Tag: ನಿರ್ಜಲೀಕರಣ

  • ಹಾಸನ: ನಿತ್ರಾಣಗೊಂಡು ಕುಸಿದು ಬಿತ್ತು ಹೆಣ್ಣಾನೆ

    ಹಾಸನ: ನಿತ್ರಾಣಗೊಂಡು ಕುಸಿದು ಬಿತ್ತು ಹೆಣ್ಣಾನೆ

    ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಗರವಳ್ಳಿ ಗ್ರಾಮದ ಬಳಿ ಹೆಣ್ಣಾನೆಯೊಂದು ನಿತ್ರಾಣಗೊಂಡು ಕುಸಿದು ಬಿದ್ದಿದೆ.

    ಕೂಗರವಳ್ಳಿತ ಗ್ರಾಮದ ಕೆರೆಯ ಬಳಿ ರಾತ್ರಿಯಿಂದ ಇಂದು ಮಧ್ಯಾಹ್ನದವರೆಗೂ ಆನೆ ಸ್ಥಳದಿಂದ ಮೇಲಕ್ಕೆ ಏಳಲೇ ಇಲ್ಲ. ಆಹಾರ ಮತ್ತು ನೀರಿನ ಕೊರತೆಯಿಂದಾಗಿ ಆನೆ ನಿತ್ರಾಣಗೊಂಡು ಬಿದ್ದಿರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಇಂದು ಬೆಳಗ್ಗೆಯೇ ಗ್ರಾಮಸ್ಥರು ಈ ವಿಚಾರವನ್ನು ಅರಣ್ಯ ಇಲಾಖೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಮಧ್ಯಾಹ್ನ ಸ್ಥಳಕ್ಕೆ ಬಂದಿದ್ದಾರೆ. ಆನೆ ಕೆಲವು ದಿನಗಳ ಹಿಂದೆ ಮರಿಯೊಂದಕ್ಕೆ ಜನ್ಮ ನೀಡಿದ್ದು, ನೀರು ಕುಡಿಯಲು ಬಂದಾಗ ನಿರ್ಜಲೀಕರಣದಿಂದಾಗಿ ಬಿದ್ದಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    ಆನೆ ಬಿದ್ದ ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕಾಗಮಿಸಿ, ಆನೆಯನ್ನು ಊಳಿಸಿಕೊಡಿ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ವಾರ ಕೆರೆಯ ಏರಿಯ ಮೇಲೆ ಆನೆಯೊಂದು ಗಾಯಗೊಂಡಿತ್ತು ಎಂದು ಗ್ರಾಮಸ್ಥರು ಹೇಳುತ್ತಾರೆ.

    https://youtu.be/eIMgM532UzI

     

  • ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಕಲಬುರಗಿ: ಬಿಸಿಲಿನ ತಾಪಕ್ಕೆ ಕಲಬುರಗಿ ದೇಶದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ. ಕೇಂದ್ರ ಹವಾಮಾನ ಇಲಾಖೆಯ ಈ ಮಾಹಿತಿ ಪ್ರಕಾರ ಮಹಾರಾಷ್ಟ್ರ ನಂಬರ್ ಒನ್ ಜಾಗದಲ್ಲಿದೆ. ಹೀಗಾಗಿ 42 ಡಿಗ್ರಿ ಉಷ್ಣಾಂಶದಲ್ಲಿ ಕೆಲಸ ಮಾಡೋ ಪೊಲೀಸರಿಗೆ ಸರ್ಕಾರ ಕೂಲ್ ಡೌನ್ ಅಂತ ಧೈರ್ಯ ಹೇಳ್ತಿದೆ.

    ಹೌದು. ಬಿಸಿಲೂರು ಎಂದೇ ಪ್ರಸಿದ್ಧಿಯಾಗಿರೋ ಕಲಬುರಗಿ ಇದೀಗ ಪಕ್ಕಾ ಸನ್ ಸಿಟಿಯಾಗಿದೆ. ಕಾರಣ 42 ಡಿಗ್ರಿಗೂ ಅಧಿಕ ತಲುಪಿರೋ ಉಷ್ಣಾಂಶ. ಇಂತಹ ಬಿಸಿಲಿಗೆ ಹೈರಾಣಾಗದಿರಲಿ ಅಂತ ಪೊಲೀಸ್ ಇಲಾಖೆ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸೋ ಸಿಬ್ಬಂದಿಗೆ ತಂಪು ಕನ್ನಡಕ ನೀಡ್ತಿದೆ. ಖುದ್ದು ಎಸ್ಪಿ ಶಶಿಕುಮಾರ್ ತಮ್ಮ ಸಿಬ್ಬಂದಿಗೆ ಮಜ್ಜಿಗೆ ನೀಡಿ ಸಂತೈಸಿದ್ದಾರೆ.

    ಎಲ್ಲೆಲ್ಲಿ ಎಷ್ಟು ಉಷ್ಣಾಂಶ ಇದೆ?: 

    ಮಹಾರಾಷ್ಟ್ರ ಚಂದ್ರಾಪುರ- 44.2 ಡಿಗ್ರಿ ಸೆಲ್ಸಿಯಸ್.
    ಮಹಾರಾಷ್ಟ್ರ ಬ್ರಹ್ಮಪುರಿ- 43..3 ಡಿಗ್ರಿ ಸೆಲ್ಸಿಯಸ್
    ಓರಿಸ್ಸಾ ಜರ್ಸುಗುಡಾ- 42.8 ಡಿಗ್ರಿ ಸೆಲ್ಸಿಯಸ್

    ಕರ್ನಾಟಕ…ಕಲಬುರಗಿ- 42.1 ಡಿಗ್ರಿ ಸೆಲ್ಸಿಯಸ್

    ಇಂತಹ ಸುಡುಬಿಸಿಲಿಗೆ ದೇಹ ದಣಿಯುತ್ತೆ ಮಾತ್ರವಲ್ಲ ಬಾಡಿ ಡಿಹೈಡ್ರೇಷನ್ ಆಗುತ್ತೆ. ಆದ್ದರಿಂದ ಎಳೆನೀರು, ಮಜ್ಜಿಗೆ ನೀಡ್ತಿರೋ ಜಿಲ್ಲಾಡಳಿತದ ಕ್ರಮಕ್ಕೆ ಪೇದೆಗಳು ಫುಲ್ ಖುಷ್ ಆಗಿದ್ದಾರೆ. ಇದಿಷ್ಟು ಏಪ್ರಿಲ್ ಬಿಸಿಲಾದ್ರೆ ಇನ್ನೂ ಮೇ ತಿಂಗಳಲ್ಲಿ ನೆಲ ಅದೆಷ್ಟು ಗರಂ ಆಗುತ್ತೋ ಅನ್ನೋ ಲೆಕ್ಕದಲ್ಲಿದ್ದಾರೆ ಜನ. ಹೀಗಾಗಿ ಜನ ಮಟಮಟ ಮಧ್ಯಾಹ್ನ ಹೊರಗೆ ಬರೋದೆ ದುಸ್ತರವಾಗೋ ಸಾಧ್ಯತೆ ಇದೆ.