Tag: ನಿರ್ದೇಶಕ

  • `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಕ, ಬರಹಗಾರ ಎಟಿ ರಘು ನಿಧನ

    `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಕ, ಬರಹಗಾರ ಎಟಿ ರಘು ನಿಧನ

    – ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ 27 ಸಿನಿಮಾಗಳ ನಿರ್ದೇಶನ

    ಬೆಂಗಳೂರು: `ಮಂಡ್ಯದ ಗಂಡು’ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಎಟಿ ರಘು (AT Raghu) ಗುರುವಾರ ರಾತ್ರಿ ನಿಧನರಾಗಿದ್ದಾರೆ.

    76 ವರ್ಷದ ರಘು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜೊತೆಗೆ ಡಯಾಲಿಸಿಸ್ ಮಾಡಿಸಿಕೊಳುತ್ತಿದ್ದರು. ಗುರುವಾರ ರಾತ್ರಿ 9:20ರ ಸುಮಾರಿಗೆ ಕೊನೆಯುಸಿರೆಳೆದಿದ್ದು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ. ಸದ್ಯ ಆರ್‌ಟಿ ನಗರದ ಮಠದಹಳ್ಳಿಯಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಇಂದು ಮದ್ಯಾಹ್ನ 2-3 ಗಂಟೆಯೊಳಗೆ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.ಇದನ್ನೂ ಓದಿ: ದಿನ ಭವಿಷ್ಯ 21-03-2025

    ಕನ್ನಡ ಚಿತ್ರರಂಗದಲ್ಲಿ ಬರಹಗಾರ ಹಾಗೂ ಖ್ಯಾತ ನಿರ್ದೇಶಕರಾಗಿದ್ದ ಇವರು, ಸಾಹಸ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದರು. `ಮಂಡ್ಯದ ಗಂಡು’ ಸಿನಿಮಾ ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇನ್ನೂ ರೆಬೆಲ್ ಸ್ಟಾರ್ ಅಂಬರೀಶ್ (Rebel Star Ambarish) ನಟನೆಯ 27 ಸಿನಿಮಾಗಳನ್ನು ನಿರ್ದೇಶಿದ್ದರು.

    ಮಂಡ್ಯದ ಗಂಡು (Mandyada Gandu) ಸಿನಿಮಾ ಸೇರಿದಂತೆ ಕನ್ನಡದ ಮಿಡಿದ ಹೃದಯಗಳು, ಜೈಲರ್ ಜಗನ್ನಾಥ್, ಬೇಟೆಗಾರ, ಧರ್ಮ ಯುದ್ಧ, ನ್ಯಾಯ ನೀತಿ ಧರ್ಮ ಇನ್ನಿತರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಹವಾಮಾನ ವರದಿ 21-03-2025

  • ‘ಹೊಸತರ’ ಮೂಲಕ ನಿರ್ದೇಶಕನಾಗಿ ಅಫ್ಜಲ್ ಎಂಟ್ರಿ

    ‘ಹೊಸತರ’ ಮೂಲಕ ನಿರ್ದೇಶಕನಾಗಿ ಅಫ್ಜಲ್ ಎಂಟ್ರಿ

    ಟನಾಗಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ, ಪತ್ರಕರ್ತನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಿರುವ ಅಫ್ಜಲ್ (Afzal), ಹೊಸತರ ಚಿತ್ರದ ಮೂಲಕ ನಿರ್ದೇಶಕನಾಗಿ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಕೂಡ ಅಫ್ಜಲ್ ಅವರೆ ಬರೆದಿದ್ದಾರೆ. ಇತ್ತೀಚಿಗೆ ಚಿತ್ರದ ಶೀರ್ಷಿಕೆ ಅನಾವರಣಾವಾಗಿದ್ದು, ‘ಹೊಸತರ’ (Hosatara) ಎಂದು ಹೆಸರಿಡಲಾಗಿದೆ.

    ಜೈವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಹೊಸತರ ಚಿತ್ರದಲ್ಲಿ ಹೊಸ ತರಹದ ಕಥೆ ಇದೆ. ಸಿನಿಮಾದಲ್ಲೊಂದು ಸಿನಿಮಾ ಇದೆ. ಲವ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಅಂಶಗಳು ಇದೆ. ಕಾಮಿಡಿ ಸ್ವಲ್ಪ ಹೆಚ್ಚಾಗಿದೆ.  ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಮೂರು ಹಾಡುಗಳು ಹಾಗೂ ಎರಡು ಸಾಹಸ ಸನ್ನಿವೇಶಗಳಿದೆ. ರಾಜು ಎಮ್ಮಿಗನೂರು ಸಂಗೀತ ನಿರ್ದೇಶನ,   ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮಾಡಲಿದ್ದಾರೆ.

    ರಾಜೀವ್ ಗನೇಸನ್ ಛಾಯಾಗ್ರಹಣ,  ಆಂಥೋನಿ ಪಯಾನೋ(ಕೆನಡಾ) ಹಿನ್ನೆಲೆ ಸಂಗೀತ ಹಾಗೂ ಬಾಬು ಶಿವಪುರ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಮೇರಿಕಾದ ಜೆ ಹೆಚ್ ಜೆ ಸ್ಟುಡಿಯೋ ವಿ ಎಫ್ ಎಕ್ಸ್ ಮಾಡಲಿದೆ.  ಹೆಸರಾಂತ ತಂತ್ರಜ್ಞರು ಈ ಚಿತ್ರದಲ್ಲಿ ಭಾಗಿಯಾಗುತ್ತಿದ್ದು, ಉತ್ತಮ ಗುಣಮಟ್ಟದಲ್ಲಿ ಚಿತ್ರ ಮೂಡಿ ಬರಲಿದೆ. ತಾರಾಬಳಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಿವುದಾಗಿ ನಿರ್ದೇಶಕ ಅಫ್ಜಲ್ ತಿಳಿಸಿದ್ದಾರೆ.

  • ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಆಯ್ಕೆ

    ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಆಯ್ಕೆ

    ಬೆಂಗಳೂರು: ಜಯದೇವ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರು ಆಯ್ಕೆಯಾಗಿದ್ದಾರೆ.

    69 ವಯಸ್ಸಾಗಿರುವ ಡಾ.ರವೀಂದ್ರನಾಥ್ ಅವರು ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿದ್ದರು. ಇದೀಗ ಇಂದು ಜಯದೇವ ಆಸ್ಪತ್ರೆ (Jayadeva Hospital) ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr C.N Manjunath) ಅವಧಿ ಮುಕ್ತಾಯ ಹಿನ್ನೆಲೆ ಅವರ ಸ್ಥಾನಕ್ಕೆ ಡಾ.ರವೀಂದ್ರನಾಥ್ (Dr Ravindranath) ಅವರನ್ನು ನೇಮಿಸಲಾಗಿದೆ.

    ಡಾ.ಸಿ.ಎನ್ ಮಂಜುನಾಥ್ (Dr CN Manjunath ಅವರ ಸೇವಾವಧಿ ಇಂದಿಗೆ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಮಂಗಳವಾರ ಜಯದೇವ ಆಸ್ಪತ್ರೆ (Jayadeva Hospital) ಸಿಬ್ಬಂದಿ ಹೃದಯಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಈ ವಿಶೇಷ ಕಾರ್ಯಕ್ರಮದಲ್ಲಿ ನೂರಾರು ಸಿಬ್ಬಂದಿ ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಆರತಿ ಬೆಳಗಿ ಗೌರವಿಸಿದ್ದರು.

    ಬೀಳ್ಕೊಡುಗೆ ಸಮಾರಂಭದಲ್ಲಿ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ್ದ ಡಾ.ಸಿ.ಎನ್‌ ಮಂಜುನಾಥ್‌, ಜಯದೇವ ಹೃದ್ರೋಗ ಆಸ್ಪತ್ರೆ ಜನರ ಆಸ್ಪತ್ರೆಯಾಗಿದೆ. ನಾವು ಪಂಚತಾರಾ ಖಾಸಗಿ ಆಸ್ಪತ್ರೆಯಂತೆ ಮಾಡುವ ಗುರಿ ಇತ್ತು. ಅದು 100 ಕ್ಕೆ100 ಆಗಿದೆ. ಇಲ್ಲಿ ಪ್ರತಿಯೋಬ್ಬರಿಗೂ ಸೇವಾ ಮನೋಭಾವ ಬೆಳಸಲಾಗಿದೆ. ಸರ್ಕಾರದ ಸಹಕಾರ, ದಾನಿಗಳ ಸಹಕಾರದಿಂದ ಇವತ್ತು ಈ ಮಟ್ಟಕ್ಕೆ ಆಸ್ಪತ್ರೆ ಬೆಳೆದಿದೆ. ನಾನು ಇಲ್ಲಿಗೆ ಬಂದಾಗ 300 ಹಾಸಿಗೆ ಇತ್ತು, ಈಗ 2,000 ಸಾವಿರ ಹಾಸಿಗೆಗಳಿವೆ. 3,500 ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. 16 ವರ್ಷಗಳಲ್ಲಿ 75 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇನೆ. 8 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ. ಇಷ್ಟು ವರ್ಷಗಳ ಸೇವೆ ಸಂತೋಷ ತಂದಿದೆ ತಮ್ಮ ನೆನಪುಗಳನ್ನ ಹಂಚಿಕೊಂಡಿದ್ದರು.

  • ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ: ಹೆಚ್‌.ಡಿ ದೇವೇಗೌಡ

    ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ: ಹೆಚ್‌.ಡಿ ದೇವೇಗೌಡ

    ಬೆಂಗಳೂರು: ಜಯದೇವ (Jayadeva Hospital) ನಿರ್ದೇಶಕ ಡಾ. ಮಂಜುನಾಥ್‌ (Dr. Manjunath) ಅವರ ಸೇವಾವಧಿ ಬುಧವಾರಕ್ಕೆ ಮುಕ್ತಾಯಗೊಳ್ಳಲಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಮಂಜುನಾಥ್‌ ಅವರ ಬಗ್ಗೆ ಮಾತನಾಡುತ್ತಾ ಇಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಹೇಳಿದ್ದಾರೆ.

    ಈ ಸಂಸ್ಥೆಗೆ ಪ್ರಥಮ ಬುನಾದಿ ಹಾಕಿದವರು ಡಾಕ್ಟರ್ ಚೆನ್ನಯ್ಯ. ಅವರಿಗೂ ಮಂಜುನಾಥ್ ಕಂಡರೆ ತುಂಬಾ ಪ್ರೀತಿ. ನೀವು ಹೊರದೇಶಕ್ಕೆ ಹೋಗಿ ಕೋಟ್ಯಂತರ ರೂಪಾಯಿ ದುಡಿಯಬಹುದು. ಆದರೆ ಇಲ್ಲಿಯ ಜನರ ಕಷ್ಟ ಕೇಳಿದಷ್ಟು ತೃಪ್ತಿ ಸಿಗುವುದಿಲ್ಲ ಎಂದರು.

    ನಾನು ಮತ್ತು ನನ್ನ ಶ್ರೀಮತಿ 15 ವರ್ಷ ಮಗಳು ಅನುಸೂಯ ಮನೆಯಲ್ಲಿಯೇ ಇದ್ದೆವು. ಅದು ನನ್ನ ಜೀವನದ ಸೌಭಾಗ್ಯ ಅಂತ ಹೇಳುತ್ತೇನೆ. ಇವತ್ತು ಹೆಮ್ಮೆ ಇದೆ ನನಗೆ, ಇಡೀ ರಾಷ್ಟ್ರದಲ್ಲಿ ಎರಡು ಸಾವಿರ ಬೆಡ್ ಆಸ್ಪತ್ರೆ ಬಹುಶಃ ಇಲ್ಲ ಅಂತ ನನ್ನ ಭಾವನೆ. ಸಚಿವ ಸುಧಾಕರ್ ಬಂದು ಇಲ್ಲಿ ಭಾಗವಹಿಸಿದ್ದು ಸಂತೋಷ. ಈ ಸಂಸ್ಥೆ ಆಗಿನ ದಿನಗಳನ್ನು ನೀವು ಸಹ ನೋಡಿದ್ದೀರಿ ಎಂದು ಹೇಳಿದರು. ಇದನ್ನೂ ಓದಿ: ಜ.31 ರಂದು ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನಿವೃತ್ತಿ – ಹೇಗಿತ್ತು 16 ವರ್ಷಗಳ ಜರ್ನಿ?

    ನನ್ನ ಮಗ ನನ್ನ ಮಗಳ ಸೌಭಾಗ್ಯ ಅಂತ ಭಾವಿಸುತ್ತೇನೆ. ಮಂಜುನಾಥ್ ಅಂತಹ ಒಬ್ಬ ಶ್ರೇಷ್ಠ ವ್ಯಕ್ತಿ ಕೈ ಹಿಡಿದಿರುವುದು ನನ್ನ ಮಗಳ ಪುಣ್ಯ. ಅಂದು ನಾನು, ಬಡವರಿಗೆ ಸಹಾಯ ಮಾಡಬೇಕು ಅಂದರೆ ಇಲ್ಲೇ ಇರಬೇಕು ಅಂತ ಹೇಳಿದ್ದೆ. ಅದನ್ನು ಮಂಜುನಾಥ್ ಪುರಸ್ಕಾರ ಮಾಡಿದರು. ನಾನು ಎಲ್ಲೂ ಹೋಗಲ್ಲ, ಇಲ್ಲೇ ಇರುತ್ತೇನೆ ಎಂದು ಮಾತು ಕೊಟ್ಟಿದ್ದರು ಎಂದು ಹೆಚ್‌ಡಿಡಿ (HD Devegowda) ತಿಳಿಸಿದರು.

    ಯಾವ ಶ್ರೀಗಳು ಬೇಕಾಗಿಲ್ಲ: ಮಂಜುನಾಥ್ ಅವರಿಗೆ ಪದ್ಮಶ್ರೀ ಅಥವಾ ಯಾವ ಶ್ರೀಗಳು ಬೇಕಾಗಿಲ್ಲ. ಅಂತಹ ಬಿರುದುಗಳಿಗಿಂತಲೂ ಜನತೆ ಪ್ರೀತಿ ದೊಡ್ಡದು ಅಂತ ಹೇಳಿದ್ರು. ಇವತ್ತು ಈ ಸಂಸ್ಥೆಯಲ್ಲಿ ಎಲ್ಲ ಸಿಬ್ಬಂದಿ ಕುಟುಂಬ ಎನ್ನುವ ರೀತಿ ನಡೆಸಿಕೊಂಡು ಬಂದಿದ್ದಾರೆ. ಯಾರೊಬ್ಬರ ಮನಸ್ಸನ್ನು ಕೂಡ ನೋಯಿಸದೆ ಇರೋದು ಎಲ್ಲಾ ನನಗೆ ಗೊತ್ತಿದೆ. ಇದಕ್ಕೆ ನನ್ನ ಮಗಳ ದೈವ ಭಕ್ತಿ ಸಹ ಕಾರಣ ಎಂದರು.

    ಇಂದು ಈ ಕಾರ್ಯಕ್ರಮ ಅದ್ಬುತವಾಗಿ ನಡೆದಿದೆ. ಇಷ್ಟು ವರ್ಷ ಕೆಲಸ ಮಾಡಿದ ಅವರು ಇನ್ನೂ ಇರಬೇಕು ಎಂಬ ನಿರೀಕ್ಷೆ ಸಹಜ. ನೀವು ಬಿಟ್ಟು ಹೋದ ಮೇಲೆ ಏನು ಎಂಬ ಬಗ್ಗೆಯೂ ಯೋಚನೆ ಮಾಡಿ ಅಂತ ಹೇಳಿದ್ದೆ. ಮುಂದೆ ಬರುವ ಹೊಸ ನಿರ್ದೇಶಕರಿಗೆ ಆ ಶಕ್ತಿ ಸಿಗಲಿ ಅಂತ ಪ್ರಾರ್ಥನೆ ಮಾಡುತ್ತೇನೆ.
    ದೇಶ-ವಿದೇಶಗಳಿಂದ ಬಂದ ಜನರಿಗೆ ಉಚಿತ ಚಿಕಿತ್ಸೆ ನೀಡಿದ್ದನ್ನು ಸ್ಮರಿಸಿಕೊಳ್ಳುತ್ತೇನೆ. ಮಂಜುನಾಥ್ ಅವರಿಗೆ ಉತ್ತಮ ಆರೋಗ್ಯ ಸಿಗಲಿ ಪ್ರಾರ್ಥನೆ ಮಾಡುತ್ತೇನೆ. ನನಗೆ ಈಗ 91 ವರ್ಷ ಇಂತಹ ಸಂದರ್ಭಕ್ಕಿಂತ ಇನ್ನೇನು ಖುಷಿ ಬೇಕು ನನಗೆ. ಇದಕ್ಕಿಂತ ಹೆಮ್ಮೆ ನನಗೆ ಏನೂ ಬೇಕಾಗಿಲ್ಲ ಎಂದು ಹೆಚ್‌ಡಿಡಿ ಹೇಳಿದರು.

  • ಕೊನೆಗೂ ಕ್ಯಾಮೆರಾ ಕಣ್ಣಿಗೆ ಸಿಕ್ಕ ‘Bigg Boss Kannada’ ಶೋ ಡೈರೆಕ್ಟರ್

    ಕೊನೆಗೂ ಕ್ಯಾಮೆರಾ ಕಣ್ಣಿಗೆ ಸಿಕ್ಕ ‘Bigg Boss Kannada’ ಶೋ ಡೈರೆಕ್ಟರ್

    ನ್ನಡದ ಬಿಗ್ ಬಾಸ್ ಶೋ (Bigg Boss Kannada) ನಿರ್ದೇಶಕರು ಈ ಬಾರಿ ಬದಲಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಶೋವನ್ನು ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಆಗಿದ್ದ ಪರಮೇಶ್ ಗುಂಡ್ಕಲ್ ಅವರೇ ನಿರ್ದೇಶನ ಮಾಡುತ್ತಿದ್ದರು. ಪ್ರೊಮೋದಿಂದ ಹಿಡಿದು, ಅಲ್ಲಿ ನಡೆಯುವ ಟಾಸ್ಕ್ ತನಕವೂ ಅವರ ನಿರ್ದೇಶನದಲ್ಲೇ (Director) ತಯಾರಾಗುತ್ತಿದ್ದವು. ಈ ಬಾರಿ ಆ ಎಲ್ಲ ಜವಾಬ್ದಾರಿಯನ್ನು ಬೇರೆಯವರು ವಯಿಸಿಕೊಂಡಿದ್ದಾರೆ.

    ಪರಮೇಶ್ ಗುಂಡ್ಕಲ್ ಅವರು ಜಿಯೋ ಸಿನಿಮಾದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸ್ಥಾನವನ್ನು ಪ್ರಶಾಂತ್ ನಾಯಕ್ ವಹಿಸಿಕೊಂಡಿದ್ದಾರೆ. ಆದರೆ, ಬಿಗ್ ಬಾಸ್ ಸೀಸನ್ 10 ಅನ್ನು ಪ್ರಕಾಶ್ (Prakash) ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಕಲರ್ಸ್ ವಾಹಿನಿಯ ಅನೇಕ ರಿಯಾಲಿಟಿ ಶೋಗಳಿಗೆ ಇವರೇ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

    ಕಲರ್ಸ್ ವಾಹಿನಿಯಲ್ಲಿ ಮೂಡಿ ಬರುತ್ತಿರುವ ರಾಜಾ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ನಿರ್ದೇಶನ ಮಾಡಿರುವ ಪ್ರಕಾಶ್, ಈ ಬಾರಿ ಬಿಗ್ ಬಾಸ್ ಶೋ ನಿರ್ದೇಶನ ಮಾಡಲು ಸರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಈವರೆಗೂ ಬಿಗ್ ಬಾಸ್ ಪ್ರೊಮೋಗಳೆಲ್ಲ ಇವರ ನಿರ್ದೇಶನದಲ್ಲೇ ಮೂಡಿ ಬಂದಿವೆ.

    ಈ ಬಾರಿಯ ಬಿಗ್ ಬಾಸ್ ಹತ್ತು ಹಲವು ಕಾರಣಗಳಿಂದಾಗಿ ವಿಶೇಷ ಅನಿಸಿದೆ. ಕಾರ್ಯಕ್ರಮವು ಹೇಗೆ ವಿಭಿನ್ನವಾಗಿ ರೂಪಿತವಾಗುತ್ತಿದೆಯೋ, ಹಾಗೆಯೇ ಬಿಗ್ ಬಾಸ್ ಮನೆ ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಲವು ವರ್ಷಗಳ ಕಾಲ ಬಿಗ್ ಬಾಸ್ ಮನೆಯನ್ನು ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಸಣ್ಣ ಮಟ್ಟದಲ್ಲಿ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವರ್ಷ ಎಲ್ಲವೂ ಬದಲಾಗಿದೆ.

     

    ಈ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ನಡೆಯುತ್ತಿಲ್ಲ. ಬದಲಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಈ ವಿಷಯದ ಕುರಿತು ಮಾತನಾಡಿ, ವಿಸ್ತೀರ್ಣದ ವಿಷಯದಲ್ಲಿ ಇದು ದೊಡ್ಡ ಮನೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಜಯ್ ದೇವರಕೊಂಡ ಚಿತ್ರದ ನಿರ್ದೇಶಕನ ಮೇಲೆ ಕಾಸ್ಟಿಂಗ್ ಕೌಚ್ ಆರೋಪ

    ವಿಜಯ್ ದೇವರಕೊಂಡ ಚಿತ್ರದ ನಿರ್ದೇಶಕನ ಮೇಲೆ ಕಾಸ್ಟಿಂಗ್ ಕೌಚ್ ಆರೋಪ

    ಕ್ಷಿಣ ಸಿನಿಮಾ ರಂಗದ ಖ್ಯಾತ ನಟ ವಿಜಯ್ ದೇವರಕೊಂಡ (Vijay Devarakonda) ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕನ (Director) ಮೇಲೆ ಗುರುತರ ಆರೋಪ ಮಾಡಿದ್ದಾರೆ ನಟಿ ಶಾಲೂ ಶಾಮು (Shalu Shamu). ತನಗಾದ ಕಹಿ ಘಟನೆಯನ್ನು ಆಕೆ ಖಾಸಗಿ ಚಾನೆಲ್ ಜೊತೆ ಹಂಚಿಕೊಂಡಿದ್ದಾರೆ. ಅದನ್ನು ನೆನಪಿಸಿಕೊಂಡರೆ ಈಗಲೂ ಮೈ ನಡುಗುತ್ತದೆ ಎಂದು ಅವರು ಹೇಳಿದ್ದಾರೆ.

    ಕಾಸ್ಟಿಂಗ್ ಕೌಚ್ (Casting Couch) ಕುರಿತಾಗಿ ಒಬ್ಬೊಬ್ಬರೇ ನಟಿಯರು ಬಾಯ್ಬಿಡುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಅವರು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಈ ಮೂಲಕ ಸಿನಿಮಾ ರಂಗದ ಮತ್ತೊಂದು ಕರಾಳ ಮುಖವನ್ನು ಅವರು ಅನಾವರಣಗೊಳಿಸುತ್ತಿದ್ದಾರೆ. ಇದೀಗ ಶಾಲೂ ಶಾಮು ಕೂಡ ತನಗಾದ ಅನುಭವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಾಯಿ ಪಲ್ಲವಿ- ಸ್ಟಾರ್‌ ನಟನ ಪುತ್ರನಿಗೆ ‘ಫಿದಾ’ ಬ್ಯೂಟಿ ನಾಯಕಿ

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಶಾಲೂ, ‘ವಿಜಯ್ ದೇವರಕೊಂಡ ಅವರ ಸಿನಿಮಾವನ್ನು ಮಾಡಿದ್ದ ನಿರ್ದೇಶಕರು ನನಗೆ ಆಹ್ವಾನ ನೀಡಿದ್ದರು. ಅಲ್ಲಿಗೆ ಹೋದ ಅದು ಅವರದ್ದೇ ಮನೆ ಅಂತ ಗೊತ್ತಾಯಿತು. ಮನೆಯಲ್ಲಿ ಯಾರೂ ಇರಲಿಲ್ಲ. ಎಲ್ಲಿಗೆ ಹೋಗಿದ್ದಾರೆ ಎಂದೆ. ವಿದೇಶಕ್ಕೆ ಹೋಗಿದ್ದಾರೆ ಎಂದು ಹೇಳಿದರು. ನಂತರ ಜ್ಯೂಸ್ ಕೊಟ್ಟರು. ಪಾತ್ರದ ಬಗ್ಗೆ ಮಾತನಾಡುವುದಕ್ಕಿಂತ ಬೇರೆಯದ್ದೇ ಮಾತನಾಡುವುದಕ್ಕೆ ಶುರು ಮಾಡಿದರು. ನನಗೆ ಗಾಬರಿ ಆಯಿತು. ನೇರವಾಗಿ ಆಮೇಲೆ ಬೆಡ್ ರೂಮ್‍ ಗೆ ಕರೆದ. ಅವನ ಉದ್ದೇಶ ಗೊತ್ತಾಗಿ ಅಲ್ಲಿಂದ ಎದ್ದು ಬಂದೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ತಾವಿದ್ದ ಸ್ಥಳಕ್ಕೆ ನಿರ್ದೇಶಕ ಕರೆದಾಗ, ಅವನು ತನ್ನ ಮನೆಗೆ ಕರೆಯುತ್ತಾನೆ ಎಂದು ಗೊತ್ತಿರಲಿಲ್ಲ. ಸೀರೆ ಧರಿಸಿಕೊಂಡು ಬರುವಂತೆ ಹೇಳಿದ್ದ. ಒಳ್ಳೆಯ ಪಾತ್ರವಿರಬಹುದು ಎಂದು ನಾನು ಅಲ್ಲಿಗೆ ಹೋಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ, ಆ ನಿರ್ದೇಶಕ ಯಾರು ಎನ್ನುವುದನ್ನು ಶಾಲೂ ಹೇಳಿಕೊಂಡಿಲ್ಲ. ಅವನ ಹೆಸರು ಬೇಡ ಎಂದು ಮಾತು ಮುಂದುವರೆಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅವಕಾಶದ ಆಸೆ ತೋರಿಸಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಹೆಸರಾಂತ ಡೈರೆಕ್ಟರ್ ಬಂಧನ

    ಅವಕಾಶದ ಆಸೆ ತೋರಿಸಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ : ಹೆಸರಾಂತ ಡೈರೆಕ್ಟರ್ ಬಂಧನ

    ನಾಯಕಿ ಆಗಬೇಕು ಎಂದು ಕನಸ್ಹೊತ್ತು ಚಿತ್ರೋದ್ಯಮಕ್ಕೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ  ಲೈಂಗಿಕ ದೌರ್ಜನ್ಯ (Sexual Assault) ಎಸೆಗಿದ್ದಾರೆ ಎನ್ನುವ ಕಾರಣಕ್ಕಾಗಿ ಮಲಯಾಳಂ (Malayalam) ಸಿನಿಮಾ ರಂಗದ ಹೆಸರಾಂತ ನಿರ್ದೇಶಕ (Director) ಜಾಸಿಕ್ ಅಲಿ (Jasik Ali) ಅನ್ನು ಕೊಯಿಲಾಂಡಿ ಪೊಲೀಸ್ ರು ಬಂಧಿಸಿದ್ದಾರೆ. ಅವಕಾಶ ಕೊಡಿಸುವುದಾಗಿ ನಂಬಿಸಿ ಜಾಸಿಕ್ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಆರೋಪಿಸಲಾಗಿದೆ.

    ಜಾಸಿಕ್ ಅಲಿ ಮೇಲೆ ಪೋಕ್ಸೋ ಆರೋಪದಡಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಅವರು ನಾಪತ್ತೆಯಾಗಿದ್ದರು. ಕೊಯಿಲಾಂಡಿ ಪೊಲೀಸ್ ಠಾಣಾಧಿಕಾರಿ ಎಂ.ಬಿ. ಬಿಜು ಮತ್ತು ಅವರ ತಂಡ ಜಾಸಿಕ್ ಬಂಧಿಸಲು ಬಲೆ ಬೀಸಿದ್ದರು. ಕೊನೆಗೂ ನಡಕ್ಕಾವುವಿನಲ್ಲಿರುವ ಮನೆಯಲ್ಲಿ ಜಾಸಿಕ್ ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

     

    ಸಂತೃಸ್ತೆ ನೀಡಿರುವ ದೂರಿನಲ್ಲಿ ಜಾಸಿಕ್ ತನಗೆ ಅವಕಾಶ ಕೊಡಿಸುವ ಆಮಿಷ ತೋರಿಸಿ, ಹಲವು ಸ್ಥಳಗಳಿಗೆ ತನ್ನನ್ನು ಕರೆದುಕೊಂಡು ಹೋಗಿದ್ದು, ಅಲ್ಲಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ ಎಂದು ಆರೋಪ ಮಾಡಿದ್ದಾಳೆ. ಬಾಲಕಿಯ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲು ಏರುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಪೊಲೀಸ್ ಅಧಿಕಾರಿ ಜಾಸಿಕ್ ನನ್ನು ಹುಡುಕಿ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತ ನಿರ್ದೇಶಕ ಸಿದ್ದಿಕಿಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಗಂಭೀರ

    ಖ್ಯಾತ ನಿರ್ದೇಶಕ ಸಿದ್ದಿಕಿಗೆ ಹೃದಯಾಘಾತ, ಆರೋಗ್ಯ ಸ್ಥಿತಿ ಗಂಭೀರ

    ಟ ವಿಜಯ ರಾಘವೇಂದ್ರ ಪತ್ನಿ, ನಿರ್ಮಾಪಕಿ ಸ್ಪಂದನಾ ಹೃದಯಾಘಾತದಿಂದ ನಿಧನ ಹೊಂದಿರುವ ಸುದ್ದಿ ಸ್ಯಾಂಡಲ್ ವುಡ್ ಗೆ ಶಾಕ್ ನೀಡಿದೆ. ಈ ರೀತಿಯ ಹೃದಯಾಘಾತಗಳು ಯಾಕೆ ಆಗುತ್ತಿವೆ ಎನ್ನುವ ಚರ್ಚೆ ಕೂಡ ನಡೆದಿದೆ. ಈ ಮಧ್ಯ ಮಲಯಾಳಂ ಸಿನಿಮಾ ರಂಗದಲ್ಲೂ ಆತಂಕ ಮನೆಮಾಡಿದೆ. ಮಲಯಾಳಂ (Malayalam) ಸಿನಿಮಾ ರಂಗದ ಖ್ಯಾತ ನಿರ್ದೇಶಕ (Director) ಸಿದ್ದಿಕಿ (Siddiqui) ಅವರಿಗೆ ತೀವ್ರ ಹೃದಯಾಘಾತವಾಗಿದ್ದು(Heart attack), ಸ್ಥಿತಿ ಚಿಂತಾಜನಕ ಎನ್ನುವ ಮಾಹಿತಿ ಹೊರ ಬಿದ್ದಿದೆ.

    ಸೋಮವಾರ ಸಂಜೆ ವೇಳೆ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್ ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಬೆಂಬಲದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. 24 ಗಂಟೆ ಅವರ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್

    ಸಿದ್ದಿಕಿ ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆಪ್ತ ಮೂಲಗಳು ದೃಢಪಡಿಸಿವೆ. ತೆಲುಗು, ಮಲಯಾಳಂ, ಹಿಂದಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಿದ್ದಿಕಿ, ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದರು.

     

    ಕಾಬುಲಿವಾಲಾ, ಗಾಡ್ ಫಾದರ್, ರಾಮ್‍ ಜಿ ರಾವ್ ಸ್ಪೀಕಿಂಗ್, ಫ್ರೆಂಡ್ಸ್, ಹಿಟ್ಲರ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಸಿದ್ದಿಕಿ ಆಕ್ಷನ್ ಕಟ್ ಹೇಳಿದ್ದಾರೆ. ಸಿದ್ದಿಕಿ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ ನಿರ್ದೇಶಕ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗುವಂತೆ ಕೇಳಿದ್ದ – ಕರಾಳ ನೆನಪು ಬಿಚ್ಚಿಟ್ಟ ಫ್ರೆಂಚ್‌ ನಟಿ

    ಆ ನಿರ್ದೇಶಕ ಸಾಮರ್ಥ್ಯ ಪರೀಕ್ಷಿಸಿಕೊಳ್ಳಲು ತನ್ನೊಂದಿಗೆ ಮಲಗುವಂತೆ ಕೇಳಿದ್ದ – ಕರಾಳ ನೆನಪು ಬಿಚ್ಚಿಟ್ಟ ಫ್ರೆಂಚ್‌ ನಟಿ

    ಪ್ಯಾರಿಸ್‌: ಫ್ರೆಂಚ್‌ ನಿರ್ದೇಶಕ (French Director) ರೆನೆ ಕ್ಲೆಮೆಂಟ್‌ ಅವರು 1964ರ ಥ್ರಿಲ್ಲರ್‌ ʻಜಾಯ್‌ ಹೌಸ್‌ʼ (Joy House) ಸಿನಿಮಾ ಚಿತ್ರೀಕರಣ ಮಾಡುವಾಗ, ನನ್ನನ್ನು ತನ್ನೊಂದಿಗೆ ಮಲಗುವಂತೆ ಕೇಳಿದ್ದ ಎಂದು ನಟಿ ಜೇನ್‌ ಫೋಂಡಾ (Jane Fonda) ಹೇಳಿದ್ದಾರೆ.

    ವಾಚ್‌ ವಾಟ್‌ ಹ್ಯಾಪನ್ಸ್‌ ನೇರ ಸಂದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ 85 ವರ್ಷದ ನಟಿ, 58 ವರ್ಷಗಳ ಹಿಂದಿನ ಕರಾಳ ನೆನಪನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ

    ಅಂದು ನಿರ್ದೇಶಕ ಕ್ಲೆಮೆಂಟ್‌ಗೆ 51 ವರ್ಷ ವಯಸ್ಸಾಗಿತ್ತು, ನನಗೆ 27 ವರ್ಷ. 1950-60 ದಶಕಗಳಲ್ಲಿ ಅತ್ಯಂತ ಪ್ರಭಾವಿ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಕೇನ್ಸ್‌ ಚಿತ್ರೋತ್ಸವದಲ್ಲಿ ಐದು ಬಹುಮಾನಗಳನ್ನೂ ಬಾಚಿಕೊಂಡಿದ್ದರು.

    ಸಂದರ್ಶನದ ವೇಳೆ ಫೋಂಡಾಗೆ ನಿಮ್ಮ ಜೀವನದಲ್ಲಿ ಬಂದ ಪ್ರಮುಖ ವ್ಯಕ್ತಿಯೊಬ್ಬನ ಬಗ್ಗೆ ಹೇಳುವಂತೆ ಕೇಳಿದಾಗ ಅವರು, ಫ್ರೆಂಚ್‌ ನಿರ್ದೇಶಕನ ಬಗ್ಗೆ ಹೇಳಿದರು. ಇದನ್ನೂ ಓದಿ: ಹಿಂದೂ ಮಹಾಸಾಗರದಲ್ಲಿ ಚೀನಾದ ದೋಣಿ ಮುಳುಗಡೆ – 39 ಜನ ನಾಪತ್ತೆ

    ಮುಂದುವರಿದು, ಕ್ಲೆಮೆಂಟ್‌ ನನ್ನೊಂದಿಗೆ ಮಲಗಲು ಬಯಸಿದ್ದ. ಏಕೆಂದರೆ ಅವನು ತನ್ನ ಉದ್ರೇಕದ ಸಾಮರ್ಥ್ಯ ತಿಳಿದುಕೊಳ್ಳಬೇಕಿತ್ತು. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಫೋಂಡಾ ಆ ಸಿನಿಮಾದಲ್ಲಿ ವಿಧವೆ ಸೊಸೆ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ʻಬುಕ್‌ ಕ್ಲಬ್‌: ದಿ ನೆಕ್ಸ್ಟ್‌ ಚಾಪ್ಟರ್‌ʼ ಚಿತ್ರದಲ್ಲಿಯೂ ಅವರು ನಟಿಸಿದ್ದಾರೆ. ಇದು 2018ರಲ್ಲಿ ಬಿಡುಗಡೆಯಾದ ಚಿತ್ರದ ಮುಂದುವರಿದ ಭಾಗವಾಗಿದೆ.

  • ವಿಧಾನಸಭೆ ಚುನಾವಣೆ 2023: ಬೈಂದೂರಿನ ಕೆರಾಡಿಯಲ್ಲಿ ನಟ ರಿಷಬ್ ಶೆಟ್ಟಿ ಮತದಾನ

    ವಿಧಾನಸಭೆ ಚುನಾವಣೆ 2023: ಬೈಂದೂರಿನ ಕೆರಾಡಿಯಲ್ಲಿ ನಟ ರಿಷಬ್ ಶೆಟ್ಟಿ ಮತದಾನ

    ಡಿವೈನ್ ಸ್ಟಾರ್, ನಟ ರಿಷಬ್ ಶೆಟ್ಟಿ (Rishabh Shetty) ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ. ಉಡುಪಿ ಜಿಲ್ಲೆ, ಬೈಂದೂರು ತಾಲೂಕಿನ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಬಂದಿದ್ದ ರಿಷಬ್ ಶೆಟ್ಟಿ ಮತದಾನ (Voting) ಮಾಡುವ ಮೂಲಕ ಮಾದರಿಯಾಗಿದ್ದಾರೆ.

    ಕಾಂತಾರ-2 ಸ್ಕ್ರಿಪ್ಟ್ ವರ್ಕ್ ನಲ್ಲಿ ಬ್ಯುಸಿಯಾಗಿರುವ ರಿಷಬ್ ಶೆಟ್ಟಿ, ಮತದಾನಕ್ಕೋಸ್ಕರ ಬಿಡುವು ಮಾಡಿಕೊಂಡು ಮನೆಗೆ ಆಗಮಿಸಿದ್ದರು. ಬೆಳಗ್ಗೆ 11 ಗಂಟೆಗೆ ಮತಗಟ್ಟೆಗೆ ಆಗಮಿಸಿದ ರಿಷಬ್ ಸಾರ್ವಜನಿಕರ ಜೊತೆ ಸರದಿ ಸಾಲಿನಲ್ಲಿ ನಿಂತರು. ಸುಮಾರು 20 ನಿಮಿಷಗಳ ಕಾಲ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು. ಮತಗಟ್ಟೆ ಸಮೀಪ ಇದ್ದ ರಿಷಬ್ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡರು.

    ಬೆಳಗ್ಗೆ 7 ಗಂಟೆಯಿಂದಲೇ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಶುರುವಾಗಿದ್ದು, ದಿನದ ಮೊದಲರ್ಧದಲ್ಲೇ ಸ್ಯಾಂಡಲ್ ವುಡ್ (Sandalwood) ನ ಬಹುತೇಕ ನಟ (Actor) -ನಟಿಯರು (Actress) ಹಾಗೂ ತಂತ್ರಜ್ಞರು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಭಿಮಾನಿಗಳಿಗೆ ಸಂದೇಶವನ್ನೂ ಸಾರಿದ್ದಾರೆ.

    ನಟ ಯಶ್ ಕತ್ರಿಗುಪ್ಪೆಯಲ್ಲಿ ಮತದಾನ ಮಾಡಿದರೆ, ಸುದೀಪ್ ಪುಟ್ಟೇನಹಳ್ಳಿ, ಶಿವರಾಜ್ ಕುಮಾರ್ ಬ್ಯಾಟರಾಯನ ಪುರ (ರಾಚೇನಹಳ್ಳಿ), ರವಿಚಂದ್ರನ್ ರಾಜಾಜಿನಗರ, ಉಪೇಂದ್ರ ಕತ್ರಿಗುಪ್ಪೆ, ಧ್ರುವ ಸರ್ಜಾ ತ್ಯಾಗರಾಜನಗರ(ಶಾಸ್ರ್ತಿ ನಗರ), ರಾಘವೇಂದ್ರ ರಾಜ್ ಕುಮಾರ್  ಸದಾಶಿವನಗರ, ಅಶ್ವಿನಿ ಪುನೀತ್ ರಾಜ್ ಕುಮಾರ್ ಸದಾಶಿವನಗರ, ರಾಧಿಕ ಪಂಡಿತ್ ದೇವಯ್ಯ ಪಾರ್ಕ್, ಸುಧಾರಾಣಿ ಮಲ್ಲೇಶ್ವರಂ, ರಕ್ಷಿತಾ ಪ್ರೇಮ್ ಚಂದ್ರ ಲೇಔಟ್ ಪ್ರೇಮ್ ಚಂದ್ರ ಲೇಔಟ್ ನಲ್ಲಿ ತಮ್ಮ ಮತದಾನ ಮಾಡಿದ್ದಾರೆ.

    ಅಮೂಲ್ಯ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ನೆನಪಿರಲಿ ಪ್ರೇಮ್ ಆರ್ ಆರ್ ನಗರ,  ರಚಿತಾ ರಾಮ್ ಆರ್ ಆರ್ ನಗರ, ಮೇಘನಾ ಸರ್ಜಾ ಜೆಪಿ ನಗರ, ತಾರಾ ಜೆ ಪಿ ನಗರ, ದ್ವಾರಕೀಶ್ ಬೊಮ್ಮನಹಳ್ಳಿ, ಸೃಜನ್ ಲೋಕೇಶ್  ಕತ್ರಿಗುಪ್ಪೆ, ಅಜಯ್ ರಾವ್ ರಾಜಾಜಿನಗರ, ಬಿ.ಸರೋಜದೇವಿ ಮಲ್ಲೇಶ್ವರಂ, ಹರ್ಷಿಕಾ ಪೂಣಚ್ಚ ಕೆ ಆರ್ ಪುರ, ಪೂಜಾ ಗಾಂಧಿ  ಕತ್ರಿಗುಪ್ಪೆ, ಯೋಗರಾಜ್ ಭಟ್ ಗಿರಿ ನಗರ, ಅನಂತ್ ನಾಗ್  ಮಲ್ಲೇಶ್ವರಂ ಮತ ಕೇಂದ್ರಗಳಲ್ಲಿ ತಮ್ಮ ಮತದಾನ ಮಾಡಿದ್ದಾರೆ.

    ಚಂದನ್ ಶೆಟ್ಟಿ ನಾಗರಭಾವಿಯಲ್ಲಿ ಮತದಾನ ಮಾಡಿದರೆ, ಕಾರುಣ್ಯ ರಾಮ್ ಆರ್ ಆರ್ ನಗರ, ಅವಿನಾಶ್  ಆರ್ ಆರ್ ನಗರ, ಜಗ್ಗೇಶ್ ಮಲ್ಲೇಶ್ವರಂ, ಶರಣ್ ಹೊಸಕೆರೆಹಳ್ಳಿ, ದುನಿಯಾ ವಿಜಯ್ ಕತ್ತಿಗುಪ್ಪೆ,  ಸಾಧು ಕೋಕಿಲ ನಾಗರಭಾವಿ, ಅರ್ಜುನ್ ಜನ್ಯ ಹೆಬ್ಬಾಳ, ಶ್ರೀಮುರುಳಿ ವಸಂತನಗರ, ವಿಜಯ್ ರಾಘವೇಂದ್ರ ಯಲಹಂಕ, ಸಪ್ತಮಿಗೌಡ ಜೆ ಪಿ ನಗರ, ರಮೇಶ್ ಅರವಿಂದ್ ಪದ್ಮನಾಭ ನಗರ, ಮಾಲಾಶ್ರೀ ಶಿವಾಜಿನಗರದಲ್ಲಿ ಮತ ಚಲಾವಣೆ ಮಾಡಿದ್ದಾರೆ.

    ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ ಆರ್ ಆರ್ ನಗರದಲ್ಲಿ ಮತದಾನ ಮಾಡಿದರೆ, ಶ್ರುತಿ ಹೊಸಕೆರೆ ಹಳ್ಳಿ,  ಭಾರತಿ ಜಯನಗರ, ಅನಿರುದ್ದ್ ಜಯನಗರ, ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಜೆ ಪಿ ನಗರ, ಪ್ರಶಾಂತ್ ನೀಲ್ ವಸಂತನಗರದಲ್ಲಿ ತಮ್ಮ ಮತದಾನದ ಹಕ್ಕುಗಳನ್ನು ಚಲಾಯಿಸಿದ್ದಾರೆ.

    ರಿಷಬ್ ಶೆಟ್ಟಿ ಕೆರಾಡಿ, ಕುಂದಾಪುರ, ರಕ್ಷಿತ್ ಶೆಟ್ಟಿ ಉಡುಪಿ, ರಾಜ್ ಬಿ ಶೆಟ್ಟಿ ಉಡುಪಿ, ನಿಖಿಲ್ ಕುಮಾರಸ್ವಾಮಿ ಕೇತಗನಹಳ್ಳಿ (ಬಿಡದಿ), ಡಾಲಿ ಧನಂಜಯ ಅರಸೀಕೆರೆ, ಅಶಿಕಾ ರಂಗನಾಥ್ ತುಮಕೂರು, ಚಿಕ್ಕಣ್ಣ ಮೈಸೂರು, ಲೀಲಾವತಿ ಸೋಲದೇವನಹಳ್ಳಿ, ವಿನೋದ್ ರಾಜ್ ಸೋಲದೇವನ ಹಳ್ಳಿ, ದೊಡ್ಡಣ್ಣ ಬಿದರುಕಲ್ಲು ಮತದಾನ ಮಾಡಿದ್ದಾರೆ.