Tag: ನಿರೂಪಕಿ ಅನುಶ್ರೀ

  • ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌ – ಲವ್‌ ಸ್ಟೋರಿ ಬಗ್ಗೆ ಅನುಶ್ರೀ ಮಾತು

    ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌ – ಲವ್‌ ಸ್ಟೋರಿ ಬಗ್ಗೆ ಅನುಶ್ರೀ ಮಾತು

    ನಮ್ಮಿಬ್ಬರನ್ನು ಒಂದು ಮಾಡಿದ್ದೇ ಅಪ್ಪು ಸರ್‌, ಒಂದು ಲೆಕ್ಕದಲ್ಲಿ ಹೇಳೋದಾದರೆ ಈ ಪ್ರೀತಿಗೆ ಅವರೇ ಕಾರಣ ಎಂದು ನಿರೂಪಕಿ ಅನುಶ್ರೀ (Anchor Anushree) ತಮ್ಮ ಲವ್‌ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ.

    ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮದುವೆ ಸುಂದರ ಹಾಗೂ ಸರಳವಾಗಿ ನಡೆದಿದೆ, ಕಡಿಮೆ ಜನರನ್ನು ಸೇರಿಸಿ ಮದುವೆಯಾಗಬೇಕು ಅನ್ನೋದು ನಮ್ಮಿಬ್ಬರ ಆಸೆಯಾಗಿತ್ತು. ಜೊತೆಗೆ ತುಂಬಾ ಕಡೆಯಿಂದ ಬಹಳ ಜನರು ಬಂದಿದ್ದರು. ‌ಆ ಎಲ್ಲಾ ಪ್ರೀತಿ-ಪಾತ್ರರಿಗೂ ಧನ್ಯವಾದಗಳು ಎಂದಿದ್ದಾರೆ.

    ಇದೇ ವೇಳೆ ತಮ್ಮ ಲವ್‌ ಸ್ಟೋರಿ ಶುರುವಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಸಿಂಪಲ್‌ ಲವ್ ಸ್ಟೋರಿ. ನಾವಿಬ್ಬರು ಮೊದಲು ಸ್ನೇಹಿತರಾದ್ವಿ. ಆಮೇಲೆ ಒಟ್ಟಿಗೆ ಕಾಫಿ ಕುಡಿದ್ವಿ. ಒಬ್ಬರಿಗೊಬ್ಬರು ಇಷ್ಟ ಆದ್ವಿ, ಲವ್‌ ಆಯ್ತು. ಇವಾಗ ಮದ್ವೆ ಆದ್ವಿ. ರೋಷನ್‌ ಕೂಡ ಅಪ್ಪು ಅವರ ಅಭಿಮಾನಿ. ಅಪ್ಪು ಸರ್‌ ಅವರ ʻಪುನೀತ್‌ ಪರ್ವʼ ಕಾರ್ಯಕ್ರಮದ ಮೂಲಕವೇ ನಮ್ಮಿಬ್ಬರ ಪರಿಚಯವಾಗಿದ್ದು. ಒಂದು ಲೆಕ್ಕದಲ್ಲಿ ಹೇಳೋದಾದರೆ ನಮ್ಮಿಬ್ಬರನ್ನು ಸೇರಿಸಿದ್ದೇ ಅಪ್ಪು ಸರ್‌ ಎಂದು ತಿಳಿಸಿದ್ದಾರೆ.

    ಮದುವೆಗೆ ಶಿವಣ್ಣ, ಗೀತಕ್ಕ ಸೇರಿದಂತೆ ಹಲವರು ಬಂದು ಆಶೀರ್ವಾದ ಮಾಡಿದ್ದಾರೆ. ಶಿವಣ್ಣ ರೋಷನ್ ಅವರನ್ನ ಮುಂಚೆಯೇ ನೋಡಿದ್ರು. ರಚಿತಾ ಅವ್ರು ನಮ್ಮ ಮದುವೆಗೆ ಬಂದಿದ್ದು ಸಾಕಷ್ಟು ಖುಷಿ ಕೊಟ್ಟಿದೆ. ನನಗೆ ಮಂತ್ರ ಮಾಂಗಲ್ಯ ಆಗಬೇಕು ಅಂತ ಬಹಳ ಆಸೆ ಇತ್ತು. ಆದ್ರೆ ಅದರದ್ದು ಕೆಲವೊಂದು ರೂಲ್ಸ್ ಇದೆ ಹಾಗಾಗಿ ಕಷ್ಟ ಆಯ್ತು. ಇನ್ನೂ ಮದುವೆ ಅನ್ನೋದು ಒಂದು ಹೆಣ್ಣಿನ ಬಹು ದೊಡ್ಡ ಕನಸು. ನಾವು ಮದುವೆ ಹೇಗೆ ಆಗ್ತೀವಿ ಅನ್ನೋದು ಮುಖ್ಯ ಅಲ್ಲ, ಮದುವೆ ಬಳಿಕ ಹೇಗೆ ಬದುಕ್ತೀವಿ ಅನ್ನೋದು ಮುಖ್ಯ ಎಂದಿದ್ದಾರೆ.

    ಇದೇ ವೇಳೆ ರೋಷನ್‌ ಮಾತನಾಡಿ, ಕಳೆದ 5 ವರ್ಷಗಳಿಂದ ನನಗೆ ಅನು ಪರಿಚಯವಿದೆ. 3 ವರ್ಷಗಳ ಹಿಂದೆ ನಾವಿಬ್ಬರು ಕ್ಲೋಸ್‌ ಆದ್ವಿ. ಯಾವತ್ತೂ ಆಕೆ ನನಗೆ ಸೆಲಿಬ್ರಿಟಿ ಅಂತ ಅನಿಸಿಲ್ಲ ಎಂದು ಹೇಳಿದ್ದಾರೆ.

    ಇನ್ನೂ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋವೊಂದನ್ನು ಇರಿಸಿ, ಸುತ್ತಲೂ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಈ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

  • ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಪುನೀತ್ ರಾಜಕುಮಾರ್ (Puneeth Rajkumar) ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ (Anushree) ಅವರು ತಾವು ಮದುವೆಯಾಗುತ್ತಿರುವ ಮಂಟಪದಲ್ಲಿ ಅಪ್ಪು ಫೋಟೋವನ್ನು ರಾರಾಜಿಸುವಂತೆ ಮಾಡಿದ್ದಾರೆ.

    ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ದಾವಣಗೆರೆ | ಶಿಕ್ಷಕನ ಬ್ಯಾಂಕ್ ಖಾತೆಯಿಂದ 22 ಲಕ್ಷ ಎಗರಿಸಿದ್ದ ಆರೋಪಿ ಅರೆಸ್ಟ್

    ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋವೊಂದನ್ನು ಇರಿಸಿ, ಸುತ್ತಲೂ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಈ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಈ ಹಿಂದೆಯೂ ಅಪ್ಪು ಬಗ್ಗೆ ನಟಿ ಅನುಶ್ರೀ ಮಾತನಾಡಿದ್ದರು. ಅಪ್ಪು ಸರ್ ನನಗೆ ತುಂಬಾ ಹತ್ತಿರ. ಸಿನಿಮಾ ಇಷ್ಟ ಪಡಲು ಶುರುವಾಗಿದ್ದ ದಿನದಿಂದ ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ನಾನು ಇಷ್ಟ ಪಡುವ ಏಕೈಕ ನಟ ಅಂದ್ರೆ ಅಪ್ಪು ಸರ್. ಅವರನ್ನು ಭೇಟಿಯಾದ ಮೇಲೆ ಅವರ ಗುಣ, ವ್ಯಕ್ತಿತ್ವಕ್ಕೆ ನಾನು ಅಭಿಮಾನಿಯಾದೆ ಎಂದು ಹಲವು ಭಾರೀ ಭಾವುಕರಾಗಿದ್ದರು.

    ಗುರುವಾರ ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ನಟ ಶರಣ್, ಹಿರಿಯ ನಟಿ ಪ್ರೇಮ, ಡಾಲಿ ಧನಂಜಯ್, ಚೈತ್ರಾ ಆಚಾರ್, ನಾಗಭೂಷಣ, ಗಾಯಕ ವಿಜಯಪ್ರಕಾಶ್, ನಟ ವಿಜಯ ರಾಘವೇಂದ್ರ ಸೇರಿದಂತೆ ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.ಇದನ್ನೂ ಓದಿ: ಅಮೆರಿಕದ ಚರ್ಚ್ ಮೇಲೆ ಶೂಟೌಟ್ – ಗನ್‌ನಲ್ಲಿ ಬರೆದಿತ್ತು Nuke India

  • ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

    ನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ (Anchor Anushree) ಇಂದು (ಆ.28) ಕೊಡಗು ಮೂಲದ ರೋಷನ್ ಹೊಸ ಮನ್ವಂತರಕ್ಕೆ ಕಾಲಿಟ್ಟಿದ್ದಾರೆ.

    ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ಅನುಶ್ರಿ ಹಾಗೂ ರೋಷನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿರುವ ಅನುಶ್ರೀ

    ಬೆಂಗಳೂರಿನ (Bengaluru) ಕಗ್ಗಲಿಪುರ (Kaggalipura) ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ. ಇನ್ನೂ ವೆಡ್ಡಿಂಗ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿಬಿಟ್ಟಿದೆ.

    ಮದುವೆಗೂ ಹಿಂದಿನ ದಿನ ಬುಧವಾರ (ಆ.27) ನಡೆದ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್ ಸು ಫ್ರಂ ಸೋ ಚಿತ್ರದ `ಬಂದರೋ ಬಂದರೋ ಬಾವ ಬಂದರೋ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಹಳದಿ ಶಾಸ್ತ್ರದಲ್ಲಿ ಮಿಂಚಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.ಇದನ್ನೂ ಓದಿ: ಅಮೆರಿಕದಲ್ಲಿ ಕುಳಿತು ಮುಧೋಳದ ಮನೆ ಕಳ್ಳತನ ತಪ್ಪಿಸಿದ ಟೆಕ್ಕಿ ಪುತ್ರಿ!

  • ಟೆಕ್ಕಿ ಜೊತೆ ಆ.28ಕ್ಕೆ ಅನುಶ್ರೀ ಮದುವೆ!

    ಟೆಕ್ಕಿ ಜೊತೆ ಆ.28ಕ್ಕೆ ಅನುಶ್ರೀ ಮದುವೆ!

    ನ್ನಡದ ಖ್ಯಾತ ನಿರೂಪಕಿ/ನಟಿ ಅನುಶ್ರೀ ಮದುವೆಯ ವದಂತಿ ಕಳೆದ ಕೆಲ ತಿಂಗಳಿಂದ ಜೋರಾಗಿತ್ತು. ಇದೀಗ ಮದುವೆಗೆ ದಿನಾಂಕ ಫಿಕ್ಸ್ ಆಗಿದೆ ಅನ್ನೋ ಮಾಹಿತಿ ಬಹುತೇಕ ಖಚಿತವಾಗಿದ್ದು ಆಗಸ್ಟ್ 28ಕ್ಕೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.ಇದನ್ನೂ ಓದಿ: ಕಿರಣ್ ರಾಜ್‌ಗೆ ನಾಯಕಿಯಾದ ಉಡಾಳ ಹುಡುಗಿ ಹೃತಿಕಾ

    ಕುಟುಂಬಸ್ಥರು ನೋಡಿದ ಹುಡುಗನ ಜೊತೆಯೇ ಅನುಶ್ರೀ ಮದುವೆಯಾಗುತ್ತಿದ್ದು ಮಂಗಳೂರು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಟೆಕ್ಕಿ ಜೊತೆ ಅನುಶ್ರೀ ಕಲ್ಯಾಣ ಎನ್ನಲಾಗುತ್ತಿದೆ. ಮದುವೆ ನಿಶ್ಚಯವಾಗಿರುವ ಹುಡುಗ ಹಾಗೂ ಇನ್ನಿತರ ಮಾಹಿತಿಯನ್ನು ಅನುಶ್ರೀ ಗೌಪ್ಯವಾಗಿರಿಸಿದ್ದಾರೆ. ಆಗಸ್ಟ್ 28 ರಂದು ಬೆಂಗಳೂರಿನಲ್ಲೇ ಅದ್ದೂರಿ ಆರತಕ್ಷತೆಗೆ ಸ್ಥಳ ನಿಗದಿಯಾಗಿರುವ ಸುದ್ದಿ ಬಂದಿದೆ.

    ಅನುಶ್ರೀ ಮದುವೆ ವಿಚಾರವಾಗಿ ಹಲವು ತಮಾಷೆಯ ಸಂಭಾಷಣೆಗಳು ನಡೆಯುತ್ತಲೇ ಇತ್ತು. ಮದುವೆ ಸುದ್ದಿ ಕೇಳ್ದಾಗೆಲ್ಲಾ ಈ ವರ್ಷವೇ ಮದುವೆ ಎಂದಿದ್ದರು ಅನುಶ್ರೀ. ಇದೀಗ ಮದುವೆಗೆ ಕಾಲ ಕೂಡಿಬಂದಿದ್ದು ಆಗಸ್ಟ್ 28ಕ್ಕೆ ಕಲ್ಯಾಣ ಎನ್ನಲಾಗುತ್ತಿದೆ. ಸರಳ ಶಾಸ್ತ್ರೋಕ್ತವಾಗಿ ಮದುವೆಯಾಗಿ ಬಳಿಕ ಆಗಸ್ಟ್ 28ಕ್ಕೆ ಸಿನಿಮಾ ಇಂಡಿಸ್ಟ್ರಿಯವರನ್ನ ಆಮಂತ್ರಿಸಿ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಳ್ಳವ ಸಾಧ್ಯತೆ ಇದೆ.ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಡೆವಿಲ್ ಸಾಂಗ್ ಶೂಟಿಂಗ್ – ದರ್ಶನ್ ಫೋಟೋ ರಿವೀಲ್

  • ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು, ಹೀಗ್ಯಾಕಂದ್ರು ಅನುಶ್ರೀ

    ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು, ಹೀಗ್ಯಾಕಂದ್ರು ಅನುಶ್ರೀ

    ಕಿರುತೆರೆಯ ಟಾಪ್ ಒನ್ ಆ್ಯಂಕರ್ ಅನುಶ್ರೀ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಅಪ್ಪು ಅಗಲಿಕೆಯ ನೋವಿನಲ್ಲಿ ಸೋತಿದ್ದ ಅನುಶ್ರೀ ಈಗ ಕೊಂಚ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಕಾಫಿನಾಡು ಚಿಕ್ಕಮಗಳೂರಿಗೆ ಹಾರಿದ್ದಾರೆ.

    ರಿಯಾಲಿಟಿ ಶೋ ಮತ್ತು ಸಿನಿಮಾ ಪ್ರಿ ಲಾಂಚ್‌ ಈವೆಂಟ್‌ನಲ್ಲಿ ಅಂತಾ ಬ್ಯುಸಿಯಿರುವ ನಟಿ ಅನುಶ್ರೀ ಸದ್ಯ ಪ್ರವಾಸದಲ್ಲಿದ್ದಾರೆ. ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಚಿಕ್ಕಮಗಳೂರಿನಲ್ಲಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಇದನ್ನೂ ಓದಿ:ಶಾರುಖ್ ಮನೆಮುಂದೆ ಜಮಾಯಿಸಿದ ಜನಸಾಗರ ನೋಡಿ ಅಚ್ಚರಿಪಟ್ಟ `ಕಾಂತಾರ’ ಹೀರೋ

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಟಿ ಹಾಕಿರುವ ಪೋಸ್ಟ್ ಸದ್ದು ಮಾಡುತ್ತಿದೆ. ಈ ಬಾರಿ ಎತ್ತರ ಬೆಟ್ಟ ಏರಿದ್ದಾರೆ. ಜೊತೆಗೆ ಅಭಿಮಾನಿಗಳಿಗೊಂದು ಪ್ರಶ್ನೆ ಕೂಡ ಕೇಳಿದ್ದಾರೆ. ನಮ್ಮ ಸಂತೋಷವನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ನಗು ನಮ್ಮನ್ನು ಮೊದಲು ಗೆಲ್ಲಬೇಕು. ಈ ಜಾಗ ಯಾವುದು ಎಂದು ಹೇಳುವಿರಾ ಎಂದಿದ್ದಾರೆ. ಅದಕ್ಕೆ ಸಾಕಷ್ಟು ಅಭಿಮಾನಿಗಳು ರಿಯಾಕ್ಟ್ ಕೂಡ ಮಾಡಿದ್ದಾರೆ.

    ಅಂದಹಾಗೆ ಅನುಶ್ರೀ ಇದೀಗ ಹಸಿರಿನನಾಡು ಕ್ಯಾತನಮಕ್ಕಿ ಗಿರಿ ಚೆಂದದ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಸಿಸಿಬಿ ನೋಟಿಸ್ ಸ್ವೀಕರಿಸಿದ ಅನುಶ್ರೀ- ಶನಿವಾರ ವಿಚಾರಣೆಗೆ ಹಾಜರು

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ನೀಡಿರುವ ನೋಟಿಸ್ ನಿರೂಪಕಿ ಅನುಶ್ರೀ ಸ್ವೀಕರಿಸಿದ್ದಾರೆ. ಶನಿವಾರ ವಿಚಾರಣೆಗೆ ಹಾಜರಾಗೋದಾಗಿ ಅನುಶ್ರೀ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಹಿನ್ನೆಲೆ ಅನುಶ್ರೀ ಅವರು ನಾಳೆ ಮಂಗಳೂರಿಗೆ ತೆರಳಲಿದ್ದಾರೆ.

    ಅನುಶ್ರೀ ಅವರ ವೈಭವ್ ಸ್ನೇಹ ಬ್ರೀಜೆ ಅಪಾರ್ಟ್‍ಮೆಂಟ್ ಗೆ ತೆರಳಿ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಲು ಮಂಗಳವಾರದವರೆಗೂ ಸಮಯ ನೀಡಲಾಗಿದೆ. ಆದ್ರೆ ಅನುಶ್ರೀಯವರು ನಾಳೆಯೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದಾರೆ. ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ಅನುಶ್ರೀಯವರ ವಿಚಾರಣೆ ನಡೆಯಲಿದೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಶ್ರೀ, ಇಂದು ಸಂಜೆ ಇಬ್ಬರು ಅಧಿಕಾರಿಗಳು ಬಂದು ನೋಟಿಸ್ ನೀಡಿದರು. ಮಂಗಳವಾರವರೆಗೂ ಸಮಯ ನೀಡಿದ್ದಾರೆ. ಆದ್ರೆ ನಾನು ನಾಳೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಹೇಳಿಕೆ ದಾಖಲಿಸಬೇಕಿದೆ ಎಂದು ಹೇಳಲಾಗಿದ್ದು, ನೋಟಿಸ್ ನಲ್ಲಿ ಯಾವುದೇ ಕೇಸ್ ಅಂತ ನಿಖರವಾಗಿ ತಿಳಿಸಿಲ್ಲ ಎಂದರು. ಇದನ್ನೂ ಓದಿ: ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಖ್ಯಾತ ನಿರೂಪಕಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ. ಇಂದು ಬಂಧನವಾಗಿರುವ ಕಿಶೋರ್ ಆಪ್ತ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಈ ಇಬ್ಬರ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡ್ರಗ್ಸ್‌ ಕೇಸ್‌ – ನಿರೂಪಕಿ ಅನುಶ್ರೀಗೆ ನೋಟಿಸ್‌ ಜಾರಿ

  • ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಹಿನ್ನೆಲೆ ನಿರೂಪಕಿ ಅನುಶ್ರೀ ಪಬ್ಲಿಕ್ ಟಿವಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

    ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವ ನೋಟಿಸ್ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ನೋಟಿಸ್ ತಲುಪಿಲ್ಲ. ನನ್ನ ಮೊಬೈಲಿಗೆ ಸಮನ್ಸ್ ಸಹ ಬಂದಿಲ್ಲ. ಮಂಗಳೂರಿನ ಮನೆಯಲ್ಲಿಯೂ ನಾವು ಯಾರು ಇಲ್ಲ. ಸುದ್ದಿ ಬಿತ್ತರವಾಗುತ್ತಿದ್ದಂತೆ ನಾನು ಮಂಗಳೂರಿನ ಮನೆಯ ಬಳಿ ಕೆಲವರನ್ನ ಕಳಿಸಿ ವಿಚಾರಿಸಿದೆ. ನಾನು, ಅಮ್ಮ ಮತ್ತು ತಮ್ಮ ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಅನುಶ್ರೀ ಹೇಳಿದ್ದಾರೆ.

    ಸಿನಿಮಾ ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. 12 ವರ್ಷದ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಮಗೆ ಕಿಶೋರ್ ಶೆಟ್ಟಿ ಮತ್ತು ತರುಣ್ ಕೊರಿಯೋಗ್ರಾಫರ್ ಆಗಿದ್ದರು. ಅದಾದ ಬಳಿಕ ಇಬ್ಬರ ಜೊತೆಗೆ ಸಂಪರ್ಕ ಬಂದಿಲ್ಲ. ಮೂರು ವರ್ಷದ ಹಿಂದೆ ಬಂಧಿತರ ಡ್ಯಾನ್ಸ್ ಸ್ಕೂಲ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ. ಲಾಕ್‍ಡೌನ್ ವೇಳೆ ಇಪ್ಪತ್ತೈದು ದಿನ ಮಂಗಳೂರಿನಲ್ಲಿ ಲಾಕ್ ಆಗಿದ್ದೆ. ನಂತರ ಅನುಮತಿ ಪಡೆದು ಕಾರ್ ಡ್ರೈವ ಮಾಡಿಕೊಂಡು ಬಂದಿದ್ದೇನೆ. ಮಂಗಳೂರಿಗೆ ಹೋದ್ರು ಮನೆ ಮತ್ತು ದೇವಸ್ಥಾನಕ್ಕೆ ಮಾತ್ರ ಹೋಗುತ್ತೇನೆ. ಲಾಕ್‍ಡೌನ್ ನಲ್ಲಿಯೂ ನಾನು ಮನೆಯಲ್ಲಿದ್ದೇನೆ. ಈ ಬಗ್ಗೆ ನೀವು ಯಾರನ್ನಾದರೂ ಕೇಳಿ ಎಂದು ಹೇಳಿದರು.

    ಒಂದು ವೇಳೆ ವಿಚಾರಣೆಗೆ ಹಾಜರಾಗಬೇಕೆಂದು ಅಂದಾಗ ಖಂಡಿತ ಹೋಗುತ್ತೇನೆ. ಪೊಲೀಸರ ತನಿಖೆಗೆ ಸಹಕರಿಸೋದು ನನ್ನ ಕರ್ತವ್ಯ ಆಗಿರುತ್ತದೆ. ತಾಯಿ ಮತ್ತು ತಮ್ಮ ಮನೆಯಲ್ಲಿ ಟಿವಿ ನೋಡುತ್ತಿದ್ದಾರೆ. ಮಗಳ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂತ ಅಲ್ಲ. ಜನ ಹೇಗೆ ನೋಡುತ್ತಾರೆ ಅನ್ನೋ ಚಿಂತೆ ಅವರ ಮುಖದಲ್ಲಿ ಕಾಣಿಸುತ್ತಿದೆ. ಕಾರ್ಯಕ್ರಮಗಳಿಗೆ ಹೋಗುವುದು ನನ್ನ ಕೆಲಸ. ಆದ್ರೆ ಎಷ್ಟೋ ಜನರನ್ನು ಭೇಟಿ ಆಗುತ್ತಿರುತ್ತೇವೆ. ಅಲ್ಲಿ ಬಂದರೋರು ನಮಗೆ ಪರಿಚಯ ಇರಬೇಕು ಅಂತೇನಿಲ್ಲ ಎಂದು ತಿಳಿಸಿದರು.

    ಮಂಗಳೂರು ಸಿಸಿಬಿ ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ಆತನ ಆಪ್ತ ತರುಣ್ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ವಾಟ್ಸಪ್ ಮೂಲಕ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

    ಸಿಸಿಬಿ ಬಂಧನದಲ್ಲಿರುವ ಕಿಶೋರ್ ಶೆಟ್ಟಿ, ತರುಣ್ ವಿಚಾರಣೆ ವೇಳೆ ಮಹತ್ವದ ವಿಷಯಗಳು ಬಯಲಿಗೆ ಬಂದಿವೆ. ಇಂದು ಬಂಧನವಾಗಿರುವ ತರುಣ್ ಜೊತೆ ಅನುಶ್ರೀ ನಿರಂತರ ಸಂಪರ್ಕದಲ್ಲಿದ್ದರು. ಅನುಶ್ರೀ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅನ್‍ಲಾಕ್ ಬಳಿಕ ಮಂಗಳೂರಿಗೆ ತೆರಳಿದ್ದ ಅನುಶ್ರೀ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ.

    ಮಂಗಳೂರಿನ ಸಿಸಿಬಿ ಪೊಲೀಸರ ಒಂದು ತಂಡ ಇಂದು ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರು ಮತ್ತು ಮಂಗಳೂರು ಪೊಲೀಸರ ನೇತೃತ್ವದಲ್ಲಿ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಎರಡು ದಿನಗಳ ಹಿಂದೆ ಕಿಶೋರ್ ಶೆಟ್ಟಿಯ ಮಣಿಪುರ ಮೂಲದ ಗೆಳತಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ ಗೆಳತಿ ಮಂಗಳೂರಿನ ಸ್ಪಾನಲ್ಲಿ ಕೆಲಸ ಮಾಡಿಕೊಂಡಿದ್ದಳು. ಕಿಶೋರ್ ಶೆಟ್ಟಿ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ತನ್ನ ಗೆಳೆಯ, ಗೆಳತಿಯರನ್ನ ಕರೆ ತರುತ್ತಿದ್ದಳು.

    ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.

    ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.