Tag: ನಿರೂಪಕ

  • ಖ್ಯಾತ ಪತ್ರಕರ್ತ, ಹಿರಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾಗೆ ಬಲಿ

    ಖ್ಯಾತ ಪತ್ರಕರ್ತ, ಹಿರಿಯ ನಿರೂಪಕ ರೋಹಿತ್ ಸರ್ದಾನ ಕೊರೊನಾಗೆ ಬಲಿ

    ನವದೆಹಲಿ: ಟೆಲಿವಿಷನ್‍ನ ಪತ್ರಕರ್ತ ಮತ್ತು ಹಿರಿಯ ನಿರೂಪಕ ರೋಹಿತ್ ಸರ್ದಾನರವರು ಶುಕ್ರವಾರ ಕೊರೊನಾದಿಂದ ನಿಧನರಾಗಿದ್ದಾರೆ.

    ರೋಹಿತ್ ಸರ್ದಾನ ಅವರು ಆಜ್‍ತಕ್ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಮತ್ತು ಜನಪ್ರಿಯ ಕಾರ್ಯಕ್ರಮ ‘ದಂಗಲ್’ ನಿರೂಪಣೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಸಕ್ತ ವ್ಯವಹಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಈ ಮುನ್ನ ಜೀ ನ್ಯೂಸ್‍ನಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಕೂಡ ಚರ್ಚಾ ಆಧಾರಿತ ‘ತಾಲ್ ಥೋಕ್ ಕೆ’ ಎಂಬ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದರು.

    ರೋಹಿತ್ ಸರ್ದಾನಾ ಅವರಿಗೆ ಸರ್ಕಾರವು 2018ರಲ್ಲಿ ‘ಗಣೇಶ ಶಂಕರ್ ವಿದ್ಯಾರ್ಥ’ ಪುರಸ್ಕರ ಪ್ರಶಸ್ತಿಯನ್ನು ನೀಡಿತ್ತು. ಮಾಧ್ಯಮದ ಮಿತ್ರರು, ಮಂತ್ರಿಗಳು ಸೇರಿದಂತೆ ಅನೇಕ ರಾಜಕಾರಣಿಗಳು ಸದ್ಯ ನಿರೂಪಕನಿಗೆ ಕಂಬನಿ ಮಿಡಿಯುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಪ್ರಧಾನಿ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ರೋಹಿತ್ ಸರ್ದಾನಾ ಬಹು ಬೇಗ ನಮ್ಮನ್ನು ಅಗಲಿದ್ದಾರೆ. ಭಾರತದ ಅಭಿವೃದ್ದಿ ಕುರಿತಂತೆ ಬಹಳ ಉತ್ಸಾಹ ಹೊಂದಿದ್ದರು. ಹೃದಯ ವಂತರು. ಅವರ ಅಕಾಲಿಕ ಮರಣವು ಮಾಧ್ಯಮ ಜಗತ್ತಿಗೆ ತುಂಬಾಲಾರದ ನಷ್ಟವನ್ನುಂಟು ಮಾಡಿದೆ. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾರವರು, ರೋಹಿತ್ ಸರ್ದಾನ ಅವರ ಸಾವಿನ ಸುದ್ದಿ ನೋವುಂಟು ಮಾಡಿದೆ. ಪಕ್ಷಪಾತವಿಲ್ಲದ ಮತ್ತು ನ್ಯಾಯಯುತ, ಬುದ್ದಿವಂತ ಪತ್ರಕರ್ತನನ್ನು ದೇಶವು ಕಳೆದುಕೊಂಡಿದೆ. ಈ ದುರಂತ ನಷ್ಟವನ್ನು ಭರಿಸಲು ದೇವರು ಅವರ ಕುಟುಂಬಕ್ಕೆ ಶಕ್ತಿಯನ್ನು ನೀಡಲಿ. ಅವರ ಕುಟುಂಬ ಹಾಗೂ ಅನುಯಾಯಿಗಳಿಗೆ ನನ್ನ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.

  • ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ: ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲವನ್ನು ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ ಎಂದು ಹೇಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಡುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ದರ್ಶನ್ ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾನು ಕಿರುತೆರೆಗೆ ಬರಬಾರದು ಎಂಬ ಯಾವುದೇ ಕಾರಣ ಇಲ್ಲ. ಜೀವನ ನಡೆಸಲು ನನಗೆ ಏನೂ ಬೇಕು ಅದನ್ನು ಭಗವಂತ ಹಾಗೂ ಅಭಿಮಾನಿಗಳು ನೀಡಿದ್ದಾರೆ. ನನಗೆ ಅಷ್ಟೇ ಸಾಕು. ಎಲ್ಲ ಬಾಚಿಕೊಳ್ಳಬೇಕು ಎಂಬ ದುರಾಸೆ ನನಗಿಲ್ಲ. ನಾನು ಎಷ್ಟು ಪ್ರೀತಿಯಿಂದ ಸಿನಿಮಾ ಮಾಡುತ್ತೇನೋ, ಹಾಗೆಯೇ ನನಗೆ ಬೇರೆ ಕೆಲಸವಿದೆ. ಅದನ್ನು ಕೂಡ ಅಷ್ಟೇ ಪ್ರೀತಿಯಿಂದ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಕೆಲವು ದಿನಗಳ ಹಿಂದೆ ದರ್ಶನ್ ಕಿರುತೆರೆಗೆ ನಿರೂಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಖಾಸಗಿ ವಾಹಿನಿಯಲ್ಲಿ ಹೊಸದಾಗಿ ಶೋವೊಂದು ಶುರುವಾಗುತ್ತಿದ್ದು, ಈ ಕಾರ್ಯಕ್ರಮದ ನಿರೂಪಣೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿಲ್ಲ ಎಂದು ದರ್ಶನ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

  • ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಪ್ರೇಯಸಿ, ಗೆಳೆಯನ ಜೊತೆ ಸೇರಿ ನಿರೂಪಕನಿಂದ ಪತ್ನಿಯ ಕೊಲೆ

    ಲಕ್ನೋ: ನಿರೂಪಕನೊಬ್ಬ ತನ್ನ ಪ್ರೇಯಸಿ ಹಾಗೂ ಗೆಳೆಯನ ಜೊತೆ ಸೇರಿ ಪತ್ನಿಯನ್ನೇ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದಿದೆ.

    ದಿವ್ಯಾ (27) ಕೊಲೆಯಾದ ಮಹಿಳೆ. ದೆಹಲಿ ಮೂಲದ ನಿರೂಪಕ ಅಜಿತೇಶ್ ತನ್ನ ಪ್ರೇಯಸಿ ಹಾಗೂ ಸ್ನೇಹಿತನ ಜೊತೆ ಸೇರಿ ದಿವ್ಯಾಳನ್ನು ಕೊಲೆ ಮಾಡಿದ್ದಾನೆ. ಸೋಮವಾರ ದಿವ್ಯಾ ಇಟಾವಾದ ಕಟ್ರಾ ಬಾಲ್ ಸಿಂಗ್ ಏರಿಯಾದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.

    ಕೊಲೆಯಾದ ದಿನವೇ ದಿವ್ಯಾ ಮಾವ ಪ್ರಮೋದ್ ಮಿಶ್ರಾ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ದಳದ ಮೂಲಕ ಪೊಲೀಸರು ಈ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದರು. ತನಿಖೆ ವೇಳೆ ಅಜಿತೇಶ್ ತನ್ನ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಹಾಗೂ ಭಾವನಾ ಆರ್ಯ ಜೊತೆ ಸೇರಿ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮೂವರು ಆರೋಪಿಗಳು ದೆಹಲಿಯಲ್ಲಿರುವ ನ್ಯೂಸ್ ಚಾನೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು.

    ಸೋಮವಾರ ಈ ಕೊಲೆ ನಡೆದಿದ್ದು, ಗುರುವಾರ ಪೊಲೀಸರು ಕೊಲೆ ಆರೋಪಿಗಳಾದ ಅಜಿತೇಶ್, ಭಾವನಾ ಹಾಗೂ ಅಖಿಲ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಂತೋಷ್ ಕುಮಾರ್, ವಿಚಾರಣೆ ವೇಳೆ ಅಜಿತೇಶ್, ನನ್ನ ಹಾಗೂ ಭಾವನಾ ನಡುವೆ ಅನೈತಿಕ ಸಂಬಂಧ ಇದೆ. ನಮ್ಮಿಬ್ಬರ ವಿಷಯ ದಿವ್ಯಾಗೆ ತಿಳಿದು ಆಕೆ ದಿನ ನನ್ನ ಜೊತೆ ಜಗಳವಾಡುತ್ತಿದ್ದರು. ಹಾಗಾಗಿ ಕೊಲೆ ಮಾಡಿದ್ದಾನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಡೆದಿದ್ದೇನು?
    ಪ್ಲಾನ್ ಪ್ರಕಾರ ಅಕ್ಟೋಬರ್ 14ರಂದು ಅಖಿಲ್, ಅಜಿತೇಶ್ ಮನೆಗೆ ಆಗಮಿಸಿದ್ದಾನೆ. ಅಖಿಲ್ ಮೊದಲೇ ಪರಿಚಯವಿದ್ದ ಕಾರಣ ದಿವ್ಯಾ ಆತನನ್ನು ಮನೆಯೊಳಗೆ ಕರೆಸಿ ತನ್ನ ಮದುವೆ ಆಲ್ಬಂ ತೋರಿಸುತ್ತಿದ್ದಳು. ಈ ವೇಳೆ ಅಖಿಲ್ ಹೂ ಕುಂಡದಿಂದ ದಿವ್ಯಾ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ದಿವ್ಯಾ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾಳೆ. ದಿವ್ಯಾ ಪ್ರಜ್ಞೆ ತಪ್ಪುತ್ತಿದ್ದಂತೆ ಅಖಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

    ಸನ್ನಿ ಲಿಯೋನ್ ಎಂದಿದ್ದ ಆ್ಯಂಕರ್ ಕಾಲೆಳೆದ ಕಾಂಡೋಮ್ ಕಂಪನಿ!

    ಮುಂಬೈ: ರಾಷ್ಟ್ರೀಯ ಸುದ್ದಿ ವಾಹಿನಿ ನಿರೂಪಕ ಎಕ್ಸಿಟ್ ಪೋಲ್ ದಂದು ನಟ ಸನ್ನಿ ಡಿಯೋಲ್ ಹೆಸರು ಹೇಳುವ ಬದಲು ಸನ್ನಿ ಲಿಯೋನ್ ಹೆಸರು ಹೇಳಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಸನ್ನಿ ಲಿಯೋನ್ ಹೆಸರು ಹೇಳಿದ್ದಕ್ಕೆ ಕಾಂಡೋಮ್ ಕಂಪನಿ ನಿರೂಪಕರ ಕಾಲೆಳೆದಿದೆ.

    ನಿರೂಪಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಮ್ಯಾನ್‍ಫೋರ್ಸ್ ಕಂಪನಿ, “ಡಿಯರ್ ಅರ್ನಬ್, ನಾವು ಅರ್ಥ ಮಾಡಿಕೊಳ್ಳುತ್ತೇವೆ. ಸನ್ನಿ ನಮ್ಮ ಮನಸ್ಸಿನಲ್ಲೂ ಯಾವಾಗಲೂ ಇರುತ್ತಾರೆ” ಎಂದು ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ. ಕಾಂಡೋಮ್ ಕಂಪನಿ ಟ್ವೀಟ್‍ನಿಂದ ನಿರೂಪಕ ಮತ್ತಷ್ಟು ಟ್ರೋಲ್ ಆಗುತ್ತಿದ್ದಾರೆ.

    ಈ ವೈರಲ್ ವಿಡಿಯೋ ಬಗ್ಗೆ ಸನ್ನಿ ಲಿಯೋನ್ ಕೂಡ ಪ್ರತಿಕ್ರಿಯಿಸಿದ್ದರು. ಸನ್ನಿ ಲಿಯೋನ್ ತಮ್ಮ ಟ್ವಿಟ್ಟರಿನಲ್ಲಿ, “ನಾನು ಎಷ್ಟು ಮತಗಳಿಂದ ಮುನ್ನಡೆಯಲ್ಲಿ ಇದ್ದೇನೆ?” ಎಂದು ಟ್ವೀಟ್ ಮಾಡಿ ನಿರೂಪಕನ ಕಾಲೇಳೆದಿದ್ದರು. ಸನ್ನಿ ಲಿಯೋನ್ ಪ್ರತಿಕ್ರಿಯೆಗೆ ಜನರು ತಮ್ಮ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ರೀ-ಟ್ವೀಟ್ ಮಾಡಿದ್ದರು.

    ಬಾಲಿವುಡ್ ನಟ ಸನ್ನಿ ಡಿಯೋಲ್ ಪಂಜಾಬ್‍ನ ಗುರ್ದಾಸ್‍ಪುರದಲ್ಲಿ ಬಿಜೆಪಿ ಪರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸನ್ನಿ ಡಿಯೋಲ್ ಈ ಚುನಾವಣೆಯಲ್ಲಿ 82,459 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸನ್ನಿ ಡಿಯೋಲ್ ಅವರು ಕಾಂಗ್ರೆಸ್ ಹಿರಿಯ ನಾಯಕ ಸುನೀಲ್ ಜಾಕಾ ವಿರುದ್ಧ ಸ್ಪರ್ಧಿಸಿದ್ದರು.

  • ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಿರೂಪಕ ಚಂದನ್ ಅವರಿಗೆ ನಟಿ, ನಿರೂಪಕಿ ಅನುಶ್ರೀ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಚಂದನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    “ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತೆ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು. ನಾನು ಕೂಡ ಇವರ ಅಭಿಮಾನಿ. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ. ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅನುಶ್ರೀ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಚಂದನ್ ನಿರೂಪಕ ಮಾತ್ರವಲ್ಲದೆ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಾ, ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದ ಚಂದನ್ ರಾಜ್‍ಕುಮಾರ್ ಅವರ ಕಾರ್ಯಕ್ರಮಗಳಲ್ಲೂ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದಿತ್ತು.

    ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿದ್ದ ಚಂದನ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಚಂದನ್ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಪಾಕಿಸ್ತಾನ ಟಿವಿ ಆ್ಯಂಕರ್ ಗಳ ಫೈಟಿಂಗ್ -ವಿಡಿಯೋ ವೈರಲ್

    ಪಾಕಿಸ್ತಾನ ಟಿವಿ ಆ್ಯಂಕರ್ ಗಳ ಫೈಟಿಂಗ್ -ವಿಡಿಯೋ ವೈರಲ್

    ಕರಾಚಿ: ಪಾಕಿಸ್ತಾನದ ಮೂಲದ ಖಾಸಗಿ ಮಾಧ್ಯಮದ ನಿರೂಪಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೂಲಗಳ ಪ್ರಕಾರ ಲಾಹೋರ್ ಮೂಲದ ಖಾಸಗಿ ಮಾಧ್ಯಮದ ಆ್ಯಂಕರ್ ಗಳಾಗಿದ್ದು, ಪರಸ್ಪರ ಆಕ್ರೋಶ ವ್ಯಕ್ತಪಡಿಸಿ ಜಗಳವಾಡಿದ್ದಾರೆ.

    ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಮೂರ್ಖ ಎಂಬ ಪದವನ್ನ ಬಳಕೆ ಮಾಡುತ್ತಾಳೆ. ಇದರಿಂದ ಆಕ್ರೋಶಗೊಂಡ ನಿರೂಪಕ ಇಂತಹವರ ಜೊತೆ ನಾನು ಹೇಗೆ ಬುಲೆಟಿನ್ ಮಾಡಲಿ. ಈಕೆ ನನ್ನೊಂದಿಗೆ ಸರಿಯಾಗಿ ಮಾತನಾಡುವುದೇ ಇಲ್ಲ ಎಂದು  ದೂರುತ್ತಾನೆ.

    ನಿರೂಪಕರ ನಡುವಿನ ಈ ಬಿಸಿ ಜಗಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಈ ಹಿಂದೆಯೂ ಆನ್ ಸ್ಕ್ರೀನ್ ನಲ್ಲಿ ನಿರೂಪಕರ ನಡುವಿನ ಜಗಳ ಹೆಚ್ಚು ವೈರಲ್ ಆಗಿತ್ತು.

    ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನ ನಿರೂಪಕಿಯೊಬ್ಬರು ತಮ್ಮ ಮಗಳನ್ನು ಕುರಿಸಿಕೊಂಡು ಸುದ್ದಿ ಓದುವ ಮೂಲಕ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

    https://www.youtube.com/watch?time_continue=17&v=cmNaKHppdGA