Tag: ನಿರೂಪಕಿ

  • ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?

    ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?

    ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀಗೆ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಮದುವೆಯಾಗಲೂ ಇದೀಗ ಮನಸ್ಸು ಮಾಡಿದ್ದಾರೆ. ಹಾಗಂತ ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ.

    ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಅನುಶ್ರೀ, ತಮ್ಮ ವಿಭಿನ್ನ ನಿರೂಪಣೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮನೆಮಾತಾಗಿದ್ದಾರೆ. ಚಿತ್ರರಂಗದ ಕಾರ್ಯಕ್ರಮಗಳ ಜೊತೆಗೆ ಟಿವಿ ಶೋ ಮುಖಾಂತರ ಅನುಶ್ರೀ, ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಮತ್ತೆ ನಟಿ ಕಮ್ ನಿರೂಪಕಿ ಅನುಶ್ರೀ ಸುದ್ದಿಯಲ್ಲಿದ್ದಾರೆ. ಈ ಬಾರಿ ಮದುವೆಯ ವಿಚಾರದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ಮಾಲ್ಡೀವ್ಸ್ ಪ್ರವಾಸದಲ್ಲಿ `ಲವ್ ಮಾಕ್ಟೈಲ್’ ಜೋಡಿ

    ಅನುಶ್ರೀ ಅವರಿಗೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಮದುವೆ ಆಗುವುದಕ್ಕೆ ಆಸೆಯಾಗುತ್ತಿದೆ ಅಂತೆ ಹಾಗಂತ ಸ್ವತಃ ತಮ್ಮ ಮನದಾಳದ ಮಾತನ್ನ ಖಾಸಗಿ ಶೋವೊಂದರಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿವೊಂದರಲ್ಲಿ ಜೋಡಿಗಳ ರಿಯಾಲಿಟಿ ಶೋ ನಡೆಯುತ್ತಿದ್ದು, ಆ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ಶೋನಲ್ಲಿ ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತದೆ ಅಂತಾ ಅನುಶ್ರೀ ಮುಕ್ತವಾಗಿ ಹಂಚಿಕೊಂಡಿದ್ದಾರೆ.

    ಹಸೆಮಣೆ ಏರೋದಕ್ಕೆ ಮನಸ್ಸು ಮಾಡಿರುವ ಈ ನಟಿಗೆ ಈಗಾಗಲೇ ಹುಡುಗ ಸಿಕ್ಕಿದ್ದಾನ, ಇಲ್ವಾ ಹಾಗೇ ಮಾತಿಗೆ ಹೇಳಿರೋದಾ ಅಂತಾ ಕಾದುನೋಡಬೇಕಿದೆ. ಒಟ್ನಲ್ಲಿ ನಿರೂಪಕಿ ಅನುಶ್ರೀ ಅವರು ಮದುವೆಯತ್ತ ಮನಸ್ಸು ಮಾಡಿರೋದಕ್ಕೆ ಪಡ್ಡೆಹುಡುಗರು ಖುಷಿಯಾಗಿದ್ದಾರೆ. ಸದ್ಯದಲ್ಲೇ ಅಭಿಮಾನಿಗಳಿಗೆ ಅನುಶ್ರೀ ಗುಡ್ ನ್ಯೂಸ್ ಕೊಡತ್ತಾರಾ ಅಂತಾ ಕಾದುನೋಡಬೇಕಿದೆ.

  • ಸದ್ದಿಲ್ಲದೇ ಹಸೆಮಣೆ ಏರಿದ ನಿರೂಪಕಿ ಸಿರಿ ರವಿಕುಮಾರ್

    ಸದ್ದಿಲ್ಲದೇ ಹಸೆಮಣೆ ಏರಿದ ನಿರೂಪಕಿ ಸಿರಿ ರವಿಕುಮಾರ್

    ಸ್ಯಾಂಡಲ್‌ವುಡ್ ನಟಿ ಕಮ್ ನಿರೂಪಕಿ ಸಿರಿ ರವಿಕುಮಾರ್ ಮದುವೆ ವಿಚಾರ ಇದೀಗ ಬಹಿರಂಗವಾಗಿದೆ. ಇತ್ತೀಚೆಗಷ್ಟೇ ಹಸೆಮಣೆ ಏರಿದ್ದಾರೆ.ಇದೀಗ ಆರ್‌ಜೆ ಸಿರಿ ಅವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಆಗಿದೆ.

    ಆರ್‌ಜೆ, ನಿರೂಪಕಿ, ನಟಿಯಾಗಿ ಗುರುತಿಸಿಕೊಂಡಿರುವ ಸಿರಿ ರವಿಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಹರ್ಷಿ ಎಂಬುವವರ ಜತೆ ಹಸೆಮಣೆ ಏರಿದ್ದಾರೆ. ಆದರೆ ತನ್ನ ಮದುವೆಯ ವಿಚಾರ ಎಲ್ಲಿಯೂ ನಟಿ ಸಿರಿ ಬಹಿರಂಗ ಪಡಿಸಿರಲಿಲ್ಲ. ಈಗ ಸಿರಿ ಮತ್ತು ಮಹರ್ಷಿ ಅವರ ಮದುವೆ ಸುಂದರ ಕ್ಷಣಗಳ ಫೋಟೋಗಳು ವೈರಲ್ ಆಗಿದೆ.

    ಬೆಂಗಳೂರಿನ ಬನಶಂಕರಿಯ ನಿವಾಸಿಯಾಗಿರುವ ಸಿರಿ, ರವಿಕುಮಾರ್ ಎಂಬುವವರ ಕೈಹಿಡಿದಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷದ ಕೊನೆಯಲ್ಲಿ ಹಸೆಮಣೆ ಏರಿದ್ದಾರೆ. ಇನ್ನು ಕಿರುತೆರೆಯಲ್ಲೂ ಖ್ಯಾತಿ ಗಳಿಸಿರುವ ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಈ ಶೋ ಸಿರಿ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿಯನ್ನ ತಂದುಕೊಟ್ಟಿತ್ತು. ಇದನ್ನೂ ಓದಿ: ಬೆಂಗಳೂರು ರಸ್ತೆಗೆ ಪುನೀತ್ ರಾಜ್‌ಕುಮಾರ್ ನಾಮಫಲಕ ಅಳವಡಿಕೆ

    ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ `ಸಕುಟುಂಬ ಸಮೇತ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದರು. ಖಾಸಗಿ ಜೀವನಕ್ಕೂ ಸಮಯ ಕೊಡತ್ತಾ ಸಿನಿಮಾದತ್ತ ಬ್ಯುಸಿಯಾಗಿದ್ದಾರೆ.

  • ಗಂಡು ಮಗುವಿನ ತಾಯಿಯಾದ ಕಾಮಿಡಿ ಕ್ವೀನ್ ಭಾರತಿ

    ಗಂಡು ಮಗುವಿನ ತಾಯಿಯಾದ ಕಾಮಿಡಿ ಕ್ವೀನ್ ಭಾರತಿ

    ಕಾಮಿಡಿಯನ್, ನಿರೂಪಕಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿರುವ ಕಾಮಿಡಿ ಕ್ವೀನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಭಾರತಿ ಸಿಂಗ್ ಗಂಡು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಪತಿ ಹರ್ಷ ಲಿಂಬಾಚಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಇಟ್ಸ್ ಎ ಬಾಯ್ (ಇದು ಗಂಡು ಮಗು) ಎಂದು ಬರೆದಿರುವ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೂ ಸರ್ಪೈಸ್ ನೀಡಿದ್ದಾರೆ. ಇದನ್ನೂ ಓದಿ: ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ಯಾಗಿ ಅಗ್ನಿಸಾಕ್ಷಿ ವೈಷ್ಣವಿ ಮೋಡಿ

    ಇತ್ತೀಚೆಗೆ ಭಾರತಿ ಸಿಂಗ್ ತಮ್ಮ ಗರ್ಭಾವಸ್ಥೆ ಕ್ಷಣಗಳ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದರು. ಆನೆ ವಾಲೇ ಬೇಬಿ ಕಿ ಮಮ್ಮಿ(ಬರಲಿರುವ ಮಗುವಿನ ತಾಯಿ) ಎಂಬ ಮಜವಾದ ಶೀರ್ಷಿಕೆ ನೀಡಿದ ಪೋಸ್ಟ್ ಅನ್ನು ಅಭಿಮಾನಿಗಳು ಅತಿಯಾಗಿ ಮೆಚ್ಚಿಕೊಂಡಿದ್ದರು. ಇದನ್ನೂ ಓದಿ: ಜಾನ್ ಅಬ್ರಾಹಾಂ ಹೊಸ ಚಿತ್ರದಲ್ಲಿ ಬಿಟೌನ್ ಕಿಲಾಡಿ

    ಜನಪ್ರಿಯ ಶೋಗಳನ್ನು ನಿರೂಪಣೆ ಮಾಡುವ ಭಾರತಿ ತುಂಬು ಗರ್ಭಿಣಿಯಾಗಿದ್ದಾಗಲೂ ಹೆರಿಗೆ ವರೆಗೂ ಆ್ಯಕ್ಟಿವ್ ಆಗಿರಲು ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ ಎಂದು ತಿಳಿಸಿದ್ದರು.

  • ಟ್ರಕ್ ಟ್ರೇಲರ್‌ಗೆ ಡಿಕ್ಕಿ ಹೊಡೆದ ಬೈಕ್ – ನಿರೂಪಕಿ ಸೇರಿದಂತೆ ಮೂವರ ದುರ್ಮರಣ

    ಟ್ರಕ್ ಟ್ರೇಲರ್‌ಗೆ ಡಿಕ್ಕಿ ಹೊಡೆದ ಬೈಕ್ – ನಿರೂಪಕಿ ಸೇರಿದಂತೆ ಮೂವರ ದುರ್ಮರಣ

    – ಹೆದ್ದಾರಿಯಲ್ಲಿ ತ್ರಿಬಲ್ ರೈಡಿಂಗ್ ಹೊರಟಿದ್ರು

    ಜೈಪುರ: ಟ್ರಕ್ ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ನಿರೂಪಕಿ ಸೇರಿದಂತೆ ಮೂವರು ಸಾವನ್ನಪ್ಪಿರೋ ಘಟನೆ ರಾಜಸ್ಥಾನದ ಚಿತ್ತೋಡಗಢ ಜಿಲ್ಲೆಯ ಗಂಗಾನಗರದ ಬಳಿ ನಡೆದಿದೆ.

    ವೀರೇಂದ್ರ, ಆಶೀಷ್ ಮತ್ತು ಶಹಜಾದ್ ಉರ್ಫ್ ಖುಷ್ಬೂ ಮೃತರು. ಶಹಜಾದ್ ಖಾಸಗಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿಕೊಂಡಿದ್ರೆ, ಬೈಕ್ ಸವಾರ ವೀರೇಂದ್ರ ಡಿಜೆ ಸೌಂಡಿಂಗ್ ಮಾಡಿಕೊಂಡಿದ್ದನು. ಇನ್ನೋರ್ವ ವೀರೇಂದ್ರ ಗೆಳೆಯನಾಗಿದ್ದು ಮೂವರು ಚಿತ್ತೋಡಗಢಗೆ ತೆರಳುತ್ತಿದ್ದರು.

    ಗಂಗಾನಗರದ ಚತುಷ್ಪತ ಹೆದ್ದಾರಿಯಲ್ಲಿ ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೀರೇಂದ್ರ ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಶಹಜಾದ್ ಮತ್ತು ಆಶೀಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೂವರು ಬಿಲ್ವಾಡದ ನಿವಾಸಿಗಳಾಗಿದ್ದು, 22 ರಿಂದ 25 ವರ್ಷದೊಳಗಿನವರು ಎಂದು ವರದಿಯಾಗಿದೆ.

    ಅಪಘಾತದ ಬಳಿಕ ಮೂರು ಮೃತದೇಹಗಳ ಬೇರೆ ಬೇರೆ ಆಸ್ಪತ್ರೆಗಳಲ್ಲಿರಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಅಪಘಾತದ ಬಳಿಕ ಟ್ರೇಲರ್ ಚಾಲಕ ಪರಾರಿಯಾಗಿದ್ದಾನೆ.

  • ಮಂಗ್ಳೂರು ಸಿಸಿಬಿ ಇನ್ಸ್‌ಪೆಕ್ಟರ್ ವರ್ಗಾವಣೆಗೆ ತಡೆ

    ಮಂಗ್ಳೂರು ಸಿಸಿಬಿ ಇನ್ಸ್‌ಪೆಕ್ಟರ್ ವರ್ಗಾವಣೆಗೆ ತಡೆ

    ಮಂಗಳೂರು: ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ದಿಢೀರ್ ವರ್ಗಾವಣೆ ಮಾಡಿದ್ದರು. ಅಲ್ಲದೆ ಅವರ ಜಾಗಕ್ಕೆ ಉಡುಪಿಯ ಕಾಪು ಠಾಣೆಯ ಸಿಐ ಆಗಿದ್ದ ಮಹೇಶ್ ಪ್ರಸಾದ್ ನೇಮಕ ಮಾಡಲಾಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಇಲಾಖೆ ಸಿಸಿಬಿ ಇನ್ಸ್‌ಪೆಕ್ಟರ್ ವರ್ಗಾವಣೆಯನ್ನು ತಡೆ ಹಿಡಿದಿದೆ.

    ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಡ್ರಗ್ಸ್ ಪ್ರಕರಣ ಸಂಬಂಧ ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದರು. ಈ ವೇಳೆ ಕಿಶೋರ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಶಾಸಕರು ಒತ್ತಡ ಹಾಕಿದ್ದರು ಎನ್ನಲಾಗಿತ್ತು. ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ ಬಿಡುವಂತೆ ಒತ್ತಾಯ ಹೇರಿದ್ದರು. ಆದರೆ ಶಾಸಕನ ಒತ್ತಾಯಕ್ಕೆ ಶಿವಪ್ರಕಾಶ್ ಮಣಿದಿರಲಿಲ್ಲ. ಹೀಗಾಗಿ ಇದೀಗ ಶಿವಪ್ರಕಾಶ್ ನೇತೃತ್ವದಲ್ಲೇ ನಡೆಯುತ್ತಿದ್ದ ಕಂಪ್ಲೀಟ್ ಡ್ರಗ್ಸ್ ಪ್ರಕರಣ ತನಿಖಾ ಉತ್ತುಂಗದಲ್ಲಿದ್ದಾಗ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಇನ್ಸ್ ಪೆಕ್ಟರ್ ವರ್ಗಾವಣೆ ಹಿಂದೆ ಬೇರೆನೇ ಕಾರಣ ಇದೆ. ಈಗ ಪ್ರಚಾರವಾಗುತ್ತಿರುವ ವಿಷಯ ಸತ್ಯಕ್ಕೆ ದೂರ. ಬಹಳ ವಿಚಾರ ನಮಗೇನೇ ಗೊತ್ತಾಗಲ್ಲ. ಮಾಧ್ಯಮಗಳಲ್ಲಿ ಬಂದ ವಿಚಾರವನ್ನು ನಾವೇ ತನಿಖೆ ಮಾಡಬೇಕಾಗುತ್ತದೆ. ಯಾವ ಅಧಿಕಾರಿಗಳ ಮೇಲೂ ಒತ್ತಡ ಹೇರಲಾಗಿಲ್ಲ ಎಂದು ಹೇಳಿದ್ದಾರೆ.

    ಅಲ್ಲದೇ ಪ್ರಕರಣದಲ್ಲಿ ಚೈನ್ ಲಿಂಕ್ ದೊಡ್ಡದಿದೆ. ಈ ಚೈನ್ ಲಿಂಕ್ ಎಲ್ಲಿ ಕೊನೆಯಾಗುತ್ತೋ ಅಲ್ಲಿ ತನಕ ವಿಚಾರಣೆ ಮಾಡುತ್ತೇವೆ. ಡ್ರಗ್ಸ್ ಪ್ರಕರಣದಲ್ಲಿ ಒಟ್ಟು 6 ಮಂದಿ ಆರೋಪಿಗಳ ಬಂಧನವಾಗಿದೆ. ಪ್ರಕರಣದ ಬಗ್ಗೆ ಪ್ರತಿನಿತ್ಯ ತನಿಖೆ ಮಾಡಲಾಗುತ್ತಿದೆ. ಮಾಹಿತಿ ಬೇಕಾದಲ್ಲಿ ನೋಟಿಸ್ ಮಾಡುತ್ತೇವೆ. ನೋಟಿಸ್ ಕೊಟ್ಟು ಪ್ರಕರಣದ ವಿಚಾರಣೆಯನ್ನು ಮಾಡುತ್ತೇವೆ ಎಂದು ಹೇಳಿದರು.

  • ಅನುಶ್ರೀ ವಿಚಾರಣೆ ನಡೆಸಿದ್ದ ಇನ್ಸ್‌ಪೆಕ್ಟರ್ ವರ್ಗಾವಣೆ – ಸ್ಥಳೀಯ ಶಾಸಕರ ಪ್ರಭಾವದ ಶಂಕೆ

    ಅನುಶ್ರೀ ವಿಚಾರಣೆ ನಡೆಸಿದ್ದ ಇನ್ಸ್‌ಪೆಕ್ಟರ್ ವರ್ಗಾವಣೆ – ಸ್ಥಳೀಯ ಶಾಸಕರ ಪ್ರಭಾವದ ಶಂಕೆ

    – ದೆಹಲಿಯಿಂದ್ಲೂ ಪೊಲೀಸರಿಗೆ ಒತ್ತಡ
    – 6 ಸಿಮ್ ಬಳಸ್ತಿದ್ದ ನಿರೂಪಕಿ

    ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ, ನಟಿ ಅನುಶ್ರೀ ಅವರನ್ನು ವಿಚಾರಣೆ ನಡೆಸಿದ್ದ ಇನ್ಸ್ ಪೆಕ್ಟರ್ ಅವರನ್ನು ಏಕಾಏಕಿ ವರ್ಗಾವಣೆ ಮಾಡಲಾಗಿದ್ದು, ಇದರ ಹಿಂದೆ ಸ್ಥಳೀಯ ಶಾಸಕರೊಬ್ಬರ ಕೈವಾಡವಿದೆ ಎಂಬ ಮಾಹಿತಿ ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹೌದು. ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ಮಂಗಳೂರು ಸಿಸಿಬಿ ಪೊಲೀಸರು ವರ್ಗಾವಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರು ಮೊದಲು ಡಾನ್ಸರ್ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದರು. ಈ ವೇಳೆ ಕಿಶೋರ್ ಶೆಟ್ಟಿಯನ್ನು ಬಿಡುಗಡೆ ಮಾಡುವಂತೆ ಶಾಸಕರು ಒತ್ತಡ ಹಾಕಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಮಂಡ್ಯದ ನಿಮಿಷಾಂಬ ದೇಗುಲಕ್ಕೆ ಅನುಶ್ರೀ ಭೇಟಿ – ವಿಶೇಷ ಪೂಜೆ ಸಲ್ಲಿಕೆ

    ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈ ಬಿಡುವಂತೆ ಒತ್ತಾಯ ಹೇರಿದ್ದರು. ಆದರೆ ಶಾಸಕನ ಒತ್ತಾಯಕ್ಕೆ ಶಿವಪ್ರಕಾಶ್ ಮಣಿದಿರಲಿಲ್ಲ. ಹೀಗಾಗಿ ಇದೀಗ ಶಿವಪ್ರಕಾಶ್ ನೇತೃತ್ವದಲ್ಲೇ ನಡೆಯುತ್ತಿದ್ದ ಕಂಪ್ಲೀಟ್ ಡ್ರಗ್ಸ್ ಪ್ರಕರಣ ತನಿಖಾ ಉತ್ತುಂಗದಲ್ಲಿದ್ದಾಗ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

    ಇಷ್ಟು ಮಾತ್ರವಲ್ಲದೆ ಅನುಶ್ರೀ ಬಚಾವ್ ಮಾಡಲು ದೆಹಲಿಯಿಂದಲೂ ಪ್ರಭಾವ ಬೀರಲಾಗುತ್ತಿದೆ. ದೆಹಲಿಯಲ್ಲಿರುವ ಪ್ರಭಾವಿ ನಾಯಕರು ಕೂಡ ಪ್ರಕರಣದಿಂದ ಅನುಶ್ರೀಯನ್ನು ಕೈಬಿಡುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ

    ಅನುಶ್ರೀ ದೂರವಾಣಿ ಕರೆಗಳ ಸಾಕ್ಷ್ಯ ಕೆದಕಿರುವ ಸಿಸಿಬಿಗೆ ಅಚ್ಚರಿಯಾಗಿದೆ. 6 ಸಿಮ್ ಬಳಸ್ತಿದ್ದ ಅನುಶ್ರೀ, ಸಿಸಿಬಿ ನೋಟಿಸ್ ಬೆನ್ನಲ್ಲೇ ನಾಲ್ವರು ಪ್ರಭಾವಿಗಳಿಗೆ ಫೋನ್ ಮಾಡಿದ್ದಾರೆ. ಮಾಜಿ ಸಿಎಂ, ಮಾಜಿ ಸಿಎಂ ಮಗ ಹಾಗೂ ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಗೂ ಕರೆ ಮಾಡಿದ್ದರು. 3 ಪಕ್ಷಗಳ ಮೂವರು ನಾಯಕರಿಗೆ ಕಾಲ್ ಮಾಡಿದ್ದರು ಎಂದು ದೂರವಾಣಿ ಕರೆ ದಾಖಲೆ ಪರಿಶೀಲನೆ ವೇಳೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

  • ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ

    ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ

    – ನನ್ನ ಅಪರಾಧಿಯಾಗಿ ಬಿಂಬಿಸಿದ್ದು ನೋವಾಗಿದೆ
    – 1 ವಾರದಿಂದ ನೆಮ್ಮದಿ ಹಾಳಾಗಿದೆ

    ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ನಿರೂಪಕಿ, ನಟಿ ಅನುಶ್ರೀ ಇಂದು ಕಣ್ಣೀರು ಹಾಕಿದ್ದಾರೆ.

    ಈ ಸಂಬಂಧ ವೀಡಿಯೋ ಮಾಡಿರುವ ಅವರು, ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಗಳಗಳನೇ ಕಣ್ಣೀರಿಟ್ಟಿದ್ದಾರೆ.

    ವೀಡಿಯೋದಲ್ಲಿ ಹೇಳಿದ್ದೇನು?
    20020ರ ಸೆಪ್ಟೆಂಬರ್ 24 ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ಮತ್ತೆ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡದಿರುವಂತಹ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಾಗ, ಆ ದಿನ ಭವಿಷ್ಯದಲ್ಲಿ ಮುಳ್ಳಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನೋಟಿಸ್ ಬಂದಿರುವುದು ನನಗೆ ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ನೋವು ತುಂಬಾ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನೀವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದಾರೆ.

    ಇದನ್ನು ಮೀರಿ ಕೂಡ ಸುತ್ತಮುತ್ತ ಕೆಲವೊಂದಷ್ಟು ಅಭಿಪ್ರಾಯಗಳು, ವಿಚಾರಗಳು, ಅಂತೆಕಂತೆಗಳು ಇದು ನಮ್ಮ ನೆಮ್ಮದಿನ ತುಂಬಾನೇ ಹಾಳು ಮಾಡುತ್ತಿದೆ. ದಯಮಾಡಿ ಇಂತಹ ವಿಚಾರಗಳನ್ನು ಹರಿದಾಡಿಸುವ ಮುನ್ನ ಒಂದು ಬಾರಿ ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ನಾನಿಷ್ಟೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ಇಷ್ಟೊಂದು ಕಷ್ಟದ ದಿನಗಳಲ್ಲಿ ನನಗೆ ನೆರಳಾಗಿ ನಿಂತಿರುವ ನನ್ನ ಕುಟುಂಬ, ನನ್ನ ತಂಡ, ಸ್ನೇಹಿತರು ಎಲ್ಲರಿಗೂ ಧನ್ಯವಾದಗಳು. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನನ್ನು ಬೆಂಬಲಿಸುತ್ತಿರೋ ಮಾಧ್ಯಮಮಿತ್ರರಿಗೂ ಧನ್ಯವಾದ. ಕನ್ನಡಿಗರು ಕೊಟ್ಟ ಈ ಹೆಸರಿಗೆ ಯಾವುದೇ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳುತ್ತಾ ಅನುಶ್ರೀ ಗದ್ಗದಿತರಾಗಿದ್ದಾರೆ.

    ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗೇ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲುಪಾಲಾಗಿದ್ದಾರೆ. ಈ ಮಧ್ಯೆ ಮಂಗೂರಿನಲ್ಲಿ ಡ್ಯಾನ್ಸರ್ ಕಿಶೋರ್ ಹಾಗೂ ತರುಣ್, ನೌಶೀನ್ ಎಂಬವರನ್ನು ಬಂಧಿಸಲಾಗಿತ್ತು. ವಿಚಾರಣೆಯ ವೇಳೆ ತರುಣ್, ಅನುಶ್ರೀ ಕುಡಿತಿದ್ದಳು ಅಂತ ಮಾತ್ರ ಹೇಳಿದ್ದ. ಆದರೆ ಪೊಲೀಸರು ತನಿಖೆ ಚುರುಕುಗೊಳಿಸಿದ ಬಳಿಕ ಒಂದೊಂದೇ ಮಾಹಿತಿ ಬಾಯ್ಬಿಟ್ಟಿದ್ದಾನೆ. ನಾವು ಡ್ರಗ್ ಪಾರ್ಟಿ ಮಾಡುತ್ತಿದ್ವಿ, ಪಾರ್ಟಿಯಲ್ಲಿ ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳತ್ತಿದ್ದಳು ಎಂದು ಬಾಯ್ಬಿಟ್ಟಿದ್ದಾನೆ ಎನ್ನಲಾಗಿತ್ತು. ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ನಿರೂಪಕಿ ಅನುಶ್ರೀಗೆ ಈ ಹಿಂದೆ ಸಿಸಿಬಿ ನೋಟಿಸ್ ನೀಡಿತ್ತು. ಹೀಗಾಗಿ ಅನುಶ್ರೀ ವಿಚಾರಣೆಗೆ ಹಾಜರಾಗಿದ್ದರು.

    https://www.instagram.com/tv/CF0503kHBr2/?igshid=14r1wus7ksbwq

  • ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡೆ

    ಮಾಯಂತಿ ಲ್ಯಾಂಗರ್ ಔಟ್ – ಐಪಿಎಲ್ ಹೊಸ ನಿರೂಪಕರ ಲಿಸ್ಟ್ ಬಿಡುಗಡೆ

    ನವದೆಹಲಿ: ಐಪಿಎಲ್‍ನಲ್ಲಿ ನಿರೂಪಣೆ ಮಾಡುವ ಆ್ಯಂಕರ್ಸ್ ಗಳ ಪಟ್ಟಿಯನ್ನು ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ್ದು, ಇದರಲ್ಲಿ ಸ್ಟಾರ್ ನಿರೂಪಕಿ, ಸ್ಟುವರ್ಟ್ ಬಿನ್ನಿ ಪತ್ನಿ ಮಾಯಂತಿ ಲ್ಯಾಂಗರ್ ಅವರ ಹೆಸರನ್ನು ಕೈಬಿಡಲಾಗಿದೆ.

    ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗಲಿದೆ. 6 ತಿಂಗಳು ತಡವಾಗಿ ಐಪಿಎಲ್ ಆರಂಭವಾಗುತ್ತಿದೆ. ಪ್ರಪಂಚದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‍ಗಾಗಿ ಇಡೀ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದಾರೆ. ಇದಕ್ಕೆ ತಕ್ಕ ಸಿದ್ಧತೆಗಳನ್ನು ಬಿಸಿಸಿಐ ಕೂಡ ಮಾಡಿಕೊಳ್ಳುತ್ತಿದೆ. ಪಾಕಿಸ್ತಾನ ಹೊರತು ಪಡಿಸಿ ಪ್ರಪಂಚದ 120 ದೇಶದಲ್ಲಿ ಐಪಿಎಲ್ ಪ್ರಸಾರವಾಗಲಿದೆ.

    ಐಪಿಎಲ್-2020 ಮೊದಲ ಪಂದ್ಯ ನಾಳೆ ಆರಂಭವಾಗಲಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸ್ಟಾರ್ ಸ್ಪೋರ್ಟ್ಸ್ ರಂಗುರಂಗಾಗಿ ಮಾತನಾಡುವ ನಿರೂಪಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಈ ಹಿಂದೆ ಐಪಿಎಲ್‍ನಲ್ಲಿ ನಿರೂಪಣೆ ಮಾಡುತ್ತಿದ್ದ ಸ್ಟಾರ್ ನಿರೂಪಕಿ ಮಾಯಂತಿ ಲ್ಯಾಂಗರ್ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಅವರನ್ನು ಕೈಬಿಡಲು ಕಾರಣವೇನು ಎಂಬುದನ್ನು ಸ್ಟಾರ್ ಸ್ಪೋರ್ಟ್ಸ್ ತಿಳಿಸಿಲ್ಲ. ಇದರ ಬಗ್ಗೆ ಮಾಯಂತಿ ಲ್ಯಾಂಗರ್ ಕೂಡ ಇಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.

    ಸ್ಟಾರ್ ಸ್ಪೋರ್ಟ್ಸ್ ಬಿಡುಗಡೆ ಮಾಡಿದ ನಿರೂಪಕರ ಪಟ್ಟಿ
    ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್, ಧೀರಜ್ ಜುನೇಜಾ, ಜತಿನ್ ಸಪ್ರು, ಸುಹೇಲ್ ಚಂದೋಕ್, ಸಂಜನಾ ಗಣೇಶನ್, ಅನಂತ್ ತ್ಯಾಗಿ ಸೇರಿದಂತೆ 9 ಮಂದಿ ನಿರೂಪಕರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಕನ್ನಡದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಮಂಗಳೂರಿನ ವೀಣಾ ಡಿಸೋಜಾ ನಿರೂಪಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಮಾಯಂತಿ ಲ್ಯಾಂಗರ್ ಕಾಣದಿರುವುದು ಕೆಲ ಅಭಿಮಾನಿಗಳಿಗೆ ನಿರಾಸೆಯಾಗಿದೆ.

    ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂಬರುವ ಐಪಿಎಲ್‍ಗಾಗಿ ಆಸ್ಟ್ರೇಲಿಯಾದ ಜನಪ್ರಿಯ ಟಿವಿ ನಿರೂಪಕ ನೆರೋಲಿ ಮೆಡೋಸ್ ಅವರನ್ನು ಕರೆತಂದಿದೆ. ಉಳಿದ ಸುರೇನ್ ಸುಂದರಂ, ಕಿರಾ ನಾರಾಯಣನ್, ನಶ್ಪ್ರೀತ್ ಕೌರ್, ತಾನ್ಯಾ ಪುರೋಹಿತ್ ಮತ್ತು ಧೀರಜ್ ಜುನೇಜಾ ಐಪಿಎಲ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದು, ಸುರೇನ್ ಸುಂದರಂ ಇದಕ್ಕೂ ಮೊದಲು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಿರೂಪಕರಾಗಿದ್ದರು. ಅವರು ಕಳೆದ ವರ್ಷದಿಂದ ಸ್ಟಾರ್ ನೆಟ್‍ವರ್ಕ್‍ನೊಂದಿಗೆ ಕೆಲಸ ಮಾಡುತ್ತಿದ್ದಾರೆ.

    ಕಿರಾ ನಾರಾಯಣನ್ ಭಾರತೀಯ ಚಲನಚಿತ್ರ ಮತ್ತು ರಂಗಭೂಮಿ ನಟಿಯಾಗಿದ್ದು, ಕ್ರೀಡಾ ನಿರೂಪಕಿಯಾಗಿಯೂ ಹೆಸರುವಾಸಿಯಾಗಿದ್ದಾರೆ. ತಾನ್ಯಾ ಪುರೋಹಿತ್ ಕೂಡ ನಟಿಯಾಗಿದ್ದು, ಹಲವಾರು ಸಿನಿಮಾದಲ್ಲಿ ಮತ್ತು ಟಿವಿ ಚಾನೆಲ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಾನ್ಯಾ ಅನುಷ್ಕಾ ಶರ್ಮಾ ಅಭಿನಯದ ಎನ್‍ಎಚ್-10 ಚಿತ್ರದಲ್ಲಿ ನಟಿಸಿದ್ದಾರೆ. ಮಾಯಂತಿ ಲ್ಯಾಂಗರ್ ಅವರ ಅನುಪಸ್ಥಿತಿಯಲ್ಲಿ, ಈ ಬಾರಿಯ ಐಪಿಎಲ್‍ನಲ್ಲಿ ಹೊಸ ನಿರೂಪಕರ ತಂಡ ಕೆಲಸ ಮಾಡಲಿದೆ.

  • ಬೆಂಗ್ಳೂರಿಗೆ ಬಂದಾಗ ಅನುಭವಿಸಿದ್ದ ಕಷ್ಟ ಹೇಳಿ ಅನುಶ್ರೀ ಕಣ್ಣೀರು

    ಬೆಂಗ್ಳೂರಿಗೆ ಬಂದಾಗ ಅನುಭವಿಸಿದ್ದ ಕಷ್ಟ ಹೇಳಿ ಅನುಶ್ರೀ ಕಣ್ಣೀರು

    ಬೆಂಗಳೂರು: ನಿರೂಪಕಿ ಅನುಶ್ರೀ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕಿಕೊಂಡು ಕಣ್ಣೀರು ಹಾಕಿದ್ದಾರೆ.

    ಮೊದಲಿಗೆ ಬೆಂಗಳೂರಿಗೆ ಬಂದಾಗ ಇಲ್ಲಿ ಸಂಬಳ ಏನೂ ಸಾಕಾಗಲ್ಲ. ನಾನು ವಾಪಸ್ ಬರ್ತೀನಿ ಎಂದು ಅಮ್ಮನಿಗೆ ಎಸ್‍ಟಿಡಿ ಮಾಡಿದೆ. ಆದ್ರೆ ಅಮ್ಮ ನೀನು ಸೋತು ಮನೆಗೆ ಬರಬೇಡ. ಗೆದ್ದು ಬಾ ಅಥವಾ ಪ್ರಯತ್ನ ಮಾಡಿಯಾದ್ರೂ ಬಾ ಅಂತ ಹೇಳಿರುವುದಾಗಿ ತಿಳಿಸಿದರು.

    ರಿಯಾಲಿಟಿ ಶೋನಲ್ಲಿ ಕೂಡು ಕುಟುಂಬ ನೋಡಿದಾಗ ಭಾವುಕರಾದ ಅನುಶ್ರೀ, ನಾನು 10 ವರ್ಷ ಪಿಜಿಯಲ್ಲಿದ್ದೆ. ಶೂಟಿಂಗ್ ಮುಗಿಸಿಕೊಂಡು ಬಂದಾಗ ನಮಗೆ ಬಾಗಿಲು ತೆಗೆಯುವವರು ಯಾರೂ ಇರಲ್ಲ. ಊಟ ಮಾಡಿದ್ರಾ, ಹುಷಾರ್ ಇದ್ದೀರಾ ಕೇಳುವವರೂ ಇರಲಿಲ್ಲ. ಎಷ್ಟೋ ಬಾರಿ ಇದನ್ನೇ ನೆನಪು ಮಾಡಿಕೊಂಡು ರಾತ್ರಿ ಊಟ ಸಹ ಮಾಡದೇ ಮಲಗಿಕೊಂಡಿದ್ದೇನೆ. ಆ ಒಂಟಿತನ ಬೆಂಗಳೂರಿಗೆ ಬಂದಾಗ ನನ್ನನ್ನು ಕಾಡಿತ್ತು. ಏನೇ ಜಗಳ ಇರಲಿ, ಮನೆಯಲ್ಲಿರಬೇಕು ಎಂಬುದು ನನ್ನ ಅಭಿಪ್ರಾಯ. ಇದನ್ನೂ ಓದಿ: ಸುಷ್ಮಾ ನೀಡಿದ 250 ರೂ. ನೋಡಿ ಕಣ್ಣೀರಿಟ್ಟ ಅನುಶ್ರೀ

    ಒಂದು ಬಾರಿ ನನಗೆ ಹುಷಾರ್ ಇರಲಿಲ್ಲ. ಒಬ್ಬಳೇ ಆಸ್ಪತ್ರೆಗೆ ಹೋಗಿದ್ದೆ. ದೇಹದಲ್ಲಿ ಸಣ್ಣ ಇನ್ಪೆಕ್ಷನ್ ಅಂತ ಅನ್ಕೊಂಡು ಹೋದೆ. ಚಿಕಿತ್ಸೆ ಮಾಡುವಾಗ ನೋವು ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ವೈದ್ಯರು ಟ್ರೀಟ್ ಮಾಡುವಾಗ ನನ್ನ ಕೈ ಹಿಡಿದುಕೊಳ್ಳಲು ಯಾರೂ ಇಲ್ಲ ಅನ್ನೋ ನೋವು ನನ್ನನ್ನು ತುಂಬಾ ಕುಂದಿಸ್ತು. ಅದೇ ನೋವಿನಲ್ಲಿ ಮಲ್ಲೇಶ್ವರಂನಲ್ಲಿದ್ದ ಆಸ್ಪತ್ರೆಯಿಂದ ಹೊರ ಬಂದು ಆಟೋ ಹತ್ತಿ ಹಲ್ಲನ್ನು ಬಿಗಿ ಹಿಡಿದು ಹಾಸ್ಟೆಲ್ ವರೆಗೂ ಹೋದೆ. ಆವತ್ತೇ ಫಸ್ಟ್ ಟೈಂ ಜೋರಾಗಿ ಅತ್ತಿದ್ದು. ಬೆಂಗಳೂರಿನಲ್ಲಿ ನನಗೆ ಅಂತ ಯಾರೂ ಇಲ್ಲವಲ್ಲ ಎಂಬ ನೋವು ಕಾಡಿತ್ತು. ಅವತ್ತು ಸಹ ಅಮ್ಮನಿಗೆ ಫೋನ್ ಮಾಡಿ ಕಣ್ಣೀರು ಹಾಕಿದ್ದೆ.

    ಗುಂಡ್ಲುಪೇಟೆಯ ಈ ಕುಟುಂಬದವರು ಅದೃಷ್ಟವಂತರು. ಒಂದೇ ಮನೆಯಲ್ಲಿ 47 ಜನರು ವಾಸವಾಗಿರುವ ವಿಷಯ ಕೇಳಿ ಮತ್ತು ಈ ತುಂಬು ಕುಟುಂಬ ನೋಡಿ ಖುಷಿಯಾಯ್ತು. ಜೊತೆಯಲ್ಲಿ ಕುಳಿತು ಮಾತಾಡ್ತಾ ಊಟ ಮಾಡ್ತೀರಿ. ಒಂದು ಮಾತು ಬರುತ್ತೆ ಹೋಗುತ್ತೆ. ರಾತ್ರಿ ಮಲಗಿದ ವ್ಯಕ್ತಿ ಬೆಳಗ್ಗೆ ಏಳುತ್ತಾನೆ ಎಂಬುವುದು ಯಾರಿಗೂ ಗೊತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದರು.

  • ಇನ್‍ಸ್ಟಾದಲ್ಲಿ ನಗ್ನ ಫೋಟೋ ಹಂಚಿಕೊಂಡ ಖ್ಯಾತ ನಟಿ

    ಇನ್‍ಸ್ಟಾದಲ್ಲಿ ನಗ್ನ ಫೋಟೋ ಹಂಚಿಕೊಂಡ ಖ್ಯಾತ ನಟಿ

    ಮುಂಬೈ: ಖ್ಯಾತ ನಟಿ, ನಿರೂಪಕಿ ಪದ್ಮಾ ಲಕ್ಷ್ಮಿ ತಮ್ಮ ಇನ್‍ಸ್ಟಾದಲ್ಲಿ ನಗ್ನ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಪದ್ಮಾ ಲಕ್ಷ್ಮಿ ಟಾಪ್‍ಲೆಸ್ ಫೋಟೋವನ್ನು ಇನ್‍ಸ್ಟಾದಲ್ಲಿ ಹಾಕಿ ಅದಕ್ಕೆ, “ಹೊಸ ವರ್ಷ, ಆದರೆ ನಾನು ಮೊದಲಿನಂತೆಯೇ ಇದ್ದೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

     

    View this post on Instagram

     

    New year, same me ???? (@vogueindia) #bts

    A post shared by Padma Lakshmi (@padmalakshmi) on

    ಬೆಳ್ಳಿತೆರೆಯಿಂದ ದೂರವಿರುವ ಪದ್ಮಾ ಲಕ್ಷ್ಮಿ ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪದ್ಮಾ ಸಕ್ರಿಯರಾಗಿದ್ದು, ಆಗಾಗ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

    ಕಳೆದ ವಾರ ಪದ್ಮಾ ಸಂಪೂರ್ಣ ನಗ್ನವಾಗಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಕೂಡ ಸಾಕಷ್ಟು ವೈರಲ್ ಆಗಿತ್ತು.