡಿದೆ.

  • ಹೊಸ ಬಾಳಿಗೆ ಎಂಟ್ರಿ ಕೊಟ್ಟ ಸುಮನಾ ಕಿತ್ತೂರು

    ಹೊಸ ಬಾಳಿಗೆ ಎಂಟ್ರಿ ಕೊಟ್ಟ ಸುಮನಾ ಕಿತ್ತೂರು

    ಬೆಂಗಳೂರು: ಕನ್ನಡದ ಎದೆಗಾರಿಕೆಯ ನಿರ್ದೇಶಕಿ ಅಂತಾನೇ ಪ್ರಖ್ಯಾತಿ ಪಡೆದುಕೊಂಡಿದ್ದ ಸುಮನಾ ಕಿತ್ತೂರ್ ಕೊರೊನಾ ಕಾಲದಲ್ಲಿ ಹೊಸ ಬಾಳಿಗೆ ಎಂಟ್ರಿಕೊಟ್ಟಿದ್ದಾರೆ.

    ಸುಮನಾ ಕಿತ್ತೂರು ಕೆಲ ಸಮಯದಿಂದ ಪಾಂಡಿಚೇರಿಯಲ್ಲಿ ನೆಲೆಸಿದ್ದು ಅಲ್ಲಿಯೇ ಶಿವಮೊಗ್ಗ ಮೂಲದ ಎಂಜಿನಿಯರ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. ಈಗ ಸುಮನಾ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಗೆಳೆಯ ಶ್ರೀನಿವಾಸ್ ಅವರನ್ನು ಕುವೆಂಪು ಅವರ ‘ಮಂತ್ರ ಮಾಂಗಲ್ಯ’ ವಿವಾಹ ಪದ್ದತಿಯ ಮೂಲಕ ಕುಪ್ಪಳ್ಳಿಯಲ್ಲೇ ವಿವಾಹವಾಗಬೇಕೆಂದು ಸುಮನಾ ಬಯಸಿದ್ದರು. ಆದರೆ ಕೋವಿಡ್ 19 ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾದ ಕಾರಣ ಪಾಂಡಿಚೇರಿಯಲ್ಲಿ ಮದುವೆಯಾಗಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಸುಮನಾ ಅವರು, ಎರಡೂ ಕುಟುಂಬಗಳ ಸಮ್ಮುಖದಲ್ಲಿ ಸರಳವಾಗಿ ನಮ್ಮ ವಿವಾಹ ನಡೆದಿದೆ. ಏಪ್ರಿಲ್ ನಲ್ಲಿ ಲಾಕ್‍ಡೌನ್ ತೆರವಾದ ಬಳಿಕ ಕುವೆಂಪು ಅವರ ಹುಟ್ಟೂರು ಕುಪ್ಪಳ್ಳಿಯಲ್ಲಿ ಮಂತ್ರ ಮಾಂಗಲ್ಯ ಪದ್ದತಿಯ ಪ್ರಕಾರ ವಿವಾಹವಾಗಬೇಕೆಂದು ಬಯಸಿದ್ದೆವು. ಆದರೆ ಈ ಆಸೆ ಈ ಸಮಯದಲ್ಲಿ ಕಷ್ಟ ಸಾಧ್ಯವಾಗಿದ್ದರಿಂದ ಪಾಂಡಿಚೇರಿಯಲ್ಲಿ ಸರಳವಾಗಿ ನಮ್ಮ ವಿವಾಹ ನಡೆಯಿತು ಎಂದು ತಿಳಿಸಿದ್ದಾರೆ.

    ಸುಮನಾ ಅವರ ಗೆಳೆಯ ಶ್ರೀನಿವಾಸ್ ಅವರ ಕುಟುಂಬ ಕೆಲ ವರ್ಷಗಳಿಂದ ಪಾಂಡಿಚೇರಿಯಲ್ಲಿ ನೆಲೆಸಿದೆ. ಮುಂದೆ ಕರ್ನಾಟಕದಲ್ಲಿ ನೆಲೆಸುವ ನಿರ್ಧಾರವನ್ನು ದಂಪತಿ ಮಾಡಿದ್ದಾರೆ.

    ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಿತ್ತೂರಿನಲ್ಲಿ ಜನಿಸಿದ ಇವರು ಕಳ್ಳರ ಸಂತೆ, ಸ್ಲಂ ಬಾಲ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾವನ್ನು ಸುಮನಾ ಕಿತ್ತೂರು ನಿರ್ದೇಶನ ಮಾಡಿದ್ದಾರೆ. ಕಳ್ಳರ ಸಂತೆ, ಎದೆಗಾರಿಕೆ, ಕಿರಗೂರಿನ ಗಯ್ಯಾಳಿಗಳು ಸಿನಿಮಾಗಳಿಗೆ ರಾಜ್ಯ ಪ್ರಶಸ್ತಿ ಬಂದಿದೆ.

  • ಯುವ ನಿರ್ದೇಶಕಿ ಮನೆಯಲ್ಲಿ ಶವವಾಗಿ ಪತ್ತೆ

    ಯುವ ನಿರ್ದೇಶಕಿ ಮನೆಯಲ್ಲಿ ಶವವಾಗಿ ಪತ್ತೆ

    ತಿರುವನಂತಪುರಂ: ಮಲೆಯಾಳಂನ ಯುವ ನಿರ್ದೇಶಕಿ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ.

    ನಯನಾ ಸೂರ್ಯನ್(28) ಶವವಾಗಿ ಪತ್ತೆಯಾದ ನಿರ್ದೇಶಕಿ. ನಯನಾ ಮೂಲತಃ ಕೇರಳದ ಅಲಾಪಡ್‍ನವರಾಗಿದ್ದು, ತನ್ನ ಪೋಷಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದರು. ಬಳಿಕ ತಿರುವನಂತಪುರಂನ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸಿಸುತ್ತಿದ್ದರು.

    ಸೋಮವಾರ ನಯನಾ ತಾಯಿ ಆಕೆಗೆ ಫೋನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ನಯನಾ ಫೋನ್ ಸ್ವೀಕರಿಸಲಿಲ್ಲ. ಹಾಗಾಗಿ ಅವರ ತಾಯಿ ಆಕೆಯ ಸ್ನೇಹಿತರಿಗೆ ಕರೆ ಮಾಡಿ ತನ್ನ ಮಗಳನ್ನು ಬಗ್ಗೆ ವಿಚಾರಿಸಿದ್ದಾರೆ. ಆಗ ನಯನಾ ಸ್ನೇಹಿತರು ಆಕೆಯ ಮನೆ ಬಳಿ ಹೋಗಿದ್ದಾಗ ಆಕೆ ತನ್ನ ಬೆಡ್‍ರೂಮಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

    ನಯನಾ ಕೆಲವು ದಿನಗಳ ಹಿಂದೆ ಡಯಾಬಿಟಿಸ್‍ಗೆ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಮರಣೋತ್ತರ ಪರೀಕ್ಷೆ ಬಳಿಕ ಅವರ ಸಾವಿನ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ನಯನಾ ‘ಕ್ರಾಸ್‍ವಲ್ಡ್’ ಚಿತ್ರದ ಮೂಲಕ ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಮೊದಲು ಅವರು ದಿ. ಲೇನಿನ್ ರಾಜೇಂದ್ರನ್, ಕಮಾಲ್, ಜೀತು ಜೋಸೆಫ್ ಹಾಗೂ ಡಾ. ಬಿಜು ಅವರ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂಟಿ ಹೆಣ್ಣಿನ ಅಂತರಾಳ ತೆರೆದಿಡುವ ಸಂಗಾತಿ – ಶೀತಲ್ ಶೆಟ್ಟಿ ಈಗ ನಿರ್ದೇಶಕಿ

    ಒಂಟಿ ಹೆಣ್ಣಿನ ಅಂತರಾಳ ತೆರೆದಿಡುವ ಸಂಗಾತಿ – ಶೀತಲ್ ಶೆಟ್ಟಿ ಈಗ ನಿರ್ದೇಶಕಿ

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನಿರ್ದೇಶಕಿಯೊಬ್ಬರ ಆಗಮನವಾಗಿದೆ ಮತ್ತು ಅವರ ಕಡೆಯಿಂದ ಇನ್ನೊಂದಷ್ಟು ಸಂವೇದನಾಶೀಲ ಕಥೆಗಳು ದೃಶ್ಯರೂಪ ಪಡೆಯಲಿವೆ. ಸಂಗಾತಿ ಎಂಬ ಕಿರು ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಇಂಥಾದ್ದೊಂದು ಸೂಚನೆ ಸ್ಪಷ್ಟವಾಗಿಯೇ ಸಿಕ್ಕಿದೆ. ಈ ಕಿರುಚಿತ್ರಕ್ಕೆ ಸಿಕ್ಕಿರೋ ವ್ಯಾಪಕ ಮೆಚ್ಚುಗೆಗಳು ಅದನ್ನು ಮತ್ತಷ್ಟು ಖಚಿತವಾಗಿಸಿವೆ!

    ಕಿರುಚಿತ್ರಗಳಿಗೆ ಇರುವುದು ಅತ್ಯಲ್ಪ ಕಾಲಾವಧಿ. ಅಷ್ಟರಲ್ಲಿಯೇ ಹೇಳಬೇಕಿರೋದನ್ನು ಅಚ್ಚುಕಟ್ಟಾಗಿ ಹೇಳಿ ಅದು ನೋಡಿದವರ ಮನಸಲ್ಲಿಯೇ ಮತ್ತೆ ಅರಳಿಕೊಳ್ಳುವಂತೆ ಮಾಡೋದು ಕಿರು ಚಿತ್ರಗಳ ನಿಜವಾದ ಯಶಸ್ಸು. ಈ ನಿಟ್ಟಿನಲ್ಲಿ ಶೀತಲ್ ಶೆಟ್ಟಿ ಮೊದಲ ಪ್ರಯತ್ನದಲ್ಲಿಯೇ ಗಮನ ಸೆಳೆದಿದ್ದಾರೆ.

    ಸಂಗಾತಿ ಎಂಬುದು ಒಂಟಿ ಹೆಣ್ಣೊಬ್ಬಳ ಸುತ್ತಾ ಹರಡಿಕೊಂಡಿರೋ ಕಥಾನಕ. ಡ್ರಾಮಾ ಟೀಚರ್ ಒಬ್ಬಳು ಗಂಡ ಮನೆಯನ್ನೆಲ್ಲ ತೊರೆದು, ಒಬ್ಬಂಟಿತನವನ್ನೇ ಹಚ್ಚಿಕೊಂಡು ಬದುಕೋದರ ಸುತ್ತಾ ಕಥೆ ಬಿಚ್ಚಿಕೊಳ್ಳುತ್ತೆ. ಗಂಡನೆಂಬ ನೆರಳು, ಸಂಬಂಧಗಳ ಆಸರೆ ಇಲ್ಲದೆ ಹೆಣ್ಣೊಬ್ಬಳಿಗೆ ಅಸ್ತಿತ್ವವೇ ಇಲ್ಲ ಎಂಬುದು ಈ ನೆಲದ ಪಾರಂಪರಿಕ ನಂಬಿಕೆ. ಅದರ ಪದತಲದಲ್ಲಿ ಕಾಲಾಂತರಗಳಿಂದಲೂ ಹೆಣ್ತನದ ನಿಜವಾದ ತುಮುಲಗಳು ಪತರುಗುಟ್ಟುತ್ತಿವೆ.

    ಹೆಣ್ಣಿನ ಪರಿಭಾಷೆಯಲ್ಲಿ ಸಾಂಗತ್ಯ ಅಂದರೇನು ಅಂದರೆ ಗಂಡಿನ ಡಿಕ್ಷನರಿಯಲ್ಲಿ ಬೇರೆಯದ್ದೇ ಅರ್ಥಗಳಿವೆ. ಆದರೆ ಆಕೆಯ ಕಣ್ಣಲ್ಲಿ ಸಾಂಗತ್ಯವೆಂದರೆ ಒಂದು ನಂಬಿಕೆ, ನಿಷ್ಕಾರಣ ಕಾಳಜಿ. ಅದರ ನಡುವಲ್ಲಾಕೆ ನೆಮ್ಮದಿಯಾಗಿ ಬದುಕಿ ಬಿಡುತ್ತಾಳೆ. ಈ ಸತ್ಯವನ್ನು ಒಂಟಿ ಮಹಿಳೆ ಬೀದಿ ನಾಯಿ ಮರಿಯೊಂದಕ್ಕೆ ಆರೈಕೆ ಮಾಡಿ ಅದನ್ನು ಹಚ್ಚಿಕೊಳ್ಳೋದರ ಮೂಲಕ ಶೀತಲ್ ಶೆಟ್ಟಿ ಪರಿಣಾಮಕಾರಿಯಾಗಿ ದೃಷ್ಯೀಕರಿಸಿದ್ದಾರೆ.

    ಕುತೂಹಲ ಉಳಿಸಿಕೊಳ್ಳುವ ಜಾಣ್ಮೆಯೂ ಸೇರಿದಂತೆ ಒಟ್ಟಾರೆಯಾಗಿ ಎಲ್ಲ ವಿಭಾಗಗಳಲ್ಲಿಯೂ ಈ ಕಿರು ಚಿತ್ರ ಗಮನ ಸೆಳೆಯುವಂತಿದೆ. ಈ ಮೂಲಕ ಕನ್ನಡದಲ್ಲಿ ವಿರಳ ಸಂಖ್ಯೆಯಲ್ಲಿರುವ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಶೀತಲ್ ಸೇರಿಕೊಂಡಿದ್ದಾರೆ. ಅವರ ಮುಂದಿನ ನಡೆ ಚಿತ್ರ ನಿರ್ದೇಶನದತ್ತ ಸಾಗುವ ಲಕ್ಷಣಗಳೂ ಇವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಪಾರ್ವತಮ್ಮ ರಾಜ್ ಕುಮಾರ್ 1ನೇ ವರ್ಷದ ಪುಣ್ಯ ತಿಥಿ: ಸಮಾಧಿಗೆ ಕುಟುಂಬದಿಂದ ಪೂಜೆ

    ಪಾರ್ವತಮ್ಮ ರಾಜ್ ಕುಮಾರ್ 1ನೇ ವರ್ಷದ ಪುಣ್ಯ ತಿಥಿ: ಸಮಾಧಿಗೆ ಕುಟುಂಬದಿಂದ ಪೂಜೆ

    ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಶ್ರೀಮತಿ, ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಇಂದಿಗೆ ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಗಿದೆ.

    ಒಂದನೇ ವರ್ಷದ ಪುಣ್ಯತಿಥಿಯ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಗೆ ದೊಡ್ಮನೆ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋಗೆ ಆಗಮಿಸಿ ಪಾರ್ವತಮ್ಮನವರ ಸಮಾಧಿಗೆ ಪೂಜೆ ಸಲ್ಲಿಸಿದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬ ಪೂಜೆಯಲ್ಲಿ ಭಾಗಿಯಾಗಿತ್ತು.

    ಕಂಠೀರವ ಸ್ಟುಡಿಯೋದಲ್ಲಿ ಈಗಾಗಲೇ ಪಾರ್ವತಮ್ಮ ಹಾಗೂ ಡಾ. ರಾಜ್‍ಕುಮಾರ್ ಸ್ಮಾರಕಕ್ಕೆ ಅಲಂಕಾರ ಮಾಡಲಾಗಿದೆ. ಇಂದು ಪುಣ್ಯತಿಥಿಯ ಪ್ರಯುಕ್ತ ರಕ್ತದಾನ, ಆರೋಗ್ಯ ತಪಾಸಣೆ, ಅನ್ನದಾನವನ್ನು ಆಯೋಜಿಸಲಾಗಿದ್ದು, ದೊಡ್ಮನೆಯಲ್ಲಿ ವರ್ಷದ ತಿಥಿ ಕಾರ್ಯಕ್ರಮಗಳು ನಡೆಯಿತು.

    ಅಮ್ಮನ ನೆನಪಿನಲ್ಲಿ ಶಿವಣ್ಣ ಹಾಗೂ ಪುನೀತ್ ರಾಜ್ ಕುಮಾರ್ ಇಂದು ಸಿರಿಗೇರಿ ಯರಿಸ್ವಾಮಿ ಬರೆದ ‘ದೊಡ್ಮನೆ ಅಮ್ಮ’ ಪುಸ್ತಕವನ್ನು ಬಿಡುಗಡೆ ಮಾಡಿದರು.

    ಇನ್ನೂ ಸಮಾಧಿಗೆ ರಾಜ್ ಕುಟುಂಬದವರು ಸೇರಿದಂತೆ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಹಿರಿಯ ನಟಿ ಶಾಂತಮ್ಮ, ಅನೇಕರು ಭಾಗಿಯಾಗಿದ್ದರು. ಇದೇ ವೇಳೆ ಪಾರ್ವತಮ್ಮನವರನ್ನು ನೆನೆದ ರಾಕ್ ಲೈನ್ ವೆಂಕಟೇಶ್, ನನ್ನ ಅಮ್ಮನನ್ನು ಕಳೆದುಕೊಂಡ ನಂತರ ಅಮ್ಮನ ಸ್ಥಾನ ನೀಡಿದ್ದು, ಪಾರ್ವತಮ್ಮ ಮತ್ತು ತಂದೆ ಸ್ಥಾನದಲ್ಲಿ ಡಾ.ರಾಜ್ ಕುಮಾರ್ ನಿಂತಿದ್ದರು. ಇಂದು ನಾನು ಏನು ಆಗಿದ್ದೇನೊ ಅದಕ್ಕೆ ಇವರಿಬ್ಬರು ಕಾರಣ ಎಂದು ಹೇಳಿದರು. ಪಾರ್ವತಮ್ಮನವರ ಹುಟ್ಟುಹಬ್ಬಕ್ಕೆ ಪ್ರತಿ ವರ್ಷ ಸೀರೆ ತಂದು ಕೊಡುತ್ತಿದ್ದ ಬಗ್ಗೆ ಪ್ರಶ್ನೆ ಕೇಳಿದಕ್ಕೆ ರಾಕ್ ಲೈನ್ ವೆಂಕಟೇಶ್ ಭಾವುಕರಾದರು.