ಅಪರ್ಣಾ ವಿಧಿವಶರಾದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ನಾಗರಾಜ್ ವಸ್ತಾರೆ, ತುಂಬಾ ಖಾಸಗಿಯಾಗಿ ಬದುಕಿದವಳು ಅಪರ್ಣಾ, ಅಷ್ಟೇ ಖಾಸಗಿಯಾಗಿ ಬೀಳ್ಕೊಡಲು ಬಯಸುತ್ತೇನೆ. ಅವಳು ನನಗೆ ಸಲ್ಲೋದಕ್ಕೆ ಮುಂಚೆನೇ ಕರ್ನಾಟಕಕ್ಕೆ ಸೇರಿದವಳು. ಮಾಧ್ಯಮದವರ ಮುಂದೆಯೇ ನಿಂತು ಏನಾಯ್ತು ಅಂತಾ ಹೇಳಬೇಕು ಅನ್ನೋದು ಅವಳ ಆಸೆಯಾಗಿತ್ತು. ಅಷ್ಟನ್ನೇ ನಾನು ಹೇಳ್ತಿದ್ದೀನಿ ಎಂದರು. ಇದನ್ನೂ ಓದಿ: ನಮ್ಮ ಮೆಟ್ರೋಗೆ ಧ್ವನಿಯಾಗಿದ್ದ ಅಪರ್ಣಾ – ಬಾಡಿತು ʻಮಸಣದ ಹೂವುʼ!
ಕ್ಯಾನ್ಸರ್ ಗೊತ್ತಾಗಿದ್ದು ಹೇಗೆ?
ಎರಡು ವರ್ಷಗಳ ಹಿಂದೆ ಶ್ವಾಸಕೋಶದ ಕ್ಯಾನ್ಸರ್ (Lung cancer) ಇರುವುದು ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇ ಹಂತದಲ್ಲಿತ್ತು. ಮೊದಲು ನೋಡಿದಾಗ ವೈದ್ಯರು ಇನ್ನೂ 6 ತಿಂಗಳು ಬುಕಿದ್ದರೆ ಹೆಚ್ಚು ಅಂತ ಹೇಳಿದ್ದರು. ಆದ್ರೆ ಅವಳು ಛಲಗಾತಿ, ಏನಾದರೂ ಗೆದ್ದೇ ಗೆಲ್ಲುತ್ತೇನೆ ಅನ್ನುವ ಛಲವಿತ್ತು. ಅದಾದಮೇಲೂ ಒಂದೂವರೆ ವರ್ಷ ಹೋರಾಡಿದಳು. ಆದ್ರೆ ಕಳೆದ ಫೆಬ್ರವರಿ ತಿಂಗಳಿನಿಂದ ಸೋತಿದ್ದಳು. ಏಕೆಂದರೆ ಇದು ದೇಹವೇ ದೇಹವನ್ನ ಬಾಧಿಸುವ ವ್ಯಾದಿ, ನಾನು ಅರಿತಿರುವ ಹಾಗೆಯೇ ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನ ಹೇರಲು ಬಯಸುತ್ತೆ. ಅವಳು ಧೀರೆ ಇಷ್ಟು ವರ್ಷ ಸಾಧ್ಯವಾದಷ್ಟೂ ಮಣಿಸಿದಳು. ಆದರೀಗ ನಾವಿಬ್ಬರೂ ಜಂಟಿಯಾಗಿ ಸೋತಿದ್ದೇವೆ ಎಂದು ಕಣ್ಣೀರಿಟ್ಟರು. ಇದನ್ನೂ ಓದಿ: Breaking: ಮಾತು ನಿಲ್ಲಿಸಿ ಚಿರನಿದ್ರೆಗೆ ಜಾರಿದ ಅಪರ್ಣಾ!
ಬೆಂಗಳೂರು: ಆಕೆಯ ಧ್ವನಿಯಲ್ಲಿ ಹೊಮ್ಮುತ್ತಿದ್ದ ಕನ್ನಡ ನುಡಿಗಳು ಎಂಥವರನ್ನೂ ತಲೆದೂಗುವಂತೆ ಮಾಡುತ್ತಿತ್ತು, ಭಾಷೆಗೆ ತಕ್ಕ ಭಾವನೆ, ಅಚ್ಚ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುವ ಶೈಲಿ, ಪದಕ್ಕೆ ಪದ ಸೇರಿಸಿ ಅಕ್ಷರಗಳಿಗೂ ಭಾವ ತುಂಬುತ್ತಿದ್ದ ದನಿ ಇಂದು ಚಿರಮೌನಕ್ಕೆ ಜಾರಿದೆ. ಸಾಲು ಸಾಲು ಸಿನಿಮಾಗಳು, ಕಿರುತೆರೆ, ವೇದಿಕೆಗಳಲ್ಲಿ ಮನೋಜ್ಞ ನಿರೂಪಣೆ ಮೂಲಕವೇ ಕನ್ನಡಿಗರ ಮನಗೆದ್ದಿದ್ದ ಅಪರ್ಣಾ ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನಿಟ್ಟಿದ್ದಾರೆ.
ಹೌದು. ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ (Kannada Anchor Aparna) ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಹಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಗೆ ಕನ್ನಡ ಸಿನಿ ರಂಗದ ನಟರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ಬಾಡಿದ ಮಸಣದ ಹೂವು:
1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ʻಸಣದ ಹೂವುʼಚಿತ್ರದಿಂದ ಬೆಳಕಿಗೆ ಬಂದರು. ನಂತರ ಇನ್ಸ್‌ಪೆಕ್ಟರ್ ವಿಕ್ರಮ್ ಸೇರಿ ಹಲವು ಚಿತ್ರಗಳಲ್ಲಿ ನಟನೆ ಮಾಡಿದರು. 90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇದನ್ನೂ ಓದಿ: Breaking: ಮಾತು ನಿಲ್ಲಿಸಿ ಚಿರನಿದ್ರೆಗೆ ಜಾರಿದ ಅಪರ್ಣಾ!
1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು 8 ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದರು. 2013ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನ ಸ್ಪರ್ಧೆಯಾಗಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದರು. 2014ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ ‘ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆ’ಗೆ ಧ್ವನಿ ನೀಡಿದ್ದು ಕೂಡ ಇವರೇ. ಇದನ್ನೂ ಓದಿ: ಜು.16ರಂದು ಸಿಗಲಿದೆ ’ಮ್ಯಾಕ್ಸ್’ ಚಿತ್ರದ ಅಪ್‌ಡೇಟ್- ಕಿಚ್ಚ ಕೊಟ್ರು ಗುಡ್ ನ್ಯೂಸ್
ಬೆಂಗಳೂರು: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ (kannada anchor aparna) ಅವರಿಂದು ಬೆಂಗಳೂರಿನ ಬನಶಂಕರಿಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ʻಮಸಣದ ಹೂವುʼ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದ ಅಪರ್ಣಾ ಅವರು ಹಿಂದಿರುಗಿ ನೋಡಿರಲಿಲ್ಲ. ನಟನೆ, ನಿರೂಪಣೆ, ಕಿರುತೆರೆಯಲ್ಲಿ ಅವರು ಮಿಂಚಿದ್ದರು. ಅವರಿಂದು ತಮ್ಮ ಮಾತುಗಳಿಗೆ ಪೂರ್ಣ ವಿರಾಮವನ್ನಿಟ್ಟಿದ್ದಾರೆ.
ಅಪರ್ಣಾ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯಮಾನ್ಯರು ಸಂತಾಪ ಸೂಚಿಸಿದ್ದಾರೆ. ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ.
ಬಸವರಾಜ ಬೊಮ್ಮಾಯಿ:
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಅತ್ಯಂತ ನೋವಾಯಿತು. ಸರಳ ಕನ್ನಡದಲ್ಲಿ ಸುಂದರವಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ.
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ಅತ್ಯಂತ ನೋವಾಯಿತು. ಸರಳ ಕನ್ನಡದಲ್ಲಿ ಸುಂದರವಾಗಿ ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಎಲ್ಲರ ಮನೆ ಮಾತಾಗಿದ್ದರು. ಅವರ ಅಗಲಿಕೆಯಿಂದ ಕನ್ನಡ ನಾಡು ಒಬ್ಬ ಸಜ್ಜನಿಕೆಯ ನಿರೂಪಕಿಯನ್ನು ಕಳೆದುಕೊಂಡಂತಾಗಿದೆ.
ಸಂತೋಷ್ ಲಾಡ್:
ತಮ್ಮ ಅದ್ಭುತ ಮಾತುಗಾರಿಕೆಯಿಂದ ಹೆಸರು ಮಾಡಿದ್ದ ಖ್ಯಾತ ನಿರೂಪಕಿ, ನಟಿ ಅಪರ್ಣಾ ಅವರ ಅಕಾಲಿಕ ನಿಧನ ನಿಜಕ್ಕೂ ಬೇಸರ ತರಿಸಿದೆ. ಅಪರ್ಣಾ ಅವರಾಡುತ್ತಿದ್ದ ಶುದ್ಧ ಕನ್ನಡ ಭಾಷೆಯನ್ನು ಕೇಳುವುದೇ ಅನನ್ಯ ಅನುಭವ. ಅವರ ನಿಧನ ಯಾವತ್ತಿಗೂ ತುಂಬಲಾರದ ನಷ್ಟ. ಅಪರ್ಣಾ ಅವರ ಆತ್ಮಕ್ಕೆ ಪರಮಾತ್ಮನು ಶಾಂತಿ ಕರುಣಿಸಲಿ, ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.
ಜಮೀರ್ ಅಹಮದ್ ಖಾನ್:
ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿ ಸೊಗಸಾಗಿ ನಿರೂಪಣೆ ಮಾಡಿ ಮನೆಮಾತಾಗಿದ್ದ ಬಹುಮುಖ ಪ್ರತಿಭೆ ಅಪರ್ಣಾ ಅವರ ಅಗಲಿಕೆ ಕಿರುತೆರೆ ಹಾಗೂ ಚಲನ ಚಿತ್ರ ರಂಗಕ್ಕೆ ಅಪಾರ ನಷ್ಟ. ಅಪರ್ಣಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಭಗವಂತ ನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ… pic.twitter.com/EI2DBga1DW
ಡಿಕೆ ಶಿವಕುಮಾರ್:
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನ ಗೆದ್ದ, ಖ್ಯಾತ ನಿರೂಪಕಿ, ನಟಿ ಶ್ರೀಮತಿ ಅಪರ್ಣ ಅವರ ಸಾವಿನಿಂದ ಮನಸ್ಸಿಗೆ ಅಪಾರ ನೋವುಂಟಾಗಿದೆ. ಅವರ ನಿಧನವು ಕಲಾ ಲೋಕಕ್ಕೆ ತುಂಬಲಾರದ ನಷ್ಟ. ನಿರೂಪಕಿಯಾಗಿ, ನಟಿಯಾಗಿ ದಶಕಗಳಿಂದ ದುಡಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಾಂತ್ವನಗಳು.
ಬೆಂಗಳೂರು: ಕ್ಯಾನ್ಸರ್ ಕಾಯಿಲೆಯಿಂದಾಗಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ (Kannada Anchor Aparna) ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಹಳ ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅಪರ್ಣಾ ಅವರು ಬನಶಂಕರಿ 2ನೇ ಹಂತದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ಸೀನಿಯರ್ ಗ್ರೇಡ್ ನಿರೂಪಕಿಯಾಗಿದ್ದ ಅಪರ್ಣಾ, ಆಕಾಶವಾಣಿ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದರು. ಅಲ್ಲದೇ ಮಜಾ ಟಾಕೀಸ್ ಕಾರ್ಯಕ್ರಮದಲ್ಲೂ ಅಭಿನಯಿಸಿದ್ದರು. ಇದನ್ನೂ ಓದಿ: ಪ್ರೆಗ್ನೆಂಟ್ ದೀಪಿಕಾ ಪಡುಕೋಣೆ ಬೇಬಿ ಬಂಪ್ ಮುಟ್ಟಿ ಪೋಸ್ ಕೊಟ್ಟ ಓರ್ರಿ
ಕಿರುತೆರೆಯಲ್ಲಿ ʻಮೂಡಲಮನೆʼ, ʻಮುಕ್ತʼ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಅಪರ್ಣಾ, 2013 ರಲ್ಲಿ ಬಿಗ್‌ಬಾಸ್ ಕನ್ನಡದ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿ ಕನ್ನಡ ಕಲಾಪ್ರಿಯರ ಮನಗೆದ್ದಿದ್ದರು. 2014 ರಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಘೋಷಣೆಯಾಗುವ `ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸೂಚನೆʼಗೆ ಧ್ವನಿ ಗೂಡಿಸಿದ್ದರು. ಇದನ್ನೂ ಓದಿ: ನಟ ದರ್ಶನ್ ಬಂಧನವಾಗಿ ಒಂದು ತಿಂಗಳು ಪೂರ್ಣ – ಅರೆಸ್ಟ್ ದಿನದಿಂದ ಇಲ್ಲಿವರೆಗೆ ಏನೇನಾಯ್ತು? ಇಲ್ಲಿದೆ ಟೈಮ್‌ಲೈನ್!
ತೆಲುಗಿನ ಸಿನಿಮಾ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಗಮನ ಸೆಳೆದಿರುವ ಶ್ರವಂತಿ ಚೋಕಾರವು (Sravanthi Chokarapu) ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ಯಾಂಟ್ ಧರಿಸದೇ ರಸ್ತೆಗಳಿದ ಆ್ಯಂಕರ್‌ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಯಶ್ ಹೊಸ ಸಿನಿಮಾದ ಶೂಟಿಂಗ್ ಆರಂಭ ಆಯಿತಾ?
ಯೂಟ್ಯೂಬ್ ಚಾನೆಲ್‌ಗೆ ನಿರೂಪಕಿಯಾಗಿದ್ದ ಶ್ರವಂತಿ, ಮುಂದೆ ಅಲ್ಲು ಅರ್ಜುನ್- ರಶ್ಮಿಕಾ ಮಂದಣ್ಣಗೆ (Rashmika Mandanna) ಸಂದರ್ಶನ ಮಾಡುವ ಮೂಲಕ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಳಿಕ ತೆಲುಗು ಬಿಗ್ ಬಾಸ್ ಒಟಿಟಿಗೆ ಸ್ಪರ್ಧಿಯಾಗಿ ಆಫರ್ ಪಡೆಯುತ್ತಾರೆ.
ಸಮಂತಾ ನಟನೆಯ ‘ಶಾಕುಂತಲಂ’ (Shakuntalam) ಸೇರಿದಂತೆ ಹಲವು ಸಿನಿಮಾ ಸಂಬಧಿಸಿದ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಾರೆ. ಸದ್ಯ ಶ್ರವಂತಿ ತಮ್ಮ ಡ್ರೆಸ್ ಸೆನ್ಸ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಪ್ಯಾಂಟ್ ಧರಿಸದೇ ರಸ್ತೆ ಬಂದಿದ್ದಕ್ಕೆ ನೆಟ್ಟಿಗರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೆಂಪು ಹಾರ್ಟ್ ಡಿಸೈನ್ ಇರುವ ಬಿಸ್ಕೆಟ್ ಬಣ್ಣದ ಸ್ವೆಟರ್ ಧರಿಸಿರುವ ಶ್ರವಂತಿ ಚೋಕಾರಪು ಪ್ಯಾಂಟ್ ಧರಿಸಿಲ್ಲ. ಮ್ಯಾಜ್ ಆಗುವಂತೆ ಚಪ್ಪಲಿ ಧರಿಸಿದ್ದಾರೆ. ಈ ಡ್ರೆಸ್‌ಗೆ ಬಗೆ ಬಗೆಯ ಕಾಮೆಂಟ್ ಬಂದಿದೆ. ಡ್ರೆಸ್ ಚೆನ್ನಾಗಿದೆ ಪ್ಯಾಂಟ್ ಧರಿಸಬೇಕು, ನಮ್ಮ ಕಣ್ಣನನ್ನು ತಂಪು ಮಾಡುವ ಅಗತ್ಯವಿಲ್ಲ, ಪ್ರಚಾರಕ್ಕಾಗಿ ಹೀಗೆಲ್ಲಾ ಪ್ರಯತ್ನ ಮಾಡಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಗೆ (Oscar) ದಿನಗಣನೆ ಶುರುವಾಗಿದೆ. ಹಲವಾರು ಕಾರಣಗಳಿಂದಾಗಿ ಈ ಬಾರಿ ಆಸ್ಕರ್ ವೇದಿಕೆ ಕಲರ್ ಫುಲ್ ಆಗಿರುತ್ತದೆ. ಭಾರತದ ಹೆಸರಾಂತ ನಟರಾದ ರಾಮ್ ಚರಣ್ (Ram Charan) ಮತ್ತು ಜ್ಯೂನಿಯರ್ ಎನ್.ಟಿ.ಆರ್ (Jr.NTR) ‘ನಾಟು ನಾಟು’ ಹಾಡಿಗೆ ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಈ ಬಾರಿಯ ಆಸ್ಕರ್ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಹೊರಲಿದ್ದಾರೆ.
ಪ್ರತಿ ವರ್ಷವೂ ಒಂದಿಲ್ಲೊಂದು ಮಹತ್ವದ ಜವಾಬ್ದಾರಿಯನ್ನು ದೀಪಿಕಾ ನಿರ್ವಹಿಸುತ್ತಿದ್ದಾರೆ. 2022ನೇ ಸಾಲಿನ ಕೇನ್ಸ್ ನಲ್ಲಿ ತೀರ್ಪುಗಾರರಾಗಿ ದೀಪಿಕಾ, ಆಸ್ಕರ್ ನಲ್ಲಿ ನಿರೂಪಕಿಯಾಗಿ ಮಿಂಚಲಿದ್ದಾರೆ. ಈ ಮಾಹಿತಿಯನ್ನು ಸ್ವತಃ ದೀಪಿಕಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆ ದಿನಕ್ಕಾಗಿ ಕಾಯುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್
ಇದೇ ಮಾರ್ಚ್ 12ರಂದು (ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 13) ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ಹತ್ತು ಜನ ನಿರೂಪಕರು ಕೆಲಸ ಮಾಡಲಿದ್ದಾರೆ. ಅದರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. ದೀಪಿಕಾ ಜೊತೆ ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೋನೆ, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಜೋ ಸಲ್ಡಾನಾ ಸೇರಿದಂತೆ ಇತರರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಈ ಬಾರಿ ಆಸ್ಕರ್ ವೇದಿಕೆಯ ಮೇಲೆ ನಿರಂತರವಾಗಿ ದೀಪಿಕಾ ಕಾಣಿಸಿಕೊಂಡರೆ, ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಲೈವ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಅಲ್ಲದೇ, ಅದೇ ವೇದಿಕೆಯಲ್ಲೇ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಲಿದ್ದಾರೆ. ಭಾರತದಿಂದ ಆಲ್ ದಟ್ ಬ್ರೀಥ್ಸ್, ದಿ ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರಗಳು ನಾಮ ನಿರ್ದೇಶನಗೊಂಡಿವೆ. ಆರ್.ಆರ್.ಆರ್ ಸಿನಿಮಾದ ನಾಟು ನಾಟು ಕೂಡ ಪ್ರಶಸ್ತಿಯ ರೇಸ್ ನಲ್ಲಿದೆ.
‘ನನ್ನಮ್ಮ ಸೂಪರ್ ಸ್ಟಾರ್’ (Nannamma Super Star) ಮತ್ತು ‘ಗಿಚ್ಚಿ ಗಿಲಿ ಗಿಲಿ’ (Gichi Gili Gili) ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ವನ್ಷಿಕಾ ಅಂಜನಿ ಕಶ್ಯಪ ಮತ್ತೆ ಸುದ್ದಿಯಲ್ಲಿದ್ದಾರೆ. ‘ಗಿಚ್ಚಿ ಗಿಲಿ ಗಿಲಿ’ ಶೋ ನಂತರ ಇದೀಗ ಮತ್ತೆ ತೆರೆಯ ಮೇಲೆ ಮಿಂಚಲು ವನ್ಷಿಕಾ ರೆಡಿಯಾಗಿದ್ದಾರೆ.
‘ಗಿಚ್ಚಿ ಗಿಲಿ ಗಿಲಿ’ ಶೋ ನಂತರ ಇದೀಗ ಅಭಿಮಾನಿಗಳ ಮುಂದೆ ನಿರೂಪಕಿಯಾಗಿ ಬರಲು ರೆಡಿಯಾಗಿದ್ದಾರೆ. ಹೌದು.. ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ಪುಟಾಣಿ ಪ್ರತಿಭೆ ವನ್ಷಿಕಾ (Vanshika anjani kashyapa) ನಿರೂಪಣೆಯ ಮೂಲಕ ಮಿಂಚಲು ಸಜ್ಜಾಗಿದ್ದಾರೆ. ಇದನ್ನೂ ಓದಿ: `ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ
ವಿದ್ಯಾಭ್ಯಾಸದ ಜೊತೆ ನಟನೆಯನ್ನು ಸರಿದೂಗಿಸಿಕೊಂಡು ಹೋಗಿರುವ ಬಾಲ ಪ್ರತಿಭೆ ವನ್ಷಿಕಾ, ನಿರೂಪಣೆಯ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಲು ತಯಾರಿ ನಡೆಸುತ್ತಿದ್ದಾರೆ.
ಇನ್ನೂ ಟಿವಿ ಶೋಗಳ ಮೂಲಕ ರಂಜಿಸಿದ್ದ ವನ್ಷಿಕಾ ಇದೀಗ ‘love.. ಲಿ’ ಎಂಬ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ವಶಿಷ್ಠ ಸಿಂಹ (Vasishta N. Simha) ಮಗಳಾಗಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರು ದುಬಾರಿ ಕಾರು ತಗೆದುಕೊಳ್ಳುವುದು ವಾಡಿಕೆ. ಅವರು ತಗೆದುಕೊಂಡು, ತಮ್ಮ ಪತ್ನಿಗೂ ಅನೇಕ ನಟರು ಕಾಸ್ಟ್ಲಿ ಕಾರು ಉಡುಗೊರೆಯಾಗಿ ನೀಡಿದ್ದಾರೆ. ನಿರೂಪಣೆ ಮಾಡಿಕೊಂಡು, ತಮ್ಮದೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿ ನಡೆಸುತ್ತಾ ಹಗಲಿರುಳು ಶ್ರಮಿಸುವ ಚೈತ್ರಾ ವಾಸುದೇವನ್ ದುಬಾರಿ ಕಾರು ಖರೀದಿಸಿದ್ದಾರೆ. ಕಷ್ಟ ಪಟ್ಟರೆ ಯಾವ ಗುರಿಯನ್ನಾದರೂ ತಲುಪಬಹುದು ಎಂಬುದಕ್ಕೆ ಉದಾಹರಣೆ ಆಗಿದ್ದಾರೆ.
ಚೈತ್ರಾ ಅನೇಕ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಖಾಸಗಿ ಇವೆಂಟ್ ಗಳಿಗೆ ನಿರೂಪಕರಾಗಿದ್ದಾರೆ. ತಮ್ಮದೇ ಇವೆಂಟ್ ಮ್ಯಾನೇಜ್ ಮೆಂಟ್ ಕಂಪೆನಿಯನ್ನೂ ಇವರು ನಡೆಸುತ್ತಿದ್ದಾರೆ. ಸದಾ ಲವಲವಿಕೆಯಿಂದ ಮಾತನಾಡುವ, ಚಟುವಟಿಕೆಯಿಂದ ಇರುವ ಚೈತ್ರಾ ವಾಸುದೇವನ್ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಪ್ರವೇಶ ಮಾಡಿದ್ದರು. ಆ ಮೂಲಕ ಸಾಕಷ್ಟು ಅಭಿಮಾನಿಗಳನ್ನೂ ಅವರು ಗಳಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?
ಅಂದಹಾಗೆ ಚೈತ್ರಾ ವಾಸುದೇವನ್ ಖರೀದಿಸಿರೋದು ಐಷಾರಾಮಿ ಕಾರಾದ ರೇಂಜ್ ರೋವರ್ ಕಂಪೆನಿಯದ್ದು. ಇದರ ಎಕ್ಸ್ ಶೋರೂಂ ಬೆಲೆ 72 ಲಕ್ಷ ರೂಪಾಯಿ. ಆನ್ ರೋಡ್ ಪ್ರೈಸ್ 89 ಲಕ್ಷವಂತೆ. ತಮ್ಮ ಹೊಸ ಕಾರು ಮುಂದೆ ನಿಂತು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ ಚೈತ್ರಾ. ಈ ಸಾಧನೆಗೆ ಅನೇಕರು ಅವರನ್ನು ಅಭಿನಂದಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]